News Kadaba

ಮಂಗಳೂರು: ಅನೇಕ ಪ್ರಕರಣಗಳಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

(ನ್ಯೂಸ್ ಕಡಬ)newskadaba.com ಮಂಗಳೂರು, ಮೇ.24. ಅನೇಕ ಪ್ರಕರಣಗಳಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಮಂಗಳೂರಿನ ಅಡ್ಯಾರ್ ಬಳಿಯ ನಿವಾಸಿ ನವಾಝ್ ಶರೀಫ್ ಎಂಬುವವರ ವಿರುದ್ಧ ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ನೋಂದಣಿ ಸಂಖ್ಯೆ 46/2020 ಕಲಂ 143, 147, 323, 504, 427, 307 ಆರ್/ಡಬ್ಲ್ಯು 149 ಐಪಿಸಿ ಮತ್ತು ಅಡಿಯಲ್ಲಿ ಪ್ರಕರಣಗಳು ದಾಖಲಾಗಿವೆ.  

ಮಂಗಳೂರು: ಅನೇಕ ಪ್ರಕರಣಗಳಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ Read More »

ಕರಾವಳಿ, ಕ್ರೈಮ್ ನ್ಯೂಸ್

ವಿವಾಹಿತ ಮಹಿಳೆಯನ್ನು ಮತಾಂತರ ಮಾಡಲು ಯತ್ನಿಸಿದ ಆರೋಪಿ ಆರೆಸ್ಟ್.!

(ನ್ಯೂಸ್ ಕಡಬ)newskadaba.com  ಉತ್ತರ ಪ್ರದೇಶ,ಮೇ.24 ವಿವಾಹಿತ ಮಹಿಳೆ ಮೇಲೆ ದೈಹಿಕ ದೌರ್ಜನ್ಯವೆಸಗಿ, ಆಕೆಯನ್ನು ಬಲವಂತವಾಗಿ ಮತಾಂತರ ಮಾಡಲು ಯತ್ನಿಸಿದ ಆರೋಪದ ಮೇಲೆ ವ್ಯಕ್ತಿ ಹಾಗೂ ಆತನ ಸಹೋದರನನ್ನು ಸೇರಿ ಮೂವರನ್ನು ಬಂಧಿಸಿರುವ ಘಟನೆ ಉತ್ತರ ಪ್ರದೇಶದ ಮಿರ್ಜಾಪುರ ಜಿಲ್ಲೆಯಲ್ಲಿ ನಡೆದಿದೆ. ಕಳೆದ ಕೆಲ ಸಮಯದ ಹಿಂದೆ ಆರೋಪಿ ಆರೀಫ್‌ ಖಾನ್‌ ವಿವಾಹಿತ ಮಹಿಳೆಗೆ ಅಭಯ್‌ ಮಿಶ್ರಾ ಎಂದು ಪರಿಚಯಿಸಿ ಕರೆ ಮಾಡಿದ್ದಾನೆ. ಮಹಿಳೆಗೆ ಅಭಯ್‌ ಮಿಶ್ರಾನ ನಿಜವಾದ ಮುಖವಾಡ ಬಯಲಿಗೆ ಬಂದಿದೆ. ಆತ ಆರೀಫ್‌ ಖಾನ್‌ ಎನ್ನುವುದು

ವಿವಾಹಿತ ಮಹಿಳೆಯನ್ನು ಮತಾಂತರ ಮಾಡಲು ಯತ್ನಿಸಿದ ಆರೋಪಿ ಆರೆಸ್ಟ್.! Read More »

