News Kadaba

ಯುವತಿಯೋರ್ವಳು ನೇಣು ಬಿಗಿದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ

(ನ್ಯೂಸ್ ಕಡಬ)newskadaba.com ಕಾಸರಗೋಡು, ಮೇ. 26. ಯುವತಿಯೋರ್ವಳು ಮನೆಯಲ್ಲಿ ನೇಣು ಬಿಗಿದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಅಡೂರಿನಲ್ಲಿ ನಡೆದಿದೆ ಎಂದು ವರದಿ ತಿಳಿಸಿದೆ. ಅಡೂರು ಚಾಮಕೊಚ್ಚಿ ಅನ್ನಪ್ಪಾಡಿಯ ಮುದ್ದ ನಾಯ್ಕ್ ರವರ ಪುತ್ರಿ ದಿವ್ಯಾ (26) ಮೃತಪಟ್ಟವರು ಎನ್ನಲಾಗಿದೆ. ದಿವ್ಯಾ ಬಂದಡ್ಕದ ಖಾಸಗಿ ಆಸ್ಪತ್ರೆಯಲ್ಲಿ ಲ್ಯಾಬ್ ಟೆಕ್ನಿಷಿಯನ್ ಆಗಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.

ಯುವತಿಯೋರ್ವಳು ನೇಣು ಬಿಗಿದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ ದುಷ್ಕರ್ಮಿಗಳು‌.!➤ಪ್ರಕರಣ ದಾಖಲು

(ನ್ಯೂಸ್ ಕಡಬ)newskadaba.com ಬೆಂಗಳೂರು,ಮೇ.26  ನಗರದ ಲಗ್ಗೆರೆ ಬಳಿಯ ಚೌಡೇಶ್ವರಿನಗರದಲ್ಲಿ ರವಿಕುಮಾರ್ ಅಲಿಯಾಸ್ ಮತ್ತಿ ರವಿ (38) ಎಂಬುವವರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ‌ ಮಾಡಲಾಗಿದೆ.ಸ್ಥಳೀಯ ನಿವಾಸಿ ರವಿ, ಕಾಂಗ್ರೆಸ್ ಪಕ್ಷದ ಕಾರ್ಯಕರ್ತ. ಕಾಂಗ್ರೆಸ್ ಪಕ್ಷದ ಮುಖಂಡರೂ ಆಗಿರುವ ಫೈನಾನ್ಶಿಯರ್ ಕೃಷ್ಣಮೂರ್ತಿ ಅವರ ಜನ್ಮದಿನವಿತ್ತು. ಸ್ನೇಹಿತರು ರಾತ್ರಿ ಏರ್ಪಡಿಸಿದ್ದ ಪಾರ್ಟಿಯಲ್ಲಿ ರವಿ ಪಾಲ್ಗೊಂಡಿದ್ದರು. ಊಟದ ಸಮಯದಲ್ಲಿ ಎರಡು ಗುಂಪಿನ ನಡುವೆ ಗಲಾಟೆ ಆಗಿತ್ತು. ಪರಸ್ಪರ ವೈಷಮ್ಯ ಬೆಳೆದಿತ್ತು.’ನಂತರ ಮಾರಕಾಸ್ತ್ರಗಳಿಂದ ಹೊಡೆದು ರವಿ ಅವರನ್ನು ಕೊಂದು ಆರೋಪಿಗಳು ಪರಾರಿಯಾಗಿದ್ದಾರೆ.ಪತ್ನಿ ನೀಡಿರುವ ದೂರು

ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ ದುಷ್ಕರ್ಮಿಗಳು‌.!➤ಪ್ರಕರಣ ದಾಖಲು Read More »

