News Kadaba

ಮಸೀದಿಯಲ್ಲಿದ್ದ ಕುರಾನ್‌ ಕದ್ದೊಯ್ದು ಭಸ್ಮ, ಬೆಳಗಾವಿಯಲ್ಲಿ ಪ್ರತಿಭಟನೆ, ಉದ್ವಿಗ್ನ ವಾತಾವರಣ

(ನ್ಯೂಸ್ ಕಡಬ) newskadaba.com , ಮೇ.13. ಬೆಳಗಾವಿ: ಬೆಳಗಾವಿಯ ಮಸೀದಿಯೊಂದರಲ್ಲಿ ಇಸ್ಲಾಂ ಧರ್ಮದ ಪವಿತ್ರ ಕುರಾನ್ ಪುಸ್ತಕ ಸುಟ್ಟು ಹಾಕಿರುವ ಘಟನೆ ಬೆಳಕಿಗೆ ಬಂದಿದ್ದು, ಘಟನೆ ಬೆನ್ನಲ್ಲೇ ಪ್ರತಿಭಟನೆ, ಆಕ್ರೋಶ ಭುಗಿಲೆದ್ದಿದೆ. ಬೆಳಗಾವಿ ತಾಲೂಕಿನ ಸಂತಿಬಸ್ತವಾಡ ಎಂಬ ಗ್ರಾಮದಲ್ಲಿ ಈ ಘಟನೆ ಬೆಳಕಿಗೆ ಬಂದಿದೆ. ಗ್ರಾಮದಲ್ಲಿ ನಿರ್ಮಾಣ ಹಂತದಲ್ಲಿದ್ದ ಮಸೀದಿಯ ಕೆಳಮಹಡಿಯಲ್ಲಿದ್ದ ಕುರಾನ್ ಪುಸ್ತಕವನ್ನು ಕದ್ದೊಯ್ದು ಸುಟ್ಟು ಹಾಕಲಾಗಿದೆ ಎನ್ನಲಾಗಿದೆ. ಈ ಮಸೀದಿಯಲ್ಲಿ ಎಂದಿನಂತೆ ಸೋಮವಾರ ಪ್ರಾರ್ಥನೆ ಮಾಡಲು ಮುಸಲ್ಮಾನರು ಆಗಮಿಸಿದ ವೇಳೆ ಕುರಾನ್, ಹದೀಸ್ ನಾಪತ್ತೆಯಾಗಿರುವುದನ್ನು […]

ಮಸೀದಿಯಲ್ಲಿದ್ದ ಕುರಾನ್‌ ಕದ್ದೊಯ್ದು ಭಸ್ಮ, ಬೆಳಗಾವಿಯಲ್ಲಿ ಪ್ರತಿಭಟನೆ, ಉದ್ವಿಗ್ನ ವಾತಾವರಣ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಟೆಸ್ಟ್‌ ಕ್ರಿಕೆಟ್‌ಗೆ ಕೊಹ್ಲಿ ಗುಡ್‌ಬೈ

(ನ್ಯೂಸ್ ಕಡಬ) newskadaba.com , ಮೇ.12.  ಕಿಂಗ್‌ ಕೊಹ್ಲಿ ಟೆಸ್ಟ್‌ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದಾರೆ. ಕಳೆದ 14 ವರ್ಷಗಳಿಂದ ಭಾರತೀಯ ಟೆಸ್ಟ್‌ ಕ್ರಿಕೆಟ್‌ ತಂಡದ ಪ್ರಮುಖ ಆಟಗಾರರಾಗಿದ್ದ ವಿರಾಟ್‌ ಕೊಹ್ಲಿ ಇಂದು ತಮ ಟೆಸ್ಟ್‌ ಕ್ರಿಕೆಟ್‌ ಜೀವನಕ್ಕೆ ವಿದಾಯ ಹೇಳಿದ್ದಾರೆ. ಇಂಗ್ಲೆಂಡ್‌ ವಿರುದ್ಧದ ಟೆಸ್ಟ್‌ ಪಂದ್ಯಗಳಿಗೆ ಭಾರತ ತಂಡ ಪ್ರಕಟಿಸಲು ಬಿಸಿಸಿಐ ಸಿದ್ಧತೆ ನಡೆಸುತ್ತಿದ್ದ ಸಂದರ್ಭದಲ್ಲೇ ಕೊಹ್ಲಿ ಅವರು ತಮ ಇನ್‌ಸ್ಟಾಗ್ರಾಮ್‌ನಲ್ಲಿ ತಮ ರಾಜೀನಾಮೆ ವಿಷಯ ಬಹಿರಂಗಪಡಿಸಿದ್ದಾರೆ.

