News Kadaba

ಬಿಜೆಪಿ ಮುಖಂಡರ ಮನೆಗೆ ನುಗ್ಗಿ ಯುವಕರ ದಾಂಧಲೆ: ಇಬ್ಬರು ಅರೆಸ್ಟ್

(ನ್ಯೂಸ್ ಕಡಬ)newskadaba.com ಮಂಗಳೂರು, ಅ. 11.  ನಗರದ ಪ್ರತಿಷ್ಠಿತ ಬಿಲ್ಡರ್ ಹಾಗೂ ಬಿಜೆಪಿ ಮುಖಂಡರೊಬ್ಬರ ಮನೆಗೆ ಯುವಕರು ನುಗ್ಗಿ ದಾಂಧಲೆ ನಡೆಸಿದ ಘಟನೆ ಗುರುವಾರ ರಾತ್ರಿ ನಡೆದಿದೆ. ಬಿಲ್ಡರ್ ಹಾಗೂ ಬಿಜೆಪಿ ಮುಖಂಡ ಜಿತೇಂದ್ರ ಕೊಟ್ಟಾರಿ ಮನೆಗೆ ಇಬ್ಬರು ಯುವಕರು ನುಗ್ಗಿ ದಾಂಧಲೆ ನಡೆಸಿದ್ದು ಅವರನ್ನು ಬರ್ಕೆ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಅನುಶ್ ಶೆಟ್ಟಿ ಹಾಗೂ ಅಂಕಿತ್ ಶೆಟ್ಟಿ ಎಂದು ಗುರುತಿಸಲಾಗಿದೆ. ಜಿತೇಂದ್ರ ಕೊಟ್ಟಾರಿ ಮೇಲೆ ಹಲ್ಲೆ ನಡೆಸಿ ತಡೆಯಲು ಬಂದ ಪತ್ನಿ ಮೇಲೂ ಹಲ್ಲೆ ಯತ್ನ […]

ಬಿಜೆಪಿ ಮುಖಂಡರ ಮನೆಗೆ ನುಗ್ಗಿ ಯುವಕರ ದಾಂಧಲೆ: ಇಬ್ಬರು ಅರೆಸ್ಟ್ Read More »

ಕರಾವಳಿ, ಕ್ರೈಮ್ ನ್ಯೂಸ್

ಹಬ್ಬದ ಸಂಭ್ರಮ ಹೆಚ್ಚಿಸಿದ ಚಿನ್ನದ ದರ: ಬೆಲೆಯಲ್ಲಿ ಕುಸಿತ

(ನ್ಯೂಸ್ ಕಡಬ)newskadaba.com, ಅ. 11 : ಚಿನ್ನದ ದರ ಸತತವಾಗಿ 5ನೇ ದಿನವೂ ಕಡಿಮೆಯಾಗುವ ಮೂಲಕ ಹಬ್ಬದ ಖುಷಿಯನ್ನು ಹೆಚ್ಚಿಸಿದೆ. ಇಂದುರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 22 ಕ್ಯಾರಟ್‌ 1 ಗ್ರಾಂ ಚಿನ್ನಕ್ಕೆ 70 ರೂ. ಮತ್ತು 24 ಕ್ಯಾರಟ್‌ 1 ಗ್ರಾಂ ಚಿನ್ನಕ್ಕೆ 76 ರೂ. ಕಡಿಮೆಯಾಗಿದೆ. ಈ ಮೂಲಕ 22 ಕ್ಯಾರಟ್‌ 1 ಗ್ರಾಂ ಚಿನ್ನಕ್ಕೆ 7,095 ರೂ. ಮತ್ತು 24 ಕ್ಯಾರಟ್‌ 1 ಗ್ರಾಂ ಚಿನ್ನಕ್ಕೆ 7,740 ರೂ. ಇದೆ.   22 ಕ್ಯಾರಟ್‌

ಹಬ್ಬದ ಸಂಭ್ರಮ ಹೆಚ್ಚಿಸಿದ ಚಿನ್ನದ ದರ: ಬೆಲೆಯಲ್ಲಿ ಕುಸಿತ Read More »

