News Kadaba

ಬಾಲಿವುಡ್ ನಟ ಸಲ್ಮಾನ್ ಖಾನ್‌ ಗೆ ಮತ್ತೆ ಜೀವ ಬೆದರಿಕೆ ಸಂದೇಶ

(ನ್ಯೂಸ್ ಕಡಬ)newskadaba.com ಮುಂಬೈ, ಅ. 30. ಬಾಲಿವುಡ್ ನಟ ಸಲ್ಮಾನ್ ಖಾನ್‌ಗೆ ಅಪರಿಚಿತ ವ್ಯಕ್ತಿಯಿಂದ ಮತ್ತೆ ಜೀವ ಬೆದರಿಕೆ ಬಂದಿದೆ. ಜೊತೆಗೆ ಆ ವ್ಯಕ್ತಿಯು 2 ಕೋಟಿ ರೂ.ಗೆ ಬೇಡಿಕೆಯಿಟ್ಟಿರುವುದಾಗಿ ಮುಂಬೈ ಟ್ರಾಫಿಕ್ ಪೊಲೀಸರಿಗೆ ಸಂದೇಶ ಕಳುಹಿಸಿದ್ದಾರೆ. ಮೇಲಿಂದ ಮೇಲೆ ನಟ ಸಲ್ಮಾನ್ ಖಾನ್ ಜೀವ ಬೆದರಿಕೆಗಳು ಬರುತ್ತಲೇ ಇವೆ. ಇದೀಗ ಜೀವ ಬೆದರಿಕೆ ಸಂದೇಶದ ಜೊತೆಗೆ 2 ಕೋಟಿ ರೂ. ಬೇಡಿಕೆಯಿಟ್ಟಿದ್ದಾರೆ. ಜೊತೆಗೆ ತಾವು ಕೇಳಿದಷ್ಟು ಹಣ ನೀಡದೆ ಇದ್ದರೆ ಹತ್ಯೆ ಮಾಡುವುದಾಗಿ ಸಂದೇಶ ರವಾನಿಸಿದ್ದಾರೆ. […]

ಬಾಲಿವುಡ್ ನಟ ಸಲ್ಮಾನ್ ಖಾನ್‌ ಗೆ ಮತ್ತೆ ಜೀವ ಬೆದರಿಕೆ ಸಂದೇಶ Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ರಾಷ್ಟ್ರೀಯ ಜಾನುವಾರು ಗಣತಿಗೆ ಇಂದು ಸಿ.ಎಂ ಸಿದ್ದರಾಮಯ್ಯ ಚಾಲನೆ

(ನ್ಯೂಸ್ ಕಡಬ)newskadaba.com, ಅ. 30 ಬೆಂಗಳೂರು: 21ನೇ ಸಾಲಿನ  ರಾಷ್ಟ್ರೀಯ ಜಾನುವಾರು ಗಣತಿ ಅಂಗವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯ ಜಾನುವಾರು ಗಣತಿ ಕಾರ್ಯಕ್ಕೆ ಇಂದು ಚಾಲನೆ ನೀಡಿದರು. ಪಶು ಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಹಾಗೂ ರೇಷ್ಮೆ ಸಚಿವರು, ಪಶು ಸಂಗೋಪನಾ ಇಲಾಖೆ ಸರ್ಕಾರದ ಕಾರ್ಯದರ್ಶಿ ಹಾಗೂ ಇಲಾಖೆಯ ಉನ್ನತ ಅಧಿಕಾರಿಗಳು ಉಪಸ್ಥಿತರಿದ್ದರು.ಜಾನುವಾರು ಗಣತಿ ಕಾರ್ಯ 2025ರ ಫೆಬ್ರವರಿ ತಿಂಗಳವರೆಗೆ ನಡೆಯಲಿದೆ.

ರಾಷ್ಟ್ರೀಯ ಜಾನುವಾರು ಗಣತಿಗೆ ಇಂದು ಸಿ.ಎಂ ಸಿದ್ದರಾಮಯ್ಯ ಚಾಲನೆ Read More »

