News Kadaba

ಅಧಿಕೃತ ಅಭ್ಯರ್ಥಿಯನೇ ಉಚ್ಚಟಿಸಿದ ಜೆಡಿಎಸ್

(ನ್ಯೂಸ್ ಕಡಬ)newskadaba.com ಸಾಗರ, ಮೇ.12. ಸಾಗರ ವಿಧಾನಸಭೆ ಕ್ಷೇತ್ರದ ಅಧಿಕೃತ ಜೆಡಿಎಸ್ ಅಭ್ಯರ್ಥಿ ಸೈಯದ್ ಜಾಕೀರ್ ಜೆಡಿಎಸ್ ಪಕ್ಷದಿಂದ ಉಚ್ಛಾಟನೆ ಮಾಡಿದೆ. ಸಾಗರ ಕ್ಷೇತ್ರಕ್ಕೆ ಈ ಬಾರಿಯ ಚುನಾವಣೆಗೆ ಸೈಯದ್ ಜಾಕೀರ್ ಪಕ್ಷದ ಅಭ್ಯರ್ಥಿ ಎಂದು ಘೋಷಣೆ ಮಾಡಲಾಗಿತ್ತು. ಅವರು ನಾಮಪತ್ರವನ್ನು ಸಹ ಸಲ್ಲಿಕೆ ಮಾಡಿದ್ದರು. ಆದರೆ ಮತದಾನದ ಹಿಂದಿನ ದಿನ ಅವರು ಚುನಾವಣಾ ಕಣದಿಂದ ಹಿಂದೆ ಸರಿದಿದ್ದರು. ಚುನಾವಣಾ ಕಣದಿಂದ ಹಿಂದೆ ಸರಿಯಲು ಆರೋಗ್ಯ ಕಾರಣ ಎಂದು ಸೈಯದ್ ಜಾಕೀರ್ ಹೇಳಿದ್ದರು. ಚುನಾವಣಾ ಕಣದಿಂದ ಹಿಂದೆ […]

ಅಧಿಕೃತ ಅಭ್ಯರ್ಥಿಯನೇ ಉಚ್ಚಟಿಸಿದ ಜೆಡಿಎಸ್ Read More »

ಕರ್ನಾಟಕ

ಮಲೆಮಹದೇಶ್ವರ ಬೆಟ್ಟದ 108 ಅಡಿ ಪ್ರತಿಮೆಯ ಮುಂಭಾಗದ ತಡೆಗೋಡೆ ಕುಸಿತ➤

(ನ್ಯೂಸ್ ಕಡಬ)Newskadaba.com ಚಾಮರಾಜನಗರ,ಮೇ.12 ಚಾಮರಾಜನಗರ ಜಿಲ್ಲೆಯಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು ಹವಾಮಾನ ಇಲಾಖೆ ಈಗಾಗಲೇ ಯೆಲ್ಲೋ ಅಲರ್ಟ್ ಘೋಷಿಸೈಡ್. ಇನ್ನೂ ಜಿಲ್ಲೆಯಲ್ಲಿ ಎಡಬಿಡದೆ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಅಪಾರ ಪ್ರಮಾಣದ ಬೆಳೆ ಹಾಗೂ ಆಸ್ತಿಗೆ ಹಾನಿಯಾಗಿದೆ. ರಾಜ್ಯದ ಪ್ರಮುಖ ಯಾತ್ರ ಸ್ಥಳವಾದ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದ ದೀಪದಗಿರಿ ಒಡ್ಡು ಎಂಬಲ್ಲಿ ನಿರ್ಮಾಣ ಮಾಡಿರುವ 108 ಅಡಿ ಮಲೆ ಮಹದೇಶ್ವರ ಪ್ರತಿಮೆ ಮುಂಭಾಗ ನಿರ್ಮಾಣ ಮಾಡಿದ್ದ ತಡೆಗೋಡೆ ಕುಸಿತಗೊಂಡಿದೆ. ಪ್ರತಿಮೆ ಸ್ಥಳದಲ್ಲಿ ಈಗಾಗಲೇ ಕಾಮಗಾರಿಗಳು ನಡೆಯುತ್ತಿರುವುದರಿಂದ ಭಕ್ತರ ಪ್ರವೇಶ ನಿಷೇಧ

ಮಲೆಮಹದೇಶ್ವರ ಬೆಟ್ಟದ 108 ಅಡಿ ಪ್ರತಿಮೆಯ ಮುಂಭಾಗದ ತಡೆಗೋಡೆ ಕುಸಿತ➤ Read More »

