News Kadaba

ಮಂಗಳೂರಿನ ಕಡಲಿನಲ್ಲಿ ಭಾರತದಲ್ಲೇ ಮೊದಲ ಬಾರಿಗೆ ಸೂಟಿ ಶಿಯರ್ ವಾಟರ್ ಹಕ್ಕಿ ಪತ್ತೆ

(ನ್ಯೂಸ್ ಕಡಬ)newskadaba.com ಮಂಗಳೂರು, ಏ.29. ಭೂಗೋಳದ ದಕ್ಷಿಣ ಭಾಗದಲ್ಲಿ ಕಾಣಸಿಗುವ ಸೂಟಿ ಶಿಯರ್ ವಾಟರ್ ಪಕ್ಷಿಯು ಭಾರತದಲ್ಲೇ ಮೊದಲ ಬಾರಿಗೆ ಮಂಗಳೂರಿನ ಕರಾವಳಿ ಭಾಗದ ಸಮುದ್ರದಲ್ಲಿ ಕಾಣಿಸಿಕೊಂಡಿದೆ. ಸಮುದ್ರದ ಪಕ್ಷಿಗಳನ್ನು ವೀಕ್ಷಿಸಿ ದಾಖಲು ಮಾಡುವ ಕರಾವಳಿ ಬರ್ಡ್ ವಾಚರ್ ನೆಟ್ ವರ್ಕ್ ಇದೇ ಮೊದಲ ಬಾರಿಗೆ ಭಾರತಲ್ಲಿ ಸೂಟಿಶಿಯರ್ ವಾಟರ್ ಎಂಬ ಅಪರೂಪದ ಪಕ್ಷಿಯನ್ನ ಪತ್ತೆ ಮಾಡಿದ್ದು, ಈ ತಂಡದ ಸದಸ್ಯರು ಪ್ರತಿ ವರ್ಷವು ಸಮುದ್ರ ಪಕ್ಷಿಗಳ ಸಮೀಕ್ಷೆ ನಡೆಸುತ್ತಾರೆ.  

ಮಂಗಳೂರಿನ ಕಡಲಿನಲ್ಲಿ ಭಾರತದಲ್ಲೇ ಮೊದಲ ಬಾರಿಗೆ ಸೂಟಿ ಶಿಯರ್ ವಾಟರ್ ಹಕ್ಕಿ ಪತ್ತೆ Read More »

ಕರಾವಳಿ

ಬ್ಯೂಟಿ ಪಾರ್ಲರ್‌ಗೆ ಹೋಗದಂತೆ ಪತ್ನಿಯನ್ನು ತಡೆದ ಪತಿ..! ➤ಫ್ಯಾನ್‌ಗೆ ನೇಣು ಬಿಗಿದುಕೊಂಡು ಮಹಿಳೆ ಆತ್ಮಹತ್ಯೆ

(ನ್ಯೂಸ್ ಕಡಬ)Newskadaba.com ಹೊಸದಿಲ್ಲಿ,ಏ.29 ಬ್ಯೂಟಿ ಪಾರ್ಲರ್‌ಗೆ ಹೋಗದಂತೆ ಪತಿ ತಡೆದದ್ದಕ್ಕೆ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಧ್ಯಪ್ರದೇಶದ ಇಂಧೋರ್‌ನಲ್ಲಿ ಬೆಳಕಿಗೆ ಬಂದಿದೆ.ಇಂಧೋರ್‌ನ ಸ್ಕೀಂ ನಂ. 51 ಪ್ರದೇಶದಲ್ಲಿ ಈ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಸಬ್‌ಇನ್‌ಸ್ಪೆಕ್ಟರ್ ಉಮಾಶಂಕರ್ ಯಾದವ್ ಹೇಳಿದ್ದಾರೆ. “ಮಹಿಳೆ ಬ್ಯೂಟಿ ಪಾರ್ಲರ್‌ಗೆ ಹೋಗದಂತೆ ತಡೆದ ಕಾರಣಕ್ಕೆ ಫ್ಯಾನ್‌ಗೆ ನೇಣು ಬಿಗಿದುಕೊಂಡು ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಪತಿ ಹೇಳಿಕೆ ನೀಡಿದ್ದಾರೆ.ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಎಲ್ಲ ಆಯಾಮಗಳಿಂದ ತನಿಖೆ ನಡೆಯುತ್ತಿದೆ” ಎಂದು ಅಧಿಕಾರಿ ಸ್ಪಷ್ಟಪಡಿಸಿದ್ದಾರೆ.      

