News Kadaba

ನ್ಯೂಜಿಲೆಂಡ್‌ನಲ್ಲಿ 6.2 ತೀವ್ರತೆಯ ಭೂಕಂಪ

(ನ್ಯೂಸ್ ಕಡಬ) newskadaba.com ಎ. 30: ನ್ಯೂಜಿಲೆಂಡ್‌ನ ಪಶ್ಚಿಮ ಕರಾವಳಿಯಲ್ಲಿ 6.2 ತೀವ್ರತೆಯ ಭೂಕಂಪ ಸಂಭವಿಸಿದೆ. ಸ್ಥಳೀಯ ಸಮಯ ಬೆಳಗಿನ ಜಾವ 1 ಗಂಟೆ ಸಮಯದಲ್ಲಿ ಭೂಕಂಪ ಸಂಭವಿಸಿದೆ ಎಂದು ಅಮೆರಿಕ ಭೂವೈಜ್ಞಾನಿಕ ಸಮೀಕ್ಷೆ ತಿಳಿಸಿದೆ. ನ್ಯೂಜಿಲೆಂಡ್‌ನ ನೈಋತ್ಯಕ್ಕೆ 187 ಮೈಲುಗಳು ದೂರದ ಕರಾವಳಿಯ ಸಮುದ್ರದ 10 ಕಿ.ಮೀ ಆಳದಲ್ಲಿ ಕೇಂದ್ರ ಬಿಂದು ದಾಖಲಾಗಿದೆ. ಆದರೆ ನ್ಯೂಜಿಲೆಂಡ್‌ನಲ್ಲಿ ಭೂಕಂಪದ ಅನುಭವವಾಗಲಿಲ್ಲ ಎಂದು ದೇಶದ ಭೂವೈಜ್ಞಾನಿಕ ವಿಜ್ಞಾನ ಸಂಸ್ಥೆ ತಿಳಿಸಿದೆ. ಸುಮಾರು 50 ಲಕ್ಷ ಜನರಿಗೆ ನೆಲೆಯಾಗಿರುವ ನ್ಯೂಜಿಲೆಂಡ್ […]

ನ್ಯೂಜಿಲೆಂಡ್‌ನಲ್ಲಿ 6.2 ತೀವ್ರತೆಯ ಭೂಕಂಪ Read More »

ಕರ್ನಾಟಕ

ವಾಣಿಜ್ಯ ವಾಹನಗಳ ನೋಂದಣಿ ಶುಲ್ಕ ಮೇ.1 ರಿಂದ ಏರಿಕೆ

(ನ್ಯೂಸ್ ಕಡಬ) newskadaba.com ಎ. 30: ಬೆಂಗಳೂರು: ನಿರ್ಮಾಣ ವಲಯದಲ್ಲಿ ಬಳಸುವ ಮತ್ತು 10 ಲಕ್ಷ ರೂ. ಒಳಗಿನ ವಾಣಿಜ್ಯ ವಾಹನಗಳ ನೋಂದಣಿ ಶುಲ್ಕ ಮೇ 1 ರಿಂದ ಏರಿಕೆಯಾಗಲಿದೆ. ವಾಣಿಜ್ಯ ವಾಹನ ನಿರ್ವಾಹಕರ ವಿರೋಧದ ಹೊರತಾಗಿಯೂ, ರಾಜ್ಯ ಸರ್ಕಾರವು ಮೇ 1 ರಂದು ಕರ್ನಾಟಕ ಮೋಟಾರು ವಾಹನ ತೆರಿಗೆ (ತಿದ್ದುಪಡಿ) ಕಾಯ್ದೆಯನ್ನು ಜಾರಿಗೆ ತರುತ್ತಿದೆ. ಕಳೆದ ವಿಧಾನ ಮಂಡಲ ಅಧಿವೇಶನದಲ್ಲಿ ಅನು ಮೋದನೆ ನೀಡಲಾಗಿದ್ದ ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ (ತಿದ್ದುಪಡಿ) ವಿಧೇಯಕಕ್ಕೆ ರಾಜ್ಯಪಾಲರು

