News Kadaba

ಅಗ್ನಿವೀರರಿಗೆ ರೈಲ್ವೆಯಿಂದ ಶೇ 15ರಷ್ಟು ಮೀಸಲಾತಿ.!

(ನ್ಯೂಸ್ ಕಡಬ)Newskadaba.com ನವದೆಹಲಿ,ಮೇ.12 ವಿವಿಧ ಇಲಾಖೆಗಳಲ್ಲಿನ ನಾನ್‌ ಗೆಜೆಟೆಡ್‌ ಹುದ್ದೆಗಳ ಭರ್ತಿಗೆ ನಡೆಯುವ ನೇರ ನೇಮಕಾತಿಯಲ್ಲಿ ರೈಲ್ವೆಯು ಅಗ್ನಿವೀರರಿಗೆ ಶೇ 15ರಷ್ಟು ಒಟ್ಟು ಮೀಸಲಾತಿ, ವಯೋಮಿತಿಯಲ್ಲಿ ಸಡಿಲಿಕೆ ಹಾಗೂ ದೈಹಿಕ ಪರೀಕ್ಷೆಯಿಂದ ವಿನಾಯಿತಿ ನೀಡಲಿದೆ ಎಂದು ಮೂಲಗಳು  ಹೇಳಿವೆ. ಅಗ್ನಿವೀರರಿಗೆ ಈ ಸೌಲಭ್ಯಗಳನ್ನು ನೀಡುವುದಕ್ಕೆ ಸಂಬಂಧಿಸಿ ಕ್ರಮ ಕೈಗೊಳ್ಳುವಂತೆ ರೈಲ್ವೆ ವಲಯಗಳ ಪ್ರಧಾನ ವ್ಯವಸ್ಥಾಪಕರಿಗೆ ರೈಲ್ವೆ ಮಂಡಳಿ ಪತ್ರ ಬರೆದಿದೆ.ರೈಲ್ವೆಯ ವಿವಿಧ ವಿಭಾಗಗಳಲ್ಲಿನ ಹಂತ-1 ಹಾಗೂ ಹಂತ-2 ಹಾಗೂ ಅದಕ್ಕೂ ಮೇಲ್ಪಟ್ಟ ಹುದ್ದೆಗಳಿಗೆ ಈ ಸೌಲಭ್ಯ ನೀಡಲಾಗುತ್ತದೆ ಎಂದು […]

ಅಗ್ನಿವೀರರಿಗೆ ರೈಲ್ವೆಯಿಂದ ಶೇ 15ರಷ್ಟು ಮೀಸಲಾತಿ.! Read More »

ರಾಷ್ಟ್ರೀಯ ನ್ಯೂಸ್

ರಾಜ್ಯದಲ್ಲಿ ಇನ್ನೂ 3-4 ದಿನ ಭಾರೀ ಮಳೆಯಾಗುವ ಸಾಧ್ಯತೆ.!

(ನ್ಯೂಸ್ ಕಡಬ)Newskadaba.com ಬೆಂಗಳೂರು,ಮೇ.12 ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂದಿನ ಮೂರ್ನಾಲ್ಕು ದಿನ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮುಂದಿನ ಮೂರು ದಿನ ಕರಾವಳಿಯ ಎಲ್ಲಾ ಜಿಲ್ಲೆಗಳು, ಉತ್ತರ ಒಳನಾಡಿನ ಕೆಲವು ಜಿಲ್ಲೆಗಳು ಹಾಗೂ ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಮಳೆಯಾಗಲಿದೆ.ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಹೆಚ್ಚಿನ ಪ್ರಮಾಣದ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.   .    

