News Kadaba

ವಾರಸುದಾರರಿಲ್ಲದ ನಾಲ್ಕು ಶವಗಳ ಅಂತ್ಯಸಂಸ್ಕಾರ

(ನ್ಯೂಸ್ ಕಡಬ)newskadaba.com ಉಡುಪಿ, ಆ.10. ಅಜ್ಜರಕಾಡು ಜಿಲ್ಲಾಸ್ಪತ್ರೆಯ ಶವಗಾರದಲ್ಲಿ ರಕ್ಷಿಸಿಡಲಾಗಿದ್ದ, ನಾಲ್ಕು ವಾರಸುದಾರರಿಲ್ಲದ ಶವಗಳ ಅಂತ್ಯಸಂಸ್ಕಾರವನ್ನು ನಗರ ಪೊಲೀಸ್ ಠಾಣೆ ಮತ್ತು ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಕಾರ್ಯಕರ್ತರು ಸೇರಿಕೊಂಡು ಬೀಡಿನಗುಡ್ಡೆಯ ಹಿಂದುರುದ್ರ ಭೂಮಿಯಲ್ಲಿ ಗೌರಯುತವಾಗಿ ನಡೆಸಿದರು. ಎ.ಎಸ್.ಐ ಜಯಕರ್, ಹೆಡ್ ಕಾನ್ಸ್ಟೇಬಲ್ ಹರೀಶ್ ನಾಯ್ಕ್, ತನಿಖಾ ಸಹಾಯಕ ಕಾನೂನು ಪ್ರಕ್ರಿಯೆ ನಡೆಸಿದ್ದು, ಮೃತರ ವಾರಸುದಾರರ ಬರುವಿಕೆಗಾಗಿ ಮಾಧ್ಯಮ ಪ್ರಕಟಣೆ ನೀಡಲಾಗಿತ್ತು. ಕಾಯುವಿಕೆಯ ಕಾಲಮಿತಿ ಕಳೆದರೂ ಮೃತರ ಸಂಬಂಧಿಕರು ಇಲಾಖೆಯನ್ನು ಸಂಪರ್ಕಿಸಿರಲ್ಲ. ನಾಗರಿಕ ಸಮಿತಿಯ ಸಂಚಾಲಕ ನಿತ್ಯಾನಂದ […]

ವಾರಸುದಾರರಿಲ್ಲದ ನಾಲ್ಕು ಶವಗಳ ಅಂತ್ಯಸಂಸ್ಕಾರ Read More »

ಕರಾವಳಿ

ಯುವತಿಯ ಮಾನಹಾನಿಯಾಗುವಂತೆ ವರ್ತಿಸಿದ ಆರೋಪಿಗೆ ಶಿಕ್ಷೆ

(ನ್ಯೂಸ್ ಕಡಬ)newskadaba.com ಉಡುಪಿ, ಆ.10. ಯುವತಿಯ ಮಾನ ಹಾನಿಯಾಗುವಂತೆ ವರ್ತಿಸಿದ್ದ ಆರೋಪಿಗೆ 3 ವರ್ಷ ಕಾರಾಗೃಹ ವಾಸ ಶಿಕ್ಷೆ ಮತ್ತು 10,000 ರೂ. ದಂಡ ವಿಧಿಸಿ, 1ನೇ ಹೆಚ್ಚುವರಿ ಸಿ.ಜೆ ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯದ ನ್ಯಾಯಾಧೀಶ ಶ್ಯಾಮ್ ಪ್ರಕಾಶ್ ಆದೇಶಿಸಿದ್ದಾರೆ ಎನ್ನಲಾಗಿದೆ. ಉಡುಪಿಯ ಬೈಕಾಡಿ ಗ್ರಾಮದ ಗೋಪಾಲ ಹಾಗೂ ಪುತ್ತೂರು ಗ್ರಾಮದ ಬಾಲಕೃಷ್ಣ ಇವರುಗಳ ಪೈಕಿ ಆರೋಪಿ ಬಾಲಕೃಷ್ಣ ಮಣಿಪಾಲದ ದೂರದರ್ಶನ ಕಛೇರಿಯಲ್ಲಿ ನೌಕರನಾಗಿದ್ದು, ಅದೇ ಕಛೇರಿಯಲ್ಲಿರುವ ಪುರುಷ ಸಿಬ್ಬಂದಿಯೊಂದಿಗೆ, ಮಹಿಳಾ ಸಹೋದ್ಯೋಗಿ ಸಲುಗೆಯಿಂದ ಒಟ್ಟಿಗೆ ಇರುವ

ಯುವತಿಯ ಮಾನಹಾನಿಯಾಗುವಂತೆ ವರ್ತಿಸಿದ ಆರೋಪಿಗೆ ಶಿಕ್ಷೆ Read More »

ಕರಾವಳಿ, ಕ್ರೈಮ್ ನ್ಯೂಸ್

ಮಾರುಕಟ್ಟೆಯಲ್ಲಿ ನಿಷೇಧಿತ ಪ್ಲಾಸ್ಟಿಕ್ ವಶ – ದಂಡ ವಸೂಲಿ.!

