News Kadaba

ಟೊಮೆಟೊ ದರ ದುಬಾರಿ

(ನ್ಯೂಸ್ ಕಡಬ)newskadaba.com, ಬೆಂಗಳೂರು(ಅ.05):  ಈರುಳ್ಳಿ, ಬೆಳ್ಳುಳ್ಳಿ ದರ ಏರಿಕೆ ಬೆನ್ನಲ್ಲೇ ಇದೀಗ ಟೊಮೆಟೊ ದರ ಏರಿಕೆಯಾಗಿದ್ದು, ಜನಸಾಮಾನ್ಯರಿಗೆ ಬರೆ ಎಳೆದಂತಾಗಿದೆ. ಕಳೆದ ಒಂದು ವಾರದ ಹಿಂದೆ ಟೊಮೆಟೊ ಕೆಜಿಗೆ 40 ರೂ. ಇದ್ದ ದರ ಇದೀಗ ಎರಡು ಪಟ್ಟು ಏರಿಕೆ ಕಂಡಿದೆ. ಅ.4 ರಿಂದ ಟೊಮೆಟೊವು ಕೆಜಿಗೆ 80 ರೂ.ಯಂತೆ ಮಾರಾಟವಾಗುತ್ತಿದೆ. ಅಕಾಲಿಕ ಮಳೆಯಿಂದ ಟೊಮೆಟೊ ಇಳುವರಿ ಕಡಿಮೆಯಾಗಿದೆ. ಇದೇ ವೇಳೆಯಲ್ಲಿ ನವರಾತ್ರಿ ಹಬ್ಬವೂ ಆರಂಭಗೊಂಡಿದ್ದು, ಟೊಮೆಟೊ ಬೇಡಿಕೆ ಹೆಚ್ಚಾಗಿದೆ. ಟೊಮೆಟೊ ಪೂರೈಕೆ ಕಡಿಮೆ ಇದ್ದು, ಬೇಡಿಕೆ […]

ಟೊಮೆಟೊ ದರ ದುಬಾರಿ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಮಂಗಳೂರು: ಗೋಲ್ಡ್ ಬೈಯರ್ ಸಂಸ್ಥೆ ವೈಟ್ ಗೋಲ್ಡ್‌ ನ ನೂತನ ಶಾಖೆ ಲೋಕಾರ್ಪಣೆ

(ನ್ಯೂಸ್ ಕಡಬ)newskadaba.com ಮಂಗಳೂರು, ಅ. 05.  ದಕ್ಷಿಣ ಭಾರತದ ಅತಿ ದೊಡ್ಡ ಹೆಸರಾಂತ, ಗೋಲ್ಡ್ ಬೈಯರ್ ಸಂಸ್ಥೆ ವೈಟ್ ಗೋಲ್ಡ್‌ ನ ನೂತನ ಶಾಖೆ ಮಂಗಳೂರಿನಲ್ಲಿ ಲೋಕಾರ್ಪಣೆಗೊಂಡಿತು. ಮಂಗಳೂರಿನ ಚಿಲಿಂಬಿಯ Aura the place ಕಟ್ಟಡದ ಮೊದಲ ಮಹಡಿಯಲ್ಲಿ ಆರಂಭವಾದ ವೈಟ್ ಗೋಲ್ಡ್ ಶಾಖೆಯನ್ನು ಸೇಲ್ಸ್ ಹೆಡ್ ಮಿಥುನ್ ಶೆಟ್ಟಿ ಉದ್ಘಾಟಿಸಿದರು. ಗ್ರಾಹಕರಿಗೆ ಚಿನ್ನ ಮಾರಾಟ ಮಾಡಲು ಹಾಗೂ ಅಡ ಇಟ್ಟಿರುವ ಚಿನ್ನ ಬಿಡಿಸಲು ವೈಟ್ ಗೋಲ್ಡ್, ಉತ್ತಮ ಸಂಸ್ಥೆಯಾಗಿದೆ. ಕರ್ನಾಟಕದಲ್ಲಿ ಒಟ್ಟು 37 ವೈಟ್ ಗೋಲ್ಡ್

ಮಂಗಳೂರು: ಗೋಲ್ಡ್ ಬೈಯರ್ ಸಂಸ್ಥೆ ವೈಟ್ ಗೋಲ್ಡ್‌ ನ ನೂತನ ಶಾಖೆ ಲೋಕಾರ್ಪಣೆ Read More »

