News Kadaba

ಮಂಗಳೂರು: ಮೇ 16 ರಂದು ಸಿಎಂ ಅವರಿಂದ ನೂತನ ಡಿಸಿ ಕಚೇರಿ ಲೋಕಾರ್ಪಣೆ

(ನ್ಯೂಸ್ ಕಡಬ) newskadaba.com , ಮೇ.15. ಪಡೀಲ್‌ನಲ್ಲಿ ನೂತನ ಜಿಲ್ಲಾಧಿಕಾರಿ ಕಚೇರಿ ‘ಪ್ರಜಾಸೌಧ’ವನ್ನು ಮೇ 16 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ  ಅವರು ಉದ್ಘಾಟಿಸಲಿದ್ದು, ಇದರ ನಿರ್ಮಾಣಕ್ಕೆ 75 ಕೋಟಿ ರೂ. ವೆಚ್ಚವಾಗಿದೆ. ತುಳುನಾಡಿನ ಸಂಪ್ರದಾಯ ಮತ್ತು ಆಧುನಿಕ ತಾಂತ್ರಿಕ ಏಕೀಕರಣದ ಸ್ಪರ್ಶದೊಂದಿಗೆ ಭವ್ಯತೆಯಿಂದ ಕೂಡಿದ ಅತ್ಯಾಧುನಿಕ ಸೌಲಭ್ಯದೊಂದಿಗೆ ನಿರ್ಮಾಣಗೊಂಡಿದೆ. ಎಂಟು ವರ್ಷಗಳ ಹಿಂದೆ ಮುಖ್ಯಮಂತ್ರಿಗಳು ಹೊಸ ಡಿಸಿ ಕಚೇರಿಗೆ ಶಿಲಾನ್ಯಾಸ ನೆರವೇರಿಸಿದರು. ಇಂದು, ಇದು ಪಡೀಲ್‌ನಲ್ಲಿ ಮಂಗಳೂರಿಗೆ ಪ್ರವೇಶ ದ್ವಾರದಲ್ಲಿ ವಾಸ್ತುಶಿಲ್ಪದ ಮೂಲಕ ಅದ್ಭುತವಾಗಿ ಕಚೇರಿಯ ಸಂಕೀರ್ಣ ಎದ್ದು ನಿಂತಿದೆ. […]

ಮಂಗಳೂರು: ಮೇ 16 ರಂದು ಸಿಎಂ ಅವರಿಂದ ನೂತನ ಡಿಸಿ ಕಚೇರಿ ಲೋಕಾರ್ಪಣೆ Read More »

ಕರಾವಳಿ, ಕರ್ನಾಟಕ

‘ಪಾಕಿಸ್ತಾನದ ಪರಮಾಣು ಶಸ್ತ್ರಾಸ್ತ್ರಗಳು IAEA ಮೇಲ್ವಿಚಾರಣೆಯಲ್ಲಿರಬೇಕು’- ರಾಜನಾಥ್ ಸಿಂಗ್

(ನ್ಯೂಸ್ ಕಡಬ) newskadaba.com , ಮೇ.15. ಪಾಕಿಸ್ತಾನದಲ್ಲಿರುವ ಪರಮಾಣು ಶಸ್ತ್ರಾಸ್ತ್ರಗಳನ್ನು ಅಂತರರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆಯ (IAEA) ಮೇಲ್ವಿಚಾರಣೆಗೆ ಒಳಪಡಿಸಬೇಕು ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಗುರುವಾರ (ಮೇ 15) ಹೇಳಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಶ್ರೀನಗರದ ಹೊರವಲಯದಲ್ಲಿರುವ ಬಾದಾಮಿ ಬಾಗ್ ಕಂಟೋನ್ಮೆಂಟ್‌ನಲ್ಲಿ ಭಾರತೀಯ ಸಶಸ್ತ್ರ ಪಡೆಗಳ ಸೈನಿಕರೊಂದಿಗೆ ಸಂವಾದ ನಡೆಸಿದರು. ಬಳಿಕ ಬಾದಾಮಿ ಬಾಗ್ ಕಂಟೋನ್ಮೆಂಟ್‌ನಲ್ಲಿ ಯೋಧರನ್ನು ಉದ್ದೇಶಿಸಿ ಮಾತನಾಡಿದ ಅವರು, ಆಪರೇಷನ್ ಸಿಂಧೂರ್‌ನ ಯಶಸ್ಸಿನಲ್ಲಿ ಭಾರತೀಯ ಸಶಸ್ತ್ರ ಪಡೆಗಳ ಸೈನಿಕರ ಪಾತ್ರಕ್ಕಾಗಿ ಕೃತಜ್ಞತೆಯನ್ನು

