News Kadaba

ಕೊಡಗಿನಲ್ಲಿ ಭೀಕರ ಹತ್ಯಾಕಾಂಡ; ಕಾಫಿ ತೋಟದ ಮನೆಯಲ್ಲಿ ನಾಲ್ವರ ಬರ್ಬರ ಹತ್ಯೆ

(ನ್ಯೂಸ್ ಕಡಬ) newskadaba.com , ಮಾ.28: ಕೊಡಗು: ಜಿಲ್ಲೆಯಲ್ಲಿ ಭೀಕರ ಹತ್ಯಾಕಾಂಡ ನಡೆದಿದೆ. ಪತ್ನಿಗೆ ಅಕ್ರಮ ಸಂಬಂಧ ಶಂಕೆಯಿಂದ ವ್ಯಕ್ತಿಯೊಬ್ಬ ಪತ್ನಿ ಸೇರಿ ನಾಲ್ವರನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ಕುಳುತೋಡು ಗ್ರಾಮದಲ್ಲಿ ನಡೆದಿದೆ. ಕರಿಯ (75), ಗೌರಿ (70), ನಾಗಿ (35) ಹಾಗೂ 8 ವರ್ಷದ ಕಾವೇರಿಯನ್ನು ಕತ್ತಿಯಿಂದ ಹಲ್ಲೆಗೈದು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಗಿರೀಶ್ (35) ಆರೋಪಿಯಾಗಿದ್ದು, ಈತ ಸದ್ಯ ನಾಪತ್ತೆಯಾದ್ದಾನೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸುತ್ತಿದ್ದಾರೆ.

ಕೊಡಗಿನಲ್ಲಿ ಭೀಕರ ಹತ್ಯಾಕಾಂಡ; ಕಾಫಿ ತೋಟದ ಮನೆಯಲ್ಲಿ ನಾಲ್ವರ ಬರ್ಬರ ಹತ್ಯೆ Read More »

ಕರ್ನಾಟಕ, ಕ್ರೈಮ್ ನ್ಯೂಸ್

ಸರಣಿ ಬೆಲೆ ಏರಿಕೆ ಸರ್ಕಾರದ ವಿರುದ್ಧ ಜನಾಕ್ರೋಶ

(ನ್ಯೂಸ್ ಕಡಬ) newskadaba.com , ಮಾ.28: ಮೆಟ್ರೋ, ಬಸ್‌‍ ಪ್ರಯಾಣದರ, ಹಾಲು, ವಿದ್ಯುತ್‌ ದರ ಏರಿಕೆ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಸರಣಿ ಬೆಲೆ ಏರಿಕೆಯಿಂದ ಹೈರಾಣಾಗಿರುವ ಶ್ರೀಸಾಮಾನ್ಯರು ಸರ್ಕಾರದ ವಿರುದ್ಧ ಕಿಡಿಕಾರಿದ್ದು, ಇದೇ ರೀತಿ ನಿರಂತರ ಬೆಲೆ ಏರಿಕೆಯಾದರೆ ಹೇಗೆ ಬದುಕಬೇಕೆಂದು ಅಲವತ್ತುಕೊಂಡಿದ್ದಾರೆ. ರೈತರ ನೆಪ ಹೇಳಿಕೊಂಡು ಹಾಲು, ಮೊಸರಿಗೆ 4ರೂ. ದರ ಹೆಚ್ಚಿಸಿ ಸರ್ಕಾರ ಜನಸಾಮಾನ್ಯರನ್ನು ಸುಲಿಗೆ ಮಾಡಲು ಹೊರಟಿದೆ. ಹಾಲು ಉತ್ಪಾದಕರಿಗೆ ಅನುಕೂಲ ಮಾಡಿಕೊಡಬೇಕೆಂ ದಿದ್ದರೆ ಹಿಂಡಿ, ಬೂಸಾ ದರ ಕಡಿಮೆ ಮಾಡಬೇಕಿತ್ತು. ಅದನ್ನು