ಕರಾವಳಿ

ಕಾಲೇಜ್ ಗೆ ಬಾಂಬ್ ಬೆದರಿಕೆ; ಬೆಂಗಳೂರಿಗೆ ಎಚ್ಚರಿಕೆ ಕೊಟ್ಟ ದುಷ್ಕರ್ಮಿಗಳು

(ನ್ಯೂಸ್ ಕಡಬ)newskadaba.com, ಬೆಂಗಳೂರು(ಅ.04): ಬೆಂಗಳೂರಿನಲ್ಲಿರುವ ಖಾಸಗಿ ಕಾಲೇಜುಗಳಿಗೆ ಬಾಂಬ್ ಬೆದರಿಕೆ ಇಮೇಲ್ ಬಂದಿದೆ. ಬೆಂಗಳೂರಿನ ಬುಲ್ ಟೆಂಪಲ್ ರಸ್ತೆಯಲ್ಲಿರುವ ಖಾಸಗಿ ಕಾಲೇಜುಗಳಿಗೆ ಈ ಬಾಂಬ್‌ ಬೆದರಿಗೆ ಸಂದೇಶ ಕಳುಹಿಸಲಾಗಿದೆ ಎಂದು ವರದಿಯಾಗಿದೆ. ಇಮೇಲ್ ನೋಡಿದ ಕೂಡಲೇ ಕಾಲೇಜು ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸದ್ಯ ಸ್ಥಳಕ್ಕೆ ಬಾಂಬ್ ನಿಷ್ಕ್ರಿಯ ದಳ ಹಾಗೂ ಹನುಮಂತನಗರ ಪೊಲೀಸರು ದೌಡಾಯಿಸಿದ್ದು, ಕಾಲೇಜು ಆವರಣದಲ್ಲಿ ಸದ್ಯ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.

ಕಾಲೇಜ್ ಗೆ ಬಾಂಬ್ ಬೆದರಿಕೆ; ಬೆಂಗಳೂರಿಗೆ ಎಚ್ಚರಿಕೆ ಕೊಟ್ಟ ದುಷ್ಕರ್ಮಿಗಳು Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

‘ಡ್ರಗ್ ಮುಕ್ತ ಭಾರತಕ್ಕೆ ಮೋದಿ ಸರ್ಕಾರ ಬದ್ಧ’ – ಅಮಿತ್ ಶಾ

(ನ್ಯೂಸ್ ಕಡಬ)newskadaba.com, ನವದೆಹಲಿ(ಅ.04): ಡ್ರಗ್ ಮುಕ್ತ ಭಾರತಕ್ಕೆ ಮೋದಿ ಸರ್ಕಾರ ಬದ್ಧವಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಕಾಂಗ್ರೆಸ್ ಪಕ್ಷದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಉತ್ತರ ಭಾರತದಿಂದ ವಶಪಡಿಸಿಕೊಳ್ಳಲಾದ 5,600 ಕೋಟಿ ರೂ.ಗಳ ಮಾದಕವಸ್ತು ರವಾನೆಯಲ್ಲಿ ಕಾಂಗ್ರೆಸ್ ಮುಖಂಡರೊಬ್ಬರ ಕೈವಾಡವು “ಅಪಾಯಕಾರಿ ಮತ್ತು ನಾಚಿಕೆಗೇಡಿನ ಸಂಗತಿ” ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.ಕಾಂಗ್ರೆಸ್ ಆಡಳಿತದಲ್ಲಿ ಡ್ರಗ್ಸ್ ಸಮಸ್ಯೆಯಿಂದ ಪಂಜಾಬ್ ಮತ್ತು ಹರಿಯಾಣ ರಾಜ್ಯಗಳ ದುಸ್ಥಿತಿ ಎಲ್ಲರಿಗೂ ಗೊತ್ತಿದೆ “ಮೋದಿ

‘ಡ್ರಗ್ ಮುಕ್ತ ಭಾರತಕ್ಕೆ ಮೋದಿ ಸರ್ಕಾರ ಬದ್ಧ’ – ಅಮಿತ್ ಶಾ Read More »

ರಾಷ್ಟ್ರೀಯ ನ್ಯೂಸ್

ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಬಾಬು ಶೆಟ್ಟಿ ಆಯ್ಕೆ

(ನ್ಯೂಸ್ ಕಡಬ)newskadaba.com, (ಅ.04): ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಬಾಬು ಶೆಟ್ಟಿ ಅವರು ಶುಕ್ರವಾರ ಆಯ್ಕೆಯಾಗಿದ್ದಾರೆ.ಇತ್ತೀಚೆಗೆ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ರಚನೆಯಾಗಿದ್ದು ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಯು ಇಂದು ದೇವಸ್ಥಾನದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತಾಧಿಕಾರಿ, ಸಹಾಯಕ ಆಯುಕ್ತರಾದ ಮಹೇಶ್ಚಂದ್ರ, ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.

ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಬಾಬು ಶೆಟ್ಟಿ ಆಯ್ಕೆ Read More »

ಕರಾವಳಿ

ಭಾರತಕ್ಕೆ ಭೇಟಿ ನೀಡಲಿರುವ ಮಾಲ್ಡೀವ್ಸ್ ಅಧ್ಯಕ್ಷ

(ನ್ಯೂಸ್ ಕಡಬ)newskadaba.com, ಕೊಪ್ಪಳ(ಅ.04): ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಝು ಅವರು ಅಕ್ಟೋಬರ್ 7 ರಂದು ದ್ವಿಪಕ್ಷೀಯ ಪ್ರವಾಸದಲ್ಲಿ ಭಾರತಕ್ಕೆ ಭೇಟಿ ನೀಡುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ. ಭಾರತ ಮತ್ತು ಮಾಲ್ಡೀವ್ಸ್ ಸೆಪ್ಟೆಂಬರ್ ಆರಂಭದಿಂದಲೂ ಮುಯಿಝು ಅವರ ನಿರೀಕ್ಷಿತ ಭೇಟಿಗಾಗಿ ತಯಾರಿ ನಡೆಸಿದ್ದವು, ಜೂನ್ 9 ರಂದು ಪ್ರಧಾನಿ ನರೇಂದ್ರ ಮೋದಿಯವರ ಪ್ರಮಾಣವಚನ ಸಮಾರಂಭದಲ್ಲಿ ಭಾಗವಹಿಸಲು ಅವರು ನವದೆಹಲಿಗೆ ಭೇಟಿ ನೀಡಿದ ನಂತರ ಭಾರತಕ್ಕೆ ಅವರ ಎರಡನೇ ಪ್ರವಾಸ ಇದಾಗಿದೆ.ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಝು ಅವರು ಅಕ್ಟೋಬರ್

ಭಾರತಕ್ಕೆ ಭೇಟಿ ನೀಡಲಿರುವ ಮಾಲ್ಡೀವ್ಸ್ ಅಧ್ಯಕ್ಷ Read More »

ಅಂತರ್ರಾಷ್ಟ್ರೀಯ ನ್ಯೂಸ್, ರಾಷ್ಟ್ರೀಯ ನ್ಯೂಸ್

ಒಳ ಮೀಸಲಾತಿ ಜಾರಿ: ಸಿಎಂ ಸಿದ್ದರಾಮಯ್ಯ

(ನ್ಯೂಸ್ ಕಡಬ)newskadaba.com, ಕೊಪ್ಪಳ(ಅ.04): ಒಳ ಮೀಸಲಾತಿ ಜಾರಿ ಸಂಬಂಧ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ. ಈ ಬಗ್ಗೆ ಚರ್ಚಿಸಿ ಅಂತಿಮ ನಿರ್ಧಾರ ತೆಗೆದುಕೊಳ್ಳತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಜಾತಿ ಗಣತಿ ಅನುಷ್ಠಾನ ಮಾಡಬೇಕು ಎಂದು ಆರ್ಥಿಕ ಸಲಹೆಗಾರ ಬಸವರಾಜ್ ರಾಯರೆಡ್ಡಿ ಅವರ ಅಭಿಪ್ರಾಯ ಹೇಳಿದ್ದಾರೆ. ಅದನ್ನು ಕ್ಯಾಬಿನೆಟ್ ನಲ್ಲಿ ತಂದು ಚರ್ಚೆ ಮಾಡಬೇಕು. ಹಿಂದುಳಿದ ವರ್ಗಗಳ ಆಯೋಗದ ಜೊತೆ ಚರ್ಚೆ ಮಾಡಬೇಕಿದೆ. ಅದಕ್ಕೆಲ್ಲಾ ಸಮಯ ತಗಲುತ್ತದೆ ಎಂದರು.

