News Kadaba

ದ್ವೇಷ ಸೃಷ್ಟಿಸುವ ಹೇಳಿಕೆಗಳ ಅಡಿಯಲ್ಲಿ ಪ್ರಕರಣ ದಾಖಲು ಬಿವೈ ವಿಜಯೇಂದ್ರ ವಿರುದ್ಧ ಎಫ್‌ಐಆರ್‌ಗೆ ಹೈಕೋರ್ಟ್‌ ತಡೆ

(ನ್ಯೂಸ್ ಕಡಬ) newskadaba.com ಬೆಂಗಳೂರು, ಆ. 30.  ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ವಿರುದ್ಧ ನಗರದ ಹೈಗ್ರೌಂಡ್ಸ್‌ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎಫ್‌ಐಆರ್‌ಗೆ ಹೈಕೋರ್ಟ್‌ ತಡೆ ನೀಡಿದೆ. ಪ್ರಕರಣ ರದ್ದು ಪಡಿಸುವಂತೆ ಬಿ.ವೈ.ವಿಜಯೇಂದ್ರ ಅರ್ಜಿ ಸಲ್ಲಿಸಿದ್ದರು, ಇಂದು ವಿಚಾರಣೆ ನಡೆಸಿದ ನ್ಯಾ. ಎಂ ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಎಫ್‌ಐಆರ್‌ಗೆ ತಡೆ ನೀಡಿ ವಿಚಾರಣೆಯನ್ನು ಸೆ.19ಕ್ಕೆ ಮುಂದೂಡಿತು. ಮೀಸಲಾತಿಗೆ ಸಂಬಂಧಿಸಿದಂತೆ ವಿಡಿಯೊ ತುಣುಕನ್ನು ಬಿಜೆಪಿ ರಾಜ್ಯ ಘಟಕದ ಎಕ್ಸ್‌ ಖಾತೆಯಲ್ಲಿ ಹಂಚಿಕೊಳ್ಳಲಾಗಿತ್ತು. ಜನ ಪ್ರತಿನಿಧಿಗಳ ಕಾಯ್ದೆ […]

ದ್ವೇಷ ಸೃಷ್ಟಿಸುವ ಹೇಳಿಕೆಗಳ ಅಡಿಯಲ್ಲಿ ಪ್ರಕರಣ ದಾಖಲು ಬಿವೈ ವಿಜಯೇಂದ್ರ ವಿರುದ್ಧ ಎಫ್‌ಐಆರ್‌ಗೆ ಹೈಕೋರ್ಟ್‌ ತಡೆ Read More »

ಕರ್ನಾಟಕ

ತೆನೆ ಹಬ್ಬದ ಅಂಗವಾಗಿ ಬಸ್ರೂರು ಸಂತ ಫಿಲೀಪ್ ನೇರಿ ಚರ್ಚ್ ನಲ್ಲಿ 9 ದಿನದ ನೊವೆನಾ ಪ್ರಾರ್ಥನೆಗೆ ಚಾಲನೆ ಚರ್ಚ್ ನ ಧರ್ಮಗುರು ವಂದನೀಯ ರೋಯ್ ಲೋಬೋ ನೆರವೇರಿಸಿದರು

(ನ್ಯೂಸ್ ಕಡಬ) newskadaba.com ಕುಂದಾಪುರ, ಆ. 30.  ಮೊಂತಿ ಫೆಸ್ಟ್ ಅಥವಾ ತೆನೆ ಹಬ್ಬದ ಅಂಗವಾಗಿ ಬಸ್ರೂರು ಸಂತ ಫಿಲೀಪ್ ನೇರಿ ಚರ್ಚ್ ನಲ್ಲಿ 9 ದಿನದ ನೊವೆನಾ ಪ್ರಾರ್ಥನೆಗೆ ಇಂದು ಚಾಲನೆ ನೀಡಲಾಯಿತು. ಸಂತ ಫಿಲೀಪ್ ನೇರಿ ಚರ್ಚ್‍ನಲ್ಲಿ 9 ದಿನದ ನೊವೆನಾ ಪ್ರಾರ್ಥನೆಗೆ ಚಾಲನೆ ನೀಡಿದ ಚರ್ಚ್ ನ ಧರ್ಮಗುರುಗಳು ವಂದನೀಯ ರೋಯ್ ಲೋಬೋ ದಿವ್ಯ ಬಲಿಪೂಜೆ ನೆರವೇರಿಸಿ, ಮೇರಿ ಮಾತೆಗೆ ನೊವೆನಾ ಪ್ರಾರ್ಥನೆ ಸಲ್ಲಿಸಿದರು. ಬ್ರದರ್ ವಿಲ್ಸನ್ ಸಲ್ಡಾನ ಪ್ರವಚನ ನೀಡಿದರು. ಒಂಭತ್ತು

