News Kadaba

ತಿರುಪತಿ ತಿಮ್ಮಪ್ಪನ ಕ್ಷೇತ್ರದಲ್ಲಿ ಮತ್ತೊಂದು ಅವಘಡ: ಲಡ್ಡು ಕೌಂಟರ್‌ಗಳಲ್ಲಿ ಬೆಂಕಿ

(ನ್ಯೂಸ್ ಕಡಬ) newskadaba.com ಜ.13 ತಿರುಪತಿ: ತಿರುಮಲ ಲಡ್ಡು ಕೌಂಟರ್‌ಗಳಲ್ಲಿ ಬೆಂಕಿ ಅವಘಡ ಸಂಭವಿಸಿದೆ. ಇದರಿಂದ ಭಕ್ತರು ಭಯಭೀತರಾಗಿ ಓಡಿಹೋದರು. ನಂತರ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದರು. ಈ ಅಪಘಾತದಲ್ಲಿ ಯಾವುದೇ ಹಾನಿ ಸಂಭವಿಸಿಲ್ಲ ಎಂದು ವರದಿಯಾಗಿದೆ. ಲಡ್ಡು ಕೌಂಟರ್‌ಗಳ ಕೌಂಟರ್ ಸಂಖ್ಯೆ 47ರಲ್ಲಿ ಈ ಅಪಘಾತ ಸಂಭವಿಸಿದೆ. ಕೌಂಟರ್‌ನಲ್ಲಿರುವ ಕಂಪ್ಯೂಟರ್ ಯುಪಿಎಸ್‌ನಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಅಪಘಾತ ಸಂಭವಿಸಿದೆ ಎಂದು ಸಿಬ್ಬಂದಿ ಹೇಳುತ್ತಾರೆ. ಮತ್ತೊಂದೆಡೆ, ತಿರುಮಲದ ಲಡ್ಡು ಕೌಂಟರ್‌ಗಳಲ್ಲಿ ಭಕ್ತರ ನಿರಂತರ ದಟ್ಟಣೆ ಇರುವುದು ಸಹಜ. […]

ತಿರುಪತಿ ತಿಮ್ಮಪ್ಪನ ಕ್ಷೇತ್ರದಲ್ಲಿ ಮತ್ತೊಂದು ಅವಘಡ: ಲಡ್ಡು ಕೌಂಟರ್‌ಗಳಲ್ಲಿ ಬೆಂಕಿ Read More »

ಬ್ರೇಕಿಂಗ್ ನ್ಯೂಸ್

ಪಕ್ಷದಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ, ಸಿಎಂ ಕುರ್ಚಿ ಖಾಲಿ ಇಲ್ಲ; ಸಿಎಂ ಸಿದ್ದರಾಮಯ್ಯ

(ನ್ಯೂಸ್ ಕಡಬ) newskadaba.com ಜ.13 ಬೆಂಗಳೂರು: ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ರಾಜ್ಯದಲ್ಲಿ ಮುಖ್ಯಮಂತ್ರಿ ಸ್ಥಾನವೂ ಖಾಲಿಯಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಧ್ಯಮಗಳು ಊಹಾಪೋಹಗಳನ್ನು ಹರಡುವ ಬದಲು ಸತ್ಯವನ್ನು ತೋರಿಸಬೇಕು. ಸ್ವತಃ ನಾನೇ ಸ್ಪಷ್ಟನೆ ನೀಡಿದರು, ಇನ್ನೂ ನಾಯಕತವ ಬದಲಾವಣೆ ವಿಚಾರ ಸುದ್ದಿಯಾಗುತ್ತಿದೆ. ರಾಜ್ಯದಲ್ಲಿ ಸಿಎಂ ಕುರ್ಚಿ ಖಾಲಿಯಿಲ್ಲ, ಪಕ್ಷದಲ್ಲಿ ಯಾವುದೇ ರೀತಿಯ ಭಿನ್ನಾಭಿಪ್ರಾಯಗಳೂ ಇಲ್ಲ ಎಂದು ಸ್ಪಷ್ಟಪಡಿಸಿದರು. ರಾಜ್ಯಕ್ಕೆ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಭೇಟಿ ನೀಡಿದ್ದು,

