News Kadaba

ಇಂಡಿಯಾ ಸಿಮೆಂಟ್ಸ್‌ನ ಸಿಇಒ ಸ್ಥಾನಕ್ಕೆ ಎನ್. ಶ್ರೀನಿವಾಸನ್ ರಾಜೀನಾಮೆ

(ನ್ಯೂಸ್ ಕಡಬ) newskadaba.com ಡಿ. 26: ಭಾರತೀಯ ಸ್ಪರ್ಧಾತ್ಮಕ ಆಯೋಗ (ಸಿಸಿಐ) 7,000 ಕೋಟಿ ರೂಪಾಯಿಗಳ ಒಪ್ಪಂದಕ್ಕೆ ಅನುಮೋದನೆ ನೀಡಿದ ನಂತರ ಎನ್. ಶ್ರೀನಿವಾಸನ್ ಬುಧವಾರ ಇಂಡಿಯಾ ಸಿಮೆಂಟ್ಸ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಸ್ಥಾನಕ್ಕೆ ರಾಜೀನಾಮೆ ನೀಡಿದರು. ಈ ಒಪ್ಪಂದವು ಬಿಲಿಯನೇರ್ ಕುಮಾರ್ ಮಂಗಳಂ ಬಿರ್ಲಾ ಅವರಿಂದ ಪ್ರಚಾರಗೊಂಡ ಅಲ್ಟ್ರಾಟೆಕ್ ಸಿಮೆಂಟ್ ಕಂಪನಿಯು ಇಂಡಿಯಾ ಸಿಮೆಂಟ್ಸ್ ಲಿಮಿಟೆಡ್ (ಐಸಿಎಲ್) ನಲ್ಲಿ ಹೆಚ್ಚಿನ ಪಾಲನ್ನು ಸ್ವಾಧೀನಪಡಿಸಿಕೊಂಡಿದೆ. ನಿಯಂತ್ರಕ ಫೈಲಿಂಗ್‌ನಲ್ಲಿ, ವಹಿವಾಟು ಪೂರ್ಣಗೊಂಡ ನಂತರ ಶ್ರೀನಿವಾಸನ್ ಉಪಾಧ್ಯಕ್ಷ ಮತ್ತು […]

ಇಂಡಿಯಾ ಸಿಮೆಂಟ್ಸ್‌ನ ಸಿಇಒ ಸ್ಥಾನಕ್ಕೆ ಎನ್. ಶ್ರೀನಿವಾಸನ್ ರಾಜೀನಾಮೆ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಮಲಯಾಳಂ ಸಾಹಿತಿ ಎಂ ಟಿ ವಾಸುದೇವನ್ ನಾಯರ್ ನಿಧನ

(ನ್ಯೂಸ್ ಕಡಬ) newskadaba.com ಡಿ. 26 ಕೋಝಿಕ್ಕೋಡ್: ಖ್ಯಾತ ಮಲಯಾಳಂ ಸಾಹಿತಿ ಹಾಗೂ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಎಂ ಟಿ ವಾಸುದೇವನ್ ನಾಯರ್ ರವರು ಬುಧವಾರ ನಿಧನರಾಗಿದ್ದಾರೆ. ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಅವರು ಕೋಝಿಕ್ಕೋಡ್ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದರು. ಹೃದ್ರೋಗ ಮತ್ತು ಉಸಿರಾಟದ ತೊಂದರೆಯಿಂದ 11 ದಿನಗಳ ಕಾಲ ಆಸ್ಪತ್ರೆಯಲ್ಲಿ  ಚಿಕಿತ್ಸೆ ಪಡೆಯುತ್ತಿದ್ದ ಅವರ ಆರೋಗ್ಯ ಸ್ಥಿತಿ ತೀರಾ ಹದಗೆಟ್ಟಿತ್ತು. ಅವರ ಚಿಕಿತ್ಸೆಗಾಗಿ ವಿಶೇಷ ವೈದ್ಯಕೀಯ ತಂಡವನ್ನೂ ರಚಿಸಲಾಗಿತ್ತು. ಆದರೆ ನಿನ್ನೆ ರಾತ್ರಿ ಮೂತ್ರಪಿಂಡ ಮತ್ತು

