News Kadaba

ಪಠ್ಯಪುಸ್ತಕಗಳ ವಿಚಾರದಲ್ಲಿ ಮಾಡಿರುವ ಎಡವಟ್ಟುಗಳನ್ನು ತಿದ್ದುತ್ತೇವೆ➤ಡಾ.ಎಚ್.ಸಿ.ಮಹದೇವಪ್ಪ

(ನ್ಯೂಸ್ ಕಡಬ)newskadaba.com ಬೆಂಗಳೂರು,ಮೇ.30  ‘ಬಿಜೆಪಿ ಸರ್ಕಾರದ ಅವಧಿಯಲ್ಲಿ ಪಠ್ಯಪುಸ್ತಕಗಳ ವಿಚಾರದಲ್ಲಿ ಮಾಡಿರುವ ಎಡವಟ್ಟುಗಳನ್ನು ನಾವು ತಿದ್ದುತ್ತೇವೆ’ ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹೇಳಿದರು. ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಇತಿಹಾಸ ಪುರುಷರನ್ನೇ ಅವರು ಇತಿಹಾಸ ಪುರುಷರಲ್ಲ ಎಂದು ಹೇಳಿದ್ದಾರೆ. ‘ಅವರು ಬರೆದಿದ್ದೇ ಇತಿಹಾಸವಲ್ಲ. ವಾಸ್ತವವನ್ನು ಪಠ್ಯದಲ್ಲಿ ಸೇರಿಸಲಿದ್ದೇವೆ. ಸತ್ಯ ಅಲ್ಲದ್ದನ್ನು ತೆಗೆದು ಹಾಕುತ್ತೇವೆ’ ಎಂದು ಪ್ರತಿಕ್ರಿಯಿಸಿದರು.    

ಪಠ್ಯಪುಸ್ತಕಗಳ ವಿಚಾರದಲ್ಲಿ ಮಾಡಿರುವ ಎಡವಟ್ಟುಗಳನ್ನು ತಿದ್ದುತ್ತೇವೆ➤ಡಾ.ಎಚ್.ಸಿ.ಮಹದೇವಪ್ಪ Read More »

ಕರ್ನಾಟಕ

ಮಹಿಳೆಯರಿಗೆ ಗುಡ್ ನ್ಯೂಸ್‌  ➤ ಉಚಿತ ಪ್ರಯಾಣಕ್ಕೆ ‘ಗ್ರೀನ್‌ ಸಿಗ್ನಲ್‌’ ನೀಡಿದ ರಾಜ್ಯ ಸರ್ಕಾರ

(ನ್ಯೂಸ್ ಕಡಬ)newskadaba.com ಬೆಂಗಳೂರು,ಮೇ,30. ಸರ್ಕಾರಿ ಬಸ್​ಗಳಲ್ಲಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಬಹುದು ಅಂತ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ತಿಳಿಸಿದ್ದಾರೆ. ಅವರು ಇಂದು ಶಾಂತಿನಗರದ ಕೆಎಸ್​ಆರ್​ಟಿಸಿ ಕಚೇರಿಯಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಸಂಬಂಧಪಟ್ಟಂತೆ ನಡೆದ ಸಭೆ ಬಳಿಕ ಮಾಧ್ಯಮಗಳಿಗೆ ಮಾಹಿತಿ ನೀಡಿದರು. ಇದೇ ವೇಳೇ ಅವರು ಪ್ರಯಾಣಳಿಕೆಯಲ್ಲಿ ಎಪಿಎಲ್‌ಬಿಪಿಎಲ್‌ ಅಂತ ಹೇಳಿ ಇರಲಿಲ್ಲ, ಈ ನಿಟ್ಟಿನಲ್ಲಿ ‘ಕರ್ನಾಟಕದಾದ್ಯಂತ ಮಹಿಳೆಯರಿಗೆ ಉಚಿತ ಪ್ರಯಾಣ ಇರಲಿದೆ ಅಂತ ಅವರು ಇದೇ ವೇಳೇ ತಿಳಸಿದಿರು.  

