News Kadaba

ವೇತನ ಹೆಚ್ಚಳ, ಬಾಕಿ ವೇತನ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯ- ಮುಷ್ಕರಕ್ಕೆ ಮುಂದಾದ ಸಾರಿಗೆ ನೌಕರರು

(ನ್ಯೂಸ್ ಕಡಬ)newskadaba.com ಬೆಂಗಳೂರು, ನ.25.  ವೇತನ ಹೆಚ್ಚಳ, ಬಾಕಿ ವೇತನ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆ ಒತ್ತಾಯಿಸಿ ಕೆಎಸ್ಆರ್ಟಿಸಿ, ಬಿಎಂಟಿಸಿ ಸೇರಿದಂತೆ ನಾಲ್ಕು ನಿಗಮಗಳ ಸಾರಿಗೆ ನೌಕರರು ಮುಷ್ಕರಕ್ಕೆ ಮುಂದಾಗಿದ್ದಾರೆ. ಮುಂದಿನ ತಿಂಗಳ ಡಿ.31ರಿಂದ ಸಾರಿಗೆ ಮುಷ್ಕರಕ್ಕೆ ಸಾರಿಗೆ ನೌಕರರ ಹಿರಿಯ ಮುಖಂಡ ಅನಂತ ಸುಬ್ಬರಾವ್ ಕರೆ ನೀಡಿದ್ದಾರೆ. ಪ್ರಕ್ರಿಯೆಯಂತೆ ಡಿ.9 ರಂದು ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ ಬೆಳಗಾವಿ ಚಲೋ ಮಾಡಿ ಅಂದು ರಾಜ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ನೀಡಲಾಗುತ್ತದೆ ಎಂದು ಕಾರ್ಮಿಕ ಮುಖಂಡರು ತಿಳಿಸಿದ್ದಾರೆ.   […]

ವೇತನ ಹೆಚ್ಚಳ, ಬಾಕಿ ವೇತನ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯ- ಮುಷ್ಕರಕ್ಕೆ ಮುಂದಾದ ಸಾರಿಗೆ ನೌಕರರು Read More »

ಕರ್ನಾಟಕ

ನ. 30 ರಿಂದ ಡಿ. 15ರವರೆಗೆ “ಬೆಂಗಳೂರು ಹಬ್ಬ” 2ನೇ ಆವೃತ್ತಿ ಆಚರಣೆ

(ನ್ಯೂಸ್ ಕಡಬ)newskadaba.com ಬೆಂಗಳೂರು, ನ.25.  ಇದೇ ನವೆಂಬರ್‌ 30 ರಿಂದ ಡಿಸೆಂಬರ್ 15ರ ವರೆಗೆ “ಬೆಂಗಳೂರು ಹಬ್ಬ”ವನ್ನು ವಿಜೃಂಭಣೆಯಿಂದ ಆಚರಿಸಲು ಸಕಲ ಸಿದ್ಧತೆ ನಡೆಯುತ್ತಿದೆ. ಬೆಂಗಳೂರಿನ ಶ್ರೀಮಂತ ಕಲೆ, ಸಾಹಿತ್ಯ ಸಂಸ್ಕೃತಿಯನ್ನು ಪ್ರತಿಬಿಂಬಿಸಲು ಅನ್‌ಬಾಕ್ಸಿಂಗ್‌ ಬೆಂಗಳೂರು ಫೌಂಡೇಷನ್‌, ರಾಜ್ಯ ಸರಕಾರದ ಸಹಭಾಗಿತ್ವದಲ್ಲಿ “ಬೆಂಗಳೂರು ಹಬ್ಬ” ಎರಡನೇ ಆವೃತ್ತಿಯನ್ನು ಅದ್ಧೂರಿಯಿಂದ ಆಚರಿಸಲು ಸಜ್ಜಾಗಿದೆ. ನವೆಂಬರ್‌ 30ರಂದು ಅದ್ಧೂರಿಯಾಗಿ ಚಾಲನೆ ಪಡೆಯಲಿರುವ ಬೆಂಗಳೂರು ಹಬ್ಬ 16 ದಿನಗಳ ಕಾಲ ನಡೆಯಲಿದ್ದು, ನಮ್ಮ ನಾಡು, ನುಡಿ, ಕಲೆ, ಸಾಹಿತ್ಯ, ಸಂಸ್ಕೃತಿ, ನಾಟಕ, ಸಂಗೀತ,

