News Kadaba

ಆಯುಷ್ಮಾನ್ ಭಾರತ್ ಆರೋಗ್ಯ ರಕ್ಷಣೆ ಯೋಜನೆ: ಪ್ರಧಾನಿ ಮೋದಿಯಿಂದ ಇಂದು ಚಾಲನೆ

(ನ್ಯೂಸ್ ಕಡಬ)newskadaba.com, ಅ. 29 ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು  ಆಯುಷ್ಮಾನ್ ಭಾರತ್ ಪ್ರಧಾನ್ ಮಂತ್ರಿ ಜನ ಆರೋಗ್ಯ ಯೋಜನೆ ಅಡಿಯಲ್ಲಿ 70 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಎಲ್ಲಾ ನಾಗರಿಕರಿಗೆ ಆರೋಗ್ಯ ರಕ್ಷಣೆಯನ್ನು ನೀಡುವ ಸರ್ಕಾರದ ಯೋಜನೆಯನ್ನು ಇಂದು ಉದ್ಘಾಟಿಸಲಿದ್ದಾರೆ. ವಾಡಿಕೆಯ ಪ್ರತಿರಕ್ಷಣೆಗಳ ವಿದ್ಯುನ್ಮಾನ ನೋಂದಾವಣೆಯನ್ನು ನಿರ್ವಹಿಸಲು ಅಭಿವೃದ್ಧಿಪಡಿಸಿದ U-WIN ಪೋರ್ಟಲ್, ಪ್ರಸ್ತುತ ಪ್ರಾಯೋಗಿಕ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿದೆ. ಅದನ್ನು ಸಹ ಇಂದು ಪ್ರಧಾನ ಮಂತ್ರಿಗಳು ಉದ್ಘಾಟಿಸಲಿದ್ದಾರೆ. ಇವೆರಡನ್ನು ಹೊರತುಪಡಿಸಿ, ಇನ್ನೂ ಕೆಲವು ಯೋಜನೆಗಳನ್ನು ಪ್ರಧಾನ […]

ಆಯುಷ್ಮಾನ್ ಭಾರತ್ ಆರೋಗ್ಯ ರಕ್ಷಣೆ ಯೋಜನೆ: ಪ್ರಧಾನಿ ಮೋದಿಯಿಂದ ಇಂದು ಚಾಲನೆ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಬೈಕ್ ಅಪಘಾತ: ಓರ್ವ ಗಂಭೀರ ಗಾಯ

(ನ್ಯೂಸ್ ಕಡಬ) newskadaba.com ಪುತ್ತೂರು, ಅ.29. ಬೈಕ್ ಗಳ ನಡುವೆ ಅಪಘಾತ ಸಂಭವಿಸಿ ಓರ್ವ ಗಂಭೀರವಾಗಿ ಗಾಯಗೊಂಡ ಘಟನೆ ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಮುಕ್ರಂಪಾಡಿ ಬಳಿ ಸೋಮವಾರ ರಾತ್ರಿ ಸಂಭವಿಸಿದೆ. ಪುತ್ತೂರು ಖಾಸಗಿ ಆಸ್ಪತ್ರೆಯ ಸಿಬ್ಬಂದಿ ಸಂತೋಷ್ ಶೆಟ್ಟಿ ಮತ್ತು ಕಾಸರಗೋಡಿನ ಉದಯ ಅವರು ಚಲಾಯಿಸುತ್ತಿದ್ದ ಬೈಕ್ ಗಳ ನಡುವೆ ಢಿಕ್ಕಿ ಸಂಭವಿಸಿದ್ದು, ಗಾಯಗೊಂಡವರನ್ನು ಪುತ್ತೂರು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.  

ಬೈಕ್ ಅಪಘಾತ: ಓರ್ವ ಗಂಭೀರ ಗಾಯ Read More »