ವಾಣಿಜ್ಯ ವಾಹನಗಳ ನೋಂದಣಿ ಶುಲ್ಕ ಮೇ.1 ರಿಂದ ಏರಿಕೆ Read More »

ಕರ್ನಾಟಕ

ಮಂಗಳೂರು: ಗೋದಾಮಿನಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ 500 ಕ್ವಿಂಟಾಲ್ ಅಕ್ಕಿ ಜಪ್ತಿ

(ನ್ಯೂಸ್ ಕಡಬ) newskadaba.com ಎ. 30: ನಗರದ ಖಾಸಗಿ ಕಾಲೇಜಿನ ಹಿಂಭಾಗದಲ್ಲಿರುವ ಗೋದಾಮಿನಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ ಸುಮಾರು 500 ಕ್ವಿಂಟಾಲ್ ಅಕ್ಕಿಯನ್ನು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಸಾರ್ವಜನಿಕರಿಂದ ಬಂದ ದೂರುಗಳ ಆಧಾರದ ಮೇಲೆ, ಇಲಾಖೆಯ ಉಪ ನಿರ್ದೇಶಕಿ ಅನಿತಾ ವಿ. ಮಡ್ಲೂರು ಅವರ ನೇತೃತ್ವದಲ್ಲಿ ದಾಳಿ ನಡೆಸಲಾಯಿತು. “ಬಾಡಿಗೆ ಗೋದಾಮಿನಲ್ಲಿ ಬಾಸುಮತಿ, ಸೋನಾ ಮಸೂರಿ, ಜೀರಾ ರೈಸ್ ಮತ್ತು ತೌಡು ಅಕ್ಕಿ ಸೇರಿದಂತೆ ವಿವಿಧ ಬ್ರಾಂಡ್‌ಗಳ ಅಕ್ಕಿ ಚೀಲಗಳಿದ್ದವು. ಇದರ ಜೊತೆಗೆ,

ಮಂಗಳೂರು: ಗೋದಾಮಿನಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ 500 ಕ್ವಿಂಟಾಲ್ ಅಕ್ಕಿ ಜಪ್ತಿ Read More »

ಕರಾವಳಿ

ಭೀಕರ ಅಗ್ನಿ ಅವಘಡ, ಜೀವ ಉಳಿಸಿಕೊಳ್ಳಲು 5ನೇ ಅಂತಸ್ತಿನಿಂದ ಹಾರಿದ ಯುವತಿ

(ನ್ಯೂಸ್ ಕಡಬ) newskadaba.com ಎ. 30: ಅಹ್ಮದಾಬಾದ್: ಗುಜರಾತ್ ರಾಜಧಾನಿ ಅಹ್ಮದಾಬಾದ್ ನಲ್ಲಿ ನಡೆದ ಭೀಕರ ಅಗ್ನಿಅವಘಡದಲ್ಲಿ ಮಹಿಳೆಯೊಬ್ಬರು ಜೀವ ಉಳಿಸಿಕೊಳ್ಳಲು ಕಟ್ಟಡದ 5ನೇ ಅಂತಸ್ತಿನಿಂದ ಕೆಳಗೆ ಹಾರಿದ್ದಾರೆ. ಅಹ್ಮದಾಬಾದ್ ನ ಇಂದಿರಾ ಸೇತುವೆ ಪ್ರದೇಶದ ಆಟ್ರೆ ಆರ್ಕಿಡ್‌ನಲ್ಲಿರುವ ಬಹುಮಹಡಿ ಕಟ್ಟಡದಲ್ಲಿ ಈ ಅಗ್ನಿ ಅವಘಡ ಸಂಭವಿಸಿದ್ದು, ಅಪಾರ್ಟ್‌ಮೆಂಟ್ ಬೆಂಕಿಯಿಂದ ತಪ್ಪಿಸಿಕೊಳ್ಳಲು ಅಹ್ಮದಾಬಾದ್‌ನ ಐದನೇ ಮಹಡಿಯ ಕಟ್ಟಡದಿಂದ ಜಿಗಿದ ಯುವತಿಯೊಬ್ಬಳು ಬದುಕುಳಿದಿದ್ದಾಳೆ. ಯುವತಿ ಕೆಳಗೆ ಹಾರುತ್ತಲೇ ಕೆಳಗೆ ಇದ್ದ ಸುಮಾರು 20-25 ಜನರು ಬಲೆ ಅಥವಾ ಬಟ್ಟೆಯಂತಹ