ಕರ್ನಾಟಕ

ರಿಯಲ್ ಎಸ್ಟೇಟ್ ಉದ್ಯಮಿ ಸೇರಿ ಡಬಲ್ ಮರ್ಡರ್

(ನ್ಯೂಸ್ ಕಡಬ)newskadaba.com ಧಾರವಾಡ, ಮೇ.26. ನಗರದ ಕಮಲಾಪುರ ಹೊರವಲಯದಲ್ಲಿ ರಿಯಲ್ ಎಸ್ಟೇಟ್ ಉದ್ಯಮಿ ಸೇರಿ ಇಬ್ಬರ ಹತ್ಯೆ ನಡೆದಿದೆ ಎಂದು ವರದಿ ತಿಳಿಸಿದೆ. ಮಹಮ್ಮದ್ ಕುಡಚಿ, ಕೊಲೆಯಾದ ರಿಯಲ್ ಎಸ್ಟೇಟ್ ಉದ್ಯಮಿ ಎಂದು ಗುರುತಿಸಲಾಗಿದೆ. ಮನೆ ಎದುರು ಕುಳಿತಾಗ ದಾಳಿ ಮಾಡಿದ ಗುಂಪು ಮಚ್ಚಿನಿಂದ ಕೊಚ್ಚಿ ಮಹಮ್ಮದ್ ಕುಡಚಿ ಅವರನ್ನು ಕೊಲೆ ಮಾಡಲಾಗಿದೆ. ಕುಡಚಿ ಅವರ ಮನೆಯಿಂದ ಅನತಿ ದೂರದಲ್ಲಿ ಮತ್ತೊಂದು ಶವ ಪತ್ತೆಯಾಗಿದೆ. ಆ ಶವ ಕೂಡ ರಕ್ತಸಿಕ್ತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಕುಡಚಿ ಅವರ ಮನೆಯಿಂದಲೇ

ರಿಯಲ್ ಎಸ್ಟೇಟ್ ಉದ್ಯಮಿ ಸೇರಿ ಡಬಲ್ ಮರ್ಡರ್ Read More »

ಕರ್ನಾಟಕ, ಕ್ರೈಮ್ ನ್ಯೂಸ್

ಗೃಹಲಕ್ಷ್ಮಿಯೋಜನೆ ಅಡಿ ಹೆಸರು ನೋಂದಾವಣೆ➤ ಸೈಬರ್‌ ಸೆಂಟರ್‌ಗಳ ಬಳಿ ಮುಗಿಬಿದ್ದ ಮಹಿಳೆಯರು.!  

(ನ್ಯೂಸ್ ಕಡಬ)newskadaba.com ಕೋಲಾರ,ಮೇ.26   ರಾಜ್ಯ ಸರ್ಕಾರದ ಗೃಹಲಕ್ಷ್ಮಿ ಯೋಜನೆ ಅಡಿ ಹೆಸರು ನೋಂದಾಯಿಸಲು ಗುರುವಾರ ಮುಂಜಾನೆ ನೂರಾರು ಮಹಿಳೆಯರು ನಗರದ ಸೈಬರ್‌ ಸೆಂಟರ್‌ಗಳಿಗೆ ಮುಗಿಬಿದ್ದಿದ್ದರು. ಪಡಿತರ ಚೀಟಿಗೆ ಮೇ 31ರ ಒಳಗಾಗಿ ಆಧಾರ್‌ ಜೋಡಣೆ ಮಾಡಿ ಹೆಸರು ನೋಂದಾಯಿಸಿದರೆ ಮಾತ್ರ ಗೃಹಲಕ್ಷ್ಮಿ ಯೋಜನೆ ಅಡಿ ಮನೆಯ ಯಜಮಾನಿಗೆ ಪ್ರತಿ ತಿಂಗಳು ₹2 ಸಾವಿರ ಸಿಗುತ್ತದೆ ಎಂಬ ಸುಳ್ಳು ಸಂದೇಶ ಸಾಮಾಜಿಕ ಜಾಲತಾಣ ಮತ್ತು ವಾಟ್ಸ್‌ಆಯಪ್‌ಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.ಇದನ್ನು ನಂಬಿದ ಮಹಿಳೆಯರು ಎಲ್ಲ ದಾಖಲೆಗಳೊಂದಿಗೆ ಸೈಬರ್‌ ಸೆಂಟರ್‌ಗಳ ಮುಂದೆ

