News Kadaba

ಕಲ್ಲಡ್ಕ ಡಾ| ಪ್ರಭಾಕರ್ ಹೆಸರಲ್ಲಿ ನಕಲಿ ಖಾತೆ – ದೂರು ದಾಖಲು

(ನ್ಯೂಸ್ ಕಡಬ)newskadaba.com ಬಂಟ್ವಾಳ, ಆ.03. RSS ಮುಖಂಡ ಕಲ್ಲಡ್ಕ ಡಾ| ಪ್ರಭಾಕರ್ ಭಟ್ ಹೆಸರಲ್ಲಿ ನಕಲಿ ಖಾತೆ ತೆರೆದು ಆಕ್ಷೇಪಾರ್ಹ ಬರಹಗಳನ್ನು ಪೋಸ್ಟ್ ಮಾಡಿದ  ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಮಂಗಳೂರು ಸೈಬರ್ ಕ್ರೈಮ್ ಪೋಲೀಸ್ ಠಾಣೆಗೆ ದೂರು ನೀಡಲಾಗಿದೆ. ಕಲ್ಲಡ್ಕ ಡಾ ಭಟ್ ಅವರ ಪೇಸ್ ಬುಕ್ ಖಾತೆಯಾಗಲಿ, ಇನ್ನಿತರ ಯಾವುದೇ ಸಾಮಾಜಿಕ ಜಾಲತಾಣದಲ್ಲಿ ಖಾತೆಯನ್ನು ಹೊಂದಿರುವುದಿಲ್ಲ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ. ಅಲ್ಲದೆ ಈ ಖಾತೆಯ ಮೂಲಕ ಸಮಾಜದಲ್ಲಿ ಅಶಾಂತಿ ಹಬ್ಬಿಸುವ ಪ್ರಯತ್ನ ಮತ್ತು […]

ಕಲ್ಲಡ್ಕ ಡಾ| ಪ್ರಭಾಕರ್ ಹೆಸರಲ್ಲಿ ನಕಲಿ ಖಾತೆ – ದೂರು ದಾಖಲು Read More »

ಕರಾವಳಿ, ಕ್ರೈಮ್ ನ್ಯೂಸ್

ಚಾರ್ಮಾಡಿ ಘಾಟಿ ಜಲಪಾತದ ಬಳಿ ಪ್ರವಾಸಿಗರ ಹುಚ್ಚಾಟ – ಪೊಲೀಸ್ ರ ನಿಯೋಜನೆ

(ನ್ಯೂಸ್ ಕಡಬ)newskadaba.com ಮೂಡಿಗೆರೆ, ಆ.03. ಕುಂದಾಪುರದ ಅರಶಿನಗುಂಡಿ ಜಲಪಾತದಲ್ಲಿ ರೀಲ್ಸ್ ಮಾಡಲು ಹೋಗಿ ಜಲಪಾತಕ್ಕೆ ಬಿದ್ದು ದಾವಣಗೆರೆಯ ಶರತ್ ಮೃತಪಟ್ಟ ಘಟನೆ ನಡೆದ ಬಳಿಕವೂ ಪ್ರವಾಸಿಗರು ಜಲಪಾತಗಳಲ್ಲಿ ಅಪಾಯಕಾರಿಯಾಗಿ ಸೆಲ್ಫಿ, ರೀಲ್ಸ್ ಮಾಡುವುದು ಕಂಡುಬಂದಿದೆ ಎನ್ನಲಾಗಿದೆ. ಅಲ್ಲದೆ ಚಾರ್ಮಾಡಿ ಘಾಟಿಯಲ್ಲಿ ಇರುವ ಜಲಪಾತಗಳಲ್ಲಿ ಪ್ರವಾಸಿಗರು ಹುಚ್ಚಾಟ ನಡೆಸಿ ಸೆಲ್ಫಿ ತೆಗೆದುಕೊಳ್ಳುವ ಪ್ರಕರಣಗಳು ಹೆಚ್ಚಾಗಿದ್ದು, ಇದಕ್ಕೆಲ್ಲಾ ಕಡಿವಾಣ ಹಾಕಲು ಇದೀಗ ಜಲಪಾತದ ಸ್ಥಳಗಳಲ್ಲಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಚಾರ್ಮಾಡಿ ಜಲಪಾತಗಳ ಬಳಿ ರಸ್ತೆ ಮಧ್ಯೆ ಗಾಡಿ ನಿಲ್ಲಿಸಿಕೊಂಡು ಕುಣಿಯುತ್ತಿದ್ದ

ಚಾರ್ಮಾಡಿ ಘಾಟಿ ಜಲಪಾತದ ಬಳಿ ಪ್ರವಾಸಿಗರ ಹುಚ್ಚಾಟ – ಪೊಲೀಸ್ ರ ನಿಯೋಜನೆ Read More »

ಕರಾವಳಿ, ಕರ್ನಾಟಕ

ಶಾಲಾ ವಿದ್ಯಾರ್ಥಿಗೆ ಸೀನಿಯರ್ ವಿದ್ಯಾರ್ಥಿಗಳ ತಂಡದಿಂದ ಹಲ್ಲೆ..!

