News Kadaba

ತೊಕ್ಕೊಟ್ಟು-ಮುಡಿಪು ರಸ್ತೆ ಅಭಿವೃದ್ಧಿಗೆ 30 ಕೋಟಿ ರೂ ಅನುದಾನ ಬಿಡುಗಡೆ- ಯು.ಟಿ ಖಾದರ್

(ನ್ಯೂಸ್ ಕಡಬ) newskadaba.com ಉಳ್ಳಾಲ, ನ. 15. ತೊಕ್ಕೊಟ್ಟು-ಮುಡಿಪು ರಸ್ತೆ ಅಭಿವೃದ್ಧಿಗೆ 30 ಕೋಟಿ ರೂಪಾಯಿ, ಮಂಗಳೂರು ವಿಧಾನಸಭಾ ಕ್ಷೇತ್ರದ ವಿವಿಧ ರಸ್ತೆಗಳ ಅಭಿವೃದ್ಧಿಗೆ ಸರಕಾರದಿಂದ ಅರುವತ್ತು ಲಕ್ಷ ರೂಪಾಯಿ ಅನುದಾನ ಬಿಡುಗಡೆಯಾಗಿದೆಯೆಂದು ವಿದಾನಸಭೆಯ ಸಭಾಧ್ಯಕ್ಷ ಯು.ಟಿ ಖಾದರ್ ಹೇಳಿಕೆ ನೀಡಿದ್ದಾರೆ. ಅವರು ಉಳ್ಳಾಲ ನಗರಸಭಾ ವ್ಯಾಪ್ತಿಯ ಕೆರೆಬೈಲ್ ಪ್ರದೇಶದಲ್ಲಿ ನಿರ್ಮಾಣಗೊಳ್ಳಲಿರುವ ನೂತನ ಕಾಂಕ್ರಿಟ್ ರಸ್ತೆ ಮತ್ತು ತಡೆಗೋಡೆ ಕಾಮಗಾರಿಗೆ ಗುರುವಾರ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ, […]

ತೊಕ್ಕೊಟ್ಟು-ಮುಡಿಪು ರಸ್ತೆ ಅಭಿವೃದ್ಧಿಗೆ 30 ಕೋಟಿ ರೂ ಅನುದಾನ ಬಿಡುಗಡೆ- ಯು.ಟಿ ಖಾದರ್ Read More »

ಕರಾವಳಿ

ಶಬರಿಮಲೆ ದೇವಾಲಯದಲ್ಲಿ ಇಂದಿನಿಂದ ಮಂಡಲ ಪೂಜೆ, ಡಿ.26 ರವರೆಗೆ ದರ್ಶನಕ್ಕೆ ಅವಕಾಶ

(ನ್ಯೂಸ್ ಕಡಬ) newskadaba.com ಶಬರಿಮಲೆ, ನ. 15.ಶಬರಿಮಲೆಯಲ್ಲಿ ಮಂಡಲ ಪೂಜೆಗಾಗಿ ನ.15ರಂದು ದೇವಸ್ಥಾನ ತೆರೆಯಲಿದ್ದು, ಡಿ.26ರ ತನಕ ದರ್ಶನಕ್ಕೆ ಅವಕಾಶವಿದೆ. ನಿತ್ಯ 70000 ಜನರಿಗೆ ದರ್ಶನಕ್ಕೆ ಅವಕಾಶ ಮಾಡಿಕೊಡಲು ದೇಗುಲದ ಆಡಳಿತ ಮಂಡಳಿ ನಿರ್ಧರಿಸಿದ್ದು, ಒಂದು ವೇಳೆ ಜನಸಂದಣಿ ತೀರಾ ಹೆಚ್ಚಾದಲ್ಲಿ ಅರ್ಧಗಂಟೆ ಕಾಲ ದರ್ಶನದ ಸಮಯ ವಿಸ್ತರಿಸಲು ಚಿಂತಿಸಲಾಗಿದೆ. ಈಗಾಗಲೇ ವರ್ಚುವಲ್‌ ಕ್ಯೂ ಮೂಲಕ ಲಕ್ಷಾಂತರ ಭಕ್ತರು ನ.15- ಡಿ.29ರವರೆಗಿನ ಸಮಯವನ್ನು ಮುಂಗಡವಾಗಿ ಭೇಟಿಗಾಗಿ ಕಾದಿರಿಸಿದ್ದಾರೆ. ಇದರ ಜೊತೆಗೆ , ಪಂಪಾ, ಎರುಮೆಲಿ, ವಂದಿಪೆರಿಯಾರ್‌ಗಳಲ್ಲಿಯೂ ನಿತ್ಯ

ಶಬರಿಮಲೆ ದೇವಾಲಯದಲ್ಲಿ ಇಂದಿನಿಂದ ಮಂಡಲ ಪೂಜೆ, ಡಿ.26 ರವರೆಗೆ ದರ್ಶನಕ್ಕೆ ಅವಕಾಶ Read More »

ಕರಾವಳಿ

ಅಡಿಕೆ ಮರದಿಂದ ಬಿದ್ದು ಕಾರ್ಮಿಕ ಮೃತ್ಯು..!