ಭೀಕರ ಅಗ್ನಿ ಅವಘಡ, ಜೀವ ಉಳಿಸಿಕೊಳ್ಳಲು 5ನೇ ಅಂತಸ್ತಿನಿಂದ ಹಾರಿದ ಯುವತಿ Read More »

ಬ್ರೇಕಿಂಗ್ ನ್ಯೂಸ್

ಮೇ 1ರಿಂದ ಎಟಿಎಂ ವಿತ್ ಡ್ರಾ ಶುಲ್ಕ ಹೆಚ್ಚಳ

(ನ್ಯೂಸ್ ಕಡಬ) newskadaba.com ಎ. 29:  ನವದೆಹಲಿ: ಡಿಜಿಟಲ್ ಬ್ಯಾಂಕಿಂಗ್ ನತ್ತ ಇನ್ನೂ ನೀವು ಹೋಗಿಲ್ಲವೇ? ಹೆಚ್ಚಾಗಿ ಎಟಿಎಂ ಬಳಸುತ್ತಿದ್ದೀರಾ ? ಹಾಗಿದ್ದರೆ ಭಾರತೀಯ ರಿಸರ್ವ್ ಬ್ಯಾಂಕ್ ಹೊರಡಿಸಿರುವ ಈ ಆದೇಶ ನಿಮಗೆ ಶಾಕ್ ನೀಡಬಹುದು. ಮೇ 1ರಿಂದ ಜಾರಿಯಾಗುವಂತೆ ಭಾರತೀಯ ರಿಸರ್ವ್ ಬ್ಯಾಂಕ್ ಎಟಿಎಂ (ATM) ವಹಿವಾಟಿನ) ಉಚಿತ ಮಿತಿ ಮತ್ತು ಶುಲ್ಕಗಳಲ್ಲಿ ಬದಲಾವಣೆ ಮಾಡಿ ಆದೇಶಿಸಿದೆ. ಈಗಲೂ ಹೆಚ್ಚಾಗಿ ನೀವು ಎಟಿಎಂ ಮೂಲಕ ವಹಿವಾಟು ನಡೆಸುತ್ತಿದ್ದರೆ ಇನ್ನು ಮುಂದೆ ದುಬಾರಿ ಶುಲ್ಕ ನಿಮ್ಮ ಖಾತೆಯಿಂದ ಕಡಿತಗೊಳ್ಳಬಹುದು.

ಮೇ 1ರಿಂದ ಎಟಿಎಂ ವಿತ್ ಡ್ರಾ ಶುಲ್ಕ ಹೆಚ್ಚಳ Read More »

ಕರ್ನಾಟಕ

ಪುತ್ತೂರು: ರಬ್ಬರ್ ಟ್ಯಾಪಿಂಗ್‌ಗೆ ತೆರಳಿದ್ದ ವೇಳೆ ಕಾಡಾನೆ ದಾಳಿ: ಮಹಿಳೆ ಮೃತ್ಯು

(ನ್ಯೂಸ್ ಕಡಬ) newskadaba.com ಎ. 29:  ಪುತ್ತೂರು : ಇಲ್ಲಿನ ಕೊಳ್ತಿಗೆ ಗ್ರಾಮದ ಕಣಿಯಾರು ಮಲೆ ಅರ್ತಿಯಡ್ಕ ಸಿಆರ್‌ಸಿ ಕಾಲನಿ ಬಳಿ ಕಾಡಾನೆ ದಾಳಿಗೆ ತುತ್ತಾಗಿ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಮಂಗಳವಾರ ಬೆಳಗ್ಗೆ ನಡೆದಿದೆ. ಪೆರ್ಲಂಪಾಡಿ ಸಮೀಪದ ಅರ್ತಿಯಡ್ಕ ಎಂಬಲ್ಲಿನ ನಿವಾಸಿ ಮೃತಪಟ್ಟ ಮಹಿಳೆ. ಮಂಗಳವಾರ ಮುಂಜಾನೆ ಮಹಿಳೆ ಸಹಿತ ಮೂವರು ರಬ್ಬರ್‌ ಟ್ಯಾಪಿಂಗ್‌ಗೆ ಮಾಡಲು ತೆರಳಿದ್ದರು. ಈ ಸಂದರ್ಭದಲ್ಲಿ ಕಣಿಯಾರು ಮಲೆ ಎಂಬಲ್ಲಿ ಅವರನ್ನು ಆನೆ ಅಟ್ಟಿಸಿಕೊಂಡು ಬಂದಿತ್ತು. ಈ ವೇಳೆ ಉಳಿದ ಇಬ್ಬರು ಓಡಿ ತಪ್ಪಿಸಿಕೊಂಡಿದ್ದರು.

