News Kadaba

ಮಂಗಳೂರು: ಯುವ ಉದ್ಯಮಿ ಕುಸುಮಾಧರ ಸೇರಿದಂತೆ 25 ಮಂದಿಗೆ ‘ಬಿಜಿಎಸ್ ಕರಾವಳಿ ರತ್ನ’ ಪ್ರಶಸ್ತಿ ಪ್ರದಾನ

(ನ್ಯೂಸ್ ಕಡಬ) newskadaba.com ಮಂಗಳೂರು, ನ. 27.  ಯುವ ಉದ್ಯಮಿ ಕುಸುಮಾಧರ ಸೇರಿದಂತೆ 25 ಮಂದಿಗೆ ‘ಬಿಜಿಎಸ್ ಕರಾವಳಿ ರತ್ನ’ ಪ್ರಶಸ್ತಿ ಪ್ರದಾನ, ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಜಗದ್ಗುರು ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿ ದಿವ್ಯ ಸಾನ್ನಿಧ್ಯದಲ್ಲಿ ನೀಡಲಾಯಿತು. ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಮಂಗಳವಾರ ಬಿಜಿಎಸ್ ಸಭಾಂಗಣದಲ್ಲಿ ‘ಬಿಜಿಎಸ್ ಕರಾವಳಿ ರತ್ನ’ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸುಳ್ಯ ತಾಲೂಕಿನ ಯುವ ಉದ್ಯಮಿ ಕುಸುಮಾಧರ ಸೇರಿದಂತೆ ಸುಮಾರು 25 ಮಂದಿ ಸಾಧಕರು ಪ್ರಶಸ್ತಿ […]

ಮಂಗಳೂರು: ಯುವ ಉದ್ಯಮಿ ಕುಸುಮಾಧರ ಸೇರಿದಂತೆ 25 ಮಂದಿಗೆ ‘ಬಿಜಿಎಸ್ ಕರಾವಳಿ ರತ್ನ’ ಪ್ರಶಸ್ತಿ ಪ್ರದಾನ Read More »

ಕರಾವಳಿ

ಪಾರ್ಕ್ ಗಳಲ್ಲಿ ನಾಯಿಗಳ ಮಲ ವಿಸರ್ಜನೆಗೆ ಕಾರಣವಾಗುವವರಿಗೆ ಹೆಚ್ಚಿನ ದಂಡ ವಿಧಿಸಿ: ಸರ್ಕಾರಕ್ಕೆ ಹೈಕೋರ್ಟ್ ಸೂಚನೆ

(ನ್ಯೂಸ್ ಕಡಬ) newskadaba.com ಬೆಂಗಳೂರು, ನ. 27.  ನಗರದಲ್ಲಿನ ಉದ್ಯಾನವನಗಳ ಸ್ವತ್ಛತೆ ಕಾಯ್ದುಕೊಳ್ಳುವುದು ರಾಜ್ಯ ಸರ್ಕಾರ ಹಾಗೂ ಬಿಬಿಎಂಪಿ ಜವಾಬ್ದಾರಿಯಾಗಿದ್ದು, ಈ ನಿಟ್ಟಿನಲ್ಲಿ ಉದ್ಯಾನವನಗಳಲ್ಲಿ ನಾಯಿಗಳ ಮಲ ವಿಸರ್ಜನೆಗೆ ಕಾರಣವಾಗುವವರಿಗೆ ಹೆಚ್ಚಿನ ದಂಡ ವಿಧಿಸುವಂತೆ ಹೈಕೋರ್ಟ್ ಸೂಚನೆ ನೀಡಿದೆ. ಉದ್ಯಾನವನ ಪ್ರದೇಶ ಮತ್ತು ಅದರ ಆವರಣದಲ್ಲಿ ಉಗುಳುವುದು, ಕಸವನ್ನು ಎಸೆಯಿವುದು, ಸಾಕು ಪ್ರಾಣಿಗಳ ಮಲ ವಿಸರ್ಜನೆಗೆ ಅವಕಾಶ ಮಾಡುವವರನ್ನು ನಿಯಂತ್ರಿಸಿ ಸ್ವಚ್ಛತೆಯನ್ನು ಕಾಯ್ದುಕೊಳ್ಳುವುದು ಮತ್ತು ಅದನ್ನು ಉಲ್ಲಂಸುವವರ ವಿರುದ್ಧ ದಂಡವನ್ನು ವಿಧಿಸುವ ಕಾರ್ಯವನ್ನು ತೋಟಗಾರಿಕೆ ಇಲಾಖೆ ಮತ್ತು