ಕರ್ನಾಟಕ

ಗಂಡು ಮಗುವಿಗೆ ಜನ್ಮ ನೀಡಿದ ರಾಣಿ ತ್ರಿಷಿಕಾ ಕುಮಾರಿ

(ನ್ಯೂಸ್ ಕಡಬ)newskadaba.com ಮೈಸೂರು, ಅ. 11.  ದಸರಾ ಅರಮನೆ ನಗರಿಯಲ್ಲಿ ಸಂಭ್ರಮ ಮನೆ ಮಾಡಿದ್ದು, ಇತ್ತ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹಾಗೂ ಪತ್ನಿ ತ್ರಿಷಿಕಾ ದಂಪತಿಗೆ ಎರಡನೇ ಗಂಡು ಮಗು ಜನಿಸಿದೆ. ನವರಾತ್ರಿ ಸಂಭ್ರಮದಲ್ಲಿ ರಾಜರ ಕುಟುಂಬದಲ್ಲಿ ಸಂತಸ ಮತ್ತಷ್ಟು ಹೆಚ್ಚಾಗಿದೆ. ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ತ್ರಿಷಿಕಾ ಕುಮಾರಿ ದೇವಿ ಅವರು 2ನೇ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಆಸ್ಪತ್ರೆಯಲ್ಲಿ ತಾಯಿ, ಮಗು ಇಬ್ಬರು ಆರೋಗ್ಯವಾಗಿದ್ದಾರೆ. ವಿಜಯದಶಮಿ ಸಡಗರದಲ್ಲಿರುವ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ

ಗಂಡು ಮಗುವಿಗೆ ಜನ್ಮ ನೀಡಿದ ರಾಣಿ ತ್ರಿಷಿಕಾ ಕುಮಾರಿ Read More »

ಕರ್ನಾಟಕ

ಕೇಂದ್ರದಿಂದ 1,78,173 ಕೋಟಿ ತೆರಿಗೆ ಹಣ ಹಂಚಿಕೆ

(ನ್ಯೂಸ್ ಕಡಬ)newskadaba.com, ಅ. 11ನವದೆಹಲಿ : ಕೇಂದ್ರ ಸರ್ಕಾರವು ₹1,78,173 ಕೋಟಿ ತೆರಿಗೆ ಪಾಲನ್ನು ಹಂಚಿಕೆ ಮಾಡಿದ್ದು, ಇದರಲ್ಲಿ ಕರ್ನಾಟಕಕ್ಕೆ ₹6,498 ಕೋಟಿ ಸಿಕ್ಕಿದೆ. ಬಿಜೆಪಿ ಆಡಳಿತದ ರಾಜ್ಯಗಳಿಗೆ ಮತ್ತು ಮಿತ್ರ ಪಕ್ಷಗಳ ಸರ್ಕಾರಕ್ಕೆ ಸಿಂಹಪಾಲು ದೊರೆತಿದೆ.   “ಅಭಿವೃದ್ಧಿ ಮತ್ತು ಬಂಡವಾಳ ವೆಚ್ಚವನ್ನು ಹೆಚ್ಚಿಸಲು ರಾಜ್ಯಗಳನ್ನು ಸಕ್ರಿಯಗೊಳಿಸುವ ಪ್ರಯತ್ನದಲ್ಲಿ,ರಾಜ್ಯ ಸರ್ಕಾರಗಳಿಗೆ ₹1,78,173 ಕೋಟಿ ರೂಪಾಯಿಗಳ ತೆರಿಗೆ ಹಂಚಿಕೆಯನ್ನು ಬಿಡುಗಡೆ ಮಾಡಲಾಗಿದೆ” ಎಂದು ಕೇಂದ್ರ ಸರ್ಕಾರ ಹೇಳಿದೆ. ಅಕ್ಟೋಬರ್‌ನಲ್ಲಿ ಬಾಕಿ ಇರುವ ₹89,086.50 ಕೋಟಿ ನಿಯಮಿತ ಕಂತಿನ

ಕೇಂದ್ರದಿಂದ 1,78,173 ಕೋಟಿ ತೆರಿಗೆ ಹಣ ಹಂಚಿಕೆ Read More »