ನ. 30 ರಿಂದ ಡಿ. 15ರವರೆಗೆ “ಬೆಂಗಳೂರು ಹಬ್ಬ” 2ನೇ ಆವೃತ್ತಿ ಆಚರಣೆ Read More »

ಕರ್ನಾಟಕ

ನಾಳೆ ಸಂವಿಧಾನ ದಿನಾಚರಣೆ, ಎಲ್ಲ ಶಾಲಾ-ಕಾಲೇಜು, ಕಚೇರಿಗಳಲ್ಲಿ ಅಂಬೇಡ್ಕರ್ ಭಾವಚಿತ್ರ ಕಡ್ಡಾಯ

(ನ್ಯೂಸ್ ಕಡಬ)newskadaba.com  ಬೆಂಗಳೂರು, ನ.25:  ನಾಳೆ  ಸಂವಿಧಾನ ದಿನಾಚರಣೆ ಆಗಿದ್ದು, ಈ ಸಂದರ್ಭದಲ್ಲಿ ಸಂವಿಧಾನ ಕರ್ತೃ ಡಾ.ಬಿ.ಆರ್ ಅಂಬೇಡ್ಕ‌ರ್‌  ಅವರ ಭಾವಚಿತ್ರವನ್ನು ಕಡ್ಡಾಯವಾಗಿ ಇಡಬೇಕು ಎಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಉಲ್ಲೇಖಿತ ಸುತ್ತೋಲೆಯಲ್ಲಿ ಸೂಚಿಸಿರುವಂತೆ, ಜನವರಿ 26ರ ಗಣರಾಜ್ಯೋತ್ಸವ ದಿನದಂದು ಕೂಡ ರಾಜ್ಯದ ಎಲ್ಲಾ ಸರ್ಕಾರಿ ಕಚೇರಿಗಳು, ಸರ್ಕಾರಿ ಸ್ವಾಮ್ಯಕ್ಕೆ ಒಳಪಡುವ ಸಂಸ್ಥೆಗಳು ಹಾಗೂ ಶಾಲಾ ಕಾಲೇಜು ಸೇರಿದಂತೆ ಸರ್ಕಾರದ ವತಿಯಿಂದ ನಡೆಯುವ ಎಲ್ಲಾ ಸಮಾರಂಭಗಳಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಭಾವಚಿತ್ರದೊಂದಿಗೆ ಸಂವಿಧಾನದ ಪಿತಾಮಹ, ಭಾರತ ರತ್ನ

ನಾಳೆ ಸಂವಿಧಾನ ದಿನಾಚರಣೆ, ಎಲ್ಲ ಶಾಲಾ-ಕಾಲೇಜು, ಕಚೇರಿಗಳಲ್ಲಿ ಅಂಬೇಡ್ಕರ್ ಭಾವಚಿತ್ರ ಕಡ್ಡಾಯ Read More »

ಕರ್ನಾಟಕ

ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ನಾನಾ ಪಟೋಲೆ

(ನ್ಯೂಸ್ ಕಡಬ)newskadaba.com ಮಹಾರಾಷ್ಟ್ರ, ನ.25. ವಿಧಾನಸಭಾ ಚುನಾವಣೆಯಲ್ಲಿ ಮಹಾ ವಿಕಾಸ್ ಅಘಾಡಿ ಅವರ ಹೀನಾಯ ಸೋಲಿನ ನಂತರ, ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ನಾನಾ ಪಟೋಲೆ ರಾಜೀನಾಮೆ ನೀಡಿದ್ದಾರೆ. ರಾಜ್ಯಾದ್ಯಂತ ಕಾಂಗ್ರೆಸ್‌ನ ನೀರಸ ಪ್ರದರ್ಶನದ ಹೊರತಾಗಿ, ಪಟೋಲೆ ಅವರು ತಮ್ಮ ಸ್ವಂತ ಕ್ಷೇತ್ರವಾದ ಸಾಕೋಲಿಯಲ್ಲಿ ಉತ್ತಮ ಪ್ರದರ್ಶನ ನೀಡಲು ಹೆಣಗಾಡಿದರು, ಅಲ್ಲಿ ಅವರು ಕೇವಲ 208 ಮತಗಳ ಅಂತರದಿಂದ ಗೆಲ್ಲುವಲ್ಲಿ ಯಶಸ್ವಿಯಾದರು. ಮಹಾಯುತಿ ಮತ್ತು ಎಂವಿಎ ನಡುವೆ ಚುನಾವಣೆಯಲ್ಲಿ ಪ್ರಮುಖ ಸ್ಪರ್ಧೆ ಏರ್ಪಟ್ಟಿತ್ತು. ಫಲಿತಾಂಶದಲ್ಲಿ, 288 ಸದಸ್ಯ ಬಲದ

ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ನಾನಾ ಪಟೋಲೆ Read More »

ಕರ್ನಾಟಕ

ಅಕ್ರಮ ಸಾಗಾಟ: 5 ಟನ್‌ ಡ್ರಗ್ಸ್ ವಶ

(ನ್ಯೂಸ್ ಕಡಬ)newskadaba.com ನವದೆಹಲಿ, ನ.25. ಅಂಡಮಾನ್‌ನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಐದು ಟನ್‌ ಡ್ರಗ್ಸ್  ವಶಪಡಿಸಿಕೊಳ್ಳುವಲ್ಲಿ ಭಾರತೀಯ ಕರಾವಳಿ ರಕ್ಷಣಾ ಪಡೆ ಯಶಸ್ವಿಯಾಗಿದೆ. ಅಂಡಮಾನ್‌ ಜಲಪ್ರದೇಶದಲ್ಲಿ ಮೀನುಗಾರಿಕಾ ದೋಣಿಯಿಂದ ಸುಮಾರು ಐದು ಟನ್‌ಗಳಷ್ಟು ಡ್ರಗ್‌್ಸಗಳನ್ನು ಭಾರತೀಯ ಕರಾವಳಿ ರಕ್ಷಣಾ ಪಡೆ ವಶಪಡಿಸಿಕೊಂಡಿದೆ ಎಂದು ರಕ್ಷಣಾ ಅಧಿಕಾರಿಗಳು ತಿಳಿಸಿದ್ದಾರೆ. ಭಾರತೀಯ ಕೋಸ್ಟ್‌ ಗಾರ್ಡ್‌ ಅಂಡಮಾನ್‌ ನೀರಿನಲ್ಲಿ ಮೀನುಗಾರಿಕೆ ದೋಣಿಯಿಂದ ಸುಮಾರು ಐದು ಟನ್‌ ಡ್ರಗ್ಸ್‌‍ ಗಳನ್ನು ವಶಪಡಿಸಿಕೊಂಡಿದೆ. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ ಎಂದು ರಕ್ಷಣಾ ಅಧಿಕಾರಿಗಳು ತಿಳಿಸಿದ್ದಾರೆ.  

ಅಕ್ರಮ ಸಾಗಾಟ: 5 ಟನ್‌ ಡ್ರಗ್ಸ್ ವಶ Read More »

ಕ್ರೈಮ್ ನ್ಯೂಸ್

ಕರ್ನಾಟಕದ 3 ರೈಲ್ವೆ ನಿಲ್ದಾಣಗಳಿಗೆ ಮರುನಾಮಕರಣ

(ನ್ಯೂಸ್ ಕಡಬ)newskadaba.com ಬೆಂಗಳೂರು, ನ.25. ಕರ್ನಾಟಕದ 3 ರೈಲ್ವೆ ನಿಲ್ದಾಣಗಳಿಗೆ ಮರುನಾಮಕರಣ ಮಾಡಲು ನಿರ್ಧಾರ ಮಾಡಲಾಗಿದೆ. ಹೊಸದಾಗಿ ನಿಲ್ದಾಣಗಳಿಗೆ ಅಂಜನಾದ್ರಿ, ಹುಲಿಗೆಮ್ಮ, ಮಹಾತ್ಮಗಾಂಧಿ ಹೆಸರು ಶಿಫಾರಸು ಮಾಡಲಾಗಿದೆ. ಕೊಪ್ಪಳ ಜಿಲ್ಲೆಯ ಗಂಗಾವತಿ, ಮುನಿರಾಬಾದ್‌ ಮತ್ತು ಭಾನಾಪುರ ರೈಲ್ವೆ ನಿಲ್ದಾಣಗಳಿಗೆ ಕ್ರಮವಾಗಿ ಅಂಜನಾದ್ರಿ (ಕಿಷ್ಕಿಂಧಾ), ಹುಲಿಗೆಮ್ಮ ದೇವಿ ಮತ್ತು ಮಹಾತ್ಮ ಗಾಂಧಿ ರೈಲು ನಿಲ್ದಾಣ ಎಂದು ಮರುನಾಮಕರಣ ಮಾಡಬೇಕೆಂದು ಶಿಫಾರಸು ಮಾಡಲಾಗಿದೆ ಎಂದು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂಬಿ ಪಾಟೀಲ್‌ ತಿಳಿಸಿದ್ದಾರೆ.  

