News Kadaba

ಉಡುಪಿ: ಶಿಕ್ಷಕರ ದಿನಾಚರಣೆಯ ಅಂಗವಾಗಿ 87 ವರ್ಷದ ನಿವೃತ್ತ ಶಿಕ್ಷಕಿಗೆ ಜೈಂಟ್ಸ್ ಗ್ರೂಪ್ ವತಿಯಿಂದ ಸನ್ಮಾನ

(ನ್ಯೂಸ್ ಕಡಬ) newskadaba.com  ಉಡುಪಿ, ಸೆ. 5. ಶಿಕ್ಷಕರ ದಿನಾಚರಣೆಯ ಅಂಗವಾಗಿ ಉಡುಪಿಯ ಬ್ರಹ್ಮಗಿರಿಯಲ್ಲಿರುವ ಆರಾಧನಾ ವೃದ್ಧಾಶ್ರಮದಲ್ಲಿ 87 ವರ್ಷದ ನಿವೃತ್ತ ಶಿಕ್ಷಕಿ ಸತ್ಯವತಿ ಪ್ರಭು ಅವರನ್ನು ಉಡುಪಿಯ ಜೈಂಟ್ಸ್ ಗ್ರೂಪ್ ವತಿಯಿಂದ ಸನ್ಮಾನಿಸಲಾಯಿತು. ಸಮಾರಂಭದ ಅಧ್ಯಕ್ಷತೆಯನ್ನು ಜೈಂಟ್ಸ್ ಉಡುಪಿ ಅಧ್ಯಕ್ಷ ಯಶವಂತ ಸಾಲಿಯಾನ್ ವಹಿಸಿದ್ದರು. ಸಮಾರಂಭದಲ್ಲಿ ಜೈಂಟ್ಸ್ ವೆಲ್ಫೇರ್ ಫೌಂಡೇಶನ್ ಮುಂಬೈನ ಕೇಂದ್ರ ಸಮಿತಿ ಸದಸ್ಯ ದಿನಕರ್ ಅಮೀನ್ ಅವರು ಭಾಷಣ ಮಾಡಿದರು, ಹಣಕಾಸು ನಿರ್ದೇಶಕ ದಿವಾಕರ ಪೂಜಾರಿ ಸ್ವಾಗತಿಸಿದರು. ಡಯಾನಾ ಸುಪ್ರಿಯಾ ಅವರು ಶಿಕ್ಷಕಿ […]

ಉಡುಪಿ: ಶಿಕ್ಷಕರ ದಿನಾಚರಣೆಯ ಅಂಗವಾಗಿ 87 ವರ್ಷದ ನಿವೃತ್ತ ಶಿಕ್ಷಕಿಗೆ ಜೈಂಟ್ಸ್ ಗ್ರೂಪ್ ವತಿಯಿಂದ ಸನ್ಮಾನ Read More »

ಕರಾವಳಿ

ರಸ್ತೆ ಅಪಘಾತ- ಯುವಕ ಮೃತ್ಯು..!  

(ನ್ಯೂಸ್ ಕಡಬ) newskadaba.com  ಮಂಗಳೂರು, ಸೆ. 5. ರಸ್ತೆ ಅಪಘಾತ ಸಂಭವಿಸಿ ಯುವಕನೋರ್ವ ಮೃತಪಟ್ಟಿರುವ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಮುಕ್ಕ ಜಂಕ್ಷನ್ ನಲ್ಲಿ ಬೆಳಗ್ಗೆ ನಡೆದಿದೆ. ಮೃತ ಯುವಕನನ್ನು ಹಳೆಯಂಗಡಿ ಇಂದಿರಾನಗರಇಂದಿರಾನಗರ ನಿವಾಸಿ ಗಣೇಶ ದೇವಾಡಿಗ (27) ಎಂದು ಗುರುತಿಸಲಾಗಿದೆ. ಗಣೇಶ ಅವರು ಪಣಂಬೂರು ಬಂದರ್ ನಲ್ಲಿ ಉದ್ಯೋಗದಲ್ಲಿದ್ದು, ಬೆಳಗ್ಗೆ 7 ಗಂಟೆಯ ಸುಮಾರಿಗೆ ಕೆಲಸಕ್ಕೆ ತನ್ನ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದರು. ಮುಕ್ಕ ಜಂಕ್ಷನ್ ನಲ್ಲಿ ಹಾಕಲಾಗಿದ್ದ ಬ್ಯಾರಿಕೇಡ್ ಬಳಿ ಸ್ಕೂಟರ್ ನಿಧಾನಿಸಿದಾಗ ಹಿಂದಿನಿಂದ ಬಂದ