ರಾಜ್ಯದಲ್ಲಿ ಇನ್ನೂ 3-4 ದಿನ ಭಾರೀ ಮಳೆಯಾಗುವ ಸಾಧ್ಯತೆ.! Read More »

ಕರ್ನಾಟಕ

ಚಲಿಸುತ್ತಿದ್ದ ರಿಕ್ಷಾದ ಮೇಲೆ ಬಿದ್ದ ಮರ ➤ ಇಬ್ಬರು ಮೃತ್ಯು

(ನ್ಯೂಸ್ ಕಡಬ)newskadaba.com ಕಾಪು, ಮೇ.12. ಕಾಪು – ಶಿರ್ವ ರಸ್ತೆಯ ಮಲ್ಲಾರು ಚಂದ್ರನಗರ ಬಳಿ ರಿಕ್ಷಾದ ಮೇಲೆ ಮರ ಬಿದ್ದು ಇಬ್ಬರು ಮೃತಪಟ್ಟಿರುವ ಘಟನೆ ನಡೆದಿದೆ. ಮೃತರನ್ನು ಪುಷ್ಪ(45) ಮತ್ತು ಕೃಷ್ಣ ಎಂದು ಗುರುತಿಸಲಾಗಿದೆ. ಗಾಳಿ, ಮಳೆಯಿಂದಾಗಿ ರಿಕ್ಷಾದ ಮೇಲೆ ಬೃಹತ್ ದೂಪದ ಮರ ಉರುಳಿ ಬಿದ್ದಿದ್ದು ರಸ್ತೆ ಸಂಪೂರ್ಣ ಬಂದ್ ಆಗಿತ್ತು. ರಿಕ್ಷಾದ ಮೇಲಿನಿಂದ ಮರ ತೆರವು ಗೊಳಿಸಲು ಒಂದು ಗಂಟೆಯಿಂದ ನಿರಂತರ ಪ್ರಯತ್ನ ನಡೆಸಿದ್ದು, ಸಾವಿರಾರು ಮಂದಿ ಸ್ಥಳದಲ್ಲಿ ಜಮಾಯಿಸಿದ್ದಾರೆ‌.

ಚಲಿಸುತ್ತಿದ್ದ ರಿಕ್ಷಾದ ಮೇಲೆ ಬಿದ್ದ ಮರ ➤ ಇಬ್ಬರು ಮೃತ್ಯು Read More »

ಕರಾವಳಿ

ಮಂಗಳೂರು: ಕದ್ರಿ ದೇಗುಲದಲ್ಲಿ ಆವರಣದಲ್ಲಿ ಅನುಮಾನಸ್ಪದ ಓಡಾಟ ➤ ಮೂವರು ಆರೋಪಿಗಳು ವಶಕ್ಕೆ

(ನ್ಯೂಸ್ ಕಡಬ)newskadaba.com ಮಂಗಳೂರು, ಮೇ.12. ಕದ್ರಿ ದೇವಸ್ಥಾನದ ಆವರಣದಲ್ಲಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ಮೂವರು ಯುವಕರನ್ನು ಸ್ಥಳೀಯರು ಪೊಲೀಸರಿಗೆ ಒಪ್ಪಿಸಿದ ಘಟನೆ ನಡೆದಿದೆ. ದೇವಸ್ಥಾನದ ಆವರಣದಲ್ಲಿ ಅಪರಿಚಿತರು ಓಡಾಡುತ್ತಿರುವ ಬಗ್ಗೆ ಮಾಹಿತಿ ಪಡೆದ ಸ್ಥಳೀಯರು, ದೇವಸ್ಥಾನಕ್ಕೆ ಭೇಟಿ ನೀಡಿದ ಅವರನ್ನು ವಿಚಾರಿಸಿದ್ದಾರೆ. ಯುವಕರು ದೇವಸ್ಥಾನದ ಅಂಗಣಕ್ಕೆ ಬೈಕ್ ತಂದಿದ್ದಲ್ಲದೇ ಚಪ್ಪಲಿ ಧರಿಸಿ ಅಡ್ಡಾಡುತ್ತಿದ್ದದ್ದು ಭಕ್ತರ ಅಕ್ರೋಶಕ್ಕೆ ಕಾರಣವಾಗಿತ್ತು. ಯುವಕರನ್ನು ವಿಚಾರಿಸಿದಾಗ ತಾವು ಅಸೈಗೋಳಿಯಿಂದ ಕಾಟಿಪಳ್ಳಕ್ಕೆ ಹೋಗುವವರಾಗಿದ್ದು, ತಪ್ಪಾಗಿ ಗೂಗಲ್ ಮ್ಯಾಪ್ ನೋಡಿಕೊಂಡು ಹೋಗುವಾಗ ದಾರಿ ತಪ್ಪಿ ಇಲ್ಲಿಗೆ ಬಂದಿರುವುದಾಗಿ