ರಾಷ್ಟ್ರೀಯ ನ್ಯೂಸ್

ಇಸ್ರೇಲ್‌ ನ ಭೀಕರ ವಾಯುದಾಳಿಗೆ 22 ಮಂದಿ ಮೃತ್ಯು: 117 ಮಂದಿಗೆ ಗಾಯ

(ನ್ಯೂಸ್ ಕಡಬ)newskadaba.com ಬೈರೂತ್, ಅ. 11.  ಇಸ್ರೇಲ್‌ ಸೇನೆಯು ಸೆಂಟ್ರಲ್‌ ಬೈರೂತ್‌ ನ ವಿಶ್ವಸಂಸ್ಥೆ ಶಾಂತಿಪಾಲನಾ ಪ್ರಧಾನ ಕಚೇರಿ ಮೇಲೆ ಭೀಕರ ವೈಮಾನಿಕ ದಾಳಿ ನಡೆಸಿದ್ದು, ಈ ದಾಳಿಯಲ್ಲಿ 22 ಮಂದಿ ಮೃತಪಟ್ಟಿದ್ದು, ಸುಮಾರು 117 ಮಂದಿ ಗಾಯಗೊಂಡಿದ್ದಾರೆ. ದಾಳಿಯಿಂದ ಲೆಬನಾನ್‌ನಲ್ಲಿ ವಿಶ್ವಸಂಸ್ಥೆಯ ಶಾಂತಿ ಪಾಲಕರಿಗೆ ಅಪಾಯ ಉಂಟಾಗಿದ್ದು, ಅಂತಾರಾಷ್ಟ್ರೀಯ ಕಾನೂನು ಉಲ್ಲಂಘನೆಯಾಗಿದೆ ಎಂದು ಆಕ್ರೋಶ ವ್ಯಕ್ತವಾಗಿದೆ. ಈ ದಾಳಿ ಕುರಿತು ಸ್ಪೇನ್‌ ಹಾಗೂ ಇಟಲಿ ದೇಶಗಳು ಆಕ್ರೋಶ ಹೊರಹಾಕಿದ್ದು, ಸೆಂಟ್ರಲ್‌ ಬೈರೂತ್‌ನ ವಿಶ್ವಸಂಸ್ಥೆ ಶಾಂತಿಪಾಲನಾ ಪ್ರಧಾನ

ಇಸ್ರೇಲ್‌ ನ ಭೀಕರ ವಾಯುದಾಳಿಗೆ 22 ಮಂದಿ ಮೃತ್ಯು: 117 ಮಂದಿಗೆ ಗಾಯ Read More »

ಅಂತರ್ರಾಷ್ಟ್ರೀಯ ನ್ಯೂಸ್, ಕ್ರೈಮ್ ನ್ಯೂಸ್

ಪರಸ್ಪರ ಹೊಡೆದಾಡಿಕೊಂಡ ಖಾಸಗಿ ಬಸ್ ಸಿಬ್ಬಂದಿಗಳು

(ನ್ಯೂಸ್ ಕಡಬ)newskadaba.com, ಅ. 11 ಮಂಗಳೂರು: ಮಂಗಳೂರು ನಗರದ ಬಲ್ಮಠದಲ್ಲಿ ಖಾಸಗಿ ಬಸ್ ಸಿಬ್ಬಂದಿಗಳು ರೌಡಿಗಳಂತೆ ಪರಸ್ಪರ ಹೊಡೆದಾಡಿಕೊಂಡ ಘಟನೆ ವರದಿಯಾಗಿದೆ. ವಿಟ್ಲ-ಮಂಗಳೂರು ಮಧ್ಯೆ ಸಂಚರಿಸುವ ಸೆಲಿನಾ ಬಸ್ ಮತ್ತು ಪುತ್ತೂರು- ಮಂಗಳೂರು ಮಧ್ಯೆ ಸಂಚರಿಸುವ ಧರಿತ್ರಿ ಬಸ್ ಸಿಬ್ಬಂದಿಗಳು ಮಾರಾಮಾರಿ ಮಾಡಿಕೊಂಡಿದ್ದು ಬಸ್ ಚಾಲಕ ಉಗುಳುವಾಗ ಇನ್ನೊಂದು ಬಸ್ ಚಾಲಕನ ಮೈಗೆ ಬಿತ್ತೆಂಬ ನೆಪದಲ್ಲಿ ಹಲ್ಲೆ ನಡೆಸಿದ್ದಾರೆ. ಪ್ರಯಾಣಿಕರ ಮೈಮೇಲೆ ಬಿದ್ದು ಪರಸ್ಪರ ಬಡಿದಾಡಿಕೊಂಡು ಪ್ರಯಾಣಿಕರ ಕಣ್ಮುಂದೆಯೇ ಪರಸ್ಪರ ಬಡಿದಾಡುತ್ತಾ ಭೀತಿಯ ವಾತಾವರಣ ಸೃಷ್ಟಿ ಮಾಡಿದ್ದಾರೆ.

