News Kadaba

ಕಾಂಗ್ರೆಸ್ ಆರಂಭಿಕ ಮುನ್ನಡೆ ➤ ಕೆಪಿಸಿಸಿ ಕಚೇರಿ ಎದುರು ಸಂಭ್ರಮಾಚರಣೆ

(ನ್ಯೂಸ್ ಕಡಬ)Newskadaba.com ಬೆಂಗಳೂರು, ಮೇ.13. ಮತಎಣಿಕೆ ಕಾರ್ಯದಲ್ಲಿ ಕಾಂಗ್ರೆಸ್ ಆರಂಭಿಕ ಮುನ್ನಡೆ ಸಾಧಿಸಿದ್ದು, ಅಡಳಿತಾರೂಢ ಬಿಜೆಪಿ ಕೂಡ ಪೈಪೋಟಿ ನೀಡುತ್ತಿದೆ. ಬಿಜೆಪಿ 78 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದು, ಕಾಂಗ್ರೆಸ್ 117ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಜೆಡಿಎಸ್ 23 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದು, ಇತರರು 6 ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದ್ದಾರೆ. ಚುನಾವಣಾ ಫಲಿತಾಂಶ ಹೊರಬರುವುದಕ್ಕೂ ಮೊದಲೇ ಕಾಂಗ್ರೆಸ್‌ ಕಾರ್ಯಕರ್ತರು ಕೆಪಿಸಿಸಿ ಕಚೇರಿ ಎದುರು ಜಮಾಯಿಸಿ ವಿಜಯೋತ್ಸವದ ಘೋಷಣೆಗಳನ್ನು ಕೂಗಿ ಸಂಭ್ರಮಾಚರಣೆಯಲ್ಲಿ ತೊಡಗಿರುವ ದೃಶ್ಯ ಕಂಡುಬಂದಿದೆ.    

ಕಾಂಗ್ರೆಸ್ ಆರಂಭಿಕ ಮುನ್ನಡೆ ➤ ಕೆಪಿಸಿಸಿ ಕಚೇರಿ ಎದುರು ಸಂಭ್ರಮಾಚರಣೆ Read More »

ಕರ್ನಾಟಕ

ಚಾಮರಾಜನಗರದಲ್ಲಿ ಬಿಜೆಪಿಯ ವಿ.ಸೋಮಣ್ಣಗೆ ಸೋಲು..!

(ನ್ಯೂಸ್ ಕಡಬ) Newskadaba.com ಬೆಂಗಳೂರು,ಮೇ.13 ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣಾ ಮತ ಎಣಿಕೆ ಕಾರ್ಯ ಪ್ರಗತಿಯಲ್ಲಿದೆ. ಪ್ರತಿ ಸುತ್ತಿನಲ್ಲಿ ಹಾವು- ಏಣಿ ಆಟ ಮುಂದುವರೆದಿದೆ. ಸಿಎಂ ಬೊಮ್ಮಾಯಿ ಸಂಪುಟದಲ್ಲಿ ವಸತಿ ಸಚಿವರಾಗಿರುವ ವಿ. ಸೋಮಣ್ಣ ಅವರು ಬಿಜೆಪಿ ವರಿಷ್ಠರ ಸೂಚನೆಯಂತೆ ಚಾಮರಾಜನಗರ ಹಾಗು ಮೈಸೂರಿನ ವರುಣಾದಿಂದ ಸ್ಪರ್ಧಿಸಿದ್ದಾರೆ. ಚಾಮರಾಜನಗರದಲ್ಲಿ ಕಾಂಗ್ರೆಸ್‌ನ ಪುಟ್ಟರಂಗ ಶೆಟ್ಟಿ ವಿರುದ್ಧ ಸೋಲನುಭವಿಸಿದ್ದಾರೆ. ವರುಣಾದಲ್ಲಿ ಸಿದ್ಧರಾಮಯ್ಯ ವಿರುದ್ಧವೂ ಸೋಲನುಭವಿಸಿದ್ದಾರೆ. ಆರಂಭಿಕ ಮತ ಎಣಿಕೆಯಲ್ಲಿ ಹಿನ್ನಡೆ ಸಾಧಿಸಿದಾಗ ಸೋಲಿನ ಭೀತಿ ಎದುರಾಗುತ್ತಿದ್ದಂತೆ ಮತ ಕೇಂದ್ರದಿಂದ ಹೊರ