ಪಾರ್ಕ್ ಗಳಲ್ಲಿ ನಾಯಿಗಳ ಮಲ ವಿಸರ್ಜನೆಗೆ ಕಾರಣವಾಗುವವರಿಗೆ ಹೆಚ್ಚಿನ ದಂಡ ವಿಧಿಸಿ: ಸರ್ಕಾರಕ್ಕೆ ಹೈಕೋರ್ಟ್ ಸೂಚನೆ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ-ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ, ಮಳೆ ಸಾಧ್ಯತೆ

(ನ್ಯೂಸ್ ಕಡಬ) newskadaba.com ಬೆಂಗಳೂರು, ನ. 27.  ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿದ್ದು ಇದರ ಪರಿಣಾಮ ತಮಿಳುನಾಡು ಮತ್ತು ಪುದುಚೇರಿಯಲ್ಲಿ ಭಾರೀ ಮಳೆ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ ನೀಡಿದ್ದು, ಬೆಂಗಳೂರಿನಲ್ಲೂ ನಿನ್ನೆ ಮಂಗಳವಾರದಿಂದ ಮೋಡ ಕವಿದ ವಾತಾವರಣವಿದೆ.ಇಂದು ಬೆಳಗ್ಗೆ ಮೋಡ ಕವಿದ ವಾತಾವರಣ ಮುಂದುವರಿದಿದ್ದು, ಚಳಿಯ ಜೊತೆ ಮಳೆಯ ಮುನ್ಸೂಚನೆಯಿದೆ. ತಮಿಳುನಾಡಿನ ಮೈಲಾಡುತುರೈ, ನಾಗಪಟ್ಟಣಂ, ತಿರುವಾರುರ್​​ ಮತ್ತು ಕರೈಕಲ್​ ಜಿಲ್ಲೆಗಳಲ್ಲಿ ಭಾರೀ ಮಳೆ ಮುನ್ಸೂಚನೆಯ ಹಿನ್ನೆಲೆಯಲ್ಲಿ ಪ್ರಾದೇಶಿಕ ಹವಾಮಾನ ಕೇಂದ್ರ ರೆಡ್​ ಅಲರ್ಟ್​ ನೀಡಿದೆ. ಜೊತೆಗೆ

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ-ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ, ಮಳೆ ಸಾಧ್ಯತೆ Read More »

