News Kadaba

ಸಂಸದ ಕ್ಯಾ. ಚೌಟ ಶಿಫಾರಸಿನಂತೆ ದ.ಕ. ಟೆಲಿಕಾಂ ಸಲಹಾ ಸಮಿತಿಗೆ 8 ಮಂದಿ ಸದಸ್ಯರ ನೇಮಕ

(ನ್ಯೂಸ್ ಕಡಬ) newskadaba.com, ಫೆ.04 ಮಂಗಳೂರು: ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರ ಶಿಫಾರಸಿನ ಮೇರೆಗೆ ಭಾರತ್ ಸಂಚಾರ ನಿಗಮ ಲಿಮಿಟೆಡ್(ಬಿಎಸ್ಎನ್ಎಲ್)ನ ದಕ್ಷಿಣ ಕನ್ನಡ ಜಿಲ್ಲೆ ಟೆಲಿಕಾಂ ಸಲಹಾ ಸಮಿತಿಗೆ 8 ಮಂದಿ ಸದಸ್ಯರನ್ನು ನೇಮಕಗೊಳಿಸಿ ದೂರ ಸಂಪರ್ಕ ಸಚಿವಾಲಯವು ಆದೇಶ ಹೊರಡಿಸಿದೆ. ಕೊರಗಪ್ಪ ನಾಯ್ಕ್ ಮುಂಡಾಜೆ, ಚರಣ್ ರಾಜ್ ಉಳ್ಳಾಲ್, ಟಿ. ಜಯಂತ್ ಸಾಲ್ಯಾನ್ ತೋಕೂರು, ಕೆ. ರಾಮ ಕೊಂಚಾಡಿ, ಪೂರ್ಣಿಮ ರಾವ್, ಪ್ರಮೋದ್ ಕುಮಾರ್ ರೈ ಕಾಡಬೆಟ್ಟು, ರಾಮಕೃಷ್ಣ ಭಟ್ ಬೆಳ್ಳಾರೆ, […]

ಸಂಸದ ಕ್ಯಾ. ಚೌಟ ಶಿಫಾರಸಿನಂತೆ ದ.ಕ. ಟೆಲಿಕಾಂ ಸಲಹಾ ಸಮಿತಿಗೆ 8 ಮಂದಿ ಸದಸ್ಯರ ನೇಮಕ Read More »

ಕರಾವಳಿ

ಚಿನ್ನದ ದರದಲ್ಲಿ ಏಕಾಏಕಿ ಭಾರೀ ಏರಿಕೆ

(ನ್ಯೂಸ್ ಕಡಬ) newskadaba.com, ಫೆ.04 ಬೆಂಗಳೂರು: ಕೆಲವು ದಿನಗಳಿಂದ ಸತತ ಇಳಿಕೆ ಕಂಡಿದ್ದ ಚಿನ್ನದ ದರ ಇಂದು ಭಾರೀ ಏರಿಕೆ ಆಗಿದೆ. ಗ್ರಾಹಕರಿಗೆ ಬಿಗ್‌ ಶಾಕ್‌ ನೀಡಿದೆ. ಮಂಗಳವಾರ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 22 ಕ್ಯಾರಟ್‌ ಮತ್ತು 24 ಕ್ಯಾರಟ್‌ 1 ಗ್ರಾಂ ಚಿನ್ನದ ದರದಲ್ಲಿ ತಲಾ 105 ರೂ. ಮತ್ತು 115ರೂ. ಏರಿಕೆ ಕಂಡಿದೆ. 22 ಕ್ಯಾರಟ್‌ 1 ಗ್ರಾಂ ಚಿನ್ನದ ದರ 7,810 ರೂ. ಮತ್ತು 24 ಕ್ಯಾರಟ್‌ 1 ಗ್ರಾಂ ಚಿನ್ನದ ದರ 8,520