ಬ್ಯೂಟಿ ಪಾರ್ಲರ್‌ಗೆ ಹೋಗದಂತೆ ಪತ್ನಿಯನ್ನು ತಡೆದ ಪತಿ..! ➤ಫ್ಯಾನ್‌ಗೆ ನೇಣು ಬಿಗಿದುಕೊಂಡು ಮಹಿಳೆ ಆತ್ಮಹತ್ಯೆ Read More »

ರಾಷ್ಟ್ರೀಯ ನ್ಯೂಸ್

ಸುಡಾನ್‌ನಿಂದ ಸುರಕ್ಷಿತವಾಗಿ ಬೆಂಗಳೂರಿಗೆ ಬಂದಿಳಿದ ಕನ್ನಡಿಗರು..!

(ನ್ಯೂಸ್ ಕಡಬ)Newskadaba.com ಬೆಂಗಳೂರು,ಏ.29 ಯುದ್ಧ ಪೀಡಿತ ಸುಡಾನ್‌ನಿಂದ ರಕ್ಷಿಸಲ್ಪಟ್ಟ ಒಟ್ಟು 362 ಭಾರತೀಯರು, ಅವರಲ್ಲಿ 114 ಮಂದಿ ಕರ್ನಾಟಕದವರು ಬೆಂಗಳೂರು ತಲುಪಿದ್ದಾರೆ. ಜೆಡ್ಡಾದಿಂದ ಸೌದಿಯಾ ವಿಮಾನದಲ್ಲಿ ಅವರು ಬಂದರು ಎಂದು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ (ಕೆಐಎ) ಮೂಲಗಳು ತಿಳಿಸಿವೆ. ಬಂದವರ ಗುಂಪಿನಲ್ಲಿ 241 ಪುರುಷರು, 107 ಮಹಿಳೆಯರು, 12 ಮಕ್ಕಳು ಮತ್ತು ಇಬ್ಬರು ಶಿಶುಗಳು ಇದ್ದಾರೆ ಎಂದು ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ (ಕೆಎಸ್‌ಡಿಎಂಎ) ಆಯುಕ್ತ ಮನೋಜ್ ರಾಜನ್ ತಿಳಿಸಿದ್ದಾರೆ. ಆಪರೇಷನ್ ಕಾವೇರಿಯ ಭಾಗವಾಗಿ

ಸುಡಾನ್‌ನಿಂದ ಸುರಕ್ಷಿತವಾಗಿ ಬೆಂಗಳೂರಿಗೆ ಬಂದಿಳಿದ ಕನ್ನಡಿಗರು..! Read More »

