News Kadaba

ಮಂಗಳೂರು: ವಾಹನಗಳಲ್ಲಿ ಪ್ರಖರ ಎಲ್ಐಡಿ ಲೈಟ್ ಬಳಕೆ 1170 ಪ್ರಕರಣ ದಾಖಲು, 5.86 ಲಕ್ಷ ರೂ. ದಂಡ.!

(ನ್ಯೂಸ್ ಕಡಬ)newskadaba.com ಮಂಗಳೂರು, ಜು.25. ಹೆಚ್ಚು ಪ್ರಖರ ಬೆಳಕು ಹೊರಸೂಸುವ ಹಾಗೂ ಕಣ್ಣು ಕುಕ್ಕುವಂತಹ ದೀಪಗಳನ್ನು ಅಳವಡಿಸಿ ಕಮಿಷನರೇಟ್ ವ್ಯಾಪ್ತಿಯಲ್ಲಿ ಚಲಾಯಿಸಿರುವ ವಾಹನಗಳ ಮಾಲೀಕರ ವಿರುದ್ಧ ಪೊಲೀಸರು ಕಾರ್ಯಾಚರಣೆ ತೀವ್ರಗೊಳಿಸಿದ್ದು ಒಟ್ಟು 1,170 ಪ್ರಕರಣಗಳನ್ನು ದಾಖಲಿಸಿಕೊಂಡಿದ್ದು, 5,86,500 ಲಕ್ಷ ರೂ. ದಂಡ ವಿಧಿಸಿದ್ದಾರೆ ಎನ್ನಲಾಗಿದೆ. ಪಡಿಸಿದ ಹೆಡ್‌ಲೈಟ್‌ ಗಳನ್ನು ಮಾತ್ರ ಅಳವಡಿಸಬೇಕು, ಹೆಚ್ಚುವರಿಯಾಗಿ ಆಲಂಕಾರಿಕ ದೀಪ ಹಾಗೂ ಪ್ರಖರ ಬೆಳಕು ಸೂಸುವ ಮತ್ತು ಕಣ್ಣಿಗೆ ಕುಕ್ಕುವ ಎಲ್‌.ಇ.ಡಿ. ಬಲ್ಬ್ ಗಳನ್ನು ಅಳವಡಿಸುವಂತಿಲ್ಲ. ಸಾರ್ವಜನಿಕರು ತಮ್ಮ ಮೋಟಾರು ವಾಹನಗಳಿಗೆ ಕೇಂದ್ರ […]

ಮಂಗಳೂರು: ವಾಹನಗಳಲ್ಲಿ ಪ್ರಖರ ಎಲ್ಐಡಿ ಲೈಟ್ ಬಳಕೆ 1170 ಪ್ರಕರಣ ದಾಖಲು, 5.86 ಲಕ್ಷ ರೂ. ದಂಡ.! Read More »

ಕರಾವಳಿ

ಅಂಗನವಾಡಿ ಕಾರ್ಯಕರ್ತೆಯರಿಗೆ ಗುಡ್‌ ನ್ಯೂಸ್‌ ಶೀಘ್ರದಲ್ಲೇ ಗೌರವಧನ ಹೆಚ್ಚಳ

(ನ್ಯೂಸ್ ಕಡಬ)newskadaba.com ಬೆಂಗಳೂರು, ಜು.25. ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಗೌರವಧನ ಹೆಚ್ಚಳಕ್ಕೆ ಸರ್ಕಾರದ ಮುಂದಾಗಿದ್ದು, ಶೀಘ್ರದಲ್ಲೇ ಹೆಚ್ಚಳ ಮಾಡಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಹೇಳಿದರು. ಪ್ರಶ್ನೋತ್ತರ ಕಲಾಪದಲ್ಲಿ ಬಸವನಗುಡಿಯ ಬಿಜೆಪಿ ಸದಸ್ಯ ಎಲ್. ಎ. ರವಿ ಸುಬ್ರಹ್ಮಣ್ಯ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಗೌರವ ಧನ ಹೆಚ್ಚಳಕ್ಕೆ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದರು. ಅಂಗನವಾಡಿ ಕಾರ್ಯಕರ್ತೆಯರ ಅನುದಾನ ಮಾತ್ರವಲ್ಲ, ಅಂಗನವಾಡಿ

ಅಂಗನವಾಡಿ ಕಾರ್ಯಕರ್ತೆಯರಿಗೆ ಗುಡ್‌ ನ್ಯೂಸ್‌ ಶೀಘ್ರದಲ್ಲೇ ಗೌರವಧನ ಹೆಚ್ಚಳ Read More »

ಕರ್ನಾಟಕ

ಮೆಟ್ರೋ 2ನೇ ಹಂತದ ಕಾಮಗಾರಿ ವಿಳಂಬ           ನಿರ್ಮಾಣ ವೆಚ್ಚ ಬರೋಬ್ಬರೀ 40 ಸಾವಿರ ಕೋಟಿ ರೂ. ಏರಿಕೆ !