(ನ್ಯೂಸ್ ಕಡಬ)newskadaba.com ಬೇಕೂರು, ಆ.03. ಶಾಲಾ ವಿದ್ಯಾರ್ಥಿಯ ಮೇಲೆ ಸೀನಿಯರ್ ವಿದ್ಯಾರ್ಥಿಗಳ ತಂಡವೊಂದು ರ‍್ಯಾಗಿಂಗ್ ನಡೆಸಿದ ಆರೋಪ ಕೇಳಿಬಂದಿದೆ. ಗಾಯಗೊಂಡ ಪ್ಲಸ್ ವನ್‌ ವಿದ್ಯಾರ್ಥಿಯನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಂಜೆ ಶಾಲೆ ಬಿಟ್ಟ ಬಳಿಕ ಸಮೀಪದ ಬಸ್‌ ತಂಗುದಾಣದಲ್ಲಿ ನಿಂತಿದ್ದಾಗ ಅಲ್ಲಿಗೆ ಬಂದ ಅದೇ ಶಾಲೆಯ ಪ್ಲಸ್‌ ಟು ವಿದ್ಯಾರ್ಥಿಗಳ ತಂಡವೊಂದು ಶೂ ಧರಿಸಿರುವುದಕ್ಕೆ ಹಲ್ಲೆ ಮಾಡಿದೆ ಎಂದು ಆರೋಪಿಸಲಾಗಿದೆ. ವಿದ್ಯಾರ್ಥಿಗೆ ಹಲ್ಲೆಯಿಂದ ಕಿವಿ ತಮ್ಮಟೆಗೆ ಗಂಭೀರ ಗಾಯಗೊಂಡ ಹಿನ್ನೆಲೆಯಲ್ಲಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ.

ಶಾಲಾ ವಿದ್ಯಾರ್ಥಿಗೆ ಸೀನಿಯರ್ ವಿದ್ಯಾರ್ಥಿಗಳ ತಂಡದಿಂದ ಹಲ್ಲೆ..! Read More »

ಕರಾವಳಿ, ಕ್ರೈಮ್ ನ್ಯೂಸ್

ಯುಎಇಯಲ್ಲಿ 45ಕೋಟಿ ಬಹುಮಾನ ಗೆದ್ದ ಭಾರತೀಯ..!

(ನ್ಯೂಸ್ ಕಡಬ)newskadaba.com ಮುಂಬೈ, ಆ.03. ಯುಎಇ ನಲ್ಲಿ ಮುಂಬೈ ಮೂಲದ ವ್ಯಕ್ತಿಯೋರ್ವ ಬರೊಬ್ಬರಿ 45 ಕೋಟಿ ರೂ.ಬಹುಮಾನ ಗೆದ್ದಿದ್ದು, ಅದೃಷ್ಟವೇ ಬದಲಾಗಿದೆ ಎಂದು ವರದಿಯಾಗಿದೆ. ಸಚಿನ್‌ (47) ಎಂಬುವವರು 25 ವರ್ಷದಿಂದ ದುಬೈನಲ್ಲಿ ನೆಲೆಸಿದ್ದು, ಸಚಿನ್‌ ಸಿಎಡಿ ತಂತ್ರಜ್ಞರಾಗಿದ್ದು 139ನೇ ಮಾಜೂಜ್‌ ಡ್ರಾ ಬಹುಮಾನ ಗೆದ್ದಿದ್ದಾರೆ ಎನ್ನಲಾಗಿದೆ. 45 ಕೋಟಿ ಬಹುಮಾನ ಗೆದ್ದ ಬಳಿಕ ಮಾತನಾಡಿದ ಸಚಿನ್, ಪ್ರತಿ ವಾರ ಮಜೂಜ್‌ನಲ್ಲಿ ಭಾಗವಹಿಸುತ್ತಿದ್ದೆ. ಒಂದು ದಿನ ಗೆಲುವಿನ ನಿರೀಕ್ಷೆ ಇತ್ತು. ಈ ಗೆಲುವು ನನ್ನ ಕುಟುಂಬದ ಜೀವನವನ್ನು