ಕರ್ನಾಟಕ

ಮಂಗಳೂರು: ‘ತುಡರ್’ ತುಳು ಸಿನಿಮಾದ ಪೋಸ್ಟರ್ ಬಿಡುಗಡೆ

(ನ್ಯೂಸ್ ಕಡಬ)newskadaba.com ಮಂಗಳೂರು, ಮೇ.12. ತುಳುನಾಡ ಮಾಣಿಕ್ಯ’ ಅರವಿಂದ್ ಬೋಳಾರ್ ಅವರು ‘ತುಡರ್’ ತುಳು ಚಲನಚಿತ್ರದ ಪೋಸ್ಟರ್ ಅನ್ನು ಬಿಡುಗಡೆಗೊಳಿಸಿದ್ದಾರೆ. ಸುಮುಖ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ವಿಲ್ಸನ್ ರೆಬೆಲ್ಲೋ ಅವರು ‘ತುಡರ್’ ಸಿನಿಮಾವನ್ನು ನಿರ್ಮಿಸಿದ್ದು,ಈ ಚಿತ್ರವನ್ನು ಎಲ್ಟನ್ ಮಸ್ಕರೇನಸ್ ಮತ್ತು ತೇಜಸ್ ಪೂಜಾರಿ ನಿರ್ದೇಶಿಸಿದ್ದಾರೆ. ಇನ್ನು ಸಂಭಾಷಣೆಯನ್ನು ಮೋಹನ್ ರಾಜ್ ಬರೆದಿದ್ದಾರೆ, ಸಂಗೀತವನ್ನು ಪ್ಯಾಟ್ಸನ್ ಪಿರೇರಾ, ಛಾಯಾಗ್ರಹಣವನ್ನು ವಿಜೇತ್ ಆರ್ ನಾಯಕ್ ಮಾಡಿದ್ದಾರೆ.

ಮಂಗಳೂರು: ‘ತುಡರ್’ ತುಳು ಸಿನಿಮಾದ ಪೋಸ್ಟರ್ ಬಿಡುಗಡೆ Read More »

ಕರಾವಳಿ

ಚಲಿಸುತ್ತಿದ್ದ ಕಾರಿನಲ್ಲಿ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ..!➤ ಆರೋಪಿಗಳು ಅರೆಸ್ಟ್

(ನ್ಯೂಸ್ ಕಡಬ)Newskadaba.com ಬೆಂಗಳೂರು,ಮೇ.12 ಚಲಿಸುತ್ತಿದ್ದ ಕಾರಿನಲ್ಲಿ ಕಾಲೇಜು ವಿದ್ಯಾರ್ಥಿನಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಆರೋಪದ ಮೇಲೆ ಮೂವರನ್ನು ಬಂಧಿಸಲಾಗಿದೆ ಎಂದು ಪಶ್ಚಿಮ ತ್ರಿಪುರಾ ಜಿಲ್ಲೆಯಲ್ಲಿ ಪೊಲೀಸರು ತಿಳಿಸಿದ್ದಾರೆ. ಘಟನೆ ಬೆಳಕಿಗೆ ಬಂದ ಕೂಡಲೇ ಪ್ರಮುಖ ಆರೋಪಿ ಗೌತಮ್ ಶರ್ಮಾ (26) ಮತ್ತು ಅಪರಾಧ ಮಾಡಿದ ವಾಹನದ ಚಾಲಕ ಮತ್ತು ಸಹ ಆರೋಪಿ ಸುದೀಪ್ ಚೆಟ್ರಿ (31), ಪ್ತಾಡೆನ್‌ಜಿತ್ ಪಾಲ್ (26) ಎಂಬುವರನ್ನು ಬಂಧಿಸಲಾಯಿತು. ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.      

ಚಲಿಸುತ್ತಿದ್ದ ಕಾರಿನಲ್ಲಿ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ..!➤ ಆರೋಪಿಗಳು ಅರೆಸ್ಟ್ Read More »

ಕರ್ನಾಟಕ

ಸುಬ್ರಹ್ಮಣ್ಯ: ಬಸ್ ನಿಲ್ದಾಣದ ಬಳಿ ತಿರುಗಾಡುತ್ತಿದ್ದ ಅಪರಿಚಿತ ಮಹಿಳೆ ಮತ್ತು ಬಾಲಕಿಯನ್ನು ರಕ್ಷಣಾ ಕೇಂದ್ರಕ್ಕೆ ಕಳುಹಿಸಿದ ಪೊಲೀಸರು