(ನ್ಯೂಸ್ ಕಡಬ) newskadaba.com ಬಂಟ್ವಾಳ, ನ. 15. ಅಡಿಕೆ ಮರ ಹತ್ತಿ ಅಡಿಕೆ ಕೀಳುತ್ತಿದ್ದ ಕಾರ್ಮಿಕನೋರ್ವ ಆಕಸ್ಮಿಕವಾಗಿ ಕಾಲು ಜಾರಿ ಮರದಿಂದ ಬಿದ್ದು ಮೃತಪಟ್ಟ ಘಟನೆ ಪಾಣೆಮಂಗಳೂರಿನ ಬೋಳಂಗಡಿಯಲ್ಲಿ ನಡೆದಿದೆ. ಮೃತಪಟ್ಟ ಕಾರ್ಮಿಕನನ್ನು ಬೋಳಂಗಡಿ ಮಜಲ್ ಮನೆ ನಿವಾಸಿ ಜೋನ್ ಲೋಬೊ(45) ಎಂದು ಗುರುತಿಸಲಾಗಿದೆ. ಅವರು ನ. 13ರಂದು ಬೋಳಂಗಡಿ ಪದ್ಮನಾಭ ಪ್ರಭು ಅವರ ತೋಟದಲ್ಲಿ ಅಡಿಕೆ ಕೀಳುತ್ತಿದ್ದ ಸಂದರ್ಭದಲ್ಲಿ ಅಡಿಕೆ ಮರದಿಂದ ಬಿದ್ದಿದ್ದಾರೆ. ತಕ್ಷಣ ಅವರನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿದ್ದು, ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದಾಗಿ

ಅಡಿಕೆ ಮರದಿಂದ ಬಿದ್ದು ಕಾರ್ಮಿಕ ಮೃತ್ಯು..! Read More »

ಕರಾವಳಿ, ಕ್ರೈಮ್ ನ್ಯೂಸ್

ಮನೆಯಲ್ಲಿ ಸಂಗ್ರಹಿಸಿಟ್ಟ ಲಕ್ಷಾಂತರ ರೂಪಾಯಿ ಮೌಲ್ಯದ ಅಕ್ರಮ ಗೋವಾ ಮದ್ಯ ವಶಕ್ಕೆ

(ನ್ಯೂಸ್ ಕಡಬ) newskadaba.com ನ. 14. ಮನೆಯಲ್ಲಿ ಸಂಗ್ರಹಿಸಿಟ್ಟಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಅಕ್ರಮ ಗೋವಾ ಮದ್ಯವನ್ನು ಅಬಕಾರಿ ಇಲಾಖೆಯ ಅಧಿಕಾರಿಗಳು ಕಾರ್ಕಳ ತಾಲೂಕಿನ ಬೋಳ ಗ್ರಾಮದಲ್ಲಿ ವಶಕ್ಕೆ ಪಡೆದಿದ್ದಾರೆ. ಕಾರ್ಕಳ ತಾಲೂಕಿನ ಬೋಳ ಗ್ರಾಮದ ಅವಿನಾಶ್ ಮಲ್ಲಿ ಎಂಬವರಿಗೆ ಸಂಬಂಧಿಸಿದ ಎರಡು ಮನೆಗಳ ಮೇಲೆ ದಾಳಿ ನಡೆಸಿದ ಉಡುಪಿ ಅಬಕಾರಿ ಇಲಾಖೆಯ ಅಧಿಕಾರಿಗಳು ಸುಮಾರು 250ಕ್ಕೂ ಅಧಿಕ ಬಾಕ್ಸ್ ಗಳನ್ನು ವಶಕ್ಕೆ ಪಡೆದಿದ್ದು, ವಶಕ್ಕೆ ಪಡೆದ ಮದ್ಯದ ಮೌಲ್ಯ ಲಕ್ಷಾಂತರ ರೂಪಾಯಿ ಆಗಿರುತ್ತದೆ. ಆರೋಪಿಗಳು ಗೋವಾದಿಂದ

