News Kadaba

ಗೋಲ್ಡನ್ ಟೆಂಪಲ್ ಬಳಿ ಮತ್ತೆ ಸ್ಫೋಟ ➤ ಐವರ ಬಂಧನ

(ನ್ಯೂಸ್ ಕಡಬ)newskadaba.com ನವದೆಹಲಿ, ಮೇ.11. ಅಮೃತಸರದ ಪಂಜಾಬ್‌ ನ ಹೆರಿಟೇಜ್ ಸ್ಟ್ರೀಟ್ ಬಳಿ  ಮತ್ತೊಮ್ಮೆ ಸ್ಫೋಟ ಸಂಭವಿಸಿದ್ದು, ಪೊಲೀಸರು 5 ಮಂದಿಯನ್ನು ಬಂಧಿಸಿದ್ದಾರೆ. ಮುಂಜಾನೆ 1 ಗಂಟೆ ಸುಮಾರಿಗೆ ಅಮೃತಸರದ ಹೆರಿಟೇಜ್ ಸ್ಟ್ರೀಟ್ ಬಳಿ ಇಂದು  ಸ್ಫೋಟ ಸಂಭವಿಸಿದ್ದು, ಇದು ಐದು ದಿನಗಳಲ್ಲಿ ಸಂಭವಿಸಿದ ಮೂರನೇ ಸ್ಫೋಟ  ಇದಾಗಿದೆ.  

ಗೋಲ್ಡನ್ ಟೆಂಪಲ್ ಬಳಿ ಮತ್ತೆ ಸ್ಫೋಟ ➤ ಐವರ ಬಂಧನ Read More »

ರಾಷ್ಟ್ರೀಯ ನ್ಯೂಸ್

ಸುಬ್ರಹ್ಮಣ್ಯ: ಮತದಾನ ಬಹಿಷ್ಕರಿಸಿ ಆಕ್ರೋಶ ➤ ಸಂಕ ನಿರ್ಮಿಸಲು ಶ್ರಮಸೇವೆ

(ನ್ಯೂಸ್ ಕಡಬ)newskadaba.com ಸುಬ್ರಮಣ್ಯ, ಮೇ.11. ಕಡಬ ತಾಲೂಕಿನ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ವ್ಯಾಪ್ತಿಯ ಐನಕಿದು ಗ್ರಾಮದ ಕುಜುಂಬಾರ್ ನಲ್ಲಿ ಸೇತುವೆ ನಿರ್ಮಿಸುವಂತೆ ಹಲವಾರು ವರ್ಷಗಳಿಂದ ಬೇಡಿಕೆ ಇದ್ದರೂ ಅದನ್ನು ಈಡೇರಿಸದ ಹಿನ್ನಲೆಯಲ್ಲಿ ಆ ಭಾಗದ ಜನರು ಮತದಾನದಲ್ಲಿ ಭಾಗವಹಿಸದೆ ಹೊಳೆಗೆ ತಾತ್ಕಲಿಕ ಮರದ ಸಂಕ ನಿರ್ಮಿಸಿದಲು ಶ್ರಮಸೇವೆ ನಡೆಸಿದ ಘಟನೆ ನಡೆದಿದೆ. ಮತದಾನ ಬಹಿಷ್ಕರಿಸುವ ಬ್ಯಾನರ್ ಹಿಂದೆಯೇ ಅಳವಡಿಸಿದ್ದು ಅಧಿಕಾರಿಗಳು ಬಂದು ಮನವೊಲಿಸುವ ಪ್ರಯತ್ನ ಮಾಡಿದ್ದರು. ಆದರೆ ಯಾವುದೇ ಭರವಸೆ ನೀಡದ ಹಿನ್ನಲೆ ೩೦ ಕ್ಕೂ ಹೆಚ್ಚು

ಸುಬ್ರಹ್ಮಣ್ಯ: ಮತದಾನ ಬಹಿಷ್ಕರಿಸಿ ಆಕ್ರೋಶ ➤ ಸಂಕ ನಿರ್ಮಿಸಲು ಶ್ರಮಸೇವೆ Read More »

ಕರಾವಳಿ

 ಚುನಾವಣೆ ಮುಗಿದ ಬೆನ್ನಲ್ಲೇ ಸಿಂಗಾಪುರ್ ಗೆ ಪ್ರಯಾಣ ಬೆಳೆಸಿದ ಮಾಜಿ ಸಿಎಂ.!➤ ಹೆಚ್.ಡಿ ಕುಮಾರಸ್ವಾಮಿ

