News Kadaba

ಮಂಕಿಪಾಕ್ಸ್ ಪತ್ತೆ..!   ರಾಜ್ಯದ ವಿಮಾನ ನಿಲ್ದಾಣಗಳಲ್ಲಿ ಕಟ್ಟೆಚ್ಚರ ಕ್ರಮಕ್ಕೆ ಆದೇಶ..!

(ನ್ಯೂಸ್ ಕಡಬ) newskadaba.com ಬೆಂಗಳೂರು, ಆ. 28. ಮಂಕಿಪಾಕ್ಸ್ ಕಾಯಿಲೆ ಆತಂಕ ಹೆಚ್ಚಾಗುತ್ತಿದ್ದಂತೆ ಆರೋಗ್ಯ ಇಲಾಖೆ ರಾಜ್ಯದ ವಿಮಾನ ನಿಲ್ದಾಣಗಳಲ್ಲಿ ಕಟ್ಟೆಚ್ಚರ ಕ್ರಮಕ್ಕೆ ಆದೇಶವನ್ನು ಹೊರಡಿಸಿದೆ. ಈ ಬಗ್ಗೆ ರಾಜ್ಯ ಆರೋಗ್ಯ ಇಲಾಖೆ ಸುತ್ತೋಲೆ ಪ್ರಕಟಿಸಿದೆ ಎನ್ನಲಾಗಿದೆ. ಪಾಕಿಸ್ತಾನ ಸೇರಿದಂತೆ ವಿವಿಧ ದೇಶಗಳಲ್ಲಿ ಮಂಕಿಪಾಕ್ಸ್ ಪತ್ತೆಯಾಗಿದೆ. ಈ ಕಾರಣದಿಂದ ರಾಜ್ಯ ಆರೋಗ್ಯ ಇಲಾಖೆ ಫುಲ್ ಅಲರ್ಟ್ ಆಗಿದೆ. ವಿಮಾನ ನಿಲ್ದಾಣ ಮತ್ತು ಬಂದರುಗಳಲ್ಲಿ ಪ್ರಯಾಣಿಕರ ತಪಾಸಣೆ ಮಾಡುವಂತೆ ಸೂಚನೆ ನೀಡಿದೆ. ಅಂತಾರಾಷ್ಟ್ರೀಯ ಪ್ರಯಾಣಿಕರ ಮೇಲೆ ನಿಗಾ ಇಡುವಂತೆ […]

ಮಂಕಿಪಾಕ್ಸ್ ಪತ್ತೆ..!   ರಾಜ್ಯದ ವಿಮಾನ ನಿಲ್ದಾಣಗಳಲ್ಲಿ ಕಟ್ಟೆಚ್ಚರ ಕ್ರಮಕ್ಕೆ ಆದೇಶ..! Read More »