ಒಳ ಮೀಸಲಾತಿ ಜಾರಿ: ಸಿಎಂ ಸಿದ್ದರಾಮಯ್ಯ Read More »

ಕರ್ನಾಟಕ

ಐಎಎಸ್/ಕೆಎಎಸ್ ಸ್ಪರ್ಧಾತ್ಮಕ ಪರೀಕ್ಷಾ ಪೂರ್ವ ತರಬೇತಿಯ ಪರೀಕ್ಷೆಗೆ ವೇಳಾಪಟ್ಟಿ ನಿಗದಿ

(ನ್ಯೂಸ್ ಕಡಬ)newskadaba.com ಮಂಗಳೂರು, ಅ. 04. 2024-25ನೇ ಸಾಲಿನಲ್ಲಿ ಐಎಎಸ್/ಕೆಎಎಸ್ ಸ್ಪರ್ಧಾತ್ಮಕ ಪರೀಕ್ಷಾ ಪೂರ್ವ ತರಬೇತಿಯ ಪರೀಕ್ಷೆಗೆ ಅಕ್ಟೋಬರ್ 06 ರಂದು ಬೆಳಗ್ಗೆ 10.30 ರಿಂದ ಮಧಾಹ್ನ 2.45ರ ವರೆಗೆ ವೇಳಾಪಟ್ಟಿ ನಿಗದಿಯಾಗಿದ್ದು, ಸದರಿ ಪರೀಕ್ಷೆಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಪ್ರವೇಶ ಪತ್ರವನ್ನು ವೆಬ್‍ಸೈಟ್ https://sevasindhu.karnataka.gov.in/ minorityhallticket_app/Hall_Ticket.aspx ಮೂಲಕ ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಅಲ್ಪಸಂಖ್ಯಾತರ ನಿರ್ದೇಶನಾಲಯದ ಅಧಿಕೃತ ಜಾಲತಾಣhttps://dom.karnataka.gov.in ಅನ್ನು ವೀಕ್ಷಿಸಿ ಹಾಗೂ ಹತ್ತಿರದ ಜಿಲ್ಲಾ ಮತ್ತು ತಾಲೂಕು ಅಲ್ಪಸಂಖ್ಯಾತರ ಮಾಹಿತಿ ಕೇಂದ್ರಗಳಿಗೆ ಸಂಪರ್ಕಿಸಬಹುದಾಗಿದೆ ಎಂದು

ಐಎಎಸ್/ಕೆಎಎಸ್ ಸ್ಪರ್ಧಾತ್ಮಕ ಪರೀಕ್ಷಾ ಪೂರ್ವ ತರಬೇತಿಯ ಪರೀಕ್ಷೆಗೆ ವೇಳಾಪಟ್ಟಿ ನಿಗದಿ Read More »

ಕರಾವಳಿ

ಟೇಕ್‌ ಆಫ್‌ಗೆ ರೆಡಿಯಾಗಿದ್ದ ಏರ್‌ಇಂಡಿಯಾ ವಿಮಾನದಲ್ಲಿ ಕಾಣಿಸಿಕೊಂಡ ಹೊಗೆ: ತಪ್ಪಿದ ಅವಘಡ

(ನ್ಯೂಸ್ ಕಡಬ)newskadaba.com ತಿರವನಂತಪುರ, ಅ. 04. ಕೆಲವೇ ಕ್ಷಣದಲ್ಲಿ ಹಾರಾಟ ಆರಂಭಿಸಬೇಕಿದ್ದ ಏರ್‌ ಇಂಡಿಯಾ ವಿಮಾನದಲ್ಲಿ ಏಕಾಏಕಿ ಹೊಗೆಕಾಣಿಸಿಕೊಂಡ ಘಟನೆ ಕೇರಳದ ತಿರುವನಂತಪುರಂ ಏರ್‌ಪೋರ್ಟ್‌ನಲ್ಲಿ ನಡೆದಿದೆ. ಅದೃಷ್ಟವಶಾತ್‌ ಯಾವುದೇ ಸಾವು ನೋವು ಸಂಭವಿಸಿಲ್ಲ ಎಂದು ವರದಿಯಾಗಿದೆ. ತಿರುವನಂತಪುರಂ ನಿಂದ ಒಮನ್‌ನಲ್ಲಿರುವ ಮಸ್ಕತ್‌ಗೆ ತೆರಳಲು ಸಜ್ಜಾಗಿದ್ದ IX549 ವಿಮಾನದ ಟೇಕ್‌ ಆಫ್‌ ಆಗುವ ಮುನ್ನ ದಟ್ಟ ಹೊಗೆ ಕಾಣಿಸಿಕೊಂಡಿದೆ. ಒಳಗಿದ್ದ ಪ್ರಯಾಣಿಕರೆಲ್ಲರೂ ಒಂದು ಕ್ಷಣಕ್ಕೆ ಆಘಾತಗೊಂಡಿದ್ದಾರೆ. ತಕ್ಷಣ ಕಾರ್ಯಪ್ರವೃತರಾದ ಸಿಬ್ಬಂದಿ ಪ್ರಯಾಣಿಕರನ್ನು ಸುರಕ್ಷಿತವಾಗಿ ಕೆಳಗಿಳಿಸಿದ್ದಾರೆ. ವಿಮಾನ ರನ್‌ ವೇನಲ್ಲಿ