ರಾಷ್ಟ್ರೀಯ ನ್ಯೂಸ್

ಕಾರು ಅಪಘಾತಕ್ಕೆ ಯುವ ನಟಿ ವೈಭವಿ ಬಲಿ

(ನ್ಯೂಸ್ ಕಡಬ)newskadaba.com ಮುಂಬೈ, ಮೇ.24. ಮುಂಬೈ ಮೂಲದ ಯುವ ನಟಿ ಹಾಗೂ ಸೀರಿಯಲ್‌ ಕಲಾವಿದೆ ವೈಭವಿ ಉಪಾಧ್ಯಾಯ ಅವರು ಹಿಮಾಚಲ ಪ್ರದೇಶದಲ್ಲಿ ನಡೆದ ಕಾರು ಅಪಘಾತದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಜನಪ್ರಿಯ ಸಾರಾಭಾಯ್ Vs ಸಾರಾಭಾಯ್ ಟಿವಿ ಶೋದಲ್ಲಿನ ಪಾತ್ರಕ್ಕಾಗಿ ಅವರು ಹೆಚ್ಚು ಜನಪ್ರಿಯತೆ ಪಡೆದುಕೊಂಡಿದ್ದರು. ಉತ್ತರ ಭಾರತದಲ್ಲಿ ನಡೆದ ರಸ್ತೆ ಅಪಘಾತವೊಂದರಲ್ಲಿ ವೈಭವಿ ಸಾವನ್ನಪ್ಪಿರುವುದಾಗಿ ನಿರ್ಮಾಪಕ ಜೆಡಿ ಮಜೇಥಿಯಾ ಅವರು ಇನ್‌ಸ್ಟಾದಲ್ಲಿ ಈ ಶಾಕಿಂಗ್‌ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಕಾರು ಅಪಘಾತಕ್ಕೆ ಯುವ ನಟಿ ವೈಭವಿ ಬಲಿ Read More »

ರಾಷ್ಟ್ರೀಯ ನ್ಯೂಸ್

ಉಡುಪಿ:ಮಗಳ ಮದುವೆ ಕಾರ್ಯಕ್ರಮಕ್ಕೆ ಬಂದ ತಂದೆ ಕಾಲು ಜಾರಿ ಬಿದ್ದು ಮೃತ್ಯು

 (ನ್ಯೂಸ್ ಕಡಬ) newskadaba.com. ಉಡುಪಿ, ಮೇ.24. ಮುಂಬೈಯಿಂದ ಮಗಳ ಮದುವೆ ಕಾರ್ಯಕ್ಕೆಂದು ಬಂದ ವ್ಯಕ್ತಿಯೊಬ್ಬರು ಹೊಟೇಲಿನಲ್ಲಿ ಕಾಲು ಜಾರಿ ಬಿದ್ದು ಮೃತಪಟ್ಟಿರುವ ಘಟನೆ ಉಡುಪಿಯಲ್ಲಿ ನಡೆದಿದೆ. ಈ ಘಟನೆ ನಡೆದಿದ್ದು ಮೃತ ವ್ಯಕ್ತಿಯನ್ನು ದೊಂಬಿವಿಲಿಯ ರಾಮಕೃಷ್ಣ ಮುದ್ದು ಶೆಟ್ಟಿ (68) ಎಂದು ಗುರುತಿಸಲಾಗಿದೆ. ಮೇ22ಕ್ಕೆ ಇವರ ಎರಡನೇ ಮಗಳಿಗೆ ಉಡುಪಿ ಶ್ಯಾಮಿಲಿ ಸಭಾಭವನದಲ್ಲಿ ಮದುವೆ ನಿಶ್ಚಯವಾಗಿದ್ದು,  ಈ ಸಂದರ್ಭದಲ್ಲಿ  ಮೇ19ರಂದು ಇಡೀ ಕುಟುಂಬ ಸಮೇತರಾಗಿ ಬಂದು ಉಡುಪಿಯ ಹೊಟೋಲ್‌ನಲ್ಲಿ  ಉಳಿದಿದ್ದರು, ಹೊಟೇಲ್ ರೂಮ್ ಒಳಗಡೆ ನಡೆಯುವಾಗ ಆಕಸ್ಮಿಕವಾಗಿ ತುಂಡಾದ

ಉಡುಪಿ:ಮಗಳ ಮದುವೆ ಕಾರ್ಯಕ್ರಮಕ್ಕೆ ಬಂದ ತಂದೆ ಕಾಲು ಜಾರಿ ಬಿದ್ದು ಮೃತ್ಯು Read More »