‘ಪಾಕಿಸ್ತಾನದ ಪರಮಾಣು ಶಸ್ತ್ರಾಸ್ತ್ರಗಳು IAEA ಮೇಲ್ವಿಚಾರಣೆಯಲ್ಲಿರಬೇಕು’- ರಾಜನಾಥ್ ಸಿಂಗ್ Read More »

ಬ್ರೇಕಿಂಗ್ ನ್ಯೂಸ್

ಪಾಕಿಸ್ತಾನಕ್ಕೆ ಬೆಂಬಲ ನೀಡಿದ ಟರ್ಕಿಯಲ್ಲಿ ಸಿನೆಮಾ ಶೂಟಿಂಗ್ ಬೇಡ-ಭಾರತೀಯ ಚಿತ್ರರಂಗ

(ನ್ಯೂಸ್ ಕಡಬ) newskadaba.com , ಮೇ.15. ಪಾಕಿಸ್ತಾನಕ್ಕೆ ಬೆಂಬಲಿಸಿದ ಟರ್ಕಿಗೆ ಭಾರತೀಯ ಚಿತ್ರರಂಗ ಬಿಸಿ ಮುಟ್ಟಿಸಲು ಮುಂದಾಗಿದೆ. ಟರ್ಕಿ ಮತ್ತು ಅಜರ್‌ಬೈಜಾನ್ ಕುತಂತ್ರದ ಬೆನ್ನಲ್ಲೇ ಸಿನಿಮಾ ರಂಗ ಮಹತ್ವದ ನಿರ್ಧಾರ ಕೈಗೊಂಡಿದೆ. ಪಾಕಿಸ್ತಾನ ಪರ ನಿಲುವು ಹೊಂದಿರುವ ಟರ್ಕಿಯೆಯನ್ನು ಶೂಟಿಂಗ್ ತಾಣವಾಗಿ ಬಹಿಷ್ಕರಿಸುವಂತೆ ಪಶ್ಚಿಮ ಭಾರತ ಸಿನಿಮಾ ನೌಕರರ ಒಕ್ಕೂಟ (FWICE) ಬುಧವಾರ ಭಾರತೀಯ ಕಲಾವಿದರು ಮತ್ತು ನಿರ್ಮಾಪಕರಿಗೆ ಮನವಿ ಮಾಡಿದೆ. ಟರ್ಕಿ ಮತ್ತು ಅಜರ್‌ಬೈಜಾನ್‌ನಲ್ಲಿ ಯಾವುದೇ ಸಿನಿಮಾದ ಶೂಟಿಂಗ್ ಮಾಡದಿರಲು ‘ಫೆಡರೇಷನ್ ಆಫ್ ವೆಸ್ಟರ್ನ್ ಇಂಡಿಯಾ ಸಿನಿ

ಪಾಕಿಸ್ತಾನಕ್ಕೆ ಬೆಂಬಲ ನೀಡಿದ ಟರ್ಕಿಯಲ್ಲಿ ಸಿನೆಮಾ ಶೂಟಿಂಗ್ ಬೇಡ-ಭಾರತೀಯ ಚಿತ್ರರಂಗ Read More »