ಪುತ್ತೂರು: ರಬ್ಬರ್ ಟ್ಯಾಪಿಂಗ್‌ಗೆ ತೆರಳಿದ್ದ ವೇಳೆ ಕಾಡಾನೆ ದಾಳಿ: ಮಹಿಳೆ ಮೃತ್ಯು Read More »

ಕರಾವಳಿ

ಬೆಂಗಳೂರಿನಲ್ಲಿ 368 ಮರಗಳು ನೆಲಸಮ: ಕಂಟೋನ್ಮೆಂಟ್ ವಾಣಿಜ್ಯ ಯೋಜನೆಗೆ ವ್ಯಾಪಕ ಆಕ್ರೋಶ

(ನ್ಯೂಸ್ ಕಡಬ) newskadaba.com ಎ. 29:  ಬೆಂಗಳೂರು: ಕಂಟೋನ್ಮೆಂಟ್‌ನಲ್ಲಿ ರೈಲ್ವೆ ಇಲಾಖೆಯಿಂದ ಜಾರಿಗೆ ತಂದಿರುವ ವಾಣಿಜ್ಯ ಅಭಿವೃದ್ಧಿ ಯೋಜನೆಯು ವಿವಾದಕ್ಕೆ ಕಾರಣವಾಗಿದೆ. ಇದಕ್ಕಾಗಿ ನೂರಾರು ವರ್ಷಗಳು ಹಳೆಯದಾದ ಆಲದ ಮರ, ರಬ್ಬರ್ ಮತ್ತು ಕ್ರಿಸ್‌ಮಸ್ ಮರಗಳು ಸೇರಿದಂತೆ 368 ಮರಗಳನ್ನು ಕಡಿಯಬೇಕಾಗುತ್ತದೆ. ಈ ಬೆಳವಣಿಗೆಯ ಮಧ್ಯೆ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಅರಣ್ಯ ವಿಭಾಗವು ಯೋಜನೆಗೆ ಅನುಮೋದನೆ ನೀಡುವ ಮೊದಲು ಸಾರ್ವಜನಿಕರಿಂದ ಆಕ್ಷೇಪಣೆಗಳನ್ನು ಆಹ್ವಾನಿಸಿದೆ. ಈ ಪ್ರಸ್ತಾವನೆಯಿಂದ ಪರಿಸರ ಕಾರ್ಯಕರ್ತರು, ಮರಗಳನ್ನು ಕಡಿಯುವ ಯೋಜನೆಯನ್ನು ಸ್ಥಗಿತಗೊಳಿಸಬೇಕೆಂದು ಕರೆ

ಬೆಂಗಳೂರಿನಲ್ಲಿ 368 ಮರಗಳು ನೆಲಸಮ: ಕಂಟೋನ್ಮೆಂಟ್ ವಾಣಿಜ್ಯ ಯೋಜನೆಗೆ ವ್ಯಾಪಕ ಆಕ್ರೋಶ Read More »