ಕರ್ನಾಟಕ

ಆದಿವಾಸಿಗಳಿಗೆ ಮೂಲಸೌಕರ್ಯ, ಆಸ್ತಿ ಪತ್ರ ಒದಗಿಸಬೇಕು: ಸಿ.ಎಂ ಸಿದ್ದರಾಮಯ್ಯ

(ನ್ಯೂಸ್ ಕಡಬ) newskadaba.com ಬೆಂಗಳೂರು, ನ. 27.  ಅರಣ್ಯದ ಅಂಚಿನಲ್ಲಿ ವಾಸಿಸುವ ಆದಿವಾಸಿಗಳಿಗೆ ಸೂಕ್ತ ಮೂಲ ಸೌಕರ್ಯ, ಹಾಗೂ ಆಸ್ತಿ ಮಾರಾಟ ಪತ್ರಗಳನ್ನು ನೀಡುವಂತೆ ಮುಖ್ಯ ಕಾರ್ಯದರ್ಶಿ ಹಾಗೂ ಅರಣ್ಯ ಅಧಿಕಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳವಾರ ಸೂಚನೆ ನೀಡಿದರು. ಸಚಿವ ಈಶ್ವರ ಬಿ ಖಂಡ್ರೆ ಮತ್ತು ಇತರ ಅಧಿಕಾರಿಗಳೊಂದಿಗೆ ಪರಿಶೀಲನಾ ಸಭೆ ನಡೆಸಿದ ಅವರು, ಆದಿವಾಸಿಗಳಿಗೆ ಸೂಕ್ತ ವಸತಿ, ಕುಡಿಯುವ ನೀರು, ನೈರ್ಮಲ್ಯ, ರಸ್ತೆ ಸಂಪರ್ಕ ಮತ್ತು ವಿದ್ಯುತ್ ನೀಡಲು ಕ್ರಮಕೈಗೊಳ್ಳಬೇಕು. ಜಿಲ್ಲಾಧಿಕಾರಿಗಳು ಅರಣ್ಯದ ಅಂಚಿನಲ್ಲಿರುವ

ಆದಿವಾಸಿಗಳಿಗೆ ಮೂಲಸೌಕರ್ಯ, ಆಸ್ತಿ ಪತ್ರ ಒದಗಿಸಬೇಕು: ಸಿ.ಎಂ ಸಿದ್ದರಾಮಯ್ಯ Read More »

ಕರ್ನಾಟಕ

ನವಜಾತ ಶಿಶುವನ್ನು ಅಪಹರಿಸಿದ 36 ಗಂಟೆಯಲ್ಲಿ ಮತ್ತೆ ತಾಯಿ ಮಡಿಲು ಸೇರಿದೆ

(ನ್ಯೂಸ್ ಕಡಬ) newskadaba.com ಕಲಬುರ್ಗಿ, ನ. 27. ಕಲಬುರ್ಗಿಯ ಜಿಲ್ಲಾಸ್ಪತ್ರೆಯಲ್ಲಿ ನರ್ಸ್‌ ವೇಷದಲ್ಲಿ ಬಂದ ಇಬ್ಬರು ಮಹಿಳೆಯರು, ನವಜಾತ ಗಂಡು ಶಿಶುವನ್ನು ಅಪಹರಿಸಿದ 36 ಗಂಟೆಗಳಲ್ಲಿ ಮಗು ಮತ್ತೆ ತಾಯಿಯ ಮಡಿಲು ಸೇರಿದೆ. ಜೊತೆಗೆ ಮಗುವನ್ನು ಕಳ್ಳತನ ಮಾಡಿ 50,000ಕ್ಕೆ ಮಾರಾಟ ಮಾಡಿದ್ದ ಮೂವರು ಕಳ್ಳಿಯರನ್ನು ಕಲಬುರಗಿ ಪೊಲೀಸರು ಬಂಧಿಸಿದ್ದಾರೆ. ಕಲಬುರಗಿಯ ಎಂಎಸ್‌ಕೆಮಿಲ್ ಬಡಾವಣೆಯಲ್ಲಿ ಉಮೇರಾ, ನಸರೀನ್ ಹಾಗೂ ಫಾತಿಮಾ ಬಂಧಿತರು. ಬಂಧಿತರು ಚಿತ್ತಾಪುರ ತಾಲ್ಲೂಕಿನ ರಾವೂರ ಗ್ರಾಮದ ರಾಮಕೃಷ್ಣ ಸಗರ ಹಾಗೂ ಕಸ್ತೂರಿ ದಂಪತಿಯ ಮಗುವನ್ನು

ನವಜಾತ ಶಿಶುವನ್ನು ಅಪಹರಿಸಿದ 36 ಗಂಟೆಯಲ್ಲಿ ಮತ್ತೆ ತಾಯಿ ಮಡಿಲು ಸೇರಿದೆ Read More »