ಟೆಸ್ಟ್‌ ಕ್ರಿಕೆಟ್‌ಗೆ ಕೊಹ್ಲಿ ಗುಡ್‌ಬೈ Read More »

ಬ್ರೇಕಿಂಗ್ ನ್ಯೂಸ್

ಯುದ್ಧದ ಉದ್ವಿಗ್ನ ಸ್ಥಿತಿಯ ನಡುವೆ ಪಾಕ್‌ನಲ್ಲಿ 4.6 ತೀವ್ರತೆಯ ಭೂಕಂಪ

(ನ್ಯೂಸ್ ಕಡಬ) newskadaba.com , ಮೇ.12.  ಭಾರತ-ಪಾಕ್‌ ಯುದ್ಧದ ಉದ್ವಿಗ್ನ ಸ್ಥಿತಿಯ  ನಡುವೆ ಪಾಕಿಸ್ತಾನ ಈಗ ಭೂಕಂಪದಿಂದ ನಲುಗಿದೆ. ರಿಕ್ಟರ್ ಮಾಪಕದಲ್ಲಿ 4.6 ತೀವ್ರತೆ ದಾಖಲಾಗಿದೆ. ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರದ ಪ್ರಕಾರ, ಭೂಕಂಪದ ಅಕ್ಷಾಂಶ 29.12N ಮತ್ತು ರೇಖಾಂಶ 67.26E ಆಗಿತ್ತು. ಶುಕ್ರವಾರ-ಶನಿವಾರದ ಮಧ್ಯರಾತ್ರಿ ಪಾಕಿಸ್ತಾನದಲ್ಲಿ 4.0 ತೀವ್ರತೆಯ ಭೂಕಂಪ ಸಂಭವಿಸಿದೆ. ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರದ ಮಾಹಿತಿ ಪ್ರಕಾರ, ಇಂದು ಮಧ್ಯಾಹ್ನ 1:26ರ ಸುಮಾರಿಗೆ ಮತ್ತೆ ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ 4.6 ತೀವ್ರತೆ ದಾಖಲಾಗಿದ್ದು, 10

ಯುದ್ಧದ ಉದ್ವಿಗ್ನ ಸ್ಥಿತಿಯ ನಡುವೆ ಪಾಕ್‌ನಲ್ಲಿ 4.6 ತೀವ್ರತೆಯ ಭೂಕಂಪ Read More »

ಬ್ರೇಕಿಂಗ್ ನ್ಯೂಸ್

ಪಾಕ್‍ಗೆ ನಾವು ಹೇಗಾದ್ರೂ ಪ್ರತಿಕ್ರಿಯಿಸುತ್ತೇವೆ, ಇದನ್ನು ಟ್ರಂಪ್ ಅರ್ಥ ಮಾಡಿಕೊಳ್ಳಲಿ: ಮೋದಿ

(ನ್ಯೂಸ್ ಕಡಬ) newskadaba.com , ಮೇ.12.  ಪಾಕಿಸ್ತಾನದ ದಾಳಿಗೆ ಭಾರತ ಏನು ಬೇಕಾದರೂ, ಹೇಗೆ ಬೇಕಾದರೂ ಪ್ರತಿಕ್ರಿಯಿಸುತ್ತೇವೆ. ಇದನ್ನು ಟ್ರಂಪ್ ಸರ್ಕಾರ ಅರ್ಥ ಮಾಡಿಕೊಳ್ಳಬೇಕು ಎಂದು ಅಮೆರಿಕದ ಉಪಾಧ್ಯಕ್ಷ ಜೆ.ಡಿ ವ್ಯಾನ್ಸ್ ಅವರಿಗೆ ಪ್ರಧಾನಿ ನರೇಂದ್ರ ಮೋದಿಯವರು ಖಡಕ್ ಆಗಿ ಪ್ರತಿಕ್ರಿಯೆ ನೀಡಿದ್ದಾರೆ ಎಂದು ಉನ್ನತ ಮೂಲಗಳು ಮಾಹಿತಿ ನೀಡಿವೆ. ಭಾರತ ಹಾಗೂ ಪಾಕ್ ನಡುವಿನ ಉದ್ವಿಗ್ನತೆ ಹೆಚ್ಚಾದ ಬಗ್ಗೆ ಗುಪ್ತಚರ ಮಾಹಿತಿ ಪಡೆದಿದ್ದ ವ್ಯಾನ್ಸ್, ಮೇ 9ರಂದು ಮೋದಿಯವರನ್ನು ಸಂಪರ್ಕಿಸಿ ಸಂಯಮದಿಂದ ವರ್ತಿಸುವಂತೆ ಮನವಿ ಮಾಡಿದ್ದರು.

