News Kadaba

ಶ್ರೀಲಂಕಾದ ನೂತನ ಅಧ್ಯಕ್ಷರಾಗಿ ಅನುರ ಕುಮಾರ ಡಿಸಾನಾಯಕೆ ಪದ ಗ್ರಹಣ

(ನ್ಯೂಸ್ ಕಡಬ) newskadaba.com ಕೊಲಂಬೊ 23: ಶ್ರೀಲಂಕಾದ ಒಂಬತ್ತನೇ ಅಧ್ಯಕ್ಷರಾಗಿ ಅನುರ ಕುಮಾರ ಡಿಸಾನಾಯಕೆ ಇಂದು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ದೇಶದ ಆರ್ಥಿಕತೆ ಬಲಪಡಿಸುವ ಮತ್ತು ಭ್ರಷ್ಟಾಚಾರವನ್ನು ತೊಡೆದು ಹಾಕುವ ಭರವಸೆಯ ನಡುವೆ 56ರ ಹರೆಯದ ಡಿಸಾನಾಯಕೆ ರಾಷ್ಟ್ರಪತಿಗಳ ಕಾರ್ಯದರ್ಶಿ ಕಚೇರಿಯಲ್ಲಿ ಮುಖ್ಯ ನ್ಯಾಯಮೂರ್ತಿ ಜಯಂತ ಜಯಸೂರ್ಯ ಅವರಿಂದ ಪ್ರಮಾಣ ವಚನ ಸ್ವೀಕರಿಸಿದರು. ಪ್ರಮಾಣ ವಚನ ಸ್ವೀಕಾರ ನಂತರ ರಾಷ್ಟ್ರವನ್ನುದ್ದೇಶಿಸಿ  ಡಿಸಾನಾಯಕೆ ಮಾತನಾಡಿದರು. ಅಧಿಕಾರ ಹಸ್ತಾಂತರದ ಪ್ರಕ್ರಿಯೆಯ ಭಾಗವಾಗಿ ಪ್ರಧಾನಿ ದಿನೇಶ್ ಗುಣವರ್ಧನ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ […]

ಶ್ರೀಲಂಕಾದ ನೂತನ ಅಧ್ಯಕ್ಷರಾಗಿ ಅನುರ ಕುಮಾರ ಡಿಸಾನಾಯಕೆ ಪದ ಗ್ರಹಣ Read More »

ಅಂತರ್ರಾಷ್ಟ್ರೀಯ ನ್ಯೂಸ್, ಬ್ರೇಕಿಂಗ್ ನ್ಯೂಸ್

ರೈಲು ಹಳಿ ಮೇಲೆ ಕಬ್ಬಿಣದ ರಾಡ್‌ ಪತ್ತೆ

(ನ್ಯೂಸ್ ಕಡಬ) newskadaba.com ಪಂಜಾಬ್, ಸೆ. 23. ಬಟಿಂಡಾ ಜಿಲ್ಲೆಯಲ್ಲಿ ಹಳಿಗಳ ಮೇಲೆ ಒಂಬತ್ತು ಕಬ್ಬಿಣದ ರಾಡ್‌ಗಳು ಪತ್ತೆಯಾಗಿದ್ದು, ಸ್ವಲ್ಪ ಸಮಯದವರೆಗೆ ರೈಲು ಸಂಚಾರ ಅಸ್ತವ್ಯಸ್ತಗೊಂಡಿತ್ತು ಎಂದು ಅಧಿಕಾರಿಗಳು ಇಂದು ತಿಳಿಸಿದ್ದಾರೆ. ದೆಹಲಿ-ಬಟಿಂಡಾ ಮಾರ್ಗದ ಬಾಂಗಿ ನಗರದ ಬಳಿ ಭಾನುವಾರ ರಾಡ್‌ಗಳು ಪತ್ತೆಯಾಗಿವೆ. ಗೂಡ್ಸ್ ರೈಲು ಲೋಕೋ ಪೈಲಟ್ ರಾಡ್‌ಗಳನ್ನು ಗುರುತಿಸಿದ್ದಾರೆ. ಸ್ಥಳದಿಂದ ಒಂಬತ್ತು ಕಬ್ಬಿಣದ ರಾಡ್‌ಗಳನ್ನು ವಶಪಡಿಸಿಕೊಂಡಿದ್ದೇವೆ ಎಂದು ಸರ್ಕಾರಿ ರೈಲ್ವೆ ಪೋಲಿಸ್ (ಜಿಆರ್‌ಪಿ) ಅಧಿಕಾರಿಯೊಬ್ಬರು ತಿಳಿಸಿದ್ದಾರೆ.    