ತೆನೆ ಹಬ್ಬದ ಅಂಗವಾಗಿ ಬಸ್ರೂರು ಸಂತ ಫಿಲೀಪ್ ನೇರಿ ಚರ್ಚ್ ನಲ್ಲಿ 9 ದಿನದ ನೊವೆನಾ ಪ್ರಾರ್ಥನೆಗೆ ಚಾಲನೆ ಚರ್ಚ್ ನ ಧರ್ಮಗುರು ವಂದನೀಯ ರೋಯ್ ಲೋಬೋ ನೆರವೇರಿಸಿದರು Read More »

ಕರಾವಳಿ

ಉದ್ದು ಮತ್ತು ಸೋಯಾಬಿನ್‌ ಬೆಳೆಗಳನ್ನು ಬೆಂಬಲ ಬೆಲೆಯಲ್ಲಿ ಖರೀದಿಸಲು ಕೇಂದ್ರ ಸರ್ಕಾರ ಅನುಮತಿ   ಸಚಿವ ಪ್ರಹ್ಲಾದ್‌ ಜೋಶಿ                     

(ನ್ಯೂಸ್ ಕಡಬ) newskadaba.com ನವದೆಹಲಿ, ಆ. 30.  ರಾಜ್ಯದಲ್ಲಿ ಉದ್ದು ಮತ್ತು ಸೋಯಾಬಿನ್‌ ಬೆಳೆಗಳನ್ನು ಬೆಂಬಲ ಬೆಲೆಯಲ್ಲಿ ಖರೀದಿಸಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ ಎಂದು ಕೇಂದ್ರ ಸಚಿವ ಗ್ರಾಹಕರ ವ್ಯವಹಾರ, ಆಹಾರ ಮತ್ತು ನಾಗರಿಕ ಸರಬರಾಜು ಖಾತೆಯ ಸಚಿವ ಪ್ರಹ್ಲಾದ್‌ ಜೋಶಿ ತಿಳಿಸಿದ್ದಾರೆ. ರಾಜ್ಯದಲ್ಲಿ ಹೆಸರು, ಸೂರ್ಯಕಾಂತಿ ಜತೆಗೆ ಈಗ ಉದ್ದು ಮತ್ತು ಸೋಯಾಬಿನ್ ಅನ್ನೂ ಬೆಂಬಲ ಬೆಲೆಯಲ್ಲಿ ಖರೀದಿಸುವಂತೆ ರಾಜ್ಯ ಸರ್ಕಾರಕ್ಕೆ ಕೇಂದ್ರ ನಿರ್ದೇಶಿಸಿದೆ ಎಂದು ಹೇಳಿದ್ದಾರೆ. ನಾಲ್ಕೈದು ದಿನಗಳ ಹಿಂದಷ್ಟೇ ಹೆಸರು ಮತ್ತು

ಉದ್ದು ಮತ್ತು ಸೋಯಾಬಿನ್‌ ಬೆಳೆಗಳನ್ನು ಬೆಂಬಲ ಬೆಲೆಯಲ್ಲಿ ಖರೀದಿಸಲು ಕೇಂದ್ರ ಸರ್ಕಾರ ಅನುಮತಿ   ಸಚಿವ ಪ್ರಹ್ಲಾದ್‌ ಜೋಶಿ                      Read More »

ರಾಷ್ಟ್ರೀಯ ನ್ಯೂಸ್

ಪುತ್ತೂರು: ಅರುಣ್‌ ಪುತ್ತಿಲ ವಿರುದ್ಧ  ಮಾನಹಾನಿಕರ ಸುದ್ದಿಗಳನ್ನು ಪ್ರಸಾರ ಮಾಡದಂತೆ ನಿರ್ಬಂಧ ಹೊರಡಿಸಿದ ಕೋರ್ಟ್