ಸರಣಿ ಬೆಲೆ ಏರಿಕೆ ಸರ್ಕಾರದ ವಿರುದ್ಧ ಜನಾಕ್ರೋಶ Read More »

ಕರ್ನಾಟಕ

ಪತ್ನಿಯನ್ನು ಕೊಲೆ ಮಾಡಿ ದೇಹವನ್ನು ತುಂಡು ಮಾಡಿ, ಸೂಟ್‌ಕೇಸ್‌ನಲ್ಲಿ ತುಂಬಿಟ್ಟ ಪತಿ- ಪುಣೆಯಲ್ಲಿ ಅರೆಸ್ಟ್‌

(ನ್ಯೂಸ್ ಕಡಬ) newskadaba.com , ಮಾ.28: ಬೆಂಗಳೂರಿನಲ್ಲಿ ಬೆಚ್ಚಿ ಬೀಸುವ ಭೀಕರ ಕೊಲೆಗೈದ ಘಟನೆ ನಡೆದಿದೆ. ಮಹಾರಾಷ್ಟ್ರದ ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಕೊಲೆ ಮಾಡಿ, ಆಕೆಯ ದೇಹವನ್ನು ತುಂಡು ಮಾಡಿ, ಸೂಟ್‌ಕೇಸ್‌ನಲ್ಲಿ ತುಂಬಿದ ಆರೋಪದ ಮೇಲೆ ಪುಣೆಯಲ್ಲಿ ಬಂಧಿಸಲಾಗಿದೆ. ಹುಲಿಮಾವು ಪೊಲೀಸ್ ಠಾಣೆ ವ್ಯಾಪ್ತಿಯ ದೊಡ್ಡಕನ್ನಮ್ಮನಹಳ್ಳಿ ನಿವಾಸಿ 32 ವರ್ಷದ ಗೌರಿ ಅನಿಲ್ ಸಂಬೇಕರ್ ಎಂದು ಗುರುತಿಸಲಾಗಿದೆ. ಆಕೆಯ ಪತಿ 36 ವರ್ಷದ ರಾಕೇಶ್ ರಾಜೇಂದ್ರ ಖೇಡ್ಕರ್ ಕೊಲೆಯ ಆರೋಪಿಯಾಗಿದ್ದಾರೆ. ಪೊಲೀಸ್ ವರದಿಗಳ ಪ್ರಕಾರ, ಮಹಾರಾಷ್ಟ್ರ ಮೂಲದ

ಪತ್ನಿಯನ್ನು ಕೊಲೆ ಮಾಡಿ ದೇಹವನ್ನು ತುಂಡು ಮಾಡಿ, ಸೂಟ್‌ಕೇಸ್‌ನಲ್ಲಿ ತುಂಬಿಟ್ಟ ಪತಿ- ಪುಣೆಯಲ್ಲಿ ಅರೆಸ್ಟ್‌ Read More »

ಕರ್ನಾಟಕ, ಕ್ರೈಮ್ ನ್ಯೂಸ್

ಮಯನ್ಮಾರ್‌ನಲ್ಲಿ 7.2 ತೀವ್ರತೆಯ ಭೂಕಂಪ: ದೆಹಲಿ,ಬ್ಯಾಂಕಾಕ್‌ ಸೇರಿದಂತೆ ಹಲವು ಕಡೆ ಕಂಪನದ ಅನುಭವ

(ನ್ಯೂಸ್ ಕಡಬ) newskadaba.com , ಮಾ.28: ಶುಕ್ರವಾರ ಬೆಳಿಗ್ಗೆ ಮಧ್ಯ ಮಯನ್ಮಾರ್ ನಲ್ಲಿ 7.7 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ತಿಳಿದು ಬಂದಿದೆ. ಮಧ್ಯಾಹ್ನ 12:30 ರ ಸುಮಾರಿಗೆ ಭೂಕಂಪ ಸಂಭವಿಸುತ್ತಿದ್ದಂತೆ ಕಟ್ಟಡಗಳಲ್ಲಿ ಎಚ್ಚರಿಕೆಯ ಶಬ್ದಗಳು ಮೊಳಗಿದವು. ಜನರಿಗೆ ಭೂ ಕಂಪನದ ಅನುಭವವಾಗುತ್ತಿದ್ದಂತೆ ಕಟ್ಟಡಗಳನ್ನು ಬಿಟ್ಟು ಹೊರಗೆ ಓಡಿ ಹೋಗಿದ್ದಾರೆ. ಸದ್ಯ ಜನರು ಭಯಭೀತರಾಗಿ ಓಡಿ ಬಂದಿರುವ ದೃಶ್ಯ ಸಿಸಿಟವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಹಾನಿ ಅಥವಾ ಸಾವುನೋವುಗಳ ಬಗ್ಗೆ ಯಾವುದೇ ವರದಿಯಾಗಿಲ್ಲ. ಮಯನ್ಮಾರ್