ಮಂಗಳೂರು: ಕದ್ರಿ ದೇಗುಲದಲ್ಲಿ ಆವರಣದಲ್ಲಿ ಅನುಮಾನಸ್ಪದ ಓಡಾಟ ➤ ಮೂವರು ಆರೋಪಿಗಳು ವಶಕ್ಕೆ Read More »

ಕರಾವಳಿ

ಕಾರು & ಟಿಟಿ ನಡುವೆ ಭೀಕರ ಅಪಘಾತ ➤ ಮಗು ಸೇರಿ ಇಬ್ಬರು ಮೃತ್ಯು

(ನ್ಯೂಸ್ ಕಡಬ)newskadaba.com ಚಿಕ್ಕಮಗಳೂರು, ಮೇ.11. ಕಾರು ಮತ್ತು ಹಾಗೂ ಟಿಟಿ ವಾಹನದ ನಡುವೆ ಸಂಭವಿಸಿದ ಅಪಘತದಲ್ಲಿ‌ ಮಗು ಸೇರಿ ಇಬ್ಬರು ಮೃತಪಟ್ಟ ಘಟನೆ ನಡೆದಿದೆ. ಹೊನ್ನಾವರ ಮೂಲದ ಗಿರಿಧರ್ (46) ಮತ್ತು ಮೂರು ವರ್ಷದ ಮಗು ಮಯಾಂಕ್ ಮೃತರು ಎಂದು ಗುರುತಿಸಲಾಗಿದೆ. ಟಿಟಿಯಲ್ಲಿದ್ದ ಏಳು ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಶಿವಮೊಗ್ಗದ ಆಸ್ಪತ್ರೆಗೆ ಸಾಗಿಸಲಾಗಿದೆ.  

ಕಾರು & ಟಿಟಿ ನಡುವೆ ಭೀಕರ ಅಪಘಾತ ➤ ಮಗು ಸೇರಿ ಇಬ್ಬರು ಮೃತ್ಯು Read More »

ರಾಷ್ಟ್ರೀಯ ನ್ಯೂಸ್

ಗೂಗಲ್ ವಾರ್ಷಿಕ ಸಮ್ಮೇಳನ ➤ ಬಹುನಿರೀಕ್ಷಿತ ಗ್ಯಾಜೆಟ್ ಬಿಡುಗಡೆ ಸಾಧ್ಯತೆ

(ನ್ಯೂಸ್ ಕಡಬ)newskadaba.com ಕ್ಯಾಲಿಫೋರ್ನಿಯಾ, ಮೇ.11. ಗೂಗಲ್ ನ ವಾರ್ಷಿಕ ಡೆವಲಪರ್ ಸಮ್ಮೇಳನ ‘Google I/O 2023’ ಇಂದು ರಾತ್ರಿ 10:30ರಿಂದ ಕ್ಯಾಲಿಫೋರ್ನಿಯಾದಲ್ಲಿ ಕಾರ್ಯಕ್ರಮ ನಡೆಯಲಿದೆ. ಗೂಗಲ್ 2008ರಿಂದ ಈ ಕಾರ್ಯಕ್ರಮ ಆಯೋಜಿಸುತ್ತಿದ್ದು ಇದರಲ್ಲಿ ಕಂಪನಿಯ ಹೊಸ ಗ್ಯಾಜೆಟ್‌ & ತಂತ್ರಜ್ಞಾನದ ಅಪ್‌ಡೇಟ್‌ಗಳನ್ನು ರಿಲೀಸ್‌ ಮಾಡಲಾಗುತ್ತದೆ. ಅದರಂತೆ ಕಂಪನಿಯು ಬಹುನಿರೀಕ್ಷಿತ Google Pixel 7A ಸ್ಮಾರ್ಟ್‌ಫೋನ್, Google Pixel Fold ಸ್ಮಾರ್ಟ್‌ಫೋನ್, Google Pixel ಟ್ಯಾಬ್ಲೆಟ್, Android 14 ಆಪರೇಟಿಂಗ್ ಸಿಸ್ಟಮ್ ಮತ್ತು Google AI ವೈಶಿಷ್ಟ್ಯಗಳನ್ನು ಪರಿಚಯಿಸಬಹುದು