ರೈಲು ಹಳಿ ಮೇಲೆ ಕಬ್ಬಿಣದ ರಾಡ್‌ ಪತ್ತೆ Read More »

ರಾಷ್ಟ್ರೀಯ ನ್ಯೂಸ್

ಮತ್ತೊಮ್ಮೆ ದಾಖಲೆ ಮಟ್ಟ ತಲುಪಿದ ಸೆನ್ಸೆಕ್ಸ್ ಮತ್ತು ನಿಫ್ಟಿ-50; ಹೂಡಿಕೆದಾರರಿಗೆ ಹೊಡೆಯಿತು ಜಾಕ್ಪಾಟ್!

(ನ್ಯೂಸ್ ಕಡಬ) newskadaba.com ಹೊಸದಿಲ್ಲಿ 23:  ಇಂದು ದೇಶಿಯ ಷೇರು ಮಾರುಕಟ್ಟೆಯು ದಾಖಲೆಯ ಎತ್ತರದಲ್ಲಿ ತೆರೆದುಕೊಂಡಿತು. ಬೆಂಚ್ಮಾರ್ಕ್ ಇಕ್ವಿಟಿ ಸೂಚ್ಯಂಕಗಳು ಉತ್ತಮ ವಹಿವಾಟು ಸೆಷನ್ ಪ್ರಾರಂಭಿಸಿದವು. ರಾಷ್ಟ್ರೀಯ ಷೇರುಪೇಟೆ (NSE) ನಿಫ್ಟಿ 50 ಶೇ.0.25ರಷ್ಟು ಏರಿಕೆ ಕಂಡು 25,856.05ರಲ್ಲಿ ವಹಿವಾಟು ಆರಂಭಿಸಿದರೆ, ಬಾಂಬೆ ಷೇರುಪೇಟೆ (BSE) ಸೆನ್ಸೆಕ್ಸ್ 150 ಪಾಯಿಂಟ್‌ಗಳ ಏರಿಕೆ ಕಂಡು 84,693ಕ್ಕೆ ತಲುಪಿತು. ವ್ಯಾಪಾರದ ಪ್ರಾರಂಭದಲ್ಲಿ ವಿಶಾಲವಾದ ಸೂಚ್ಯಂಕಗಳು ಹಸಿರು ಬಣ್ಣದಲ್ಲಿ ತೆರೆಯಲ್ಪಟ್ಟವು. ಇಂದು ಬೆಳಗ್ಗೆ ಪ್ರಮುಖ ಸೂಚ್ಯಂಕಗಳಾದ ನಿಫ್ಟಿ-50 25,925.80, ಸೆನ್ಸೆಕ್ಸ್‌ 84,881.73 ಮತ್ತು ನಿಫ್ಟಿ ಬ್ಯಾಂಕ್‌

ಮತ್ತೊಮ್ಮೆ ದಾಖಲೆ ಮಟ್ಟ ತಲುಪಿದ ಸೆನ್ಸೆಕ್ಸ್ ಮತ್ತು ನಿಫ್ಟಿ-50; ಹೂಡಿಕೆದಾರರಿಗೆ ಹೊಡೆಯಿತು ಜಾಕ್ಪಾಟ್! Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಮಕ್ಕಳ ಅಶ್ಲೀಲ ಚಿತ್ರ ಡೌನ್‌ಲೋಡ್ ಮಾಡಿ ನೋಡುವುದು ಪೋಕ್ಸೊ ಕಾಯ್ದೆ- ಐಟಿ ನಿಯಮದಡಿ ಅಪರಾಧ ಸುಪ್ರೀ ಕೋರ್ಟ್