ರಸ್ತೆ ಅಪಘಾತ- ಯುವಕ ಮೃತ್ಯು..!   Read More »

ಕರಾವಳಿ, ಕ್ರೈಮ್ ನ್ಯೂಸ್

ಗೋರಕ್ಷಕರಿಂದ ಹತ್ಯೆಯಾದ ಸಬೀರ್ ಮಲಿಕ್ ಪತ್ನಿಗೆ ಉದ್ಯೋಗ ನೇಮಕಾತಿ ಪತ್ರ ಹಸ್ತಾಂತರಿಸಿದ ಮಮತಾ ಬ್ಯಾನರ್ಜಿ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸುವುದಾಗಿ ಭರವಸೆ

(ನ್ಯೂಸ್ ಕಡಬ) newskadaba.com  ಕೋಲ್ಕತ್ತಾ, ಸೆ. 5. ಆ.27ರಂದು ಹರ್ಯಾಣದಲ್ಲಿ ಗೋರಕ್ಷಕರಿಂದ ಹತ್ಯೆಗೀಡಾದ ಶಿಬ್‌ ಗಂಜ್‌ ನ ಸಬೀರ್ ಮಲಿಕ್ ಅವರ ವಿಧವೆ ಶಕೀಲಾ ಸರ್ದಾರ್ ಅವರಿಗೆ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರು ಉದ್ಯೋಗ ನೇಮಕಾತಿ ಪತ್ರವನ್ನು ಹಸ್ತಾಂತರಿಸಿದ್ದಾರೆ. ದಕ್ಷಿಣ 24 ಪರಗಣಗಳ ಬಸಂತಿಯಲ್ಲಿ ಬಿಎಲ್ ಮತ್ತು ಎಲ್ಆರ್ ಕಚೇರಿಯಲ್ಲಿ ಅಟೆಂಡರ್ ಹುದ್ದೆಯನ್ನು ನೀಡಲಾಗಿದೆ. ಸಿಎಂ ಮಮತಾ ಬ್ಯಾನರ್ಜಿ ಇದೇ ವೇಳೆ ದಂಪತಿಯ 2 ವರ್ಷದ ಮಗಳು ಸಾನಿಯಾಗೆ ಚಾಕಲೇಟ್ ಮತ್ತು ಬಿಸ್ಕೆಟ್ ನೀಡಿದ್ದು,

ಗೋರಕ್ಷಕರಿಂದ ಹತ್ಯೆಯಾದ ಸಬೀರ್ ಮಲಿಕ್ ಪತ್ನಿಗೆ ಉದ್ಯೋಗ ನೇಮಕಾತಿ ಪತ್ರ ಹಸ್ತಾಂತರಿಸಿದ ಮಮತಾ ಬ್ಯಾನರ್ಜಿ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸುವುದಾಗಿ ಭರವಸೆ Read More »