ಬ್ರೇಕಿಂಗ್ ನ್ಯೂಸ್, ಸಿನಿಮಾ

ರಾಜ್ಯದ 12 ಕಡೆ ಏಕಕಾಲದಲ್ಲಿ ಲೋಕಾಯುಕ್ತ ದಾಳಿ, ಭಷ್ಟ ಅಧಿಕಾರಿಗಳಿಗೆ ಶಾಕ್

(ನ್ಯೂಸ್ ಕಡಬ) newskadaba.com , ಮೇ.15. ಇಂದು ಬೆಳಂಬೆಳಿಗ್ಗೆ ತಹಶೀಲ್ದಾರ್ ಸೇರಿ ಏಳು ಸರ್ಕಾರಿ ಅಧಿಕಾರಿಗಳ ಮನೆಗಳು ಮತ್ತು ಕಚೇರಿಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆದಿದೆ.ಅಕ್ರಮ ಆಸ್ತಿಗಳಿಕೆ ದೂರುಗಳು ಬಂದ ಹಿನ್ನೆಲೆಯಲ್ಲಿ ಸಮಗ್ರ ಪರಿಶೀಲನೆ ನಂತರ ಇಂದು ಏಕ ಕಾಲದಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ 12 ಕಡೆ ದಾಳಿ ನಡೆಸುವ ಮೂಲಕ ಭ್ರಷ್ಟ ಅಧಿಕಾರಿಗಳಿಗೆ ಶಾಕ್ ನೀಡಲಾಗಿದೆ. ಕಲಬುರಗಿಯ ಅಕ್ಕಮಹಾದೇವಿ ಬಡಾವಣೆಯಲ್ಲಿರುವ ಯಾದಗಿರಿ ಜಿಲ್ಲೆಯ ಶಹಾಪುರ ತಾಲ್ಲೂಕಿನ ತಹಶೀಲ್ದಾರ್ ಉಮಾಕಾಂತ ಮನೆ ಕಚೇರಿ.ತೋಟದ ಮನೆ ಹಾಗು ಇತರ

ರಾಜ್ಯದ 12 ಕಡೆ ಏಕಕಾಲದಲ್ಲಿ ಲೋಕಾಯುಕ್ತ ದಾಳಿ, ಭಷ್ಟ ಅಧಿಕಾರಿಗಳಿಗೆ ಶಾಕ್ Read More »

ಕರ್ನಾಟಕ

ವಿಶ್ವ ಉಗ್ರ ಸಂಘಟನೆಗಳ ಪಟ್ಟಿಗೆ ಟಿಆರ್‌ಎಫ್ ಸೇರ್ಪಡೆಗೆ ಭಾರತ ಯತ್ನ

(ನ್ಯೂಸ್ ಕಡಬ) newskadaba.com , ಮೇ.15. ಪಹಲ್ಲಾಮ್ ದಾಳಿಯಲ್ಲಿ ಭಾಗಿಯಾಗಿದೆ ಎಂದು ಆರೋಪಿಸಲಾಗಿರುವ ಎಲ್‌ಇಟಿ ಪ್ರತಿನಿಧಿ ದಿ ರೆಸಿಸ್ಟೆನ್ಸ್ ಫ್ರಂಟ್ ಅನ್ನು ವಿಶ್ವಸಂಸ್ಥೆಯಲ್ಲಿ ಪಟ್ಟಿ ಮಾಡಲಾದ ಭಯೋತ್ಪಾದಕ ಸಂಘಟನೆ ಎಂದು ಹೆಸರಿಸಲು ನವದೆಹಲಿ ಪ್ರಯತ್ನಗಳನ್ನು ಚುರುಕುಗೊಳಿಸಿದೆ. ಈ ಹಿನ್ನೆಲೆಯಲ್ಲಿ ಭಾರತೀಯ ನಿಯೋಗವು ಇಲ್ಲಿ ವಿಶ್ವಸಂಸ್ಥೆಯ ಭಯೋತ್ಪಾದನಾ ನಿಗ್ರಹ ಕಚೇರಿ (ಯುಎನ್‌ಒಸಿಟಿ) ಮತ್ತು ಭಯೋತ್ಪಾದನಾ ನಿಗ್ರಹ ಸಮಿತಿ ಕಾರ್ಯನಿರ್ವಾಹಕ ನಿರ್ದೇಶನಾಲಯದ ಉನ್ನತ ಅಧಿಕಾರಿಗಳನ್ನು ಭೇಟಿ ಮಾಡಿದೆ.ಪಾಕಿಸ್ತಾನ ಮೂಲದ ಭಯೋತ್ಪಾದಕ ಗುಂಪು ಲಷ್ಕರ್-ಎ-ತೈಬಾ (ಎಲ್‌ಇಟಿ) ನ ಒಂದು ಮುಂಭಾಗವಾದ ರೆಸಿಸ್ಟೆನ್ಸ್ ಫ್ರಂಟ್