ಕರ್ನಾಟಕ

ವಾಯುಭಾರ ಕುಸಿತ: ತಮಿಳುನಾಡಿಗೆ ಅಪ್ಪಳಿಸಲಿದೆ ಫೆಂಗಲ್ ಚಂಡಮಾರುತ

(ನ್ಯೂಸ್ ಕಡಬ) newskadaba.com ಚೆನ್ನೈ, ನ. 26. ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾದ ಪರಿಣಾಮ ಫೆಂಗಲ್ ಚಂಡಮಾರುತ ತಮಿಳುನಾಡಿಗೆ ಅಪ್ಪಳಿಸಲಿದೆ. ಹವಾಮಾನ ಇಲಾಖೆಯು ತಮಿಳುನಾಡು ಮತ್ತು ಪುದುಚೇರಿಯ ಹಲವು ಭಾಗಗಳಿಗೆ ಹವಾಮಾನ ಇಲಾಖೆ ಕೆಲ ಎಚ್ಚರಿಕೆಗಳನ್ನು ನೀಡಿದ್ದು, ಮುಂದಿನ ನಾಲ್ಕೈದು ದಿನಗಳಲ್ಲಿ ಭಾರೀ ಮಳೆಯಾಗುವ ನಿರೀಕ್ಷೆಯಿದೆ. ಭಾರತೀಯ ಹವಾಮಾನ ಇಲಾಖೆ ತಮಿಳುನಾಡಿನ ನಾಲ್ಕು ಜಿಲ್ಲೆಗಳಿಗೆ ರೆಡ್ ಅಲರ್ಟ್ ಮತ್ತು ನ.26 ರಂದು ಇತರ ಹಲವು ಜಿಲ್ಲೆಗಳಿಗೆ ಹಳದಿ ಅಲರ್ಟ್ ಘೋಷಿಸಿದೆ. ಇದು ನ.27 ರಂದು ತಮಿಳುನಾಡಿನ ಎರಡು

ವಾಯುಭಾರ ಕುಸಿತ: ತಮಿಳುನಾಡಿಗೆ ಅಪ್ಪಳಿಸಲಿದೆ ಫೆಂಗಲ್ ಚಂಡಮಾರುತ Read More »

ಕರ್ನಾಟಕ

ಗೂಗಲ್‌ ಮ್ಯಾಪ್‌ ನೆರವಿನಿಂದ ಕಾರು ಚಲಾಯಿಸಿ ಸೇತುವೆಯಿಂದ ಬಿದ್ದು 3 ಮಂದಿ ಮೃತ್ಯು..!

(ನ್ಯೂಸ್ ಕಡಬ) newskadaba.com ಉತ್ತರಪ್ರದೇಶ, ನ. 26. ಮೂವರು ಸ್ನೇಹಿತರು ಗೂಗಲ್‌ ಮ್ಯಾಪ್‌ ನೆರವಿನಿಂದ ಕಾರು ಚಲಾಯಿಸಿಕೊಂಡು ಅಪೂರ್ಣ ಸೇತುವೆ ಮೇಲೆ ಹೋಗಿ, ಬಿದ್ದು ಮೃತಪಟ್ಟಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತರನ್ನು ಫಾರೂಕಾಬಾದ್‌ ಸಹೋದರರಾದ ನಿತಿನ್ (30) ಅಜಿತ್ (30) ಮತ್ತು ಮೈನಪುರಿ ಜಿಲ್ಲೆಯ ಅಮಿತ್ ಎಂದು ಗುರುತಿಸಲಾಗಿದೆ. ಗೂಗಲ್‌ ಮ್ಯಾಪ್‌ ಇಂಡಿಯಾ ಹಾಗೂ ಉತ್ತರ ಪ್ರದೇಶದ ಲೋಕೋಪಯೋಗಿ ಇಲಾಖೆಯ ಎಂಜಿನಿಯರ್ಗಳ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಎಂದು ಬದೌನ್ ಪೊಲೀಸರು ತಿಳಿಸಿದ್ದಾರೆ.

