News Kadaba

ಬೆಳ್ತಂಗಡಿ: ನದಿಗೆ ಬಿದ್ದು ಬಾಲಕ ಮೃತ್ಯು

(ನ್ಯೂಸ್ ಕಡಬ) newskadaba.com ಫೆ. 24. ಬೆಳ್ತಂಗಡಿ: ಬಾಲಕನೋರ್ವ ಆಕಸ್ಮಿಕವಾಗಿ ಫಲ್ಗುಣಿ ನದಿಗೆ ಬಿದ್ದು ಮೃತಪಟ್ಟ ಘಟನೆ ಆರಂಬೋಡಿ ಗ್ರಾಮದಲ್ಲಿ ರವಿವಾರ ಸಂಜೆ ನಡೆದಿದೆ. ಉಪ್ಪಿನಂಗಡಿಯ ರಾಮಕುಂಜ ಸಮೀಪದ ಆತೂರು ನಿವಾಸಿ ವಸಂತ ಮತ್ತು ವಿಜಯ ದಂಪತಿಯ ಪುತ್ರ ಪವನ್ (16) ಮೃತ ಬಾಲಕ. ಈತ ಆರಂಬೋಡಿ ಗ್ರಾಮದಲ್ಲಿರುವ ಸೂರಂಟೆ ಎಂಬಲ್ಲಿ ಅಜ್ಜಿಯ ಮನೆಯಲ್ಲಿದ್ದು ಸಿದ್ಧಕಟ್ಟೆ ಪ್ರೌಢಶಾಲೆಯಲ್ಲಿ 10ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ.

ಬೆಳ್ತಂಗಡಿ: ನದಿಗೆ ಬಿದ್ದು ಬಾಲಕ ಮೃತ್ಯು Read More »

ಕರಾವಳಿ

ಸಮುದ್ರಕ್ಕೆ ಬಿದ್ದ ದಂಪತಿ; ನಾಪತ್ತೆಯಾಗಿದ್ದ ಪತಿಯ ಮೃತದೇಹ ಪತ್ತೆ

(ನ್ಯೂಸ್ ಕಡಬ) newskadaba.com ಫೆ. 24. ಕಾಸರಗೋಡು-ಮಂಜೇಶ್ವರ ಹೊಸಬೆಟ್ಟು ಕುಂಡುಕೊಳಕೆಯಲ್ಲಿ ದಂಪತಿ ಸಮುದ್ರಕ್ಕೆ ಬಿದ್ದ ಘಟನೆಗೆ ಸಂಬಂಧಿಸಿದಂತೆ ನಾಪತ್ತೆಯಾಗಿದ್ದ ಪತಿಯ ಮೃತದೇಹ ಇಂದು ಸಂಜೆ ಉಪ್ಪಳ ಮುಸೋಡಿ ಅಧಿಕೆ ಸಮುದ್ರದಲ್ಲಿ ಕಂಡುಬಂದಿದೆ. ಹೊಸಂಗಡಿಯಲ್ಲಿ ಟೈಲರಿಂಗ್ ಅಂಗಡಿ ನಡೆಸುತ್ತಿದ್ದ ಕಡಂಬಾರ್ ಬಜೆಯ ಭಾಸ್ಕರ (೫೬) ಮೃತ ದುರ್ದೈವಿ. ಭಾಸ್ಕರ ಹಾಗೂ ಪತ್ನಿ ಮಾಲತಿ ಶನಿವಾರ ಸಂಜೆ ಕುಂಡುಕೊಳಕೆ ತೀರಕ್ಕೆ ತೆರಳಿದ್ದ ವೇಳೆ ಈ ನಡೆದಿದೆ. ಪತ್ನಿಯನ್ನು ಸ್ಥಳೀಯರು ಪಾರು ಮಾಡಿ ಆಸ್ಪತ್ರೆಗೆ ದಾಖಲಿಸಿದ್ದರು. ಘಟನೆ ಆಕಸ್ಮಿಕವೇ ಅಥವಾ ಸಮುದ್ರಕ್ಕೆ ಹಾರಿರಬಹುದೇ ಎಂಬ ಸಂಶಯ