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಮಲಯಾಳಂ ಸಾಹಿತಿ ಎಂ ಟಿ ವಾಸುದೇವನ್ ನಾಯರ್ ನಿಧನ Read More »

ಬ್ರೇಕಿಂಗ್ ನ್ಯೂಸ್

ಎರಡನೇ ದಿನವೂ ಏರಿಕೆ ಕಂಡ ಚಿನ್ನದ ಬೆಲೆ

(ನ್ಯೂಸ್ ಕಡಬ) newskadaba.com ಡಿ. 26 ಬೆಂಗಳೂರು: ಚಿನ್ನದ ದರ ಇಂದು ಕೊಂಚ ಏರಿಕೆ ಕಂಡಿದೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇಂದು 22 ಕ್ಯಾರಟ್‌ 1 ಗ್ರಾಂ ಚಿನ್ನದ ದರ ಮತ್ತು 24 ಕ್ಯಾರಟ್‌ 1 ಗ್ರಾಂ ಚಿನ್ನದ ದರ ತಲಾ 25 ರೂ. ಮತ್ತು 28ರೂ. ಏರಿಕೆ ಆಗಿದೆ. ಈ ಮೂಲಕ 22 ಕ್ಯಾರಟ್‌ 1 ಗ್ರಾಂ ಚಿನ್ನದ ದರ 7,125 ರೂ. ಮತ್ತು 24 ಕ್ಯಾರಟ್‌ 1 ಗ್ರಾಂ ಚಿನ್ನದ ದರ 7,773 ರೂ.ರಷ್ಟಿದೆ.

ಎರಡನೇ ದಿನವೂ ಏರಿಕೆ ಕಂಡ ಚಿನ್ನದ ಬೆಲೆ Read More »

ಕರ್ನಾಟಕ

ಶಾಸಕ ಮುನಿರತ್ನರ ಮೇಲೆ ಮೊಟ್ಟೆ ಎಸೆತ ಪ್ರಕರಣ; ಎಫ್ಐಆರ್ ದಾಖಲು

(ನ್ಯೂಸ್ ಕಡಬ) newskadaba.com ಡಿ. 26 ಬೆಂಗಳೂರು: ಬಿಜೆಪಿ ಶಾಸಕ ಮುನಿರತ್ನರ ಮೇಲೆ ಮೊಟ್ಟೆ ಎಸೆತ ಪ್ರಕರಣಕ್ಕೆ ಸಂಬಂಧಿಸಿದಂತೆ ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿದೆ. ಮುನಿರತ್ನ ದೂರು ಆಧರಿಸಿ ಎಫ್​ಐಆರ್ ದಾಖಲು ಮಾಡಲಾಗಿದೆ. ಒಳಸಂಚು ರೂಪಿಸಿ ಹಲ್ಲೆ ಮತ್ತು ಕೊಲೆಗೆ ಯತ್ನ ಎಂಬಂತೆ ಮುನಿರತ್ನ ದೂರಿನಲ್ಲಿ ಉಲ್ಲೇಖ ಮಾಡಿದ್ದಾರೆ. ಅದಲ್ಲದೇ, ಮೊಟ್ಟೆ ಎಸೆದವರು ಎಂಬ ಆರೋಪ ಹೊತ್ತವರಿಂದಲೂ ಪ್ರತಿದೂರು ದಾಖಲು ಮಾಡಲಾಗಿದೆ. ತಮ್ಮ ಮೇಲೆ ಗುಂಪು ಕಟ್ಟಿ ಹಲ್ಲೆ ಮಾಡಿದ್ದಾರೆ ಎಂದು ನಂದಿನಿ ಲೇಔಟ್

ಶಾಸಕ ಮುನಿರತ್ನರ ಮೇಲೆ ಮೊಟ್ಟೆ ಎಸೆತ ಪ್ರಕರಣ; ಎಫ್ಐಆರ್ ದಾಖಲು Read More »