(ನ್ಯೂಸ್ ಕಡಬ) newskadaba.com ನವದೆಹಲಿ, ಸೆ. 23. ಮಕ್ಕಳ ಅಶ್ಲೀಲ ಚಿತ್ರಗಳನ್ನು ಡೌನ್‌ಲೋಡ್ ಮಾಡಿಕೊಂಡು ನೋಡುವುದು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆ ಮತ್ತು ಐಟಿ ನಿಯಮದಡಿ ಅಪರಾಧವಾಗಿದೆ, ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯವನ್ನು ತಡೆಯುವ ಕಠಿಣ ಕಾನೂನು ಕುರಿತು ಸುಪ್ರೀಂ ಕೋರ್ಟ್ ಇಂದು ಮಹತ್ವ ತೀರ್ಪು ನೀಡಿದೆ. ಮಕ್ಕಳ ಅಶ್ಲೀಲ ಚಿತ್ರಗಳನ್ನು ಡೌನ್‌ಲೋಡ್ ಮಾಡುವುದು ಮತ್ತು ವೀಕ್ಷಿಸುವುದು ಪೋಕ್ಸೊ ಕಾಯ್ದೆಯಡಿ ಅಪರಾಧವಲ್ಲ ಎಂದು ತೀರ್ಪು ನೀಡಿದ ಮದ್ರಾಸ್ ಹೈಕೋರ್ಟ್ ಆದೇಶವನ್ನು ಭಾರತದ ಮುಖ್ಯ ನ್ಯಾಯಮೂರ್ತಿ

ಮಕ್ಕಳ ಅಶ್ಲೀಲ ಚಿತ್ರ ಡೌನ್‌ಲೋಡ್ ಮಾಡಿ ನೋಡುವುದು ಪೋಕ್ಸೊ ಕಾಯ್ದೆ- ಐಟಿ ನಿಯಮದಡಿ ಅಪರಾಧ ಸುಪ್ರೀ ಕೋರ್ಟ್ Read More »

ರಾಷ್ಟ್ರೀಯ ನ್ಯೂಸ್

ಉದಯ್ ಭಾನು ಚಿಬ್ ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರಾಗಿ ನೇಮಕ

(ನ್ಯೂಸ್ ಕಡಬ) newskadaba.com ಹೊಸದಿಲ್ಲಿ 23:  ಭಾರತೀಯ ಯುವ ಕಾಂಗ್ರೆಸ್‌ನ ಅಧ್ಯಕ್ಷರನ್ನಾಗಿ ಉದಯ್ ಭಾನು ಚಿಬ್ ತಕ್ಷಣವೇ ಜಾರಿಗೆ ಬರುವಂತೆ ನೇಮಿಸಲಾಗಿದೆ. ಉದಯ್ ಭಾನು ಚಿಬ್ ಅವರು ಭಾರತೀಯ ಯುವ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ. ಜಮ್ಮು ಮತ್ತು ಕಾಶ್ಮೀರ ಪ್ರದೇಶ ಯುವ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷರಾಗಿಯೂ ಅವರು ಸೇವೆ ಸಲ್ಲಿಸಿದ್ದಾರೆ. ಬಿ.ವಿ. ಶ್ರೀನಿವಾಸ್ ಅವರು ಇದುವರೆಗೆಭಾರತೀಯ ಯುವ ಕಾಂಗ್ರೆಸ್‌ನ ಅಧ್ಯಕ್ಷರಾಗಿದ್ದರು. ಅವರ ಕೊಡುಗೆಗಳನ್ನು ಪಕ್ಷವು ಶ್ಲಾಘಿಸುತ್ತದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ  ಕೆ ಸಿ ವೇಣುಗೋಪಾಲ್ ಅವರು

ಉದಯ್ ಭಾನು ಚಿಬ್ ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರಾಗಿ ನೇಮಕ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್
Death, deadbody, Waterfall

ಕೆರೆಯಲ್ಲಿ ಮುಳುಗಿ ಯುವಕ ಮೃತ್ಯು..!

(ನ್ಯೂಸ್ ಕಡಬ) newskadaba.com ಬೆಂಗಳೂರು, ಸೆ. 23. ಪಣತ್ತೂರು ಕೆರೆಯಲ್ಲಿ ಈಜಾಡುತ್ತಿದ್ದ 22 ವರ್ಷದ ಯುವಕ ಮಧ್ಯದಲ್ಲಿ ಸುಸ್ತಾಗಿ ದಡ ಸೇರಲು ಸಾಧ್ಯವಾಗದೆ ಸಾವನ್ನಪ್ಪಿರುವ ಘಟನೆ ಭಾನುವಾರ ಸಂಜೆ ನಡೆದಿದೆ. ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಸಿಬ್ಬಂದಿ ರಾತ್ರಿ 9 ಗಂಟೆ ಸುಮಾರಿಗೆ ಮೃತದೇಹವನ್ನು ಕೆರೆಯಿಂದ ಹೊರತೆಗೆದರು. ಮೃತನನ್ನು ಪಣತ್ತೂರಿನ ನಿವಾಸಿ ಅನಿಲ್ ಎಂದು ಗುರುತಿಸಲಾಗಿದೆ. ಮೂಲತ: ನೇಪಾಳದವನಾಗಿದ್ದ ಈತ ಪೇಯಿಂಗ್ ಗೆಸ್ಟ್ ವಸತಿ ಗೃಹವೊಂದಲ್ಲಿ ಹೌಸ್ ಕೀಪಿಂಗ್ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.  