ಮಯನ್ಮಾರ್‌ನಲ್ಲಿ 7.2 ತೀವ್ರತೆಯ ಭೂಕಂಪ: ದೆಹಲಿ,ಬ್ಯಾಂಕಾಕ್‌ ಸೇರಿದಂತೆ ಹಲವು ಕಡೆ ಕಂಪನದ ಅನುಭವ Read More »

ಬ್ರೇಕಿಂಗ್ ನ್ಯೂಸ್

ರಾಜ್ಯದ ಜನತೆಗೆ ಕರೆಂಟ್‌ ಶಾಕ್‌- ಪ್ರತಿ ಯೂನಿಟ್‌ಗೆ 36 ಪೈಸೆ ಹೆಚ್ಚಳ

(ನ್ಯೂಸ್ ಕಡಬ) newskadaba.com , ಮಾ.28: ಕರ್ನಾಟಕ ವಿದ್ಯುತ್‌ ನಿಯಂತ್ರಣ ಆಯೋಗ ಜನರಿಗೆ ವಿದ್ಯುತ್ ಶಾಕ್ ಕೊಟ್ಟಿದೆ. ಪ್ರತಿ ಯೂನಿಟ್‌ಗೆ 36 ಪೈಸೆ ಹೆಚ್ಚಳ ಮಾಡಿ ಕೆಇಆರ್‌ಸಿ ಇಂದು (ಗುರುವಾರ) ಅಧಿಕೃತ ಆದೇಶ ಹೊರಡಿಸಿದ್ದು, ಪರಿಷ್ಕೃತ ವಿದ್ಯುತ್ ದರ ಏಪ್ರಿಲ್‌ 1ರಿಂದಲೇ ಅನ್ವಯವಾಗಲಿದೆ. ಮುಂದಿನ ಮೂರು ವರ್ಷಗಳಿಗೆ ದರ ಏರಿಕೆ ಮಾಡಿ ಪಟ್ಟಿ ಆದೇಶಿಸಿದೆ. ಯೂನಿಟ್‍ಗೆ 49 ಪೈಸೆ ಏರಿಕೆ ಮಾಡುವಂತೆ ಡಿಸೆಂಬರ್ ಕೊನೆಯ ವಾರದಲ್ಲಿ ಎಸ್ಕಾಂಗಳು ಕೆಇಆರ್‌ಸಿ ಪ್ರಸ್ತಾವನೆ ಸಲ್ಲಿಸಿದ್ದವು. ಪ್ರಸ್ತಾವನೆಯಂತೆ ಉತ್ಪಾದನೆಯ ಖರ್ಚು-ವೆಚ್ಚ ಮತ್ತು

ರಾಜ್ಯದ ಜನತೆಗೆ ಕರೆಂಟ್‌ ಶಾಕ್‌- ಪ್ರತಿ ಯೂನಿಟ್‌ಗೆ 36 ಪೈಸೆ ಹೆಚ್ಚಳ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಮುಂದಿನ ವಾರ ಥೈಲ್ಯಾಂಡ್, ಶ್ರೀಲಂಕಾಗೆ ಪ್ರಧಾನಿ ಮೋದಿ ಭೇಟಿ

