News Kadaba

ಮುಡಾ ಪ್ರಕರಣ- ಇಂದು ಲೋಕಾಯಕ್ತ ಕಚೇರಿಯಲ್ಲಿ ಸಿಎಂ ವಿಚಾರಣೆ

(ನ್ಯೂಸ್ ಕಡಬ) newskadaba.com ಬೆಂಗಳೂರು, ನ. 06. ಮುಡಾ ನಿವೇಶವನ್ನು ಅಕ್ರಮವಾಗಿ ಪಡೆದ ಪ್ರಕರಣದಲ್ಲಿ ಎ.1 ಆರೋಪಿಯಾಗಿರುವ ಸಿಎಂ ಸಿದ್ದರಾಮಯ್ಯ ಇಂದು ಲೋಕಾಯುಕ್ತ ಪೊಲೀಸರ ವಿಚಾರಣೆ ಎದುರಿಸಲಿದ್ದಾರೆ. ಬೆಂಗಳೂರಿನ ಕಾವೇರಿ ನಿವಾಸದಿಂದ ಬೆಳಗ್ಗೆ ಮೈಸೂರಿನ ಲೋಕಾಯುಕ್ತ ಕಚೇರಿಗೆ ಪ್ರಯಾಣ ಬೆಳಸಿದ್ದಾರೆ. 10 ಗಂಟೆ ಬಳಿಕ ಮೈಸೂರಿನ ಲೋಕಾಯುಕ್ತ ಕಚೇರಿಯಲ್ಲಿ ಸಿಎಂ ವಿಚಾರಣೆಗೆ ಒಳಗಾಗಲಿದ್ದಾರೆ. ಎಸ್‌ಪಿ ಉದೇಶ್‌ ನೇತೃತ್ವದಲ್ಲಿ ಸಿಎಂ ವಿಚಾರಣೆ ಎದುರಿಸಲಿದ್ದಾರೆ. ಮುಡಾ ಕೇಸ್‌ ಸಂಬಂಧ ಈಗಾಗಲೇ ಪ್ರಶ್ನೆಗಳನ್ನು ಲೋಕಾಯುಕ್ತ ಅಧಿಕಾರಿಗಳು ಸಿದ್ಧಪಡಿಸಿಕೊಂಡಿದ್ದಾರೆ.    

ಮುಡಾ ಪ್ರಕರಣ- ಇಂದು ಲೋಕಾಯಕ್ತ ಕಚೇರಿಯಲ್ಲಿ ಸಿಎಂ ವಿಚಾರಣೆ Read More »

ಕರ್ನಾಟಕ

ಕೊಲೆ ಬೆದರಿಕೆ ಹಿನ್ನೆಲೆ ನಟ ದರ್ಶನ್ ಹಾಗೂ ಅಭಿಮಾನಿಯ ಮೇಲೆ ದೂರು ದಾಖಲಿಸಿದ ಬಿಗ್ ಬಾಸ್ ಖ್ಯಾತಿಯ ಜಗದೀಶ್

(ನ್ಯೂಸ್ ಕಡಬ) newskadaba.com ನ. 06 ಬೆಂಗಳೂರು : ಬಿಗ್ ಬಾಸ್ ಕನ್ನಡ -11 ಕಾರ್ಯಕ್ರಮದಲ್ಲಿದ್ದ ಜಗದೀಶ್ ಬಿಗ್ಬಾಸ್ ಮನೆಯಿಂದ ಆಚೆ ಬಂದ ನಂತರ ಮತ್ತೆತಮ್ಮ ಹಳೆ ಸ್ಟೈಲ್ ಗೆ ಮರಳಿದ್ದಾರೆ. ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ದರ್ಶನ್ರವರ ಬಗ್ಗೆ ಜಗದೀಶ್ ಬಹಳಷ್ಟು ಬಾರಿ ಮಾತನಾಡಿದ್ದಾರೆ. ಇದೀಗ ದರ್ಶನ್ ಮಧ್ಯಂತರ ಜಾಮೀನಿನ ಮೇರೆಗೆ ಹೊರಬಂದಿದ್ದು, ದರ್ಶನ್ ಅಭಿಮಾನಿಗಳು ನನಗೆ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಜಗದೀಶ್ ಆರೋಪಿಸಿ ದರ್ಶನ್ ಹಾಗೂ ಅವರ ಅಭಿಮಾನಿಯೋರ್ವರ ಮೇಲೆ ದೂರು ದಾಖಲಿಸಿದ್ದಾರೆ.