(ನ್ಯೂಸ್ ಕಡಬ)newskadaba.com ಉಡುಪಿ, ಆ.10. ಆದಿ ಉಡುಪಿ ಸಂತೆ ಮಾರುಕಟ್ಟೆಯಲ್ಲಿ ನಿಷೇದಿತ ಪ್ಲಾಸ್ಟಿಕ್‌ ಗಳನ್ನು ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ ದಾಳಿ ನಡೆಸಿ 62 ಕೆ.ಜಿ ನಿಷೇಧಿತ ಪ್ಲಾಸ್ಟಿಕ್‌ ಗಳನ್ನು ವಶಪಡಿಸಿಕೊಂಡು ಸಂತೆ ಅಂಗಡಿಯವರಿಗೆ ರೂ. 700 ದಂಡ ವಿಧಿಸಲಾಯಿತು ಹಾಗೂ ನಿಷೇಧಿತ ಪ್ಲಾಸ್ಟಿಕ್ ವಸ್ತುಗಳ ಬದಲಿಗೆ ಮರುಬಳಕೆಯ ವಸ್ತುಗಳನ್ನು ಬಳಸುವಂತೆ ಹಾಗೂ ನಿಷೇಧಿತ ಪ್ಲಾಸ್ಟಿಕ್‌ಗಳನ್ನು ಬಳಸಿದ್ದಲ್ಲಿ ಬಾರಿ ದಂಡವನ್ನು ವಿಧಿಸಿ ಉದ್ದಿಮೆ ಪರವಾನಿಗೆಯನ್ನು ರದ್ದು ಪಡಿಸಲಾಗುವುದು ಎಂದು ತಿಳಿಸಲಾಯಿತು. ನಗರಸಭೆಯ ಪೌರಾಯುಕ್ತರು, ಹಿರಿಯ ಆರೋಗ್ಯ ನಿರೀಕ್ಷಕರು,

ಮಾರುಕಟ್ಟೆಯಲ್ಲಿ ನಿಷೇಧಿತ ಪ್ಲಾಸ್ಟಿಕ್ ವಶ – ದಂಡ ವಸೂಲಿ.! Read More »

ಕರಾವಳಿ

ʼಮೊಬೈಲ್ʼ ಚಾರ್ಜ್ ಮಾಡುವಾಗ‌ ಎಚ್ಚರ – ಈ ತಪ್ಪು ಮಾಡಿದರೆ ಆಗಬಹುದು ಸ್ಪೋಟ.!

(ನ್ಯೂಸ್ ಕಡಬ)newskadaba.com ಆ.10. ಸ್ಮಾರ್ಟ್‌ ಫೋನ್‌ ಈಗ ಎಲ್ಲರ ಅನಿವಾರ್ಯತೆಯಾಗಿಬಿಟ್ಟಿದ್ದು, ಸಂಪೂರ್ಣ ಸೇಫ್‌ ಎಂದರ್ಥವಲ್ಲ. ಸ್ಮಾರ್ಟ್‌ ಫೋನ್‌ ಬಳಕೆ ಅನೇಕ ರೀತಿಯಲ್ಲಿ ನಮ್ಮ ಆರೋಗ್ಯಕ್ಕೆ ಹಾನಿ ಮಾಡುತ್ತದೆ. ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್‌ ಫೋನ್‌ಗಳ ಬ್ಯಾಟರಿ ಸ್ಫೋಟದಿಂದ ಅನಾಹುತಗಳು ಸಂಭವಿಸುತ್ತಿವೆ. ಕಾಲಾನಂತರದಲ್ಲಿ ಫೋನ್‌ ಗಳ ಬ್ಯಾಟರಿ ಕೆಟ್ಟು ಹೋಗುತ್ತದೆ. ಅದನ್ನು ಬದಲಾಯಿಸಲು ಸಾವಿರಾರು ರೂಪಾಯಿ ಖರ್ಚು ಮಾಡಬೇಕು. ಫೋನ್‌ ನ ಬ್ಯಾಟರಿ ಕೆಡದಂತೆ ಸ್ಮಾರ್ಟ್ ಆಗಿ ಚಾರ್ಜ್ ಮಾಡುವುದು ಬಹಳ ಮುಖ್ಯ. ಈ ರೀತಿ ಮಾಡುವುದರಿಂದ ಫೋನಿನ ಬ್ಯಾಟರಿ