ಆರೋಗ್ಯ ಮಾಹಿತಿ, ಕರ್ನಾಟಕ

ಟ್ರಕ್ ಕಂದರಕ್ಕೆ ಬಿದ್ದು 3 ಸೇನಾ ಸಿಬ್ಬಂದಿ ಮೃತ್ಯು 4 ಮಂದಿಗೆ ಗಾಯ

(ನ್ಯೂಸ್ ಕಡಬ) newskadaba.com ಇಟಾನಗರ, ಆ. 28. ಅರುಣಾಚಲ ಪ್ರದೇಶದ ಅಪ್ಪರ್ ಸುಬನ್ಸಿರಿ ಜಿಲ್ಲೆಯಲ್ಲಿ ಟ್ರಕ್ ಆಳವಾದ ಕಂದರಕ್ಕೆ ಬಿದ್ದ ಪರಿಣಾಮ ಮೂವರು ಸೇನಾ ಸಿಬ್ಬಂದಿ ಸಾವನ್ನಪ್ಪಿದ್ದಾರೆ ಎಂದು ವರದಿ ತಿಳಿದುಬಂದಿದೆ. ಅಪಘಾತದಲ್ಲಿ ಮೂವರು ಯೋಧರು ಸ್ಥಳದಲ್ಲೇ ಸಾವನ್ನಪ್ಪಿದ್ದು, ನಾಲ್ವರು ಗಾಯಗೊಂಡಿದ್ದಾರೆ ಎಂದು ಇಟಾನಗರದ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅಪಘಾತದ ಹೆಚ್ಚಿನ ವಿವರಗಳು ಇನ್ನೂ ದೊರೆತಿಲ್ಲ ಎಂದು ಅಧಿಕಾರಿ ತಿಳಿಸಿದ್ದಾರೆ. ಸೇನೆಯ ಈಸ್ಟರ್ನ್ ಕಮಾಂಡ್ ತನ್ನ ಸಿಬ್ಬಂದಿಯ ಸಾವಿಗೆ ಸಂತಾಪ ಸೂಚಿಸಿದ್ದು, ಮೃತಪಟ್ಟವರನ್ನು ಹವಾಲ್ದಾರ್ ನಖತ್ ಸಿಂಗ್,

ಟ್ರಕ್ ಕಂದರಕ್ಕೆ ಬಿದ್ದು 3 ಸೇನಾ ಸಿಬ್ಬಂದಿ ಮೃತ್ಯು 4 ಮಂದಿಗೆ ಗಾಯ Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ತೋಳಗಳ ದಾಳಿಗೆ ಆರು ಮಕ್ಕಳು ಸೇರಿದಂತೆ ಏಳು ಜನ ಸಾವು..!

(ನ್ಯೂಸ್ ಕಡಬ) newskadaba.c0m ಲಖನೌ, ಆ. 27.  ಉತ್ತರ ಪ್ರದೇಶದ ಇಂಡೋ-ನೇಪಾಳ ಗಡಿ ಜಿಲ್ಲೆ ಬಹ್ರೈಚ್‌ ನ ಮಹಾಸಿ ಬ್ಲಾಕ್‌ನ 30 ಗ್ರಾಮಗಳಲ್ಲಿ ತೋಳಗಳ ಗುಂಪು ದಾಳಿ ನಡೆಸಿದ್ದು, ಘಟನೆಯಲ್ಲಿ ಆರು ಮಕ್ಕಳು ಸೇರಿದಂತೆ ಏಳು ಜನ ಸಾವನ್ನಪ್ಪಿದ್ದಾರೆ ಮತ್ತು 26 ಜನ ಗಾಯಗೊಂಡಿದ್ದಾರೆ ಎನ್ನಲಾಗಿದೆ. ಅರಣ್ಯ ಇಲಾಖೆಯು ತೋಳಗಳನ್ನು ಸೆರೆ ಹಿಡಿಯಲು ಒಂಬತ್ತು ಜನರ ತಂಡವನ್ನು ನಿಯೋಜಿಸಿದೆ. ತೋಳಗಳ ಗ್ರಾಮಗಳಿಗೆ ನುಗ್ಗಿ ದಾಳಿ ನಡೆಸುತ್ತಿದ್ದು, ಕಳೆದ ಒಂದು ತಿಂಗಳಿಂದ ಈ ಪ್ರದೇಶದ ಗ್ರಾಮಸ್ಥರಲ್ಲಿ ಭೀತಿಯನ್ನು ಸೃಷ್ಟಿಸಿವೆ.

ತೋಳಗಳ ದಾಳಿಗೆ ಆರು ಮಕ್ಕಳು ಸೇರಿದಂತೆ ಏಳು ಜನ ಸಾವು..! Read More »

ಅಂತರ್ರಾಷ್ಟ್ರೀಯ ನ್ಯೂಸ್, ಕ್ರೈಮ್ ನ್ಯೂಸ್

ಭೂ ಅಕ್ರಮ ಸಂಪೂರ್ಣ ಕಡಿವಾಣಕ್ಕೆ ರಾಜ್ಯ ಸರ್ಕಾರ ಮುಂದು  ಆರ್‌ಟಿಸಿಗೆ ಆಧಾರ್‌ ಜೋಡಿಸುವ ಅಭಿಯಾನಕ್ಕೆ ಚಾಲನೆ