ಚಿನ್ನದ ದರದಲ್ಲಿ ಏಕಾಏಕಿ ಭಾರೀ ಏರಿಕೆ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

SSLC, PUC ಫಲಿತಾಂಶ ಸುಧಾರಣೆಗೆ 20 ಅಂಶಗಳ ಕಾರ್ಯಕ್ರಮ: ಸಚಿವ ಮಧು ಬಂಗಾರಪ್ಪ

(ನ್ಯೂಸ್ ಕಡಬ) newskadaba.com, ಫೆ.04 ಬೆಂಗಳೂರು: ಈ ವರ್ಷ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಗಳ ವಿದ್ಯಾರ್ಥಿಗಳ ಫಲಿತಾಂಶಗಳನ್ನು ಸುಧಾರಿಸಲು, ರಾಜ್ಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಇಲಾಖೆ 20 ಅಂಶಗಳ ಕಾರ್ಯಕ್ರಮವನ್ನು ಜಾರಿಗೆ ತಂದಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ. ಡಿಎಸ್‌ಇಆರ್‌ಟಿ ಕಚೇರಿಯಲ್ಲಿ ನಿನ್ನೆ ನಡೆದ ಎಸ್‌ಎಸ್‌ಎಲ್‌ಸಿ ಫಲಿತಾಂಶಗಳನ್ನು ಸುಧಾರಿಸುವ ಕುರಿತು ರಾಜ್ಯ ಮಟ್ಟದ ಚರ್ಚೆಯಲ್ಲಿ ಭಾಗವಹಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉತ್ತಮ ಶೈಕ್ಷಣಿಕ ಕಾರ್ಯಕ್ಷಮತೆಯನ್ನು ಖಚಿತಪಡಿಸಿಕೊಳ್ಳಲು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ

SSLC, PUC ಫಲಿತಾಂಶ ಸುಧಾರಣೆಗೆ 20 ಅಂಶಗಳ ಕಾರ್ಯಕ್ರಮ: ಸಚಿವ ಮಧು ಬಂಗಾರಪ್ಪ Read More »

ಕರ್ನಾಟಕ

ಕರ್ನಾಟಕದಲ್ಲಿ 1,652 ಕಿಮೀ ಹೊಸ ರೈಲು ಹಳಿಗಳ ನಿರ್ಮಾಣ: ಅಶ್ವಿನಿ ವೈಷ್ಣವ್

(ನ್ಯೂಸ್ ಕಡಬ) newskadaba.com, ಫೆ.04 ಬೆಂಗಳೂರು: 2014 ರಿಂದ ಕರ್ನಾಟಕದಾದ್ಯಂತ 1,652 ಕಿಮೀ ಹೊಸ ರೈಲು ಹಳಿಗಳನ್ನು ಹಾಕಲಾಗಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಸೋಮವಾರ ಹೇಳಿದ್ದಾರೆ. ಇಡೀ ಶ್ರೀಲಂಕಾದ ರೈಲು ಮಾರ್ಗದ ವಿಸ್ತೀರ್ಣದಷ್ಟು ರೈಲ್ವೆ ಮಾರ್ಗ ಕರ್ನಾಟಕದಲ್ಲಿ ಬಿಜೆಪಿ ನೇತೃತ್ವದ ಎನ್​ಡಿಎ ಸರ್ಕಾರದ ಅವಧಿಯಲ್ಲಿ ಆಗಿದೆ ಎಂದರು. ಸೋಮವಾರ ವಿಡಿಯೋ ಕಾನ್ಫೆರೆನ್ಸ್​ ಮೂಲಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಬಜೆಟ್​ನಲ್ಲಿ ಕರ್ನಾಟಕ ರೈಲ್ವೆಗೆ ನೀಡಿರುವ ಕೊಡುಗೆಗಳ ಕುರಿತು ಮಾಹಿತಿ ನೀಡಿದರು. ಯುಪಿಎ ಸರ್ಕಾರದ ಅವಧಿಯಲ್ಲಿ ಪ್ರತಿ