ಕರಾವಳಿ

ಪುತ್ತೂರು: ಪೊಲೀಸ್ ದೌರ್ಜನ್ಯದಿಂದ ಕಿವಿ ತಮಟೆಗೆ ಹಾನಿ ➤ ಅರುಣ್ ಪುತ್ತಿಲ ಆಕ್ರೋಶ

(ನ್ಯೂಸ್ ಕಡಬ)newskadaba.com ಪುತ್ತೂರು, ಮೇ.24. ಪೊಲೀಸ್ ದೌರ್ಜನ್ಯ ಸಂದರ್ಭ ಅವಿನಾಶ್ ಎಂಬ ಯುವಕನ ಕಿವಿಯ ತಮಟೆಗೆ ತೀವ್ರ ಹಾನಿಯಾಗಿದೆ ಎಂಬ ವರದಿ ಹೊರಬಿದ್ದಿದ್ದು, ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಎಸ್ಪಿಯನ್ನು ಭೇಟಿಯಾಗಿ ಡಿವೈಎಸ್‌ಪಿ ಅವರನ್ನು ಅಮಾನತು ಮಾಡುವಂತೆ ಆಗ್ರಹಿಸಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್ ಹಾಗೂ ಮಾಜಿ ಮುಖ್ಯಮಂತ್ರಿ ಡಿವಿ ಸದಾನಂದ ಗೌಡರಿಗೆ ಚಪ್ಪಲಿ ಹಾರ ಹಾಕಿ ಶ್ರದ್ಧಾಂಜಲಿ ಬ್ಯಾನರ್ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಂದು ಒಟ್ಟು 11 ಜನರನ್ನು ಬಂಧಿಸಿ ಪೊಲೀಸರು ಡಿವೈಎಸ್ಪಿ

ಪುತ್ತೂರು: ಪೊಲೀಸ್ ದೌರ್ಜನ್ಯದಿಂದ ಕಿವಿ ತಮಟೆಗೆ ಹಾನಿ ➤ ಅರುಣ್ ಪುತ್ತಿಲ ಆಕ್ರೋಶ Read More »

ಕರಾವಳಿ

‘ಪಠ್ಯ ಪರಿಷ್ಕರಣೆ ಬಗ್ಗೆ ಸಂಪುಟ ಸಭೆಯಲ್ಲಿ ತೀರ್ಮಾನ’  ➤ ಸಿಎಂ ಸಿದ್ದರಾಮಯ್ಯ

(ನ್ಯೂಸ್ ಕಡಬ)newskadaba.com ಬೆಂಗಳೂರು, ಮೇ.24. ಬಿಜೆಪಿ ಸರ್ಕಾರದ ಅವಧಿಯಲ್ಲಿ ಆಗಿರುವ ಪಠ್ಯ ಪುಸ್ತಕವನ್ನು ಪರಿಷ್ಕರಣೆ ಮಾಡುವ ಬಗ್ಗೆ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಮಾಡುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಗೃಹಕಚೇರಿ ಕೃಷ್ಣಾದಲ್ಲಿ ಮಾತನಾಡಿ, ಬಿಜೆಪಿ ಅಧಿಕಾರದ ಅವಧಿಯಲ್ಲಿ ಆಗಿರುವ ಪಠ್ಯ ಪುಸ್ತಕ ಪರಿಷ್ಕರಣೆ ಮಾಡುವ ಕುರಿತಂತೆ ಮುಂದಿನ ಸಚಿವ ಸಂಪುಟದಲ್ಲಿ ಚರ್ಚೆ ನಡೆಸಲಾಗುವುದು. ಅಲ್ಲಿ ಸಚಿವ ಅಭಿಪ್ರಾಯ ಪಡೆದು ಮುಂದಿನ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದಿದ್ದಾರೆ.

‘ಪಠ್ಯ ಪರಿಷ್ಕರಣೆ ಬಗ್ಗೆ ಸಂಪುಟ ಸಭೆಯಲ್ಲಿ ತೀರ್ಮಾನ’  ➤ ಸಿಎಂ ಸಿದ್ದರಾಮಯ್ಯ Read More »

ಕರ್ನಾಟಕ

ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಗ್ರಾಮ ಲೆಕ್ಕಿಗ.!➤ಆರೋಪಿ ಆರೆಸ್ಟ್