ಮನೆಯಲ್ಲಿ ಸಂಗ್ರಹಿಸಿಟ್ಟ ಲಕ್ಷಾಂತರ ರೂಪಾಯಿ ಮೌಲ್ಯದ ಅಕ್ರಮ ಗೋವಾ ಮದ್ಯ ವಶಕ್ಕೆ Read More »

ಕರಾವಳಿ, ಕ್ರೈಮ್ ನ್ಯೂಸ್

ಟ್ರಂಪ್‌ ಗೆಲುವಿನ ನಂತರ ಅಮೆರಿಕದಲ್ಲಿ ದೀಪಾವಳಿ ಆಚರಣೆ

(ನ್ಯೂಸ್ ಕಡಬ) newskadaba.com ನ. 14. ಕಳೆದ ವಾರ ನಡೆದ ಅಧ್ಯಕ್ಷೀಯ ಚುನಾವಣೆಯ ನಂತರ ಯುಎಸ್‌‍ ಕಾಂಗ್ರೆಸ್‌‍ನಲ್ಲಿ ನಡೆದ ಮೊದಲ ಪ್ರಮುಖ ಕಾರ್ಯಕ್ರಮವಾಗಿ ಎರಡು ಡಜನ್‌ಗಿಂತಲೂ ಹೆಚ್ಚು ಸಂಸದರು ಮತ್ತು ಪ್ರಖ್ಯಾತ ಭಾರತೀಯ ಅಮೆರಿಕನ್ನರು ದೀಪಾವಳಿಯನ್ನು ಆಚರಿಸಿದರು. ವಾರ್ಷಿಕ ದೀಪಾವಳಿ ಅಟ್‌ ಕ್ಯಾಪಿಟಲ್‌ ಹಿಲ್‌ ಅನ್ನು ಶ್ರೀ ಸ್ವಾಮಿನಾರಾಯಣ ಮಂದಿರವೂ ಹಿಂದೂ ಅಮೇರಿಕನ್‌ ಫೌಂಡೇಶನ್‌, ಸಿಖ್ಸ್ ಫಾರ್‌ ಅಮೇರಿಕಾ, ಜೈನ್‌ ಅಸೋಸಿಯೇಶನ್‌ ಆಫ್‌ ನಾರ್ತ್‌ ಅಮೇರಿಕಾ ಮತ್ತು ಆರ್ಟ್‌ ಆಫ್‌ ಲಿವಿಂಗ್‌ ಸೇರಿದಂತೆ ಹಲವಾರು ಇತರ ಭಾರತೀಯ

ಟ್ರಂಪ್‌ ಗೆಲುವಿನ ನಂತರ ಅಮೆರಿಕದಲ್ಲಿ ದೀಪಾವಳಿ ಆಚರಣೆ Read More »

ಅಂತರ್ರಾಷ್ಟ್ರೀಯ ನ್ಯೂಸ್

ರಾಷ್ಟ್ರೀಯ ಗುಪ್ತಚರ ನಿರ್ದೇಶಕರಾಗಿ ತುಳಸಿ ಗಬ್ಬಾರ್ಡ್ ​ನೇಮಕ

(ನ್ಯೂಸ್ ಕಡಬ) newskadaba.com ನ. 14. ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬುಧವಾರ ತಮ್ಮ ಆಡಳಿತದ ಅಡಿಯಲ್ಲಿ ರಾಷ್ಟ್ರೀಯ ಗುಪ್ತಚರ (ಡಿಎನ್‌ಐ) ನಿರ್ದೇಶಕರಾಗಿ ಮಾಜಿ ಡೆಮಾಕ್ರಟ್ ತುಳಸಿ ಗಬ್ಬಾರ್ಡ್ ಅವರನ್ನು ನೇಮಿಸಿದ್ದಾರೆ. ಡೊನಾಲ್ಡ್ ಟ್ರಂಪ್ ತುಳಸಿ ಗಬ್ಬಾರ್ಡ್ ಅವರನ್ನು “ಹೆಮ್ಮೆಯ ರಿಪಬ್ಲಿಕನ್” ಎಂದು ಬಣ್ಣಿಸಿದ್ದಾರೆ. ಡೆಮೋಕ್ರಾಟ್ ಅಧ್ಯಕ್ಷೀಯ ನಾಮನಿರ್ದೇಶನಕ್ಕೆ ಮಾಜಿ ಅಭ್ಯರ್ಥಿಯಾಗಿ, ಅವರು ಎರಡೂ ಪಕ್ಷಗಳಲ್ಲಿ ವ್ಯಾಪಕ ಬೆಂಬಲವನ್ನು ಹೊಂದಿದ್ದಾರೆ – ಅವರು ಈಗ ಹೆಮ್ಮೆಯ ರಿಪಬ್ಲಿಕನ್ ಎಂದು ಡೊನಾಲ್ಡ್ ಟ್ರಂಪ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. ತುಳಸಿ