ಗೃಹಲಕ್ಷ್ಮಿಯೋಜನೆ ಅಡಿ ಹೆಸರು ನೋಂದಾವಣೆ➤ ಸೈಬರ್‌ ಸೆಂಟರ್‌ಗಳ ಬಳಿ ಮುಗಿಬಿದ್ದ ಮಹಿಳೆಯರು.!   Read More »

ಕರ್ನಾಟಕ

ಬಜರಂಗದಳ ಮತ್ತು ಬಿಜೆಪಿ ಕಾರ್ಯಕರ್ತರ ಮೇಲೆ ನಡೆದ ಹಲ್ಲೆ ಪ್ರಕರಣ ➤ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ಆರೋಗ್ಯ ವಿಚಾರಿಸಿದ ಕಟೀಲ್

(ನ್ಯೂಸ್ ಕಡಬ)newskadaba.com ಮಂಗಳೂರು, ಮೇ.26. ಬಜರಂಗದಳ ಮತ್ತು ಬಿಜೆಪಿ ಕಾರ್ಯಕರ್ತರ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮಂಗಳೂರು ಆಸ್ಪತ್ರೆಗೆ ಶಿಫ್ಟ್ ಆಗಿರುವ ಗಾಯಾಳುವಿನ ಆರೋಗ್ಯವನ್ನು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಿಚಾರಿಸಿದ್ದಾರೆ. ದ.ಕ ಜಿಲ್ಲೆಯ ಬಂಟ್ವಾಳ ತಾಲೂಕಿನ ಮಾಣಿ ಎಂಬಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಮತ್ತು ಬಜರಂಗದಳ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದ್ದರು. ಈ ಘಟನೆಯಲ್ಲಿ ಗಂಭೀರ ಗಾಯಗೊಂಡಿದ್ದ ಮಹೇಂದ್ರರನ್ನು ಪುತ್ತೂರು ಆಸ್ಪತ್ರೆಯಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಮಂಗಳೂರಿಗೆ ಶಿಫ್ಟ್

ಬಜರಂಗದಳ ಮತ್ತು ಬಿಜೆಪಿ ಕಾರ್ಯಕರ್ತರ ಮೇಲೆ ನಡೆದ ಹಲ್ಲೆ ಪ್ರಕರಣ ➤ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ಆರೋಗ್ಯ ವಿಚಾರಿಸಿದ ಕಟೀಲ್ Read More »

ಕರಾವಳಿ

ಅನ್ಯಕೊಮಿನ ಯುವಕರು ಹಿಂದೂ ಯುವಕನ ಮೇಲೆ ಹಲ್ಲೆ.!

(ನ್ಯೂಸ್ ಕಡಬ)newskadaba.com ಚಿಕ್ಕಬಳ್ಳಾಪುರ,ಮೇ.26 ನಗರದಲ್ಲಿ ಅನ್ಯಕೊಮಿನ ಯುವತಿಯೊಬ್ಬಳು ಹಿಂದೂ ಯುವಕನ ಜೊತೆಗೆ ಹೋಟೆಲ್ ಗೆ ಆಗಮಿಸಿದ ಹಿನ್ನೆಲೆಯಲ್ಲಿ ಅನ್ಯಕೊಮಿನ ಯುವಕರು ಹಿಂದೂ ಯುವಕನ ಮೇಲೆ ಹಲ್ಲೆಗೆ ಯತ್ನಿಸಿದ ಘಟನೆ ನಡೆದಿದೆ. ಈ ಘಟನೆ ಚಿಕ್ಕಬಳ್ಳಾಪುರದ ಗೋಪಿಕಾ ಚಾಟ್ಸ್ ಬಳಿ ನಡೆದಿದೆ ಎನ್ನಲಾಗಿದೆ. ಚಿಕ್ಕಬಳ್ಳಾಪುರ ಪೋಲಿಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ ಎಂದು ತಿಳಿದು ಬಂದಿದೆ.ಹಿಂದೂ ಯುವಕನ ಜೊತೆ ಅನ್ಯಕೊಮಿನ ಯುವತಿ ಆಗಮಿಸಿದ್ದಕ್ಕೆ ಯುವಕರು ಗರಂ ಆಗಿ ಇಬ್ಬರ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ ಎನ್ನಲಾಗಿದೆ.    