ಸಮುದ್ರಕ್ಕೆ ಬಿದ್ದ ದಂಪತಿ; ನಾಪತ್ತೆಯಾಗಿದ್ದ ಪತಿಯ ಮೃತದೇಹ ಪತ್ತೆ Read More »

ಕರಾವಳಿ

ರಾಜಸ್ಥಾನದ ಮುಖ್ಯಮಂತ್ರಿಗೆ ಜೈಲಿನಿಂದಲೇ ಬೆದರಿಕೆ

(ನ್ಯೂಸ್ ಕಡಬ) newskadaba.com ಫೆ. 22. ಪ್ರಸ್ತುತ ದೌಸಾ ಜೈಲಿನಲ್ಲಿದ್ದ ವ್ಯಕ್ತಿಯೊಬ್ಬರು ಮುಖ್ಯಮಂತ್ರಿ ಭಜನ್ಲಾಲ್ ಶರ್ಮಾ ಅವರಿಗೆ ದೂರವಾಣಿ ಮೂಲಕ ಕೊಲೆ ಬೆದರಿಕೆ ಕಳುಹಿಸಿದ್ದಾರೆ ಎಂದು ಆರೋಪಿಸಲಾಗಿದೆ. ಇದು ಅಪರಾಧಿಗೆ ಫೋನ್ ಹೇಗೆ ಸಿಕ್ಕಿತು ಎಂಬುದರ ಬಗ್ಗೆ ವಿಚಾರಣೆಗೆ ಕಾರಣವಾಗಿದೆ. ರಾಜ್ಯದ ಗೃಹ ಸಚಿವರು “ಜೈಲಿನೊಳಗೆ ಇನ್ನೊಬ್ಬ ಅಧಿಕಾರಿ ಭಾಗಿಯಾಗಿರಬಹುದು ಎಂದು ಮೇಲ್ನೋಟಕ್ಕೆ ತೋರುತ್ತಿದೆ” ಎಂದು ಹೇಳಿದ್ದಾರೆ. ಆರೋಪಿ, ರಿಂಕು/ರಣ್ವಾ, ಮೊದಲು ಲೈಂಗಿಕ ಅಪರಾಧಗಳಿಗಾಗಿ ಪೋಕ್ಸೋ ಕಾಯ್ದೆಯಡಿಯಲ್ಲಿ ಬಂಧಿತನಾಗಿದ್ದಾನೆ. ಜೈಲಿನ ಇನ್ಸ್ಪೆಕ್ಟರ್ ಜನರಲ್ ವಿಕ್ರಮ್ ಸಿಂಗ್‌ಗೆ ತನಿಖೆಯ ಜವಾಬ್ದಾರಿಯನ್ನು ನೀಡಲಾಗಿದೆ. “ಅಪರಾಧಿಗೆ

ರಾಜಸ್ಥಾನದ ಮುಖ್ಯಮಂತ್ರಿಗೆ ಜೈಲಿನಿಂದಲೇ ಬೆದರಿಕೆ Read More »