ಪಕ್ಷದಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ, ಸಿಎಂ ಕುರ್ಚಿ ಖಾಲಿ ಇಲ್ಲ; ಸಿಎಂ ಸಿದ್ದರಾಮಯ್ಯ Read More »

ಕರ್ನಾಟಕ

ಸಿಎಂ ಸಿದರಾಮಯ್ಯರಿಂದ ‘ಮನೆಗೊಂದು ಗ್ರಂಥಾಲಯ’ ವನ್ನು ಉದ್ಘಾಟನೆ

(ನ್ಯೂಸ್ ಕಡಬ) newskadaba.com ಜ.13 ಬೆಂಗಳೂರು: ಕನ್ನಡ ಪುಸ್ತಕ ಪ್ರಾಧಿಕಾರದ ಮಹತ್ವಾಕಾಂಕ್ಷಿ ಯೋಜನೆ ಯಾದ ‘ಮನೆಗೊಂದು ಗ್ರಂಥಾಲಯ’ ವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗೃಹ ಕಚೇರಿ ಕೃಷ್ಣಾದಲ್ಲಿ ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಪ್ರಾಧಿಕಾರ ಪ್ರಕಟಿಸಿರುವ ಕುಮಾರ ವ್ಯಾಸಭಾರತ ಸಂಪುಟಗಳನ್ನು ಲೋಕಾರ್ಪಣೆಗೊಳಿಸಿದರು.’ಮನೆಗೊಂದು ಗ್ರಂಥಾಲಯ’ದ ಮೊದಲ ಗ್ರಂಥಾಲಯವನ್ನು ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿಯೇ ಸ್ಥಾಪಿಸುತ್ತಿದ್ದು, ಗ್ರಂಥಾಲಯಕ್ಕೆ ಹಿರಿಯ ಸಾಹಿತಿ ನಾಡೋಜ ಡಾ. ಹಂ ಪ ನಾಗರಾಜಯ್ಯ ಚಾಲನೆ ನೀಡಿದರು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಪುರುಷೋತ್ತಮ ಬಿಳಿಮಲೆ ಗ್ರಂಥಾಲಯ

ಸಿಎಂ ಸಿದರಾಮಯ್ಯರಿಂದ ‘ಮನೆಗೊಂದು ಗ್ರಂಥಾಲಯ’ ವನ್ನು ಉದ್ಘಾಟನೆ Read More »

ಕರ್ನಾಟಕ

ಜಮ್ಮು ಮತ್ತು ಕಾಶ್ಮೀರದ ಝಡ್-ಮೋರ್ಹ್ ಸುರಂಗ ಲೋಕಾರ್ಪಣೆ ಮಾಡಿದ ಪ್ರಧಾನಿ ಮೋದಿ

(ನ್ಯೂಸ್ ಕಡಬ) newskadaba.com ಜ.13 ಬೆಂಗಳೂರು: ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂದು ಜಮ್ಮು ಮತ್ತು ಕಾಶ್ಮೀರದಲ್ಲಿ ಬಹು ನಿರೀಕ್ಷಿತ ಝಡ್-ಮೋರ್ಹ್ ಸುರಂಗವನ್ನು ಉದ್ಘಾಟಿಸಿದರು. 6.5 ಕಿ.ಮೀ ಉದ್ದದ ಈ ಸುರಂಗವು ಶ್ರೀನಗರ-ಲೇಹ್ ಹೆದ್ದಾರಿಯಲ್ಲಿ ನಿರ್ಮಾಣವಾಗಿದ್ದು, ಈಗ ಚಳಿಗಾಲದ ಕಠಿಣ ಹವಾಮಾನದಲ್ಲಿ ಮುಚ್ಚಲ್ಪಡುವ ಸೋನಮಾರ್ಗ್ ಎಂಬ ಪ್ರಸಿದ್ಧ ಪ್ರವಾಸಿ ತಾಣಕ್ಕೆ ಇಡೀ ವರ್ಷ ಸಂಪರ್ಕ ಕಲ್ಪಿಸುತ್ತದೆ. 8,652 ಅಡಿ ಎತ್ತರದಲ್ಲಿ ನಿರ್ಮಿಸಲಾದ ಝಡ್-ಮೋರ್ಹ್ ಸುರಂಗವು ಹಿಮಪಾತಕ್ಕೆ ಆತುರವಾಗಿರುವ ಪ್ರದೇಶಗಳನ್ನು ತೊಲಗಿಸುವ ಮೂಲಕ ಪ್ರಯಾಣದ ಸಮಯವನ್ನು ಗಮನಾರ್ಹವಾಗಿ ಕಡಿಮೆ