ಚಾಮರಾಜನಗರದಲ್ಲಿ ಬಿಜೆಪಿಯ ವಿ.ಸೋಮಣ್ಣಗೆ ಸೋಲು..! Read More »

ಕರ್ನಾಟಕ

ಮಂಗಳೂರು ವಿಧಾನಸಭಾ ಕ್ಷೇತ್ರ ➤ ಯು.ಟಿ ಖಾದರ್ ಜಯಭೇರಿ

(ನ್ಯೂಸ್ ಕಡಬ)Newskadaba.com ಮಂಗಳೂರು, ಮೇ.13. ಕರಾವಳಿಯ ತಡಿಯ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು 8 ವಿಧಾನಸಭಾ ಕ್ಷೇತ್ರಗಳಿದ್ದು, ಮಂಗಳೂರು, ಮಂಗಳೂರು ದಕ್ಷಿಣ, ಮಂಗಳೂರು ಉತ್ತರ, ಪುತ್ತೂರು, ಬಂಟ್ವಾಳ, ಮೂಡಬಿದಿರೆ, ಬೆಳ್ತಂಗಡಿ ಮತ್ತು ಸುಳ್ಯ ಇಲ್ಲಿನ 8 ವಿಧಾನಸಭಾ ಕ್ಷೇತ್ರಗಳಿವೆ. ಪ್ರಸ್ತುತ ಮಂಗಳೂರು (ಉಳ್ಳಾಲ) ಕ್ಷೇತ್ರವೊಂದನ್ನು ಹೊರತುಪಡಿಸಿ ಉಳಿದೆಲ್ಲವೂ ಬಿಜೆಪಿಯ ಹಿಡಿತದಲ್ಲಿದೆ. ಸದ್ಯ ಮತ ಎಣಿಕೆ ನಡೆಯುತ್ತಿದ್ದು ಪ್ರಮುಖ ಪಕ್ಷಗಳ ಅಭ್ಯರ್ಥಿಗಳು ಎಷ್ಟು ಮತಗಳನ್ನು ಗಳಿಸಿದ್ದಾರೆ, ಯಾರು ಮುನ್ನಡೆಯಲ್ಲಿದ್ದಾರೆ ಎಂಬ ವಿವರ ಇಲ್ಲಿದೆ ಮಂಗಳೂರು: th round ಕಾಂಗ್ರೆಸ್: ಯು.ಟಿ ಖಾದರ್

ಮಂಗಳೂರು ವಿಧಾನಸಭಾ ಕ್ಷೇತ್ರ ➤ ಯು.ಟಿ ಖಾದರ್ ಜಯಭೇರಿ Read More »

ಕರಾವಳಿ

ಶಿವಮೂರ್ತಿ ಶಾಸ್ತ್ರಿಗಳು ನುಡಿದ ಭವಿಷ್ಯ➤ಕಮಲ ಪಾಳಯದಲ್ಲಿ ಆತಂಕ..!

(ನ್ಯೂಸ್ ಕಡಬ) Newskadaba.com ಬೆಂಗಳೂರು,ಮೇ.13 ಕರ್ನಾಟಕ ವಿಧಾನಸಭೆ ಚುನಾವಣೆಯ ಮತದಾನ ಮುಗಿದು ಫಲಿತಾಂಶಕ್ಕೆ ಕ್ಷಣಗಣನೆ ಶುರುವಾಗಿರುವಾಗಲೇ ಗೆಲುವಿನ ಲೆಕ್ಕಾಚಾರಗಳು ಸಹ ಗರಿಗೆದರಿವೆ. ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ರಚಸಲಿದ್ದು, ಬಿಜೆಪಿ ಕೇವಲ 85 ಸೀಟ್‌ಗಳನ್ನು ಮಾತ್ರ ತೆಗೆದುಕೊಳ್ಳಲಿದೆ ಎಂದು ಜಗಳೂರು ತಾಲೂಕಿನ ಗಡಿಮಾಕುಂಟೆ ಗ್ರಾಮದ ಭುಜಂಗ ಮಠದ ಶಿವಮೂರ್ತಿ ಶಾಸ್ತ್ರಿಗಳು ಭವಿಷ್ಯ ನುಡಿದಿದ್ದಾರೆ. ಈಗಾಗಲೇ ಎಲ್ಲ ಸಮೀಕ್ಷೆಗಳು ಕಾಂಗ್ರೆಸ್ ಕರುನಾಡಿನಲ್ಲಿ ತನ್ನ ಅಧಿಪತ್ಯವನ್ನು ಸಾಧಿಸುತ್ತೇವೆ ಎಂಬ ಹೇಳಿಕೆ ಹಿನ್ನೆಲೆಯಲ್ಲಿ ಭುಜಂಗ ಮಠದ ಶಿವಮೂರ್ತಿ ಶಾಸ್ತ್ರಿಗಳು ನುಡಿದ ಭವಿಷ್ಯ ಕಮಲ