ಅನ್ಯಕೊಮಿನ ಯುವಕರು ಹಿಂದೂ ಯುವಕನ ಮೇಲೆ ಹಲ್ಲೆ.! Read More »

ಕರ್ನಾಟಕ

ಸಂಸತ್‌ ಕಟ್ಟಡವನ್ನು ರಾಷ್ಟ್ರಪತಿ ಉದ್ಘಾಟಿಸಲಿ ➤ ಸುಪ್ರೀಂನಲ್ಲಿ PIL ಸಲ್ಲಿಕೆ

(ನ್ಯೂಸ್ ಕಡಬ)newskadaba.com ನವದೆಹಲಿ, ಮೇ.26. ನೂತನ ಸಂಸತ್‌ ಕಟ್ಟಡವನ್ನು ರಾಷ್ಟ್ರಪತಿಗಳಿಂದ ಉದ್ಘಾಟಿಸಲು ನಿರ್ದೇಶನ ನೀಡಬೇಕೆಂದು ಕೋರಿ ಸುಪ್ರೀಂ ಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದೆ. ಕಾಂಗ್ರೆಸ್‌, ಟಿಎಂಸಿ, ಆಪ್‌, ಜೆಡಿಯು ಸೇರಿದಂತೆ 20 ವಿರೋಧ ಪಕ್ಷಗಳು ಬಹಿಷ್ಕಾರ ಹಾಕಿದ ಬೆನ್ನಲ್ಲೇ ಸುಪ್ರೀಂನಲ್ಲಿ ಅರ್ಜಿ ಸಲ್ಲಿಕೆಯಾಗಿದೆ. ರಾಷ್ಟ್ರಪತಿ ಅವರಿಂದ ಉದ್ಘಾಟನೆ ಮಾಡದೇ ಪ್ರಧಾನಿ ಮೋದಿ ಉದ್ಘಾಟಿಸುತ್ತಿರುವುದು ಸಂವಿಧಾನಕ್ಕೆ ಮಾಡುತ್ತಿರುವ ಅವಮಾನ ಎಂದು ವಕೀಲ ಸಿಆರ್ ಜಯ ಸುಕಿನ್ ತಮ್ಮ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ. ಯಾವುದೇ ಸದನವನ್ನು ಕರೆಯುವ ಮತ್ತು ಮುಂದೂಡುವ

ಸಂಸತ್‌ ಕಟ್ಟಡವನ್ನು ರಾಷ್ಟ್ರಪತಿ ಉದ್ಘಾಟಿಸಲಿ ➤ ಸುಪ್ರೀಂನಲ್ಲಿ PIL ಸಲ್ಲಿಕೆ Read More »

ರಾಷ್ಟ್ರೀಯ ನ್ಯೂಸ್

ರಾತ್ರೋರಾತ್ರಿ ಕೋಟ್ಯಧಿಪತಿಯಾದ ಕೂಲಿ ಕಾರ್ಮಿಕ.!