(ನ್ಯೂಸ್ ಕಡಬ)newskadaba.com ಬೆಂಗಳೂರು, ಜು.25. ನಮ್ಮ ಮೆಟ್ರೊ 75.06 ಕಿ.ಮೀ ವ್ಯಾಪ್ತಿಯ 2ನೇ ಹಂತದ ಕಾಮಗಾರಿ ವೆಚ್ಚವು ಸುಮಾರು 40,000 ಕೋಟಿ ರೂ.ಗೆ ಏರಿದ್ದು, ಇದು ದಶಕದ ಹಿಂದೆ ಶೇ.52 ರಷ್ಟು ಮೂಲ ವೆಚ್ಚ ಪ್ರಸ್ತಾಪಿಸಲಾಗಿತ್ತು. ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (BMRCL) ಇತ್ತೀಚೆಗೆ ನಗರಾಭಿವೃದ್ಧಿ ಇಲಾಖೆ (UDD) ಮೂಲಕ ಅನುಮೋದನೆಗಾಗಿ ರಾಜ್ಯ ಹಣಕಾಸು ಇಲಾಖೆಗೆ ಪರಿಷ್ಕೃತ ವೆಚ್ಚದೊಂದಿಗೆ ಪ್ರಸ್ತಾವನೆಯನ್ನು ಕಳುಹಿಸಿದೆ. ಯೋಜನೆಯು 2014 ರಲ್ಲಿ 72 ಕಿಮೀಗೆ ಅನುಮೋದನೆ ನೀಡಲಾಯಿತು. ನಂತರ 3 ಕಿಮೀ

ಮೆಟ್ರೋ 2ನೇ ಹಂತದ ಕಾಮಗಾರಿ ವಿಳಂಬ           ನಿರ್ಮಾಣ ವೆಚ್ಚ ಬರೋಬ್ಬರೀ 40 ಸಾವಿರ ಕೋಟಿ ರೂ. ಏರಿಕೆ ! Read More »

ಕರ್ನಾಟಕ
crime, arrest, suspected

ಬಂಟ್ವಾಳ: ಸಾರ್ವಜನಿಕ ಸ್ಥಳದಲ್ಲಿ ಡ್ರಗ್ಸ್ ನಶೆಯಲ್ಲಿ ತೂರಾಟ ಆರೋಪಿಗಳು ವಶಕ್ಕೆ

(ನ್ಯೂಸ್ ಕಡಬ)newskadaba.com ಬಂಟ್ವಾಳ, ಜು. 25. ಸಾರ್ವಜನಿಕ ಸ್ಥಳದಲ್ಲಿ ಡ್ರಗ್ಸ್ ನಶೆಯಲ್ಲಿ ತೂರಾಡುತ್ತಾ ಅಸಭ್ಯ ರೀತಿಯಲ್ಲಿ ವರ್ತಿಸುತ್ತಿದ್ದ ಮೂವರು ಯುವಕರನ್ನು ಸ್ಥಳೀಯರೇ ಹಿಡಿದು ಪೊಲೀಸರ ವಶಕ್ಕೆ ಒಪ್ಪಿಸಿದ ಘಟನೆ ಬಂಟ್ವಾಳದಲ್ಲಿ ವರದಿಯಾಗಿದೆ. ಮೂವರು ಯುವಕರು ಡ್ರಗ್ ನಶೆಯಲ್ಲಿ ತೇಲಾಡುತ್ತಾ ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದರು. ಕೆಲ ದಿನಗಳ ಹಿಂದಷ್ಟೇ ವಿಟ್ಲ ಠಾಣಾ ವ್ಯಾಪ್ತಿಯ ಕೊಳ್ನಾಡು ಗ್ರಾಮದ ನಾರ್ಶ KPಬೈಲಿನ ಮನೆಯೊಂದರಲ್ಲಿ ಡ್ರಗ್ಸ್ ಪಾರ್ಟಿ ನಡೆಸುತ್ತಿದ್ದಾಗ ಸಾರ್ವಜನಿಕರು ಸುತ್ತುವರಿದು ತರಾಟೆಗೆ ತೆಗೆದುಕೊಂಡಿದ್ದರು. ವಿಟ್ಲ ಪೊಲೀಸರು ಬರುವಷ್ಟರಲ್ಲಿ ಸ್ಥಳದಿಂದ ಪರಾರಿಯಾಗಿದ್ದರೂ ಒಬ್ಬಾತ