ಶಿವಮೂರ್ತಿ ಶಾಸ್ತ್ರಿಗಳು ನುಡಿದ ಭವಿಷ್ಯ➤ಕಮಲ ಪಾಳಯದಲ್ಲಿ ಆತಂಕ..! Read More »

ಕರ್ನಾಟಕ

ಸಾರ್ವಜನಿಕ ಕುಡಿಯುವ ನೀರಿನ ಟ್ಯಾಂಕ್ ನಲ್ಲಿ ಕೊಳೆತ ಶವ ಪತ್ತೆ

(ನ್ಯೂಸ್ ಕಡಬ)Newskadaba.com  ಕಳೆಂಜ, ಮೇ.13. ಇಲ್ಲಿನ ಕಾಯರ್ತಡ್ಕ ಉಮಾಮಹೇಶ್ವರ ದೇವಾಸ್ಥಾನ ಬಳಿ ಇರುವ ಸಾರ್ವಜನಿಕ ಕುಡಿಯುವ ನೀರಿನ ಟ್ಯಾಂಕ್ ನಲ್ಲಿ ಅಪರಿಚಿತ ವ್ಯಕ್ತಿಯ ಕೊಳೆತ ಶವ ಪತ್ತೆಯಾಗಿದೆ ಎಂದು ವರದಿ ತಿಳಿಸಿದೆ. ಈ ಟ್ಯಾಂಕ್ ನಲ್ಲಿ ಸ್ಥಳೀಯ ಪರಿಸರದಲ್ಲಿ ನೀರು ಪೂರೈಕೆ ಮಾಡಲಾಗಿದ್ದು, ನೀರು ದುರ್ವಾಸನೆ ಬರುತ್ತಿರುವುದನ್ನು ಜನರು ಪಂಚಾಯತ್ ಗಮನಕ್ಕೆ ತಂದಿದ್ದಾರೆ ಎಂದು ವರದಿ ತಿಳಿಸಿದೆ.  

ಸಾರ್ವಜನಿಕ ಕುಡಿಯುವ ನೀರಿನ ಟ್ಯಾಂಕ್ ನಲ್ಲಿ ಕೊಳೆತ ಶವ ಪತ್ತೆ Read More »

ಕರ್ನಾಟಕ

ಗೆದ್ದ ಕಾಂಗ್ರೆಸ್ ಅಭ್ಯರ್ಥಿಗಳು ಇಂದೇ ರೆಸಾರ್ಟ್ ಗೆ

(ನ್ಯೂಸ್ ಕಡಬ)Newskadaba.com ಬೆಂಗಳೂರು, ಮೇ.13. ಇಂದು ಮಧ್ಯಾಹ್ನದ ವೇಳೆ ಕರ್ನಾಟಕ ವಿಧಾನಸಭೆ ಚುನಾವಣೆ ಫಲಿತಾಂಶದ ಸ್ಪಷ್ಟ ಚಿತ್ರಣ ಹೊರಬೀಳುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಆಪರೇಷನ್ ಕಮಲದ ಭೀತಿ ಶುರುವಾಗಿದೆ. ಎಕ್ಸಿಟ್ ಪೋಲ್ ಸಮೀಕ್ಷೆಯಲ್ಲಿ ಅತಂತ್ರ ಸರ್ಕಾರದ ಮುನ್ಸೂಚನೆ ಬಂದಿರುವುದರಿಂದ ಕಾಂಗ್ರೆಸ್ ಮುನ್ನೆಚ್ಚರಿಕೆಯ ಹೆಜ್ಜೆ ಇಟ್ಟಿದೆ.