ಕರಾವಳಿ, ಕ್ರೈಮ್ ನ್ಯೂಸ್

ಪಟಾಕಿ ದುರಂತ: 154 ಮಂದಿ ಗಾಯ

(ನ್ಯೂಸ್ ಕಡಬ) newskadaba.com ಕಾಸರಗೋಡು, ಅ.29. ಪಟಾಕಿ ದುರಂತ ಸಂಭವಿಸಿ 154 ಮಂದಿ ಗಾಯಗೊಂಡಿರುವ ಘಟನೆ ಕೇರಳದ ಕಾಸರಗೋಡು ಜಿಲ್ಲೆಯಲ್ಲಿ ನಡೆದಿದೆ. ವೀರರ್ಕಾವು ದೇವಸ್ಥಾನದ ಬಳಿಯ ತಾತ್ಕಾಲಿಕ ಶೆಡ್‌ನಲ್ಲಿ ಪಟಾಕಿ ಸಂಗ್ರಹಿಸಿಡಲಾಗಿತ್ತು. ಈ ಶೆಡ್‌ಗೆ ಮೂವಳಂಕುಜಿ ಚಾಮುಂಡಿ ತೆಯ್ಯಂನ ‘ವೆಳ್ಳಟ್ಟಂ ಪುರಪ್ಪಡು’ಗೆ ಸಂಬಂಧಿಸಿದಂತೆ ಪಟಾಕಿ ಸಿಡಿಸುವ ವೇಳೆ ಈ ದುರಂತ ಸಂಭವಿಸಿದೆ. ಘಟನೆಯಲ್ಲಿ ಗಾಯಗೊಂಡ 154 ಮಂದಿ ಪೈಕಿ ಒಬ್ಬರ ಸ್ಥಿತಿ ಚಿಂತಾಜನಕವಾಗಿದ್ದು, 8 ಮಂದಿ ಗಂಭೀರವಾಗಿದ್ದಾರೆ. ಹಾಗೂ 97 ಮಂದಿಯನ್ನು ಕಾಸರಗೋಡು, ಕಣ್ಣೂರು ಮತ್ತು ಮಂಗಳೂರಿನ ವಿವಿಧ

ಪಟಾಕಿ ದುರಂತ: 154 ಮಂದಿ ಗಾಯ Read More »

ಕರಾವಳಿ, ಕ್ರೈಮ್ ನ್ಯೂಸ್

ಕಾಂಗ್ರೆಸ್ ಸರಕಾರ ಮೈಸೂರು ರಾಜಮನೆತನಕ್ಕೆ ಕಿರುಕುಳ ನೀಡುತ್ತಿದೆ: ಹೆಚ್.ಡಿ.ಕುಮಾರಸ್ವಾಮಿ

(ನ್ಯೂಸ್ ಕಡಬ)newskadaba.com, ಅ. 29 ಮೈಸೂರು: ಕಾಂಗ್ರೆಸ್ ಸರಕಾರ ಮೈಸೂರು ರಾಜಮನೆತನದೊಂದಿಗೆ ಹಗೆತನ ಸಾಧಿಸುತ್ತಿದ್ದು ರಾಜ್ಯದ ಅಭಿವೃದ್ಧಿಗೆ ಅತ್ಯಂತ ಕೊಡುಗೆ ನೀಡಿದ  ರಾಜಮನೆತನಕ್ಕೆ ಕಿರುಕುಳ ನೀಡುತ್ತಿದೆ ಎಂದು ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ. ಮೈಸೂರಿನ ಶ್ರೀ ಚಾಮುಂಡೇಶ್ವರಿ ತಾಯಿ ಒಡೆಯರ್ ಮನೆತನದ ಆರಾಧ್ಯದೈವ. ಅವರ ಮನೆತನದಿಂದ ದೇವರನ್ನು ದೂರ ಮಾಡುವ ದುಷ್ಕೃತ್ಯವನ್ನು ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ ಎಂದರು. ಚಾಮುಂಡೇಶ್ವರಿ ಕ್ಷೇತ್ರದ ಉಸ್ತುವಾರಿಯನ್ನು ರಾಜಮನೆತನ ಬಹಳ ಉತ್ತಮವಾಗಿ ನಿರ್ವಹಣೆ ಮಾಡುತ್ತಿತ್ತು. ಕ್ಷೇತ್ರದ ಅಭಿವೃದ್ಧಿಗೆ ಒಡೆಯರ್ ಕುಟುಂಬ ಸಾಕಷ್ಟು ಕೆಲಸ ಮಾಡಿದೆ. ಅಂತಹ

ಕಾಂಗ್ರೆಸ್ ಸರಕಾರ ಮೈಸೂರು ರಾಜಮನೆತನಕ್ಕೆ ಕಿರುಕುಳ ನೀಡುತ್ತಿದೆ: ಹೆಚ್.ಡಿ.ಕುಮಾರಸ್ವಾಮಿ Read More »