ಕೊಲೆ ಬೆದರಿಕೆ ಹಿನ್ನೆಲೆ ನಟ ದರ್ಶನ್ ಹಾಗೂ ಅಭಿಮಾನಿಯ ಮೇಲೆ ದೂರು ದಾಖಲಿಸಿದ ಬಿಗ್ ಬಾಸ್ ಖ್ಯಾತಿಯ ಜಗದೀಶ್ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಪದ್ಮಭೂಷಣ ಪುರಸ್ಕೃತೆ ಖ್ಯಾತ ಗಾಯಕಿ ಶಾರದಾ ಸಿನ್ಹಾ ನಿಧನ

(ನ್ಯೂಸ್ ಕಡಬ) newskadaba.com ನವದೆಹಲಿ, ನ. 06. ಜನಪ್ರಿಯ ಜಾನಪದ ಗಾಯಕಿ ಮತ್ತು ಪದ್ಮಭೂಷಣ ಪ್ರಶಸ್ತಿ ಪುರಸ್ಕೃತೆ ಶಾರದಾ ಸಿನ್ಹಾ(72) ಅವರು ಕ್ಯಾನ್ಸರ್ ನಿಂದ ಮಂಗಳವಾರ ರಾತ್ರಿ ನಿಧನರಾದರು. ಖ್ಯಾತ ಗಾಯಕಿಯನ್ನು ದೆಹಲಿಯ ಏಮ್ಸ್‌ ಗೆ ದಾಖಲಿಸಲಾಗಿತ್ತು ಮತ್ತು ಅಕ್ಟೋಬರ್ 25 ರಿಂದ ಆಸ್ಪತ್ರೆಯ ಆಂಕೊಲಾಜಿ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. 2017 ರಲ್ಲಿ, ಅವರಿಗೆ ಮಲ್ಟಿಪಲ್ ಮೈಲೋಮಾ ರೋಗ ಖಾತರಿಯಾಗಿತ್ತು. ಇದು ಮೂಳೆ ಮಜ್ಜೆಯ ಮೇಲೆ ಪರಿಣಾಮ ಬೀರುವ ಒಂದು ರೀತಿಯ ಕ್ಯಾನ್ಸರ್. ಚಿಕಿತ್ಸೆಗಾಗಿ ಶ್ರೀಮತಿ ಸಿನ್ಹಾ

ಪದ್ಮಭೂಷಣ ಪುರಸ್ಕೃತೆ ಖ್ಯಾತ ಗಾಯಕಿ ಶಾರದಾ ಸಿನ್ಹಾ ನಿಧನ Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಬಸ್‌ಗಳ ನಡುವಿನ ಪೈಪೋಟಿಯಿಂದ ಅಪಘಾತ ಸಂಭವಿಸಿ ಪಾದಚಾರಿಗಳಿಗೆ ಗಾಯ

(ನ್ಯೂಸ್ ಕಡಬ) newskadaba.com ಮಂಗಳೂರು, ನ. 06. ಬಿಕರ್ನಕಟ್ಟೆಯಲ್ಲಿ ಬಸ್‌ಗಳ ನಡುವಿನ ಪೈಪೋಟಿಯಿಂದ ಅಪಘಾತ ಸಂಭವಿಸಿ ಪಾದಚಾರಿಗಳಿಗೆ ಗಾಯವಾದ ಘಟನೆ ನಡೆದಿದೆ. ಎರಡು ಬಸ್‌ಗಳ ನಡುವಿನ ಅತಿಯಾದ ವೇಗ ಮತ್ತು ತೀವ್ರ ಪೈಪೋಟಿಯೇ ಅಪಘಾತಕ್ಕೆ ಪ್ರಮುಖ ಕಾರಣ ಎಂದು ಸ್ಥಳದಲ್ಲಿದ್ದ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಸಿಟಿ ಬಸ್‌ಗಳು ಆಗಾಗ್ಗೆ ಅಜಾಗರೂಕ ರೇಸ್‌ಗಳಲ್ಲಿ ತೊಡಗುತ್ತವೆ ಎಂದು ಆರೋಪಿಸಲಾಗಿದೆ, ಕಂಕನಾಡಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿದರು ಎನ್ನಲಾಗಿದೆ.  