ರಾಷ್ಟ್ರೀಯ ನ್ಯೂಸ್

ಉಭಯ ದೇಶಗಳ ನಡುವೆ ಮಹತ್ವದ 4ಒಪ್ಪಂದಗಳಿಗೆ ಪ್ರಧಾನಿ ನರೇಂದ್ರ ಮೋದಿ ಸಹಿ

(ನ್ಯೂಸ್ ಕಡಬ) newskadaba.com  ನವದೆಹಲಿ, ಸೆ. 5. ಇಂದು ಸಿಂಗಾಪುರ ಪ್ರಧಾನಿ ಲಾರೆನ್ಸ್ ವಾಂಗ್ ರೊಂದಿಗೆ ಫಲಪ್ರದ ಮಾತುಕತೆ ನಡೆಸಿದ ಪ್ರಧಾನಿ ಮೋದಿ ಮತ್ತು ಅವರ ಸಿಂಗಾಪುರದ ಸಹವರ್ತಿ ಲಾರೆನ್ಸ್ ವಾಂಗ್ ಅವರ ಸಮ್ಮುಖದಲ್ಲಿ, ಉಭಯ ದೇಶಗಳ ನಡುವೆ ಅನೇಕ ಒಪ್ಪಂದಗಳಿಗೆ ಸಹಿ ಹಾಕಲಾಯಿತು, ಇದರಲ್ಲಿ ಸೆಮಿಕಂಡಕ್ಟರ್ ಪ್ರಮುಖ ಒಪ್ಪಂದವೂ ಸೇರಿದೆ. ಡಿಜಿಟಲ್ ತಂತ್ರಜ್ಞಾನ, ಆರೋಗ್ಯ ಮತ್ತು ಔಷಧ, ಶೈಕ್ಷಣಿಕ ಸಹಕಾರ ಮತ್ತು ಕೌಶಲ್ಯ ಅಭಿವೃದ್ಧಿ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಪ್ರಧಾನಿ ಮೋದಿ ಮತ್ತು ಅವರ ಸಹವರ್ತಿ

ಉಭಯ ದೇಶಗಳ ನಡುವೆ ಮಹತ್ವದ 4ಒಪ್ಪಂದಗಳಿಗೆ ಪ್ರಧಾನಿ ನರೇಂದ್ರ ಮೋದಿ ಸಹಿ Read More »

ರಾಷ್ಟ್ರೀಯ ನ್ಯೂಸ್

2027ರೊಳಗೆ 11 ಕೋಟಿ ರೈತರಿಗೆ ‘ಡಿಜಿಟಲ್‌ ಐಡಿ’ ಕಾರ್ಡ್ ಸೃಷ್ಟಿಸುವ ಗುರಿ ಹೊಂದಿದ ಸರ್ಕಾರ

(ನ್ಯೂಸ್ ಕಡಬ) newskadaba.com  ನವದೆಹಲಿ, ಸೆ. 5. ರೈತ ಸಮುದಾಯವನ್ನು ಸಬಲೀಕರಣಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ 2027ರೊಳಗೆ 11 ಕೋಟಿ ರೈತರಿಗೆ ‘ಡಿಜಿಟಲ್‌ ಐಡಿ’ ಕಾರ್ಡ್ ಸೃಷ್ಟಿಸುವ ಗುರಿ ಹೊಂದಿದೆ. ಇದು ಆಧಾರ್ ಕಾರ್ಡ್‌ನಂತೆಯೇ ಇರುತ್ತದೆ. ರೈತರಿಗೆ ಪ್ರಮುಖ ಸೇವೆಗಳು ಮತ್ತು ಯೋಜನೆಗಳನ್ನು ತಲುಪಿಸುವ ರೈತ ಕೇಂದ್ರಿತ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ (ಡಿಪಿಐ)ದಂತೆ ರಚಿಸಿರುವ ಅಗ್ರಿಸ್ಟಾಕ್ ಉಪಕ್ರಮದ ಭಾಗವಾಗಿರುವುದು ಇದರ ಗುರಿಯಾಗಿದೆ. ಆಧಾರ್ ಕಾರ್ಡ್‌ನಂತೆಯೇ ರೈತರಿಗೆ ‘ರೈತ ಗುರುತಿನ ಚೀಟಿ ಪರಿಚಯಿಸುವುದು ಅಗ್ರಿಸ್ಟ್ಯಾಕ್‌ನ ಪ್ರಮುಖ ವೈಶಿಷ್ಟ್ಯವಾಗಿದೆ. 2024-25ರ