ಕರ್ನಾಟಕ

ಶ್ರದ್ಧಾವಾಕರ್ ಹತ್ಯೆ ಕೇಸ್ ➤ ನ್ಯಾಯಾಲಯ ಆದೇಶ ಪ್ರಕಟಿಸುವ ಸಾಧ್ಯತೆ

(ನ್ಯೂಸ್ ಕಡಬ)newskadaba.com ನವದೆಹಲಿ, ಏ.29. ದೇಶವನ್ನೇ ಬೆಚ್ಚಿಬೀಳಿಸಿದ್ದ ದೆಹಲಿಯ ಶ್ರದ್ಧಾ ವಾಕರ್ ಹತ್ಯೆ ಪ್ರಕರಣದ ತೀರ್ಪನ್ನು ಇಂದು ಸಾಕೇತ್ ನ್ಯಾಯಾಲಯ ತನ್ನ ಆದೇಶವನ್ನು ಪ್ರಕಟಿಸುವ ಸಾಧ್ಯತೆಯಿದೆ. ಏ.15ರಂದು ಪ್ರಮುಖ ಆರೋಪಿ ಅಫ್ತಾಬ್ ಪೂನಾವಾಲಾ ವಿರುದ್ಧ ಆರೋಪಗಳ ಕುರಿತು ನ್ಯಾಯಾಲಯ ಆದೇಶ ಕಾಯ್ದಿರಿಸಿತ್ತು. ಈ ನಡುವೆ ಮಗಳ ಮೃತದೇಹ ಅವಶೇಷವನ್ನು ಶ್ರದ್ಧಾ ತಂದೆ ವಿಕಾಸ್‌ಗೆ ಹಸ್ತಾಂತರಿಸುವ ಕುರಿತು ದಿಲ್ಲಿ ಪೊಲೀಸರು ಕೋರ್ಟ್‌ಗೆ ಉತ್ತರ ಸಲ್ಲಿಸಲಿದ್ದಾರೆ. ಇದಕ್ಕೂ ಮುನ್ನ ಶ್ರದ್ಧಾ ಅವರ ತಂದೆ, ಮಗಳ ಅಂತಿಮ ಸಂಸ್ಕಾರಕ್ಕಾಗಿ ಶವ ನೀಡುವಂತೆ

ಶ್ರದ್ಧಾವಾಕರ್ ಹತ್ಯೆ ಕೇಸ್ ➤ ನ್ಯಾಯಾಲಯ ಆದೇಶ ಪ್ರಕಟಿಸುವ ಸಾಧ್ಯತೆ Read More »

ರಾಷ್ಟ್ರೀಯ ನ್ಯೂಸ್

ಮ್ಯಾನ್ ಹೋಲ್ ಗೆ ಬಿದ್ದು ಬಾಲಕಿ ಮೃತ್ಯು   ➤ಜಿಎಚ್‌ಎಂಸಿ ಸಿಬ್ಬಂದಿಯ ವಿರುದ್ಧ ಸ್ಥಳೀಯರ ಆಕ್ರೋಶ.!

(ನ್ಯೂಸ್ ಕಡಬ)Newskadaba.com ಸಿಕಂದರಾಬಾದ್,ಏ.29 ಜಿಎಚ್‌ಎಂಸಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಬಾಲಕಿ ಮೌನಿಕಾ ಮ್ಯಾನ್‌ಹೋಲ್‌ಗೆ ಬಿದ್ದು ಸಾವನ್ನಪ್ಪಿರುವ ದಾರುಣ ಘಟನೆ ಸಿಕಂದರಾಬಾದ್ ವ್ಯಾಪ್ತಿಯ ಕಲಾಸಿಗುಡದಲ್ಲಿ ನಡೆದಿದೆ. ಮೌನಿಕಾ ಸ್ಥಳೀಯ ಶಾಲೆಯಲ್ಲಿ ನಾಲ್ಕನೇ ತರಗತಿ ಓದುತ್ತಿದ್ದಾಳೆ.ಮುಂಜಾನೆ ಹಾಲಿನ ಪ್ಯಾಕೆಟ್‌ಗಾಗಿ ಹೊರಗೆ ಹೋದ ಮೌನಿಕಾ ನಾಪತ್ತೆಯಾಗಿದ್ದಾಳೆ. ಭಾರೀ ಮಳೆಯಿಂದಾಗಿ ರಸ್ತೆಗಳು ಜಲಾವೃತವಾಗಿದ್ದು, ಇದನ್ನು ಗಮನಿಸದೆ ಬಾಲಕಿ ಗುಂಡಿಗೆ ಬಿದ್ದಿದ್ದಾಳೆ.ಮೌನಿಕಾ ನಾಪತ್ತೆಯಾಗುತ್ತಿದ್ದಂತೆ ಹುಡುಕಾಟ ಆರಂಭಿಸಿದರು. ಡಿಆರ್‌ಎಫ್ ಸಿಬ್ಬಂದಿ ಮೌನಿಕಾ ಮೃತದೇಹವನ್ನು ಪಾರ್ಕ್‌ಲೈನ್‌ನಲ್ಲಿ ಪತ್ತೆ ಮಾಡಿದ್ದಾರೆ. ಮಗುವಿನ ಸಾವಿಗೆ ಕಾರಣ ಜಿಎಚ್‌ಎಂಸಿ ಸಿಬ್ಬಂದಿ ನಿರ್ಲಕ್ಷ್ಯವೇ ಕಾರಣ