ಬಸ್‌ಗಳ ನಡುವಿನ ಪೈಪೋಟಿಯಿಂದ ಅಪಘಾತ ಸಂಭವಿಸಿ ಪಾದಚಾರಿಗಳಿಗೆ ಗಾಯ Read More »

ಕರಾವಳಿ, ಕ್ರೈಮ್ ನ್ಯೂಸ್

ಇಂದಿನ ಚಿನ್ನದ ದರ

(ನ್ಯೂಸ್ ಕಡಬ) newskadaba.com ನ. 06 ಬೆಂಗಳೂರು : ಚಿನ್ನದ ದರ ಇಂದು ಏರಿಕೆ ಕಂಡಿದೆ. ಬೆಂಗಳೂರಿನಲ್ಲಿ ಬುಧವಾರ 22 ಕ್ಯಾರಟ್‌ 1 ಗ್ರಾಂ ಮತ್ತು 24 ಕ್ಯಾರಟ್‌ 1 ಗ್ರಾಂ ಚಿನ್ನದ ದರದಲ್ಲಿ ತಲಾ 10 ರೂ. ಮತ್ತು 11ರೂ. ಇಳಿಕೆ ಆಗಿದೆ. ಆ ಮೂಲಕ ಇಂದಿನ ದರ 7,365 ರೂ. ಮತ್ತು 24 ಕ್ಯಾರಟ್‌ 1 ಗ್ರಾಂ ಚಿನ್ನಕ್ಕೆ 8,035 ರೂ. ಇದೆ. 22 ಕ್ಯಾರಟ್‌ ಚಿನ್ನದ ದರ 22 ಕ್ಯಾರಟ್‌ನ 8 ಗ್ರಾಂ

ಇಂದಿನ ಚಿನ್ನದ ದರ Read More »

ಕರ್ನಾಟಕ

ಬಸ್ಸುಗಳಿಲ್ಲದೆ ಕೆಎಸ್‌ಆರ್‌ಟಿಸಿ ನಿಲ್ದಾಣದಲ್ಲಿ ಪ್ರಯಾಣಿಕರ ಪರದಾಟ: ಸಾರ್ವಜನಿಕರ ಆಕ್ರೋಶ

(ನ್ಯೂಸ್ ಕಡಬ) newskadaba.com ಸುಳ್ಯ, ನ. 06. ಕೆಎಸ್‌ಆರ್‌ಟಿಸಿ ಬಸ್ಸು ನಿಲ್ದಾಣದಲ್ಲಿ ಸುಮಾರು ಒಂದು ಗಂಟೆಯ ತನಕ ಬಸ್ಸುಗಳಿಲ್ಲದೆ ಪ್ರಯಾಣಿಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಬಸ್ಸಿಗಾಗಿ ಕಾದು ಸಾರ್ವಜನಿಕರು ಆಕ್ರೋಶಗೊಂಡಿದ್ದರು. ಪುತ್ತೂರು ಮಂಗಳೂರು ಮತ್ತು ಮೈಸೂರು ಕಡೆ ಹೋಗುವ ಬಸ್ಸುಗಳು ಅದೇ ರೀತಿ ಗ್ರಾಮೀಣ ಭಾಗಗಳಿಗೆ ಹೋಗುವಂತಹ ಬಸ್ಸುಗಳು ಕೂಡ ಇಲ್ಲದೆ ಪ್ರಯಾಣಿಕರು ಬಸ್ಸು ನಿಲ್ದಾಣದಲ್ಲಿ ಬಸ್ಸಿಗಾಗಿ ಕಾಯುವ ದೃಶ್ಯಗಳು ಕಂಡುಬಂದಿದ್ದು ಪ್ರಯಾಣಿಕರ ಪಾಡು ಹೇಳತೀರದ್ದಾಗಿದೆ. ದೀಪಾವಳಿ ಹಬ್ಬ ಕಳೆದ ಬಳಿಕ ತಮ್ಮ ತಮ್ಮ ಊರುಗಳಿಗೆ ಮತ್ತು

ಬಸ್ಸುಗಳಿಲ್ಲದೆ ಕೆಎಸ್‌ಆರ್‌ಟಿಸಿ ನಿಲ್ದಾಣದಲ್ಲಿ ಪ್ರಯಾಣಿಕರ ಪರದಾಟ: ಸಾರ್ವಜನಿಕರ ಆಕ್ರೋಶ Read More »