2027ರೊಳಗೆ 11 ಕೋಟಿ ರೈತರಿಗೆ ‘ಡಿಜಿಟಲ್‌ ಐಡಿ’ ಕಾರ್ಡ್ ಸೃಷ್ಟಿಸುವ ಗುರಿ ಹೊಂದಿದ ಸರ್ಕಾರ Read More »

ರಾಷ್ಟ್ರೀಯ ನ್ಯೂಸ್

ಪ್ರೌಢಶಾಲೆಯಲ್ಲಿ ಗುಂಡಿನ ದಾಳಿಗೆ ನಾಲ್ವರು ಬಲಿ: ಒಂಬತ್ತು ಮಂದಿಗೆ ಗಾಯ  14 ವರ್ಷದ ಶಂಕಿತ ಆರೋಪಿ ಅರೆಸ್ಟ್..!    

(ನ್ಯೂಸ್ ಕಡಬ) newskadaba.com  ವಾಷಿಂಗ್ಟನ್, ಸೆ. 5. ಉತ್ತರ ಜಾರ್ಜಿಯಾದ ಪ್ರೌಢಶಾಲೆಯಲ್ಲಿ ನಡೆದ ಗುಂಡಿನ ದಾಳಿಗೆ ನಾಲ್ವರು ಬಲಿಯಾಗಿದ್ದಾರೆ, ಒಂಬತ್ತು ಮಂದಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ. ಶಂಕಿತನನ್ನು 14 ವರ್ಷದ ಕೋಲ್ಟ್ ಗ್ರೇ ಎಂದು ಗುರುತಿಸಲಾಗಿದೆ. ಬಲಿಯಾದವರನ್ನು ಮೇಸನ್ ಶೆರ್ಮರ್‌ಹಾರ್ನ್, (14) ಕ್ರಿಶ್ಚಿಯನ್ ಅಂಗುಲೋ, (14) ಮತ್ತು ಶಿಕ್ಷಕರಾದ ರಿಚರ್ಡ್ ಆಸ್ಪಿನ್‌ವಾಲ್, (39) ಮತ್ತು ಕ್ರಿಸ್ಟಿನಾ ಇರಿಮಿ, (53) ಎಂದು ಗುರುತಿಸಲಾಗಿದೆ. ಆಸ್ಪತ್ರೆಗೆ ದಾಖಲಾದ ಎಲ್ಲಾ ಒಂಬತ್ತು ಜನರಿಗೆ ಗಾಯಗಳಾಗಿದ್ದು ಚೇತರಿಸಿಕೊಳ್ಳುತ್ತಿದ್ದಾರೆ. ಆಪಾದಿತ

ಪ್ರೌಢಶಾಲೆಯಲ್ಲಿ ಗುಂಡಿನ ದಾಳಿಗೆ ನಾಲ್ವರು ಬಲಿ: ಒಂಬತ್ತು ಮಂದಿಗೆ ಗಾಯ  14 ವರ್ಷದ ಶಂಕಿತ ಆರೋಪಿ ಅರೆಸ್ಟ್..!     Read More »