ಕರಾವಳಿ

ಆರೋಗ್ಯ ವಿಮೆಯ GST ರದ್ದತಿಗೆ ಕೇಂದ್ರ ಸರ್ಕಾರ ಚಿಂತನೆ

(ನ್ಯೂಸ್ ಕಡಬ)newskadaba.com, ಅ.28,ನವದೆಹಲಿ: ಆರೋಗ್ಯ ವಿಮೆಯ ಮೇಲಿನ GST ರದ್ಧತಿಗೆ ಕೇಂದ್ರ ಸರ್ಕಾರ ಚಿಂತನೆ ನಡೆಸಿದ್ದು, ಶೀಘ್ರದಲ್ಲೇ ವಿಮಾ ಪ್ರೀಮಿಯಂ ಕಡಿತವಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಮುಂಬರುವ ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ಆರೋಗ್ಯ ವಿಮೆಮತ್ತು ಟರ್ಮ್ ವಿಮೆ ಪಾಲಿಸಿಗಳ ಮೇಲೆ ಜಿಎಸ್ ಟಿ ತೆಗೆದುಹಾಕಲು ಕೇಂದ್ರ ಸರ್ಕಾರ ಗಂಭೀರ ಚಿಂತನೆ ನಡೆಸಿದೆ. ವಿಮೆ ಮೇಲಿನ ಜಿಎಸ್ ಟಿ ತೆಗೆದುಹಾಕಲು ಸಾರ್ವಜನಿಕರಿಂದ ವ್ಯಾಪಕ ಒತ್ತಡಗಳು ಬಂದ ಹಿನ್ನೆಲೆಯಲ್ಲಿ ಜಿಎಸ್‌ಟಿ ತೆಗೆದು ಹಾಕಲು ಮುಂದಾಗಿದೆ ಎನ್ನಲಾಗಿದೆ. ಇನ್ನು ಸಾಮಾನ್ಯ ಜನರು ತೆಗೆದುಕೊಳ್ಳುವ

ಆರೋಗ್ಯ ವಿಮೆಯ GST ರದ್ದತಿಗೆ ಕೇಂದ್ರ ಸರ್ಕಾರ ಚಿಂತನೆ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಪರಿಶಿಷ್ಟ ಜಾತಿಗೆ ಒಳಮೀಸಲಾತಿ ನೀಡಿಕೆ ತೀರ್ಮಾನ-ಸಚಿವ ಸಂಪುಟ

(ನ್ಯೂಸ್ ಕಡಬ)newskadaba.com, ಅ.28,ನವದೆಹಲಿ: ಸಿದ್ಧರಾಮಯ್ಯ ನೇತೃತ್ವದ ಸರ್ಕಾರ ಕರ್ನಾಟಕದಲ್ಲಿ ಪರಿಶಿಷ್ಟ ಜಾತಿಗೆ ಒಳ ಮೀಸಲಾತಿ ಕಲ್ಪಿಸಲು ತೀರ್ಮಾನಿಸಿದೆ. ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಪರಿಶಿಷ್ಟ ಜಾತಿಒಳ ಮೀಸಲಾತಿ ಕಲ್ಪಿಸಲು ನಿರ್ಣಯಿಸಲಾಗಿದ್ದು, ನಿವೃತ್ತ ಹೈ ಕೋರ್ಟ್​ ನ್ಯಾಯಾಧೀಶರ ನೇತೃತ್ವದಲ್ಲಿ ಆಯೋಗ ರಚಿಸಿ ದತ್ತಾಂಶ ಸ್ವೀಕರಿಸಿ ಮುಂದಿನ ನಿರ್ಣಯ ಕೈಗೊಳ್ಳುವುದಾಗಿ ತಿಳಿಸಿದೆ. ಅಲ್ಲದೇ ಮೂರು ತಿಂಗಳಲ್ಲಿ ವರದಿ ಸಲ್ಲಿಕೆ ಮಾಡಲು ಆಯೋಗಕ್ಕೆ ಸೂಚನೆ ನೀಡಲಾಗಿದೆ. ಪರಿಶಿಷ್ಟ ಜಾತಿಗೆ ಒಳ ಮೀಸಲಾತಿ ನೀಡಲು ಸುಪ್ರಿಂಕೋರ್ಟ್ ತೀರ್ಪು ನೀಡಿತ್ತು. ಈ ಹಿನ್ನೆಲೆಯಲ್ಲಿ

ಪರಿಶಿಷ್ಟ ಜಾತಿಗೆ ಒಳಮೀಸಲಾತಿ ನೀಡಿಕೆ ತೀರ್ಮಾನ-ಸಚಿವ ಸಂಪುಟ Read More »