ರಾಷ್ಟ್ರೀಯ ಗುಪ್ತಚರ ನಿರ್ದೇಶಕರಾಗಿ ತುಳಸಿ ಗಬ್ಬಾರ್ಡ್ ​ನೇಮಕ Read More »

ಅಂತರ್ರಾಷ್ಟ್ರೀಯ ನ್ಯೂಸ್

ಮುಡಾ ಹಗರಣ: ಹೈಕೋರ್ಟ್‌ ವಿಭಾಗೀಯ ಪೀಠಕ್ಕೆ ಸಿಎಂ ಮೇಲ್ಮನವಿ ಸಲ್ಲಿಕೆ

(ನ್ಯೂಸ್ ಕಡಬ) newskadaba.com ನ. 14. ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್​ ಆದೇಶ ಪ್ರಶ್ನಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೈಕೋರ್ಟ್​ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿದ್ದಾರೆ. ಮುಡಾ ನಿವೇಶನ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ ಅವರು ತಮ್ಮ ವಿರುದ್ಧದ ತನಿಖೆಗೆ ಅನುಮತಿ ನೀಡಿರುವುದನ್ನು ಪ್ರಶ್ನಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್‌ನ ಏಕಸದಸ್ಯ ಪೀಠ ವಜಾ ಮಾಡಿತ್ತು. ಈ ಆದೇಶ ಪ್ರಶ್ನಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಲ್ಲಿಸಿರುವ ಮೇಲ್ಮನವಿಯ ವಿಚಾರಣೆಯನ್ನು ಹೈಕೋರ್ಟ್‌ನ ವಿಭಾಗೀಯ ಪೀಠವು

ಮುಡಾ ಹಗರಣ: ಹೈಕೋರ್ಟ್‌ ವಿಭಾಗೀಯ ಪೀಠಕ್ಕೆ ಸಿಎಂ ಮೇಲ್ಮನವಿ ಸಲ್ಲಿಕೆ Read More »

ಕರ್ನಾಟಕ

ಚುನಾವಣಾಧಿಕಾರಿಗೆ ಕಪಾಳಮೋಕ್ಷ : ಅಭ್ಯರ್ಥಿ ಅರೆಸ್ಟ್‌

(ನ್ಯೂಸ್ ಕಡಬ) newskadaba.com ನ. 14.  ರಾಜಸ್ಥಾನದ ಡಿಯೋಲಿ-ಉನಿಯಾರಾ ಅಸೆಂಬ್ಲಿಯ ಉಪಚುನಾವಣೆಯ ವೇಳೆ ಚುನಾವಣಾಧಿಕಾರಿಗೆ ಕಪಾಳಮೋಕ್ಷ ಮಾಡಿದ್ದ ಸ್ವತಂತ್ರ ಅಭ್ಯರ್ಥಿ ನರೇಶ್ ಮೀನಾ ಅವರನ್ನು ಪೊಲೀಸರು ಬಂಧಿಸಿದ್ದಾರೆ. ನರೇಶ್ ಮೀನಾ ಬಂಧನಕ್ಕೂ ಕೆಲವೇ ನಿಮಿಷಗಳ ಮೊದಲು ʻನಾನು ಪೊಲೀಸರಿಗೆ ಶರಣಾಗುವುದಿಲ್ಲʼ ಎಂದು ಮಾಧ್ಯಮಗಳ ಮುಂದೆ ಘೋಷಿಸಿದ್ದರು. ಬುಧವಾರ ಸಂರವತ ಮತಗಟ್ಟೆಗೆ ತೆರಳಿದ್ದ ಮೀನಾ ಅವರು, ಚುನಾವಣಾ ಕರ್ತವ್ಯದಲ್ಲಿದ್ದ ಎಸ್‌ಡಿಎಂ ಅಮಿತ್ ಚೌಧರಿ ಅವರಿಗೆ ಕಪಾಳಮೋಕ್ಷ ಮಾಡಿದ್ದರು. ಅವರು ಉಪವಿಭಾಗೀಯ ಮ್ಯಾಜಿಸ್ಟ್ರೇಟ್ (ಎಸ್‌ಡಿಎಂ) ಗೆ ಕಪಾಳಮೋಕ್ಷ ಮಾಡುತ್ತಿರುವುದು ವೀಡಿಯೋದಲ್ಲಿ