ಕರ್ನಾಟಕದ 3 ರೈಲ್ವೆ ನಿಲ್ದಾಣಗಳಿಗೆ ಮರುನಾಮಕರಣ Read More »

ಕರ್ನಾಟಕ

ತುಂಬೆ ದೇವಸ್ಥಾನ ಕಳ್ಳತನ ಪ್ರಕರಣ: ಮೂವರು ಅರೆಸ್ಟ್

(ನ್ಯೂಸ್ ಕಡಬ)newskadaba.com ಬಂಟ್ವಾಳ, ನ.25:  ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ತುಂಬೆ ಗ್ರಾಮದ ತುಂಬೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕುಖ್ಯಾತ ಮೂವರು ಕಳ್ಳರ ತಂಡವನ್ನು ಸೆರೆ ಹಿಡಿಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಕಾಸರಗೋಡಿನ ಚೆರ್ವತ್ತೂರು ಗ್ರಾಮದ ಪಿಲಾವಲಪ್ಪು, ಕೋತಂಕರ ನಿವಾಸಿ ಬಶೀರ್ ಕೆ ಪಿ. ಯಾನೆ ಆಕ್ರಿ ಬಶೀರ್ (44), ಕೇರಳದ ಕೊಲ್ಲಂ ಜಿಲ್ಲೆಯ ಆಲಪ್ಪಾಡ್ ನ ಪ್ರಕಾಶ್ ಬಾಬು ಯಾನೆ ಮಹಮ್ಮದ್ ನಿಯಾಜ್(46) ಹಾಗೂ ಬಂಟ್ವಾಳ ತಾಲೂಕಿನ ಪುದು ಗ್ರಾಮ ನಿವಾಸಿ ಎಫ್.ಜೆ.ಮಹಮ್ಮದ್

ತುಂಬೆ ದೇವಸ್ಥಾನ ಕಳ್ಳತನ ಪ್ರಕರಣ: ಮೂವರು ಅರೆಸ್ಟ್ Read More »

ಕರಾವಳಿ

ಸಂಭಾಲ್ ಹಿಂಸಾಚಾರ: ಮೃತರ ಸಂಖ್ಯೆ 4ಕ್ಕೆ ಏರಿಕೆ..!

(ನ್ಯೂಸ್ ಕಡಬ)newskadaba.com  ಉತ್ತರಪ್ರದೇಶ, ನ.25. ಸಂಭಾಲ್ ನ ಜಾಮಾ ಮಸೀದಿಯ ಆವರಣದಲ್ಲಿ ಸಮೀಕ್ಷೆ ವಿರೋಧಿಸಿ ನಡೆದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು, ಘಟನೆಯಲ್ಲಿ ಮೃತರ ಸಂಖ್ಯೆ 4ಕ್ಕೆ ಏರಿಕೆಯಾಗಿದೆ. ಹಿಂಸಾಚಾರದ ಹಿನ್ನೆಲೆ ಜಿಲ್ಲಾಡಳಿತ ಸಂಭಾಲ್ ನಲ್ಲಿ 24 ಗಂಟೆಗಳ ಕಾಲ ಇಂಟರ್ ನೆಟ್ ಸೇವೆಯನ್ನು ಸ್ಥಗಿತಗೊಳಿಸಿದೆ ಮತ್ತು ಶಾಲಾ-ಕಾಲೇಜುಗಳಿಗೆ ರಜೆಯನ್ನು ಘೋಷಿಸಿದೆ. ನ.30ರವರೆಗೆ ಸಂಭಾಲ್ ಗೆ ಹೊರಗಿನವರು ಅಧಿಕಾರಿಗಳ ಆದೇಶವಿಲ್ಲದೆ ಸಂಭಾಲ್ ಗೆ ಪ್ರವೇಶಿಸುವುದಕ್ಕೆ ನಿರ್ಬಂಧ ವಿಧಿಸಲಾಗಿದೆ.  

