News Kadaba

6ನೇ ತರಗತಿ ವಿದ್ಯಾರ್ಥಿನಿಗೆ ಟೈಪ್ 1 ಡಯಾಬಿಟಿಸ್ ಪತ್ತೆ..!  ಚಿಕಿತ್ಸೆಗಾಗಿ ಹಣ ಸಹಾಯ ಕೋರಿದ ಕುಟುಂಬ

(ನ್ಯೂಸ್ ಕಡಬ) newskadaba.com ಉಡುಪಿ, ಸೆ. 11.  ಶಾಲೆಗೆ ಹೋಗಿ ಚೆನ್ನಾಗಿ ಓದುತ್ತಾ, ತನ್ನ ಸ್ನೇಹಿತರೊಂದಿಗೆ ಆಟವಾಡಿಕೊಂಡು ಇರಬೇಕಾದ 6ನೇ ತರಗತಿ ವಿದ್ಯಾರ್ಥಿನಿ ಫಿಯೋನಾ ಜೀವಿತಾ ಮಸ್ಕರೇನಸ್ ಅವರಿಗೆ ಟೈಪ್ 1 ಡಯಾಬಿಟಿಸ್ ನಿಂದ ಬಳಳುತ್ತಿದ್ದಾರೆ. ಆಕೆಯ ಚಿಕಿತ್ಸೆಗಾಗಿ ಕುಟುಂಬವು ಹಣಸಹಾಯ ಕೋರಿದೆ. ಎಂಟು ತಿಂಗಳ ಹಿಂದೆ ಫಿಯೋನಾಗೆ ಟೈಪ್ 1 ಡಯಾಬಿಟಿಸ್ ಮೆಲ್ಲಿಟಸ್ ಇರುವುದು ಪತ್ತೆಯಾಗಿದೆ. ಸದ್ಯ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಫಿಯೋನಾ ಅವರ ತಂದೆ ಫ್ರಾನ್ಸಿಸ್ ಮಸ್ಕರೇನಸ್ ಆಟೋ ಚಾಲಕರಾಗಿದ್ದು, ಅವರು […]

6ನೇ ತರಗತಿ ವಿದ್ಯಾರ್ಥಿನಿಗೆ ಟೈಪ್ 1 ಡಯಾಬಿಟಿಸ್ ಪತ್ತೆ..!  ಚಿಕಿತ್ಸೆಗಾಗಿ ಹಣ ಸಹಾಯ ಕೋರಿದ ಕುಟುಂಬ Read More »

ಕರಾವಳಿ, ಕ್ರೈಮ್ ನ್ಯೂಸ್

ಕಲುಷಿತ ನೀರು ಸೇವನೆ: ಓರ್ವ ಮೃತ್ಯು..! 12 ಮಂದಿ ಅಸ್ವಸ್ಥ..!     

(ನ್ಯೂಸ್ ಕಡಬ) newskadaba.com ಮೈಸೂರು, ಸೆ. 11.  ಕಲುಷಿತ ನೀರು ಸೇವನೆಯಿಂದ ಓರ್ವ ಸಾವನ್ನಪ್ಪಿದ್ದು, 12 ಜನ ವಾಂತಿಭೇದಿಯಿಂದ ಅಸ್ವಸ್ಥಗೊಂಡಿರುವ ಘಟನೆ ಸಾಲಿಗ್ರಾಮ ತಾಲೂಕಿನ ಗಡಿ ಗ್ರಾಮ ಬೆಟ್ಟಹಳ್ಳಿಯಲ್ಲಿ ನಡೆದಿದೆ. ಗೋವಿಂದೇಗೌಡ (65) ಮೃತಪಟ್ಟ ವ್ಯಕ್ತಿ. ಗ್ರಾಮದ ಟ್ಯಾಂಕ್‌ನಿಂದ ಸರಬರಾಜಾಗಿದ್ದ ನೀರನ್ನು ಸೇವಿಸಿ ಕೆಲವರಿಗೆ ವಾಂತಿ ಭೇದಿ ಆಗಿದೆ ಎಂದು ಶಂಕಿಸಲಾಗಿದೆ. ಅಸ್ವಸ್ಥರನ್ನು ತಕ್ಷಣವೇ ಸಾಲಿಗ್ರಾಮ ಸಮುದಾಯ ಆರೋಗ್ಯ ಕೇಂದ್ರಕ್ಕೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಗೋವಿಂದೇಗೌಡ ಎಂಬುವವರು ತೀವ್ರ ಅಸ್ವಸ್ಥಗೊಂಡ ಹಿನ್ನೆಲೆ ಹಾಸನ ಜಿಲ್ಲೆಯ ಸರ್ಕಾರಿ ಜಿಲ್ಲಾ ಆಸ್ಪತ್ರೆಗೆ

