News Kadaba

ಜಾನುವಾರುಗಳಿಗೆ ಮೇವು ತರಲೆಂದು ತೆರಳಿದ್ದ ಮಹಿಳೆಯ ಮೃತದೇಹ ಪತ್ತೆ..!

(ನ್ಯೂಸ್ ಕಡಬ) newskadaba.com ಮಣಿಪಾಲ, ನ. 30. ಜಾನುವಾರುಗಳಿಗೆ ಮೇವು ತರಲೆಂದು ಮನೆಯ ಪಕ್ಕದ ಗುಡ್ಡಕ್ಕೆ ತೆರಳಿದ್ದ ಮಹಿಳೆಯೊಬ್ಬರ ಮೃತದೇಹ ಅನುಮಾನಾಸ್ಪದ ರೀತಿಯಲ್ಲಿ ನ.29ರಂದು ಪತ್ತೆಯಾಗಿದೆ. ಮೃತ ದುರ್ದೈವಿಯನ್ನು ಸರಳೇಬೆಟ್ಟು ವಾರ್ಡ್ನ ನೆಹರೂ ನಗರದ ನಿವಾಸಿ ಪುಷ್ಪಾ ನಾಯ್ಕ್ (66) ಎಂದು ಗುರುತಿಸಲಾಗಿದೆ. ಪುಷ್ಪಾ ಅವರು ದನಕರುಗಳಿಗೆ ಹುಲ್ಲು ತರಲೆಂದು ಮನೆಯ ಪಕ್ಕದ ಗುಡ್ಡದ ಕಡೆಗೆ ನ. 28ರಂದು ಸುಮಾರು ಸಂಜೆ ೬ ಗಂಟೆ ವೇಳೆಗೆ ತೆರಳಿದವರು, ಬಳಿಕ ವಾಪಸ್ ಮನೆಗೆ ಹಿಂದಿರುಗಿರಲಿಲ್ಲ. ಆತಂಕಗೊಂಡ ಮನೆಯವರು ಅವರಿಗಾಗಿ […]

ಜಾನುವಾರುಗಳಿಗೆ ಮೇವು ತರಲೆಂದು ತೆರಳಿದ್ದ ಮಹಿಳೆಯ ಮೃತದೇಹ ಪತ್ತೆ..! Read More »

ಕ್ರೈಮ್ ನ್ಯೂಸ್

ಮಂಗಳೂರು: AI- ಬಳಸಿ ಸ್ಪ್ಯಾಮ್‌ ಕರೆಗಳಿಗೆ ಕಡಿವಾಣ ಹಾಕಿದ ಏರ್‌ಟೆಲ್‌ ನೆಟ್‌ವರ್ಕ್‌

(ನ್ಯೂಸ್ ಕಡಬ) newskadaba.com ಮಂಗಳೂರು, ನ. 30. ಭಾರ್ತಿ ಏರ್‌ಟೆಲ್‌ನ ಹೊಸ AI ಚಾಲಿತ ಸ್ಪ್ಯಾಮ್ ಪತ್ತೆ ಮಾಡುವ ವ್ಯವಸ್ಥೆಯು ಕರ್ನಾಟಕದ ಗ್ರಾಹಕರಿಗೆ ಹೆಚ್ಚು ಅಗತ್ಯವಿರುವ ಪರಿಹಾರವನ್ನು ಒದಗಿಸಿದೆ. ಪ್ರಾರಂಭವಾದ 63 ದಿನಗಳಲ್ಲಿ, ಈ ಪ್ರವರ್ತಕ ಟೆಲಿಕಾಂ ಪರಿಹಾರವು ಕರ್ನಾಟಕದಲ್ಲಿ 682 ಮಿಲಿಯನ್ ಸಂಭಾವ್ಯ ಸ್ಪ್ಯಾಮ್ ಕರೆಗಳು ಮತ್ತು 46 ಮಿಲಿಯನ್ ಸ್ಪ್ಯಾಮ್ SMS ಸಂದೇಶಗಳನ್ನು ಯಶಸ್ವಿಯಾಗಿ ಗುರುತಿಸಿದೆ. ಕರ್ನಾಟಕದಲ್ಲಿನ ಎಲ್ಲಾ ಏರ್‌ಟೆಲ್ ಮೊಬೈಲ್ ಗ್ರಾಹಕರು ಈಗ ಸೇವೆಯನ್ನು ವಿನಂತಿಸುವ ಅಥವಾ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳದೆಯೇ ಉಚಿತ