ಕರ್ನಾಟಕ

ವಿಮಾನದ ಚಕ್ರದಲ್ಲಿ ವ್ಯಕ್ತಿಯ ಮೃತದೇಹ ಪತ್ತೆ

(ನ್ಯೂಸ್ ಕಡಬ) newskadaba.com ಡಿ. 26 ಚಿಕಾಗೋ: ಯುನೈಟೆಡ್ ಏರ್‌ಲೈನ್ಸ್ ಜೆಟ್‌ಲೈನರ್ ವಿಮಾನದ ಚಕ್ರದಲ್ಲಿ ಮೃತದೇಹ ಪತ್ತೆಯಾಗಿದ್ದು, ಮಂಗಳವಾರ ಮಧ್ಯಾಹ್ನ ಚಿಕಾಗೋ ಓ’ಹೇರ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಯುನೈಟೆಡ್ ಫ್ಲೈಟ್ 202 ಕಹುಲುಯಿ ವಿಮಾನ ನಿಲ್ದಾಣದಲ್ಲಿ ಇಳಿದಾಗ ವಿಮಾನದ ಲ್ಯಾಂಡಿಂಗ್ ಗೇರ್ ಹೊಂದಿರುವ ಕಂಪಾರ್ಟ್‌ಮೆಂಟ್‌ಗಳಲ್ಲಿ ಶವ ಪತ್ತೆಯಾಗಿದೆ ಎಂದು ಏರ್‌ಲೈನ್‌ನ ವೆಬ್‌ಸೈಟ್ ತಿಳಿಸಿದೆ.   ಮೃತ ವ್ಯಕ್ತಿಯ ಬಗ್ಗೆ ತನಿಖೆ ನಡೆಯುತ್ತಿದೆ. ವಿಮಾನ ನಿಲ್ದಾಣದಲ್ಲಿ ಕಾರ್ಯಾಚರಣೆಗಳು ಸಾಮಾನ್ಯವಾಗಿವೆ ಮತ್ತು ಘಟನೆಯಿಂದ ಏನೂ ಪರಿಣಾಮ ಬೀರಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಮಾನದ ಚಕ್ರದಲ್ಲಿ ವ್ಯಕ್ತಿಯ ಮೃತದೇಹ ಪತ್ತೆ Read More »

ಬ್ರೇಕಿಂಗ್ ನ್ಯೂಸ್

ಹಾವೇರಿಯಲ್ಲಿ ಭೀಕರ ಅಪಘಾತ: ಒಂದೇ ಕುಟುಂಬದ ನಾಲ್ವರ ಧಾರುಣ ಸಾವು

(ನ್ಯೂಸ್ ಕಡಬ) newskadaba.com ಡಿ. 25 ಹಾವೇರಿ: ರಾಜ್ಯದಲ್ಲಿ ಬುಧವಾರ ಮಧ್ಯಾಹ್ನ ಮತ್ತೊಂದು ಭೀಕರ ಅಪಘಾತ ಸಂಭವಿಸಿದ್ದು, ಬಾಲಕ ಸೇರಿದಂತೆ ಒಂದೇ ಕುಟುಂಬದ ನಾಲ್ವರು ಸಾವಿಗೀಡಾಗಿರುವ ಧಾರುಣ ಘಟನೆ ಶಿಗ್ಗಾಂವಿ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ಪೊಲೀಸರ ಪ್ರಕಾರ, ಹುಬ್ಬಳ್ಳಿ ಕಡೆಗೆ ಹೋಗುತ್ತಿದ್ದ ಎಸ್‌ಯುವಿ ನಿಯಂತ್ರಣ ತಪ್ಪಿ ರಸ್ತೆ ವಿಭಜಕವನ್ನು ಹಾರಿ ಹುಬ್ಬಳ್ಳಿಯಿಂದ ಬೆಂಗಳೂರು ಕಡೆಗೆ ಬರುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದು ತಿಮ್ಮಾಪುರ ಬಳಿಯಲ್ಲಿ ಅಪಘಾತ ಸಂಭವಿಸಿದೆ. ಡಿಕ್ಕಿಯ ರಭಸಕ್ಕೆ ಒಂದು ಕಾರಿನಲ್ಲಿದ್ದ ಇಬ್ಬರು ಸ್ಥಳದಲ್ಲೇ ಮೃತಪಟ್ಟರೆ, ಗಂಭೀರವಾಗಿ

ಹಾವೇರಿಯಲ್ಲಿ ಭೀಕರ ಅಪಘಾತ: ಒಂದೇ ಕುಟುಂಬದ ನಾಲ್ವರ ಧಾರುಣ ಸಾವು Read More »

