News Kadaba

ಮನೆ ಬೀಗ ಮುರಿದು ಚಿನ್ನಾಭರಣ ದೋಚುತ್ತಿದ್ದವನ ಬಂಧನ

(ನ್ಯೂಸ್ ಕಡಬ)newskadaba.com,ಬೆಂಗಳೂರು ಅ. 07. ಮನೆಗಳ ಬೀಗ ಮುರಿದು ಹಣ- ಆಭರಣ ಕಳ್ಳತನ ಮಾಡಿದ್ದ ಆರೋಪಿಯೊಬ್ಬನನ್ನು ಸಿಟಿ ಮಾರ್ಕೆಟ್‌ ಠಾಣೆ ಪೊಲೀಸರು ಬಂಧಿಸಿ 30 ಲಕ್ಷ ರೂ. ಬೆಲೆಬಾಳುವ 475 ಗ್ರಾಂ ಚಿನ್ನಾಭರಣ ಹಾಗೂ ಕೃತ್ಯಕ್ಕೆ ಬಳಸಿದ್ದ ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡಿದ್ದಾರೆ. ಮಂಜುನಾಥ ಅಲಿಯಾಸ್‌‍ ಪಾರಿವಾಳ ಮಂಜ(38) ಬಂಧಿತ ಆರೋಪಿ. ಈತ ಈ ಹಿಂದೆ ನಗರದ ನಗರ್ತಪೇಟೆಯ, ತಿಗಳರಪೇಟೆಯಲ್ಲಿ ವಾಸವಾಗಿದ್ದನು. ಈಗ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಮುಕುಂಡಪಲ್ಲಿ ಗ್ರಾಮದಲ್ಲಿ ನೆಲೆಸಿದ್ದಾನೆ. ಚಿಕ್ಕಪೇಟೆಯ, ಮಾಣಿಕ್‌ ಮೇವಾ ಅಂಗಡಿ ಸಮೀಪದ […]

ಮನೆ ಬೀಗ ಮುರಿದು ಚಿನ್ನಾಭರಣ ದೋಚುತ್ತಿದ್ದವನ ಬಂಧನ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಬೃಹತ್ ಪ್ರಮಾಣದ ಡ್ರಗ್ಸ್ ವಶಪಡಿಸಿಕೊಂಡ ಸಿಸಿಬಿ ತಂಡ

(ನ್ಯೂಸ್ ಕಡಬ)newskadaba.com,ಮಂಗಳೂರು ಅ. 07. ನಗರದ ಸಿಸಿಬಿ ಪೊಲೀಸರು ಬೃಹತ್‌ ಡ್ರಗ್‌ ಜಾಲವೊಂದನ್ನು ಪತ್ತೆ ಮಾಡಿದ್ದಾರೆ. ಬರೋಬ್ಬರಿ ಆರು ಕೋಟಿ ರೂ ಮೌಲ್ಯದ ಎಂಡಿಎಂಎ ಡ್ರಗ್ ವಶಕ್ಕೆ ಪಡೆದಿದ್ದಾರೆ. ಸುಮಾರು 6 ಕೆ.ಜಿ‌ ಎಂಡಿಎಂಎ ಡ್ರಗ್ ವಶಕ್ಕೆ ಪಡೆಯಲಾಗಿದ್ದು, ಮಂಗಳೂರಿನ ಇತಿಹಾಸದಲ್ಲೇ ಅತಿದೊಡ್ಡ ಡ್ರಗ್ ವಶ ಕೇಸ್ ಇದಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿದ್ದ ಸೈಬೀರಿಯನ್ ಪ್ರಜೆ ಪೀಟರ್ ಎಂಬಾತನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.ಮಂಗಳೂರಿನಲ್ಲಿ ಕೆಲ ದಿನಗಳ ಹಿಂದೆ ಎಂಡಿಎಂಎ ಮಾರಾಟ ವೇಳೆ ಹೈದರ್‌ ಅಲಿ ಎಂಬಾತನನ್ನು ಬಂಧಿಸಲಾಗಿತ್ತು.