ಕರ್ನಾಟಕ

5 ತಿಂಗಳ ಬಳಿಕ ಜೈಲಿಂದ ದರ್ಶನ್ ರಿಲೀಸ್ – ಹೈಕೋರ್ಟ್‌ನಿಂದ ಜಾಮೀನು ಮಂಜೂರು

(ನ್ಯೂಸ್ ಕಡಬ)newskadaba.com ಬೆಂಗಳೂರು, ಅ. 30. ದೀಪಾವಳಿ ಹಬ್ಬಕ್ಕೆ ದರ್ಶನ್‌ಗೆ ಬಿಗ್‌ ಗಿಫ್ಟ್‌ ಸಿಕ್ಕಿದ್ದು 140 ದಿನಗಳ ಬಳಿಕ ದರ್ಶನ್‌ ಜೈಲಿನಿಂದ ಬಿಡುಗಡೆಯಾಗಲಿದ್ದಾರೆ. ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾದ ನಟ ದರ್ಶನ್‌ಗೆ ಹೈಕೋರ್ಟ್‌ 6 ವಾರಗಳ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ಬೆನ್ನುಹುರಿ ನೋವಿಗೆ ಪರಿಹಾರ ಪಡೆಯಲು ಶಸ್ತ್ರ ಚಿಕಿತ್ಸೆಗೆ ಅವಕಾಶ ಕಲ್ಪಿಸಿಕೊಂಡಬೇಕೆಂದು ಕೋರಿ ದರ್ಶನ್‌ ಸಲ್ಲಿಸಿದ್ದ ಮನವಿಯನ್ನು ಪುರಸ್ಕರಿಸಿದ ನ್ಯಾಯಮೂರ್ತಿ ವಿಶ್ವಜಿತ್ ಶೆಟ್ಟಿ ಅವರಿದ್ದ ಏಕಸದಸ್ಯ ಪೀಠ ಇಂದು ಮಧ್ಯಂತರ ಜಾಮೀನು ಮಂಜೂರು ಮಾಡಿದೆ.

5 ತಿಂಗಳ ಬಳಿಕ ಜೈಲಿಂದ ದರ್ಶನ್ ರಿಲೀಸ್ – ಹೈಕೋರ್ಟ್‌ನಿಂದ ಜಾಮೀನು ಮಂಜೂರು Read More »

ಕರ್ನಾಟಕ

ಕೋಳಿಸಾಕಾಣಿಕೆ ಮತ್ತು ಫೋಟೋಗ್ರಫಿಯ ಉಚಿತ ತರಬೇತಿ: ಅರ್ಜಿ ಅಹ್ವಾನ

(ನ್ಯೂಸ್ ಕಡಬ)newskadaba.com, ಅ. 30 ಬೆಂಗಳೂರು: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಟ್ರಸ್ಟ್‌ ಮತ್ತು ಕೆನರಾ ಬ್ಯಾಂಕ್‌ನ ಸಹಯೋಗದಲ್ಲಿ ನಡೆಸುತ್ತಿರುವ ರುಡ್‌ಸೆಟ್‌ ಸಂಸ್ಥೆಯ ವತಿಯಿಂದ ಹಮ್ಮಿಕೊಂಡಿರುವ ಕೋಳಿ ಸಾಕಾಣಿಕೆ ಹಾಗೂ ಫೋಟೋಗ್ರಫಿ ಮತ್ತು ವಿಡಿಯೋಗ್ರಫಿ ಕುರಿತ 30 ದಿನಗಳ ಉಚಿತ ತರಬೇತಿಯನ್ನು ನವೆಂಬರ್‌ ಮೊದಲ ವಾರದಲ್ಲಿ ಆರಂಭವಾಗಲಿದೆ. ಗ್ರಾಮೀಣ ಆಸಕ್ತ ನಿರುದ್ಯೋಗಿ ಯುವಕ-ಯುವತಿಯರು ತರಬೇತಿಯಲ್ಲಿ ಭಾಗವಹಿಸಬಹುದಾಗಿದೆ. ಆಸಕ್ತರು 18 ರಿಂದ 45 ವರ್ಷ ವಯೋಮಾನದವರಾಗಿದ್ದು, ಕನ್ನಡ ಭಾಷೆ ಓದಲು ಮತ್ತು ಬರೆಯಲು ಬಲ್ಲವರಾಗಿರಬೇಕು. ಬಿಪಿಎಲ್‌ ಕಾರ್ಡ್‌ ಅಥವಾ

ಕೋಳಿಸಾಕಾಣಿಕೆ ಮತ್ತು ಫೋಟೋಗ್ರಫಿಯ ಉಚಿತ ತರಬೇತಿ: ಅರ್ಜಿ ಅಹ್ವಾನ Read More »