ಸಂಭಾಲ್ ಹಿಂಸಾಚಾರ: ಮೃತರ ಸಂಖ್ಯೆ 4ಕ್ಕೆ ಏರಿಕೆ..! Read More »

ಕ್ರೈಮ್ ನ್ಯೂಸ್

ನಿಯಂತ್ರಣ ತಪ್ಪಿ ಕಾರು ಪಲ್ಟಿ: ತಂದೆ ಮೃತ್ಯು, ಮಗಳಿಗೆ ಗಂಭೀರ ಗಾಯ

(ನ್ಯೂಸ್ ಕಡಬ)newskadaba.com  ಹಾಸನ, ನ.25. ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾದ ಪರಿಣಾಮ ಸ್ಥಳದಲ್ಲೇ ಚಾಲಕ ಸಾವನ್ನಪ್ಪಿದ ಘಟನೆ ಬೇಲೂರು ತಾಲೂಕಿನ ಕೊರಟಗೆರೆಯಲ್ಲಿ ನಡೆದಿದೆ. ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯನ್ನು ಚಿಕ್ಕಮಗಳೂರು ಮೂಲದ ದಯಾನಂದ (46) ಎಂದು ಗುರುತಿಸಲಾಗಿದೆ. ಇನ್ನೂ ಅಪಘಾತದಲ್ಲಿ ದಯಾನಂದ್ ಅವರ ಮಗಳು ನಿಶ್ಮಿತಾ (16) ಗಂಭೀರವಾಗಿ ಗಾಯಗೊಂಡಿದ್ದಾಳೆ. ಆಕೆಯನ್ನು ಬೇಲೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ದಯಾನಂದ್ ಅವರು ಬೇಲೂರಿನಲ್ಲಿ ಬಟ್ಟೆ ಅಂಗಡಿ ಇಟ್ಟುಕೊಂಡಿದ್ದು ಅಲ್ಲೇ ವಾಸವಿದ್ದರು. ಇನ್ನೂ ಭಾನುವಾರ ಚಿಕ್ಕಮಗಳೂರಿಗೆ ತೆರಳಿದ್ದ ಅವರು ಇಂದು

ನಿಯಂತ್ರಣ ತಪ್ಪಿ ಕಾರು ಪಲ್ಟಿ: ತಂದೆ ಮೃತ್ಯು, ಮಗಳಿಗೆ ಗಂಭೀರ ಗಾಯ Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಸುಳ್ಯ : ‘ಕನ್ನಡ ಶಾಲೆಗಳಲ್ಲಿ ಕನ್ನಡದ ಬೇರುಗಳನ್ನು ಉಳಿಸಿ ಬೆಳೆಸುವ ಕೆಲಸ ಮಾಡಬೇಕು’ – ಧನಂಜಯ ಕುಂಬ್ಳೆ

(ನ್ಯೂಸ್ ಕಡಬ)newskadaba.com  ಬೆಂಗಳೂರು, ನ.25:  ಕನ್ನಡ ಶಾಲೆಗಳಲ್ಲಿ ಕನ್ನಡದ ಬೇರುಗಳು ಗಟ್ಟಿಯಾಗಿದ್ದು ಅವುಗಳನ್ನು ಉಳಿಸಿ ಬೆಳೆಸುವ ಕೆಲಸವನ್ನು ಕೇಂದ್ರ ಸಾಹಿತ್ಯ ಪರಿಷತ್ ಅಗತ್ಯವಾಗಿ ಮಾಡಬೇಕು ಎಂದು ಉಳ್ಳಾಲ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಧನಂಜಯ ಕುಂಬ್ಳೆ ಹೇಳಿದರು. ಅವರು ಸುಳ್ಯದ ಅರಂತೋಡು ನೆಹರೂ ಸ್ಮಾರಕ ಪದವಿ ಪೂರ್ವ ವಿದ್ಯಾಲಯ ಇಲ್ಲಿಯ ಡಾ.ಕುರುಂಜಿ ವೆಂಕಟ್ರಮಣ ಗೌಡ ವೇದಿಕೆ ನಿರಂಜನ ಸಭಾಂಗಣದಲ್ಲಿ ನಡೆದ 27ನೇ ಸಾಹಿತ್ಯ ಸಮ್ಮೇಳನದ ಸಮರೋಪ ಸಮಾರಂಭದಲ್ಲಿ ಅವರು ಸಮರೋಪ ಭಾಷಣ ಮಾಡಿ, ಮಾತನಾಡಿದರು. ಕೇಂದ್ರ ಸಾಹಿತ್ಯ

ಸುಳ್ಯ : ‘ಕನ್ನಡ ಶಾಲೆಗಳಲ್ಲಿ ಕನ್ನಡದ ಬೇರುಗಳನ್ನು ಉಳಿಸಿ ಬೆಳೆಸುವ ಕೆಲಸ ಮಾಡಬೇಕು’ – ಧನಂಜಯ ಕುಂಬ್ಳೆ Read More »

ಕರಾವಳಿ
Scroll to Top