(ನ್ಯೂಸ್ ಕಡಬ) newskadaba.com ಪುತ್ತೂರು, ಆ. 30.  ತಮ್ಮ ವಿರುದ್ಧ ಯಾವುದೇ ಮಾನಹಾನಿಕರ ಸುದ್ದಿಗಳನ್ನು ಪ್ರಸಾರ ಮಾಡದಂತೆ ಪುತ್ತೂರಿನ ಬಿಜೆಪಿ ಮುಖಂಡ ಅರುಣ್‌ ಪುತ್ತಿಲ ಕೋರ್ಟ್‌ ಮೊರೆ ಹೋಗಿದ್ದರು. ನಿರ್ಬಂಧಕಾಜ್ಞೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಬೆಂಗಳೂರಿನ ಸಿಟಿ ಸಿವಿಲ್ ನ್ಯಾಯಾಲಯ ಮಾನ್ಯ ಮಾಡಿದ್ದು, ಮಾನಹಾನಿ, ತೇಜೋವಧೆ ಸುದ್ದಿಗಳನ್ನು, ವರದಿಗಳನ್ನು ಪ್ರಸಾರ ಮಾಡದಂತೆ ಪ್ರತಿಬಂಧಕಾಜ್ಞೆ ಹೊರಡಿಸಿದೆ. ಪುತ್ತಿಲ ಅವರ ಮಾನಹಾನಿ ಆಗುವಂತಹ ಯಾವುದೇ ಸುದ್ದಿ ಅಥವಾ ವರದಿಗಳನ್ನು ಮುದ್ರಣ ಹಾಗೂ ವಿದ್ಯುನ್ಮಾನ ಮಾಧ್ಯಮಗಳು ಮತ್ತು ಸಾಮಾಜಿಕ ಮಾಧ್ಯಮಗಳು ಪ್ರಕಟಿಸುವುದಾಗಲೀ

ಪುತ್ತೂರು: ಅರುಣ್‌ ಪುತ್ತಿಲ ವಿರುದ್ಧ  ಮಾನಹಾನಿಕರ ಸುದ್ದಿಗಳನ್ನು ಪ್ರಸಾರ ಮಾಡದಂತೆ ನಿರ್ಬಂಧ ಹೊರಡಿಸಿದ ಕೋರ್ಟ್ Read More »

ಕರಾವಳಿ

ಚಂಡಮಾರುತ ತೀವ್ರವಾಗಿದ್ದು ಇಂದು ಅರಬ್ಬಿ ಸಮುದ್ರದ ಮೇಲೆ ಹೊರಹೊಮ್ಮಿ ಓಮನ್ ಕರಾವಳಿಯತ್ತ ಸಾಗುವ ನಿರೀಕ್ಷೆ

(ನ್ಯೂಸ್ ಕಡಬ) newskadaba.com ನವದೆಹಲಿ, ಆ. 30.  ಮುಂಗಾರು ಮಳೆ ಋತುವಿನ ಈ ಆಗಸ್ಟ್‌ ತಿಂಗಳಲ್ಲಿ ಅಪರೂಪದ ಹವಾಮಾನ ವಿದ್ಯಮಾನದಲ್ಲಿ, ಗುಜರಾತ್‌ನ ಸೌರಾಷ್ಟ್ರ-ಕಚ್ ಪ್ರದೇಶದ ಮೇಲೆ ಚಂಡಮಾರುತವು ತೀವ್ರವಾಗಿದ್ದು, ಇಂದು ಅರಬ್ಬಿ ಸಮುದ್ರದ ಮೇಲೆ ಹೊರಹೊಮ್ಮಿ ಓಮನ್ ಕರಾವಳಿಯತ್ತ ಸಾಗುವ ನಿರೀಕ್ಷೆಯಿದೆ. ಭಾರತೀಯ ಹವಾಮಾನ ಇಲಾಖೆ (IMD) ಹೊರಡಿಸಿದ ರಾಷ್ಟ್ರೀಯ ಬುಲೆಟಿನ್ ಸೌರಾಷ್ಟ್ರ ಮತ್ತು ಕಛ್ ಮೇಲೆ ಆಳವಾದ ವಾಯುಭಾರ ಕುಸಿತವು ಪಶ್ಚಿಮ-ನೈಋತ್ಯ ದಿಕ್ಕಿನಲ್ಲಿ ಚಲಿಸುತ್ತದೆ. ಕಚ್ ಮತ್ತು ಪಕ್ಕದ ಪಾಕಿಸ್ತಾನದ ಕರಾವಳಿಯ ಈಶಾನ್ಯ ಅರೇಬಿಯನ್ ಸಮುದ್ರದ