ಕರ್ನಾಟಕ

ಕೇಂದ್ರ ಸರ್ಕಾರ: 2025ಕ್ಕೆ ಜನಗಣತಿ ಶುರು

(ನ್ಯೂಸ್ ಕಡಬ)newskadaba.com, ಅ.28,ನವದೆಹಲಿ: 2028 ರ ಲೋಕಸಭೆ ಚುನಾವಣೆಗೆ ಮುನ್ನವೇ ದೇಶದಲ್ಲಿ ಜನಗಣತಿ ನಡೆಸಬೇಕೆಂದು ಕೇಂದ್ರ ಸರ್ಕಾರ ತಯಾರಿ ನಡೆಸುತ್ತಿದೆ ಎಂದು ತಿಳಿದು ಬಂದಿದೆ. ನಾಲ್ಕು ವರ್ಷಗಳ ಸುದೀರ್ಘ ವಿಳಂಬದ ನಂತರ ದೇಶದಲ್ಲಿ ಗಣತಿ 2025ರಿಂದ 2026ರ ವರೆಗೆ ನಡೆಯಲಿದೆ ಎಂಬ ನಿರೀಕ್ಷೆಯಿದೆ. 2011ರ ಜನಗಣತಿಯ ನಂತರ 10 ವರ್ಷಗಳ ನಂತರ ಅಂದರೆ 2021ಕ್ಕೆ ಜನಗಣತಿ ನಡೆಯಬೇಕಿತ್ತು. ಆದರೆ ಕೊರೋನಾ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ನಾಲ್ಕು ವರ್ಷ ತಡವಾಗಿದೆ. ಜನಗಣತಿಯ ನಂತರ ಜನಸಂಖ್ಯೆ ಆಧಾರದ ಮೇಲೆ ಲೋಕಸಭಾ ಸ್ಥಾನಗಳ ವಿಂಗಡಣೆ

ಕೇಂದ್ರ ಸರ್ಕಾರ: 2025ಕ್ಕೆ ಜನಗಣತಿ ಶುರು Read More »

ರಾಷ್ಟ್ರೀಯ ನ್ಯೂಸ್

ಸಂಘರ್ಷ ಕೊನೆಗೊಳಿಸುವ ತಾಕತ್ತು ಇರುವುದು ಮೋದಿಗೆ ಮಾತ್ರ: ಝೆಲೆನ್ಸ್ಕಿ

(ನ್ಯೂಸ್ ಕಡಬ)newskadaba.com, ಅ.28,ನವದೆಹಲಿ: ರಷ್ಯಾ ಜೊತೆಗಿನ ಉಕ್ರೇನ್ ಸಂಘರ್ಷವನ್ನು ಅಂತ್ಯಗೊಳಿಸುವ ತಾಕತ್ತು ಇರುವುದು ಪ್ರಧಾನಿ ಮೋದಿಗೆ ಮಾತ್ರ. ಇದು ಭಾರತಕ್ಕೂ ಬಹಳ ಮಹತ್ವದ್ದಾಗಿದೆ. ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಮತ್ತೊಮ್ಮೆ ಸಂಘರ್ಷ ನಿಲ್ಲಿಸುವ ಪ್ರಧಾನಿ ಮೋದಿ ಪಾತ್ರದ ಕುರಿತಂತೆ ಪುನರುಚ್ಚರಿಸಿದ್ದಾರೆ. ಪ್ರಧಾನಿ ಮೋದಿಯವರು ಉಕ್ರೇನ್ ಮತ್ತು ರಷ್ಯಾ ನಡುವಿನ ಶಾಂತಿ ಮಾತುಕತೆಗಳನ್ನು ಆಯೋಜಿಸುವ ಸಾಧ್ಯತೆಯ ಬಗ್ಗೆ ಕೇಳಿದ ಪ್ರಶ್ನೆಗೆ, ಝೆಲೆನ್ಸ್ಕಿ ತಮ್ಮ ಬಲವಾದ ಸುಳಿವು ನೀಡಿದರು. ಭಾರತದಿಂದ ಇದು ನಿಸ್ಸಂದೇಹವಾಗಿ ಸಂಭವಿಸಬಹುದು ಮತ್ತು ಪ್ರಧಾನಿ ಮೋದಿ ಅವರು

ಸಂಘರ್ಷ ಕೊನೆಗೊಳಿಸುವ ತಾಕತ್ತು ಇರುವುದು ಮೋದಿಗೆ ಮಾತ್ರ: ಝೆಲೆನ್ಸ್ಕಿ Read More »