ಮಂಗಳೂರು: AI- ಬಳಸಿ ಸ್ಪ್ಯಾಮ್‌ ಕರೆಗಳಿಗೆ ಕಡಿವಾಣ ಹಾಕಿದ ಏರ್‌ಟೆಲ್‌ ನೆಟ್‌ವರ್ಕ್‌ Read More »

ಕರಾವಳಿ

ಕಡಬ: ಚಾರ್ವಾಕದ ಕುಮಾರಧಾರ ನದಿಯಲ್ಲಿ ಅಕ್ರಮ ಮರಳುಗಾರಿಕೆ- ಗ್ರಾಮಸ್ಥರ ಆಕ್ರೋಶ

(ನ್ಯೂಸ್ ಕಡಬ) newskadaba.com ಕಡಬ, ನ. 30. ಚಾರ್ವಾಕ ಗ್ರಾಮದ ಕುಮಾರಧಾರ ನದಿಯಲ್ಲಿ ನಡೆಯುವ ಮರಳುಗಾರಿಕೆ ವಿರುದ್ಧ ಗ್ರಾಮಸ್ಥರು ಸಿಡಿದೆದ್ದಿದ್ದು, ಇದೀಗ ಬೋಟ್ ಕಟ್ಟಿ ಹಾಕಿದವರ ವಿರುದ್ದ ಕೇಸು ದಾಖಲಿಸುವ ಬಗ್ಗೆ ಬಂದ ಸುದ್ದಿಯ ಹಿನ್ನೆಲೆ ಶುಕ್ರವಾರ ಸಂಜೆ ಕಡಬ ಠಾಣೆಗೆ ಗ್ರಾಮಸ್ಥರು ಆಗಮಿಸಿದ ಘಟನೆ ನಡೆದಿದೆ. ಚಾರ್ವಾಕ ಕುಂಬ್ಲಾಡಿ ಕುಕ್ಕೆನಾಥ ಬಾಲಸುಬ್ರಹ್ಮಣ್ಯ ದೇವಸ್ಥಾನದ ಪ್ರಮುಖರು ಊರವರು ಸೇರಿ ಚಾರ್ವಾಕ ಗ್ರಾಮದ ಭಾಗದಲ್ಲಿ ಮರಳುಗಾರಿಕೆಗೆ ತೀವ್ರ ವಿರೋಧ ವ್ಯಕ್ತಪಡಿಸಿದಲ್ಲದೆ, ನಿರ್ಣಯವನ್ನೂ ಮಾಡಿದ್ದರು. ಎರಡು ದಿನದ ಹಿಂದೆ ಚಾರ್ವಾಕ

ಕಡಬ: ಚಾರ್ವಾಕದ ಕುಮಾರಧಾರ ನದಿಯಲ್ಲಿ ಅಕ್ರಮ ಮರಳುಗಾರಿಕೆ- ಗ್ರಾಮಸ್ಥರ ಆಕ್ರೋಶ Read More »