ಚಂಡಮಾರುತ ತೀವ್ರವಾಗಿದ್ದು ಇಂದು ಅರಬ್ಬಿ ಸಮುದ್ರದ ಮೇಲೆ ಹೊರಹೊಮ್ಮಿ ಓಮನ್ ಕರಾವಳಿಯತ್ತ ಸಾಗುವ ನಿರೀಕ್ಷೆ Read More »

ರಾಷ್ಟ್ರೀಯ ನ್ಯೂಸ್

ಚಲಿಸುತ್ತಿದ್ದ ರೈಲಿನಲ್ಲಿ ಯುವತಿಗೆ ಲೈಂಗಿಕ ಕಿರುಕುಳ..!   ಆರೋಪಿ ಅರೆಸ್ಟ್..!           

(ನ್ಯೂಸ್ ಕಡಬ) newskadaba.com ಉಡುಪಿ, ಆ. 30.  ಬೆಂಗಳೂರಿನಿಂದ ಕಾರವಾರಕ್ಕೆ ಚಲಿಸುತ್ತಿದ್ದ ರೈಲಿನಲ್ಲಿ ಯುವತಿಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲ ಭಟ್ಕಳದ ವಿದ್ಯಾರ್ಥಿಯೊಬ್ಬನನ್ನು ಮಣಿಪಾಲ ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ಮೊಹಮ್ಮದ್ ಶುರೈಮ್ (22) ಎಂದು ಗುರುತಿಸಲಾಗಿದೆ. ಕಳೆದ ಭಾನುವಾರ ಬೆಳಿಗ್ಗೆ ರೈಲಿನಲ್ಲಿ ಬರುತ್ತಿದ್ದಾಗ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಭಾನುವಾರ ಮುಂಜಾನೆ ರೈಲು ಸಂಚರಿಸುತ್ತಿದ್ದಾಗಲೇ ಅಸಭ್ಯ ವರ್ತನೆ ತೋರುತ್ತಿದ್ದ ಆರೋಪಿ, ಯುವತಿಯ ಖಾಸಗಿ ಅಂಗಗಳನ್ನು ಮುಟ್ಟಿ ಕಾಮಚೇಷ್ಠೆ ತೀರಿಸಿಕೊಳ್ಳುತ್ತಿದ್ದ ಎನ್ನಲಾಗಿದೆ. ಇನ್ನೇನು ಉಡುಪಿಗೆ

ಚಲಿಸುತ್ತಿದ್ದ ರೈಲಿನಲ್ಲಿ ಯುವತಿಗೆ ಲೈಂಗಿಕ ಕಿರುಕುಳ..!   ಆರೋಪಿ ಅರೆಸ್ಟ್..!            Read More »

ಕರಾವಳಿ, ಕ್ರೈಮ್ ನ್ಯೂಸ್

ಛತ್ರಪತಿ ಶಿವಾಜಿ ಪ್ರತಿಮೆ ಕುಸಿತ ಪ್ರತಿಮೆಯ ವಿನ್ಯಾಸಗಾರ ಅರೆಸ್ಟ್  

(ನ್ಯೂಸ್ ಕಡಬ) newskadaba.com ಮುಂಬೈ, ಆ. 30.  ಮಹಾರಾಷ್ಟ್ರದ ಸಿಂಧುದುರ್ಗ ಜಿಲ್ಲೆಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ಕುಸಿದುಬಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಮೆಯ ವಿನ್ಯಾಸಗಾರ ಚೇತನ್ ಪಾಟೀಲ್ ಅವರನ್ನು ಬಂಧಿಸಲಾಗಿದೆ. ಶಿವಾಜಿ ಪ್ರತಿಮೆ ಕುಸಿದುಬಿದ್ದ ಘಟನೆಗೆ ಸಂಬಂಧಿಸಿದಂತೆ ಪ್ರತಿಮೆ ನಿರ್ಮಾಣದ ಗುತ್ತಿಗೆದಾರ ಹಾಗೂ ವಿನ್ಯಾಸಗಾರ ಚೇತನ್ ಪಾಟೀಲ್ ವಿರುದ್ಧ ಮಂಗಳವಾರ ಪೊಲೀಸರು ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಅದರಂತೆ ಚೇತನ್ ಪಾಟೀಲ್ ಅವರನ್ನು ಕೊಲ್ಲಾಪುರದಲ್ಲಿ ಗುರುವಾರ ತಡರಾತ್ರಿ ವಶಕ್ಕೆ ಪಡೆಯಲಾಗಿದೆ. ಹೆಚ್ಚಿನ ತನಿಖೆಗಾಗಿ ಸಿಂಧುದುರ್ಗ ಪೊಲೀಸರಿಗೆ ಹಸ್ತಾಂತರಿಸಲಾಗಿದೆ ಎಂದು ಕೊಲ್ಲಾಪುರ