ಕೆರೆಯಲ್ಲಿ ಮುಳುಗಿ ಯುವಕ ಮೃತ್ಯು..! Read More »

ಕರ್ನಾಟಕ, ಕ್ರೈಮ್ ನ್ಯೂಸ್

ಬಿಪಿಎಲ್ ಕಾರ್ಡ್ ರದ್ದತಿ ಆತಂಕದಲ್ಲಿ ಫಲಾನುಭವಿಗಳು

(ನ್ಯೂಸ್ ಕಡಬ) newskadaba.com ಬೆಂಗಳೂರು 23: ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯ ಅನ್ವಯ ಕೇಂದ್ರ ಸರಕಾರವು ಬಿಪಿಎಲ್ ಹೊಂದಲು ನಿಗದಿಪಡಿಸಿರುವ ಮಾನದಂಡಗಳ ಪೈಕಿ ಕುಟುಂಬದ ವಾರ್ಷಿಕ ಆದಾಯವು 1.20 ಲಕ್ಷ ರೂ.ಗಳ ಒಳಗೆ ಇರಬೇಕು ಎಂದು ಮಿತಿ ನಿಗದಿಪಡಿಸಿರುವುದು ರಾಜ್ಯದಲ್ಲಿರುವ ಬಿಪಿಎಲ್ ಕಾರ್ಡುದಾರರು ಆತಂಕಕ್ಕೆಒಳಗಾಗಿದ್ದಾರೆ. ಬಿಪಿಎಲ್ ಕಾರ್ಡುಗಳು ಕೇವಲ ಅನ್ನಭಾಗ್ಯ  ಯೋಜನೆಯಡಿ ಪಡಿತರ ಪಡೆಯಲು ಅಷ್ಟೇ ಉಪಯೋಗಕ್ಕೆ ಬರುವುದಿಲ್ಲ ಬದಲಾಗಿ ಆರೋಗ್ಯ ಸಂಬಂಧಿ ಸೇವೆಗಳಿಗೂ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬಿಪಿಎಲ್ ಕಾರ್ಡುಗಳಿಗೆ ಬೇಡಿಕೆ ಇದೆ.ಮೂಲ

ಬಿಪಿಎಲ್ ಕಾರ್ಡ್ ರದ್ದತಿ ಆತಂಕದಲ್ಲಿ ಫಲಾನುಭವಿಗಳು Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಅರೇಬಿಕ್ ಅಕ್ಷರಗಳುಳ್ಳ ತ್ರಿವರ್ಣ ಧ್ವಜ ಹಾರಾಟ: ಇಬ್ಬರು ಅರೆಸ್ಟ್

(ನ್ಯೂಸ್ ಕಡಬ) newskadaba.com ಕೊಪ್ಪಳ, ಸೆ. 23. ರಾಷ್ಟ್ರಧ್ವಜದ ಮೇಲಿದ್ದ ಅಶೋಕ ಚಕ್ರದ ಬದಲಿಗೆ ಅರೇಬಿಕ್‌ ಅಕ್ಷರಗಳನ್ನು ಹಾಕಿ ಧ್ವಜ ಹಾರಿಸಿದ ಇಬ್ಬರು ಯುವಕರನ್ನು ಕೊಪ್ಪಳ ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ. ಬಂಧಿತ ಯುವಕರನ್ನು ಯಲಬುರ್ಗಾ ಪಟ್ಟಣದ ಮಹ್ಮದ್ ದಾನೀಶ್ ಕುತುಬುದ್ಧೀನ್ ಖಾಜಿ ಹಾಗೂ ಮಹ್ಮದ್ ಆದಿನಾನ್ ಖಾಜಿ ಎಂದು ಗುರುತಿಸಲಾಗಿದೆ. ಈದ್ ಮಿಲಾದ್ ಆಚರಣೆ ವೇಳೆ ಬಟ್ಟೆಯಿಂದ ತ್ರಿವರ್ಣ ಧ್ವಜ ಹೊಲಿದು ಬಿಳಿಬಣ್ಣದ ಜಾಗದಲ್ಲಿ ಅಶೋಕ ಚಕ್ರದ ಬದಲಿಗೆ ಅರೇಬಿಕ್‌ ಅಕ್ಷರದಲ್ಲಿ ‘ಲಾ ಇಲ್ಲಾಹ ಇಲ್ಲಾಲ್ಲಾ ಮೊಹಮದ್ ರಸೂಲಲ್ಲಾ’