ಕರಾವಳಿ

ಅಗ್ನಿ ಅವಘಡ: 200ಕ್ಕೂ ಹೆಚ್ಚು ವಾಹನಗಳು ಬೆಂಕಿಗಾಹುತಿ

(ನ್ಯೂಸ್ ಕಡಬ) newskadaba.com ವಾರಣಾಸಿ, ನ. 30. ಶನಿವಾರ ಮುಂಜಾನೆ ಸಂಭವಿಸಿದ ಭಾರಿ ಅಗ್ನಿ ಅನಾಹುತದಲ್ಲಿ 200ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳು ಸುಟ್ಟು ಕರಕಲಾಗಿರುವ ಘಟನೆ ಉತ್ತರ ಪ್ರದೇಶದ ವಾರಣಾಸಿಯ ಕ್ಯಾಂಟ್ ರೈಲ್ವೆ ನಿಲ್ದಾಣದ ವಾಹನ ನಿಲುಗಡೆ ಪ್ರದೇಶದಲ್ಲಿ ನಡೆದಿದೆ. ವಾಹನ ನಿಲುಗಡೆ ಪ್ರದೇಶದಲ್ಲಿ ಭಾರಿ ಪ್ರಮಾಣದ ಬೆಂಕಿಯ ಜ್ವಾಲೆಗಳು ಆವರಿಸಿದ್ದು, ಬೆಂಕಿಯನ್ನು ನಂದಿಸುವ ಕೆಲಸದಲ್ಲಿ ಅಗ್ನಿಶಾಮಕ ದಳ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳು ನಿರತರಾಗಿರುವುದನ್ನು ದೃಶ್ಯಾವಳಿಗಳಲ್ಲಿ ಕಂಡುಬಂದಿದೆ. ಬೆಂಕಿಯ ಜ್ವಾಲೆಗಳಿಂದ ಸ್ಥಳದಲ್ಲಿ ಹೊಗೆ ಮತ್ತು ಮಬ್ಬು

ಅಗ್ನಿ ಅವಘಡ: 200ಕ್ಕೂ ಹೆಚ್ಚು ವಾಹನಗಳು ಬೆಂಕಿಗಾಹುತಿ Read More »

ಕ್ರೈಮ್ ನ್ಯೂಸ್

ಹಂದಿ ಫಾರಂನ ಮಾಲಿನ್ಯ ಹೊಂಡಕ್ಕೆ ಬಿದ್ದು ಕಾರ್ಮಿಕ ಮೃತ್ಯು..!

(ನ್ಯೂಸ್ ಕಡಬ) newskadaba.com ಕಾಸರಗೋಡು, ನ. 30. ಹಂದಿ ಫಾರಂನ ಮಾಲಿನ್ಯ ಹೊಂಡಕ್ಕೆ ಬಿದ್ದು ಕಾರ್ಮಿಕ ಮೃತಪಟ್ಟ ದಾರುಣ ಘಟನೆ ಶುಕ್ರವಾರ ಸಂಜೆ ನಗರ ಹೊರ ವಲಯದ ಚೌಕಿ ಪಾಯಿಚ್ಚಾಲ್ ನಲ್ಲಿ ನಡೆದಿದೆ. ಮೃತಪಟ್ಟವರನ್ನು ನೇಪಾಳ ನಿವಾಸಿ ಮಹೇಶ್ (19) ಎಂದು ಗುರುತಿಸಲಾಗಿದೆ. ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಮಕ ದಳದ ಸಿಬ್ಬಂದಿ, ಪೊಲೀಸರು ಮಹೇಶ್ ನನ್ನು ಮೇಲಕ್ಕೆತ್ತಿದರೂ ಜೀವ ಉಳಿಸಲಾಗಲಿಲ್ಲ. ಮೃತ ದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಯ ಶವಗಾರದಲ್ಲಿರಿಸಲಾಗಿದೆ. ಮಹೇಶ್ ಶುಕ್ರವಾರವಷ್ಟೇ ಕೆಲಸಕ್ಕೆ ಸೇರಿಕೊಂಡಿದ್ದರು

ಹಂದಿ ಫಾರಂನ ಮಾಲಿನ್ಯ ಹೊಂಡಕ್ಕೆ ಬಿದ್ದು ಕಾರ್ಮಿಕ ಮೃತ್ಯು..! Read More »