ಬ್ರೇಕಿಂಗ್ ನ್ಯೂಸ್

ಡ್ಯಾಮ್‌ ಹಿಂಬದಿ ಸುರಂಗ ಕುಸಿತ; 6ಕ್ಕೂ ಅಧಿಕ ಕಾರ್ಮಿಕರು ಟ್ರ್ಯಾಪ್‌

(ನ್ಯೂಸ್ ಕಡಬ) newskadaba.com ಫೆ. 22. ಹೈದರಾಬಾದ್‌: ತೆಲಂಗಾಣದಲ್ಲಿ ಶನಿವಾರ ನಿರ್ಮಾಣ ಹಂತದ ಸುರಂಗದ ಒಂದು ಭಾಗ ಕುಸಿದು ಕನಿಷ್ಠ 30 ಕಾರ್ಮಿಕರು ಸಿಲುಕಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಶ್ರೀಶೈಲಂ ಅಣೆಕಟ್ಟಿನ ಹಿಂದಿನ ಸುರಂಗದ ಒಂದು ಭಾಗದಲ್ಲಿ ಸೋರಿಕೆಯನ್ನು ಸರಿಪಡಿಸಲು ಕೆಲವು ಕಾರ್ಮಿಕರು ಒಳಗೆ ಹೋದಾಗ ಈ ಕುಸಿತ ಸಂಭವಿಸಿದೆ. ಅವರಲ್ಲಿ ಮೂವರು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದರೆ, ಸುಮಾರು 6ಕ್ಕೂ ಹೆಚ್ಚು ಮಂದಿ ಒಳಗೆ ಸಿಲುಕಿದ್ದಾರೆ ಎನ್ನಲಾಗಿದೆ. ಅವರನ್ನು ಸುರಕ್ಷಿತವಾಗಿ ಹೊರತರಲು ರಕ್ಷಣಾ ಕಾರ್ಯಾಚರಣೆ ಆರಂಭವಾಗಿದೆ.ಈ ಸುರಂಗವು ನಾಗರ್ಕರ್ನೂಲ್ ಜಿಲ್ಲೆಯ ಶ್ರೀಶೈಲಂ ಎಡದಂಡೆ ಕಾಲುವೆಯ (SLBC) ನಿರ್ಮಾಣ

ಡ್ಯಾಮ್‌ ಹಿಂಬದಿ ಸುರಂಗ ಕುಸಿತ; 6ಕ್ಕೂ ಅಧಿಕ ಕಾರ್ಮಿಕರು ಟ್ರ್ಯಾಪ್‌ Read More »

ಕರ್ನಾಟಕ

ಕಾಸರಗೋಡು: ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಿಗೆ 137 ವರ್ಷ ಜೈಲು ಶಿಕ್ಷೆ; 7.5 ಲ.ರೂ ದಂಡ

(ನ್ಯೂಸ್ ಕಡಬ) newskadaba.com ಫೆ. 22. ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗೆ ಜೀವಾವಧಿ ಕಠಿನ ಸಜೆ, ಅದರೊಂದಿಗೆ 137 ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ 7.5 ಲ.ರೂ ದಂಡ ವಿಧಿಸಿ ಕಾಸರಗೋಡು ಫಾಸ್ಟ್ ಟ್ರ‍್ಯಾಕ್ ವಿಶೇಷ ನ್ಯಾಯಾಲಯ ಆದೇಶ ಹೊರಡಿಸಿದೆ. ಮೀಯಪದವು ಮೂಡಂಬೈಲು ಕುಳವಯಲ್ ನಿವಾಸಿ ವಲ್ಲಿ ಡಿ’ಸೋಜಾ(47)ನಿಗೆ ಶಿಕ್ಷೆ ವಿಧಿಸಿ ಕೋರ್ಟ್ ತೀರ್ಪು ನೀಡಿದೆ. ಆರೋಪಿ ವಲ್ಲಿ ಡಿ’ಸೋಜಾ ಒಂದು ವೇಳೆ ದಂಡ ಪಾವತಿಸದಿದ್ದಲ್ಲಿ 28 ತಿಂಗಳು ಹೆಚ್ಚುವರಿ ಕಠಿನ ಸಜೆ ಅನುಭವಿಸುವಂತೆ ಕೋರ್ಟ್ ತೀರ್ಪಿನಲ್ಲಿ

ಕಾಸರಗೋಡು: ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಿಗೆ 137 ವರ್ಷ ಜೈಲು ಶಿಕ್ಷೆ; 7.5 ಲ.ರೂ ದಂಡ Read More »