ಯುಎಇಯಲ್ಲಿ 45ಕೋಟಿ ಬಹುಮಾನ ಗೆದ್ದ ಭಾರತೀಯ..! Read More »

ರಾಷ್ಟ್ರೀಯ ನ್ಯೂಸ್

ಆನ್ಲೈನ್ ನಲ್ಲಿ 5.90 ಲಕ್ಷ ವಂಚನೆ..! – ದೂರು ದಾಖಲು

(ನ್ಯೂಸ್ ಕಡಬ)newskadaba.com ಮಂಗಳೂರು, ಆ.03. ಯನೈಟೆಡ್ ಕಿಂಗ್‌ಡಂನಿಂದ ಉಡುಗೊರೆ ಕಳುಹಿಸುವುದಾಗಿ ಹೇಳಿ ಸುಮಾರು 5.90 ಲಕ್ಷ ರೂ. ಪಡೆದು ವಂಚಿಸಿರುವ ಬಗ್ಗೆ ಮಂಗಳೂರು ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಾಟ್ಸ್ ಆ್ಯಪ್ ಮೂಲಕ ಕರೆ ಮಾಡಿದ ಅಪರಿಚಿತ ವ್ಯಕ್ತಿ ತನ್ನನ್ನು ಡಾ. ಫ್ರಾಕ್ಲಿನ್ ಪ್ಯಾಟ್ರಿಕ್ ಎಂದು ಪರಿಚಯಿಸಿಕೊಂಡು ಯುನೈಟೆಡ್ಕಿಂ ಗ್‌ಡಮ್‌ನಲ್ಲಿ ವೈದ್ಯನಾಗಿದ್ದೇನೆ ಎಂದು ಹೇಳಿಕೊಂಡಿದ್ದು, ಕೆಲವು ದಿನಗಳ ಬಳಿಕ ಆತ ತನ್ನ ಮಗಳ ಬರ್ತ್‌ಡೇಗೆ ವಿದೇಶಿ ಕರೆನ್ಸಿ, ಚಿನ್ನಾಭರಣ ಮತ್ತು ಇತರ ವಸ್ತುಗಳನ್ನು ಉಡುಗೊರೆಯಾಗಿ ಕಳುಹಿಸುವುದಾಗಿ ತಿಳಿಸಿದ್ದ

ಆನ್ಲೈನ್ ನಲ್ಲಿ 5.90 ಲಕ್ಷ ವಂಚನೆ..! – ದೂರು ದಾಖಲು Read More »

ಕರಾವಳಿ, ಕ್ರೈಮ್ ನ್ಯೂಸ್

ಬೆಳ್ತಂಗಡಿ: ನೈತಿಕ ಪೊಲೀಸ್ ಗಿರಿ – ಆಟೋ ಚಾಲಕನ ಮೇಲೆ ಹಲ್ಲೆ

(ನ್ಯೂಸ್ ಕಡಬ)newskadaba.com ಬೆಳ್ತಂಗಡಿ, ಆ.03. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೈತಿಕ ಪೊಲೀಸ್ ಗಿರಿ ಘಟನೆಗಳು ಮುಂದುವರಿದಿದ್ದು, ರಾತ್ರಿ ವೇಳೆ ಧರ್ಮಸ್ಥಳ ದ್ವಾರದ ಬಳಿಯ ಬಸ್ ನಿಲ್ದಾಣದಲ್ಲಿ ಅನೈತಿಕ ಪೊಲೀಸ್ ಗಿರಿ ಘಟನೆ ನಡೆದಿದೆ ಎನ್ನಲಾಗಿದೆ. ಆಟೋದಲ್ಲಿ ಪ್ರಯಾಣಿಕರನ್ನು ಕೂರಿಸಿಕೊಂಡು ಹೋಗುತ್ತಿದ್ದಾಗ ಅಡ್ಡಗಟ್ಟಿದ ಸಂಘ ಪರಿವಾರದ ಕಾರ್ಯಕರ್ತರು ಆಟೋ ಚಾಲಕನ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಹಲ್ಲೆಗೊಳಗಾದ ಆಟೋ ಚಾಲಕನನ್ನು ಉಜಿರೆ ನಿವಾಸಿ ಮೊಹಮ್ಮದ್ ಆಶಿಕ್ (22) ಎಂದು ಗುರುತಿಸಲಾಗಿದೆ. ಈ ಕುರಿತು ‌ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ

ಬೆಳ್ತಂಗಡಿ: ನೈತಿಕ ಪೊಲೀಸ್ ಗಿರಿ – ಆಟೋ ಚಾಲಕನ ಮೇಲೆ ಹಲ್ಲೆ Read More »