(ನ್ಯೂಸ್ ಕಡಬ)Newskadaba.com ಬೆಂಗಳೂರು,ಮೇ.11 ಬೆಂಗಳೂರು: ಕರ್ನಾಟಕ ವಿಧಾನಸಭೆಗೆ ಚುನಾವಣೆ ಮುಗಿದ ಬೆನ್ನಲ್ಲೇ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಸಿಂಗಾಪುರ್ ಗೆ ತೆರಳಿದ್ದಾರೆ. ಮಧ್ಯರಾತ್ರಿ ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣದಿಂದ ಸಿಂಗಾಪುರ್ ನತ್ತ ಪ್ರಯಾಣ ಬೆಳೆಸಿದ್ದಾರೆ. ಕಳೆದ ಆರು ತಿಂಗಳಿನಿಂದ ಸತತ ಪ್ರಚಾರ, ಪ್ರವಾಸದಿಂದ ಸುಸ್ತಾಗಿದ್ದ ಹೆಚ್‍ಡಿಕೆ ಎರಡು ದಿನಗಳ ಕಾಲ ವಿಶ್ರಾಂತಿಗಾಗಿ ಸಿಂಗಾಪುರ್ ಪ್ರಯಾಣ ಬೆಳೆಸಿದ್ದಾರೆ. ಒಟ್ಟಿನಲ್ಲಿ ಸಮೀಕ್ಷೆಗಳ ಬಗ್ಗೆ ತಲೆ ಕೆಡಿಸಿಕೊಳ್ಳದ ಹೆಚ್‍ಡಿಕೆ ಫಲಿತಾಂಶದ ದಿನ ವಾಪಸ್ಸಾಗಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.    

 ಚುನಾವಣೆ ಮುಗಿದ ಬೆನ್ನಲ್ಲೇ ಸಿಂಗಾಪುರ್ ಗೆ ಪ್ರಯಾಣ ಬೆಳೆಸಿದ ಮಾಜಿ ಸಿಎಂ.!➤ ಹೆಚ್.ಡಿ ಕುಮಾರಸ್ವಾಮಿ Read More »

ಕರ್ನಾಟಕ

ಸಿಟಿ ರವಿಗೆ ದಿಡೀರ್ ಅನಾರೋಗ್ಯ ➤ ಆಸ್ಪತ್ರೆಗೆ ದಾಖಲು

(ನ್ಯೂಸ್ ಕಡಬ)newskadaba.com ಚಿಕ್ಕಮಗಳೂರು, ಮೇ.11. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿಗೆ ದಿಢೀರ್ ಅನಾರೋಗ್ಯವಾಗಿದ್ದು, ತಡರಾತ್ರಿಯೇ ಆಸ್ಪತ್ರೆಗೆ ದಾಖಲಾಗಿದ್ದಾರೆ. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರನ್ನು ಚಿಕ್ಕಮಗಳೂರು ನಗರದ ಆಶ್ರಯ ಆಸ್ಪತ್ರೆಗೆ ‌ದಾಖಲಿಸಲಾಗಿದೆ.  

ಸಿಟಿ ರವಿಗೆ ದಿಡೀರ್ ಅನಾರೋಗ್ಯ ➤ ಆಸ್ಪತ್ರೆಗೆ ದಾಖಲು Read More »

ಕರ್ನಾಟಕ

ಮತದಾನಕ್ಕೆ ಸೂಕ್ತ ವ್ಯವಸ್ಥೆ ಮಾಡಿಲ್ಲ➤ಅಧಿಕಾರಿಗಳ ವಿರುದ್ಧ ಮತದಾರರ ಆಕ್ರೋಶ..!