ಕಲುಷಿತ ನೀರು ಸೇವನೆ: ಓರ್ವ ಮೃತ್ಯು..! 12 ಮಂದಿ ಅಸ್ವಸ್ಥ..!      Read More »

ಕರ್ನಾಟಕ, ಕ್ರೈಮ್ ನ್ಯೂಸ್

ಶಿರೂರು ಗುಡ್ಡ ಕುಸಿತದಲ್ಲಿ ಕಾಣೆಯಾಗಿರುವ ಜಗನ್ನಾಥ ಪುತ್ರಿಗೆ ಉದ್ಯೋಗ ಖಾತರಿಪಡಿಸಿದ ಹೆಚ್‌ಡಿ ಕುಮಾರಸ್ವಾಮಿ

(ನ್ಯೂಸ್ ಕಡಬ) newskadaba.com ಕಾರವಾರ, ಸೆ. 11.  ಶಿರೂರು ಗುಡ್ಡ ಕುಸಿತ ಘಟನೆಯಲ್ಲಿ ಕಾಣೆಯಾಗಿರುವ ಜಗನ್ನಾಥ ಪುತ್ರಿ ಕೃತಿಕಾ ಅವರಿಗೆ ಕೈಗಾ ಅಣು ವಿದ್ಯುತ್ ಸ್ಥಾವರದ ಬಿಹೆಚ್‌ಇಎಲ್‌ನಲ್ಲಿ ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ ಅವರು ಉದ್ಯೋಗ ಕೊಡಿಸಿದ್ದಾರೆ. ಶಿರೂರು ಗುಡ್ಡ ಕುಸಿತದ ಬಳಿಕ ಮೊದಲಿಗೆ ಸ್ಥಳಕ್ಕೆ ಭೇಟಿ ನೀಡಿದ್ದ ಹೆಚ್‌ಡಿಕೆ ಕೃತಿಕಾ ಅವರಿಗೆ ಉದ್ಯೋಗ ಕೊಡಿಸುವುದಾಗಿ ಆಶ್ವಾಸನೆ ನೀಡಿದ್ದರು. ಇದೀಗ ನೀಡಿದ ಭರವಸೆಯಂತೆ ಕೃತಿಕಾ ಅವರಿಗೆ ಉದ್ಯೋಗ ಕೊಡಿಸಿದ್ದಾರೆ. ಜೊತೆಗೆ ಹೆಚ್‌ಡಿ ಕುಮಾರಸ್ವಾಮಿ ಅವರು ಕೃತಿಕಾ ಅವರಿಗೆ

ಶಿರೂರು ಗುಡ್ಡ ಕುಸಿತದಲ್ಲಿ ಕಾಣೆಯಾಗಿರುವ ಜಗನ್ನಾಥ ಪುತ್ರಿಗೆ ಉದ್ಯೋಗ ಖಾತರಿಪಡಿಸಿದ ಹೆಚ್‌ಡಿ ಕುಮಾರಸ್ವಾಮಿ Read More »

ಕರ್ನಾಟಕ

‘ಏಸ್’ ಐ.ಎ.ಎಸ್ ಅಕಾಡೆಮಿಯ 2024-25ನೇ ಸಾಲಿನ ನಾಗರಿಕ ಸೇವಾ ಪರೀಕ್ಷೆಯ ಬ್ಯಾಚ್ ಉದ್ಘಾಟನಾ ಕಾರ್ಯಕ್ರಮ