(ನ್ಯೂಸ್ ಕಡಬ) newskadaba.c0m ಬೆಂಗಳೂರು, ಆ. 27.  ಭೂ ಅಕ್ರಮಗಳಿಗೆ ಸಂಪೂರ್ಣ ಕಡಿವಾಣ ಹಾಕಲು ರಾಜ್ಯ ಸರ್ಕಾರ ಮುಂದಾಗಿದ್ದು, ಆರ್‌ಟಿಸಿಗೆ ಆಧಾರ್‌ ಜೋಡಿಸುವ ಅಭಿಯಾನಕ್ಕೆ ಚಾಲನೆ ನೀಡಿದೆ. ವಿಕಾಸಸೌಧದಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು, ಅಮಾಯಕರ ಜಮೀನುಗಳನ್ನು ವ್ಯವಸ್ಥಿತವಾಗಿ ದೋಚುವ ಕೆಲಸವಾಗುತ್ತಿದೆ. ಕೆಲವು ಪ್ರಕರಣಗಳಲ್ಲಿ ಸತ್ತವರ ಜಮೀನುಗಳನ್ನೂ ಸಹ ನಕಲಿ ದಾಖಲೆ ಸೃಷ್ಟಿಸಿ ಮಾರಾಟ ಮಾಡಿರುವ ಕುರಿತು ರಾಜ್ಯದ ಮೂಲೆ ಮೂಲೆಯಿಂದ ದೂರುಗಳು ಕೇಳಿ ಬರುತ್ತಿವೆ. ಇದರಿಂದ ವಂಚನೆಗೊಳಗಾದವರು ಹಲವು ವರ್ಷಗಳಿಂದ

ಭೂ ಅಕ್ರಮ ಸಂಪೂರ್ಣ ಕಡಿವಾಣಕ್ಕೆ ರಾಜ್ಯ ಸರ್ಕಾರ ಮುಂದು  ಆರ್‌ಟಿಸಿಗೆ ಆಧಾರ್‌ ಜೋಡಿಸುವ ಅಭಿಯಾನಕ್ಕೆ ಚಾಲನೆ Read More »

ಕರ್ನಾಟಕ

ಬಾಡಿಗೆ ಪಾವತಿಸದ 2 ಅಂಚೆ ಕಚೇರಿಗಳಿಗೆ ಬೀಗ ಹಾಕಿದ ಬಿಬಿಎಂಪಿ

(ನ್ಯೂಸ್ ಕಡಬ) newskadaba.c0m ಬೆಂಗಳೂರು, ಆ. 27.  ಲಕ್ಷಾಂತರ ರೂ. ಕಟ್ಟಡ ಬಾಡಿಗೆ ಪಾವತಿಸದೇ ಬಾಕಿ ಉಳಿಸಿಕೊಂಡ ನಗರದ 2 ಅಂಚೆ ಕಚೇರಿಗಳಿಗೆ ಬಿಬಿಎಂಪಿ ಬೀಗ ಹಾಕಿದೆ. ಸೇಂಟ್ ಜಾನ್ಸ್ ರಸ್ತೆಯಲ್ಲಿ ಬಿಬಿಎಂಪಿ ಸ್ವತ್ತಿನ 1,665 ಚದರಡಿ ವಿಸ್ತೀರ್ಣದ ಮಳಿಗೆ ಯಲ್ಲಿರುವ ಅಂಚೆ ಕಚೇರಿ 2014ರ ಏಪ್ರಿಲ್‌ನಿಂದಲೂ ಹಳೆಯ ಬಾಡಿಗೆಯನ್ನೇ ಪಾವತಿಸುತ್ತಿದೆ. ಪರಿಷ್ಕೃತ ಬಾಡಿಗೆ ಪಾವತಿಸಲು ಹಲವು ಬಾರಿ ನೋಟಿಸ್‌ ನೀಡಿದ್ದರೂ ಸ್ಪಂದಿಸಿರಲಿಲ್ಲ. ಒಟ್ಟು 88.91 ಲಕ್ಷ ರೂ.ಬಾಡಿಗೆ ಬಾಕಿ ಇದೆ. ಹೀಗಾಗಿ, ಪೂರ್ವ ವಲಯ ಆಯುಕ್ತರ