(ನ್ಯೂಸ್ ಕಡಬ)Newskadaba.com ಬೆಂಗಳೂರು,ಮೇ.11 ದೊಡ್ಡ ನಾಗಮಂಗಲದ ಮತ ಕೇಂದ್ರದಲ್ಲಿ ಆರು ಸಾವಿರಕ್ಕೂ ಹೆಚ್ಚು ಜನರಿಗೆ ಮತದಾನಕ್ಕೆ ಅವಕಾಶ ಕಲ್ಪಿಸಿದ್ದರಿಂದ ಗಂಟೆಗಟ್ಟಲೆ ಕಾಯಬೇಕಾದ ಸ್ಥಿತಿ ನಿರ್ಮಾಣವಾಗಿತ್ತು.ಎಲ್ಲರೂ ಮತದಾನ ಮಾಡಬೇಕು ಎಂದು ಜಾಗೃತಿ ಮೂಡಿಸುವ ಅಧಿಕಾರಿಗಳು, ಮತದಾನಕ್ಕೆ ಸೂಕ್ತ ವ್ಯವಸ್ಥೆ ಮಾಡಿಲ್ಲ, ಕಾಯಬೇಕಾದ ಅನಿವಾರ್ಯತೆ ಸೃಷ್ಟಿಸಿದ್ದಾರೆ ಎಂದು ಮತದಾರರು ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೆ ಸ್ಪಷ್ಟನೆ ನೀಡಿರುವ ಚುನಾವಣಾ ಆಯೋಗ, ‘ದೊಡ್ಡ ನಾಗಮಂಗಲದಲ್ಲಿ 6,160 ಮತದಾರರಿದ್ದು, ಅವರಿಗಾಗಿ ಒಂದು ಸಹಾಯಕ ಮತಗಟ್ಟೆ ಸೇರಿ ನಾಲ್ಕು ಮತಗಟ್ಟೆಗಳನ್ನು ರಚಿಸಲಾಗಿತ್ತು. ಒಂದು ಮತಗಟ್ಟೆಯಲ್ಲಿ ಮಾತ್ರ

ಮತದಾನಕ್ಕೆ ಸೂಕ್ತ ವ್ಯವಸ್ಥೆ ಮಾಡಿಲ್ಲ➤ಅಧಿಕಾರಿಗಳ ವಿರುದ್ಧ ಮತದಾರರ ಆಕ್ರೋಶ..! Read More »

ಕರ್ನಾಟಕ

ಉಳ್ಳಾಲ: ಕಾಲೇಜು ವಿದ್ಯಾರ್ಥಿನಿ ಸಮುದ್ರಪಾಲು

(ನ್ಯೂಸ್ ಕಡಬ)newskadaba.com ಉಳ್ಳಾಲ, ಮೇ.11. ರುದ್ರ ಪಾದೆಯಲ್ಲಿ ವಿಹರಿಸುತ್ತಿದ್ದ ವೇಳೆ ಯುವತಿಯೋರ್ವಳು ಆಯತಪ್ಪಿ ಸಮುದ್ರಕ್ಕೆ ಬಿದ್ದು ಮೃತಪಟ್ಟ ಘಟನೆ ಸೋಮೇಶ್ವರ ರುದ್ರಪಾದೆಯಲ್ಲಿ ನಡೆದಿದೆ. ಮಂಗಳೂರಲ್ಲಿ ಪೋಷಕರ ಜೊತೆ ವಾಸಿಸುತ್ತಿದ್ದ ಬಾಗಲಕೋಟೆ ಜಿಲ್ಲೆಯ, ಬಾದಾಮಿ ನಿವಾಸಿ ಕಾವೇರಿ(20)ಮೃತಪಟ್ಟ ಯುವತಿ ಎಂದು ಗುರುತಿಸಲಾಗಿದೆ.  

ಉಳ್ಳಾಲ: ಕಾಲೇಜು ವಿದ್ಯಾರ್ಥಿನಿ ಸಮುದ್ರಪಾಲು Read More »

ಕರಾವಳಿ

ಕಾಂಗ್ರೆಸ್​ ಮಾಜಿ ಶಾಸಕನ ತಮ್ಮನಿಗೆ ಕೋಲಿನಿಂದ ಹೊಡೆದು ಹಲ್ಲೆ.!