ಕರಾವಳಿ

ಮಾ.11 ,12 ರಂದು ಪ್ರಧಾನಿ ಮೋದಿ ಮಾರಿಷಸ್‌ ಪ್ರವಾಸ

(ನ್ಯೂಸ್ ಕಡಬ) newskadaba.com ಫೆ. 22. ಮಾ.11 ಮತ್ತು ಮಾ.12ರಂದು ಪ್ರಧಾನಿ ನರೇಂದ್ರ ಮೋದಿ ಅವರು ಮಾರಿಷಸ್‌ ಪ್ರವಾಸ ಕೈಗೊಳ್ಳಲಿದ್ದಾರೆ.ಮಾರಿಷಸ್‌ನ ರಾಷ್ಟ್ರೀಯ ದಿನಾಚರಣೆಯಲ್ಲಿ ಮೋದಿ ಅವರು  ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದು ಮಾರಿಷಸ್ ಪ್ರಧಾನಿ ನವೀನ್ ರಾಮ್‌ಗೂಲಂ ತಿಳಿಸಿದ್ದಾರೆ. ಶುಕ್ರವಾರ ಸದನವನ್ನುದ್ದೇಶಿಸಿ ಮಾತನಾಡಿದ ನವೀನ್ ರಾಮ್‌ಗೂಲಂ, ನಮ್ಮ ದೇಶದ ಸ್ವಾತಂತ್ರ್ಯದ 57ನೇ ವಾರ್ಷಿಕೋತ್ಸವದ ಆಚರಣೆಯ ಸಂದರ್ಭದಲ್ಲಿ, ಸದನಕ್ಕೆ ಒಂದು ವಿಷಯ ತಿಳಿಸಲು ನನಗೆ ತುಂಬಾ ಸಂತೋಷವಾಗಿದೆ. ನಮ್ಮ ಆಹ್ವಾನದ ಮೇರೆಗೆ ರಾಷ್ಟ್ರೀಯ ದಿನಾಚರಣೆಯಲ್ಲಿ ಗೌರವಾನ್ವಿತ ಅತಿಥಿಯಾಗಿ ಪಾಲ್ಗೊಳ್ಳಲು ಭಾರತದ ಪ್ರಧಾನಿ ಮೋದಿ ಅವರು

ಮಾ.11 ,12 ರಂದು ಪ್ರಧಾನಿ ಮೋದಿ ಮಾರಿಷಸ್‌ ಪ್ರವಾಸ Read More »

ಬ್ರೇಕಿಂಗ್ ನ್ಯೂಸ್

ಭಾರತದಲ್ಲಿ ಇಂಧನ ಬೆಲೆ ಇಳಿಕೆ ಸಾಧ್ಯತೆ

(ನ್ಯೂಸ್ ಕಡಬ) newskadaba.com ಫೆ. 22. ಅಮೆರಿಕ ಸೇರಿದಂತೆ ಜಾಗತಿಕ ಮಾರುಕಟ್ಟೆಯಲ್ಲಿ ಹೆಚ್ಚಿನ ತೈಲ ಬರುತ್ತಿರುವುದರಿಂದ ಇಂಧನ ಬೆಲೆಗಳು ಕಡಿಮಯಾಗುವ ಸಾಧ್ಯತೆಯಿದೆ ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಎಸ್ ಪುರಿ ಹೇಳಿದ್ದಾರೆ. ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಪುರಿ, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇತೃತ್ವದ ಹೊಸ ಯುಎಸ್ ಆಡಳಿತದೊಂದಿಗೆ ಭಾರತವು ಸಂಪರ್ಕಗಳನ್ನು ಸ್ಥಾಪಿಸಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ ಅವರು ಇಂಧನ ರಂಗದಲ್ಲಿ ಇಂಡೋ-ಅಮೆರಿಕನ್ ಸಂಬಂಧವು ಗಾಢವಾಗಲಿದೆ ಎಂದು ಹೇಳಿದರು. ಭಾರತವು ಅರ್ಜೆಂಟೀನಾ ಸೇರಿದಂತೆ 40 ದೇಶಗಳಿಂದ ತೈಲವನ್ನು ಆಮದು