ಬಾಡಿಗೆ ಪಾವತಿಸದ 2 ಅಂಚೆ ಕಚೇರಿಗಳಿಗೆ ಬೀಗ ಹಾಕಿದ ಬಿಬಿಎಂಪಿ Read More »

ಕರ್ನಾಟಕ

ಅಬಕಾರಿ ನೀತಿ ಪ್ರಕರಣ  ಬಿಆರ್‌ಎಸ್ ನಾಯಕಿ ಕೆ ಕವಿತಾಗೆ ಜಾಮೀನು ಮಂಜೂರು ಮಾಡಿದ ಸುಪ್ರೀಂ ಕೋರ್ಟ್

(ನ್ಯೂಸ್ ಕಡಬ) newskadaba.c0m ದೆಹಲಿ, ಆ. 27. ಅಬಕಾರಿ ನೀತಿ ಪ್ರಕರಣದಲ್ಲಿ ಬಿಆರ್‌ಎಸ್ ನಾಯಕಿ ಕೆ ಕವಿತಾ ಅವರಿಗೆ ಸುಪ್ರೀಂಕೋರ್ಟ್ ಇಂದು ಜಾಮೀನು ಮಂಜೂರು ಮಾಡಿದೆ. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಬಿ.ಆರ್.ಗವಾಯಿ ಮತ್ತು ಕೆ.ವಿ.ವಿಶ್ವನಾಥನ್ ಅವರಿದ್ದ ಪೀಠವು, ಕವಿತಾ ಅವರು ಸುಮಾರು ಐದು ತಿಂಗಳಿನಿಂದ ಕಸ್ಟಡಿಯಲ್ಲಿದ್ದಾರೆ. ಈ ಪ್ರಕರಣಗಳಲ್ಲಿ ಕೇಂದ್ರೀಯ ತನಿಖಾ ದಳ (ಸಿಬಿಐ) ಮತ್ತು ಜಾರಿ ನಿರ್ದೇಶನಾಲಯ (ಇಡಿ) ಅವರ ವಿರುದ್ಧ ತನಿಖೆ ಪೂರ್ಣಗೊಂಡಿದೆ. ಈ ಹಗರಣದಲ್ಲಿ ಕವಿತಾ ಭಾಗಿಯಾಗಿದ್ದಾರೆ ಎಂಬುದನ್ನು ಸಾಬೀತುಪಡಿಸಲು ಯಾವ

ಅಬಕಾರಿ ನೀತಿ ಪ್ರಕರಣ  ಬಿಆರ್‌ಎಸ್ ನಾಯಕಿ ಕೆ ಕವಿತಾಗೆ ಜಾಮೀನು ಮಂಜೂರು ಮಾಡಿದ ಸುಪ್ರೀಂ ಕೋರ್ಟ್ Read More »