(ನ್ಯೂಸ್ ಕಡಬ)Newskadaba.com ರಾಯಚೂರು,ಮೇ.11 ಮಸ್ಕಿ ಕ್ಷೇತ್ರದ ಕಾಂಗ್ರೆಸ್​ನ ಮಾಜಿ ಶಾಸಕ ಬಸನಗೌಡ ತುರುವಿಹಾಳ ಸಹೋದರ ಸಿದ್ದನಗೌಡರ ಮೇಲೆ ಬಿಜೆಪಿ ಕಾರ್ಯಕರ್ತರು ಗಂಭೀರವಾಗಿ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಹಲ್ಲೆಯಿಂದಾಗಿ ನಗರದಲ್ಲಿ ಉದ್ವಿಗ್ನ ವಾತಾವರಣ ಏರ್ಪಟ್ಟಿದೆ. ಕಾಂಗ್ರೆಸ್​ನ ಬಸನಗೌಡ ತುರುವಿನಹಾಳ ಸಹೋದರ ಸಿದ್ದನಗೌಡ ಪಟ್ಟಣದಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಬಿಜೆಪಿಯ ಪ್ರತಾಪ್ ಗೌಡ ಅವರ ಪುತ್ರ ರಾಕೇಶ್ ಪಾಟೀಲ್ ಹಾಗೂ ಅವರ 150 ಬೆಂಬಲಿಗರು ಸೇರಿ ಏಕಾಏಕಿ ಸಿದ್ದನಗೌಡರ ಮೇಲೆ ದಾಳಿ ಮಾಡಿದ್ದಾರೆ ಎನ್ನಲಾಗಿದೆ.ಪಟ್ಟಣದಲ್ಲಿ ಅಟ್ಟಾಡಿಸಿಕೊಂಡು

ಕಾಂಗ್ರೆಸ್​ ಮಾಜಿ ಶಾಸಕನ ತಮ್ಮನಿಗೆ ಕೋಲಿನಿಂದ ಹೊಡೆದು ಹಲ್ಲೆ.! Read More »

ಕರ್ನಾಟಕ

ಕಾರ್ಕಳ: ಅಪ್ರಾಪ್ತ ಬಾಲಕನಿಂದ ನಕಲಿ ಮತದಾನ

(ನ್ಯೂಸ್ ಕಡಬ)newskadaba.com ಕಾರ್ಕಳ, ಮೇ.11. ಅಪ್ರಾಪ್ತ ಬಾಲಕನೋರ್ವ ನಕಲಿ ಮತದಾನ ಮಾಡಿದ ಆರೋಪ ಕಾರ್ಕಳದಿಂದ ಕೇಳಿ ಬಂದಿದೆ. ತಾಲೂಕಿನ ಮಿಯ್ಯಾರು ಕುಂಟಿಬೈಲ್ ಮತಗಟ್ಟೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಪೋಲೀಸರ ನಡುವೆ ವಾಗ್ವಾದ ನಡೆದು ಲಾಠಿ ಬೀಸಿದ ಘಟನೆ ಕಾರ್ಕಳಟ್ಟೆ ರಾತ್ರಿ ನಡೆದಿದೆ. ಮತಯಂತ್ರ ಹಾಗೂ ಚುನಾವಣಾ ಸಿಬ್ಬಂದಿ ಸಂಚರಿಸಬೆಕಾಗಿದ್ದ ಬಸ್ ನ್ನು ಕಾಂಗ್ರೆಸ್ ಕಾರ್ಯಕರ್ತರು ತಡೆ ಹಿಡಿದಿದ್ದಾರೆ. ಬಿಜೆಪಿ ಕಾರ್ಯಕರ್ತರು ನಕಲಿ ಮತದಾನ ಮಾಡಿದ್ದಾರೆ ಎಂದು ಕಾಂಗ್ರೆಸ್ ಸದಸ್ಯರು ಪೋಲೀಸರ ಜೊತೆ ವಾಗ್ವಾದ ನಡೆಸಿದ್ದಾರೆ.ಇನ್ನು ಕಾರ್ಕಳ ವಿಧಾನ

ಕಾರ್ಕಳ: ಅಪ್ರಾಪ್ತ ಬಾಲಕನಿಂದ ನಕಲಿ ಮತದಾನ Read More »