ಕರ್ನಾಟಕ

ಕೆನ್-ಬೆಟ್ವಾ ನದಿ ಜೋಡಣೆ ಯೋಜನೆಗೆ ಪ್ರಧಾನಿ ಮೋದಿ ಚಾಲನೆ

(ನ್ಯೂಸ್ ಕಡಬ) newskadaba.com ಡಿ. 25ಮಧ್ಯಪ್ರದೇಶ: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ 100 ನೇ ಜನ್ಮದಿನದ ಸಂದರ್ಭದ ದಿನವಾದ ಮತ್ತು ಇಡೀ ವಿಶ್ವವೇ ಕ್ರಿಸ್‌ಮಸ್‌ ಆಚರಿಸುತ್ತಿರಯವ ಸುದಿನದಂದು ಬುಧವಾರ ಮಧ್ಯಪ್ರದೇಶದಲ್ಲಿ ಕೆನ್-ಬೆಟ್ವಾ ನದಿ ಜೋಡಣೆ ರಾಷ್ಟ್ರೀಯ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಶಂಕುಸ್ಥಾಪನೆ ಮಾಡಿದರು. ಕೆನ್-ಬೆಟ್ವಾ ನದಿಯನ್ನು ಸಂಪರ್ಕಿಸುವ ರಾಷ್ಟ್ರೀಯ ಯೋಜನೆಯು ರಾಷ್ಟ್ರೀಯ ದೃಷ್ಟಿಕೋನ ಯೋಜನೆಯಡಿಯಲ್ಲಿ ದೇಶದ ಮೊದಲ ನದಿಗಳನ್ನು ಜೋಡಿಸುವ ಯೋಜನೆಯಾಗಿದೆ. ಈ ಯೋಜನೆಯು ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶದ ವಿವಿಧ ಜಿಲ್ಲೆಗಳಿಗೆ ನೀರಾವರಿ

ಕೆನ್-ಬೆಟ್ವಾ ನದಿ ಜೋಡಣೆ ಯೋಜನೆಗೆ ಪ್ರಧಾನಿ ಮೋದಿ ಚಾಲನೆ Read More »

ರಾಷ್ಟ್ರೀಯ ನ್ಯೂಸ್

ನಕಲಿ ಚಿನ್ನ ಅಡವಿರಿಸಿ 2.11 ಕೋ.ರೂ. ಸಾಲ ಪಡೆದು ವಂಚನೆ

(ನ್ಯೂಸ್ ಕಡಬ) newskadaba.com ಡಿ. 25 ಮಂಗಳೂರು: ವ್ಯಕ್ತಿಯೋರ್ವ ನಕಲಿ ಚಿನ್ನ ಅಡವಿಟ್ಟು ಎರಡು ಕೋಟಿಗೂ ಅಧಿಕ ಹಣ ಸಾಲ ಪಡೆದು ವಂಚಿಸಿರುವ ಪ್ರಕರಣ ಮಂಗಳೂರಿನಲ್ಲಿ ನಡೆದಿದೆ.ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಈಶ್ವರ ಮಂಗಲ ಗ್ರಾಮದ ಅಬೂಬ್ಕರ್‌ ಸಿದ್ದಿಕ್‌ ಇಲ್ಲಿನ ಮಂಗಳೂರು ಸಮಾಜ ಸೇವಾ ಸಹಕಾರಿ ಸಂಘಕ್ಕೆ ವಂಚಿಸಿರುವ ಆರೋಪ ಕೇಳಿಬಂದಿದೆ. ಈತ 500 ನಕಲಿ ಚಿನ್ನದ ಬಳೆಗಳನ್ನು ಅಡವಿಟ್ಟು 2,11,89,800 ರೂ. ಸಾಲ ಪಡೆದು, ಮೋಸ ಮಾಡಿದ್ದಾನೆ. ಹೀಗಾಗಿ, ಸಿದ್ದಿಕ್‌, ಬ್ಯಾಂಕ್‌ ಆಡಳಿತ ಮಂಡಳಿ ಮತ್ತು

ನಕಲಿ ಚಿನ್ನ ಅಡವಿರಿಸಿ 2.11 ಕೋ.ರೂ. ಸಾಲ ಪಡೆದು ವಂಚನೆ Read More »