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ. 11.  ನಗರದ ಕಂಕನಾಡಿಯಲ್ಲಿರುವ ‘ಏಸ್’ ಐ.ಎ.ಎಸ್ ಅಕಾಡಮಿಯ 2024-25ನೇ ಸಾಲಿನ ಐಎಎಸ್/ಕೆಎಎಸ್ ಬ್ಯಾಚ್ ಉದ್ಘಾಟನಾ ಕಾರ್ಯಕ್ರಮ ಮತ್ತು ‘ಪರಿಣಾಮಕಾರಿ ಸಂವಹನʼ ಕಾರ್ಯಾಗಾರ ನಡೆಯಿತು. ನೂತನ ಬ್ಯಾಚ್ ಉದ್ಘಾಟಿಸಿದ ಸಂಸ್ಥೆಯ ಹಳೇ ವಿದ್ಯಾರ್ಥಿ, ಪೊಲೀಸ್ ಸಬ್-ಇನ್ ಸ್ಪೆಕ್ಟರ್ ಮುಶಾಹಿದ್ ಅಹ್ಮದ್ ಮಾತನಾಡಿ, ಏಸ್ ಸಂಸ್ಥೆಯು ಕರಾವಳಿ ಕರ್ನಾಟಕ ಭಾಗದ ವಿದ್ಯಾರ್ಥಿಗಳಿಗೆ ಸರಕಾರಿ ಉದ್ಯೋಗ ಪಡೆಯಲು ಒದಗಿಸುತ್ತಿರುವ ತರಬೇತಿ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಲು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಸ್ಥಾಪಕಾದ್ಯಕ್ಷ

‘ಏಸ್’ ಐ.ಎ.ಎಸ್ ಅಕಾಡೆಮಿಯ 2024-25ನೇ ಸಾಲಿನ ನಾಗರಿಕ ಸೇವಾ ಪರೀಕ್ಷೆಯ ಬ್ಯಾಚ್ ಉದ್ಘಾಟನಾ ಕಾರ್ಯಕ್ರಮ Read More »

ಕರಾವಳಿ

ಖ್ಯಾತ ಕಲಾವಿದ ಸೈಯದ್ ಹೈದರ್ ರಾಝಾ ಅವರ ಚಿತ್ರಕಲೆ ಕಳವು

(ನ್ಯೂಸ್ ಕಡಬ) newskadaba.com ಮುಂಬೈ, ಸೆ. 11.  ಖ್ಯಾತ ಕಲಾವಿದ ಸೈಯದ್ ಹೈದರ್ ರಾಝಾ ಅವರ ₹ 2.5 ಕೋಟಿಗೂ ಹೆಚ್ಚು ಮೌಲ್ಯದ ಪೇಂಟಿಂಗ್ ಅನ್ನು ದಕ್ಷಿಣ ಮುಂಬೈನ ಗೋದಾಮಿನಿಂದ ಕಳವು ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 1992 ರಲ್ಲಿ ಖ್ಯಾತ ವರ್ಣಚಿತ್ರಕಾರ ಮಾಡಿದ ಪ್ರಕೃತಿ ಎಂಬ ಪೇಂಟಿಂಗ್ ಅನ್ನು ಅಸ್ತಗುರು ಆಕ್ಷನ್ ಹೌಸ್ ಪ್ರೈವೇಟ್ ಲಿಮಿಟೆಡ್‌ನ ಗೋದಾಮಿನಿಂದ ಕಳವು ಮಾಡಲಾಗಿದೆ ಎಂದು ಎಂಆರ್‌ಎ ಮಾರ್ಗ್ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ದೂರಿನ ಪ್ರಕಾರ, ಈ ವರ್ಷ

ಖ್ಯಾತ ಕಲಾವಿದ ಸೈಯದ್ ಹೈದರ್ ರಾಝಾ ಅವರ ಚಿತ್ರಕಲೆ ಕಳವು Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಬಣ್ಣದ ಮಾಂತ್ರಿಕ ಸಿದ್ಧಕಟ್ಟೆ ಸದಾಶಿವ ಶೆಟ್ಟಿಗಾರ್ ’ವನಜ ರಂಗಮನೆ ಪ್ರಶಸ್ತಿ- 2024’ಗೆ ಆಯ್ಕೆ