ರಾಷ್ಟ್ರೀಯ ನ್ಯೂಸ್

ಒನ್ ವೇ ನಲ್ಲಿ ಬಂದು ಕಾರು ಚಾಲಕನ ಜೊತೆ ಕಿರಿಕ್  ಸವಾರನಿಗೆ ಏಟು ನೀಡಿ ಬುದ್ಧಿ ಕಲಿಸಿದ ಯೋಧ   

(ನ್ಯೂಸ್ ಕಡಬ) newskadaba.c0m ಬೆಂಗಳೂರು, ಆ. 27. ಒನ್ ವೇ ನಲ್ಲಿ ಬಂದು ಕಾರು ಚಾಲಕನ ಜೊತೆ ಕಿರಿಕ್ ಮಾಡಿದ ಬೈಕ್ ಸವಾರನೋರ್ವನಿಗೆ ಗೆ ಭಾರತೀಯ ವಾಯು ಸೇನೆಯ ಯೋಧ ಏಟು ನೀಡಿ ಬುದ್ಧಿ ಕಲಿಸಿದ ಘಟನೆ ನಗರದ ಈಜೀಪುರ ಸಿಗ್ನಲ್ ಬಳಿ ನಡೆದಿದೆ. ಒನ್ ವೇ ನಲ್ಲಿ ಬಂದ ಬೈಕ್ ಸವಾರ, ಕಾರಿಗೆ ಅಡ್ಡ ಬಂದಿದ್ದಾನೆ. ಬಳಿಕ ತನ್ನ ಬೈಕ್ ಅನ್ನು ನಿಲ್ಲಿಸಿ ಕಾರನ್ನು ಸೈಡ್‌ ಗೆ ಹೋಗುವಂತೆ ಸೂಚಿಸಿದ್ದಾನೆ. ಕಾರು ಚಾಲಕ ಪಕ್ಕಕ್ಕೆ ಹೋಗದೇ

ಒನ್ ವೇ ನಲ್ಲಿ ಬಂದು ಕಾರು ಚಾಲಕನ ಜೊತೆ ಕಿರಿಕ್  ಸವಾರನಿಗೆ ಏಟು ನೀಡಿ ಬುದ್ಧಿ ಕಲಿಸಿದ ಯೋಧ    Read More »

ಕರ್ನಾಟಕ

ಜಿಎಸ್‌ ಟಿ , ಆದಾಯ ತೆರಿಗೆ ನೀಡುವವರ ಗೃಹಲಕ್ಷ್ಮಿ ಯೋಜನೆ ಅರ್ಜಿಗಳ ತಿರಸ್ಕಾರ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

(ನ್ಯೂಸ್ ಕಡಬ) newskadaba.c0m ಬೆಳಗಾವಿ, ಆ. 27.   ಜಿಎಸ್‌ ಟಿ , ಆದಾಯ ತೆರಿಗೆ ನೀಡುವವರ ಗೃಹಲಕ್ಷ್ಮಿ ಯೋಜನೆ ಅರ್ಜಿಗಳನ್ನು ತಿರಸ್ಕಾರ ಮಾಡಿದ್ದೇವೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದ್ದಾರೆ. ಈ ಕುರಿತು ಮಾತನಾಡಿದ ಅವರು, ಮೊದಲಿನಿಂದಲೂ ಜಿಎಸ್‌ ಟಿ, ಆದಾಯ ತೆರಿಗೆ ತುಂಬುವವರಿಗೆ ಬರಲ್ಲ ಅಂತಾ ಹೇಳಿದ್ದೇವೆ. ಆದರೆ ಜಿಎಸ್ ಟಿ ಇದ್ದವರೂ ನಮ್ಮ ಪೋರ್ಟಲ್ ​ಗೆ ಅರ್ಜಿ ಹಾಕಿದ್ದರು. ಸುಮಾರು ಹದಿನೈದು ಸಾವಿರ ಅರ್ಜಿಗಳು ಬಂದಿದ್ದವು. ಜಿಎಸ್‌ ಟಿ ಇರುವ ಕಾರಣಕ್ಕೆ ಅರ್ಜಿ ತಿರಸ್ಕಾರ

ಜಿಎಸ್‌ ಟಿ , ಆದಾಯ ತೆರಿಗೆ ನೀಡುವವರ ಗೃಹಲಕ್ಷ್ಮಿ ಯೋಜನೆ ಅರ್ಜಿಗಳ ತಿರಸ್ಕಾರ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ Read More »