ಕ್ರೈಮ್ ನ್ಯೂಸ್

ಶಬರಿಮಲೆ ಯಾತ್ರೆ ವೇಳೆ ರೈಲಿನಲ್ಲಿ ಕರ್ಪೂರ ಹಚ್ಚದಂತೆ ದಕ್ಷಿಣ ರೈಲ್ವೆ ಎಚ್ಚರಿಕೆ

(ನ್ಯೂಸ್ ಕಡಬ) newskadaba.com ತಮಿಳುನಾಡು, ನ. 30. ಶಬರಿಮಲೆ ಯಾತ್ರೆ ಋತು ಆರಂಭವಾಗಿದ್ದು, ವಿವಿಧ ರಾಜ್ಯಗಳಿಂದ ಭಕ್ತರು ಅಯ್ಯಪ್ಪನ ದರ್ಶನಕ್ಕೆ ತೆರಳುತ್ತಿದ್ದಾರೆ. ಪ್ರತಿವರ್ಷದಂತೆ ಈ ಬಾರಿಯೂ ಅಧಿಕ ಸಂಖ್ಯೆಯಲ್ಲಿ ಭಕ್ತರ ಆಗಮನ ನಿರೀಕ್ಷೆ ಇರುವುದರಿಂದ ಸುರಕ್ಷತಾ ಕ್ರಮಗಳನ್ನು ಜಾರಿಗೊಳಿಸಲಾಗುತ್ತಿದೆ. ಇದೀಗ ರೈಲಿನಲ್ಲಿ ಶಬರಿಮಲೆಗೆ ತೆರಳುವ ಭಕ್ತರಿಗೆ ದಕ್ಷಿಣ ರೈಲ್ವೆ ಚೆನ್ನೈ ವಿಭಾಗ ಸೂಚನೆಯೊಂದನ್ನು ರವಾನಿಸಿದೆ. ನಿಯಮ ಮೀರಿದರೆ ದಂಡ ಅಥವಾ ಜೈಲು ಶಿಕ್ಷೆಯ ಎಚ್ಚರಿಕೆಯನ್ನೂ ನೀಡಿದೆ. ದಕ್ಷಿಣ ರೈಲ್ವೆಯ ಚೆನ್ನೈ ವಿಭಾಗವು ಶಬರಿಮಲೆ ಯಾತ್ರೆ ಸಂದರ್ಭದಲ್ಲಿ ಭಕ್ತರು

ಶಬರಿಮಲೆ ಯಾತ್ರೆ ವೇಳೆ ರೈಲಿನಲ್ಲಿ ಕರ್ಪೂರ ಹಚ್ಚದಂತೆ ದಕ್ಷಿಣ ರೈಲ್ವೆ ಎಚ್ಚರಿಕೆ Read More »

ಕರ್ನಾಟಕ

ವಾಯುಭಾರ ಕುಸಿತ: ಕರಾವಳಿಯಲ್ಲಿ ಚಳಿಯ ಹೆಚ್ಚಳ ಸಾಧ್ಯತೆ ಹವಾಮಾನ ಇಲಾಖೆ ಮುನ್ಸೂಚನೆ

(ನ್ಯೂಸ್ ಕಡಬ) newskadaba.com ಮಂಗಳೂರು, ನ. 30. ಬಂಗಾಳಕೊಲ್ಲಿಯಲ್ಲಿ ಕಾಣಿಸಿಕೊಂಡಿರುವ ವಾಯುಭಾರ ಕುಸಿತದ ಹಿನ್ನೆಲೆಯಲ್ಲಿ ಕರಾವಳಿಯ ಗ್ರಾಮೀಣ ಭಾಗದಲ್ಲಿ ಗುರುವಾರ ರಾತ್ರಿ ಹೆಚ್ಚು ಚಳಿಯ ಅನುಭವವಾಗಿದ್ದು, ಮುಂದಿನ ಒಂದು ವಾರಕ್ಕೂ ಅಧಿಕ ಕಾಲ ಚಳಿಯ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದ ಕಾರಣ ದಕ್ಷಿಣ ಒಳನಾಡು ಮತ್ತು ಕರಾವಳಿಯಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದ ಕಾರಣ ದಕ್ಷಿಣ