ಕರಾವಳಿ

ಗೃಹ ಲಕ್ಷ್ಮಿ ಯೋಜನೆ ಅಡಿ ಆ.15 ರಿಂದ 1.30 ಕೋಟಿ ಮಹಿಳೆಯರಿಗೆ 2,000 ರೂ ಜಮಾ

(ನ್ಯೂಸ್ ಕಡಬ)newskadaba.com ಬೆಂಗಳೂರು, ಆ.03. ಕರ್ನಾಟಕ ಸರ್ಕಾರವು ಆ. 15 ರಿಂದ 1.30 ಕೋಟಿ ಮಹಿಳೆಯರಿಗೆ ತಿಂಗಳಿಗೆ 2,000 ರೂ.ಗಳನ್ನು ವರ್ಗಾಯಿಸಲು ಪ್ರಾರಂಭಿಸಲಿದೆ ಎಂದು ಕಾಂಗ್ರೆಸ್ ಸಂಸದ ರಣದೀಪ್ ಸುರ್ಜೆವಾಲಾ ಹೇಳಿದ್ದಾರೆ. ಆ. 15 ರಿಂದ 20 ರ ನಡುವೆ ಹಣವನ್ನು ನೇರವಾಗಿ ಮಹಿಳೆಯರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಗುವುದು ಎಂದು ತಿಳಿಸಿದ್ದಾರೆ. ಗೃಹಲಕ್ಷ್ಮಿ ಯೋಜನೆಯಡಿ ಪ್ರತಿ ಕುಟುಂಬದ ಮಹಿಳಾ ಮುಖ್ಯಸ್ಥರಿಗೆ ಮಾಸಿಕ 2,000 ರೂ.ಗಳ ನೆರವು ನೀಡುವುದಾಗಿ ಕರ್ನಾಟಕ ಕಾಂಗ್ರೆಸ್ ಭರವಸೆ ನೀಡಿತ್ತು. ಇದು ವಿಧಾನಸಭಾ ಚುನಾವಣೆಗೆ

ಗೃಹ ಲಕ್ಷ್ಮಿ ಯೋಜನೆ ಅಡಿ ಆ.15 ರಿಂದ 1.30 ಕೋಟಿ ಮಹಿಳೆಯರಿಗೆ 2,000 ರೂ ಜಮಾ Read More »

ಕರ್ನಾಟಕ

ಕಾಣಿಕೆ ಡಬ್ಬಿಯನ್ನೇ ಕಳ್ಳತನಗೈದ ಖದೀಮರು….!

(ನ್ಯೂಸ್ ಕಡಬ)newskadaba.com ಬೆಳ್ತಂಗಡಿ, ಆ.03. ನೆರಿಯ ಗ್ರಾಮದ ಗಂಡಿಬಾಗಿಲು ಸಂತ ಥೋಮಸರ ದೇವಾಲಯ ಮತ್ತು ಸಂತ ಮರಿಯಮ್ಮ ಗ್ರೋಟ್ಟೋದ ಕಾಣಿಕೆ ಡಬ್ಬಿಯನ್ನು ಕಳ್ಳರು ಕಳ್ಳತನಗೈದಿರುವ ಘಟನೆ ಬೆಳ್ತಂಗಡಿಯಲ್ಲಿ ವರದಿಯಾಗಿದೆ. ಚರ್ಚ್ ನ ಮುಂಭಾಗದಲ್ಲಿ ಕಾಣಿಕೆ ಡಬ್ಬಿಯ ಬೀಗ ಮುರಿಯಲಾಗಿದ್ದು ಅದರಲ್ಲಿದ್ದ ನಗದನ್ನು ಅಪಹರಿಸಲಾಗಿದೆ. ಕಾಣಿಕೆ ಡಬ್ಬಿಗೆ ಹಾನಿಯಾಗಿದೆ. ಇಲ್ಲಿಂದ ಅಣತಿ ದೂರದ ಆಲಂಗಾಯಿ ತಿರುವ ರಸ್ತೆ ಬಳಿ ಇರುವ ಸಂತ ಮರಿಯಮ್ಮರ ಗ್ರೋಟ್ಟೋ ಬಳಿಯ ಕಾಣಿಕೆ ಡಬ್ಬಿಯನ್ನೇ ಕಳ್ಳರು ಅಪಹರಿಸಿದ್ದಾರೆ.  