ಮ್ಯಾನ್ ಹೋಲ್ ಗೆ ಬಿದ್ದು ಬಾಲಕಿ ಮೃತ್ಯು   ➤ಜಿಎಚ್‌ಎಂಸಿ ಸಿಬ್ಬಂದಿಯ ವಿರುದ್ಧ ಸ್ಥಳೀಯರ ಆಕ್ರೋಶ.! Read More »

ರಾಷ್ಟ್ರೀಯ ನ್ಯೂಸ್

ಹಾಡಹಗಲೇ ನಡುರಸ್ತೆಯಲ್ಲಿ ಬಿಜೆಪಿ ಮುಖಂಡನನ್ನು ಅಟ್ಟಾಡಿಸಿ ಕೊಂದ ದುಷ್ಕರ್ಮಿಗಳು..!

(ನ್ಯೂಸ್ ಕಡಬ)Newskadaba.com ಚೆನ್ನೈ,ಏ.29 ತಮಿಳುನಾಡಿನ ಬಿಜೆಪಿ ಮುಖಂಡನೊಬ್ನನನ್ನು ನಡುರಸ್ತೆಯಲ್ಲೇ ಅಪರಿಚಿತ ಗ್ಯಾಂಗ್​ವೊಂದು ಮಾರಕಾಸ್ತ್ರಗಳಿಂದ ದಾಳಿ ಮಾಡಿ ಕೊಂದಿದ್ದಾರೆ. ಈ ಘಟನೆ ಚೆನ್ನೈ ಹೊರವಲಯದ ಪೂನಮಲ್ಲೆ ಬಳಿಯ ನಸರತ್​ಪೇಟೈ ಬಳಿ ನಡೆದಿದೆ.ಕೊಲೆಯಾದವರನ್ನು ಪಿಪಿಜಿ ಶಂಕರ್ (46) ಪೆರಂಬದೂರಿನ ವರಪುರಂನವರು. ಅವರು ವರಪುರಂ ಪಂಚಾಯತ್ ಕೌನ್ಸಿಲ್ ಅಧ್ಯಕ್ಷರಾಗಿ ಮತ್ತು ಬಿಜೆಪಿಯ ಎಸ್ಸಿ ಮತ್ತು ಎಸ್ಟಿ ವಿಭಾಗದ ರಾಜ್ಯ ಖಜಾಂಚಿಯಾಗಿ ಸೇವೆ ಸಲ್ಲಿಸುತ್ತಿದ್ದರು ಎಂದು ತಿಳಿದುಬಂದಿದೆ. ಈತನ ಮೇಲೂ ಹಲವು ಕ್ರಿಮಿನಲ್ ಪ್ರಕರಣಗಳಿದ್ದವು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.    