ಬೃಹತ್ ಪ್ರಮಾಣದ ಡ್ರಗ್ಸ್ ವಶಪಡಿಸಿಕೊಂಡ ಸಿಸಿಬಿ ತಂಡ Read More »

ಕರಾವಳಿ

ತಿರುಪತಿ ಲಡ್ಡು ಪ್ರಸಾದವನ್ನು ತಾತ್ಕಾಲಿಕ ಸ್ಥಗಿತಗೊಳಿಸಿದ ಟಿಟಿಡಿ

(ನ್ಯೂಸ್ ಕಡಬ)newskadaba.com  ಬೆಂಗಳೂರು, ಅ. 07. ನಗರಕ್ಕೆ ಪೂರೈಕೆಯಾಗುತ್ತಿದ್ದ ತಿರುಪತಿ ಲಡ್ಡು ಪ್ರಸಾದವನ್ನು ಟಿಟಿಡಿ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ತಿರುಪತಿಯಲ್ಲಿ ಬ್ರಹ್ಮೋತ್ಸವ ನಡೆಯುತ್ತಿರುವುದರಿಂದ ತಿಮ್ಮಪ್ಪನ ಸನ್ನಿದಿಯಲ್ಲಿ ಭಕ್ತರ ಸಂಖ್ಯೆಯಲ್ಲಿ ಭಾರಿ ಏರಿಕೆಯಾಗಿದೆ. ಇದರಿಂದ, ಬೆಟ್ಟದಿಂದ ಲಡ್ಡು ಪೂರೈಸುವ ವಾಹನಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ. ಹೀಗಾಗಿ ಅಕ್ಟೋಬರ್ 12ರವರೆಗೆ ಬೆಂಗಳೂರಿನ ತಿರುಪತಿ ದೇವಸ್ಥಾನಕ್ಕೆ ಟಿಟಿಡಿ ಆಡಳಿತ ಮಂಡಳಿ ಲಡ್ಡು ಪೂರೈಕೆ ಮಾಡುವುದಿಲ್ಲ. ತಿರುಪತಿ ಲಡ್ಡು ತಯಾರಿಕೆಗೆ ಬಳಸಲಾಗುವ ತುಪ್ಪದಲ್ಲಿ ಪ್ರಾಣಿಯ ಕೊಬ್ಬು, ಮೀನಿನ ಎಣ್ಣೆ ಮತ್ತಿತರ ಎಣ್ಣೆಗಳ ಅಂಶ ಇದ್ದುದು

ತಿರುಪತಿ ಲಡ್ಡು ಪ್ರಸಾದವನ್ನು ತಾತ್ಕಾಲಿಕ ಸ್ಥಗಿತಗೊಳಿಸಿದ ಟಿಟಿಡಿ Read More »

ಕರ್ನಾಟಕ

ಪೋಕ್ಸೋ ಪ್ರಕರಣ: ಮುರುಘಾಶ್ರೀಗೆ ಜಾಮೀನು ಮಂಜೂರು ಮಾಡಿದ ಕೋರ್ಟ್

(ನ್ಯೂಸ್ ಕಡಬ)newskadaba.com,ಚಿತ್ರದುರ್ಗ ಅ. 07. ಪೋಕ್ಸೋ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದ ಮುರುಘಾಶ್ರೀ ಅವರಿಗೆ ಕೋರ್ಟ್ ಜಾಮೀನು ಮಂಜೂರು ಮಾಡಿದೆ. 2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಸಾಕ್ಷ್ಯಗಳ ವಿಚಾರಣೆ ಬಹುತೇಕ ಪೂರ್ಣಗೊಂಡ ಹಿನ್ನೆಲೆಯಲ್ಲಿ, ಪ್ರಕರಣದಲ್ಲಿ ಎ1 ಆರೋಪಿಯಾಗಿರುವ ಮುರುಘಾಶ್ರೀಗೆ ಕೋರ್ಟ್ ಜಾಮೀನು ನೀಡಿದೆ. ಈ ಹಿಂದೆ ಮುರುಘಾಶ್ರೀಗೆ ಹೈಕೋರ್ಟ್ ಜಾಮೀನು ನೀಡಿತ್ತು. ಹೈಕೋರ್ಟ್ ಮುರುಘಾಶ್ರೀಗೆ ಮಂಜೂರು ಮಾಡಿರುವ ಜಾಮೀನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ನಲ್ಲಿ ಪ್ರಶ್ನೆ ಮಾಡಲಾಗಿತ್ತು. ಆರೋಪಿ ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆ

ಪೋಕ್ಸೋ ಪ್ರಕರಣ: ಮುರುಘಾಶ್ರೀಗೆ ಜಾಮೀನು ಮಂಜೂರು ಮಾಡಿದ ಕೋರ್ಟ್ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ವಾರಂಟ್ ಆರೋಪಿ ಪರಾರಿ: ಆರೋಪಿಯ ಮಾಹಿತಿ ಕೋರಿ ಪೊಲೀಸರ ಮನವಿ

(ನ್ಯೂಸ್ ಕಡಬ)newskadaba.com  ಸುಳ್ಯ, ಅ. 07. ಪ್ರಕರಣವೊಂದರ ವಾರಂಟ್ ಆರೋಪಿಯೋರ್ವ ವೈದ್ಯಕೀಯ ತಪಾಸಣೆ ಸಂದರ್ಭದಲ್ಲಿ ಆಸ್ಪತ್ರೆಯಿಂದಲೇ ಪರಾರಿಯಾಗಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪರಾರಿಯಾಗಿರುವ ಆರೋಪಿ ಎಲ್ಲಾದರೂ ಕಂಡುಬಂದಲ್ಲಿ ಪೊಲೀಸರಿಗೆ ತಕ್ಷಣ ಮಾಹಿತಿ ನೀಡುವಂತೆ ಪೊಲೀಸರು ಫೋಟೋ ಸಹಿತ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಸುಳ್ಯದ ಕಲ್ಲುಗುಂಡಿ ಎಂಬಲ್ಲಿ ಕೆಲವು ವರ್ಷಗಳ ಹಿಂದೆ ನಡೆದಿದ್ದ ಕಳ್ಳತನ ಪ್ರಕರಣದ ಆರೋಪಿಯಾಗಿದ್ದ ತಮಿಳುನಾಡಿನ ಕೋಳಿ ಕರಣ್ ಎಂಬಾತ ಕೋರ್ಟ್ ಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ. ಆತನನ್ನು ಅ. 5ರಂದು ಪೊಲೀಸರು ಬಂಧಿಸಿ ಸುಳ್ಯದ ಕೋರ್ಟ್ ಗೆ

ವಾರಂಟ್ ಆರೋಪಿ ಪರಾರಿ: ಆರೋಪಿಯ ಮಾಹಿತಿ ಕೋರಿ ಪೊಲೀಸರ ಮನವಿ Read More »

ಕರಾವಳಿ, ಕ್ರೈಮ್ ನ್ಯೂಸ್

ವಿಟ್ಲ: ಸೇತುವೆಯಿಂದ ಕೆಳಕ್ಕೆ ಬಿದ್ದ ವ್ಯಕ್ತಿಯನ್ನು ರಕ್ಷಿಸಿದ ಯುವಕರು- ಯುವಕರ ಸಾಹಸಕ್ಕೆ ಸ್ಥಳೀಯರ ಪ್ರಶಂಸೆ