ಜಮ್ಮು ಮತ್ತು ಕಾಶ್ಮೀರದ ಝಡ್-ಮೋರ್ಹ್ ಸುರಂಗ ಲೋಕಾರ್ಪಣೆ ಮಾಡಿದ ಪ್ರಧಾನಿ ಮೋದಿ Read More »

ರಾಷ್ಟ್ರೀಯ ನ್ಯೂಸ್

ಹಸುಗಳ ಕೆಚ್ಚಲು ಕೊಯ್ದ ಪ್ರಕರಣ: ಆರೋಪಿಯ ಬಂಧನ

(ನ್ಯೂಸ್ ಕಡಬ) newskadaba.com ಜ.13 ಬೆಂಗಳೂರು: ಚಾಮರಾಜಪೇಟೆಯ ಓಲ್ಡ್ ಪೆನ್ಷನ್ ಮೊಹಲ್ಲಾದಲ್ಲಿ ಹಸುಗಳ ಕೆಚ್ಚಲು ಕೊಯ್ದ ಪ್ರಕರಣದ ಆರೋಪಿಯನ್ನು ಕಾಟನ್ಪೇಟೆ ಪೊಲೀಸರು ಬಂಧಿಸಿದ್ದಾರೆ. ಬಿಹಾರ ಮೂಲದ ಶೇಖ್ ನಸ್ರೂ(35) ಬಂಧಿತ ಆರೋಪಿ. ಮದ್ಯದ ನಶೆಯಲ್ಲಿ ಕೃತ್ಯ ನಡೆಸಿರುವುದಾಗಿ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ. ಕೃತ್ಯ ನಡೆದ ಸ್ಥಳದಿಂದ ಸುಮಾರು 50 ಮೀಟರ್ನಷ್ಟು ದೂರ ಇರುವ ಪ್ಲಾಸ್ಟಿಕ್ ಹಾಗೂ ಬ್ಯಾಗ್ ಹೊಲಿಗೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಆರೋಪಿ ನಸ್ರೂ ಒಬ್ಬನೇ ಕೃತ್ಯ ಎಸಗಿದ್ದಾನೆ. ಬೇರೆ ಯಾರೂ ಭಾಗಿ ಆಗಿಲ್ಲ. ಆದರೂ ತನಿಖೆ ಮುಂದುವರೆಸಲಾಗಿದೆ

ಹಸುಗಳ ಕೆಚ್ಚಲು ಕೊಯ್ದ ಪ್ರಕರಣ: ಆರೋಪಿಯ ಬಂಧನ Read More »

ಕರ್ನಾಟಕ

ಪಿಸ್ತಾ ಸಿಪ್ಪೆ ಗಂಟಲಲ್ಲಿ ಸಿಲುಕಿ 2 ವರ್ಷದ ಮಗು ಮೃತ್ಯು

(ನ್ಯೂಸ್ ಕಡಬ) newskadaba.com ಜ.13 ಮಂಗಳೂರು: ಪಿಸ್ತಾ ತಿನ್ನುವಾಗ ಸಿಪ್ಪೆ ಗಂಟಲಲ್ಲಿ ಸಿಲುಕಿ 2 ವರ್ಷದ ಮಗುವೊಂದು ಸಾವನ್ನಪ್ಪಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ. ಕುಂಬಳೆಯ ಭಾಸ್ಕರ್ ನಗರ ನಿವಾಸಿ ಅನ್ವರ್ – ಮೆಹರುನ್ನೀಸಾ ದಂಪತಿಯ ಪುತ್ರ ಅನಾಸ್ ಮೃತಪಟ್ಟ ಬಾಲಕ. ಮನೆಯಲ್ಲಿ ಪಿಸ್ತಾದ ಸಿಪ್ಪೆ ತೆಗೆದು ತಿನ್ನುವಾಗ ಮಗುವಿನ ಗಂಟಲಿಗೆ ಪಿಸ್ತಾ ಸಿಲುಕಿಕೊಂಡಿತ್ತು. ಅದನ್ನು ಗಂಟಲಿಗೆ ಬೆರಳು ಹಾಕಿ ತೆಗೆಯಲಾಗಿತ್ತು. ಆದರೂ ಮಗುವಿನ ಉಸಿರಾಟದಲ್ಲಿ ತೊಂದರೆ ಕಂಡುಬಂದಾಗ ಕುಂಬಳೆ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಶನಿವಾರ ರಾತ್ರಿ ಮಗುವಿಗೆ