ಹಾಡಹಗಲೇ ನಡುರಸ್ತೆಯಲ್ಲಿ ಬಿಜೆಪಿ ಮುಖಂಡನನ್ನು ಅಟ್ಟಾಡಿಸಿ ಕೊಂದ ದುಷ್ಕರ್ಮಿಗಳು..! Read More »

ರಾಷ್ಟ್ರೀಯ ನ್ಯೂಸ್

ಬಿಸಿಲಿಗೆ ಅಸ್ವಸ್ಥಗೊಂಡು ಯುವತಿ ಮೃತ್ಯು

(ನ್ಯೂಸ್ ಕಡಬ)newskadaba.com ಬಳ್ಳಾರಿ, ಏ.29. ಮತದಾನ ಜಾಗೃತಿ ಜಾಥಾದಲ್ಲಿ ಭಾಗವಹಿಸಿದ್ದ ಜಿಲ್ಲಾ ಸಾಂಕ್ರಾಮಿಕ ರೋಗ ನಿಯಂತ್ರಣಾ ವಿಭಾಗದ ಡಿ ಗ್ರೂ‍ಪ್‌ ಸಿಬ್ಬಂದಿ ಅಸ್ವಸ್ಥಗೊಂಡು ಮೃತಪಟ್ಟಿದ್ದಾರೆ ಎಂದು ವರದಿ ತಿಳಿಸಿದೆ. ಸಿರುಗುಪ್ಪದ ನಿವಾಸಿ ರತ್ನ(31) ಪ್ರತಿನಿತ್ಯ ಬಳ್ಳಾರಿಗೆ ಬಂದು ಹೋಗುತ್ತಿದ್ದರು. ಜಿಲ್ಲಾಡಳಿತ ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನಗರದಲ್ಲಿ ಏರ್ಪಡಿಸಿದ್ದ ಜಾಥಾದಲ್ಲಿ ಭಾಗವಹಿಸಿದ್ದರು. ಜಾಥಾದಿಂದ ಹಿಂತಿರುಗಿದ ಬಳಿಕ ಅವರಿಗೆ ಅಪಸ್ಮಾರ ಕಾಣಿಸಿಕೊಂಡಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.  

ಬಿಸಿಲಿಗೆ ಅಸ್ವಸ್ಥಗೊಂಡು ಯುವತಿ ಮೃತ್ಯು Read More »

ಕರ್ನಾಟಕ

ಬೆಳ್ತಂಗಡಿ: 9ನೇ ತರಗತಿಯ ಬಾಲಕ ಆತ್ಮಹತ್ಯೆ

(ನ್ಯೂಸ್ ಕಡಬ)newskadaba.com ಬೆಳ್ತಂಗಡಿ, ಏ.29. ತಾಲೂಕು ಪಂಚಾಯತ್ ಕ್ವಾಟ್ರಸ್ ನಲ್ಲಿ ಬಾಲಕನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದೆ. ಚಿತ್ರದುರ್ಗದಲ್ಲಿ 9ನೇ ತರಗತಿ‌ ಓದುತ್ತಿದ್ದ ಬಾಲಕ ಶಿವಪ್ರಸಾದ್(15) ಆತ್ಮಹತ್ಯೆ ಮಾಡಿಕೊಂಡ ಬಾಲಕ ಎಂದು ಗುರುತಿಸಲಾಗಿದೆ. ‌ಶಿವಪ್ರಸಾದ್ ಶಾಲೆಗೆ ರಜೆ ಹಿನ್ನೆಲೆ ದೊಡ್ಡಮ್ಮ ಮಂಜುಳ ಎಂಬವರ ಬೆಳ್ತಂಗಡಿಯ ಮನೆಗೆ ಬಂದಿದ್ದರು. ಮಂಜುಳಾ ಅವರು ಬೆಳ್ತಂಗಡಿಯ ಶಿಕ್ಷಣ ಇಲಾಖೆಯ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದರು. ಅವರು ತಾಲೂಕು ಪಂಚಾಯತ್ ಪಕ್ಕದ ಸರಕಾರಿ ಕ್ವಾಟ್ರಸ್ ನಲ್ಲಿ ವಾಸವಿದ್ದರು. ಇಂದು‌ ಮಂಜುಳ ಕೆಲಸಕ್ಕೆ ಹೋಗಿದ್ದರು. ಅವರ

ಬೆಳ್ತಂಗಡಿ: 9ನೇ ತರಗತಿಯ ಬಾಲಕ ಆತ್ಮಹತ್ಯೆ Read More »