(ನ್ಯೂಸ್ ಕಡಬ) newskadaba.com , ಮಾ.28.: ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಏಪ್ರಿಲ್ 3 ರಿಂದ 4 ರವರೆಗೆ ಬ್ಯಾಂಕಾಕ್‌ಗೆ ಭೇಟಿ ನೀಡಲಿದ್ದು, ಈ ಬಾರಿ ಬಿಮ್‌ಸ್ಟೆಕ್ ಅಧ್ಯಕ್ಷ ಸ್ಥಾನ ವಹಿಸಿಕೊಂಡಿರುವ ಥೈಲ್ಯಾಂಡ್ ಆಯೋಜಿಸಿರುವ 6ನೇ ಬಿಮ್‌ಸ್ಟೆಕ್ ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ. ಪ್ರಧಾನಿ ಮೋದಿ ಥೈಲ್ಯಾಂಡ್ ಭೇಟಿಯ ನಂತರ ಏಪ್ರಿಲ್ 4 ರಿಂದ 6 ರವರೆಗೆ ಶ್ರೀಲಂಕಾಗೆ ಭೇಟಿ ನೀಡಲಿದ್ದಾರೆ. “ಥೈಲ್ಯಾಂಡ್ ಪ್ರಧಾನಿ ಪೇಟೊಂಗ್‌ಟಾರ್ನ್ ಶಿನವಾತ್ರ ಅವರ ಆಹ್ವಾನದ ಮೇರೆಗೆ, ಪ್ರಧಾನಿ ನರೇಂದ್ರ ಮೋದಿ ಅವರು ಏಪ್ರಿಲ್ 3

ಮುಂದಿನ ವಾರ ಥೈಲ್ಯಾಂಡ್, ಶ್ರೀಲಂಕಾಗೆ ಪ್ರಧಾನಿ ಮೋದಿ ಭೇಟಿ Read More »

ಅಂತರ್ರಾಷ್ಟ್ರೀಯ ನ್ಯೂಸ್

12 ನೇ ತರಗತಿ ಲೆಕ್ಕಶಾಸ್ತ್ರ ಪರೀಕ್ಷೆ; ಬೇಸಿಕ್‌ ಕ್ಯಾಲ್ಕುಲೇಟರ್‌ ಅನುಮತಿಗೆ ಪ್ರಸ್ತಾಪ

(ನ್ಯೂಸ್ ಕಡಬ) newskadaba.com, ಮಾ. 25: ನವದೆಹಲಿ: ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯ (CBSE) ಆಡಳಿತ ಮಂಡಳಿಯು 2025-26ನೇ ಶೈಕ್ಷಣಿಕ ಅವಧಿಯಿಂದ 12ನೇ ತರಗತಿಯ ಲೆಕ್ಕಶಾಸ್ತ್ರ ಪರೀಕ್ಷೆಯಲ್ಲಿ ಬೇಸಿಕ್‌ ಕ್ಯಾಲ್ಕುಲೇಟರ್‌ಗಳನ್ನು ಬಳಸಲು ಅನುಮತಿಸುವ ಪ್ರಸ್ತಾಪವನ್ನು ಅನುಮೋದಿಸಿದೆ. ಕಳೆದ ವರ್ಷ ಡಿಸೆಂಬರ್‌ನಲ್ಲಿ ನಡೆದ ಸಿಬಿಎಸ್‌ಇಯ 140 ನೇ ಆಡಳಿತ ಮಂಡಳಿಯ ಸಭೆಯಲ್ಲಿ ಈ ನಿರ್ಧಾರಗಳನ್ನು ಅನುಮೋದಿಸಲಾಗಿದೆ ಎಂದು ತಿಳಿದು ಬಂದಿದೆ. ಪ್ರೋಗ್ರಾಮೆಬಲ್ ಅಲ್ಲದ ಕ್ಯಾಲ್ಕುಲೇಟರ್‌ಗಳನ್ನು ಅನುಮತಿಸಲಾಗುವುದು, ಸಂಕಲನ, ವ್ಯವಕಲನ, ಗುಣಾಕಾರ, ಭಾಗಾಕಾರ ಮತ್ತು ಶೇಕಡಾವಾರು ಲೆಕ್ಕಾಚಾರಗಳಂತಹ ಗಣಿತವನ್ನು ಮಾಡಲು ಮಾತ್ರ ಇದು ಸೀಮಿತವಾಗಿರುತ್ತದೆ ಎಂದು