ಪಿಸ್ತಾ ಸಿಪ್ಪೆ ಗಂಟಲಲ್ಲಿ ಸಿಲುಕಿ 2 ವರ್ಷದ ಮಗು ಮೃತ್ಯು Read More »

ಕರಾವಳಿ

ಕರ್ನಾಟಕದಲ್ಲಿ ದಾಖಲೆಯ ಪಾಸ್‌ಪೋರ್ಟ್‌ ವಿತರಣೆ

(ನ್ಯೂಸ್ ಕಡಬ) newskadaba.com ಜ.13 ಬೆಂಗಳೂರು: ಕರ್ನಾಟಕದ ನಿವಾಸಿಗಳು, ವಿಶೇಷವಾಗಿ ಟೈಯರ್ 2 ಮತ್ತು 3 ನಗರಗಳ ನಿವಾಸಿಗಳು ವಿದೇಶಗಳಿಗೆ ಹೆಚ್ಚು ತೆರಳಲು ಬಯಸುತ್ತಿರುವುದರಿಂದ ಕಳೆದ ವರ್ಷ ಪ್ರಾದೇಶಿಕ ಪಾಸ್‌ಪೋರ್ಟ್ ಕಚೇರಿ ಹೆಚ್ಚೆಚ್ಚು ಕಾರ್ಯನಿರತವಾಗಿದೆ. 2024 ರಲ್ಲಿ 8,83,755 ಪಾಸ್‌ಪೋರ್ಟ್‌ಗಳನ್ನು ನೀಡುವ ಮೂಲಕ ಹಿಂದಿನ ಎಲ್ಲಾ ದಾಖಲೆಗಳನ್ನು ಮುರಿದಿದೆ. 2023 ರಲ್ಲಿ 34,000 ಪಾಸ್‌ಪೋರ್ಟ್‌ಗಳ ಮೂಲಕ ನಮ್ಮ ಹಿಂದಿನ ಗರಿಷ್ಠ ದಾಖಲೆಯನ್ನು ಮೀರಿಸಿತ್ತು. ಕರ್ನಾಟಕದ ಟೈಯರ್ 2 ಮತ್ತು 3 ನಗರಗಳಿಂದ ಸ್ವೀಕರಿಸಿದ ಅರ್ಜಿಗಳ ಹೆಚ್ಚಳವು ಈ ಬೆಳವಣಿಗೆಗೆ

ಕರ್ನಾಟಕದಲ್ಲಿ ದಾಖಲೆಯ ಪಾಸ್‌ಪೋರ್ಟ್‌ ವಿತರಣೆ Read More »

ಕರ್ನಾಟಕ

ಬೆಂಗಳೂರಿನಲ್ಲಿ ಸಿಲಿಂಡರ್‌ ಸ್ಫೋಟ, 7 ಮಂದಿಗೆ ಗಂಭೀರ ಗಾಯ

(ನ್ಯೂಸ್ ಕಡಬ) newskadaba.com ಜ.13 ಬೆಂಗಳೂರು: ರಾಜಧಾನಿಯ ದಾಸರಹಳ್ಳಿಯ ಚೊಕ್ಕಸಂದ್ರದ ಮನೆಯೊಂದರಲ್ಲಿ ಗ್ಯಾಸ್‌ ಸಿಲಿಂಡರ್ ಸ್ಫೋಟಗೊಂಡು ಏಳು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಸಿಲಿಂಡರ್‌ ಸ್ಫೋಟದಿಂದ ದಿಜುಧಾರ್ (34), ಅಂಜಲಿದಾಸ್ (31), ಮನುಶ್ರೀ (3), ಮನು(25), ತಿಪ್ಪೇರುದ್ರಸ್ವಾಮಿ (50), ಪಕ್ಕದ ಮನೆ ಶೋಭ (60) ಮತ್ತು ಕರೀಬುಲ್ಲ ಎಂಬವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳು ದಿಜುಧಾರ್​ ಎಂಬವರ ಮನೆಯಲ್ಲಿ ಗ್ಯಾಸ್​ ಸಿಲಿಂಡರ್​ ಸೋರಿಕೆಯಾಗಿ ಸ್ಫೋಟಗೊಂಡಿದೆ. ಸ್ಫೋಟದ ತೀವ್ರತೆಗೆ ಎದುರು ಮನೆಯವರಿಗೂ ಗಾಯವಾಗಿದೆ. ಗಾಯಾಳುಗಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಪೀಣ್ಯ