ವಾಯುಭಾರ ಕುಸಿತ: ಕರಾವಳಿಯಲ್ಲಿ ಚಳಿಯ ಹೆಚ್ಚಳ ಸಾಧ್ಯತೆ ಹವಾಮಾನ ಇಲಾಖೆ ಮುನ್ಸೂಚನೆ Read More »

ಕರಾವಳಿ

‘ಸರ್ಕಾರ ಗ್ಯಾರಂಟಿ ಯೋಜನೆಗಾಗಿ ವಿಕಲಚೇತನರಿಗೆ ನೀಡಿದ್ದ ಅನುದಾನ ಕಡಿತ’- ಸಚಿವ ಪ್ರಹ್ಲಾದ್‌ ಜೋಶಿ ಆಕ್ರೋಶ

(ನ್ಯೂಸ್ ಕಡಬ) newskadaba.com ಬೆಂಗಳೂರು, ನ. 30. ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸುವ ಭರದಲ್ಲಿ ರಾಜ್ಯ ಸರ್ಕಾರ ವಿಕಲಚೇತನರಿಗೆ ಅನುದಾನ ಕಡಿತ ಮಾಡಿದ ಆರೋಪಕ್ಕೆ ಒಳಗಾಗಿದೆ. ಈ ವಿಚಾರವಾಗಿ ಕೇಂದ್ರ ಸಚಿವರಾದ ಪ್ರಹ್ಲಾದ್‌ ಜೋಶಿ ಎಕ್ಸ್‌ನಲ್ಲಿ ಆಕ್ರೋಶ ಹೊರಹಾಕಿದ್ದಾರೆ. ಕಳೆದ ವರ್ಷ ಸರ್ಕಾರ ವಿಕಲಚೇನರ ವಿವಿಧ ಯೋಜನೆಗಳಿಗೆ 53 ಕೋಟಿ ರೂ. ಅನುದಾನ ಮೀಸಲು ಇಡಲಾಗಿತ್ತು. ಆದರೆ ಪ್ರಸಕ್ತ ಹಣಕಾಸು ವರ್ಷದಲ್ಲಿ ಬರೀ 10 ಕೋಟಿ ರೂ. ಅನುದಾನ ಮಾತ್ರ ಹಂಚಿಕೆ ಮಾಡಲಾಗಿದೆ. ಇದು ನಿಜಕ್ಕೂ ದುರದೃಷ್ಟಕರ.

‘ಸರ್ಕಾರ ಗ್ಯಾರಂಟಿ ಯೋಜನೆಗಾಗಿ ವಿಕಲಚೇತನರಿಗೆ ನೀಡಿದ್ದ ಅನುದಾನ ಕಡಿತ’- ಸಚಿವ ಪ್ರಹ್ಲಾದ್‌ ಜೋಶಿ ಆಕ್ರೋಶ Read More »