ಕಾಣಿಕೆ ಡಬ್ಬಿಯನ್ನೇ ಕಳ್ಳತನಗೈದ ಖದೀಮರು….! Read More »

ಕರಾವಳಿ, ಕ್ರೈಮ್ ನ್ಯೂಸ್

ಮಾದಕ ವಸ್ತು ಎಂಡಿಎಂಎ ಮಾರಾಟ….! – ಮೂವರು ಆರೋಪಿಗಳು ಅರೆಸ್ಟ್

(ನ್ಯೂಸ್ ಕಡಬ)newskadaba.com ಮಂಗಳೂರು, ಆ.03. ಡ್ರಗ್ಸ್ ಮುಕ್ತ ಮಂಗಳೂರು ನಗರ ನಿರ್ಮಿಸುವ ನಿಟ್ಟಿನಲ್ಲಿ ಮಂಗಳೂರು ಸಿಸಿಬಿ ಪೊಲೀಸರು ನಡೆಸಿದ ಕಾರ್ಯಾಚರಣೆ ಮಾದಕ ವಸ್ತು ಎಂಡಿಎಂಎ ಮಾರಾಟ ಮಾಡುತ್ತಿದ್ದ ಮೂವರು ಡ್ರಗ್ಸ್ ಪೆಡ್ಲರ್ ಗಳನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಮೂಲತಃ ಸಜಿಪ ಉಳ್ಳಾಲದ ಹಫೀಝ್ ಯಾನೆ ಅಪ್ಪಿ(35), ಸಜಿಪ ಮುನ್ನೂರಿನ ಅಮೀರ್ ಯಾನೆ ಅಮ್ಮಿ(34) ಎಂದು ಗುರುತಿಸಲಾಗಿದೆ. ತಲಪಾಡಿ-ದೇವಿಪುರ ರಸ್ತೆಯಲ್ಲಿನ ತಚ್ಚಾಣಿ ಪರಸರದಲ್ಲಿ ಕಾರಿನಲ್ಲಿ ಮೂವರು ಮಾದಕ ವಸ್ತುವಾದ ಎಂಡಿಎಂಎ ಯನ್ನು ಬೆಂಗಳೂರಿನಿಂದ ಖರೀದಿಸಿಕೊಂಡು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿರುವ

ಮಾದಕ ವಸ್ತು ಎಂಡಿಎಂಎ ಮಾರಾಟ….! – ಮೂವರು ಆರೋಪಿಗಳು ಅರೆಸ್ಟ್ Read More »

ಕರಾವಳಿ, ಕ್ರೈಮ್ ನ್ಯೂಸ್

ಸಂಶಯಾಸ್ಪದ ರೀತಿಯಲ್ಲಿದ್ದ ಯುವಕ ಅರೆಸ್ಟ್.!

(ನ್ಯೂಸ್ ಕಡಬ)newskadaba.com ಮಂಗಳೂರು, ಆ.03. ಸಂಶಯಾಸ್ಪದ ರೀತಿಯಲ್ಲಿದ್ದ ಯುವಕನನ್ನು ಕದ್ರಿ ಪೊಲೀಸರು ಬಂಧಿಸಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ. ಪೊಲೀಸರು ರೌಂಡ್ಸ್ ಕರ್ತವ್ಯದಲ್ಲಿದ್ದಾಗ ಕುಲಶೇಖರದ ಕಿರಣ್ ಎಂಟರ್‌ಪ್ರೈಸಸ್ ಕಟ್ಟಡದ ಬಳಿ ಸಂಶಯಾಸ್ಪದ ರೀತಿಯಲ್ಲಿದ್ದ ಯುವಕನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ. ಬಂಧಿತನನ್ನು ಶಿವನಗರದ ದೀಪಕ್ (27) ಎಂಬುದಾಗಿ ತಿಳಿದು ಬಂದಿದೆ. ಈತ ಪೊಲೀಸರು ಪ್ರಶ್ನಿಸಿದಾಗ ಸಮರ್ಪಕ ಉತ್ತರ ನೀಡದ ಕಾರಣ ಕೃತ್ಯ ನಡೆಸಲು ಹೊಂಚು ಹಾಕುತ್ತಿರುವ ಬಗ್ಗೆ ಬಲವಾದ ಸಂಶಯ ಉಂಟಾದ ಹಿನ್ನೆಲೆಯಲ್ಲಿ ಪೊಲೀಸರು ಆತನನ್ನು ಬಂಧಿಸಿದ್ದಾರೆ.

ಸಂಶಯಾಸ್ಪದ ರೀತಿಯಲ್ಲಿದ್ದ ಯುವಕ ಅರೆಸ್ಟ್.! Read More »

ಕರಾವಳಿ, ಕ್ರೈಮ್ ನ್ಯೂಸ್
Scroll to Top