ವಿಶ್ವ ಉಗ್ರ ಸಂಘಟನೆಗಳ ಪಟ್ಟಿಗೆ ಟಿಆರ್‌ಎಫ್ ಸೇರ್ಪಡೆಗೆ ಭಾರತ ಯತ್ನ Read More »

ಬ್ರೇಕಿಂಗ್ ನ್ಯೂಸ್

ಕುಂದಾಪುರ: ಬಾವಿಗೆ ಹಾರಿ ಆತ್ಮಹತ್ಯೆ ಯತ್ನ: ರಕ್ಷಿಸಲು ತೆರಳಿದ್ದ ಮಗ ಮೃತ್ಯು, ತಾಯಿ ಗಂಭೀರ

(ನ್ಯೂಸ್ ಕಡಬ) newskadaba.com , ಮೇ.15. ಕುಂದಾಪುರ: ಸಾಲಬಾಧೆಯಿಂದ ತತ್ತರಿಸಿದ್ದ ತಂದೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು, ಅವರನ್ನು ರಕ್ಷಿಸಲು ಬಾವಿಗೆ ಜಿಗಿದ ಮಗ ಕೂಡಾ ನೀರಲ್ಲಿ ಮುಳುಗಿ ಮೃತಪಟ್ಟ ದಾರುಣ ಘಟನೆ ಗುರುವಾರ ಬೆಳಗ್ಗೆ ಕುಂದಾಪುರ ತಾಲೂಕಿನ ತೆಕ್ಕಟ್ಟೆ ಮೀನು ಮಾರುಕಟ್ಟೆ ಸಮೀಪ ನಡೆದಿದೆ. ಈ ಮಧ್ಯೆ ತಂದೆ-ಮಗ ಬಾವಿಗೆ ಹಾರಿದ್ದನ್ನು ಗಮನಿಸಿ ಅವರನ್ನು ರಕ್ಷಿಸಲು ಬಾವಿಗೆ ಜಿಗಿದ ತಾಯಿಯನ್ನು ಸ್ಥಳೀಯರು ರಕ್ಷಿಸಿದ್ದಾರೆ. ಮೃತರನ್ನು ಮಾಧವ ದೇವಾಡಿಗ (55), ಅವರ ಪುತ್ರ ಪ್ರಸಾದ್ ದೇವಾಡಿಗ (22) ಎಂದು ಗುರುತಿಸಲಾಗಿದೆ.

ಕುಂದಾಪುರ: ಬಾವಿಗೆ ಹಾರಿ ಆತ್ಮಹತ್ಯೆ ಯತ್ನ: ರಕ್ಷಿಸಲು ತೆರಳಿದ್ದ ಮಗ ಮೃತ್ಯು, ತಾಯಿ ಗಂಭೀರ Read More »