(ನ್ಯೂಸ್ ಕಡಬ)newskadaba.com ಪಶ್ಚಿಮ ಬಂಗಾಳ,ಮೇ.26 ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ಕನಸಿನಲ್ಲಿಯೂ ಊಹಿಸಿರದ ಘಟನೆಯೊಂದು ಆತನ ಮೊಹಮ್ಮದ್ ನಾಸಿರುಲ್ಲಾ ಮಂಡಲ್ ಎಂಬಾತನ ಬದುಕಲ್ಲಿ ನಡೆದಿದೆ. ಮೊಹಮ್ಮದ್ ನಾಸಿರುಲ್ಲಾ ಮಂಡಲ್ ಎಂಬಾತ ರಾತ್ರೋರಾತ್ರಿ ಕೋಟ್ಯಧಿಪತಿಯಾಗಿದ್ದಾನೆ. ಪಶ್ಚಿಮ ಬಂಗಾಳದ ಮುರ್ಷಿದಾಬಾದ್‌ನ ಬಸುದೇಬ್‌ಪುರ ಗ್ರಾಮದ ದಿನಗೂಲಿ ಕಾರ್ಮಿಕ ಮೊಹಮ್ಮದ್ ನಾಸಿರುಲ್ಲಾ ಮಂಡಲ್ ಎಂಬಾತನ ಬ್ಯಾಂಕ್ ಖಾತೆಗೆ 100 ಕೋಟಿ ಜಮೆ ಆಗಿದ್ದು, ರಾತ್ರೋರಾತ್ರಿ ಕೋಟ್ಯಾಧಿಪತಿಯಾಗಿದ್ದಾನೆ. ಪೊಲೀಸರು ಕರೆ ಮಾಡಿ ತನಿಖೆಗೆ ಹಾಜರಾಗುವಂತೆ ಸೂಚನೆ ನೀಡಿದಾಗಲೇ ತನ್ನ ಖಾತೆಯಲ್ಲಿ ಇಷ್ಟೊಂದು ಹಣ ಇದೇ ಎಂಬುದು

ರಾತ್ರೋರಾತ್ರಿ ಕೋಟ್ಯಧಿಪತಿಯಾದ ಕೂಲಿ ಕಾರ್ಮಿಕ.! Read More »

ರಾಷ್ಟ್ರೀಯ ನ್ಯೂಸ್

ಬೇಕಾಬಿಟ್ಟಿ ಬೈಕ್ ಚಲಾವಣೆ ➤ ವ್ಯಕ್ತಿಯ ವಿರುದ್ಧ ಸೊಮೊಟೋ ಪ್ರಕರಣ ದಾಖಲು

(ನ್ಯೂಸ್ ಕಡಬ)newskadaba.com ಕುಂದಾಪುರ, ಮೇ.26. ನಾಲ್ಕು ಜನರನ್ನು ಒಂದೇ ಬೈಕಿನಲ್ಲಿ ಕುಳ್ಳಿರಿಸಿಕೊಂಡು ಹೆದ್ದಾರಿಯಲ್ಲಿ ಪೊಲೀಸರೆದುರೇ ಅಪಾಯಕಾರಿಯಾಗಿ ಚಲಾಯಿಸಿಕೊಂಡು ಬಂದು ಪರಾರಿಯಾದ ವ್ಯಕ್ತಿಯ ವಿರುದ್ಧ ಪೊಲೀಸರು ಸೊಮೊಟೋ ಪ್ರಕರಣ ದಾಖಲಿಸಿಕೊಂಡಿರುವ ಘಟನೆ ಕೋಟ ಪೊಲೀಸ್ ಠಾಣಾ ವ್ಯಾಪ್ತಿಯ ಪಾರಂಪಳ್ಳಿ ಗ್ರಾಮದ ಸಾಲಿಗ್ರಾಮ ಗಣೇಶ ಗ್ರ್ಯಾಂಡ್ ಹೋಟೆಲ್ ಬಳಿ ನಡೆದಿದೆ ಎನ್ನಲಾಗಿದೆ. ಕೋಟ ಪೊಲೀಸರು ಪಾರಂಪಳ್ಳಿ ಗ್ರಾಮದ ಸಾಲಿಗ್ರಾಮ ಗಣೇಶ ಗ್ರ್ಯಾಂಡ್ ಹೋಟೆಲ್ ಬಳಿ ವಾಹನ ತಪಾಸಣೆ ಮಾಡುತ್ತಿದ್ದರು. ಈ ಸಂದರ್ಭ ಹೆಲ್ಮೆಟ್ ಧರಿಸದೇ ಹಿಂಬದಿಯಲ್ಲಿ ಮೂವರನ್ನು ಕುಳ್ಳಿರಿಸಿಕೊಂಡು ಬೈಕ್ ಚಲಾಯಿಸಿಕೊಂಡು