ಅರೇಬಿಕ್ ಅಕ್ಷರಗಳುಳ್ಳ ತ್ರಿವರ್ಣ ಧ್ವಜ ಹಾರಾಟ: ಇಬ್ಬರು ಅರೆಸ್ಟ್ Read More »

ಕರ್ನಾಟಕ, ಕ್ರೈಮ್ ನ್ಯೂಸ್

ಆ್ಯಸಿಡ್ ದಾಳಿ: ದುಷ್ಕರ್ಮಿಗಳು ಪರಾರಿ

(ನ್ಯೂಸ್ ಕಡಬ) newskadaba.com ಬೆಂಗಳೂರು, ಸೆ. 23. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಯುವನಕನೊಬ್ಬನ ಮೇಲೆ ಆ್ಯಸಿಡ್ ದಾಳಿ ನಡೆದಿರುವ ಘಟನೆ ಕಾಮಾಕ್ಷಿಪಾಳ್ಯ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸೆ.21ರಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ ನಾಗೇಶ್ ಕೊಂಡ ಎಂಬ ಯುವಕನ ಮೇಲೆ ದುಷ್ಕರ್ಮಿಗಳು ಆ್ಯಸಿಡ್ ದಾಳಿ ನಡೆಸಿ ಪರಾರಿಯಾಗಿದ್ದಾರೆ. ಗಾಯಾಳು ಯುವಕನಿಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ತಿಳಿದುಬಂದಿದೆ. ಈ ನಡುವೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಗಾಯಾಳು ಹೇಳಿಕೆ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ ಎನ್ನಲಾಗಿದೆ.

ಆ್ಯಸಿಡ್ ದಾಳಿ: ದುಷ್ಕರ್ಮಿಗಳು ಪರಾರಿ Read More »

ಕರ್ನಾಟಕ, ಕ್ರೈಮ್ ನ್ಯೂಸ್

ಗಿನ್ನಿಸ್ ದಾಖಲೆ ಬರೆದ ನಟ ಮೆಗಾ ಸ್ಟಾರ್ ಚಿರಂಜೀವಿ

(ನ್ಯೂಸ್ ಕಡಬ) newskadaba.com ಹೈದರಾಬಾದ್, ಸೆ. 23. ನಟ ಮೆಗಾ ಸ್ಟಾರ್ ಚಿರಂಜೀವಿ ಅವರು ಗಿನ್ನಿಸ್ ದಾಖಲೆ ಬರೆದಿದ್ದು, ಇಂದು ಅವರಿಗೆ ‘ಭಾರತೀಯ ಚಿತ್ರರಂಗದ ಮೋಸ್ಟ್ ಪ್ರೊಫೈಲಿಕ್ ಸ್ಟಾರ್’ ಎಂದು ಪ್ರಮಾಣಪತ್ರ ನೀಡಲಾಗಿದೆ. ಚಿರಂಜೀವಿ ಅವರು ಈವರೆಗೂ 156 ಸಿನಿಮಾಗಳಲ್ಲಿ ನಟಿಸಿದ್ದು, ಕಳೆದ 46 ವರ್ಷಗಳಿಂದ ಅವರು ಸಿನಿಮಾರಂಗದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. 24 ಸಾವಿರ ಡ್ಯಾನ್ಸ್ ಸ್ಟೆಪ್ಸ್ ಹಾಕಿದ್ದು, ಈ ಸಾಧನೆಗಾಗಿ ಅವರ ಹೆಸರು ಗಿನ್ನಿಸ್ ವರ್ಲ್ಡ್ ರೆಕಾರ್ಡ್ ನಲ್ಲಿ ಸೇರ್ಪಡೆಗೊಂಡಿದೆ. ಹೈದರಾಬಾದ್‌ನಲ್ಲಿ ಚಿರಂಜೀವಿ ಅವರಿಗೆ ಗಿನ್ನಿಸ್

ಗಿನ್ನಿಸ್ ದಾಖಲೆ ಬರೆದ ನಟ ಮೆಗಾ ಸ್ಟಾರ್ ಚಿರಂಜೀವಿ Read More »

ಸಿನಿಮಾ
Scroll to Top