ಅಂತರ್ರಾಷ್ಟ್ರೀಯ ನ್ಯೂಸ್, ಕ್ರೈಮ್ ನ್ಯೂಸ್

ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ: ವೈದ್ಯ ಅರೆಸ್ಟ್  

(ನ್ಯೂಸ್ ಕಡಬ) newskadaba.com  ಚೆನ್ನೈ, ಸೆ. 5. ತಿರುಚ್ಚಿಯ ಸರ್ಕಾರಿ ಅನುದಾನಿತ ಶಾಲಾ ಹಾಸ್ಟೆಲ್‌ ನಲ್ಲಿ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ವೈದ್ಯನೋರ್ವನನ್ನು ಬಂಧಿಸಲಾಗಿದೆ. ಎಸ್ ಸ್ಯಾಮ್ಸನ್ ಡೇನಿಯಲ್(31) ಬಂಧಿತ ವೈದ್ಯ. ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯ ಸೆಕ್ಷನ್‌ಗಳ ಅಡಿಯಲ್ಲಿ ಆತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. 2017ರಲ್ಲಿ ಪುದುಚೇರಿಯಿಂದ ವೈದ್ಯಕೀಯ ಪದವಿಯನ್ನು ಪೂರ್ಣಗೊಳಿಸಿದ ನಂತರ 2021ರಲ್ಲಿ ತನ್ನ ಸರ್ಕಾರಿ ಸೇವೆಯನ್ನು ಪ್ರಾರಂಭಿಸಿದ್ದ ಆರೋಪಿ ಸ್ಯಾಮ್ಸನ್, ತಿರುಚಿರಾಪಳ್ಳಿಗೆ ವರ್ಗಾವಣೆಯಾಗುವ ಮೊದಲು ತೂತುಕುಡಿಯಲ್ಲಿದ್ದನು

ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ: ವೈದ್ಯ ಅರೆಸ್ಟ್   Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಎನ್‌ ಕೌಂಟರ್‌ ನಲ್ಲಿ 6 ಮಾವೋವಾದಿಗಳ ಹತ್ಯೆ..! ಇಬ್ಬರು ಪೊಲೀಸ್ ಸಿಬ್ಬಂದಿಗೆ ಗಾಯ  

(ನ್ಯೂಸ್ ಕಡಬ) newskadaba.com  ತೆಲಂಗಾಣ, ಸೆ. 5. ಭದ್ರಾದ್ರಿ ಕೊತಗುಡೆಂ ಜಿಲ್ಲೆಯ ನಕ್ಸಲೀಯರ ಭದ್ರಕೋಟೆಯಾಗಿದ್ದ ಕರಕಗುಡೆಂ ಮಂಡಲದ ನೀಲಾದ್ರಿಗುಟ್ಟಾ ಅರಣ್ಯ ಪ್ರದೇಶದಲ್ಲಿ ಬೆಳಿಗ್ಗೆ ನಡೆದ ಎನ್‌ ಕೌಂಟರ್‌ ನಲ್ಲಿ 6 ಮಾವೋವಾದಿಗಳು ಸಾವನ್ನಪ್ಪಿದ್ದಾರೆ ಮತ್ತು ಇಬ್ಬರು ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ. ಇಂದು ಬೆಳಿಗ್ಗೆ ಅರಣ್ಯ ಪ್ರದೇಶದಲ್ಲಿ ಪೊಲೀಸರು ಕೂಂಬಿಂಗ್ ಕಾರ್ಯಾಚರಣೆ ನಡೆಸುತ್ತಿದ್ದಾಗ ನೀಲಾಂದ್ರಿಗುಟ್ಟದ ಬೆಟ್ಟದ ಬಳಿ ಗುಂಡಿನ ಚಕಮಕಿ ನಡೆದಿದೆ ಎಂದು ಪೊಲೀಸ್ ತಿಳಿಸಿದ್ದಾರೆ. ಛತ್ತೀಸ್ ಗಢ ಮೂಲದ ಶಸ್ತ್ರಸಜ್ಜಿತ ಮಾವೋವಾದಿ ಬಂಡುಕೋರರ ಗುಂಪು ಇತ್ತೀಚೆಗೆ ಅರಣ್ಯದ

ಎನ್‌ ಕೌಂಟರ್‌ ನಲ್ಲಿ 6 ಮಾವೋವಾದಿಗಳ ಹತ್ಯೆ..! ಇಬ್ಬರು ಪೊಲೀಸ್ ಸಿಬ್ಬಂದಿಗೆ ಗಾಯ   Read More »

ಬ್ರೇಕಿಂಗ್ ನ್ಯೂಸ್

ಈ ಬಾರಿ ವಿಜೃಂಭಣೆಯ ಶಿಸ್ತು ಬದ್ಧ  ದಸರಾ ಆಚರಣೆ: 19 ಉಪ ಸಮಿತಿಗಳ ರಚನೆ ಸಚಿವ ಎಚ್.ಸಿ.ಮಹದೇವಪ್ಪ