ಮಹಿಳೆಯರಿಗೆ ಗುಡ್ ನ್ಯೂಸ್‌  ➤ ಉಚಿತ ಪ್ರಯಾಣಕ್ಕೆ ‘ಗ್ರೀನ್‌ ಸಿಗ್ನಲ್‌’ ನೀಡಿದ ರಾಜ್ಯ ಸರ್ಕಾರ Read More »

ಕರ್ನಾಟಕ

ಹರಿಯಾಣದಲ್ಲಿ ಭೀಕರ ಹಿಟ್ & ರನ್ ಕೇಸ್.! ➤ ಇಬ್ಬರು ಮಹಿಳೆಯರು ಮೃತ್ಯು

(ನ್ಯೂಸ್ ಕಡಬ)newskadaba.com ಹರಿಯಾಣ,ಮೇ,30. ಹರಿಯಾಣದಲ್ಲಿ ಭೀಕರ ಗುದ್ದೋಡು ಪ್ರಕರಣ ದಾಖಲಾಗಿದೆ. ಯುವಕರು ರೀಲ್ಸ್​ ಮಾಡುವಾಗ ಕಾರನ್ನು ರಭಸವಾಗಿ ಮಹಿಳೆಯರಿಗೆ ಗುದ್ದಿದ್ದು, ಇಬ್ಬರು ಮೃತಪಟ್ಟಿದ್ದಾರೆ. ಯುವಕರ ರೀಲ್ಸ್​ ಮಾಡುವ ಹುಚ್ಚುತನ ಇಬ್ಬರು ಮಹಿಳೆಯರನ್ನು ಬಲಿ ಪಡೆದಿದೆ. ಹರಿಯಾಣದ ಕರ್ನಾಲ್​ ಜಿಲ್ಲೆಯಲ್ಲಿ ವಾಕಿಂಗ್​ ಮಾಡುತ್ತಿದ್ದ ಮೂವರು ಮಹಿಳೆಯರನ್ನು ಕಾರೊಂದು ಹಿಂಬದಿಯಿಂದ ವೇಗವಾಗಿ ಡಿಕ್ಕಿ ಹೊಡೆದು ಪರಾರಿಯಾಗಿದೆ.ಇದರಿಂದ ಇಬ್ಬರು ಮೃತಪಟ್ಟಿದ್ದು, ಮತ್ತೊಬ್ಬ ಮಹಿಳೆ ಗಂಭೀರ ಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಾಗಿದೆ.  

ಹರಿಯಾಣದಲ್ಲಿ ಭೀಕರ ಹಿಟ್ & ರನ್ ಕೇಸ್.! ➤ ಇಬ್ಬರು ಮಹಿಳೆಯರು ಮೃತ್ಯು Read More »

ರಾಷ್ಟ್ರೀಯ ನ್ಯೂಸ್

ದ್ವಿಚಕ್ರ ವಾಹನಗಳ ನಡುವೆ ಭೀಕರ ಅಪಘಾತ ➤ ಸವಾರ ಮೃತ್ಯು

(ನ್ಯೂಸ್ ಕಡಬ)newskadaba.com ಬೆಂಗಳೂರು,ಮೇ.30 ಬ್ಯಾಟರಾಯನಪುರ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ಎರಡು ದ್ವಿಚಕ್ರ ವಾಹನಗಳ ನಡುವೆ ಅಪಘಾತ ಸಂಭವಿಸಿದ್ದು, ಪಿ. ವೆಂಕಟೇಶ್ (62) ಎಂಬುವವರು ಮೃತಪಟ್ಟಿದ್ದಾರೆ. ದೀಪಾಂಜಲಿನಗರ ಮೆಟ್ರೊ ನಿಲ್ದಾಣ ಬಳಿ ಇರುವ ಮೇಲ್ಸೇತುವೆಯಲ್ಲಿ ಎದುರಿಗೆ ಹೊರಟಿದ್ದ ದ್ವಿಚಕ್ರ ವಾಹನಕ್ಕೆ ವೆಂಕಟೇಶ್ ಅವರ ವಾಹನ ಡಿಕ್ಕಿ ಹೊಡೆದಿತ್ತು. ವಾಹನ ಸಮೇತ ಉರುಳಿಬಿದ್ದಿದ್ದ ವೆಂಕಟೇಶ್ ಅವರ ತಲೆಗೆ ತೀವ್ರ ಪೆಟ್ಟು ಬಿದ್ದಿತ್ತು. ಚಿಕಿತ್ಸೆಗಾಗಿ ಅವರನ್ನು ನಿಮ್ಹಾನ್ಸ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಆಸ್ಪತ್ರೆಯಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದರು.ಅಪಘಾತ ಸಂಬಂಧ ಪ್ರಕರಣ