ಗೂಗಲ್ ವಾರ್ಷಿಕ ಸಮ್ಮೇಳನ ➤ ಬಹುನಿರೀಕ್ಷಿತ ಗ್ಯಾಜೆಟ್ ಬಿಡುಗಡೆ ಸಾಧ್ಯತೆ Read More »

ರಾಷ್ಟ್ರೀಯ ನ್ಯೂಸ್

ಆಸ್ಟ್ರೇಲಿಯಾದ ಸಂಸತ್ ಸದಸ್ಯರಾಗಿ ಆಯ್ಕೆಯಾದ ಕೊಡಗಿನ ಚರಿಷ್ಮಾ

(ನ್ಯೂಸ್ ಕಡಬ)newskadaba.com ಕೊಡಗು, ಮೇ.11. ಭಾರತೀಯರೊಬ್ಬರು ಆಸ್ಟ್ರೇಲಿಯಾದ ಸಂಸತ್ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಕನ್ನಡತಿಯಾಗಿರುವ ಕೊಡಗು ಮೂಲದ ಚರಿಷ್ಮಾ ಆಸ್ಟ್ರೇಲಿಯಾದ ಸಂಸತ್ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಆಸ್ಟ್ರೇಲಿಯಾದ ಸಂಸತ್ ಸದಸ್ಯರಾಗಿ ಕೊಡಗಿನ ಚರಿಷ್ಮಾ ಮಾದಪ್ಪ ಇಂದು ಪ್ರಮಾಣ ವಚನ ಸ್ವೀಕರಿಸಿದ್ದಾರೆ.  

ಆಸ್ಟ್ರೇಲಿಯಾದ ಸಂಸತ್ ಸದಸ್ಯರಾಗಿ ಆಯ್ಕೆಯಾದ ಕೊಡಗಿನ ಚರಿಷ್ಮಾ Read More »

ರಾಷ್ಟ್ರೀಯ ನ್ಯೂಸ್

ಬಾವಿಗೆ ಬಿದ್ದ ಮೂರು ವರ್ಷದ ಮಗುವನ್ನು ರಕ್ಷಿಸಿದ 13 ವರ್ಷದ ಬಾಲಕಿ

(ನ್ಯೂಸ್ ಕಡಬ)newskadaba.com ಚಾರ್ತಾ, ಮೇ.11. 40 ಅಡಿ ಅಳದ ಬಾವಿಗೆ ಬಿದ್ದ ಮಗುವನ್ನು 13 ವರ್ಷದ ಬಾಲಕಿ ರಕ್ಷಿಸಿದ ಘಟನೆ ಜಾರ್ಖಂಡ್‌ನ ಚತ್ರಾ ಜಿಲ್ಲೆಯಲ್ಲಿ ನಡೆದಿದೆ. ಮೂರು ವರ್ಷದ ಶಿವಂ ಕುಮಾರ್ ಬಾವಿಯ ಬಳಿ ಆಟವಾಡುತ್ತಿದ್ದಾಗ ಬಾವಿಗೆ ಬಿದ್ದಿದ್ದು, ಇದನ್ನು ನೋಡಿದ ಕಾಜಲ್ ಕುಮಾರಿ ಭೂಯಾನ್ ಒಂದು ಸೆಕೆಂಡ್ ವ್ಯರ್ಥ ಮಾಡದೆ ಬಾವಿಗೆ ಹಾರಿದ್ದಾಳೆ. ಒಂದು ಕೈಯಲ್ಲಿ ಮಗುವನ್ನು ಹಿಡಿದು ಇನ್ನೊಂದು ಕೈಯಲ್ಲು ಮೋಟಾರ್ ಪಂಪಿನ ಪೈಪ್ ಹಿಡಿದು ಸಹಾಯಕ್ಕಾಗಿ ಕೂಗಿದ್ದಾಳೆ. ಸುಮಾರು ಒಂದು ಗಂಟೆಯ ನಂತರ