ಕರ್ನಾಟಕ

ನೋಯ್ಡಾ ಬ್ಯಾಂಕ್ವೆಟ್ ಹಾಲ್ ನವೀಕರಣದ ವೇಳೆ ಬೆಂಕಿ – ಎಲೆಕ್ಟ್ರಿಷಿಯನ್ ಮೃತ್ಯು

(ನ್ಯೂಸ್ ಕಡಬ)newskadaba.com ನವದೆಹಲಿ, ಅ. 30. ನೋಯ್ಡಾ ಸೆಕ್ಟರ್-74ರ ಲೋಟಸ್ ಗ್ರ್ಯಾಂಡ್ಯೂರ್ ಬ್ಯಾಂಕ್ವೆಟ್ ಹಾಲ್‌ನಲ್ಲಿ ಸಂಭವಿಸಿದ ಭಾರೀ ಬೆಂಕಿಯಲ್ಲಿ ಎಲೆಕ್ಟ್ರಿಷಿಯನ್ ಮೃತಪಟ್ಟ ಘಟನೆ ವರದಿಯಾಗಿದೆ. ಅಗ್ನಿಶಾಮಕ ದಳಗಳು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವಲ್ಲಿ ಸಹಕರಿಸಿದ್ದಾರೆ. ಮುಂಜಾನೆ 3:30 ರ ಸುಮಾರಿಗೆ, ನೋಯ್ಡಾ ಸೆಕ್ಟರ್ 74 ರ ಲೋಟಸ್ ಗ್ರಾಂಡ್ಯೂರ್ ಬ್ಯಾಂಕ್ವೆಟ್ ಹಾಲ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ.  

ನೋಯ್ಡಾ ಬ್ಯಾಂಕ್ವೆಟ್ ಹಾಲ್ ನವೀಕರಣದ ವೇಳೆ ಬೆಂಕಿ – ಎಲೆಕ್ಟ್ರಿಷಿಯನ್ ಮೃತ್ಯು Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ರಾಜ್ಯದ 4 ಯೋಜನೆಗಳಿಗೆ ಪ್ರಧಾನಿ ಮೋದಿ ಚಾಲನೆ- ಆರೋಗ್ಯ ಕ್ಷೇತ್ರಕ್ಕೆ ಭಾರಿ ಕೊಡುಗೆ

(ನ್ಯೂಸ್ ಕಡಬ) newskadaba.com, ಅ. 30. ಧನ್ವಂತರಿಯ ಜನ್ಮದಿನದಂದು ದೇಶದಲ್ಲಿ 12,850 ಕೋಟಿ ರೂ. ವೆಚ್ಚದಲ್ಲಿ ಕರ್ನಾಟಕದ 4 ಯೋಜನೆಗಳ ಸಹಿತ ಆರೋಗ್ಯ ಕ್ಷೇತ್ರದ ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಿದ್ದಾರೆ. ಆಯುಷ್ಮಾನ್‌ ಭಾರತ್ ಆರೋಗ್ಯ ಮೂಲಸೌಕರ್ಯ ಯೋಜನೆಯಡಿ ಕರ್ನಾಟಕ ಸೇರಿ ದೇಶದ 21 ಕಡೆ ಕ್ರಿಟಿಕಲ್‌ ಕೇರ್‌ ಬ್ಲಾಕ್‌ ಗಳ ನಿರ್ಮಾಣಕ್ಕೆ ಮೋದಿ ಅವರು ಶಂಕುಸ್ಥಾಪನೆ ನೆರವೇರಿಸಿದ್ದಾರೆ. ರಾಜ್ಯದ ನಾಲ್ಕು ಯೋಜನೆಗಳಾದ ಬೆಂಗಳೂರಿನ ಬೊಮ್ಮಸಂದ್ರ ಹಾಗೂ ಕೋಲಾರ ತಾಲೂಕಿನ ನರಸಾಪುರದ ಕೈಗಾರಿಕಾ ಪ್ರದೇಶದಲ್ಲಿ

ರಾಜ್ಯದ 4 ಯೋಜನೆಗಳಿಗೆ ಪ್ರಧಾನಿ ಮೋದಿ ಚಾಲನೆ- ಆರೋಗ್ಯ ಕ್ಷೇತ್ರಕ್ಕೆ ಭಾರಿ ಕೊಡುಗೆ Read More »