ಗೆದ್ದ ಕಾಂಗ್ರೆಸ್ ಅಭ್ಯರ್ಥಿಗಳು ಇಂದೇ ರೆಸಾರ್ಟ್ ಗೆ Read More »

ಕರ್ನಾಟಕ

ಕಾಂಗ್ರೆಸ್ ಬೆಂಬಲಿತ ಏಕೈಕ ಅಭ್ಯರ್ಥಿಗೆ ಮುನ್ನಡೆ

(ನ್ಯೂಸ್ ಕಡಬ)Newskadaba.com ಮೇಲುಕೋಟೆ, ಮೇ.13. ಈ ಬಾರಿ ಕಾಂಗ್ರೆಸ್ ಮೇಲುಕೋಟೆ ಕ್ಷೇತ್ರದಲ್ಲಿ ಮಾತ್ರ ಸರ್ವೋದಯ ಕರ್ನಾಟಕ ಪಕ್ಷದ ಅಭ್ಯರ್ಥಿ ದರ್ಶನ್ ಪುಟ್ಟಣ್ಣಯ್ಯನವರನ್ನು ಬೆಂಬಲಿಸಿತ್ತು. ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಕಣಕ್ಕಿಳಿಸಿರಲಿಲ್ಲ. ಈಗಿನ ಮಾಹಿತಿಯಂತೆ ಮೇಲುಕೋಟೆಯಲ್ಲಿ ದರ್ಶನ್ 8555 ಮತ ಪಡೆದು ಮುನ್ನಡೆ ಕಾಯ್ದುಕೊಂಡಿದ್ದಾರೆ. ಅಮೆರಿಕದಲ್ಲಿ ನೆಲೆಸಿದ್ದ ರೈತ ಸಂಘದ ನಾಯಕ ಕೆಎಸ್ ಪುಟ್ಟಣ್ಣಯ್ಯನವರ ಮಗ ದರ್ಶನ್ ಕಳೆದ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸಿ 73,779 ಮತ ಪಡೆದು ಸೋಲು ಅನುಭವಿಸಿದ್ದರು.

ಕಾಂಗ್ರೆಸ್ ಬೆಂಬಲಿತ ಏಕೈಕ ಅಭ್ಯರ್ಥಿಗೆ ಮುನ್ನಡೆ Read More »

ಕರ್ನಾಟಕ

ಪುತ್ತೂರು: ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲಗೆ ಮುನ್ನಡೆ

(ನ್ಯೂಸ್ ಕಡಬ) newskadaba.com ಪುತ್ತೂರು, ಮೇ. 13. ಪುತ್ತೂರಿನಲ್ಲಿ ಬಿಜೆಪಿಯ ಬಂಡಾಯ, ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ಮುನ್ನಡೆಯನ್ನು ಸಾಧಿಸಿದ್ದಾರೆ. ಬಿಜೆಪಿಯಲ್ಲಿ ಟಿಕೆಟ್ ಸಿಗದ ಹಿನ್ನೆಲೆ ಅರುಣ್ ಪುತ್ತಿಲ ಬಿಜೆಪಿಯ ಆಶಾ ತಿಮ್ಮಪ್ಪ ಗೌಡ ವಿರುದ್ಧ ಕಣಕ್ಕಿಳಿದಿದ್ದರು. ಅವರು ಕ್ಷೇತ್ರದಲ್ಲಿ ಈಗಾಗಲೇ ಸಾಕಷ್ಟು ಹವಾ ಸೃಷ್ಟಿಸಿದ್ದಾರೆ. ಬಿ ಕಾಂಗ್ರೆಸ್ನಿಂದ ಅಶೋಕ್ ರೈ ಕಣದಲ್ಲಿದ್ದಾರೆ.  