ಗೂಗಲ್‌ ಮ್ಯಾಪ್‌ ನೆರವಿನಿಂದ ಕಾರು ಚಲಾಯಿಸಿ ಸೇತುವೆಯಿಂದ ಬಿದ್ದು 3 ಮಂದಿ ಮೃತ್ಯು..! Read More »

ಕ್ರೈಮ್ ನ್ಯೂಸ್

ಮದುವೆ ಮಂಟಪದಿಂದ ಫೋಟೊಗ್ರಾಫರ್ ಕಿಡ್ನ್ಯಾಪ್ ಮಾಡಿ ಹಲ್ಲೆ: 8 ಮಂದಿ ಅರೆಸ್ಟ್

(ನ್ಯೂಸ್ ಕಡಬ) newskadaba.com ಬೆಳಗಾವಿ, ನ. 26. ಮದುವೆ ಮಂಟಪದಿಂದ ಫೋಟೊಗ್ರಾಫರ್ ಕಿಡ್ನ್ಯಾಪ್ ಮಾಡಿ ಮಾರಣಾಂತಿಕ ಹಲ್ಲೆ ನಡೆಸಿದ ಪ್ರಕರಣದಲ್ಲಿ 8 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಬೆಳಗಾವಿಯ ಕೆಪಿಟಿಸಿಎಲ್ ಕಲ್ಯಾಣ ಮಂಟಪದಲ್ಲಿ ಘಟನೆ ನಡೆದಿದ್ದು, ಕಲ್ಯಾಣ ಮಂಟಪದಿಂದ ಫೋಟೊಗ್ರಾಫರ್ ಕಿಡ್ನ್ಯಾಪ್ ಮಾಡಿಕೊಂಡು ಹೋಗುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಫೋಟೋಗ್ರಾಫರ್ ಉಮೇಶ್ ಹೊಸೂರು ಅಪಹರಣವಾಗಿ ಹಲ್ಲೆಗೊಳಗಾಗಿ ವ್ಯಕ್ತಿ. ಇವರು ಬೈಲಹೊಂಗಲ ಪಟ್ಟಣದಲ್ಲಿ ನೆಲೆಸಿದ್ದಾರೆ. ನಾಲ್ಕು ದಿನಗಳ ಹಿಂದೆ ಮದುವೆ ಆರ್ಡರ್ ಅಂತಾ ಬೆಳಗಾವಿ ನಗರಕ್ಕೆ ಬಂದಿದ್ದರು. ಈ

ಮದುವೆ ಮಂಟಪದಿಂದ ಫೋಟೊಗ್ರಾಫರ್ ಕಿಡ್ನ್ಯಾಪ್ ಮಾಡಿ ಹಲ್ಲೆ: 8 ಮಂದಿ ಅರೆಸ್ಟ್ Read More »

ಕ್ರೈಮ್ ನ್ಯೂಸ್

ಕೊಲ್ಲೂರು ಮೂಕಾಂಬಿಕೆ ಸನ್ನಿಧಿಯ ದರ್ಶನ ಪಡೆದ ನಟ ಸೂರ್ಯ, ಜ್ಯೋತಿಕಾ ದಂಪತಿ

(ನ್ಯೂಸ್ ಕಡಬ) newskadaba.com ಉಡುಪಿ, ನ. 26. ಕೊಲ್ಲೂರು ಮೂಕಾಂಬಿಕೆ ಸನ್ನಿಧಿಗೆ ಕಾಲಿವುಡ್ ಕ್ಯೂಟ್ ಜೋಡಿ ಸೂರ್ಯ ಹಾಗೂ ಜ್ಯೋತಿಕಾ ಆಗಮಿಸಿದ್ದಾರೆ. ತಮಿಳು ಸಿನಿಕ್ಷೇತ್ರದಲ್ಲಿ ಸಾಕಷ್ಟು ಹೆಸರು ಮಾಡಿರೋ ಸೂರ್ಯ ಹಾಗೂ ಜ್ಯೋತಿಕಾ ಉಡುಪಿ ಜಿಲ್ಲೆ ಬೈಂದೂರಿನ ಕೊಲ್ಲೂರಿಗೆ ಭೇಟಿ ಕೊಟ್ಟಿದ್ದಾರೆ. ದೇಗುಲದಲ್ಲಿ ನಡೆಸುವ ವಿಶೇಷ ಚಂಡಿಕಾಯಾಗದಲ್ಲಿ ಭಾಗಿಯಾಗಿ, ದೇವರ ದರ್ಶನ ಪಡೆದರು. ಶಕ್ತಿ ದೇವತೆ ಮೂಕಾಂಬಿಕೆಗೆ ವಿಶೇಷ ಸೇವೆ ಸಲ್ಲಿಕೆ ಮಾಡಿ ತೆರಳಿದ್ದಾರೆ. ಈ ವೇಳೆ, ನೆಚ್ಚಿನ ಜೋಡಿ ಸೂರ್ಯ ದಂಪತಿ ಜೊತೆ ಫೋಟೋ ಕ್ಲಿಕ್ಕಿಸಿಕೊಳ್ಳಲು