ಕರಾವಳಿ

ಸಿದ್ದರಾಮಯ್ಯರ ರಾಜೀನಾಮೆ ಮುಹೂರ್ತನಿಗದಿ- ವಿಜಯೇಂದ್ರ

(ನ್ಯೂಸ್ ಕಡಬ) newskadaba.com ನ. 05 ಬೆಂಗಳೂರು: ರಾಜ್ಯದ ಸಿ.ಎಂ ಸಿದ್ದರಾಮಯ್ಯನವರ ರಾಜೀನಾಮೆ ಮುಹೂರ್ತ ನಿಗದಿಯಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ಪ್ರಕಟಿಸಿದರು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರು ಚರ್ಚೆ ಮಾಡಿ ಈಗಾಗಲೇ ಸಿದ್ದರಾಮಯ್ಯನವರ ರಾಜೀನಾಮೆಯ ಮುಹೂರ್ತ ನಿಗದಿ ಮಾಡಿದ್ದಾರೆ. ಆ ಮುಹೂರ್ತ ಯಾವುದೆಂದು ಸಿದ್ದರಾಮಯ್ಯನವರೇ ಬಾಯಿ ಬಿಡಬೇಕಿದೆ. ಸಿದ್ದರಾಮಯ್ಯನವರ ರಾಜೀನಾಮೆ ನಿಶ್ಚಿತವಿದೆ ಎಂದು ತಿಳಿಸಿದರು. ಸಿದ್ದರಾಮಯ್ಯನವರು ಪೂರ್ಣ ಅವಧಿ ಪೂರೈಸುವುದಿಲ್ಲ; ಅತಿ ಶೀಘ್ರವೇ ರಾಜೀನಾಮೆ ಕೊಡುತ್ತಾರೆ

ಸಿದ್ದರಾಮಯ್ಯರ ರಾಜೀನಾಮೆ ಮುಹೂರ್ತನಿಗದಿ- ವಿಜಯೇಂದ್ರ Read More »

ಕರ್ನಾಟಕ

ಅಕ್ರಮ ಮರಳುಗಾರಿಕೆ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದವರ ಮೇಲೆ ಕೊಲೆಗೆ ಯತ್ನ

(ನ್ಯೂಸ್ ಕಡಬ) newskadaba.com ಉಳ್ಳಾಲ, ನ. 05.   ಅಕ್ರಮ ಮರಳುಗಾರಿಕೆ ವಿರುದ್ಧ ಪೊಲೀಸರಿಗೆ ದೂರು ನೀಡಿದ ಕಾರಣಕ್ಕೆ, ಮರಳು ದಂಧೆಯ ಆರೋಪಿ ಸೋಮೇಶ್ವರ ದೇವಸ್ಥಾನ ವ್ಯವಸ್ಥಾಪನ ಸಮಿತಿ ಸದಸ್ಯರೊಬ್ಬರಿಗೆ ರಾಡ್‌ ನಿಂದ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿರುವ ಘಟನೆ ಸೋಮೇಶ್ವರ ಪುರಸಭೆ ಕಚೇರಿ ಸಮೀಪ ನಿನ್ನೆ ತಡರಾತ್ರಿ ವೇಳೆ ಸಂಭವಿಸಿದೆ.\ ಸೋಮೇಶ್ವರ ಉಚ್ಚಿಲದ,ಫಿಶರೀಶ್ ರೋಡ್ ನಿವಾಸಿ ಸೋಮೇಶ್ವರ ಸೋಮನಾಥ ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಕಿಶೋರ್ ಎಮ್ ಉಚ್ಚಿಲ(53)ಹಲ್ಲೆಗೊಳಗಾದ ವ್ಯಕ್ತಿ. ಉಚ್ಚಿಲ ಬಟ್ಟಪ್ಪಾಡಿ ಪ್ರದೇಶದಲ್ಲಿ ಅಕ್ರಮ

ಅಕ್ರಮ ಮರಳುಗಾರಿಕೆ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದವರ ಮೇಲೆ ಕೊಲೆಗೆ ಯತ್ನ Read More »