ಕರ್ನಾಟಕ

ಪಹಲ್ಗಾಮ್ ದಾಳಿ ಹಿನ್ನೆಲೆ ನಾಳೆ ಪ್ರಧಾನಿ ಮೋದಿ ನೇತೃತ್ವದಲ್ಲಿ ಸರಣಿ ಸಭೆ

(ನ್ಯೂಸ್ ಕಡಬ) newskadaba.com ಎ. 29:  ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಕಳೆದ ವಾರ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಜನರು ಸಾವನ್ನಪ್ಪಿದ ಹಿನ್ನೆಲೆಯಲ್ಲಿ, ದೇಶದ ಭದ್ರತಾ ಸಿದ್ಧತೆಯನ್ನು ಪರಿಶೀಲಿಸಲು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಾಳೆ ಸರಣಿ ಸಭೆಗಳು ನಡೆಯಲಿವೆ. ರಾಷ್ಟ್ರದ ಉನ್ನತ ಭದ್ರತಾ ನಿರ್ಧಾರ ಕೈಗೊಳ್ಳುವ ಸಂಸ್ಥೆಯಾದ ಕ್ಯಾಬಿನೆಟ್ ಕಮಿಟಿ ಆನ್ ಸೆಕ್ಯುರಿಟಿ (ಸಿಸಿಎಸ್) ಬೆಳಿಗ್ಗೆ 11 ಗಂಟೆ ಸುಮಾರಿಗೆ ಸಭೆ ನಡೆಸಲಿದೆ. ಪಹಲ್ಗಾಮ್ ದಾಳಿಯ ನಂತರ ಇದು ಉನ್ನತ ಮಟ್ಟದ ಎರಡನೇ

ಪಹಲ್ಗಾಮ್ ದಾಳಿ ಹಿನ್ನೆಲೆ ನಾಳೆ ಪ್ರಧಾನಿ ಮೋದಿ ನೇತೃತ್ವದಲ್ಲಿ ಸರಣಿ ಸಭೆ Read More »

ರಾಷ್ಟ್ರೀಯ ನ್ಯೂಸ್

ಭಾರತ-ಪಾಕ್‌ ನಡುವಿನ ಮಾತುಕತೆಗೆ ನೆರವು ; ವಿಶ್ವಸಂಸ್ಥೆ ಮುಖ್ಯಸ್ಥ ಗುಟೇರಸ್‌‍

(ನ್ಯೂಸ್ ಕಡಬ) newskadaba.com ಎ. 29:  ಭಾರತ ಮತ್ತು ಪಾಕಿಸ್ತಾನದ ನಡುವಿನ ಪರಿಸ್ಥಿತಿಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ವಿಶ್ವಸಂಸ್ಥೆಯ ಮುಖ್ಯಸ್ಥ ಆಂಟೋನಿಯೊ ಗುಟೆರೆಸ್‌‍ ಅವರು ಉಭಯ ರಾಷ್ಟ್ರಗಳ ನಡುವಿನ ಶಾಂತಿ ಮಾತುಕತೆಗೆ ನಾವು ಮಧ್ಯಸ್ಥಿಕೆ ವಹಿಸಲು ಸಿದ್ಧ ಎಂದು ಘೋಷಿಸಿದ್ದಾರೆ. ಪ್ರಧಾನ ಕಾರ್ಯದರ್ಶಿ ಗುಟೇರಸ್‌‍ ಅವರು, ಭಾರತ ಮತ್ತು ಪಾಕಿಸ್ತಾನದ ನಡುವಿನ ಪರಿಸ್ಥಿತಿಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಗರಿಷ್ಠ ಸಂಯಮವನ್ನು ಕಾಪಾಡಿಕೊಳ್ಳಲು ಮತ್ತು ಯಾವುದೇ ಉಲ್ಬಣವನ್ನು ತಪ್ಪಿಸಲು ಅವರು ಎರಡೂ ಸರ್ಕಾರಗಳನ್ನು ಬಲವಾಗಿ ಒತ್ತಾಯಿಸುತ್ತಾರೆ

ಭಾರತ-ಪಾಕ್‌ ನಡುವಿನ ಮಾತುಕತೆಗೆ ನೆರವು ; ವಿಶ್ವಸಂಸ್ಥೆ ಮುಖ್ಯಸ್ಥ ಗುಟೇರಸ್‌‍ Read More »

ರಾಷ್ಟ್ರೀಯ ನ್ಯೂಸ್
Scroll to Top