ಭಾರತದಲ್ಲಿ ಇಂಧನ ಬೆಲೆ ಇಳಿಕೆ ಸಾಧ್ಯತೆ Read More »

ಬ್ರೇಕಿಂಗ್ ನ್ಯೂಸ್
crime, arrest, suspected

ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ 51 ಜನರಿಗೆ ವಂಚನೆ: ದಂಪತಿ ಬಂಧನ

(ನ್ಯೂಸ್ ಕಡಬ) newskadaba.com ಫೆ. 22. ಬೆಂಗಳೂರು: ವಿದೇಶಿ ವರ್ಕಿಂಗ್ ವೀಸಾ ಕೊಡಿಸುವುದಾಗಿ ನಂಬಿಸಿ 51 ಜನರಿಗೆ ವಂಚಿಸಿದ ದಂಪತಿಗಳನ್ನು ನಗರ ಪೊಲೀಸರು ಶುಕ್ರವಾರ ಬಂಧಿಕ್ಕೊಳಪಡಿಸಿದ್ದಾರೆ. ತಿಲಕನಗರ ಸಕ್ಲೇನ್ ಸುಲ್ತಾನ್ (34) ಮತ್ತು ಈತನ ಪತ್ನಿ ನಿಖಿತಾ ಸುಲತಾನ್ (28) ಬಂಧಿತರು. ಆರೋಪಿಗಳಿಂದ 2 ಐಷಾರಾಮಿ ಕಾರು, ಎರಡು ದ್ವಿಚಕ್ರ ವಾಹನ, ರೂ.66 ಲಕ್ಷ ನಗರು, 24 ಗ್ರಾಂ ಚಿನ್ನಾಭರಣವನ್ನು ಜಪ್ತಿ ಮಾಡಲಾಗಿದೆ. ರಾಜಸ್ಥಾನ ಮೂಲಕ ಮಗ್ ಸಿಂಗ್ ನೀಡಿದ ದೂರಿನ ಮೇಲೆಗೆ ಪ್ರಕರಣ ದಾಖಲಿಸಿ ತನಿಖೆ ನಡೆಸಿ ಇಬ್ಬರು ಆರೋಪಿಗಳನ್ನು

ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ 51 ಜನರಿಗೆ ವಂಚನೆ: ದಂಪತಿ ಬಂಧನ Read More »