ಬಂಟ್ವಾಳ: ಸಾರ್ವಜನಿಕ ಸ್ಥಳದಲ್ಲಿ ಡ್ರಗ್ಸ್ ನಶೆಯಲ್ಲಿ ತೂರಾಟ ಆರೋಪಿಗಳು ವಶಕ್ಕೆ Read More »

ಕರಾವಳಿ, ಕ್ರೈಮ್ ನ್ಯೂಸ್

ಮಂಗಳೂರು: ಮಾನಸ ಅಮ್ಯೂಸ್‌ಮೆಂಟ್ ವಾಟರ್ ಪಾರ್ಕ್‌ ನ ನಿದೇರ್ಶಕ ವಿಲ್ಫ್ರೆಡ್ ಪಿಂಟೋ ವಿಧಿವಶ

(ನ್ಯೂಸ್ ಕಡಬ)newskadaba.com ಮಂಗಳೂರು, ಜು.25. ಪಿಲಿಕುಳದಲ್ಲಿರುವ ಮಾನಸ ಅಮ್ಯೂಸ್‌ಮೆಂಟ್ ವಾಟರ್ ಪಾರ್ಕ್‌ ನ ನಿದೇರ್ಶಕರಾದ ಯುಜಿನ್ ವಿಲ್ಫ್ರೆಡ್ ಪಿಂಟೋ ವಿಧಿವಶರಾಗಿದ್ದಾರೆ ಎಂದು ತಿಳಿದುಬಂದಿದೆ. ಕೆಲ ದಿನಗಳ ಹಿಂದೆ ಅನಾರೋಗ್ಯದ ಕಾರಣ ಆಸ್ಪತ್ರೆಗೆ ದಾಖಲಾಗಿದ್ದರು. 2020 ರಲ್ಲಿ ಮಾನಸ ಅಮ್ಯೂಸ್‌ಮೆಂಟ್ ವಾಟರ್ ಪಾರ್ಕ್‌ ನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳುವ ಮೊದಲು GM ಅಮ್ಯೂಸ್‌ಮೆಂಟ್ ಪಾರ್ಕ್ ಸೇರಿದಂತೆ ಹಲವಾರು ರೀತಿಯ ಕಂಪನಿಗಳಲ್ಲಿ ಉನ್ನತ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ ಪಿಂಟೊ ಅವರು ಮನೋರಂಜನಾ ಉದ್ಯಮದಲ್ಲಿ ವಿಶಿಷ್ಟವಾದ ವೃತ್ತಿಜೀವನವನ್ನು ಹೊಂದಿದ್ದರು ಎನ್ನಲಾಗಿದೆ. ಮಂಗಳೂರಿನ

ಮಂಗಳೂರು: ಮಾನಸ ಅಮ್ಯೂಸ್‌ಮೆಂಟ್ ವಾಟರ್ ಪಾರ್ಕ್‌ ನ ನಿದೇರ್ಶಕ ವಿಲ್ಫ್ರೆಡ್ ಪಿಂಟೋ ವಿಧಿವಶ Read More »

ಕರಾವಳಿ

ತಡೆಗೋಡೆ ಕುಸಿದು ಬಿದ್ದು ಬಾಲಕ‌ ಮೃತ್ಯು !

(ನ್ಯೂಸ್ ಕಡಬ)newskadaba.com ಸುರತ್ಕಲ್, ಜು.25. ಭಾರೀ ಮಳೆಯಿಂದಾಗಿ ಮತ್ತೊಂದು ಅವಘಡ ಸಂಭವಿಸಿದ್ದು, ಗಾಳಿ-ಮಳೆಗೆ ಮಂಗಳೂರು ಹೊರವಲಯದ ಸುರತ್ಕಲ್‌ ಸಮೀಪವಿರುವ ಜೋಕಟ್ಟೆಯಲ್ಲಿ ಮನೆಯೊಂದರ ಮೇಲೆ ತಡೆಗೋಡೆ ಕುಸಿದು ಬಿದ್ದು ಅಪ್ರಾಪ್ತ ಬಾಲಕ‌ನೊಬ್ಬ ದಾರುಣವಾಗಿ ಮೃತಪಟ್ಟಿರುವ ಘಟನೆ ಸುರತ್ಕಲ್ ನಲ್ಲಿ ವರದಿಯಾಗಿದೆ. ಮೃತ ಬಾಲಕನನ್ನು ಶೈಲೇಶ್ (17) ಎಂದು ಗುರುತಿಸಲಾಗಿದೆ. ಬಾಲಕ ಆ ಮನೆಗೆ ಅತಿಥಿಯಾಗಿ ಬಂದಿದ್ದ ಎನ್ನಲಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.  