ಪಾಕ್‍ಗೆ ನಾವು ಹೇಗಾದ್ರೂ ಪ್ರತಿಕ್ರಿಯಿಸುತ್ತೇವೆ, ಇದನ್ನು ಟ್ರಂಪ್ ಅರ್ಥ ಮಾಡಿಕೊಳ್ಳಲಿ: ಮೋದಿ Read More »

ಬ್ರೇಕಿಂಗ್ ನ್ಯೂಸ್

ಮಹಿಳೆಗೆ ಮರ್ಮಾಂಗ ತೋರಿಸಿದ ಗ್ರಾಪಂ ಉಪಾಧ್ಯಕ್ಷ: ಪಕ್ಷದಿಂದ ಉಚ್ಛಾಟಿಸಿದ ಬಿಜೆಪಿ

(ನ್ಯೂಸ್ ಕಡಬ) newskadaba.com , ಮೇ.12.  ಮಂಗಳೂರು: ಗ್ರಾಮ ಪಂಚಾಯತಿ ಉಪಾಧ್ಯಕ್ಷ ಹಾಗೂ ಬಿಜೆಪಿ ಸದಸ್ಯನೊಬ್ಬ ರಸ್ತೆಯ ವಿವಾದಕ್ಕೆ ವಾಗ್ಯುದ್ಧ ಆರಂಭಿಸಿ ಮಹಿಳೆಯ ಜೊತೆ ಅಸಭ್ಯ ವರ್ತನೆ ತೋರಿದ್ದಾನೆ. ಈತನ ವಿರುದ್ಧ ಮಹಿಳೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲ ಪೊಲೀಸರಿಗೆ ದೂರು ನೀಡಿದ್ದಾರೆ. ಆತನನ್ನು ತಕ್ಷಣದಿಂದ ಜಾರಿಗೆ ಬರುವಂತೆ ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ. ಇಡ್ಕಿದು ಗ್ರಾಮ ಪಂಚಾಯತಿ ಉಪಾಧ್ಯಕ್ಷ ಪದ್ಮನಾಭ ಸಪಲ್ಯ ಕೊಡೆಂಚರಪಾಲು ಎಂಬಾತ ಪ್ರಕರಣದ ಆರೋಪಿ. ಮನೆಗೆ ಹೋಗುವ ರಸ್ತೆಗೆ ಸಂಬಂಧಿಸಿದಂತೆ ಮಹಿಳೆಗೂ

ಮಹಿಳೆಗೆ ಮರ್ಮಾಂಗ ತೋರಿಸಿದ ಗ್ರಾಪಂ ಉಪಾಧ್ಯಕ್ಷ: ಪಕ್ಷದಿಂದ ಉಚ್ಛಾಟಿಸಿದ ಬಿಜೆಪಿ Read More »

ಕರಾವಳಿ

‘ಪಾಕ್ ದಾಳಿ ಮಾಡಿದರೆ, ನಾವು ಇನ್ನಷ್ಟು ಕಠಿಣ ಪ್ರತಿದಾಳಿ ನಡೆಸುತ್ತೇವೆ’ – ಪ್ರಧಾನಿ ಮೋದಿ ಎಚ್ಚರಿಕೆ

(ನ್ಯೂಸ್ ಕಡಬ) newskadaba.com , ಮೇ.12.  ಪಾಕಿಸ್ತಾನದೊಂದಿಗಿನ ಉದ್ವಿಗ್ನತೆ ಶಮನ ಒಪ್ಪಂದದ ಕುರಿತು ಚರ್ಚೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಅವರಿಗೆ, ಪಾಕಿಸ್ತಾನ ಭಾರತದ ಮೇಲೆ ದಾಳಿ ಮಾಡಿದರೆ, ದೇಶವು ಬಲವಾಗಿ ಪ್ರತೀಕಾರ ತೀರಿಸಿಕೊಳ್ಳುತ್ತದೆ ಎಂದು ಹೇಳಿದರು ಎಂದು ಸರ್ಕಾರಿ ಮೂಲಗಳು ಭಾನುವಾರ ತಿಳಿಸಿವೆ. “ವ್ಯಾನ್ಸ್ ಮೋದಿಗೆ ಕರೆ ಮಾಡಿ ಮಾತನಾಡಿದರು. ಅವರು ದಾಳಿ ಮಾಡಿದರೆ ನಾವು ಇನ್ನಷ್ಟು ಬಲವಾಗಿ ದಾಳಿ ಮಾಡುತ್ತೇವೆ ಎಂದು ಪ್ರಧಾನಿ ಅವರಿಗೆ ಹೇಳಿದರು” ಎಂದು