ಬ್ರೇಕಿಂಗ್ ನ್ಯೂಸ್

ಉಡುಪಿ : ಶಿಲುಬೆಯನ್ನು ಧ್ವಂಸ ಗೊಳಿಸಿದ ದುಷ್ಕರ್ಮಿಗಳು

(ನ್ಯೂಸ್ ಕಡಬ) newskadaba.com ಫೆ. 22. ಬೆಂಗಳೂರು: ಶಿರ್ವದ ಮೂಡುಬೆಳ್ಳೆ ಗ್ರಾಮದ ಕಟ್ಟಿಂಗೇರಿ ಸಮೀಪದ ಕುದ್ರಮಲೆ ಎಂಬಲ್ಲಿ ದುಷ್ಕರ್ಮಿಗಳು ಶಿಲುಬೆಯನ್ನು ಧ್ವಂಸ ಗೊಳಿಸಿರುವ ಘಟನೆ ನಡೆದಿದೆ. ಖಾಸಗಿ ಜಾಗದಲ್ಲಿರುವ ಈ ಶಿಲುಬೆಯನ್ನು ಸುತ್ತಮುತ್ತಲಿನ ಕ್ರೈಸ್ತ ಕುಟುಂಬದವರು ಕಳೆದ 30 ವರ್ಷಗಳಿಂದ ಆರಾಧಿಸಿಕೊಂಡು ಬರುತ್ತಿದ್ದಾರೆ. ಗುಡ್ಡದ ಮೇಲಿರುವ ಈ ಶಿಲುಬೆಯನ್ನು ಧ್ವಂಸ ಗೊಳಿಸಿರುವುದು ತಡವಾಗಿ ಬೆಳಕಿಗೆ ಬಂದಿದೆ. ಇದಕ್ಕಿಂತ 15 ದಿನಗಳ ಹಿಂದೆ ಇಲ್ಲಿ ಪ್ರಾರ್ಥನೆ ಸಲ್ಲಿಸಲಾಗಿತ್ತು. ಆ ಬಳಿಕ ಇತ್ತ ಯಾರೂ ಕೂಡ ಹೋಗಿರಲಿಲ್ಲ. ಫೆ.19 ರಂದು ಸ್ಥಳೀಯರು ಅಲ್ಲಿಗೆ ತೆರಳಿದಾಗ ದುಷ್ಕರ್ಮಿಗಳು

ಉಡುಪಿ : ಶಿಲುಬೆಯನ್ನು ಧ್ವಂಸ ಗೊಳಿಸಿದ ದುಷ್ಕರ್ಮಿಗಳು Read More »

ಕರಾವಳಿ

ಬಸ್, ಮೆಟ್ರೋ, ಹಾಲು ದರ ಏರಿಕೆ ಬೆನ್ನಲ್ಲೇ ಅಡುಗೆ ಎಣ್ಣೆ ಬೆಲೆ ಏರಿಕೆ ಬರೆ

(ನ್ಯೂಸ್ ಕಡಬ) newskadaba.com ಫೆ. 22. ಬೆಂಗಳೂರು: ಬಸ್, ಮೆಟ್ರೋ, ಹಾಲು ದರ ಏರಿಕೆಯ ಬೆನ್ನಲ್ಲೇ ಇದೀಗ ಗ್ರಾಹಕರಿಗೆ ಅಡುಗೆ ಎಣ್ಣೆ ಬೆಲೆ ಏರಿಕೆಯ ಬರೆ ಬಿದ್ದಿದೆ. ಅದರಲ್ಲೂ ತೆಂಗಿನಕಾಯಿ ಎಣ್ಣೆ ದರ ಲೀಟರ್‌ಗೆ 300 ರೂ. ಗಡಿ ದಾಟಿದೆ. ಯಾವುದೇ ಅಡುಗೆ ಮಾಡುವುದಾದರೂ ಅಡುಗೆ ಎಣ್ಣೆ ಮುಖ್ಯವಾಗಿ ಬೇಕಾಗುತ್ತದೆ. ಆದರೆ ಖಾದ್ಯ ತೈಲ ಬೆಲೆ ಕಳೆದೊಂದು ತಿಂಗಳಿಂದ ಏರಿಕೆಯಾಗುತ್ತಲೇ ಇದೆ. ಈ ಮೂಲಕ ಅಡುಗೆ ಎಣ್ಣೆ 10-20 ರೂ. ಏರಿಕೆ ಕಂಡಿದೆ. ಜಾಗತಿಕ ಮಟ್ಟದಲ್ಲಿ ಪೂರೈಕೆ ಕಡಿಮೆಯಾಗುತ್ತಿರುವ ಹಿನ್ನೆಲೆ ಸನ್ ಫ್ಲವರ್

ಬಸ್, ಮೆಟ್ರೋ, ಹಾಲು ದರ ಏರಿಕೆ ಬೆನ್ನಲ್ಲೇ ಅಡುಗೆ ಎಣ್ಣೆ ಬೆಲೆ ಏರಿಕೆ ಬರೆ Read More »

ಕರ್ನಾಟಕ
Scroll to Top