ಕರ್ನಾಟಕದಲ್ಲಿ 1,652 ಕಿಮೀ ಹೊಸ ರೈಲು ಹಳಿಗಳ ನಿರ್ಮಾಣ: ಅಶ್ವಿನಿ ವೈಷ್ಣವ್ Read More »

ಕರ್ನಾಟಕ

ಸಿಎಂ ರಾಜಕೀಯ ಸಲಹೆಗಾರ ಹುದ್ದೆಗೆ ಶಾಸಕ ಬಿ.ಆರ್ ಪಾಟೀಲ್ ರಾಜೀನಾಮೆ

(ನ್ಯೂಸ್ ಕಡಬ) newskadaba.com, ಫೆ.01 : ಸಿಎಂ ರಾಜಕೀಯ ಸಲಹೆಗಾರ ಹುದ್ದೆಗೆ ಶಾಸಕ ಬಿ.ಆರ್ ಪಾಟೀಲ್ ರಾಜೀನಾಮೆ ನೀಡಿದ್ದಾರೆ. ಶುಕ್ರವಾರ ಸಂಜೆ ಫ್ಯಾಕ್ಸ್ ಮೂಲಕ ಸಿಎಂ ಸಿದ್ದರಾಮಯ್ಯ ಅವರಿಗೆ ಬಿ.ಆರ್ ಪಾಟೀಲ್ ರಾಜೀನಾಮೆ ಪತ್ರ ರವಾನಿಸಿದ್ದಾರೆ. ಈ ಹಿಂದೆ ಅನುದಾನದ ವಿಚಾರದಲ್ಲಿ ಬಿ.ಆರ್ ಪಾಟೀಲ್ ಅವರು ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದರು. ೪೦ ವರ್ಷದ ಜನತಾ ಪರಿವಾರದ ನಂಟು ಹೊಂದಿದ್ದ ಬಿ.ಆರ್ ಪಾಟೀಲ್ ಅವರು, ಸಿದ್ದರಾಮಯ್ಯ ಕಾಂಗ್ರೆಸ್ ಸೇರಿದ್ದರು ಎಂಬ ಕಾರಣಕ್ಕಾಗಿ ಅವರು ಕೂಡ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು. ಈ ಬಾರಿ

ಸಿಎಂ ರಾಜಕೀಯ ಸಲಹೆಗಾರ ಹುದ್ದೆಗೆ ಶಾಸಕ ಬಿ.ಆರ್ ಪಾಟೀಲ್ ರಾಜೀನಾಮೆ Read More »

ಕರ್ನಾಟಕ

ಮಂಗಳೂರು: ಬೀದಿ ಬದಿ ವ್ಯಾಪಾರಿಗಳ ವಿರುದ್ಧ ಮಂಗಳೂರು ನಗರ ಪಾಲಿಕೆ ಕ್ರಮ

(ನ್ಯೂಸ್ ಕಡಬ) newskadaba.com, ಫೆ.01 : ನವದೆಹಲಿ: ಮಂಗಳೂರು ನಗರದಲ್ಲಿ ಈಗಾಗಲೇ ಹಲವು ಕಡೆಗಳಲ್ಲಿ ಬೀದಿ ಬದಿ ವ್ಯಾಪಾರದ ವಿರುದ್ಧ ಮಂಗಳೂರು ನಗರ ಪಾಲಿಕೆ ಕ್ರಮ ತೆಗೆದುಕೊಳ್ಳಲಾಗಿದ್ದು, ತೆರವು ಕಾರ್ಯಾಚರಣೆ ನಡೆದಿತ್ತು. ಸದ್ಯ ಇದು ಮತ್ತೆ ಮುಂದುವರೆದಿದೆ. ಮಂಗಳೂರಿನ ಸ್ಟೇಟ್ ಬ್ಯಾಂಕ್ ಹಾಗೂ ಟೌನ್ ಹಾಲ್ ಪರಿಸರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಬೀದಿ ಬದಿ ಅಂಗಡಿಗಳನ್ನು ತೆರವು ಮಾಡಲಾಗಿದೆ. ಬೀದಿ ಬದಿ ಅಂಗಡಿಗಳಿಂದಾಗಿ ಪಾದಚಾರಿಗಳಿಗೆ ನಡೆದಾಡಲು ತೊಂದರೆಯಾಗುತ್ತಿದೆ ಎಂದು ದೂರು ಕೇಳಿಬಂದಿದ್ದು, ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಲಾಗಿದೆ ಎನ್ನಲಾಗಿದೆ. ಕಾರ್ಯಾಚರಣೆ ಹಿನ್ನೆಲೆಯಲ್ಲಿ ಸ್ಥಳದಲ್ಲಿ