(ನ್ಯೂಸ್ ಕಡಬ) newskadaba.com  ಮೈಸೂರು, ಸೆ. 5. ವಿಶ್ವವಿಖ್ಯಾತ ಮೈಸೂರು ದಸರಾವನ್ನು ಈ ಬಾರಿ ವಿಜೃಂಭಣೆಯಿಂದ ಆಚರಣೆ ಮಾಡುತ್ತಿದ್ದು, ಯಾವ ಲೋಪವಾಗದಂತೆ ಶಿಸ್ತು ಬದ್ಧವಾಗಿ ದಸರಾ ಆಚರಣೆ ಮಾಡುವಂತೆ ಸೂಚಿಸಲಾಗಿದೆ ಎಂದು ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ.ಮಹದೇವಪ್ಪ ತಿಳಿಸಿದರು. ಅರಮನೆ ಮಂಡಳಿ ಕಚೇರಿಯಲ್ಲಿ ದಸರಾ ಉಪ ಸಮಿತಿ ಅಧಿಕಾರಿಗಳ ಸಭೆ ಜೊತೆ ಸುದೀರ್ಘ ಸಭೆ ನಂತರ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು. ದಸರಾ ಆಚರಣೆ ಸಂಬಂಧ 19 ಉಪ ಸಮಿತಿಗಳನ್ನು ವಿವಿಧ ಜಿಲ್ಲಾ

ಈ ಬಾರಿ ವಿಜೃಂಭಣೆಯ ಶಿಸ್ತು ಬದ್ಧ  ದಸರಾ ಆಚರಣೆ: 19 ಉಪ ಸಮಿತಿಗಳ ರಚನೆ ಸಚಿವ ಎಚ್.ಸಿ.ಮಹದೇವಪ್ಪ Read More »

ಕರ್ನಾಟಕ

ಬೆಂಕಿ ಆಕಸ್ಮಿಕ- ಸುಟ್ಟು ಭಸ್ಮವಾದ ಕಾರು

(ನ್ಯೂಸ್ ಕಡಬ) newskadaba.com  ಸುರತ್ಕಲ್, ಸೆ. 5. ರಾಷ್ಟ್ರಿಯ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ಕಾರೊಂದು ಹಠಾತ್ತನೆ ಬೆಂಕಿಗೆ ಆಹುತಿಯಾಗಿರುವ ಘಟನೆ ಸುರತ್ಕಲ್ ಎನ್ ಐಟಿಕೆ ಹಳೆ ಟೋಲ್ ಗೇಟ್ ಬಳಿ ಬೆಳಿಗ್ಗೆ ನಡೆದಿದೆ. ಸುಟ್ಟು ಕರಕಲಾದ ಕಾರು ಬಿಎಂಡಬ್ಲ್ಯೂ ಕಂಪೆನಿಯ ಕಾರೆಂದು ಹೇಳಲಾಗುತ್ತಿದ್ದು, ಕಾರು ಉಡುಪಿ ಕಡೆಯಿಂದ ರಾಷ್ಟ್ರೀಯ ಹೆದ್ದಾರಿಯಾಗಿ ಮಂಗಳೂರು ಕಡೆ ತೆರಳುತ್ತಿತ್ತು ಎನ್ನಲಾಗಿದೆ. ಎನ್ ಐಟಿಕೆ ಬಳಿ ಏಕಾಏಕಿ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಸಂಪೂರ್ಣ ಸುಟ್ಟು ಭಸ್ಮವಾಗಿದ್ದು, ಅವಘಡದಲ್ಲಿ ಯಾವುದೇ ಪ್ರಾಣಹಾನಿಯುಂಟಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.

ಬೆಂಕಿ ಆಕಸ್ಮಿಕ- ಸುಟ್ಟು ಭಸ್ಮವಾದ ಕಾರು Read More »

ಕರಾವಳಿ
Scroll to Top