ದ್ವಿಚಕ್ರ ವಾಹನಗಳ ನಡುವೆ ಭೀಕರ ಅಪಘಾತ ➤ ಸವಾರ ಮೃತ್ಯು Read More »

ಕರ್ನಾಟಕ

ಕಾಂಗ್ರೆಸ್ ಕಾರ್ಯಕರ್ತನ ಹತ್ಯೆ ಪ್ರಕರಣ➤7 ಆರೋಪಿಗಳ ಅರೆಸ್ಟ್

(ನ್ಯೂಸ್ ಕಡಬ)newskadaba.com ಬೆಂಗಳೂರು,ಮೇ.30 ಕಾಂಗ್ರೆಸ್ ಕಾರ್ಯಕರ್ತ ರವಿ ಹತ್ಯೆ ಪ್ರಕರಣ ಸಂಬಂಧ 7 ಮಂದಿ ಆರೋಪಿಗಳನ್ನು ನಂದಿನಿಲೇಔಟ್ ಠಾಣಾ ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ. ಬಂಧಿತರನ್ನು ಲಗ್ಗೆರೆಯ ಪ್ರೇಮನಗರದ ಮಂಜುನಾಥ್ (42), ನ್ಯೂ ರಿಂಗ್ ರಸ್ತೆಯ ನಾಗರಾಜ್(38), ಗೋಪಾಲ್ (35), ಕಿರಣ್ ಕುಮಾರ್ (29), ಚೌಡೇಶ್ವರಿ ನಗರದ ಮಣಿಕಂಠನ್(23), ಕಾರ್ತಿಕ್ (34) ಹಾಗೂ ಬಾಬು (35) ಎಂದು ಗುರ್ತಿಸಲಾಗಿದೆ.    

ಕಾಂಗ್ರೆಸ್ ಕಾರ್ಯಕರ್ತನ ಹತ್ಯೆ ಪ್ರಕರಣ➤7 ಆರೋಪಿಗಳ ಅರೆಸ್ಟ್ Read More »

ಕರ್ನಾಟಕ

ರಷ್ಯಾ ರಾಜಧಾನಿ ಮಾಸ್ಕೋ ನಗರದ ಮೇಲೆ ಡ್ರೋನ್ ದಾಳಿ.!

(ನ್ಯೂಸ್ ಕಡಬ)newskadaba.com ನವದೆಹಲಿ,ಮೇ.30 ರಷ್ಯಾ ರಾಜಧಾನಿ ಮಾಸ್ಕೋ ನಗರದ ಮೇಲೆ ಡ್ರೋನ್ ದಾಳಿ ನಡೆದಿದೆ.ಸರ್ಕಾರದ ಕೆಲವು ಕಟ್ಟಡಗಳಿಗೆ ಅಲ್ಪ ಪ್ರಮಾಣದ ಹಾನಿಯಾಗಿದೆ ಎಂದು ತಿಳಿದು ಬಂದಿದೆ. ಜನರಿಗೇನೂ ಅಂಥ ಗಂಭೀರ ಗಾಯಗಳಾಗಿಲ್ಲ. ಕೆಲವು ನಿವಾಸಿಗಳನ್ನು ಸುರಕ್ಷಿತ ಸ್ಥಳಕ್ಕೆ ರವಾನಿಸಲಾಗಿದೆ. ವಿಶೇಷವಾಗಿ ಮಾಸ್ಕೋ ನಗರದ ಪ್ರೊಫೆಸೊಯುಜ್ನಾಯಾ ಸ್ಟ್ರೀಟ್‌ನಲ್ಲಿರುವ ಜನರು ಸುರಕ್ಷಿತ ಸ್ಥಳಕ್ಕೆ ಕಳುಹಿಸಲಾಗಿದೆ ಎಂದು ರಷ್ಯಾದ ಆರ್‌ಐಎ ನ್ಯೂಸ್ ಏಜೆನ್ಸಿ ಸುದ್ದಿಯನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.    