ಮಂಗಳೂರು: ಬೀದಿ ಬದಿ ವ್ಯಾಪಾರಿಗಳ ವಿರುದ್ಧ ಮಂಗಳೂರು ನಗರ ಪಾಲಿಕೆ ಕ್ರಮ Read More »

ಕರಾವಳಿ

ಮುಂದಿನ 3 ವರ್ಷಗಳಲ್ಲಿ ಎಲ್ಲ ಜಿಲ್ಲಾ ಆಸ್ಪತ್ರೆಗಳಲ್ಲಿ ಡೇಕೇರ್ ಕ್ಯಾನ್ಸರ್ ಕೇಂದ್ರಗಳ ಸ್ಥಾಪನೆ

(ನ್ಯೂಸ್ ಕಡಬ) newskadaba.com, ಫೆ.01 : ನವದೆಹಲಿ: ಮುಂದಿನ ಮೂರು ವರ್ಷಗಳಲ್ಲಿ ಎಲ್ಲ ಜಿಲ್ಲಾ ಆಸ್ಪತ್ರೆಗಳಲ್ಲಿ ಡೇಕೇರ್ ಕ್ಯಾನ್ಸರ್ ಕೇಂದ್ರಗಳನ್ನು ಸ್ಥಾಪಿಸಲು ಸರ್ಕಾರ ಅನುಕೂಲ ಮಾಡಿಕೊಡಲಿದೆ ಮತ್ತು ಇವುಗಳಲ್ಲಿ 200 ಕೇಂದ್ರಗಳನ್ನು ಈ ಆರ್ಥಿಕ ವರ್ಷದಲ್ಲಿಯೇ ಸ್ಥಾಪಿಸಲಾಗುವುದು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಶನಿವಾರ ಪ್ರಕಟಿಸಿದ್ದಾರೆ. 2025-26ರ ಕೇಂದ್ರ ಬಜೆಟ್ ಮಂಡಿಸಿದ ಅವರು, ಗಿಗ್ ಕಾರ್ಮಿಕರಿಗೆ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ (ಪಿಎಂ-ಜೆಎವೈ) ಅಡಿಯಲ್ಲಿ ಆರೋಗ್ಯ ಸೌಲಭ್ಯಗಳನ್ನು ಒದಗಿಸಲಾಗುವುದು. ಈ ಕ್ರಮವು ಸುಮಾರು 1 ಕೋಟಿ

ಮುಂದಿನ 3 ವರ್ಷಗಳಲ್ಲಿ ಎಲ್ಲ ಜಿಲ್ಲಾ ಆಸ್ಪತ್ರೆಗಳಲ್ಲಿ ಡೇಕೇರ್ ಕ್ಯಾನ್ಸರ್ ಕೇಂದ್ರಗಳ ಸ್ಥಾಪನೆ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಬಂಟ್ವಾಳ: ಬ್ರಹ್ಮರಕೊಟ್ಲು ಟೋಲ್ ಗೇಟ್ ಅವ್ಯವಸ್ಥೆಯ ವಿರುದ್ಧ ಪ್ರತಿಭಟನೆ