(ನ್ಯೂಸ್ ಕಡಬ)newskadaba.com ಕೇರಳ,ಮೇ.24 ಲಂಚ ಸ್ವೀಕರಿಸುವಾಗ ಕೇರಳದ ಪಾಲಕ್ಕಾಡ್​ ಜಿಲ್ಲೆಯಲ್ಲಿ​ ಗ್ರಾಮ ಲೆಕ್ಕಿಗನೊಬ್ಬ ಸಿಕ್ಕಿಬಿದ್ದಿದ್ದಾನೆ.ಪಾಲಕ್ಕಯಂ ಗ್ರಾಮ ಕಚೇರಿಯಲ್ಲಿ ಫೀಲ್ಡ್​ ಆಫೀಸರ್​ ಆಗಿ ಕೆಲಸ ಮಾಡುತ್ತಿದ್ದ ಸುರೇಶ್​ ಕುಮಾರ್​ ಎಂಬಾತನನ್ನು ಬಂಧಿಸಲಾಗಿದೆ. ಬಂಧಿತ ಆರೋಪಿ ಸ್ಥಳ ಪ್ರಮಾಣಪತ್ರ ನೀಡುವುದಕ್ಕಾಗಿ 2500 ರೂಪಾಯಿ ಲಂಚ ಸ್ವೀಕರಿಸುತ್ತಿದ್ದ ವೇಳೆ ವಿಜಿಲೆನ್ಸ್ ಅಧಿಕಾರಿಗಳು ದಾಳಿ ಮಾಡಿ ರೆಡ್​ ಹ್ಯಾಂಡ್​ ಆಗಿ ಹಿಡಿದಿದ್ದಾರೆ. ನಂತರ ಅಧಿಕಾರಿಗಳ ಸುರೇಶ್​ ಕುಮಾರ್​ ಅವರ ಮನ್ನಾರಕಟ್ಟೆ ನಿವಾಸದ ಮೇಲೆ ದಾಳಿ ಮಾಡಿದ್ದಾರೆ. ಆತನ ಮನೆ ಮೇಲೆ ದಾಳಿ ಮಾಡಿದಾಗ

ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಗ್ರಾಮ ಲೆಕ್ಕಿಗ.!➤ಆರೋಪಿ ಆರೆಸ್ಟ್ Read More »

ರಾಷ್ಟ್ರೀಯ ನ್ಯೂಸ್

ವಿದ್ಯುತ್ ಬಿಲ್ ವಸೂಲಿಗೆ ಬಂದವರ ಮೇಲೆ ಚಪ್ಪಲಿಯಿಂದ ಹಲ್ಲೆ

(ನ್ಯೂಸ್ ಕಡಬ)newskadaba.com ಕೊಪ್ಪಳ, ಮೇ.24. 200 ಯುನಿಟ್ ಕರೆಂಟ್ ಫ್ರೀ ಕೊಡ್ತೀವಿ ಅಂತ ಕಾಂಗ್ರೆಸ್ ಸರ್ಕಾರ ಹೇಳಿದ್ದು, ಜನ ಇದನ್ನೇ ನೆಪ ಮಾಡಿಕೊಂಡು ಕರೆಂಟ್ ಬಿಲ್ ಕಟ್ಟಲ್ಲ ಎಂದು ಹಠಕ್ಕೆ ಬಿದ್ದಿದ್ದಾರೆ. ಅಂತೆಯೇ ಇದೀಗ ಕೊಪ್ಪಳದಲ್ಲಿ ವಿದ್ಯುತ್ ಬಿಲ್ ಕಲೆಕ್ಟ್ ಮಾಡಲು ಬಂದವರ ಮೇಲೆ ಹಲ್ಲೆ ಮಾಡಿರುವ ಘಟನೆ ಜಿಲ್ಲೆಯ ಮುನಿರಾಬಾದ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕುಕನಪಳ್ಳಿ ಗ್ರಾಮದ ಚಂದ್ರಶೇಖರಯ್ಯ ಎಂಬವರು ಕಳೆದ ಆರು ತಿಂಗಳಿನಿಂದ ಬಿಲ್ ಬಾಕಿ ಉಳಿಸಿಕೊಂಡಿದ್ದರು. ಬಿಲ್ ಪಾವತಿ ಮಾಡದ ಹಿನ್ನೆಲೆಯಲ್ಲಿ

ವಿದ್ಯುತ್ ಬಿಲ್ ವಸೂಲಿಗೆ ಬಂದವರ ಮೇಲೆ ಚಪ್ಪಲಿಯಿಂದ ಹಲ್ಲೆ Read More »