ತಡೆಗೋಡೆ ಕುಸಿದು ಬಿದ್ದು ಬಾಲಕ‌ ಮೃತ್ಯು ! Read More »

ಕರಾವಳಿ, ಕ್ರೈಮ್ ನ್ಯೂಸ್

ಮಂಗಳೂರು : ಜೈಲಿನ ಮೇಲೆ ಪೊಲೀಸರ ದಾಳಿ ! 25 ಮೊಬೈಲ್,ಡ್ರಗ್ಸ್ ಸೇರಿ ಹಲವು ಸೊತ್ತು ವಶಕ್ಕೆ

(ನ್ಯೂಸ್ ಕಡಬ)newskadaba.com ಮಂಗಳೂರು, ಜು.25. ಕಾರಾಗೃಹದ ಮೇಲೆ ಮುಂಜಾನೆ ಪೊಲೀಸರು ದಾಳಿ ನಡೆಸಿದ್ದು, ಮೊಬೈಲ್‌ ಸೇರಿ ಹಲವು ನಿಷೇಧಿತ ವಸ್ತು ವಶಪಡಿಸಿಕೊಂಡಿದ್ದಾರೆ ಎಂದು ವರದಿ ತಿಳಿಸಿದೆ. ಕೋಡಿಯಾಲ್ ಬೈಲ್ ನಲ್ಲಿರುವ ಜೈಲಿನಲ್ಲಿರುವ ಇಬ್ಬರು ಡಿಸಿಪಿಗಳು, ಮೂವರು ಎಸಿಪಿಗಳು, 15 ಪೊಲೀಸ್‌ ಇನ್ಸ್‌ ಪೆಕ್ಟರ್‌ಗಳ ನೇತೃತ್ವದಲ್ಲಿ ಸುಮಾರು 150 ಮಂದಿ ಸಿಬ್ಬಂದಿ ಬೆಳ್ಳಂಬೆಳಗ್ಗೆ ಕಾರ್ಯಾಚರಣೆ ನಡೆಸಲಾಗಿದೆ. ಹಲವು ವಿಚಾರಣಾಧೀನ ಕೈದಿಗಳ ಬಳಿ 25 ಮೊಬೈಲ್ ಫೋನ್‌ಗಳು, ಒಂದು ಬ್ಲೂಟೂತ್ ಸಾಧನ, 5 ಇಯರ್‌ಫೋನ್‌, ಒಂದು ಪೆನ್ ಡ್ರೈವ್, 5

ಮಂಗಳೂರು : ಜೈಲಿನ ಮೇಲೆ ಪೊಲೀಸರ ದಾಳಿ ! 25 ಮೊಬೈಲ್,ಡ್ರಗ್ಸ್ ಸೇರಿ ಹಲವು ಸೊತ್ತು ವಶಕ್ಕೆ Read More »

ಕರಾವಳಿ, ಕ್ರೈಮ್ ನ್ಯೂಸ್

ಬೆಂಗಳೂರು-ಕಾರವಾರ ವಿಶೇಷ ಎಕ್ಸ್‌ ಪ್ರೆಸ್ ರೈಲು !  

(ನ್ಯೂಸ್ ಕಡಬ)newskadaba.com ಬೆಂಗಳೂರು, ಜು.24. ಪ್ರಯಾಣಿಕರ ಬೇಡಿಕೆಯ ಮೇರೆಗೆ ಬೆಂಗಳೂರಿನ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಮತ್ತು ಕಾರವಾರ ನಿಲ್ದಾಣಗಳ ನಡುವೆ ಎರಡು ಟ್ರಿಪ್ ವಿಶೇಷ ರೈಲು ಸಂಚಾರ ಮಾಡಲಿದೆ. ಜುಲೈ 26 ಮತ್ತು 28ರಂದು ಎಸ್ಎಂವಿಟಿ ಬೆಂಗಳೂರು-ಕಾರವಾರ ವಿಶೇಷ ಎಕ್ಸ್‌ ಪ್ರೆಸ್ ರೈಲು (06567) ಎಸ್ಎಂವಿಟಿ ಬೆಂಗಳೂರಿನಿಂದ ಮಧ್ಯರಾತ್ರಿ 12.30 ಗಂಟೆಗೆ ಹೊರಟು, ಸಂಜೆ 4 ಗಂಟೆಗೆ ಕಾರವಾರ ನಿಲ್ದಾಣ ತಲುಪಲಿದೆ. ಪುನಃ ಇದೇ ರೈಲು (06568) ಜುಲೈ 26 ಮತ್ತು 28 ರಂದು ಕಾರವಾರ