ಕರಾವಳಿ

ಮಂಗಳೂರು : ಸರ್ವೆ ಮೇಲ್ವಿಚಾರಕರ ನಿವಾಸ, ಕಚೇರಿ ಮೇಲೆ ಲೋಕಾಯುಕ್ತ ದಾಳಿ

(ನ್ಯೂಸ್ ಕಡಬ) newskadaba.com , ಮೇ.15. ಆದಾಯಕ್ಕಿಂತ ಹೆಚ್ಚಿನ ಆಸ್ತಿ ಹೊಂದಿರುವ ಆರೋಪದ ಮೇಲೆ ಲೋಕಾಯುಕ್ತ ಅಧಿಕಾರಿಗಳು ಗುರುವಾರ ಬೆಳಗಿನ ಜಾವ ನಗರದಲ್ಲಿರುವ ಸರ್ವೇ ಮೇಲ್ವಿಚಾರಕ ಮಂಜುನಾಥ್ ಅವರ ನಿವಾಸ ಮತ್ತು ಕಚೇರಿಯ ಮೇಲೆ ದಾಳಿ ನಡೆಸಿದ್ದಾರೆ. ಬಿಜೈಯಲ್ಲಿರುವ ಮಂಜುನಾಥ್ ಅವರ ನಿವಾಸವನ್ನು ಗುರಿಯಾಗಿಸಿಕೊಂಡು ಲೋಕಾಯುಕ್ತ ಎಸ್ಪಿ ನೇತೃತ್ವದಲ್ಲಿ ದಾಳಿ ನಡೆಸಲಾಯಿತು. ತನಿಖೆಯ ಭಾಗವಾಗಿ ಅಧಿಕಾರಿಗಳು ಪ್ರಮುಖ ದಾಖಲೆಗಳನ್ನು ಕೂಲಂಕಷವಾಗಿ ಪರಿಶೀಲಿಸುತ್ತಿದ್ದಾರೆ. ತುಮಕೂರು ಮೂಲದ ಮಂಜುನಾಥ್ ಕಳೆದ 23 ವರ್ಷಗಳಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಅವರು

ಮಂಗಳೂರು : ಸರ್ವೆ ಮೇಲ್ವಿಚಾರಕರ ನಿವಾಸ, ಕಚೇರಿ ಮೇಲೆ ಲೋಕಾಯುಕ್ತ ದಾಳಿ Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

ಜಮ್ಮು-ಕಾಶ್ಮೀರ: ಪುಲ್ವಾಮಾದಲ್ಲಿ ಎನ್ಕೌಂಟರ್; JEM ಉಗ್ರ ಸಂಘಟನೆಯ ಮೂವರು ಭಯೋತ್ಪಾದಕರು ಹತ

(ನ್ಯೂಸ್ ಕಡಬ) newskadaba.com , ಮೇ.15. ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಭಾರತೀಯ ಸೇನಾಪಡೆ ಎನ್ಕೌಂಟರ್ ನಡೆಸಿದ್ದು, ಜೈಷ್-ಇ-ಮೊಹಮ್ಮದ್ ಉಗ್ರ ಸಂಘಟನೆಯ ಮೂವರು ಉಗ್ರರನ್ನು ಹತ್ಯೆ ಮಾಡಿದೆ ಎಂದು ಗುರುವಾರ ತಿಳಿದುಬಂದಿದೆ. ದಕ್ಷಿಣ ಕಾಶ್ಮೀರದ ಅವಂತಿಪೋರಾದ ನಾಡರ್ ಟ್ರಾಲ್ ಪ್ರದೇಶದಲ್ಲಿ ಉಗ್ರರು ಅಡಗಿ ಕುಳಿತಿರುವ ಕುರಿತು ಖಚಿತ ಮಾಹಿತಿ ಲಭ್ಯವಾದ ಹಿನ್ನೆಲೆಯಲ್ಲಿ ಭದ್ರತಾ ಪಡೆಗಳು ಕಾರ್ಯಾಚರಣೆಗಿಳಿದಿದ್ದವು. ಉಗ್ರರು ಅಡಗಿ ಕುಳಿತಿರುವ ಸ್ಥಳದತ್ತ ಭದ್ರತಾ ಪಡೆಗಳು ತಲುಪುತ್ತಿದ್ದಂತೆಯೇ ಯೋಧರ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಲು ಆರಂಭಿಸಿದ್ದಾರೆ.

ಜಮ್ಮು-ಕಾಶ್ಮೀರ: ಪುಲ್ವಾಮಾದಲ್ಲಿ ಎನ್ಕೌಂಟರ್; JEM ಉಗ್ರ ಸಂಘಟನೆಯ ಮೂವರು ಭಯೋತ್ಪಾದಕರು ಹತ Read More »

ಬ್ರೇಕಿಂಗ್ ನ್ಯೂಸ್

ಸರ್ಕಾರಿ ಆಸ್ಪತ್ರೆ NHM ವೈದ್ಯಕೀಯ ಸಿಬ್ಬಂದಿಗೆ ಶೇ. 55ರಷ್ಟು ವೇತನ ಹೆಚ್ಚಳ: ದಿನೇಶ್ ಗುಂಡೂರಾವ್