(ನ್ಯೂಸ್ ಕಡಬ) newskadaba.com, ಫೆ.01 ಬಂಟ್ವಾಳ : ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ, ಮಂಗಳೂರು ಗ್ರಾಮಾಂತರ ಜಿಲ್ಲಾ ಸಮಿತಿಯ ವತಿಯಿಂದ ಬ್ರಹ್ಮರಕೊಟ್ಲು ಟೋಲ್‌ಗೇಟ್ ಅವ್ಯವಸ್ಥೆಯ ವಿರುದ್ಧ ಕೈಕಂಬದಿಂದ ಟೋಲ್ ಗೇಟ್ ವರೆಗೆ ಬೃಹತ್ ಪಾದಯಾತ್ರೆ ಹಾಗೂ ಪ್ರತಿಭಟನೆಯು ಜಿಲ್ಲಾಧ್ಯಕ್ಷರಾದ ಅನ್ವರ್ ಸಾದತ್ ಬಜತ್ತೂರುರವರ ನೇತೃತ್ವದಲ್ಲಿ ಶುಕ್ರವಾರ ಸಂಜೆ ನಡೆಯಿತು. ಕೈಕಂಬ ಜಂಕ್ಷನ್‌ನಲ್ಲಿ ಎಸ್‌ಡಿಪಿಐ ಧ್ವಜವನ್ನು ಅನ್ವರ್ ಸಾದತ್ ಬಜತ್ತೂರುರವರು ಜಿಲ್ಲಾ ಉಪಾಧ್ಯಕ್ಷರೂ, ಕಾರ್ಯಕ್ರಮದ ಉಸ್ತುವಾರಿಯೂ ಆದ ಮೂನಿಶ್ ಅಲಿಯವರಿಗೆ ಹಸ್ತಾಂತರಿಸುವ ಮೂಲಕ ಪಾದಯಾತ್ರೆಗೆ ಚಾಲನೆ ನೀಡಿದರು.  ಪ್ರತಿಭಟನಾ

ಬಂಟ್ವಾಳ: ಬ್ರಹ್ಮರಕೊಟ್ಲು ಟೋಲ್ ಗೇಟ್ ಅವ್ಯವಸ್ಥೆಯ ವಿರುದ್ಧ ಪ್ರತಿಭಟನೆ Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

ಕೇಂದ್ರ ಬಜೆಟ್: ಪಟ್ಟಣ ಪ್ರದೇಶಗಳ ಅಭಿವೃದ್ಧಿಗೆ ಒತ್ತು; 1 ಲಕ್ಷ ಕೋಟಿ ರು ಮೀಸಲು

(ನ್ಯೂಸ್ ಕಡಬ) newskadaba.com, ಫೆ.01 : ಪಟ್ಟಣ ಪ್ರದೇಶಗಳ ಅಭಿವೃದ್ಧಿಗೆ ಒತ್ತು ನೀಡುವ ಉದ್ದೇಶದಿಂದ 1 ಲಕ್ಷ ಕೋಟಿ ರೂ. ಮೀಸಲಿಡಲಾಗುವುದು. ಇದು ಕುಡಿಯುವ ನೀರು, ನೈರ್ಮಲ್ಯಕ್ಕೆ ಒತ್ತು ನೀಡಲು ವಿನಿಯೋಗಿಸಲಾಗುವುದು ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ. ಯುವಜನತೆ, ದಲಿತರು, ಅನ್ನದಾತರು ಮತ್ತು ಮಹಿಳೆಯರನ್ನು ಉದ್ದೇಶವಾಗಿಟ್ಟುಕೊಂಡು ಬಜೆಟ್ ಮಂಡಿಸಲಾಗುತ್ತಿದೆ ಎಂದ ವಿತ್ತ ಸಚಿವೆ ಮುಂದಿನ ಐದು ವರ್ಷಗಳ ಅಭಿವೃದ್ಧಿಯನ್ನು ಗಮದಲ್ಲಿಟ್ಟುಕೊಂಡು ಈ ಬಾರಿಯ ಬಜೆಟ್‌ನಲ್ಲಿ ಕೃಷಿ, ಕೈಗಾರಿಕೆ, ಗಣಿಗಾರಿಕೆ, ಆರ್ಥಿಕತೆ, ಇಂಧನಗಳಿಗೆ ಒತ್ತು ನೀಡಲಾಗಿದೆ ಎಂದಿದ್ದಾರೆ.