ಕರ್ನಾಟಕ

ಇಬ್ಬರು ಬಾಲಕಿಯರನ್ನು ಕೊಲೆಗೈದ ಮಲತಂದೆ ಆರೆಸ್ಟ್

(ನ್ಯೂಸ್ ಕಡಬ) newskadaba.c0m ಬೆಂಗಳೂರು, ಆ. 27.   ಇಬ್ಬರು ಬಾಲಕಿಯರನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದ ಮಲತಂದೆಯನ್ನು ಅಮೃತಹಳ್ಳಿ ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ ಎನ್ನಲಾಗಿದೆ. ಆರೋಪಿಯನ್ನು ಕಾವೇರಿ ಲೇಔಟ್ ನಿವಾಸಿ ಕ್ಯಾಬ್ ಡ್ರೈವರ್ ಸುಮಿತ್ ಮೋಹನ್ (45) ಎಂದು ಗುರುತಿಸಲಾಗಿದೆ. ಹತ್ಯೆಯಾದ ಬಾಲಕಿಯನ್ನು ಸೃಷ್ಟಿ (14) ಹಾಗೂ ಸೋನಿಯಾ (16) ಎಂದು ಗುರುತಿಸಲಾಗಿದೆ. ಬಾಲಕಿಯರು ಕ್ರಮವಾಗಿ 8 ಮತ್ತು 9ನೇ ತರಗತಿ ಓದುತ್ತಿದ್ದರು. ಹಿರಿಯ ಮಗಳು ಫೋನ್ ನಲ್ಲಿ ಮಾತನಾಡುತ್ತಿದ್ದು, ಊಟ ಬಡಿಸುವಂತೆ ಪದೇ ಪದೇ ಕೇಳಿದರೂ ಕಿವಿಗೊಡದ

ಇಬ್ಬರು ಬಾಲಕಿಯರನ್ನು ಕೊಲೆಗೈದ ಮಲತಂದೆ ಆರೆಸ್ಟ್ Read More »

ಕರ್ನಾಟಕ, ಕ್ರೈಮ್ ನ್ಯೂಸ್

ರಾಜ್ಯದಲ್ಲಿ ಡೆಂಗ್ಯೂ ಪ್ರಕರಣ ಹೆಚ್ಚಳ..!  ಓವಿ ಟ್ರ್ಯಾಪ್ ಅಳವಡಿಕೆಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಚಾಲನೆ

(ನ್ಯೂಸ್ ಕಡಬ) newskadaba.c0m ಬೆಂಗಳೂರು, ಆ. 27.   ರಾಜ್ಯ ರಾಜಧಾನಿಯಲ್ಲಿ ಡೆಂಗ್ಯೂ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿದ್ದು, ಜನವರಿಯಿಂದ 10,000 ಕ್ಕೂ ಹೆಚ್ಚು ಡೆಂಗ್ಯೂ ಪ್ರಕರಣಗಳು ಮತ್ತು ಮೂರು ಸಾವುಗಳು ವರದಿಯಾಗಿದೆ. ಓವಿ ಟ್ರ್ಯಾಪ್ ಅಳವಡಿಕೆಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಾಗಡಿ ರಸ್ತೆಯ ಗೋಪಾಲಪುರದಲ್ಲಿ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಓವಿ ಟ್ರ್ಯಾಪ್ ಸಾಧನವು ಸೊಳ್ಳೆಗಳು, ಸೊಳ್ಳೆಗಳ ಮೊಟ್ಟೆ ನಾಶಪಡಿಸಲಿದೆ. ಪ್ರಾಯೋಗಿಕವಾಗಿ ಬಿನ್ನಿಪೇಟೆ ವಾರ್ಡ್‌ ನ ಗೋಪಾಲಪುರದಲ್ಲಿ 120 ಟ್ರ್ಯಾಪ್‌ ಗಳನ್ನು ಅಳವಡಿಸಲಾಗಿದೆ. ಇದು

ರಾಜ್ಯದಲ್ಲಿ ಡೆಂಗ್ಯೂ ಪ್ರಕರಣ ಹೆಚ್ಚಳ..!  ಓವಿ ಟ್ರ್ಯಾಪ್ ಅಳವಡಿಕೆಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಚಾಲನೆ Read More »

ಕರ್ನಾಟಕ
Scroll to Top