ಕರಾವಳಿ, ಕ್ರೈಮ್ ನ್ಯೂಸ್

ಸಲ್ಮಾನ್‌ ಖಾನ್‌ ಗೆ ಮತ್ತೊಂದು ಬೆದರಿಕೆ: 5 ಕೋಟಿ ರೂ.ಗೆ ಬೇಡಿಕೆ

(ನ್ಯೂಸ್ ಕಡಬ) newskadaba.com ಮುಂಬೈ, ನ. 05.  ಬಾಲಿವುಡ್‌ ಸೂಪರ್‌ ಸ್ಟಾರ್‌ ಸಲ್ಮಾನ್‌ ಖಾನ್‌ಗೆ ಪದೇಪದೆ ಜೀವ ಬೆದರಿಕೆ ಕರೆಗಳು ಬರುತ್ತಿವೆ. ಮಾಜಿ ಸಚಿವ ಬಾಬಾ ಸಿದ್ಧಿಕಿ ಹತ್ಯೆಯ ನಂತರ ಸಲ್ಮಾನ್‌ಗೆ ಕೊಲೆ ಬೆದರಿಕೆಗಳು ಜೋರಾಗಿವೆ. ಈಗ ಮತ್ತೊಂದು ಬೆದರಿಕೆ ಸಂದೇಶ ಬಂದಿದ್ದು, ಪೊಲೀಸರು ಆರೋಪಿಗಾಗಿ ಶೋಧ ನಡೆಸುತ್ತಿದ್ದಾರೆ. ಲಾರೆನ್ಸ್‌ ಬಿಷ್ಣೋಯ್‌ ಸಹೋದರ ಎಂದು ಹೇಳಿಕೊಳ್ಳುವ ವ್ಯಕ್ತಿ ಐದು ಕೋಟಿ ಬೇಡಿಕೆ ಹಾಗೂ ದೇವಸ್ಥಾನಕ್ಕೆ ಬಂದು ಸಲ್ಮಾನ್‌ ಕ್ಷಮೆ ಕೇಳಬೇಕೆಂದು ಮುಂಬೈನ ಸಂಚಾರ ನಿಯಂತ್ರಣ ಕೊಠಡಿಗೆ ಸಂದೇಶ

ಸಲ್ಮಾನ್‌ ಖಾನ್‌ ಗೆ ಮತ್ತೊಂದು ಬೆದರಿಕೆ: 5 ಕೋಟಿ ರೂ.ಗೆ ಬೇಡಿಕೆ Read More »

ಬ್ರೇಕಿಂಗ್ ನ್ಯೂಸ್

ತಹಶೀಲ್ದಾರ್‌ ಕಚೇರಿಯಲ್ಲಿ ಸಿಬ್ಬಂದಿ ಆತ್ಮಹತ್ಯೆಗೆ ಶರಣು..!

(ನ್ಯೂಸ್ ಕಡಬ) newskadaba.com ಬೆಳಗಾವಿ, ನ. 05. ಬೆಳಗಾವಿಯ ತಹಶೀಲ್ದಾರ್‌ ಕಚೇರಿಯಲ್ಲೇ ಸಿಬ್ಬಂದಿಯೊಬ್ಬರು ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಇಂದು ನಡೆದಿದೆ. ಆತ್ಮಹತ್ಯೆಗೆ ಶರಣಾದ ಸಿಬ್ಬಂದಿಯನ್ನು ಬೆಳಗಾವಿಯ ಮೂಡಲಗಿ ಪಟ್ಟಣದ ರುದ್ರಣ್ಣ ಯಡವಣ್ಣವರ ಎಂದು ಗುರುತಿಸಲಾಗಿದೆ. ಕಳೆದ 12 ವರ್ಷಗಳಿಂದ ಬೆಳಗಾವಿ ತಹಶೀಲ್ದಾರ್ ಕಚೇರಿಯಲ್ಲಿ ಎಸ್‌ಡಿಸಿ ಆಗಿ ಕೆಲಸ ಮಾಡುತ್ತಿದ್ದರು. ನಿನ್ನೆಯಷ್ಟೇ ಸವದತ್ತಿ ತಹಶೀಲ್ದಾರ್ ಕಚೇರಿಗೆ ಅವರನ್ನು ವರ್ಗಾವಣೆ ಮಾಡಲಾಗಿತ್ತು. ಆದರೆ, ಈಗ ಬೆಳಗಾವಿ ತಹಶೀಲ್ದಾರ್ ಕಚೇರಿಯಲ್ಲಿಯೇ ರುದ್ರಣ್ಣ ನೇಣಿಗೆ ಶರಣಾಗಿರುವುದು ತಿಳಿದುಬಂದಿದೆ.  

ತಹಶೀಲ್ದಾರ್‌ ಕಚೇರಿಯಲ್ಲಿ ಸಿಬ್ಬಂದಿ ಆತ್ಮಹತ್ಯೆಗೆ ಶರಣು..! Read More »

ಕರ್ನಾಟಕ, ಕ್ರೈಮ್ ನ್ಯೂಸ್
Scroll to Top