ಪರಸ್ಪರ ಹೊಡೆದಾಡಿಕೊಂಡ ಖಾಸಗಿ ಬಸ್ ಸಿಬ್ಬಂದಿಗಳು Read More »

ಕರಾವಳಿ

ಸುಳ್ಯ: ಕಳ್ಳತನ ಪ್ರಕರಣದ ಆರೋಪ ಸಾಬೀತು; ಇಬ್ಬರಿಗೆ ಜೈಲು ಶಿಕ್ಷೆ ವಿಧಿಸಿದ ಕೋರ್ಟ್

(ನ್ಯೂಸ್ ಕಡಬ)newskadaba.com, ಅ. 11ಬೆಂಗಳೂರು: ಸಂಪಾಜೆಯ ಎರಡು ಮನೆಗಳಲ್ಲಿ ಚಿನ್ನಾಭರಣ ಮತ್ತು ಹಣ ಕದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್ ನಲ್ಲಿ ವಿಚಾರಣೆ ನಡೆದಿದ್ದು ಆರೋಪಿಗಳಿಬ್ಬರ ಆರೋಪ ಸಾಬೀತಾದ ಹಿನ್ನೆಲೆ ಇಬ್ಬರಿಗೂ ಸುಳ್ಯ ನ್ಯಾಯಾಲಯ ಜೈಲು ಶಿಕ್ಷೆ ವಿಧಿಸಿದೆ. ಅಹ್ಮದ್‌ ಕಬೀರ್‌ ಹಾಗೂ ಸಾಜುದೀನ್‌ ಫಾರೂಖ್‌ ಶಿಕ್ಷೆಗೆ ಒಳಗಾದ ಆರೋಪಿಗಳಾಗಿದ್ದರು.ಇಬ್ಬರೂ ಆರೋಪಿಗಳು ಮಾಡಿರುವ ಅಪರಾಧ ಸಾಬೀತಾಗಿದ್ದು, ದೋಷಿ ಎಂದು ಪರಿಗಣಿಸಲಾಗಿದೆ. ಅವರಿಗೆ 3 ವರ್ಷ ಜೈಲು ಶಿಕ್ಷೆ ಹಾಗೂ ತಲಾ 10 ಸಾವಿರ ರೂ. ದಂಡ ವಿಧಿಸಿ ಕೋರ್ಟ್‌

ಸುಳ್ಯ: ಕಳ್ಳತನ ಪ್ರಕರಣದ ಆರೋಪ ಸಾಬೀತು; ಇಬ್ಬರಿಗೆ ಜೈಲು ಶಿಕ್ಷೆ ವಿಧಿಸಿದ ಕೋರ್ಟ್ Read More »

ಕರಾವಳಿ

ಬೈಕ್ ಅಪಘಾತ: ಸವಾರ ಮೃತ್ಯು..!

(ನ್ಯೂಸ್ ಕಡಬ)newskadaba.com ಬೆಳ್ತಂಗಡಿ, ಅ. 11.  ಡಿವೈಡರ್‌ಗೆ ಬೈಕ್‌ ಢಿಕ್ಕಿಯಾದ ಪರಿಣಾಮ ಬೈಕ್‌ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಸಂಭವಿಸಿದೆ. ಮೃತರನ್ನು ಬೆಳ್ತಂಗಡಿ ತಾಲೂಕು ತೆಂಕಕಾರಂದೂರು ಗ್ರಾಮದ ಕಟ್ಟೆ ನಿವಾಸಿ ಸುಧೀಶ್‌ (30) ಎಂದು ಗುರುತಿಸಲಾಗಿದೆ. ಸುಧೀಶ್‌ ಅವರು ಯಾವುದೋ ಕಾರ್ಯನಿಮಿತ್ತ ಉಪ್ಪಿನಂಗಡಿಯಿಂದ ಮನೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಅಪಘಾತ ನಡೆದಿದೆ. ಈ ಅವಘಡದಲ್ಲಿ ಸುಧೀಶ್ ಅವರ ತಲೆಗೆ ಪೆಟ್ಟಾದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆ ಬಳಿಕ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ತಿಳಿದು

ಬೈಕ್ ಅಪಘಾತ: ಸವಾರ ಮೃತ್ಯು..! Read More »