(ನ್ಯೂಸ್ ಕಡಬ) newskadaba.com ಸುಳ್ಯ, ಸೆ. 11.  ಸುಳ್ಯದ ರಂಗಮನೆ ಸಾಂಸ್ಕೃತಿಕ ಕಲಾ ಕೇಂದ್ರದಿಂದ ಪ್ರತಿವರ್ಷ ಕೊಡಮಾಡುವ ರಂಗಕರ್ಮಿ ಡಾ.ಜೀವನ್ ರಾಂ ಸುಳ್ಯರ ಮಾತೃಶ್ರೀ ದಿ| ವನಜಾಕ್ಷಿ ಜಯರಾಮ ಸ್ಮರಣಾರ್ಥ ನೀಡುವ 2024 ನೇ ಸಾಲಿನ ವನಜ ರಂಗಮನೆ ಪ್ರಶಸ್ತಿಗೆ ತೆಂಕುತಿಟ್ಟು ಯಕ್ಷಗಾನದ ಪ್ರಸಿದ್ಧ ಬಣ್ಣದ ವೇಷದಾರಿ ಸಿದ್ಧಕಟ್ಟೆ ಸದಾಶಿವ ಶೆಟ್ಟಿಗಾರ್ ರವರನ್ನು ಆಯ್ಕೆ ಮಾಡಲಾಗಿದೆ. ರಾವಣ, ಕುಂಭಕರ್ಣ, ಮಹಿರಾವಣ, ಮಹಿಷಾಸುರ, ಕಾಕಾಸುರ, ವರಾಹ, ಸಿಂಹ, ಗಜೇಂದ್ರ ಮುಂತಾದ ಬಣ್ಣದ ವೇಷಗಳು ಅಲ್ಲದೆ ಅಜಮುಖಿ, ಶೂರ್ಪನಖಿ, ಪೂತನಿ,

ಬಣ್ಣದ ಮಾಂತ್ರಿಕ ಸಿದ್ಧಕಟ್ಟೆ ಸದಾಶಿವ ಶೆಟ್ಟಿಗಾರ್ ’ವನಜ ರಂಗಮನೆ ಪ್ರಶಸ್ತಿ- 2024’ಗೆ ಆಯ್ಕೆ Read More »

ಕರಾವಳಿ

ಚಿಕಾಗೋದಲ್ಲಿ ಮಂಗಳೂರಿನ ಕೊಂಕಣ ಕ್ರಿಶ್ಚಿಯನ್ ಅಸೋಸಿಯೇಶನ್ ವತಿಯಿಂದ 22 ನೇ ವಾರ್ಷಿಕ ಮೋಂತಿ ಫೆಸ್ಟ್ ಆಚರಣೆ

(ನ್ಯೂಸ್ ಕಡಬ) newskadaba.com ಚಿಕಾಗೋ, ಸೆ. 11.  ಮಂಗಳೂರಿನ ಕೊಂಕಣ ಕ್ರಿಶ್ಚಿಯನ್ ಅಸೋಸಿಯೇಶನ್ ವತಿಯಿಂದ 22 ನೇ ವಾರ್ಷಿಕ ಮೋಂತಿ ಫೆಸ್ಟ್ ಆಚರಣೆಯನ್ನು ಇಲಿನಾಯ್ಸ್ ನ ಹಾಫ್ಮನ್ ಎಸ್ಟೇಟ್ ನಲ್ಲಿರುವ ಸೇಂಟ್ ಹಬರ್ಟ್ಸ್ ಚರ್ಚ್ ಹಾಲ್ ನಲ್ಲಿ ಆಚರಿಸಲಾಯಿತು. ಎಂಕೆಸಿಎ ಅಧ್ಯಕ್ಷ ಲಿಯೊನಾರ್ಡ್ ಲೋಬೊ ಸ್ವಾಗತಿಸಿ, ಮಂಗಳೂರು ಕೊಂಕಣ ಕ್ರಿಶ್ಚಿಯನ್ ಅಸೋಸಿಯೇಶನ್ ಇತಿಹಾಸವನ್ನು ಸಭಿಕರಿಗೆ ಪರಿಚಯಿಸಿ ಸಂಸ್ಥೆಯು ನಡೆಸಿದ ಕಾರ್ಯಕ್ರಮಗಳ ಯಶಸ್ಸಿಗೆ ಸಂಘದ ಕಾರ್ಯಕಾರಿ ಸಮಿತಿಯ ಕೊಡುಗೆಗಳನ್ನು ಕೊಂಡಾಡಿದರು. MKCA ಸಂಸ್ಥಾಪಕ ಮತ್ತು ಅಧ್ಯಕ್ಷರಾದ ಡಾ. ಆಸ್ಟಿನ್ ಪ್ರಭು ಮಾತನಾಡಿ,