ʼಮೊಬೈಲ್ʼ ಚಾರ್ಜ್ ಮಾಡುವಾಗ‌ ಎಚ್ಚರ – ಈ ತಪ್ಪು ಮಾಡಿದರೆ ಆಗಬಹುದು ಸ್ಪೋಟ.! Read More »

ತಂತ್ರಜ್ಞಾನ

ಸರ್ಕಾರಿ ನೌಕರರ ‘ನಿವೃತ್ತಿ ವಯಸ್ಸು’ ಬದಲಿಸುವ ಪ್ರಸ್ತಾಪವಿಲ್ಲ – ಕೇಂದ್ರ ಸರ್ಕಾರ

(ನ್ಯೂಸ್ ಕಡಬ)newskadaba.com ನವದೆಹಲಿ, ಆ.10. ಕೇಂದ್ರ ಸರ್ಕಾರಿ ನೌಕರರ ನಿವೃತ್ತಿ ವಯಸ್ಸನ್ನು ಬದಲಾಯಿಸುವ ಯಾವುದೇ ಪ್ರಸ್ತಾಪವು ಪರಿಗಣನೆಯಲ್ಲಿಲ್ಲ ಎಂದು ಕೇಂದ್ರ ಸರ್ಕಾರ ಸಂಸತ್ತಿಗೆ ತಿಳಿಸಿದೆ. ಸರ್ಕಾರಿ ನೌಕರರ ನಿವೃತ್ತಿ ವಯಸ್ಸನ್ನ ಬದಲಾಯಿಸುವ ಯಾವುದೇ ಪ್ರಸ್ತಾಪವಿದೆಯೇ ಮತ್ತು ಹಾಗಿದ್ದರೆ ಅದರ ವಿವರಗಳನ್ನ ಸದಸ್ಯ ಶರ್ಮಿಷ್ಠ ಸೇಥಿ ಸರ್ಕಾರವನ್ನ ಕೇಳಿದರು ಎನ್ನಲಾಗಿದೆ. ಕಳೆದ ಮೂರು ವರ್ಷಗಳಲ್ಲಿ ಮತ್ತು ಪ್ರಸಕ್ತ ವರ್ಷದಲ್ಲಿ ನಿಯಮ 56 (ಜೆ) ಅಡಿಯಲ್ಲಿ ಕಡ್ಡಾಯ ನಿವೃತ್ತಿ ಪಡೆದ ನೌಕರರ ಸಂಖ್ಯೆಯನ್ನು ಸಹ ಸರ್ಕಾರವನ್ನು ಕೇಳಲಾಯಿತು. ಸಚಿವರು, ಕೇಂದ್ರ

ಸರ್ಕಾರಿ ನೌಕರರ ‘ನಿವೃತ್ತಿ ವಯಸ್ಸು’ ಬದಲಿಸುವ ಪ್ರಸ್ತಾಪವಿಲ್ಲ – ಕೇಂದ್ರ ಸರ್ಕಾರ Read More »