ಕೊಲ್ಲೂರು ಮೂಕಾಂಬಿಕೆ ಸನ್ನಿಧಿಯ ದರ್ಶನ ಪಡೆದ ನಟ ಸೂರ್ಯ, ಜ್ಯೋತಿಕಾ ದಂಪತಿ Read More »

ಕರಾವಳಿ

6 ಜನರಿದ್ದ ವಿಮಾನ ಕೋಸ್ಟರಿಕಾ ರಾಜಧಾನಿಯ ಆಗ್ನೇಯಕ್ಕೆ ಅಪಘಾತ

(ನ್ಯೂಸ್ ಕಡಬ) newskadaba.com ಕೋಸ್ಟರಿಕಾ, ನ. 26. ಆರು ಜನರನ್ನು ಹೊತ್ತೊಯ್ಯುತ್ತಿದ್ದ ಸಣ್ಣ ವಿಮಾನವು ಸೋಮವಾರ ಕೋಸ್ಟರಿಕಾದ ರಾಜಧಾನಿಯ ಆಗ್ನೇಯಕ್ಕೆ ಅಪಘಾತಕ್ಕೀಡಾಯಿತು, ಆದರೆ ವಿಮಾನದಲ್ಲಿದ್ದ ಪ್ರಯಾಣಿಕರ ಬಗ್ಗೆ ಗುರುತು ಪತ್ತೆಯಾಗಿಲ್ಲ. ಹುಡುಕಾಟ ಮತ್ತು ರಕ್ಷಣಾ ಅಧಿಕಾರಿಗಳು ಪರ್ವತದ ಮೇಲೆ ಅವಶೇಷಗಳನ್ನು ಪತ್ತೆ ಮಾಡಿದ್ದಾರೆ, ಆದರೆ ಪ್ರಯಾಣಿಕರ ಸ್ಥಿತಿ ಅಥವಾ ಅವರ ಗುರುತುಗಳ ಬಗ್ಗೆ ವಿವರಗಳನ್ನು ಇನ್ನೂ ಮಾಹಿತಿ ತಿಳಿದು ಬಂದಿಲ್ಲ. ಕೋಸ್ಟರಿಕಾದ ಉತ್ತರ ಕೆರಿಬಿಯನ್ ಕರಾವಳಿಯಲ್ಲಿರುವ ಟೋರ್ಟುಗುರೊದಿಂದ ವಿಮಾನವು ಹೊರಟು ಸ್ಯಾನ್ ಜೋಸ್‌ಗೆ ತೆರಳುತ್ತಿತ್ತು. ಮಧ್ಯಾಹ್ನ 3

6 ಜನರಿದ್ದ ವಿಮಾನ ಕೋಸ್ಟರಿಕಾ ರಾಜಧಾನಿಯ ಆಗ್ನೇಯಕ್ಕೆ ಅಪಘಾತ Read More »

ಅಂತರ್ರಾಷ್ಟ್ರೀಯ ನ್ಯೂಸ್, ಕ್ರೈಮ್ ನ್ಯೂಸ್
Scroll to Top