ಬೆಂಗಳೂರು-ಕಾರವಾರ ವಿಶೇಷ ಎಕ್ಸ್‌ ಪ್ರೆಸ್ ರೈಲು !   Read More »

ಕರಾವಳಿ, ಕರ್ನಾಟಕ

ಮಹಿಳೆ ಮೇಲೆ ಗ್ಯಾಂಗ್ ರೇಪ್ ! ದೂರು ದಾಖಲು

(ನ್ಯೂಸ್ ಕಡಬ)newskadaba.com. ಪ್ಯಾರಿಸ್, ಜು.24. ಆಸ್ಟ್ರೇಲಿಯಾ ಮೂಲದ ಮಹಿಳೆಯ ಮೇಲೆ ಐವರು ಬರ್ಬರವಾಗಿ ಗ್ಯಾಂಗ್‌ ರೇಪ್ ಮಾಡಿರುವ ಆತಂಕಕಾರಿ ಘಟನೆ ನಡೆದಿದೆ ಎಂದು ವರದಿಯಾಗಿದೆ. ಮಧ್ಯರಾತ್ರಿ ಈ ದುರ್ಘಟನೆ ನಡೆದಿದ್ದು, ಈ ಕುರಿತಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದೇವೆ ಎಂದು ಫ್ರೆಂಚ್ ಪೊಲೀಸರು ತಿಳಿಸಿದ್ದಾರೆ. 25 ವರ್ಷದ ಆಸ್ಟ್ರೇಲಿಯಾ ಮಹಿಳೆಯ ಮೇಲೆ ಈ ಅವಘಡ ಸಂಭವಿಸಿದ್ದು, ಸಹಾಯಕ್ಕಾಗಿ ಹತ್ತಿರದಲ್ಲೇ ಇದ್ದ ಕೆಬಾಬ್ ಶಾಪ್‌ ಗೆ ಬಂದು ರಕ್ಷಣೆ ಪಡೆದಿದ್ದಾರೆ. ಆಗ ಆಕೆಯ ಉಡುಪು ಹರಿದು ಹೋಗಿರುವುದು ಸಿಸಿಟಿವಿಯಲ್ಲಿ

ಮಹಿಳೆ ಮೇಲೆ ಗ್ಯಾಂಗ್ ರೇಪ್ ! ದೂರು ದಾಖಲು Read More »

ಅಂತರ್ರಾಷ್ಟ್ರೀಯ ನ್ಯೂಸ್

ಬಜೆಟ್ ಬಳಿಕ ಚಿನ್ನದ ದರ ಕುಸಿತ

(ನ್ಯೂಸ್ ಕಡಬ)newskadaba.com. ನವದೆಹಲಿ, ಜು.24. ಬಜೆಟ್ ನಲ್ಲಿ ಚಿನ್ನದ ಮೇಲಿನ ಅಮದು ಸುಂಕ ಕಡಿಮೆಯಾಗಿರುವ ಪರಿಣಾಮ ಇಂದು ಚಿನ್ನದ ದರ ಕುಸಿತ ಕಂಡಿದ್ದು, 24 ಕ್ಯಾರಟ್ ಚಿನ್ನದ ಬೆಲೆ ಪ್ರತಿ 10 ಗ್ರಾಮ್ ಗೆ 4,332.0 ರೂಪಾಯಿಗಳಷ್ಟು ಕಡಿಮೆಯಾಗಿದ್ದು ಪ್ರತಿ ಗ್ರಾಮ್ ಬೆಲೆ 7071.6 ರೂಗಳಷ್ಟಾಗಿದೆ. 22 ಕ್ಯಾರಟ್ ಹಳದಿ ಲೋಹದ ದರ ಪ್ರತಿ ಗ್ರಾಮ್ ಗೆ 6,477.5 ರೂಪಾಯಿಗಳಷ್ಟಿದ್ದು, 10 ಗ್ರಾಮ್ ಚಿನ್ನದ ದರದಲ್ಲಿ 3,970.0 ರೂಗಳಷ್ಟು ಕುಸಿತ ದಾಖಲಾಗಿದೆ. 24 ಕ್ಯಾರಾಟ್ ಚಿನ್ನದ ದರ

ಬಜೆಟ್ ಬಳಿಕ ಚಿನ್ನದ ದರ ಕುಸಿತ Read More »

ರಾಷ್ಟ್ರೀಯ ನ್ಯೂಸ್
Scroll to Top