ರಾಷ್ಟ್ರೀಯ ನ್ಯೂಸ್

ಹಿರಿಯ ಸಂಸ್ಕೃತ ವಿದ್ವಾಂಸ ಹರಿದಾಸ ಉಪಾಧ್ಯಾಯ ವಿಧಿವಶ

(ನ್ಯೂಸ್ ಕಡಬ)newskadaba.com ಉಡುಪಿ, ಆ.10. ಶ್ರೀಮನ್ಮಧ್ವಸಿದ್ಧಾಂತ ಪ್ರಬೋಧಿನಿ ಮಹಾವಿದ್ಯಾಲಯದ ವಿಶ್ರಾಂತ ಪ್ರಾಚಾರ್ಯರೂ ಶ್ರೀಕೃಷ್ಣಮಠದ ಆಸ್ಥಾನ ವಿದ್ವಾಂಸರೂ ಆಗಿದ್ದ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಸಂಸ್ಕೃತ ವಿದ್ವಾಂಸ ವಿದ್ವಾನ್ ಕೆ. ಹರಿದಾಸ ಉಪಾಧ್ಯಾಯ ನಿಧನರಾದರು ಎನ್ನಲಾಗಿದೆ. ಉಡುಪಿ ತಾಲೂಕು ಬ್ರಾಹ್ಮಣ ಮಹಾಸಭಾದ ಸ್ಥಾಪಕ ಅಧ್ಯಕ್ಷರಾದ ಅವರು, ಉಡುಪಿ ಅಷ್ಟಮಠಾಧೀಶರಿಂದ ಗೌರವಿಸಲ್ಪಟ್ಟಿದ್ದರು. ಸಂಸ್ಕತದಲ್ಲಿ 5 ಯಕ್ಷಗಾನ ಪ್ರಸಂಗ ರಚಿಸಿ ಉಜ್ಜಯಿನಿ ಮೊದಲಾದೆಡೆಗಳಲ್ಲಿ ಪ್ರದರ್ಶಿಸಿದ್ದರು. ಉಡುಪಿ ಸಂಸ್ಕೃತ ಮಹಾವಿದ್ಯಾಲಯದ ಪ್ರಾಚಾರ್ಯರಾಗಿ ಅನೇಕ ಮಂದಿ ಶಿಷ್ಯರಿಗೆ ವಿದ್ಯಾದಾನ ಮಾಡಿದ್ದರು. ಪ್ರಾಚಾರ್ಯ ಪದಕ್ಕೆ ಕನ್ನದಲ್ಲಿ ಪ್ರಾಂಶುಪಾಲ

ಹಿರಿಯ ಸಂಸ್ಕೃತ ವಿದ್ವಾಂಸ ಹರಿದಾಸ ಉಪಾಧ್ಯಾಯ ವಿಧಿವಶ Read More »

ಕರಾವಳಿ

ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿ ಸೆರೆ

(ನ್ಯೂಸ್ ಕಡಬ)newskadaba.com ಮಂಗಳೂರು, ಆ.10. ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿ ವಿಖ್ಯಾತ್ ವಿಕ್ಕಿ ಬಪ್ಪಲ್ (29) ಎಂಬಾತನನ್ನು ಉರ್ವಾ ಪೊಲೀಸರು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ ಎನ್ನಲಾಗಿದೆ. ಪ್ರಕರಣವೊಂದಕ್ಕೆ ಜಾಮೀನು ಸಿಕ್ಕಿದ್ದು, ಈತನ ವಿರುದ್ಧ ಮಂಗಳೂರು ನಗರ, ಇತರ ಠಾಣೆಗಳಲ್ಲಿ ಸುಮಾರು 11 ಪ್ರಕರಣಗಳು ಇದ್ದು, ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣವೊಂದಕ್ಕೆ 14 ದಿವಸಗಳ ಕಾಲ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು ಎಂದು ತಿಳಿದುಬಂದಿದೆ.

ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿ ಸೆರೆ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಬೈಂದೂರಿನಲ್ಲಿ ಕೇಂದ್ರೀಯ ವಿದ್ಯಾಲಯ ಸ್ಥಾಪನೆಗೆ ಬೇಡಿಕೆ

(ನ್ಯೂಸ್ ಕಡಬ)newskadaba.com ಶಿವಮೊಗ್ಗ, ಆ.10. ಲೋಕಸಭಾ ಕ್ಷೇತ್ರದ ಉಡುಪಿ ಜಿಲ್ಲೆಯ ಬೈಂದೂರು ವಿಧಾನಸಭಾ ವ್ಯಾಪ್ತಿಯಲ್ಲಿ ಕೇಂದ್ರ ಸರಕಾರದ ಕೇಂದ್ರೀಯ ವಿದ್ಯಾಲಯ ಮಂಜೂರು ಮಾಡುವಂತೆ ಸಂಸದ ಬಿ.ವೈ ರಾಘವೇಂದ್ರ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರಿಗೆ ಮನವಿ ಮಾಡಿದ್ದಾರೆ ಎನ್ನಲಾಗಿದೆ. ಸಚಿವ ಪ್ರಧಾನ್ ಅವರನ್ನು ಭೇಟಿ ಮಾಡಿದ ಸಂಸದ ರಾಘವೇಂದ್ರ, ವಿದ್ಯಾಲಯದ ಅಗತ್ಯತೆಗಳ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದು, ಸಚಿವರು ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿರುವುದಾಗಿ ತಿಳಿಸಿದೆ.