12 ನೇ ತರಗತಿ ಲೆಕ್ಕಶಾಸ್ತ್ರ ಪರೀಕ್ಷೆ; ಬೇಸಿಕ್‌ ಕ್ಯಾಲ್ಕುಲೇಟರ್‌ ಅನುಮತಿಗೆ ಪ್ರಸ್ತಾಪ Read More »

ಕರ್ನಾಟಕ

ಅರ್ಹ ಮಹಿಳೆಯರಿಗೆ ತಿಂಗಳಿಗೆ 2,500 ರೂ. – ದೆಹಲಿ ಬಜೆಟ್‌ನಲ್ಲಿ ಸಿಎಂ ರೇಖಾ ಗುಪ್ತಾ ಘೋಷಣೆ

(ನ್ಯೂಸ್ ಕಡಬ) newskadaba.com, ಮಾ. 25: ದೆಹಲಿಯಲ್ಲಿ ಹೊಸದಾಗಿ ಆಯ್ಕೆಯಾದ ಬಿಜೆಪಿ ಸರ್ಕಾರವು 26 ವರ್ಷಗಳ ಬಳಿಕ ದೆಹಲಿ ವಿಧಾನಸಭೆಯಲ್ಲಿ ತನ್ನ ಮೊದಲ ಬಜೆಟ್ ಮಂಡಿಸಿದೆ. ದೆಹಲಿ ಮುಖ್ಯಮಂತ್ರಿ ಮತ್ತು ಹಣಕಾಸು ಸಚಿವೆ ರೇಖಾ ಗುಪ್ತಾ 2025-26 (FY26) ಹಣಕಾಸು ವರ್ಷದ ಬಜೆಟ್ ಅನ್ನು ಮಂಡಿಸಿದ್ದಾರೆ. ಬಜೆಟ್‌ನಲ್ಲಿ ಅರ್ಹ ಮಹಿಳೆಯರಿಗೆ ತಿಂಗಳಿಗೆ 2,500 ಪಾವತಿಸಲು ಸರ್ಕಾರ 5,100 ಕೋಟಿ ಹಣವನ್ನು ನಿಗದಿಪಡಿಸಿದೆ. ದೆಹಲಿಯ ಈ ಬಾರಿಯ ಬಜೆಟ್‌ 2025 ಹಿಂದಿನ ಬಜೆಟ್‌ಗಿಂತ ಶೇ. 31.5 ರಷ್ಟು ಹೆಚ್ಚಳ ಕಂಡಿದೆ. FY26 ರ

ಅರ್ಹ ಮಹಿಳೆಯರಿಗೆ ತಿಂಗಳಿಗೆ 2,500 ರೂ. – ದೆಹಲಿ ಬಜೆಟ್‌ನಲ್ಲಿ ಸಿಎಂ ರೇಖಾ ಗುಪ್ತಾ ಘೋಷಣೆ Read More »

ಬ್ರೇಕಿಂಗ್ ನ್ಯೂಸ್

ಧರ್ಮಸ್ಥಳ ಹಾಗೂ ಧರ್ಮಾಧಿಕಾರಿ ಕುಟುಂಬದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡುವವರ ವಿರುದ್ಧ ಜಾನ್ ಡೋ ಆದೇಶ ಜಾರಿ