ಬ್ರೇಕಿಂಗ್ ನ್ಯೂಸ್

ಸರ್ಕಾರಿ ಆಸ್ಪತ್ರೆಗಳ ಗುತ್ತಿಗೆ ನೌಕರರ ಸೇವೆ 2025ರವರೆಗೆ ವಿಸ್ತರಣೆ: ಹೆಚ್.ಕೆ ಪಾಟೀಲ್

(ನ್ಯೂಸ್ ಕಡಬ)newskadaba.com, ಅ.28,ಬೆಂಗಳೂರು: ರಾಜ್ಯಾದ್ಯಂತ ಸರ್ಕಾರಿ ಆಸ್ಪತ್ರೆಗಳು, ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ  ಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿರುವ 7045 ನೌಕರರ ಸೇವೆಯನ್ನು 2025ರ ಮಾರ್ಚ್‌ವರೆಗೆ ಮುಂದುವರೆಸಲಾಗುವುದು ಎಂದು ಕರ್ನಾಟಕದ ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ಸಚಿವ ಹೆಚ್.ಕೆ. ಪಾಟೀಲ್ ತಿಳಿಸಿದ್ದಾರೆ. ಈಮೂಲಕ ಅವರ ಸೇವೆಯನ್ನು ಇನ್ನೂ ಆರು ತಿಂಗಳ ಕಾಲ ಮುಂದುವರಿಕೆ ಮಾಡಲಾಗುತ್ತದೆ. ಮುಂದುವರೆದು, ಲೋಕಾಯುಕ್ತ ಸಂಸ್ಥೆಯಲ್ಲಿ ಖಾಲಿ ಇರುವ ಹಿರಿಯ ಸಹಾಯಕ ಸರ್ಕಾರಿ ಅಭಿಯೋಜಕರ ಹುದ್ದೆಗಳಿಗೆ ಅಭಿಯೋಜನಾ ಇಲಾಖೆಯ 12

ಸರ್ಕಾರಿ ಆಸ್ಪತ್ರೆಗಳ ಗುತ್ತಿಗೆ ನೌಕರರ ಸೇವೆ 2025ರವರೆಗೆ ವಿಸ್ತರಣೆ: ಹೆಚ್.ಕೆ ಪಾಟೀಲ್ Read More »

ಕರ್ನಾಟಕ

ಅಯೋಧ್ಯೆ ರಾಮಮಂದಿರದಲ್ಲಿ ಮೊದಲ ದೀಪಾವಳಿ- ಯೋಗಿ ಸರ್ಕಾರ ಭರ್ಜರಿ ಸಿದ್ಧತೆ

(ನ್ಯೂಸ್ ಕಡಬ) newskadaba.com ಲಕ್ನೋ, ಅ.28. ಅಯೋಧ್ಯೆಯಲ್ಲಿ ನಿರ್ಮಾಣವಾದ ರಾಮ ಮಂದಿರದಲ್ಲಿ ಈ ಬಾರಿ ಮೊದಲ ದೀಪಾವಳಿಯನ್ನು ಅದ್ದೂರಿಯಾಗಿ ಆಚರಿಸಲು ಉತ್ತರ ಪ್ರದೇಶದ ಯೋಗಿ ಸರ್ಕಾರ ಭರ್ಜರಿ ಸಿದ್ಧತೆ ಮಾಡಿಕೊಳ್ಳುತ್ತಿದೆ. ದೀಪಾವಳಿಯಂದು ಸರಯೂ ನದಿಯ ದಡದಲ್ಲಿ 28 ಲಕ್ಷ ದೀಪಗಳನ್ನು ಬೆಳಗಿಸುವ ಮೂಲಕ ಹೊಸ ವಿಶ್ವ ದಾಖಲೆಯನ್ನು ನಿರ್ಮಿಸುವ ಯೋಜನೆಯನ್ನು ಯೋಗಿ ಸರ್ಕಾರ ಹಾಕಿಕೊಂಡಿದೆ. ದೀಪಾವಳಿಯಂದು ವಿಶೇಷ ಪರಿಸರ ಸ್ನೇಹಿ ದೀಪಗಳು ರಾಮ ಮಂದಿರವನ್ನು ಬೆಳಗಿಸಲಿವೆ. ದೇವಾಲಯದ ಕಟ್ಟೆಗಳು ಹಾಗೂ ಕೆತ್ತನೆಯ ಮೇಲೆ ಕಲೆಗಳು ಮತ್ತು ಮಸಿಯಾಗುವುದನ್ನು

ಅಯೋಧ್ಯೆ ರಾಮಮಂದಿರದಲ್ಲಿ ಮೊದಲ ದೀಪಾವಳಿ- ಯೋಗಿ ಸರ್ಕಾರ ಭರ್ಜರಿ ಸಿದ್ಧತೆ Read More »

ರಾಷ್ಟ್ರೀಯ ನ್ಯೂಸ್
Scroll to Top