ಕೇಂದ್ರ ಬಜೆಟ್: ಪಟ್ಟಣ ಪ್ರದೇಶಗಳ ಅಭಿವೃದ್ಧಿಗೆ ಒತ್ತು; 1 ಲಕ್ಷ ಕೋಟಿ ರು ಮೀಸಲು Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಉತ್ತರ ಪ್ರದೇಶ: ಗ್ಯಾಸ್ ಸಿಲಿಂಡರ್‌ಗಳ ಸಾಗಿಸುತ್ತಿದ್ದ ಟ್ರಕ್‌ಗೆ ಹೊತ್ತಿಕೊಂಡ ಬೆಂಕಿ, ಭಾರೀ ಸ್ಫೋಟ

(ನ್ಯೂಸ್ ಕಡಬ) newskadaba.com, ಫೆ.01 ಗಾಜಿಯಾಬಾದ್ (ಉತ್ತರ ಪ್ರದೇಶ): ಗ್ಯಾಸ್ ಸಿಲಿಂಡರ್‌ಗಳನ್ನು ಸಾಗಿಸುತ್ತಿದ್ದ ಟ್ರಕ್‌ಗೆ ಬೆಂಕಿ ಹೊತ್ತಿಕೊಂಡ ಪರಿಣಾಮ, ಸರಣಿ ಸ್ಫೋಟ ಸಂಭವಿಸಿರುವ ಘಟನೆಯೊಂದು ಗಾಜಿಯಾಬಾದ್ ಜಿಲ್ಲೆಯ ದೆಹಲಿ-ವಜೀರಾಬಾದ್ ರಸ್ತೆಯ ಭೋಪುರ ಚೌಕ್‌ನಲ್ಲಿ ನಡೆದಿದೆ. ಬೆಳಿಗ್ಗೆ 4 ಗಂಟೆ ಸುಮಾರಿಗೆ ಟ್ರಕ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಇದರಿಂದ ಟ್ರಕ್ ನಲ್ಲಿದ್ದ 60ಕ್ಕೂ ಹೆಚ್ಚು ಅಡುಗೆ ಅನಿಲದ ಸಿಲಿಂಡರ್ ಗಳು ಸ್ಫೋಟ ಗೊಳ್ಳಲು ಆರಂಭಿಸಿವೆ. ಪರಿಣಾಮ ಸ್ಥಳದಲ್ಲದಿಂದ 4 ಪೀಠೋಪಕರಣಗಳ ಅಂಗಡಿಗಳು ಹಾಗೂ ಕೆಲವು ವಾಹನಗಳು ಸುಟ್ಟು ಕರಕಲಾಗಿದವೆ ಎಂದು

ಉತ್ತರ ಪ್ರದೇಶ: ಗ್ಯಾಸ್ ಸಿಲಿಂಡರ್‌ಗಳ ಸಾಗಿಸುತ್ತಿದ್ದ ಟ್ರಕ್‌ಗೆ ಹೊತ್ತಿಕೊಂಡ ಬೆಂಕಿ, ಭಾರೀ ಸ್ಫೋಟ Read More »

ಬ್ರೇಕಿಂಗ್ ನ್ಯೂಸ್
Scroll to Top