(ನ್ಯೂಸ್ ಕಡಬ)newskadaba.com ಅ. 07. ಸೇತುವೆಯಿಂದ ಕೆಳಗೆ ಬಿದ್ದು, ನೀರಿನಲ್ಲಿ ಕೊಚ್ಚಿಹೋಗುತ್ತಿದ್ದ ವ್ಯಕ್ತಿಯೋರ್ವರನ್ನು ಮೇಲಕೆತ್ತಿ ರಕ್ಷಿಸಿದ ಘಟನೆ ಅ.6ರಂದು ವಿಟ್ಲದ ಸುರಂಬಡ್ಕದ ಕಿಂಡಿ ಅಣೆಕಟ್ಟು ಸೇತುವೆ ಬಳಿ ನಡೆದಿದೆ. ಸ್ಥಳೀಯ ನಿವಾಸಿ ಉಮ್ಮರ್ ರವರು ರಕ್ಷಿಸಲ್ಪಟ್ಟ ವ್ಯಕ್ತಿಯಾಗಿದ್ದಾರೆ. ಚೆಕ್ಕಿದಕಾಡು ನಿವಾಸಿಗಳಾದ ಅಶೋಕ್ ಸಿ.ಹೆಚ್ ಹಾಗೂ ಸುರೇಶ್ ಸಿಎಚ್ ರಕ್ಷಣೆ ಮಾಡಿದ ಯುವಕರು.ಅ.6ರಂದು ಮಧ್ಯಾಹ್ನದ ಬಳಿಕ ಜಿಲ್ಲೆಯಾದ್ಯಂತ ವ್ಯಾಪಕ ಮಳೆಯಾಗಿರುವ ಹಿನ್ನೆಲೆಯಲ್ಲಿ ನದಿಗಳು ಉಕ್ಕಿ ಹರಿಯುತ್ತಿತ್ತು. ವಿಟ್ಲದ  ಸುರಂಬಡ್ಕದ ಕಿಂಡಿ ಅಣೆಕಟ್ಟು ಸೇತುವೆ ಬಳಿ ಸಾಯಂಕಾಲದ ವೇಳೆ ಉಮ್ಮರ್

ವಿಟ್ಲ: ಸೇತುವೆಯಿಂದ ಕೆಳಕ್ಕೆ ಬಿದ್ದ ವ್ಯಕ್ತಿಯನ್ನು ರಕ್ಷಿಸಿದ ಯುವಕರು- ಯುವಕರ ಸಾಹಸಕ್ಕೆ ಸ್ಥಳೀಯರ ಪ್ರಶಂಸೆ Read More »

ಕರಾವಳಿ

ಸುಳ್ಯ ತಾಲೂಕು ಆಂಬುಲೆನ್ಸ್ ಚಾಲಕ ಮಾಲಕರ ಸಂಘದ ಕಚೇರಿ ಉದ್ಘಾಟನೆ ಸಂಘದ ಲೋಗೋ ಬಿಡುಗಡೆ,ಸಾಧಕರಿಗೆ ಸನ್ಮಾನ ಹಾಗೂ ರಕ್ತದಾನ ಶಿಬಿರ

(ನ್ಯೂಸ್ ಕಡಬ)newskadaba.com ಅ. 07. ಸುಳ್ಯ ತಾಲೂಕು ಆಂಬುಲೆನ್ಸ್ ಚಾಲಕರ ಮತ್ತು ಮಾಲಕರ ಸಂಘದ ನೂತನ ಕಚೇರಿ ಉದ್ಘಾಟನಾ ಸಮಾರಂಭ  ಅಕ್ಟೋಬರ್ 6 ರಂದು ಸುಳ್ಯದ ಸಂತೋಷ್ ಚಿತ್ರಮಂದಿರದ ಬಳಿ ಇರುವ ವೆನಿಸ್ಸಿಯಾ ಬಿಲ್ಡಿಂಗ್ ನಲ್ಲಿ ನಡೆಯಿತು. ತೂಗು ಸೇತುವೆಯ ಸರದಾರ ಪದ್ಮಶ್ರೀ ಗಿರೀಶ್ ಭಾರದ್ವಾಜ್ ರವರು ನೂತನ ಸಂಸ್ಥೆಯನ್ನು ಉದ್ಘಾಟಿಸಿ ಶುಭ ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಶರತ್ ತೊಡಿಕ್ಕಾನ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಸುಳ್ಯ ವರ್ತಕ ಸಂಘದ ಅಧ್ಯಕ್ಷ ಪಿ ಬಿ