ಬಾವಿಗೆ ಬಿದ್ದ ಮೂರು ವರ್ಷದ ಮಗುವನ್ನು ರಕ್ಷಿಸಿದ 13 ವರ್ಷದ ಬಾಲಕಿ Read More »

ರಾಷ್ಟ್ರೀಯ ನ್ಯೂಸ್

ಕಾರು ಮತ್ತು ಟಿಟಿ ವಾಹನದ ನಡುವೆ ಭೀಕರ ಅಪಘಾತ.!➤ಇಬ್ಬರು ಮೃತ್ಯು

(ನ್ಯೂಸ್ ಕಡಬ)Newskadaba.com ಚಿಕ್ಕಮಗಳೂರು ,ಮೇ.11 ಕಾರು ಹಾಗೂ ಟಿಟಿ ವಾಹನದ ನಡುವೆ ಭೀಕರ ಅಪಘಾತ ಸಂಭವಿಸಿ ಮಗು ಸೇರಿ ಇಬ್ಬರು ಸಾವನ್ನಪ್ಪಿರುವ ಘಟನೆ ಬೆಂಗಳೂರು-ಶಿವಮೊಗ್ಗ ರಾಷ್ಟ್ರೀಯ ಹೆದ್ದಾರಿ ಮತ್ತಿಘಟ್ಟ ಕ್ರಾಸ್ ಬಳಿ ನಡೆದಿದೆ.ಕಾರು ಹಾಗೂ ಟಿಟಿ ವಾಹನದ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ.ಕಾರಿನಲ್ಲಿದ್ದ ಗಿರಿಧರ (46) ಹಾಗೂ ಮೂರು ವರ್ಷದ ಮಗು ಮಯಂಕ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹೊನ್ನಾವರದ ಸಂಬಂಧಿಕರ ಮನೆಗೆ ಮದುವೆಗೆಂದು ಗಿರಿಧರ ಕುಟುಂಬ ಕಾರಿನಲ್ಲಿ ತೆರಳುತ್ತಿತ್ತು. ಈ ವೇಳೆ ಕೇರಳದಿಂದ ಚಿಕ್ಕಮಗಳೂರು ಕಡೆ ಪ್ರವಾಸಕ್ಕೆ ತೆರಳುತ್ತಿದ್ದ ಟಿಟಿ

ಕಾರು ಮತ್ತು ಟಿಟಿ ವಾಹನದ ನಡುವೆ ಭೀಕರ ಅಪಘಾತ.!➤ಇಬ್ಬರು ಮೃತ್ಯು Read More »

ಕರ್ನಾಟಕ

ಬಿಜೆಪಿ ಕಾರ್ಯಕರ್ತ ರಾಮು ರಾಥೋಡ್ ಶವವಾಗಿ ಪತ್ತೆ.! ➤ಪ್ರಕರಣ ದಾಖಲು

(ನ್ಯೂಸ್ ಕಡಬ)Newskadaba.com ಕಲಬುರ್ಗಿ,ಮೇ.11 ಬಿಜೆಪಿ ಕಾರ್ಯಕರ್ತ ರಾಮು ರಾಥೋಡ್ ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.ಕಲಬುರ್ಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಸಲಗರ ಬಸಂತಪುರದಲ್ಲಿ 45 ವರ್ಷದ ರಾಮು ರಾಥೋಡ್ ಶವ ಪತ್ತೆಯಾಗಿದೆ. ಪೋಲಿಂಗ್ ಬೂತ್ ಏಜೆಂಟ್ ಆಗಿ ಕೆಲಸ ಮಾಡಿದ್ದ ರಾಮು ರಾಥೋಡ್  ತಾಂಡಾ ಬಳಿ ಶವವಾಗಿ ಪತ್ತೆಯಾಗಿದ್ದಾರೆ.ಕೊಲೆ ಮಾಡಿ ನೇಣು ಹಾಕಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಚಿಂಚೋಳಿ ಪೊಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.      

ಬಿಜೆಪಿ ಕಾರ್ಯಕರ್ತ ರಾಮು ರಾಥೋಡ್ ಶವವಾಗಿ ಪತ್ತೆ.! ➤ಪ್ರಕರಣ ದಾಖಲು Read More »

ಕರ್ನಾಟಕ
Scroll to Top