ರಷ್ಯಾ ರಾಜಧಾನಿ ಮಾಸ್ಕೋ ನಗರದ ಮೇಲೆ ಡ್ರೋನ್ ದಾಳಿ.! Read More »

ರಾಷ್ಟ್ರೀಯ ನ್ಯೂಸ್

ಗಾಳಿ ರಭಸಕ್ಕೆ ಕುಸಿದು ಬಿದ್ದ ಮೊಬೈಲ್​ ಟವರ್

(ನ್ಯೂಸ್ ಕಡಬ)newskadaba.com ರಾಜಸ್ಥಾನ, ಮೇ, 30. ಬಾನೆತ್ತರಕ್ಕೆ ನಿರ್ಮಿಸಿದ್ದ ಬೃಹತ್ ಮೊಬೈಲ್ ಟವರ್  ಗಾಳಿ ರಭಸಕ್ಕೆ ಉರುಳಿ ಬಿದ್ದ ಆಶ್ಚರ್ಯಕಾರಿ ಘಟನೆ ರಾಜಸ್ಥಾನದ ನಗೌರ್‌ನಲ್ಲಿ ನಡೆದಿದೆ. ಸಾಮಾಜಿಕ ಜಾಲತಾಣದಲ್ಲಿ 16 ಸೆಕೆಂಡ್‌ಗಳ ವೀಡಿಯೊ ಕ್ಲಿಪ್ ಮೊಬೈಲ್ ಟವರ್ ಎತ್ತರದಲ್ಲಿ ನಿಂತಿದೆ, ನಂತರ ಅದು ರಣಬೀಕರ ಚಂಡಮಾರುತದ ಗಾಳಿಗೆ ಅದು ಹೇಗೆ ಬೀಳುತ್ತದೆ ಎಂದು ಈ ವೀಡಿಯೊದಲ್ಲಿ ತೋರಿಸಲಾಗಿದೆ. ಈ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ವಿಡಿಯೋಗಳನ್ನು ನೋಡಿದ ಜನರು ಬೇರೆ ಬೇರೆ ರೀತಿಗಳಲ್ಲಿ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ ಎಂದು

ಗಾಳಿ ರಭಸಕ್ಕೆ ಕುಸಿದು ಬಿದ್ದ ಮೊಬೈಲ್​ ಟವರ್ Read More »

ರಾಷ್ಟ್ರೀಯ ನ್ಯೂಸ್

ಅಕಾಲಿಕ ಗಾಳಿ, ಆಲಿಕಲ್ಲು ಮಳೆಗೆ ವ್ಯಾಪಕ ಹಾನಿ.!➤9 ಮಂದಿ ಮೃತ್ಯು

(ನ್ಯೂಸ್ ಕಡಬ)newskadaba.com ಅಹ್ಮದಾಬಾದ್,ಮೇ.30 ಅಕಾಲಿಕ ಗಾಳಿ ಮತ್ತು ಆಲಿಕಲ್ಲು ಮಳೆ ಗುಜರಾತ್ ಮತ್ತು ರಾಜಸ್ಥಾನದಲ್ಲಿ ವ್ಯಾಪಕ ಹಾನಿಯನ್ನು ಉಂಟು ಮಾಡಿದ್ದು, ವಿವಿಧ ಮಳೆ ಸಂಬಂಧಿ ಅನಾಹುತಗಳಿಂದ ಒಂಬತ್ತು ಮಂದಿ ಮೃತಪಟ್ಟಿದ್ದಾರೆ ಎಂದು ಗುಜರಾತ್ ಸರ್ಕಾರ ಪ್ರಕಟಿಸಿದೆ. ಅಹ್ಮದಾಬಾದ್ ಸೇರಿದಂತೆ ಗುಜರಾತ್‌ನ ವಿವಿಧ ಭಾಗಗಳಲ್ಲಿ ರಭಸದ ಗಾಳಿ ಮುಂದುವರಿದಿದೆ. ಇದುವರೆಗೆ ರಾಜ್ಯದಲ್ಲಿ 34.7 ಮಿಲಿಮೀಟರ್ ಮಳೆ ಬಿದ್ದಿದೆ ಎಂದು ಹವಾಮಾನ ಇಲಾಖೆ ಹೇಳಿದೆ.      