ಕರಾವಳಿ

ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ.!➤ಪ್ರಕರಣ ದಾಖಲು

(ನ್ಯೂಸ್ ಕಡಬ)Newskadaba.com ಸಾಗರ,ಮೇ.11 ಚುನಾವಣೆಯಲ್ಲಿ ಮತ ಹಾಕಲು ಬೆಂಗಳೂರಿನಿಂದ ಸಾಗರಕ್ಕೆ ಬರುತ್ತಿದ್ದ ಟೊಯೋಟ ಫಾರ್ಚೂನರ್ ಕಾರು ಚನ್ನಗಿರಿ ಹೆಬ್ಬಲಗೆರೆ ಸಮೀಪ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ನಡೆದಿದೆ.ಕಾರಿನಲ್ಲಿದ್ದವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಚೆನ್ನಗಿರಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಗಾಯಗೊಂಡವರನ್ನು ಸಾಗರದ ಖ್ಯಾತ ಉದ್ಯಮಿ ಇಕ್ಬಾಲ್ ಸಾಹೇಬರ ಮಕ್ಕಳಾದ ಝಹೂರ್ , ನಯಾಝ್ ಮತ್ತು ನಯಾಝ್‌ರ ಪತ್ನಿ ಸುನೈನಾ ಎಂದು ಗುರುತಿಸಲಾಗಿದೆ.ಚೆನ್ನಗಿರಿ ತಾಲೂಕಿನ ಹೆಬ್ಬಲಗೆರೆಯ ರಾಷ್ಟ್ರೀಯ ಹೆದ್ದಾರಿ ಬಳಿ ಘಟನೆ ನಡೆದಿದ್ದು, ಮಳೆ ಬರುತ್ತಿದ್ದ ಸಮಯದಲ್ಲಿ ಚಾಲಕ

ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ.!➤ಪ್ರಕರಣ ದಾಖಲು Read More »

ರಾಷ್ಟ್ರೀಯ ನ್ಯೂಸ್

ಚಾರ್ಮಾಡಿಯಲ್ಲಿ ರಾತ್ರಿ 10.30ರವರೆಗೆ ತೆರಳದ ಮತಗಟ್ಟೆ ಅಧಿಕಾರಿಗಳು ➤ ಅನುಮಾನಗೊಂಡು ಸೇರಿದ ಜನ, ಕೆಲಕಾಲ ಗೊಂದಲ ಸೃಷ್ಟಿ

(ನ್ಯೂಸ್ ಕಡಬ)newskadaba.com ಚಾರ್ಮಾಡಿ, ಮೇ.11. ಮತದಾನ ಮುಗಿದಿದ್ದರೂ ರಾತ್ರಿ 10:30 ದಾಟಿದರೂ ಮತಗಟ್ಟೆಯ ಅಧಿಕಾರಿಗಳು ತೆರಳಲಿಲ್ಲ ಎಂದು ಸಂಶಯದಿಂದ ಕಾಂಗ್ರೆಸ್ ಕಾರ್ಯಕರ್ತರು ಮತಗಟ್ಟೆಯ ಬಳಿ ಸೇರಿ ಪ್ರಶ್ನಿಸಿದ್ದಾರೆ. ಚಾರ್ಮಾಡಿಯ ಬೂತ್ ವೊಂದರಲ್ಲಿ ರಾತ್ರಿ 7:20ರವರೆಗೂ ಮತದಾನ ನಡೆದಿತ್ತು. ಆದರೆ ರಾತ್ರಿ 10:30 ದಾಟಿದರೂ ಮತಗಟ್ಟೆಯ ಅಧಿಕಾರಿಗಳು ಅಲ್ಲಿಂದ ತೆರಳಿರಲಿಲ್ಲ.ಒಂದೇ ಒಂದು ಬೂತ್ ನಲ್ಲಿ ಮತದಾನ ವಿಳಂಬವಾಗಿತ್ತು.ಆದರೆ ಚಾರ್ಮಾಡಿ ಪಂಚಾಯತ್ ವ್ಯಾಪ್ತಿಯ ಯಾವುದೇ ಬೂತ್ ಗಳಿಂದ ಮತಯಂತ್ರಗಳನ್ನು ಕೊಂಡೊಯ್ದಿರಲಿಲ್ಲ.‌ಇದರಿಂದ ಕಾರ್ಯಕರ್ತರ ಅನುಮಾನ ಉಂಟಾಗಿದೆ.

ಚಾರ್ಮಾಡಿಯಲ್ಲಿ ರಾತ್ರಿ 10.30ರವರೆಗೆ ತೆರಳದ ಮತಗಟ್ಟೆ ಅಧಿಕಾರಿಗಳು ➤ ಅನುಮಾನಗೊಂಡು ಸೇರಿದ ಜನ, ಕೆಲಕಾಲ ಗೊಂದಲ ಸೃಷ್ಟಿ Read More »

ಕರಾವಳಿ, ಕರ್ನಾಟಕ
Scroll to Top