ಕರ್ನಾಟಕ

ವಕ್ಫ್ ಬೋರ್ಡ್ ರದ್ದು ಪಡಿಸಬೇಕು: ಛಲವಾದಿ ನಾರಾಯಣ ಸ್ವಾಮಿ

(ನ್ಯೂಸ್ ಕಡಬ)newskadaba.com, ಅ. 29 ಬೆಂಗಳೂರು: ರೈತರ ಜಮೀನು, ಹಿಂದೂ ದೇವಾಲಯ ಹಾಗೂ ಮಠಗಳು ವಕ್ಫ್ ಆಸ್ತಿ ಎಂದು ನೋಟಿಸ್ ನೀಡುತ್ತಿರುವುದನ್ನು ನೋಡಿದರೆ ಈ ರಾಜ್ಯವನ್ನು ಮಸೀದಿಗಳೇ ನಡೆಸುತ್ತಿರುವ ಹಾಗೆ ಅನಿಸುತ್ತಿದೆ. ಹೀಗಾಗಿ ಕೂಡಲೇ ವಕ್ಫ್ ಬೋರ್ಡ್ ರದ್ದುಪಡಿಸಬೇಕೆಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ತಿಳಿಸಿದ್ದಾರೆ. ಕಲಬುರಗಿಯ ಐವಾನ್-ಇ-ಶಾಹಿ ಅತಿಥಿ ಗೃಹದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಬಿಜಾಪುರ, ಯಾದಗಿರಿ, ಕಲಬುರಗಿ, ತುಮಕೂರು, ಚಿತ್ರದುರ್ಗದಲ್ಲಿ ರೈತರ ಪಹಣಿಗಳಲ್ಲಿ ವಕ್ಫ್ ಆಸ್ತಿ ಎಂದು ನಮೂದಾಗಿದೆ. ಹಾಗಾಗಿ,

ವಕ್ಫ್ ಬೋರ್ಡ್ ರದ್ದು ಪಡಿಸಬೇಕು: ಛಲವಾದಿ ನಾರಾಯಣ ಸ್ವಾಮಿ Read More »

ಕರ್ನಾಟಕ

ನಟ ದರ್ಶನ್ ಜಾಮೀನು ಅರ್ಜಿ: ನಾಳೆ ತೀರ್ಪು ಪ್ರಕಟ

(ನ್ಯೂಸ್ ಕಡಬ)newskadaba.com, ಅ. 29 ಬೆಂಗಳೂರು: ನಟ ದರ್ಶನ್ ಜಾಮೀನು ಅರ್ಜಿಯ ಆದೇಶವನ್ನು ಅಕ್ಟೋಬರ್ 30 ಕ್ಕೆ ಹೈಕೋರ್ಟ್ ಕಾಯ್ದಿರಿಸಿದೆ. ಹೈಕೋರ್ಟ್​ನಲ್ಲಿ ದರ್ಶನ್ ಜಾಮೀನು ಅರ್ಜಿಯ ವಿಚಾರಣೆ ನಡೆದಿದ್ದು, ದರ್ಶನ್‌ಗೆ ಆರೋಗ್ಯ ಸಮಸ್ಯೆ ಇದ್ದು, ಅವರಿಗೆ ತುರ್ತಾಗಿ ಶಸ್ತ್ರಚಿಕಿತ್ಸೆಯ ಅವಶ್ಯಕತೆ ಇದೆ ಎಂದು ದರ್ಶನ್ ಪರ ವಕೀಲರು ವಾದ ಮಂಡಿಸಿದ್ದರು. ಇಬ್ಬರ ವಾದವನ್ನು ಆಲಿಸಿದ ಹೈಕೋರ್ಟ್ ನ್ಯಾಯಾಧೀಶರು ಆದೇಶವನ್ನು ಅ.30 ಕ್ಕೆ ಕಾಯ್ದಿರಿಸಿ ತೀರ್ಪು ನೀಡಿದ್ದಾರೆ. ದರ್ಶನ್ ಪರ ವಕೀಲರು, ದರ್ಶನ್ ಬೆನ್ನು ಹುರಿಯ ಸಮಸ್ಯೆ ಯಿಂದ ಬಳಲುತ್ತಿದ್ದಾರೆ.

ನಟ ದರ್ಶನ್ ಜಾಮೀನು ಅರ್ಜಿ: ನಾಳೆ ತೀರ್ಪು ಪ್ರಕಟ Read More »

ಕರ್ನಾಟಕ

ಒಂದು ದಿನ ಪಟಾಕಿ ಸಿಡಿಸಿದರೆ ಏನು ಆಗದು..ಕಾರ್ಮಿಕರ ಜೀವನಾಧಾರವಾಗಿರುವ ಪಟಾಕಿ ಖರೀದಿಸಿ ಸಿಡಿಸಬೇಕು: ಅಣ್ಣಾಮಲೈ