ಕರಾವಳಿ

ಕಾರು ಹತ್ತುವ ವೇಳೆ ಕುಸಿದು ಬಿದ್ದ ಮಾಜಿ ಸಿಎಂ.!  ➤ ಸಿದ್ದರಾಮಯ್ಯ

(ನ್ಯೂಸ್ ಕಡಬ)Newskadaba.com ವಿಜಯನಗರ,ಏ.29 ವಿಜಯನಗರ ಜಿಲ್ಲೆಯ ಕೂಡ್ಲಿಗಿ ಹೆಲಿಪ್ಯಾಡ್‌ ಬಳಿ ಕಾರು ಹತ್ತುವ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯ ಕುಸಿದು ಬಿದ್ದ ಘಟನೆ ನಡೆಸಿದೆ. ವಿಧಾನ ಸಭೆ ಚುನಾವಣಾ ಹಿನ್ನೆಲೆ ಆರೋಗ್ಯ ಸಮಸ್ಯೆಯನ್ನು ಲೆಕ್ಕಿಸದೇ ಹಲವು ದಿನಗಳಿಂದ ಭರ್ಜರಿ ಪ್ರಚಾರದಲ್ಲಿ ತೊಡಗಿದ್ದ ಸಂದರ್ಭದಲ್ಲಿ ಆಯಾಸಗೊಂಡು ಕಾರು ಹತ್ತುವ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯ ಕುಸಿದುಬಿದ್ದಿದ್ದಾರೆ.ಕೂಡಲೇ ಗ್ಲೂಕೋಸ್‌ ನೀಡಿ ವೈದ್ಯರಿಂದ ಉಪಚಾರ ಮಾಡಲಾಗಿದೆ ಎಂದು ವರದಿಯಾಗಿದೆ.      

ಕಾರು ಹತ್ತುವ ವೇಳೆ ಕುಸಿದು ಬಿದ್ದ ಮಾಜಿ ಸಿಎಂ.!  ➤ ಸಿದ್ದರಾಮಯ್ಯ Read More »

ಕರ್ನಾಟಕ

ಸುಳ್ಯ: ಸಾರ್ವಜನಿಕ ಸ್ಥಳದಲ್ಲಿ ಇಬ್ಬರ ಮೇಲೆ ಹಲ್ಲೆ

(ನ್ಯೂಸ್ ಕಡಬ)newskadaba.com ಸುಳ್ಯ, ಏ.29. ಸರಕಾರಿ ಬಸ್‌ ನಿಲ್ದಾಣದ ಬಳಿ ಇಬ್ಬರು ಕೂಲಿ ಕಾರ್ಮಿಕರನ್ನು ವ್ಯಕ್ತಿಯೋರ್ವರು ಥಳಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ವೈರಲ್ ವಿಡಿಯೋದಲ್ಲಿ ಸುಳ್ಯ KSRTC ಬಸ್‌ ನಿಲ್ದಾಣ ಮುಂಭಾಗದಲ್ಲಿರುವ ನಂದಿನಿ ಮಿಲ್ಕ್ ಸ್ಟೋರ್‌ ಬಳಿ ಇಬ್ಬರು ಕಾರ್ಮಿಕರು ಕುಳಿತಿದ್ದು, ಓರ್ವ ವ್ಯಕ್ತಿ ಅಲ್ಲೆ ಪಕ್ಕದಲ್ಲಿರುವ ಬ್ಯಾಗ್‌ ಒಂದನ್ನು ತೋರಿಸಿ ಇದನ್ನು ಓಪನ್‌ ಮಾಡಿದವರು ಯಾರು ಎಂದು ಪ್ರಶ್ನಿಸಿ ಥಳಿಸುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.  

ಸುಳ್ಯ: ಸಾರ್ವಜನಿಕ ಸ್ಥಳದಲ್ಲಿ ಇಬ್ಬರ ಮೇಲೆ ಹಲ್ಲೆ Read More »

ಕರಾವಳಿ
Scroll to Top