ಬೇಕಾಬಿಟ್ಟಿ ಬೈಕ್ ಚಲಾವಣೆ ➤ ವ್ಯಕ್ತಿಯ ವಿರುದ್ಧ ಸೊಮೊಟೋ ಪ್ರಕರಣ ದಾಖಲು Read More »

ಕರ್ನಾಟಕ, ಕ್ರೈಮ್ ನ್ಯೂಸ್

ಮಂಗಳೂರಿನಲ್ಲಿ ತಪ್ಪಿದ ಭಾರಿ ದುರಂತ…! ➤ ಟೇಕಾಫ್ ಗೆ ಸಿದ್ದವಾಗಿದ್ದ ವಿಮಾನಕ್ಕೆ ಹಕ್ಕಿ ಢಿಕ್ಕಿ

(ನ್ಯೂಸ್ ಕಡಬ)newskadaba.com ಮಂಗಳೂರು, ಮೇ.26. ಟೇಕ್ ಆಫ್ ಗೆ ಸಿದ್ಧವಾಗಿದ್ದ ಇಂಡಿಗೋ ವಿಮಾನಕ್ಕೆ ಹಕ್ಕಿ ಡಿಕ್ಕಿ ಹೊಡೆದ ಘಟನೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ನಡೆದಿದೆ. ಮಂಗಳೂರಿನಿಂದ ದುಬೈಗೆ ಹೊರಟಿದ್ದ ಇಂಡಿಗೋ ವಿಮಾನ ಬೆಳಗ್ಗೆ 8:30ಕ್ಕೆ ಹೊರಟಿತ್ತು, ಈ ವೇಳೆ ಟ್ಯಾಕ್ಸಿ ವೇ ದಾಟಿ ರನ್ ವೇನಲ್ಲಿ ಸಾಗುತ್ತಿದ್ದ ವೇಳೇಯಲ್ಲಿ ವಿಮಾನದ ರೆಕ್ಕೆಯ ಭಾಗಕ್ಕೆ ಹಕ್ಕಿ ಡಿಕ್ಕಿ ಹೊಡೆದಿದೆ ಎಂದು ವರದಿ ತಿಳಿಸಿದೆ. ಬಳಿಕ ಯಾಣಿಕರನ್ನು ಇಳಿಸಿ ವಿಮಾನವನ್ನು ತಪಾಸಣೆ ಮಾಡಲಾಗಿದೆ. ಬೆಂಗಳೂರಿನಿಂದ ಆಗಮಿಸಿದ ಮತ್ತೊಂದು ವಿಮಾನದ ಮೂಲಕ

ಮಂಗಳೂರಿನಲ್ಲಿ ತಪ್ಪಿದ ಭಾರಿ ದುರಂತ…! ➤ ಟೇಕಾಫ್ ಗೆ ಸಿದ್ದವಾಗಿದ್ದ ವಿಮಾನಕ್ಕೆ ಹಕ್ಕಿ ಢಿಕ್ಕಿ Read More »

ಕರಾವಳಿ, ಕ್ರೈಮ್ ನ್ಯೂಸ್
Scroll to Top