ಕರ್ನಾಟಕ

ಮೋದಿ ಸರ್ಕಾರದ ಕೆಲಸಕಾರ್ಯಗಳನ್ನು ಶ್ಲಾಘಿಸಿದ ಜಾಗತಿಕ ಹೂಡಿಕೆದಾರ ಜಿಮ್ ರೋಜರ್ಸ್

(ನ್ಯೂಸ್ ಕಡಬ) newskadaba.com ನ. 29.ನವದೆಹಲಿ:  ಅಮೆರಿಕ ಮೂಲದ ಹಿರಿಯ ಜಾಗತಿಕ ಹೂಡಿಕೆದಾರ ಜಿಮ್ ರೋಜರ್ಸ್ ಅವರು ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಭಾರತದ ಆರ್ಥಿಕ ಪಥದ ಬಗ್ಗೆ ಆಶಾವಾದ ವ್ಯಕ್ತಪಡಿಸಿದ್ದಾರೆ. ಸಂದರ್ಶನವೊಂದರಲ್ಲಿ, ರೋಜರ್ಸ್ ಕಳೆದ ದಶಕದಲ್ಲಿ ಸರ್ಕಾರದ ಪ್ರಯತ್ನಗಳನ್ನು ಶ್ಲಾಘಿಸಿದ್ದರು. ಹಲವು ದಶಕಗಳ ಕಾಲ ಭಾರತದಲ್ಲಿರುವ ಸರ್ಕಾರಗಳು ಸಾಕಷ್ಟು ಒಳ್ಳೆಯ ವಿಚಾರಗಳನ್ನು ಮಾತನಾಡಿವೆ. ಆದರೆ, ಕಾರ್ಯರೂಪಕ್ಕೆ ಬರಲೇ ಇಲ್ಲ. ಈಗಿರುವ ಸರ್ಕಾರ ಬಂದ ಬಳಿಕ ಸಾಕಷ್ಟು ಬದಲಾವಣೆ ಆಗಿರುವುದು ಗಮನಕ್ಕೆ ಬಂದಿದೆ’ ಎಂದು ಜಿಮ್ ರೋಜರ್ಸ್

ಮೋದಿ ಸರ್ಕಾರದ ಕೆಲಸಕಾರ್ಯಗಳನ್ನು ಶ್ಲಾಘಿಸಿದ ಜಾಗತಿಕ ಹೂಡಿಕೆದಾರ ಜಿಮ್ ರೋಜರ್ಸ್ Read More »

ರಾಷ್ಟ್ರೀಯ ನ್ಯೂಸ್

‘ಬಿಎಸ್ ವೈ ವಿರುದ್ಧ ತನಿಖೆ ಮಾಡಬೇಕು ಎನ್ನುವುದು ದ್ವೇಷದ ರಾಜಕಾರಣ’- ಅಶ್ವಥ್ ನಾರಾಯಣ್

(ನ್ಯೂಸ್ ಕಡಬ) newskadaba.com ನ. 29. ಬೆಂಗಳೂರು:  ಯಡಿಯೂರಪ್ಪನವರ ಮೇಲೆ ಸಚಿವ ಸಂಪುಟ ಸಭೆಯಲ್ಲಿ ತನಿಖೆ ಆಗಬೇಕು ಎಂಬ ಪ್ರಯತ್ನ ಮಾಡಿರುವುದು ಖಂಡನೀಯ. ಅಲ್ಲದೇ ತನಿಖೆ ಮಾಡಬೇಕು ಎನ್ನುವುದು ದ್ವೇಷದ ರಾಜಕಾರಣ ಎಂದು ಮಾಜಿ ಡಿಸಿಎಂ ಅಶ್ವಥ್ ನಾರಾಯಣ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಾಜಿ ಸಿಎಂ ಯಡಿಯೂರಪ್ಪ ವಿರುದ್ಧ ಪ್ರಾಸಿಕ್ಯೂಷನ್ ಅನುಮತಿ ಕೋರಲು ರಾಜ್ಯಪಾಲರಿಗೆ ಶಿಫಾರಸು ಮಾಡಲು ಕ್ಯಾಬಿನೆಟ್ ತೆಗೆದುಕೊಂಡ ನಿರ್ಧಾರ ಖಂಡನೀಯ. ದ್ವೇಷದ ರಾಜಕೀಯ ಕೈಬಿಟ್ಟು ನಿಮ್ಮ ಆಡಳಿತ ಹೇಗೆ ಉತ್ತಮ ಮಾಡುವುದು

‘ಬಿಎಸ್ ವೈ ವಿರುದ್ಧ ತನಿಖೆ ಮಾಡಬೇಕು ಎನ್ನುವುದು ದ್ವೇಷದ ರಾಜಕಾರಣ’- ಅಶ್ವಥ್ ನಾರಾಯಣ್ Read More »

ಕರ್ನಾಟಕ
Scroll to Top