 (ನ್ಯೂಸ್ ಕಡಬ) newskadaba.com. ಸುಬ್ರಹ್ಮಣ್ಯ, ಮೇ.12. ಸುಬ್ರಹ್ಮಣ್ಯ ವ್ಯಾಪ್ತಿಯ ಏನೆಕಲ್ಲು ಬಸ್ ನಿಲ್ದಾಣದಲ್ಲಿ ನಿಂತಿದ್ದ ಅಪರಿಚಿತ ಬಾಲಕಿ ಮತ್ತು ಮಹಿಳೆಯೊಬ್ಬರನ್ನು ಪೊಲೀಸರು ಠಾಣೆಗೆ ಕರೆತಂದು ವಿಚಾರಿಸಿ ರಕ್ಷಣಾ ಕೇಂದ್ರಕ್ಕೆ ಕಳುಹಿಸಿದ ಘಟನೆ ಸುಬ್ರಹ್ಮಣ್ಯದಿಂದ ವರಾದಿಯಾಗಿದೆ. ಸಾರ್ವಜನಿಕರ ಮಾಹಿತಿ ಮೇರೆಗೆ ಏನೆಕಲ್ಲು ಬಸ್ ನಿಲ್ದಾಣ ಸಮೀಪ ತಿರುಗಾಡುತ್ತಿದ್ದ ಹಿಂದೆ ಭಾಷಿಕ ಮಹಿಳೆ ಹಾಗೂ ಬಾಲಕಿಯನ್ನು ಪೊಲೀಸರು ವಿಚಾರಿಸಿದ್ದರು. ಈ ವೇಳೆ ಎಣ್ಮೂರು ಭಾಗದವರು ಎಂದು ಅಸಮರ್ಪಕ ಮಾಹಿತಿ ನೀಡಿದ್ದರು.ಇದರಿಂದ ಅನುಮಾನಗೊಂಡ ಪೊಲೀಸರು ಠಾಣೆಗೆ ಕರೆತಂದು ವಿಚಾರಿಸಿದ್ದಾರೆ.

ಸುಬ್ರಹ್ಮಣ್ಯ: ಬಸ್ ನಿಲ್ದಾಣದ ಬಳಿ ತಿರುಗಾಡುತ್ತಿದ್ದ ಅಪರಿಚಿತ ಮಹಿಳೆ ಮತ್ತು ಬಾಲಕಿಯನ್ನು ರಕ್ಷಣಾ ಕೇಂದ್ರಕ್ಕೆ ಕಳುಹಿಸಿದ ಪೊಲೀಸರು Read More »

ಕರಾವಳಿ

ಐವರು ಶಾಲಾ ಮಕ್ಕಳ ಮೇಲೆ ಹರಿದ ಕಾರ್ ➤ ಸ್ಥಳದಲ್ಲೇ ಮೂವರು ಮೃತ್ಯು..!

(ನ್ಯೂಸ್ ಕಡಬ)newskadaba.com ಉತ್ತರ ಪ್ರದೇಶ, ಮೇ.12. ನಿಯಂತ್ರಣ ತಪ್ಪಿದ ಕಾರ್​ ಒಂದು ರಸ್ತೆ ಬದಿಯಲ್ಲಿ ಶಾಲಾ ಬಸ್‌ ಗಾಗಿ ಕಾಯುತ್ತಿದ್ದ ಮಕ್ಕಳಿಗೆ ಡಿಕ್ಕಿ ಹೊಡೆದಿರುವ ಘಟನೆ ಆಗ್ರ ಜಿಲ್ಲೆಯ ದೌಕಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ರಸ್ತೆ ಅಪಘಾತದಲ್ಲಿ ಮೂವರು ಅಮಾಯಕ ಮಕ್ಕಳು ಸ್ಥಳದಲ್ಲೇ ಸಾವನ್ನಪ್ಪಿವೆ. ಇನ್ನು ಇಬ್ಬರು ಮಕ್ಕಳ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದು ಬಂದಿದೆ. ರಸ್ತೆ ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆಯೇ ಗ್ರಾಮಸ್ಥರು ಸ್ಥಳದಲ್ಲಿ ಜಮಾಯಿಸಿದರು.  