ಬೆಂಗಳೂರಿನಲ್ಲಿ ಸಿಲಿಂಡರ್‌ ಸ್ಫೋಟ, 7 ಮಂದಿಗೆ ಗಂಭೀರ ಗಾಯ Read More »

ಕರ್ನಾಟಕ

ಮಂಗಳೂರು : ಧರ್ಮಗಳ ನಡುವಿನ ಜಗಳ ಪುಕಾರು ಸುಳ್ಳು ಸುದ್ದಿ – ಪೊಲೀಸರ ಸ್ಪಷ್ಟನೆ

(ನ್ಯೂಸ್ ಕಡಬ) newskadaba.com ಜ.13 ಬೆಂಗಳೂರು: ಹೊರವಲಯದ ಕೋಡಿ ಬೆಂಗ್ರೆ ಯಲ್ಲಿ ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪುಗಳ ನಡುವಿನ ಗಲಾಟೆಯನ್ನು ಧರ್ಮಗಳ ನಡುವಿನ ಜಗಳ ಎಂಬಂತೆ ಬಿಂಬಿಸಿ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹರಿಯಬಿಡಲಾಗಿದೆ. ವಾಟ್ಸ್ಯಾಪ್ ಗಳಲ್ಲಿ ಬಂದ ವಿಚಾರವು ಸುಳ್ಳು ಸುದ್ದಿಯಾಗಿದೆ ಎಂದು ಮಂಗಳೂರು ನಗರ ಪೊಲೀಸರು ಸ್ಪಷ್ಟೀಕರಣ ನೀಡಿದ್ದಾರೆ. ಜನವರಿ 12ರಂದು ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯ ಗಣೇಶ್ ಕಟ್ಟೆ ಬಳಿ ಯುವಕರ ಎರಡು ಗುಂಪುಗಳ ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳ ನಡೆದಿತ್ತು. ಪ್ರಕರಣಕ್ಕೆ

ಮಂಗಳೂರು : ಧರ್ಮಗಳ ನಡುವಿನ ಜಗಳ ಪುಕಾರು ಸುಳ್ಳು ಸುದ್ದಿ – ಪೊಲೀಸರ ಸ್ಪಷ್ಟನೆ Read More »

ಕರಾವಳಿ

ಮತ್ತೆ ಚಿನ್ನದ ದರದಲ್ಲಿ ಏರಿಕೆ

(ನ್ಯೂಸ್ ಕಡಬ) newskadaba.com ಜ.13 ಬೆಂಗಳೂರು: ಚಿನ್ನದ ದರ ಇಂದು ಏರಿಕೆ ಆಗಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 22 ಕ್ಯಾರಟ್‌ 1 ಗ್ರಾಂ ಚಿನ್ನದ ದರದಲ್ಲಿ40 ರೂ. ಮತ್ತು 24 ಕ್ಯಾರಟ್‌ 1 ಗ್ರಾಂ ಚಿನ್ನದ ದರದಲ್ಲಿ 43 ರೂ. ಏರಿಕೆ ಆಗಿದೆ. ಇಂದು 22 ಕ್ಯಾರಟ್‌ 1 ಗ್ರಾಂ ಚಿನ್ನದ ದರ 7,340 ರೂ. ಮತ್ತು 24 ಕ್ಯಾರಟ್‌ 1 ಗ್ರಾಂ ಚಿನ್ನದ ದರ 8,007 ರೂ.ಗೆ ತಲುಪಿದೆ. 22 ಕ್ಯಾರಟ್‌ ಚಿನ್ನದ ದರ 22

ಮತ್ತೆ ಚಿನ್ನದ ದರದಲ್ಲಿ ಏರಿಕೆ Read More »

ಕರ್ನಾಟಕ
Scroll to Top