ಸುಳ್ಯ ತಾಲೂಕು ಆಂಬುಲೆನ್ಸ್ ಚಾಲಕ ಮಾಲಕರ ಸಂಘದ ಕಚೇರಿ ಉದ್ಘಾಟನೆ ಸಂಘದ ಲೋಗೋ ಬಿಡುಗಡೆ,ಸಾಧಕರಿಗೆ ಸನ್ಮಾನ ಹಾಗೂ ರಕ್ತದಾನ ಶಿಬಿರ Read More »

ಕರಾವಳಿ

ಪುತ್ತೂರು: ದ್ವಿತೀಯ ಬಿಎಸ್ಸಿ ಪದವಿ ವಿದ್ಯಾರ್ಥಿ ಮನೋಜ್ ನಾಪತ್ತೆ- ಪೋಲಿಸರಿಗೆ ದೂರು

(ನ್ಯೂಸ್ ಕಡಬ)newskadaba.com ಪುತ್ತೂರು, ಅ. 07. ಸ್ನೇಹಿತನ ಮನೆಗೆ ಹೋಗಿ ಬರುವುದಾಗಿ ಹೇಳಿ ಮನೆಯಿಂದ ಹೊರಟ ಯುವಕ ಕಾಣೆಯಾಗಿರುವುದಾಗಿ ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪುತ್ತೂರು ನೆಹರು ನಗರದ ಗಣೇಶ್ ಬಾಗ್ ನ ಲಕ್ಷ್ಮೀ ಪ್ರಸಾದ್ ಕಂಪೌಂಡ್ ನಿವಾಸಿ ದಿ.ಕೇಶವ ಮೂರ್ತಿ ಎಂಬುವರ ಪುತ್ರ 20 ವರ್ಷ ಪ್ರಾಯದ ಮನೋಜ್ ಕೆ. ಕಾಣೆಯಾದ ಯುವಕನಾಗಿದ್ದಾನೆ. ಪುತ್ತೂರಿನ ಸಂತ ಫಲೋಮಿನಾ ಕಾಲೇಜಿನಲ್ಲಿ 2ನೆ ವರ್ಷದ ಬಿಎಸ್ಸಿ ಪದವಿಗೆ ಕಲಿಯುತ್ತಿದ್ದ ಮನೋಜ್ ಅ.5ರಂದು ಬೆಳಿಗ್ಗೆ ಸ್ನೇಹಿತನ ಮನೆಗೆ ಹೋಗಿ

ಪುತ್ತೂರು: ದ್ವಿತೀಯ ಬಿಎಸ್ಸಿ ಪದವಿ ವಿದ್ಯಾರ್ಥಿ ಮನೋಜ್ ನಾಪತ್ತೆ- ಪೋಲಿಸರಿಗೆ ದೂರು Read More »