ಪುತ್ತೂರು: ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲಗೆ ಮುನ್ನಡೆ Read More »

ಕರಾವಳಿ

ಉಡುಪಿ: ಕಾರ್ಕಳ 8ನೇ ಸುತ್ತು ➤ ಸುನೀಲ್ ಕುಮಾರ್ಗೆ ಮುನ್ನಡೆ

(ನ್ಯೂಸ್ ಕಡಬ)Newskadaba.com ಉಡುಪಿ, ಮೇ.13. ಕಾಪು, ಬೈಂದೂರು, ಕಾರ್ಕಳ, ಕುಂದಾಪುರ 5 ವಿಧಾನಸಭಾ ಕ್ಷೇತ್ರಗಳಿದ್ದು, ಸದ್ಯ ಮತ ಎಣಿಕೆ ನಡೆಯುತ್ತಿದೆ. ಪ್ರಮುಖ ಪಕ್ಷಗಳ ಅಭ್ಯರ್ಥಿಗಳು ಎಷ್ಟು ಮತಗಳನ್ನು ಗಳಿಸಿದ್ದಾರೆ, ಯಾರು ಮುನ್ನಡೆಯಲ್ಲಿದ್ದಾರೆ ಎಂಬ ವಿವರ ಇಲ್ಲಿದೆ: ಉಡುಪಿ: ಬಿಜೆಪಿ – ಯಶ್ ಪಾಲ್ ಸುವರ್ಣ – 5360 (ಮುನ್ನಡೆ) ಕಾಂಗ್ರೆಸ್ – ಪ್ರಸಾದ್ ಕಾಂಚನ್ – 4666 ಕಾಪು: ಬಿಜೆಪಿ – ಸುರೇಶ್ ಗುರ್ಮೆ – 29785 (ಮುನ್ನಡೆ) ಕಾಂಗ್ರೆಸ್ – ವಿನಯ ಕುಮಾರ್ ಸೊರಕೆ –

ಉಡುಪಿ: ಕಾರ್ಕಳ 8ನೇ ಸುತ್ತು ➤ ಸುನೀಲ್ ಕುಮಾರ್ಗೆ ಮುನ್ನಡೆ Read More »

ಕರಾವಳಿ

ಸಿಎಂ ಬೊಮ್ಮಯಿಯ ಐದು ಕ್ಷೇತ್ರಗಳಲ್ಲಿ ಬಿಜೆಪಿಗೆ ಹಿನ್ನಡೆ

(ನ್ಯೂಸ್ ಕಡಬ) Newskadaba.com ಬೆಂಗಳೂರು,ಮೇ.13 ರಾಜ್ಯ ವಿಧಾನ ಸಭಾ ಚುನಾವಣೆಯ ಮತ ಎಣಿಕೆ ಮುಂದುವರಿದಿದೆ. ಬಿಜೆಪಿ ಅಭ್ಯರ್ಥಿ ಸೋಮಣ್ಣಗೆ ಚಾಮರಾಜನಗರ ಮತ್ತು ವರುಣಾ ಎರಡೂ ಕ್ಷೇತ್ರಗಳಲ್ಲಿ ಹಿನ್ನಡೆಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಅಶೋಕ್ ರೈಗೆ ಮುನ್ನಡೆಯಾಗಿದೆ.ಬೆಳ್ತಂಗಡಿಯಲ್ಲಿ ಹರೀಶ್ ಪೂಂಜಾಗೆ ಮುನ್ನಡೆಯಾಗಿದೆ. ಸಿಎಂ ಬೊಮ್ಮಯಿಯ ಐದು ಕ್ಷೇತ್ರಗಳಲ್ಲಿ ಬಿಜೆಪಿಗೆ ಹಿನ್ನೆಡೆಯಾಗಿದೆ. ಸಿಎಂ ಬೊಮ್ಮಯಿಯ ಐದು ಕ್ಷೇತ್ರಗಳಲ್ಲಿ ಬಿಜೆಪಿಗೆ ಹಿನ್ನೆಡೆಯಾಗಿದೆ. ಈಗ 115 ಕ್ಷೇತ್ರಗಳ್ಲಲ್ಲಿ ಕಾಂಗ್ರೆಸ್, 80 ಕ್ಷೇತ್ರಗಳಲ್ಲಿ ಬಿಜೆಪಿ, 24 ಕ್ಷೇತ್ರಗಳಲ್ಲಿ ಜೆಡಿಎಸ್ ಮುನ್ನಡೆ ಸಾಧಿಸಿದೆ.

ಸಿಎಂ ಬೊಮ್ಮಯಿಯ ಐದು ಕ್ಷೇತ್ರಗಳಲ್ಲಿ ಬಿಜೆಪಿಗೆ ಹಿನ್ನಡೆ Read More »

ಕರ್ನಾಟಕ
Scroll to Top