ಐವರು ಶಾಲಾ ಮಕ್ಕಳ ಮೇಲೆ ಹರಿದ ಕಾರ್ ➤ ಸ್ಥಳದಲ್ಲೇ ಮೂವರು ಮೃತ್ಯು..! Read More »

ರಾಷ್ಟ್ರೀಯ ನ್ಯೂಸ್

ಮಗು ಕಿಡ್ನ್ಯಾಪ್ ಆಗಿದೆ ಎಂದು ದೂರು ನೀಡಿದ ಪೋಷಕರು➤ಹುಡುಕಾಟ ನಡೆಸಿದ ಪೊಲೀಸರಿಗೆ ಶಾಕ್ !*

(ನ್ಯೂಸ್ ಕಡಬ)Newskadaba.com ಬೆಂಗಳೂರು,ಮೇ.12 ಕೆ.ಆರ್.ಪುರಂ ಬಳಿಯ ಜನತಾ ಕಾಲೋನಿಯ ನಿವಾಸಿಗಳಾದ ಮೀನಾ ದಂಪತಿ ಪೊಲೀಸ್ ಠಾಣೆಗೆ ಆಗಮಿಸಿ ತಮ್ಮ ಆರು ವರ್ಷದ ಮಗಳ ಅಪಹರಣ ಆಗಿದೆ ಎಂದು ದೂರು ದಾಖಲಿಸಿದ್ದರು.ಮನೆ ಮುಂದೆ ಆಟವಾಡುತ್ತಿದ್ದ ಮಗಳು ಕಾಣೆಯಾಗಿದ್ದಾಳೆ ಎಂದು ದೂರಿನಲ್ಲಿ ಮೀನಾ ದಂಪತಿ ಉಲ್ಲೇಖಿಸಿದ್ದರು. ಪ್ರಕರಣ ದಾಖಲಿಸಿಕೊಂಡು ಕಾರ್ಯಪ್ರವೃತ್ತರಾದ ಪೊಲೀಸರು ಮಗುವಿನ ಹುಡುಕಾಟಕ್ಕೆ ಮುಂದಾಗಿದ್ದರು. ಸಬ್ ಇನ್​​ಸ್ಪೆಕ್ಟರ್ ರಮ್ಯಾ ಹಾಗೂ ಸಿಬ್ಬಂದಿ ಮಗುವಿಗಾಗಿ ಎಲ್ಲಾ ಕಡೆ ಹುಡುಕಾಟ ನಡೆಸಿದ್ರೂ ಯಾವುದೇ ಸುಳಿವು ಸಿಕ್ಕಿರಲಿಲ್ಲ. ನಂತರ ಮಗು ಕಾಣೆಯಾಗಿದೆ ಎನ್ನಲಾದ

ಮಗು ಕಿಡ್ನ್ಯಾಪ್ ಆಗಿದೆ ಎಂದು ದೂರು ನೀಡಿದ ಪೋಷಕರು➤ಹುಡುಕಾಟ ನಡೆಸಿದ ಪೊಲೀಸರಿಗೆ ಶಾಕ್ !* Read More »

ಕರ್ನಾಟಕ

ತೀವ್ರಗೊಳ್ಳಲಿದೆ ಮೊಚಾ ಚಂಡಮಾರುತ.!➤ ಹವಾಮಾನ ಇಲಾಖೆ ಸೂಚನೆ

(ನ್ಯೂಸ್ ಕಡಬ)Newskadaba.com ನವದೆಹಲಿ,ಮೇ.12 ಮಧ್ಯ ಬಂಗಾಳಕೊಲ್ಲಿಯ ಆಗ್ನೇಯ ಮತ್ತು ಪಕ್ಕದ ಪ್ರದೇಶಗಳಲ್ಲಿ ಮೋಚಾ ಚಂಡಮಾರುತವು ತೀವ್ರಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ (ಎನ್ಡಿಆರ್‌ಎಫ್) ಪಶ್ಚಿಮ ಬಂಗಾಳದಲ್ಲಿ ಎಂಟು ತಂಡಗಳು ಮತ್ತು 200 ರಕ್ಷಕರನ್ನು ನಿಯೋಜಿಸಿದೆ.ಭಾರತೀಯ ಕೋಸ್ಟ್ ಗಾರ್ಡ್ (ಐಸಿಜಿ) ಸಹ ಈ ಪ್ರದೇಶದಲ್ಲಿ ತನ್ನ ಘಟಕಗಳನ್ನು ಹೈ ಅಲರ್ಟ್ ನಲ್ಲಿರಿಸಿದೆ. ಈ ಪ್ರದೇಶದಲ್ಲಿ ಎಂಟು ತಂಡಗಳು ಮತ್ತು 200 ರಕ್ಷಕರನ್ನು ನಿಯೋಜಿಸಿದ್ದೇವೆ ಮತ್ತು 100 ರಕ್ಷಕರು ಸನ್ನದ್ಧರಾಗಿದ್ದಾರೆ ಎಂದು ಎನ್ಡಿಆರ್‌ಎಫ್ನ 2 ನೇ ಬೆಟಾಲಿಯನ್