‘ಪಾಕ್ ದಾಳಿ ಮಾಡಿದರೆ, ನಾವು ಇನ್ನಷ್ಟು ಕಠಿಣ ಪ್ರತಿದಾಳಿ ನಡೆಸುತ್ತೇವೆ’ – ಪ್ರಧಾನಿ ಮೋದಿ ಎಚ್ಚರಿಕೆ Read More »

ಬ್ರೇಕಿಂಗ್ ನ್ಯೂಸ್

ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆ

(ನ್ಯೂಸ್ ಕಡಬ) newskadaba.com , ಮೇ.12.  ಬೆಂಗಳೂರು: ಭಾರತ-ಪಾಕಿಸ್ತಾನ ನಡುವೆ ಉಂಟಾದ ಉದ್ವಿಗ್ನ ಪರಿಸ್ಥಿತಿ ತಿಳಿಯಾಗುತ್ತಿದ್ದು, ಷೇರು ಮಾರುಕಟ್ಟೆ ಚೇತರಿಸಿಕೊಳ್ಳುತ್ತಿದೆ. ಇತ್ತ ಬೆಂಗಳೂರಿನಲ್ಲಿ ಸೋಮವಾರ (ಮೇ 12) ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆ ಕಂಡುಬಂದಿದೆ. ಇಂದು ಬೆಂಗಳೂರಿನಲ್ಲಿ 22 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆಯಲ್ಲಿ 165 ರೂ. ಇಳಿಕೆಯಾಗಿದ್ದು, 8,880 ರೂ.ಗೆ ತಲುಪಿದೆ. ಇನ್ನು 24 ಕ್ಯಾರಟ್‌ 1 ಗ್ರಾಂ ಚಿನ್ನಕ್ಕೆ 180 ರೂ. ಕಡಿಮೆಯಾಗಿ, 9,688 ರೂ.ಗೆ ಬಂದು ಮುಟ್ಟಿದೆ. 22 ಕ್ಯಾರಟ್‌ನ 8 ಗ್ರಾಂ

ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಭಾರತ-ಪಾಕ್ ಉದ್ವಿಗ್ನತೆ: ಬಂದ್ ಆಗಿದ್ದ 32 ಏರ್‌ಪೋರ್ಟ್‌ಗಳು ಮತ್ತೆ ಕಾರ್ಯಾರಂಭಿಸಿಲು ಸೂಚನೆ

(ನ್ಯೂಸ್ ಕಡಬ) newskadaba.com , ಮೇ.10. ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆ ಹಿನ್ನೆಲೆ ಬಂದ್ ಆಗಿದ್ದ ವಿವಿಧ ರಾಜ್ಯಗಳ 32 ವಿಮಾನ ನಿಲ್ದಾಣಗಳು ಮತ್ತೆ ಕಾರ್ಯಾರಂಭ ಮಾಡಲು ವಾಯುಪಡೆ ಸೂಚನೆ ನೀಡಿರುವುದಾಗಿ ವರದಿಯಾಗಿದೆ. 32 ವಿಮಾನ ನಿಲ್ದಾಣಗಳನ್ನು ತೆರೆಯುವಂತೆ ಭಾರತೀಯ ವಾಯುಪಡೆ ಅಧಿಕಾರಿಗಳು ಸೂಚನೆ ನೀಡಿದೆ. ಇದರ ಬೆನ್ನಲ್ಲೇ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ (ಎಎಐ) ಸಂಬಂಧಪಟ್ಟ ವಿಮಾನ ನಿಲ್ದಾಣಗಳಿಗೆ ಸೂಚನೆ ನೀಡಿದೆ. ಹೀಗಾಗಿ ದೇಶದ ಪಶ್ಚಿಮ ಮತ್ತು ಉತ್ತರ ಭಾಗಗಳಲ್ಲಿ ತಾತ್ಕಾಲಿಕವಾಗಿ ಮುಚ್ಚಲಾಗಿದ್ದ ವಿಮಾನ

ಭಾರತ-ಪಾಕ್ ಉದ್ವಿಗ್ನತೆ: ಬಂದ್ ಆಗಿದ್ದ 32 ಏರ್‌ಪೋರ್ಟ್‌ಗಳು ಮತ್ತೆ ಕಾರ್ಯಾರಂಭಿಸಿಲು ಸೂಚನೆ Read More »