ಬೈಂದೂರಿನಲ್ಲಿ ಕೇಂದ್ರೀಯ ವಿದ್ಯಾಲಯ ಸ್ಥಾಪನೆಗೆ ಬೇಡಿಕೆ Read More »

ಕರ್ನಾಟಕ

ಜೀನ್ಸ್ ಪಾರ್ಕ್ ಸ್ಥಾಪನೆಗೆ ಜಮೀನು ಗುರುತಿಸಿ – ಅಧಿಕಾರಿಗಳಿಗೆ ಸಿಎಂ ಸೂಚನೆ

(ನ್ಯೂಸ್ ಕಡಬ)newskadaba.com ಬಳ್ಳಾರಿ, ಆ.09. ಬಿಸಿಲ ನಾಡು ಗಣಿ ಜಿಲ್ಲೆ ಬಳ್ಳಾರಿಯನ್ನು ಭಾರತದ ಜೀನ್ಸ್ ರಾಜಧಾನಿಯನ್ನಾಗಿ ಮಾಡುವುದಾಗಿ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಚುನಾವಣಾ ಪೂರ್ವ ನೀಡಿದ ಭರವಸೆ ನನಸಾಗುವತ್ತ ಒಂದು ಹೆಜ್ಜೆ ಮುಂದಿಟ್ಟಿದ್ದು, ಜಿಲ್ಲೆಯಲ್ಲಿ ಜೀನ್ಸ್ ಜವಳಿ ಪಾರ್ಕ್ ಸ್ಥಾಪಿಸಲು ಭೂಮಿಯನ್ನು ಆಯ್ಕೆ ಮಾಡುವಂತೆ ಕರ್ನಾಟಕ ಸರ್ಕಾರವು ಬಳ್ಳಾರಿಯಲ್ಲಿ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಳ್ಳಾರಿ ಜಿಲ್ಲೆಯ ಚುನಾಯಿತ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿ, ಜೀನ್ಸ್ ಜವಳಿ ಪಾರ್ಕ್ ನಿರ್ಮಿಸಲು ಜಾಗವನ್ನು ಪತ್ತೆ ಹಚ್ಚಿ

ಜೀನ್ಸ್ ಪಾರ್ಕ್ ಸ್ಥಾಪನೆಗೆ ಜಮೀನು ಗುರುತಿಸಿ – ಅಧಿಕಾರಿಗಳಿಗೆ ಸಿಎಂ ಸೂಚನೆ Read More »

ಕರ್ನಾಟಕ

ಅರಣ್ಯ ಉಳಿಸಬೇಕೆಂದು ತೋಟಗಳನ್ನು ನಾಶ ಮಾಡಿದ ಅರಣ್ಯಾಧಿಕಾರಿಗಳು

(ನ್ಯೂಸ್ ಕಡಬ)newskadaba.com ಕಾರವಾರ, ಆ.09. ರಾಜ್ಯದಲ್ಲಿಯೇ ಅತಿ ಹೆಚ್ಚು ಅರಣ್ಯ ಪ್ರದೇಶವಿರುವ ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಕಾಳಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಜನರಿಗೆ ಪರಿಹಾರ ನೀಡಿ ಸ್ಥಳಾಂತರ ಮಾಡುವ ಕಾರ್ಯ ಒಂದೆಡೆ ನಡೆಯುತ್ತಲೇ ಇದೆ. ಇನ್ನೊಂದೆಡೆ ಸ್ಥಳಾಂತರ ಮಾಡಿದ ಕುಟುಂಬಗಳು ಬೆಳೆದ ತೋಟಗಾರಿಕಾ ಬೆಳೆಗಳನ್ನು ಅರಣ್ಯ ಇಲಾಖೆಯವರೇ ನಾಶ ಮಾಡುತ್ತಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದ್ದು, ಕುಂಬಾರನಿಗೆ ವರುಷ, ದೊಣ್ಣೆಗೆ ನಿಮಿಷ ಎಂಬಂತೆ ಸ್ಥಳಾಂತರಗೊಂಡ ಕುಟುಂಬಗಳು ತಿಂಗಳುಗಟ್ಟಲೆ, ವರ್ಷಗಟ್ಟಲೆ ಜೋಪಾನ ಮಾಡಿರುವ ಅಡಕೆ ಹಾಗೂ ಇತ್ಯಾದಿ

ಅರಣ್ಯ ಉಳಿಸಬೇಕೆಂದು ತೋಟಗಳನ್ನು ನಾಶ ಮಾಡಿದ ಅರಣ್ಯಾಧಿಕಾರಿಗಳು Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್
Scroll to Top