(ನ್ಯೂಸ್ ಕಡಬ) newskadaba.com, ಮಾ. 25: ಧರ್ಮಸ್ಥಳ ಹಾಗೂ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆಯವರ ವಿರುದ್ಧ ಅವಹೇಳನಕಾರಿ ಹೇಳಿಕೆ ಹಾಗೂ ವರದಿ ಮಾಡದಂತೆ ಬೆಂಗಳೂರಿನ ಸಿಟಿ ಸಿವಿಲ್‌ ಕೋರ್ಟ್‌ ಪ್ರಧಾನ ಮತ್ತು ಸೆಷನ್ಸ್‌ ನ್ಯಾಯಾಲಯಜಾನ್ ಡೋ (ಅಶೋಕಕುಮಾರ್) ಆದೇಶ  ಹೊರಡಿಸಿದೆ. ಈ ಸಂಬಂಧ ಹಿರಿಯ ನ್ಯಾಯವಾದಿ ಎಸ್. ರಾಜಶೇಖರ್ ಹಿಳಿಯಾರು ವಾದ ಮಂಡಿಸಿದ್ದು, ದಾವೆಯನ್ನು ವಿಚಾರಣೆ ನಡೆಸಿದ ಸಿಸಿಎಚ್‌–11ನೇ ನ್ಯಾಯಾಲಯ ಧರ್ಮಸ್ಥಳ ಹಾಗೂ ಧರ್ಮಾಧಿಕಾರಿ ಡಿ ವೀರೇಂದ್ರ ಹೆಗ್ಗಡೆ ಅವರ ವಿರುದ್ಧ ಮಾಧ್ಯಮಗಳ ಮೂಲಕ ಅವಹೇಳನಕಾರಿ ವರದಿ ಮಾಡದಂತೆ ಹಾಗೂ ಈಗಾಗಲೇ ಸಾಮಾಜಿಕ

ಧರ್ಮಸ್ಥಳ ಹಾಗೂ ಧರ್ಮಾಧಿಕಾರಿ ಕುಟುಂಬದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡುವವರ ವಿರುದ್ಧ ಜಾನ್ ಡೋ ಆದೇಶ ಜಾರಿ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಸಂಸದರ ವೇತನ, ಭತ್ಯೆ , ಪಿಂಚಣಿ ಏರಿಕೆ ಮಾಡಿದ ಕೇಂದ್ರ ಸರ್ಕಾರ

(ನ್ಯೂಸ್ ಕಡಬ) newskadaba.com, ಮಾ. 25: ಲೋಕಸಭೆ ಮತ್ತು ರಾಜ್ಯಸಭಾ ಸಂಸದರ ವೇತನವನ್ನು ಕೇಂದ್ರ ಸರ್ಕಾರ ಹೆಚ್ಚಿಸಿದೆ. ಸಂಸದರ ವೇತನದ ಹೊರತಾಗಿ, ಮಾಜಿ ಸಂಸತ್ ಸದಸ್ಯರ ಭತ್ಯೆಗಳು ಮತ್ತು ಪಿಂಚಣಿಯನ್ನು ಸಹ ಹೆಚ್ಚಿಸಲಾಗಿದೆ. ಈ ಹೆಚ್ಚಳವು ಏಪ್ರಿಲ್ 1, 2023 ರಿಂದ ಜಾರಿಗೆ ಬರಲಿದೆ. ಸಂಸದೀಯ ವ್ಯವಹಾರಗಳ ಸಚಿವಾಲಯ ಸೋಮವಾರ ಗೆಜೆಟ್ ಅಧಿಸೂಚನೆಯನ್ನು ಹೊರಡಿಸಿದೆ. ಅಧಿಸೂಚನೆಯ ಪ್ರಕಾರ, ಲೋಕಸಭೆ ಮತ್ತು ರಾಜ್ಯಸಭೆ ಸದಸ್ಯರ ವೇತನವು ತಿಂಗಳಿಗೆ 1 ಲಕ್ಷ ರೂ.ಗಳಿಂದ 1.24 ಲಕ್ಷ ರೂ.ಗಳಿಗೆ ಏರಿಕೆಯಾಗಿದೆ. ಅದೇ ಸಮಯದಲ್ಲಿ, ದಿನಭತ್ಯೆ 2,000

ಸಂಸದರ ವೇತನ, ಭತ್ಯೆ , ಪಿಂಚಣಿ ಏರಿಕೆ ಮಾಡಿದ ಕೇಂದ್ರ ಸರ್ಕಾರ Read More »

ಬ್ರೇಕಿಂಗ್ ನ್ಯೂಸ್
Scroll to Top