ಬ್ರೇಕಿಂಗ್ ನ್ಯೂಸ್
Death, deadbody, Waterfall

ಕಾಪು: ದೇವಾಲಯದ ಕೆರೆಯಲ್ಲಿ ಮುಳುಗಿ 4 ವರ್ಷದ ಮಗು ಸಾವು

(ನ್ಯೂಸ್ ಕಡಬ) newskadaba.com , ಮೇ.10. ವಿವಾಹ ಸಮಾರಂಭದ ವೇಳೆ ದೇವಾಲಯದ ಕೆರೆಯ ಬಳಿ ಆಕಸ್ಮಿಕವಾಗಿ ಬಾಲಕನೊಬ್ಬ ಮುಳುಗಿ ಮೃತಪಟ್ಟ ದಾರುಣ ಘಟನೆ ನಂದಿಕೂರಿನಲ್ಲಿ ಮೇ 11ರಂದು ಸಂಭವಿಸಿದೆ. ಮೃತಪಟ್ಟ ಮಗುವನ್ನು ಕಾಪು, ಕುರ್ಕಾಲು ಗ್ರಾಮದ ನಿವಾಸಿಗಳಾದ ಸತ್ಯನಾರಾಯಣ (38) ಮತ್ತು ಸೌಮ್ಯ ಅವರ ಪುತ್ರ ವಾಸುದೇವ (4) ಎಂದು ಗುರುತಿಸಲಾಗಿದೆ. ಸತ್ಯನಾರಾಯಣ ಅವರು ನೀಡಿದ ದೂರಿನ ಪ್ರಕಾರ, ಕುಟುಂಬವು ನಂದಿಕೂರಿನ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಸಭಾಂಗಣದಲ್ಲಿ ನಡೆದ ವಿವಾಹಕ್ಕೆ ಹಾಜರಾಗಿತ್ತು. ಮಧ್ಯಾಹ್ನ 2:00 ಗಂಟೆ ಸುಮಾರಿಗೆ

ಕಾಪು: ದೇವಾಲಯದ ಕೆರೆಯಲ್ಲಿ ಮುಳುಗಿ 4 ವರ್ಷದ ಮಗು ಸಾವು Read More »

ಕರಾವಳಿ

ನಟ ರಾಕೇಶ್ ಪೂಜಾರಿ ಹೃದಯಘಾತದಿಂದ ಸಾವು

(ನ್ಯೂಸ್ ಕಡಬ) newskadaba.com , ಮೇ.10. ಕಾರ್ಕಳ : ಕಾಮಿಡಿ ಕಿಲಾಡಿ ವಿನ್ನರ್ ಮಲ್ಪೆಯ ರಾಕೇಶ್ ಪೂಜಾರಿ (34) ಹೃದಯಾಘಾತದಿಂದ ನಿಧನ ಹೊಂದಿದರು. ಮೇ 11ರಂದು ಮಿಯ್ಯಾರಿನ ತನ್ನ ಗೆಳೆಯನ ಮೆಹೆಂದಿ ಕಾರ್ಯಕ್ರಮದಲ್ಲಿ ಡಾನ್ಸ್ ಮಾಡುವ ಸಂದರ್ಭ ರಾಕೇಶ್ ಪೂಜಾರಿ ಕುಸಿದು ಬಿದ್ದರು. ತಕ್ಷಣವೇ ಅವರನ್ನು ಕಾರ್ಕಳ ಗಾಜಿಯಾ ಆಸ್ಪತ್ರೆಗೆ ಕರೆದುಕೊಂಡು ಹೋದ ಬಳಿಕ ಕಾರ್ಕಳ ಆಸ್ಪತ್ರೆಗೆ ದಾಖಲಿಸಲಾಯಿತು.ಈ ವೇಳೆಗಾಗಲೇ ರಾಕೇಶ್ ಪೂಜಾರಿ ಹೃದಯಾಘಾತದಿಂದ ನಿಧನ ಹೊಂದಿದರು ಎಂದು ಸೂಚಿಸಿದರು. ಮೃತರು ತಾಯಿ ಹಾಗೂ ತಂಗಿಯನ್ನು ಅಗಲಿದ್ದಾರೆ.

ನಟ ರಾಕೇಶ್ ಪೂಜಾರಿ ಹೃದಯಘಾತದಿಂದ ಸಾವು Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್
Scroll to Top