ಛತ್ರಪತಿ ಶಿವಾಜಿ ಪ್ರತಿಮೆ ಕುಸಿತ ಪ್ರತಿಮೆಯ ವಿನ್ಯಾಸಗಾರ ಅರೆಸ್ಟ್   Read More »

ರಾಷ್ಟ್ರೀಯ ನ್ಯೂಸ್

ರಾಜ್ಯಗಳಲ್ಲಿ ಮಳೆ ಹೆಚ್ಚಾಗಿ ಈರುಳ್ಳಿ ಉತ್ಪಾದನೆ ಕುಸಿತ- ದರ ಹೆಚ್ಚಳ

(ನ್ಯೂಸ್ ಕಡಬ) newskadaba.com ಬೆಂಗಳೂರು, ಆ. 30. ಕರ್ನಾಟಕದಲ್ಲಿ ಮಳೆ ಹೆಚ್ಚಳದ ಪರಿಣಾಮ ಈರುಳ್ಳಿಯ ಉತ್ಪಾದನೆಯಲ್ಲಿ ಭಾರಿ ಕುಸಿತ ಕಂಡಿದೆ. ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಈರುಳ್ಳಿ ಬರುತ್ತಿಲ್ಲ.‌ ಹೀಗಾಗಿ ರಾಜ್ಯಕ್ಕೆ ಪುಣೆ, ಮಹಾರಾಷ್ಟ್ರದಿಂದ ಈರುಳ್ಳಿ ತರಿಸಲಾಗುತ್ತಿದ್ದು ಬೆಲೆ ಏರಿಕೆಯಾಗಿದೆ ಎಂದು ವರದಿಯಾಗಿದೆ. ಒಂದು ಕೆಜಿ ಈರುಳ್ಳಿಯ ಬೆಲೆ 60-70 ರೂಪಾಯಿ ಆಗಿದೆ.‌ ಈ ಮೊದಲು ಉತ್ತರ ಕರ್ನಾಟಕ ಭಾಗದಿಂದ ರಾಜ್ಯಕ್ಕೆ ಈರುಳ್ಳಿ ಪೂರೈಕೆಯಾಗುತ್ತಿತ್ತು. ಆದರೆ, ಉತ್ತರ ಕರ್ನಾಟಕದಲ್ಲಿ ಹೆಚ್ಚು ಮಳೆಯಾಗುತ್ತಿದ್ದು, ಪರಿಣಾಮವಾಗಿ ಈರುಳ್ಳಿ ಬೆಳೆ ಕೊಳೆತು ಹೋಗುತ್ತಿದೆ.

ರಾಜ್ಯಗಳಲ್ಲಿ ಮಳೆ ಹೆಚ್ಚಾಗಿ ಈರುಳ್ಳಿ ಉತ್ಪಾದನೆ ಕುಸಿತ- ದರ ಹೆಚ್ಚಳ Read More »

ಕರ್ನಾಟಕ

ಸತತ 4 ಬಾರಿ ಅನುತ್ತೀರ್ಣರಾಗಿ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಯಶಸ್ವಿಯಾದ ಅನುಷ್ಕಾ ಸರ್ಕಾರ್