ತೀವ್ರಗೊಳ್ಳಲಿದೆ ಮೊಚಾ ಚಂಡಮಾರುತ.!➤ ಹವಾಮಾನ ಇಲಾಖೆ ಸೂಚನೆ Read More »

ರಾಷ್ಟ್ರೀಯ ನ್ಯೂಸ್

ಬಾವಿಗೆ ಇಳಿದವನ ರಕ್ಷಣೆಗೆ ಮುಂದಾದ ಇಬ್ಬರು ಸೇರಿ ಮೂವರೂ ಮೃತ್ಯು

(ನ್ಯೂಸ್ ಕಡಬ)newskadaba.com ಕಾರವಾರ, ಮೇ.12. ಬಾವಿಗೆ ಬಿದ್ದಿದ್ದ ಪಂಪ್ ಎತ್ತಲು ಇಳಿದ ವ್ಯಕ್ತಿ ಹಿಂತಿರುಗಿ ಬಾರದ ಹಿನ್ನೆಲೆ ರಕ್ಷಣೆಗೆ ಮುಂದಾದ ಇಬ್ಬರು ಸೇರಿ ಒಟ್ಟು ಮೂವರು ಸಾವನ್ನಪ್ಪಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಮಾವಿನ ಕಟ್ಟ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಗೋವಿಂದ ಸೋಮಯ್ಯ ಪೂಜಾರಿ, ಗಣೇಶ್ ರಾಮದಾಸ್ ಶೇಟ್, ಸುರೇಶ್ ನಾಯರ್ ಬಾವಿಗೆ ಬಿದ್ದು ಮರಣ ಹೊಂದಿದವರು ಎಂಬುದು ತಿಳಿದುಬಂದಿದೆ. ಬಾವಿಯಲ್ಲಿ ಬಿದ್ದಿದ್ದ ನೀರೆತ್ತುವ ಪಂಪ್ ಸೆಟ್ ತೆಗೆಯಲು ಬಾವಿಗೆ ಇಳಿದಿದ್ದ ವ್ಯಕ್ತಿ ಮೇಲಕ್ಕೆ

ಬಾವಿಗೆ ಇಳಿದವನ ರಕ್ಷಣೆಗೆ ಮುಂದಾದ ಇಬ್ಬರು ಸೇರಿ ಮೂವರೂ ಮೃತ್ಯು Read More »

ಕರಾವಳಿ

ಆಯತಪ್ಪಿ ಬಾವಿಗೆ ಬಿದ್ದ ಮಹಿಳೆ.!➤ಪ್ರಾಣಾಪಾಯದಿಂದ ಪಾರು

(ನ್ಯೂಸ್ ಕಡಬ)Newskadaba.com ಕಾರ್ಕಳ,ಮೇ.12 ಆಯತಪ್ಪಿ ಬಾವಿಗೆ ಬಿದ್ದ ಮಹಿಳೆಯನ್ನು ಕಾರ್ಕಳ ಅಗ್ನಿಶಾಮಕ ದಳದ ತಂಡ ಕಾರ್ಯಾಚರಣೆ ನಡೆಸಿ ರಕ್ಷಣೆ ಮಾಡಿದ ಘಟನೆ ಉಡುಪಿ ಜಿಲ್ಲೆಯ ಕಾಕರ್ಳದಲ್ಲಿ ನಡೆದಿದೆ. ಕಾರ್ಕಳ ತಾಲೂಕು ಕಚೇರಿ ಸಮೀಪದ ಬಂಗ್ಲೆಗುಡ್ಡೆ ಕೆಎಂಇಎಸ್ ಶಾಲೆ ಎದುರಿನ ನಿವಾಸಿ 33 ವರ್ಷದ ನಸೀಬಾ ಬಾನು ಬಾವಿಗೆ ರಕ್ಷಣೆಗೆ ಒಳಪಟ್ಟ ಮಹಿಳೆಯಾಗಿದ್ದಾರೆ. ಇವರು ತಮ್ಮ ಮನೆಯ ಪಕ್ಕದ ಬಾವಿಗೆ ಬಳಿ ತೆರಳಿದಾಗ ಆಯತಪ್ಪಿ ಬಾವಿಗೆ ಬಿದಿದ್ದು ಅವರ ಗಂಡ ಹುಸೇನ್ ಎಂಬವರು ಅಗ್ನಿಶಾಮಕ ದಳಕ್ಕೆ ಕರೆ ಮಾಡಿ

ಆಯತಪ್ಪಿ ಬಾವಿಗೆ ಬಿದ್ದ ಮಹಿಳೆ.!➤ಪ್ರಾಣಾಪಾಯದಿಂದ ಪಾರು Read More »

ಕರಾವಳಿ
Scroll to Top