(ನ್ಯೂಸ್ ಕಡಬ)newskadaba.com, ಅ. 29 ಬೆಂಗಳೂರು: ಪಟಾಕಿ ಸಿಡಿಸುವುದು ನಮ್ಮ ಸಂಸ್ಕೃತಿ ಮಾತ್ರವಲ್ಲ, ನಮ್ಮ ಜನರ ಜೀವನಕ್ಕೆ ಆಧಾರ, ನಮ್ಮ ಶಿವಕಾಶಿ ಜನರ ಒಟ್ಟಾರೆ ಆರ್ಥಿಕತೆ. ನಮ್ಮ ಸಂತೋಷಕ್ಕಾಗಿ ಪಟಾಕಿಗಳನ್ನು ತಯಾರಿಸುವ ಕಾರ್ಮಿಕರ ಜೀವನೋಪಾಯಕ್ಕಾಗಿ ನಾವೆಲ್ಲರೂ ನಮ್ಮಿಂದ ಸಾಧ್ಯವಾದಷ್ಟು ಪಟಾಕಿಗಳನ್ನು ಖರೀದಿಸಿ ಸಿಡಿಸಬೇಕು ಎಂದು ಬಿಜೆಪಿ ನಾಯಕ ಕೆ.ಅಣ್ಣಾಮಲೈ ವಿನಂತಿಸಿಕೊಂಡಿದ್ದಾರೆ. ವಾತಾವರಣಕ್ಕೆ ಇಂಗಾಲ ಹೊರಸೂಸುವಿಕೆಯಲ್ಲಿ ಭಾರತ 125ನೇ ಸ್ಥಾನದಲ್ಲಿದೆ, ಯುಎಸ್ 16 ಮತ್ತು ಚೀನಾ 25ನೇ ಸ್ಥಾನದಲ್ಲಿವೆ. ಆದರೆ ನಾವು ಕೇವಲ ಒಂದು ದಿನ ಪಟಾಕಿ ಸಿಡಿಸುವುದನ್ನು

ಒಂದು ದಿನ ಪಟಾಕಿ ಸಿಡಿಸಿದರೆ ಏನು ಆಗದು..ಕಾರ್ಮಿಕರ ಜೀವನಾಧಾರವಾಗಿರುವ ಪಟಾಕಿ ಖರೀದಿಸಿ ಸಿಡಿಸಬೇಕು: ಅಣ್ಣಾಮಲೈ Read More »

ಬ್ರೇಕಿಂಗ್ ನ್ಯೂಸ್

ಯಾವ ರೈತರನ್ನೂ ಒಕ್ಕಲೆಬ್ಬಿಸುವುದಿಲ್ಲ, ನೋಟಿಸ್ ಕೊಟ್ಟಿದ್ದರೆ ವಾಪಸ್ ಪಡೆಯಲಾಗುವುದು : ಸಿ.ಎಂ

(ನ್ಯೂಸ್ ಕಡಬ)newskadaba.com, ಅ. 29 ಬೆಂಗಳೂರು: ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಯಾವ ರೈತರನ್ನೂ ತಮ್ಮ ಜಮೀನುಗಳಿಂದ ಒಕ್ಕಲೆಬ್ಬಿಸುವುದಿಲ್ಲ ಹಾಗೂ ರೈತರಿಗೆ ನೋಟಿಸ್ ನೀಡಲಾಗಿದ್ದರೆ, ಅದನ್ನು ವಾಪಸ್ಸು ಪಡೆಯಲಾಗುವುದು ಎಂದು ತಿಳಿಸಿದರು. ರಾಜ್ಯದ ವಿಜಯಪುರ,ಯಾದಗಿರಿ ಹಾಗೂ ಧಾರವಾಡ ಜಿಲ್ಲೆಗಳಲ್ಲಿ ವಕ್ಫ್ ಆಸ್ತಿ ಎಂದು ರೈತರಿಗೆ ನೋಟಿಸ್ ನೀಡಿರುವ ಬಗ್ಗೆ ಪತ್ರಕರ್ತರ ಪ್ರಶ್ನೆಗೆ  ಅವರು ಪ್ರತಿಕ್ರಿಯೆ ನೀಡಿದರು.

ಯಾವ ರೈತರನ್ನೂ ಒಕ್ಕಲೆಬ್ಬಿಸುವುದಿಲ್ಲ, ನೋಟಿಸ್ ಕೊಟ್ಟಿದ್ದರೆ ವಾಪಸ್ ಪಡೆಯಲಾಗುವುದು : ಸಿ.ಎಂ Read More »

ಕರ್ನಾಟಕ
Scroll to Top