ಕರ್ನಾಟಕ, ಕ್ರೈಮ್ ನ್ಯೂಸ್

ಯುವಕನಂತೆ ಕಾಣಲು ವರ್ಷಕ್ಕೆ 16 ಕೋಟಿ ಖರ್ಚು ಮಾಡುತ್ತಿರುವ 45 ವರ್ಷದ ವ್ಯಕ್ತಿ

(ನ್ಯೂಸ್ ಕಡಬ)newskadaba.com ನ್ಯೂಯಾರ್ಕ್, ಮೇ.24. ಅಮೆರಿಕದ 45 ವರ್ಷ ವ್ಯಕ್ತಿ ತನ್ನ ಯೌವನವನ್ನು ಮರಳಿ ಪಡೆಯಲು ಪ್ರತಿವರ್ಷ 16 ಕೋಟಿ ರೂ.ಗಿಂತ ಹೆಚ್ಚು ಖರ್ಚು ಮಾಡುತ್ತಿದ್ದಾರೆ. ಇದರೊಂದಿಗೆ, ಅವರು ತಮ್ಮ ಮಗನ ಪ್ಲಾಸ್ಮಾ ಸಹ ಬಳಸುತ್ತಿದ್ದಾರೆ. 45 ವರ್ಷದ ಸಾಫ್ಟ್’ವೇರ್ ಡೆವಲಪರ್ ಬ್ರಿಯಾನ್ ಜಾನ್ಸನ್ 18 ವರ್ಷದ ಯುವಕನಂತೆ ಕಾಣಲು ಬಯಸುತ್ತಿದ್ದಾರೆ. ಇದಕ್ಕಾಗಿ ಪ್ಲಾಸ್ಮ ವಿನಿಮಯ ಮಾಡಿಕೊಳ್ಳುತ್ತಿದ್ದಾರೆ. 45 ವರ್ಷದ ಬ್ರಿಯಾನ್ ಜಾನ್ಸನ್ ತನ್ನ 17 ವರ್ಷದ ಮಗ ಟಾಲ್ಮೆಜ್​ನ ರಕ್ತವನ್ನು ಯೌವನವನ್ನು ಮರಳಿ ಪಡೆಯಲು ಬಳಸಿದ್ದಾರೆ.

ಯುವಕನಂತೆ ಕಾಣಲು ವರ್ಷಕ್ಕೆ 16 ಕೋಟಿ ಖರ್ಚು ಮಾಡುತ್ತಿರುವ 45 ವರ್ಷದ ವ್ಯಕ್ತಿ Read More »

ರಾಷ್ಟ್ರೀಯ ನ್ಯೂಸ್

ದೇಶದ ಹಲವೆಡೆ ಮಳೆ ಅರ್ಭಟ ಹೆಚ್ಚಾಗಳಿದೆ.!➤ಹವಾಮಾನ ಇಲಾಖೆ ಸೂಚನೆ

(ನ್ಯೂಸ್ ಕಡಬ)newskadaba.com ಬೆಂಗಳೂರು,ಮೇ.24 ಕಳೆದು ಮೂರು ದಿನಗಳಿಂದ ರಾಜ್ಯದಲ್ಲಿ ಭಾರೀ ಮಳೆಯಾಗುತ್ತಿದೆ. ಸಂಜೆಯಾಗುತ್ತಿದ್ದಂತೆ ಸುರಿಯುವ ಮಳೆಯಿಂದಾಗಿ ವಾಹನ ಸವಾರರು ಹೈರಾಣಾಗಿದ್ದಾರೆ. ಅಂಡರ್‌ಪಾಸ್‌, ರಸ್ತೆಗಳಲ್ಲಿ ನೀರು ತುಂಬಿಕೊಳ್ಳುತ್ತಿರುವುದರಿಂದ ರಸ್ತೆ ಸಂಚಾರ ಸುಗಮವಾಗಿರದೆ ಹಲವೆಡೆ ಟ್ರಾಫಿಕ್ ಜಾಮ್ ಉಂಟಾಗಿದೆ. ದಕ್ಷಿಣ ತಮಿಳುನಾಡಿನಲ್ಲಿ ಸಮುದ್ರಮಟ್ಟದಲ್ಲಿ ಮೇಲ್ಮೈ ಸುಳಿಗಾಳಿ ಹಿನ್ನೆಲೆ ರಾಜ್ಯದಲ್ಲಿ ಮುಂದಿನ ಐದು ದಿನ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.    

ದೇಶದ ಹಲವೆಡೆ ಮಳೆ ಅರ್ಭಟ ಹೆಚ್ಚಾಗಳಿದೆ.!➤ಹವಾಮಾನ ಇಲಾಖೆ ಸೂಚನೆ Read More »

ಕರ್ನಾಟಕ
Scroll to Top