ಚಿಕಾಗೋದಲ್ಲಿ ಮಂಗಳೂರಿನ ಕೊಂಕಣ ಕ್ರಿಶ್ಚಿಯನ್ ಅಸೋಸಿಯೇಶನ್ ವತಿಯಿಂದ 22 ನೇ ವಾರ್ಷಿಕ ಮೋಂತಿ ಫೆಸ್ಟ್ ಆಚರಣೆ Read More »

ಅಂತರ್ರಾಷ್ಟ್ರೀಯ ನ್ಯೂಸ್

5ನೇ ಬಾರಿಗೆ ಯುಪಿಎಸ್‌ಸಿ ಪರೀಕ್ಷೆ ಬರೆದು ಐಎಎಸ್ ಅಧಿಕಾರಿಯಾದ ಅಂಶಿಕಾ ಜೈನ್

(ನ್ಯೂಸ್ ಕಡಬ) newskadaba.com ದೆಹಲಿ, ಸೆ. 11.  ಕೆಲವರು ತಮ್ಮ ಮೊದಲ ಪ್ರಯತ್ನದಲ್ಲೇ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗುವಲ್ಲಿ ಸಫಲರಾಗುತ್ತಾರೆ. ಆದರೆ ಕೆಲವರು ಹಲವು ಪ್ರಯತ್ನಗಳ ಬಳಿಕ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೆ. ಹೀಗೆ 5ನೇ ಬಾರಿಗೆ ಪರೀಕ್ಷೆ ಬರೆದು ಉತ್ತೀರ್ಣರಾದ ಅಂಶಿಕಾ ಜೈನ್ ಅವರ ಯಶೋಗಾಥೆ ಇದು. ದೆಹಲಿ ಮೂಲದವರಾದ ಅಂಶಿಕಾ ಜೈನ್ ಅವರು ತಮ್ಮ 5ನೇ ವಯಸ್ಸಿನಲ್ಲಿ ತನ್ನ ತಂದೆ-ತಾಯಿ ಇಬ್ಬರನ್ನೂ ಕಳೆದುಕೊಳ್ಳುತ್ತಾರೆ. ಬಳಿಕ ಅವರನ್ನು ಅಜ್ಜಿ ಮತ್ತು ಚಿಕ್ಕಪ್ಪ ಬೆಳೆಸುತ್ತಾರೆ. ಅಂಶಿಕಾ ಯುಪಿಎಸ್‌ಸಿ ಪರೀಕ್ಷೆ ಬರೆಯಬೇಕೆನ್ನುವುದು ಅವರ

5ನೇ ಬಾರಿಗೆ ಯುಪಿಎಸ್‌ಸಿ ಪರೀಕ್ಷೆ ಬರೆದು ಐಎಎಸ್ ಅಧಿಕಾರಿಯಾದ ಅಂಶಿಕಾ ಜೈನ್ Read More »