ಅಕಾಲಿಕ ಗಾಳಿ, ಆಲಿಕಲ್ಲು ಮಳೆಗೆ ವ್ಯಾಪಕ ಹಾನಿ.!➤9 ಮಂದಿ ಮೃತ್ಯು Read More »

ರಾಷ್ಟ್ರೀಯ ನ್ಯೂಸ್

ಪುತ್ತೂರು: ಪೊಲೀಸ್ ದೌರ್ಜನ್ಯಕ್ಕೊಳಗಾದ ಯುವಕರು‌ ಆಸ್ಪತ್ರೆಯಿಂದ ಡಿಸ್ಚಾರ್ಜ್

(ನ್ಯೂಸ್ ಕಡಬ)newskadaba.com ಪುತ್ತೂರು, ಮೇ.30. ಬ್ಯಾನರ್ ವಿಚಾರದಲ್ಲಿ‌ ಪೊಲೀಸರಿಂದ ದೌರ್ಜನ್ಯಕ್ಕೊಳಗಾದ ಯುವಕರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದರು ಎನ್ನಲಾಗಿದೆ. ಇದೇ ಸಂದರ್ಭ ಹರ್ಷ ವ್ಯಕ್ತಪಡಿಸಿದ ಪುರುಷರಕಟ್ಟೆ ಹಿಂದೂ ಜಾಗರಣಾ ವೇದಿಕೆ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಕಳೆದ ಕೆಲ ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಯುವಕರನ್ನು, ಹಲವು ಮುಖಂಡರು ಬಂದು ಆರೋಗ್ಯ ವಿಚಾರಿಸಿದ್ದರು ಎಂದು ತಿಳಿದುಬಂದಿದೆ.  

ಪುತ್ತೂರು: ಪೊಲೀಸ್ ದೌರ್ಜನ್ಯಕ್ಕೊಳಗಾದ ಯುವಕರು‌ ಆಸ್ಪತ್ರೆಯಿಂದ ಡಿಸ್ಚಾರ್ಜ್ Read More »

ಕರಾವಳಿ

ಪ್ರಿಯತಮನ ಮೇಲೆ ಬಿಸಿ ನೀರು ಎರಚಿದ ಮಹಿಳೆ.!➤ದೂರು ದಾಖಲು

(ನ್ಯೂಸ್ ಕಡಬ)newskadaba.com  ಕಲಬುರಗಿ,ಮೇ.30 ಮದುವೆಯಾಗಲು ನಿರಾಕರಿಸಿದ್ದಕ್ಕೆ ಪ್ರಿಯತಮನ ಮೇಲೆ ಮಹಿಳೆ ಬಿಸಿ ನೀರು ಎರಚಿದ ಘಟನೆ ಕಲಬುರಗಿಯಲ್ಲಿ ನಡೆದಿದೆ. ಗಾಯಗೊಂಡವರನ್ನು ವಿಜಯ್‌ ಕುಮಾರ್‌ ಎಂದು ಗುರುತಿಸಲಾಗಿದೆ.  ವಿಜಯ್‌ ಕುಮಾರ್‌ ಬಟ್ಟೆ ಮಾರಾಟ ಮಳಿಗೆಯಲ್ಲಿ ಕೆಲಸ ಮಾಡುತ್ತಿದ್ದ. ಆತನಿಗೆ ತನ್ನದೇ ಜಿಲ್ಲೆಯ ಮಹಿಳೆಯೊಬ್ಬಳು ಪರಿಚಯವಾಗಿದ್ದಳು. ಇಬ್ಬರ ನಡುವೆ ಉತ್ತಮ ಸ್ನೇಹವಿತ್ತು. ಆದರೆ, ಆಕೆಗೆ ವಿವಾಹವಾಗಿತ್ತು. ಆದರೂ ಅವಳು ಈತನನ್ನು ಪ್ರೀತಿಸುತ್ತಿದ್ದಳು ಮತ್ತು ಮದುವೆಯಾಗುವಂತೆ ಒತ್ತಾಯಿಸುತ್ತಿದ್ದಳು ಎಂದು ಮೂಲಗಳು ತಿಳಿಸಿವೆ. ವಿಜಯ್‌ ಕುಮಾರ್‌ ಬೇರೆ ಯುವತಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದ,ವಿಷಯ ತಿಳಿದ

ಪ್ರಿಯತಮನ ಮೇಲೆ ಬಿಸಿ ನೀರು ಎರಚಿದ ಮಹಿಳೆ.!➤ದೂರು ದಾಖಲು Read More »

ಕರ್ನಾಟಕ
Scroll to Top