ಕರಾವಳಿ, ಕ್ರೈಮ್ ನ್ಯೂಸ್

ಚೆನ್ನೈ: ಏರ್ ಶೋ ನಲ್ಲಿ ದುರಂತ ಐವರು ಸಾವು-200ಕ್ಕೂ ಹೆಚ್ಚು ಮಂದಿ ಅಸ್ವಸ್ಥ

(ನ್ಯೂಸ್ ಕಡಬ)newskadaba.com,ಚೆನ್ನೈ ಅ. 07. ಭಾರತೀಯ ವಾಯುಪಡೆಯ 92 ವರ್ಷಗಳನ್ನು ಪೂರ್ಣಗೊಳಿಸಿದ ಸಂಭ್ರಮಾಚರಣೆ ಹಿನ್ನೆಲೆ ಚೆನ್ನೈನ ಮರೀನಾ ಬೀಚ್‌ನಲ್ಲಿ ಏರ್ ಶೋ ನಡೆಸಿದೆ. ಈ ವೇಳೆ  ಬಿಸಿಲಿನ ಝಳಕ್ಕೆ 5 ಮಂದಿ ಸಾವಾಗಿದ್ದು, 230ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿದ್ದಾರೆ. ವಾಯುಪಡೆ ಸಂಸ್ಥಾಪನಾ ದಿನ ನಿಮಿತ್ತ ದಕ್ಷಿಣ ಭಾರತದಲ್ಲಿ ನಡೆದ ಮೊದಲ ಏರ್ ಶೋ ಇದಾಗಿತ್ತು.ಕಾರ್ಯಕ್ರಮದಲ್ಲಿ ಸುಮಾರು 72 ವಿಮಾನಗಳು ವಿವಿಧ ಸಾಹಸಗಳನ್ನು ಪ್ರದರ್ಶಿಸಿದ್ದವು. 15 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಣೆಗೆ ಆಗಮಿಸಿದ್ದರು. ಏರ್ ಶೋ ವೀಕ್ಷಿಸಿ ವಾಪಾಸ್ ತೆರಳುವಾಗ

ಚೆನ್ನೈ: ಏರ್ ಶೋ ನಲ್ಲಿ ದುರಂತ ಐವರು ಸಾವು-200ಕ್ಕೂ ಹೆಚ್ಚು ಮಂದಿ ಅಸ್ವಸ್ಥ Read More »

ರಾಷ್ಟ್ರೀಯ ನ್ಯೂಸ್

ಭೂಮಿಯನ್ನೇ ನುಂಗಲಿದೆಯಾ ಈ ಕಪ್ಪು ಕುಳಿ..!

(ನ್ಯೂಸ್ ಕಡಬ)newskadaba.com,ಬೆಂಗಳೂರು ಅ. 07. ಬ್ಲ್ಯಾಕ್ ಹೋಲ್ ಎಂದರೆ ಬಾಹ್ಯಾಕಾಶದಲ್ಲಿ ಅತಿ ಹೆಚ್ಚು ಗುರುತ್ವಾಕರ್ಷಣೆಯನ್ನು ಹೊಂದಿರುವ ಪ್ರದೇಶ. ಈ ಪ್ರಬಲ ಗುರುತ್ವಾಕರ್ಷಣೆಯಿಂದ ಯಾವುದೇ ಕಣಗಳು, ಬೆಳಕು ಸೇರಿದಂತೆ ಯಾವುದೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಇದರ ಬಗ್ಗೆ ಇನ್ನೂ ಹಲವು ವಿಷಯಗಳು ನಿಗೂಢವಾಗಿಯೇ ಉಳಿದಿವೆ. ಬ್ಲ್ಯಾಕ್ ಹೋಲ್ ಎಂದರೇನು? ಬ್ಲ್ಯಾಕ್ ಹೋಲ್ ಒಳಗಡೆ ಏನಿದೆ? ಬ್ಲ್ಯಾಕ್ ಹೋಲ್ (ಕೃಷ್ಣ ಕುಳಿ) ಎಂದರೆ ಬಾಹ್ಯಾಕಾಶದಲ್ಲಿ ಅತಿ ಹೆಚ್ಚು ಗುರುತ್ವಾಕರ್ಷಣೆಯನ್ನು ಹೊಂದಿರುವ ಪ್ರದೇಶ. ಅದರೊಳಗೆ ಒಮ್ಮೆ ಹೋದರೆ ಮತ್ತೆ ಅದು ನಮ್ಮಿಂದ ಕಳೆದುಹೋದಂತೆಯೇ.

ಭೂಮಿಯನ್ನೇ ನುಂಗಲಿದೆಯಾ ಈ ಕಪ್ಪು ಕುಳಿ..! Read More »

ತಂತ್ರಜ್ಞಾನ
Scroll to Top