ಟೇಕ್‌ ಆಫ್‌ಗೆ ರೆಡಿಯಾಗಿದ್ದ ಏರ್‌ಇಂಡಿಯಾ ವಿಮಾನದಲ್ಲಿ ಕಾಣಿಸಿಕೊಂಡ ಹೊಗೆ: ತಪ್ಪಿದ ಅವಘಡ Read More »

ಅಂತರ್ರಾಷ್ಟ್ರೀಯ ನ್ಯೂಸ್, ಕ್ರೈಮ್ ನ್ಯೂಸ್

ಬಂಟ್ವಾಳ: ಶ್ರೀ ರಾಮ ವಿದ್ಯಾಕೇಂದ್ರದ ಸಹೋದರಿ ವಿದ್ಯಾರ್ಥಿನಿಯರು ಎಸ್ ಜಿಎಫ್ ಈಜು ಸ್ಫರ್ಧೆಗೆ ಆಯ್ಕೆ

(ನ್ಯೂಸ್ ಕಡಬ)newskadaba.com ಬಂಟ್ವಾಳ, ಅ. 04. ವಿದ್ಯಾ ಭಾರತಿ ಅಖಿಲ ಭಾರತೀಯ ಶಿಕ್ಷಾ ಸಂಸ್ಥಾನ ಆಶ್ರಯದಲ್ಲಿ ಮಧ್ಯಪ್ರದೇಶದ ಮಂಡ್ಸೌರುನಲ್ಲಿ ಜರುಗಿದ ರಾಷ್ಟ್ರಮಟ್ಟದ ಈಜು ಚಾಂಪಿಯನ್ ಶಿಫ್ 2024ರಲ್ಲಿ ಇಂಡಿವಿಜುವಲ್ ಮೆಡ್ಲೆಯಲ್ಲಿ ಶ್ರೀ ರಾಮ ಪ್ರೌಢಶಾಲಾ ಕಲ್ಲಡ್ಕದ 9 ನೇ ತರಗತಿಯ ಅನರ್ಘ್ಯ ಎ.ಆರ್ ಅವರು 17 ರ ವರ್ಷ ಒಳಗಿನ ಹುಡುಗಿಯರ ಈಜು ಸ್ಫರ್ಧೆಯ 400ಮೀ. ಇಂಡಿವಿಜುವಲ್ ಮೆಡ್ಲೆಯಲ್ಲಿ ಚಿನ್ನ, 200 ಮೀ. ಇಂಡಿವಿಜುವಲ್ ಮೆಡ್ಲೆಯಲ್ಲಿ ಬೆಳ್ಳಿ ಪದಕ ಪಡೆದು ಎಸ್ ಜಿ ಎಫ್ ಇಂಡಿಯ ಈಜು

ಬಂಟ್ವಾಳ: ಶ್ರೀ ರಾಮ ವಿದ್ಯಾಕೇಂದ್ರದ ಸಹೋದರಿ ವಿದ್ಯಾರ್ಥಿನಿಯರು ಎಸ್ ಜಿಎಫ್ ಈಜು ಸ್ಫರ್ಧೆಗೆ ಆಯ್ಕೆ Read More »

ಕರಾವಳಿ, ಕ್ರೀಡಾ ನ್ಯೂಸ್
Scroll to Top