ರಾಷ್ಟ್ರೀಯ ನ್ಯೂಸ್

ನಟ ಕಿರಣ್ ರಾಜ್ ಪ್ರಯಾಣಿಸುತ್ತಿದ್ದ ಕಾರು ಅಪಘಾತ  ಅಪಾಯದಿಂದ ಪಾರು

(ನ್ಯೂಸ್ ಕಡಬ) newskadaba.com ಬೆಂಗಳೂರು, ಸೆ. 11.  ಕನ್ನಡತಿ ಸೀರಿಯಲ್ ಮೂಲಕ ಫೇಮಸ್ ಆದ ನಟ ಕಿರಣ್ ರಾಜ್ ಅವರ ಕಾರು ಅಪಘಾತಕ್ಕೀಡಾಗಿದ್ದು, ಅವರಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕಿರಣ್ ರಾಜ್ ಅವರು ವೃದ್ಧಾಶ್ರಮಕ್ಕೆ ಹೋಗಿ ಬರುತ್ತಿದ್ದರು. ಈ ವೇಳೆ ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್ ಗಿರೀಶ್ ಕಾರು ಚಾಲನೆ ಮಾಡುತ್ತಿದ್ದು, ಕಾರು ನಿಯಂತ್ರಣ ತಪ್ಪಿ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಕಿರಣ್ ರಾಜ್ ಅವರ ಎದೆಯ ಭಾಗಕ್ಕೆ ಪೆಟ್ಟಾಗಿದ್ದು, ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್ ಅಪಾಯದಿಂದ ಪಾರಾಗಿದ್ದಾರೆ ಎಂದು

ನಟ ಕಿರಣ್ ರಾಜ್ ಪ್ರಯಾಣಿಸುತ್ತಿದ್ದ ಕಾರು ಅಪಘಾತ  ಅಪಾಯದಿಂದ ಪಾರು Read More »

ಕರ್ನಾಟಕ

ಕೆರೆಗೆ ಈಜಲು ಹೋದ ವಿದ್ಯಾರ್ಥಿ ಮೃತ್ಯು..!

(ನ್ಯೂಸ್ ಕಡಬ) newskadaba.com ಕೊಪ್ಪಳ, ಸೆ. 11.  ಸ್ನೇಹಿತರೊಂದಿಗೆ ಕೆರೆಗೆ ಈಜಲು ಹೋಗಿದ್ದ ವಿದ್ಯಾರ್ಥಿಯೊಬ್ಬ ಮೃತಪಟ್ಟಿರುವ ಘಟನೆ ಜಿಲ್ಲೆಯ ಅಳವಂಡಿ ಪೊಲೀಸ್ ಠಾಣಾ ವ್ಯಾಪ್ತಿಯ ಮೈನಹಳ್ಳಿ ಗ್ರಾಮದಲ್ಲಿ ನಡೆದಿದೆ.          ಮೃತಪಟ್ಟ ವಿದ್ಯಾರ್ಥಿಯನ್ನು ಹಂದ್ರಾಳ ಗ್ರಾಮದ ಫಕೀರ ಗೌಡ ಎಂದು ಗುರುತಿಸಲಾಗಿದೆ. ಮೈನಹಳ್ಳಿಯ ಪ್ರೌಢಶಾಲೆಯಲ್ಲಿ 9ನೇ ತರಗತಿಯಲ್ಲಿ ಕಲಿಯುತ್ತಿದ್ದ ವಿದ್ಯಾರ್ಥಿ ಫಕೀರ ಗೌಡ ಮಂಗಳವಾರ ಸಂಜೆ ನಾಲ್ಕು ಗಂಟೆಯ ಸುಮಾರಿಗೆ ಈಜಲು ಕೆರೆಗೆ ಹೋಗಿದ್ದ. ಆದರೆ ನೀರಿಗಿಳಿದ ವಿದ್ಯಾರ್ಥಿ ಮತ್ತೆ ಮೇಲೆ ಬಂದಿಲ್ಲ, ಇದನ್ನು ನೋಡಿದ ಇಬ್ಬರೂ

ಕೆರೆಗೆ ಈಜಲು ಹೋದ ವಿದ್ಯಾರ್ಥಿ ಮೃತ್ಯು..! Read More »

ಕರ್ನಾಟಕ, ಕ್ರೈಮ್ ನ್ಯೂಸ್
Scroll to Top