(ನ್ಯೂಸ್ ಕಡಬ) newskadaba.com ನವದೆಹಲಿ, ಆ. 30. ಶ್ರೀರಾಂಪುರದ ಹುಡುಗಿ ಅನುಷ್ಕಾ ಸರ್ಕಾರ್ ಸತತ ನಾಲ್ಕು ಬಾರಿ ಅನುತ್ತೀರ್ಣರಾಗಿ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಯಶಸ್ವಿಯಾಗುವ ಮೂಲಕ ಎಲ್ಲರನ್ನು ಅಚ್ಚರಿಗೊಳಿಸಿದ್ದಾರೆ. ಪಶ್ಚಿಮ ಬಂಗಾಳದವರಾದ ಅನುಷ್ಕಾ ಚಿಕ್ಕ ವಯಸ್ಸಿನಲ್ಲೇ ಸಾರ್ವಜನಿಕ ಸೇವೆಯ ಆಸಕ್ತಿ ಹೊಂದಿದ್ದರು. ಮೂಲತಃ ಹೂಗ್ಲಿಯ ಶ್ರೀರಾಂಪುರದವರಾದ ಅನುಷ್ಕಾ, ದೃಢಸಂಕಲ್ಪ ಮತ್ತು ಪರಿಶ್ರಮದಿಂದ ತಾನು ಅಂದುಕೊಂಡಿದ್ದನ್ನು ಸಾಧಿಸಿದರು. ತಮ್ಮ ಶೈಕ್ಷಣಿಕ ಪ್ರಯಾಣವನ್ನು ಸೇಂಟ್ ಜೋಸೆಫ್ ಕಾನ್ವೆಂಟ್ ಶಾಲೆಯಲ್ಲಿ ಪ್ರಾರಂಭಿಸಿದರು ಮತ್ತು ನಂತರ ಲೇಡಿ ಬ್ರಬೋರ್ನ್ ಕಾಲೇಜಿನಲ್ಲಿ ಭೂಗೋಳಶಾಸ್ತ್ರದಲ್ಲಿ ಪದವಿ ಪಡೆದರು.

ಸತತ 4 ಬಾರಿ ಅನುತ್ತೀರ್ಣರಾಗಿ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಯಶಸ್ವಿಯಾದ ಅನುಷ್ಕಾ ಸರ್ಕಾರ್ Read More »

ರಾಷ್ಟ್ರೀಯ ನ್ಯೂಸ್

150 ಕ್ಯಾಬಿನ್ ಸಿಬ್ಬಂದಿಯನ್ನು ವೇತನವಿಲ್ಲದೆ ರಜೆ ನೀಡಿ ಕಳುಹಿಸಿದ ವಿಮಾನಯಾನ ಸಂಸ್ಥೆ

(ನ್ಯೂಸ್ ಕಡಬ) newskadaba.com ನವದೆಹಲಿ, ಆ. 30. ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಸ್ಪೈಸ್ ಜೆಟ್ ವಿಮಾನಯಾನ ಸಂಸ್ಥೆ 150 ಕ್ಯಾಬಿನ್ ಸಿಬ್ಬಂದಿಯನ್ನು ಮೂರು ತಿಂಗಳ ಕಾಲ ರಜೆ ನೀಡಿ ಕಳುಹಿಸಿದೆ. ಹಣಕಾಸು ಸೇರಿದಂತೆ ಕಾನೂನು ಗುತ್ತಿಗೆದಾರರ ಸಮಸ್ಯೆಗಳನ್ನು ಸ್ಪೈಸ್ ಜೆಟ್ ಎದುರಿಸುತ್ತಿದೆ. ಈ ಹಿನ್ನಲೆ ವಿಮಾನಗಳು ಕಡಿಮೆ ಸಂಖ್ಯೆಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಆರ್ಥಿಕ ಸಮಸ್ಯೆಯನ್ನು ಸರಿದೂಗಿಸುವ ನಿಟ್ಟಿನಲ್ಲಿ 150 ಕ್ಯಾಬಿನ್ ಸಿಬ್ಬಂದಿಯನ್ನು ಮೂರು ತಿಂಗಳವರೆಗೆ ವೇತನವಿಲ್ಲದೆ ರಜೆಯ ಮೇಲೆ ಕಳುಹಿಸಲಾಗುವುದು ಎಂದು ವಿಮಾನಯಾನ ವಕ್ತಾರರು ತಿಳಿಸಿದ್ದಾರೆ.    

150 ಕ್ಯಾಬಿನ್ ಸಿಬ್ಬಂದಿಯನ್ನು ವೇತನವಿಲ್ಲದೆ ರಜೆ ನೀಡಿ ಕಳುಹಿಸಿದ ವಿಮಾನಯಾನ ಸಂಸ್ಥೆ Read More »

ರಾಷ್ಟ್ರೀಯ ನ್ಯೂಸ್
Scroll to Top