ಚುನಾವಣಾಧಿಕಾರಿಗೆ ಕಪಾಳಮೋಕ್ಷ : ಅಭ್ಯರ್ಥಿ ಅರೆಸ್ಟ್‌ Read More »

ಕ್ರೈಮ್ ನ್ಯೂಸ್

’ಜವಾಹರ್‌ ಲಾಲ್‌ ನೆಹರೂ ಆಧುನಿಕ ಭಾರತದ ಶಿಲ್ಪಿ’ – ಸಿಎಂ ಸಿದ್ದರಾಮಯ್ಯ

(ನ್ಯೂಸ್ ಕಡಬ) newskadaba.com ನ. 14. ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ ಮೊದಲ ಪ್ರಧಾನಿಯಾದ ಜವಾಹರ್ ಲಾಲ್ ನೆಹರೂ ಅವರು ಆಧುನಿಕ ಭಾರತದ ಶಿಲ್ಪಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ಇಂದು ವಿಧಾನಸೌಧದ ಪೂರ್ವ ದಿಕ್ಕಿನ ಬಳಿ ಮಾಜಿ ಪ್ರಧಾನ ಮಂತ್ರಿಗಳಾದ ದಿವಂಗತ ಪಂಡಿತ್ ಜವಾಹರ್‌ ಲಾಲ್ ನೆಹರೂರವರ 135ನೇ ವರ್ಷದ ಜನ್ಮ ದಿನಾಚರಣೆ ಅಂಗವಾಗಿ ಅವರ ಪ್ರತಿಮೆ ಬಳಿ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಮಾತನಾಡಿದರು . ಜವಾಹರ್ ಲಾಲ್ ನೆಹರು ಅವರ ಜನ್ಮದಿನವನ್ನು

’ಜವಾಹರ್‌ ಲಾಲ್‌ ನೆಹರೂ ಆಧುನಿಕ ಭಾರತದ ಶಿಲ್ಪಿ’ – ಸಿಎಂ ಸಿದ್ದರಾಮಯ್ಯ Read More »

ಕರ್ನಾಟಕ

ಉಡುಪಿ: ಶ್ರೀಕೃಷ್ಣ ಮಠದಲ್ಲಿ ಲಕ್ಷದೀಪೋತ್ಸವ ಆಚರಣೆ

(ನ್ಯೂಸ್ ಕಡಬ) newskadaba.com ನ. 14. ಉಡುಪಿ ಶ್ರೀಕೃಷ್ಣ ಮಠದಲ್ಲಿ ನವೆಂಬರ್ 13ರಂದು ಲಕ್ಷದೀಪೋತ್ಸವ ಆಚರಿಸಲಾಯಿತು. ಪರ್ಯಾಯ ಶ್ರೀ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಅವರ ಮಾರ್ಗದರ್ಶನದಲ್ಲಿ ಉತ್ಥಾನ ದ್ವಾದಶಿ ನಿಮಿತ್ತ ಶ್ರೀಕೃಷ್ಣ ಮಠದಲ್ಲಿ ತೆಪ್ಪೋತ್ಸವ ಮತ್ತು ವಾರ್ಷಿಕ ರಥೋತ್ಸವ ಉದ್ಘಾಟನೆಗೊಂಡಿತು. ಬೆಳಿಗ್ಗೆ ತುಳಸಿ ಪೂಜೆ ಮತ್ತು ಸಂಜೆ ಕ್ಷೀರಾಭಿಷೇಕ (ಹಾಲು ವಿಸರ್ಜನೆ) ಪೂಜೆಯೊಂದಿಗೆ ಉತ್ಸವವು ಪ್ರಾರಂಭವಾಯಿತು. ಸಂಜೆಯ ವಿಧಿವಿಧಾನಗಳು ಮಧ್ವ ಸರೋವರದ ಕೇಂದ್ರ ಮಂಟಪದಲ್ಲಿ ಕ್ಷೀರಾಭಿಷೇಕವನ್ನು ಒಳಗೊಂಡಿತ್ತು, ಅಲ್ಲಿ ಶ್ರೀ ಸುಗುಣೇಂದ್ರ ತೀರ್ಥ

ಉಡುಪಿ: ಶ್ರೀಕೃಷ್ಣ ಮಠದಲ್ಲಿ ಲಕ್ಷದೀಪೋತ್ಸವ ಆಚರಣೆ Read More »

ಕರಾವಳಿ
Scroll to Top