ಕರಾವಳಿ

ಕಾಸರಗೋಡು: ಸೂಪರ್ ಮಾರ್ಕೆಟ್‌ಗೆ ನುಗ್ಗಿದ ಕಾಡುಹಂದಿ

(ನ್ಯೂಸ್ ಕಡಬ) newskadaba.com ಡಿ. 25 ಕಾಸರಗೋಡು: ಕಾಡುಹಂದಿಯೊಂದು ಸೂಪರ್ ಮಾರ್ಕೆಟ್‌ಗೆ ನುಗ್ಗಿದ ಘಟನೆ ಕುಂಬಳೆಯಲ್ಲಿ ಮಂಗಳವಾರ ರಾತ್ರಿ ನಡೆದಿದೆ. ಕುಂಬಳೆ ಪೇಟೆಯಲ್ಲಿರುವ ಸೂಪರ್ ಪಾಯಿಂಟ್ ಹೈಪರ್ ಮಾರ್ಕೆಟ್ ನೊಳಗೆ ಮಂಗಳವಾರ ರಾತ್ರಿ 9 ಗಂಟೆಯ ವೇಳೆ ಕಾಡು ಹಂದಿ ಸೂಪರ್ ಮಾರ್ಕೆಟ್ ಗೆ ನುಗ್ಗಿದೆ. ಈ ವೇಳೆ ಬೆರಳೆಣಿಕೆಯ ಗ್ರಾಹಕರು ಹಾಗೂ ಸಿಬ್ಬಂದಿಗಳು ಮಾತ್ರ ಎನ್ನಲಾಗಿದೆ. ಅನಿರೀಕ್ಷಿತವಾಗಿ ಒಳಗೆ ಬಂದ ಹಂದಿಯನ್ನು ಕಂಡು ಗಲಿಬಿಲಿಗೊಂಡ ಸಿಬ್ಬಂದಿಗಳು ಹಾಗೂ ಇತರರು ಬೊಬ್ಬೆ ಹಾಕುವಷ್ಟರಲ್ಲಿ ಹಂದಿ ಹೊರಕ್ಕೆ ಓಡಿ

ಕಾಸರಗೋಡು: ಸೂಪರ್ ಮಾರ್ಕೆಟ್‌ಗೆ ನುಗ್ಗಿದ ಕಾಡುಹಂದಿ Read More »

ಕರಾವಳಿ

ಅಮಿತ್ ಶಾ ವಜಾಗೊಳಿಸುವಂತೆ ಆಗ್ರಹಿಸಿ ಬೃಹತ್ ಪ್ರತಿಭಟನೆ

(ನ್ಯೂಸ್ ಕಡಬ) newskadaba.com ಡಿ. 25  ಕಮಲನಗರ: ಕಮಲನಗರ ತಾಲ್ಲೂಕಿನ ದಾಬಕಾ ಗ್ರಾಮದಲ್ಲಿ ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ಅವರು ಡಾ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಬಗ್ಗೆ ಸಂಸತ್ ಕಲಾಪದಲ್ಲಿ ಅವಹೇಳನಕಾರಿ ಹೇಳಿಕೆ ನೀಡಿರುವ ಅದನ್ನು ಖಂಡಿಸಿ ದಾಬಕಾ ವಲಯ ಮಾದಿಗ ಸಮಾಜದಿಂದ ಬೃಹತ್ ಪ್ರತಿಭಟನೆ ನಡೆಸಿ ಕೂಡಲೇ ಅಮಿತ್ ಶಾ ಅವರನ್ನು ವಜಗೊಳಿಸುವಂತೆ ಗ್ರಾಮದ ಭವಾನಿ ಮಂದಿರದಿAದ ನಾಡ ಕಚೇರಿ ಅವರಿಗೆ ಬೃಹತ್ ಪ್ರತಿಭಟನ ಮೆರವಣಿಗೆ ಮೂಲಕ ದಾಬಕ ನಾಡ ತಸಿಲ್ದಾರ್ ಅವರ

ಅಮಿತ್ ಶಾ ವಜಾಗೊಳಿಸುವಂತೆ ಆಗ್ರಹಿಸಿ ಬೃಹತ್ ಪ್ರತಿಭಟನೆ Read More »

ಬ್ರೇಕಿಂಗ್ ನ್ಯೂಸ್
Scroll to Top