(ನ್ಯೂಸ್ ಕಡಬ) newskadaba.com , ಮೇ.15. ಬೆಂಗಳೂರು: ರಾಷ್ಟ್ರೀಯ ಆರೋಗ್ಯ ಮಿಷನ್ (NHM) ಅಡಿಯಲ್ಲಿ ವೈದ್ಯರು ಮತ್ತು ದಾದಿಯರಿಗೆ ಶೇ. 55 ರಷ್ಟು ವೇತನ ಪರಿಷ್ಕರಣೆಗೆ ರಾಜ್ಯ ಸರ್ಕಾರ ಅನುಮೋದನೆ ನೀಡಿದೆ. ಬೆಂಗಳೂರಿನಲ್ಲಿ ಮಾತನಾಡಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡೂರಾವ್, ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ರಾಷ್ಟ್ರೀಯ ಆರೋಗ್ಯ ಮಿಷನ್ (NHM) ಯೋಜನೆಯಡಿ ಕೆಲಸ ಮಾಡುತ್ತಿರುವ ವೈದ್ಯಕೀಯ ಸಿಬ್ಬಂದಿ ವೇತನವನ್ನು ಪರಿಷ್ಕರಿಸಲಾಗಿದೆ. ಈ ವೇತನ ಹೆಚ್ಚಳ ಹೊಸದಾಗಿ ನೇಮಕವಾಗುವ ಸಿಬ್ಬಂದಿಗೆ ಮಾತ್ರ ಅನ್ವಯವಾಗಲಿದೆ.

ಸರ್ಕಾರಿ ಆಸ್ಪತ್ರೆ NHM ವೈದ್ಯಕೀಯ ಸಿಬ್ಬಂದಿಗೆ ಶೇ. 55ರಷ್ಟು ವೇತನ ಹೆಚ್ಚಳ: ದಿನೇಶ್ ಗುಂಡೂರಾವ್ Read More »

ಕರ್ನಾಟಕ
crime, arrest, suspected

ಬಂಟ್ವಾಳ : ಮಾದಕ ವಸ್ತು ಮಾರಾಟಕ್ಕೆ ಸಂಚು – ಮೂವರು ಆರೋಪಿಗಳು ಸೆರೆ

(ನ್ಯೂಸ್ ಕಡಬ) newskadaba.com , ಮೇ.15. ಎಂ.ಡಿ.ಎಂ.ಎ ಮಾದಕ ವಸ್ತು ಸೇವಿಸಿ ಬಳಿಕ ಮಾರಾಟದ ಉದ್ದೇಶದಿಂದ ಅವಿತುಕೊಂಡಿದ್ದ ಮೂವರು ಆರೋಪಿಗಳ ಸಹಿತ ಲಕ್ಷಾಂತರ ರೂ ಮೌಲ್ಯದ ವಿವಿಧ ಸೊತ್ತುಗಳನ್ನು ಬಂಟ್ವಾಳ ನಗರ ಎಸ್.ಐ.ರಾಮಕೃಷ್ಣ ನೇತ್ರತ್ವದ ತಂಡ ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿದ್ದಾರೆ. ನಂದಾವರ ಬಸ್ತಿಗುಡ್ಡೆ ನಿವಾಸಿ ಮೊಹಮ್ಮದ್ ಇಮ್ತಿಯಾಜ್ , ನಂದಾವರ ಬಸ್ತಿಗುಡ್ಡೆ ನಿವಾಸಿ ಯೂನಸ್, ಹಾಗೂ ಪುತ್ತೂರು ನರಿಮೊಗರು ಪುರುಷರಕಟ್ಟೆ ನಿವಾಸಿ ಮೊಹಮ್ಮದ್ ಇಕ್ಬಾಲ್ ಬಂಧಿತ ಆರೋಪಿಗಳು. ಬಂಧಿತರಿಂದ ರೂ.5000 ಮೌಲ್ಯದ 2.99 ಗ್ರಾಂ ತೂಕದ

ಬಂಟ್ವಾಳ : ಮಾದಕ ವಸ್ತು ಮಾರಾಟಕ್ಕೆ ಸಂಚು – ಮೂವರು ಆರೋಪಿಗಳು ಸೆರೆ Read More »

ಕರಾವಳಿ
Scroll to Top