ಕರಾವಳಿ, ಕ್ರೈಮ್ ನ್ಯೂಸ್

ದ.ಕ.ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿಗೆ ಅರ್ಜಿ ಆಹ್ವಾನ

(ನ್ಯೂಸ್ ಕಡಬ)newskadaba.com ಮಂಗಳೂರು, ಅ. 11.  ದ.ಕ. ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವ ಆಚರಣೆಯ ಸಂದರ್ಭ (ನ.1) ನೀಡಲಾಗುವ ಜಿಲ್ಲಾ ಪ್ರಶಸ್ತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ದ.ಕ.ಜಿಲ್ಲಾಡಳಿತವು ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಹಾಗೂ ಅನುಪಮ ಸೇವೆ ಸಾಧನೆಗೈದ ವ್ಯಕ್ತಿಗಳನ್ನು ಗುರುತಿಸಿ ಜಿಲ್ಲಾ ಪ್ರಶಸ್ತಿಯನ್ನು ನೀಡಲಿದೆ. ಸಾಹಿತ್ಯ, ಶಿಕ್ಷಣ, ಸಂಗೀತ, ನೃತ್ಯ, ಕ್ರೀಡೆ, ಕೃಷಿ, ಲಲಿತ ಕಲೆಗಳು, ಸಮಾಜ ಸೇವೆ, ಜಾನಪದ, ಪರಿಸರ ವಿಜ್ಞಾನ, ವೈದ್ಯಕೀಯ ಸಂಶೋಧನೆ, ಪತ್ರಿಕೋದ್ಯಮ ಮುಂತಾದ ಕ್ಷೇತ್ರಗಳಲ್ಲಿ ಸಾಧನೆಗೈದವರು ಅರ್ಜಿಯನ್ನು ಸಂಕ್ಷಿಪ್ತ ದಾಖಲೆ/ ವಿವರಣೆಯೊಂದಿಗೆ ಅ.25ರೊಳಗೆ

ದ.ಕ.ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿಗೆ ಅರ್ಜಿ ಆಹ್ವಾನ Read More »

ಕರಾವಳಿ

ರೇಣುಕಾಸ್ವಾಮಿ ಕೊಲೆ ಕೇಸ್‌: ಮತ್ತೆ ಪರಪ್ಪನ ಅಗ್ರಹಾರ ಜೈಲಿಗೆ ಆರೋಪಿ ಪ್ರದೋಷ ಸ್ಥಳಾಂತರ

(ನ್ಯೂಸ್ ಕಡಬ)newskadaba.com, ಅ.10 ಬೆಳಗಾವಿ:  ರೇಣುಕಾಸ್ವಾಮಿ ಕೊಲೆ ಪ್ರಕರಣದ ಪ್ರಮುಖ ಆರೋಪಿ ಚಿತ್ರನಟ ದರ್ಶನ್ ಸಹಚರ ಪ್ರದೋಷ್ ನನ್ನು ಹಿಂಡಲಗಾ ಕಾರಾಗೃಹದಿಂದ ಮರಳಿ ಬೆಂಗಳೂರಿನ ಪರಪ್ಪನ ಅಗ್ರಹಾರಕ್ಕೆ ಗುರುವಾರ ಪೊಲೀಸ್ ಭದ್ರತೆಯಲ್ಲಿ ಸ್ಥಳಾಂತರಿಸಲಾಯಿತು. ಬೆಂಗಳೂರು ಕಾರಾಗೃಹದಿಂದ ಬೆಳಗಾವಿ ಜೈಲಿಗೆ ಸ್ಥಳಾಂತರ ಮಾಡಿದ್ದರ ಬಗ್ಗೆ ಪ್ರದೋಷ್ ಸಲ್ಲಿಸಿದ್ದ ರಿಟ್ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರು ವಿಚಾರಣಾ ಕೈದಿ ಪ್ರದೋಷನನ್ನು ಮರಳಿ ಬೆಂಗಳೂರು ಕಾರಾಗೃಹಕ್ಕೆ ಸ್ಥಳಾಂತರಿಸುವಂತೆ ನಿರ್ದೇಶನ ನೀಡಿದ್ದರು. ಅದರಂತೆ ಆದೇಶ ಪ್ರತಿ ಬಂದ ಬಳಿಕ

ರೇಣುಕಾಸ್ವಾಮಿ ಕೊಲೆ ಕೇಸ್‌: ಮತ್ತೆ ಪರಪ್ಪನ ಅಗ್ರಹಾರ ಜೈಲಿಗೆ ಆರೋಪಿ ಪ್ರದೋಷ ಸ್ಥಳಾಂತರ Read More »

ಬ್ರೇಕಿಂಗ್ ನ್ಯೂಸ್
Scroll to Top