ವಿಮಾನ ಪತನ 19 ಮಂದಿ ಸಜೀವ ದಹನದ ಶಂಕೆ
(ನ್ಯೂಸ್ ಕಡಬ)newskadaba.com ನೇಪಾಳ, ಜು.25. ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಟೇಕಾಫ್ ಆಗುವ ವೇಳೆ ಶೌರ್ಯ ಏರ್ಲೈನ್ಸ್ ವಿಮಾನ ಪತನಗೊಂಡು 19 ಮಂದಿ ಪ್ರಯಾಣಿಕರು ಸಜೀವ ದಹನಗೊಂಡ ಘಟನೆ ನೇಪಾಳದಲ್ಲಿ ನಡೆದಿದೆ. ವಿಮಾನದಲ್ಲಿ ಪೈಲಟ್ ಸೇರಿ 19 ಮಂದಿ ಇದ್ದರು. ಸದ್ಯ ಐವರ ಮೃತದೇಹವನ್ನು ಹೊರತೆಗೆಯಲಾಗಿದ್ದು ರಕ್ಷಣಾ ಕಾರ್ಯಾಚರಣೆ ಮುಂದುವರಿದೆ. ಶೌರ್ಯ ಏರ್ಲೈನ್ಸ್ ವಿಮಾನವು ವಿಮಾನಯಾನ ಸಂಸ್ಥೆಯ ತಾಂತ್ರಿಕ ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿತ್ತು. ವಿಮಾನದ ಪೈಲಟ್ ಮತ್ತು ಇತರ ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ತಿಳಿದುಬಂದಿದೆ.
ವಿಮಾನ ಪತನ 19 ಮಂದಿ ಸಜೀವ ದಹನದ ಶಂಕೆ Read More »
ಅಂತರ್ರಾಷ್ಟ್ರೀಯ ನ್ಯೂಸ್
