News Kadaba

ಕೋವಿಡ್ ನಿಂದ ಮತ್ತೆ 5 ಜನ ಮೃತ್ಯು; ಮೃತರ ಸಂಖ್ಯೆ 37ಕ್ಕೆ ಏರಿಕೆ

(ನ್ಯೂಸ್ ಕಡಬ) newskadaba.com ಜೂ:04, ಹೊಸದಿಲ್ಲಿ: ಕೋವಿಡ್-19 ಸೋಂಕಿನಿಂದ ಮಂಗಳವಾರ ಮತ್ತೆ ಐದು ಮಂದಿ ಮೃತಪಟ್ಟಿದ್ದು, ದೇಶದಲ್ಲಿ ಪ್ರಸಕ್ತ ವರ್ಷ ಮೃತರ ಸಂಖ್ಯೆ 37ಕ್ಕೇರಿದೆ. ಮಹಾರಾಷ್ಟ್ರದಲ್ಲಿ ಇಬ್ಬರು, ಕೇರಳ, ತಮಿಳುನಾಡು ಹಾಗೂ ಬಂಗಾಳದಲ್ಲಿ ತಲಾ ಒಬ್ಬರು ಸೋಂಕಿನಿಂದ ಪ್ರಾಣ ಕಳೆದುಕೊಂಡಿದ್ದಾರೆ. ಕೋವಿಡ್-19 ಸೋಂಕಿತರ ಸಂಖ್ಯೆ 4026ಕ್ಕೇರಿದ್ದು, ಕೇರಳದಲ್ಲಿ ಗರಿಷ್ಠ ಅಂದರೆ 1416 ಪ್ರಕರಣಗಳು ದಾಖಲಾಗಿವೆ. ಮಹಾರಾಷ್ಟ್ರ (494), ಗುಜರಾತ್ (397) ಮತ್ತು ದೆಹಲಿ (393) ನಂತರದ ಸ್ಥಾನಗಳಲ್ಲಿವೆ. ದೇಶಾದ್ಯಂತ ಇದುವರೆಗೆ ಪ್ರಸಕ್ತ ವರ್ಷ 37 ಕೋವಿಡ್-19 ಸೋಂಕಿತರು […]

ಕೋವಿಡ್ ನಿಂದ ಮತ್ತೆ 5 ಜನ ಮೃತ್ಯು; ಮೃತರ ಸಂಖ್ಯೆ 37ಕ್ಕೆ ಏರಿಕೆ Read More »

ಆರೋಗ್ಯ ಮಾಹಿತಿ, ಬ್ರೇಕಿಂಗ್ ನ್ಯೂಸ್

18 ವರ್ಷಗಳ ಬಳಿಕ ಐಪಿಎಲ್ ಕಪ್ ಗೆದ್ದ ರಾಯಲ್ ಚಾಂಪಿಯನ್ಸ್‌ಗೆ ತಂಡಕ್ಕೆ ಬೆಂಗಳೂರಲ್ಲಿ ಅದ್ದೂರಿ ಸ್ವಾಗತ

(ನ್ಯೂಸ್ ಕಡಬ) newskadaba.com ಜೂ:04, ಟಾಟಾ ಐಪಿಎಲ್-2025 ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇಂದು ಉದ್ಯಾನನಗರಿಗೆ ಆಗಮಿಸಿದ್ದು, ಅಭಿಮಾನಿಗಳ ಸಾಗರವೇ ಅದ್ಧೂರಿ ಸ್ವಾಗತ ನೀಡಿದೆ. ಇಂದು ಮಧ್ಯಾಹ್ನ ವಿಶೇಷ ವಿಮಾನದ ಮೂಲಕ ಬೆಂಗಳೂರಿಗೆ ಬಂದಿಳಿದ ವಿರಾಟ್ ಕೊಹ್ಲಿ ಬಳಗವನ್ನು ಸಾಂಪ್ರದಾಯಿಕ ಮೈಸೂರು ಪೇಟ, ಮಲ್ಲಿಗೆ ಹಾರ ಹಾಕಿ ಆರತಿ ಬೆಳಗಿ ಬರಮಾಡಿಕೊಳ್ಳಲಾಯಿತು. ನಂತರ ಅಲ್ಲಿಂದ ತೆರಳುವ ಮಾರ್ಗದಲ್ಲಿ ನೆರೆದಿದ್ದ ಅಭಿಮಾನಿಗಳು ಕುಣಿದು ಕುಪ್ಪಳಿಸಿ ಆರ್‌ಸಿಬಿ…. ಆರ್‌ಸಿಬಿ… ಎಂದು ಕೂಗಿದರು. ರಾತ್ರಿಯಿಡೀ ಕ್ರಿಕೆಟ್ ಪ್ರಿಯರು ತಮ್ಮ ನೆಚ್ಚಿನ

18 ವರ್ಷಗಳ ಬಳಿಕ ಐಪಿಎಲ್ ಕಪ್ ಗೆದ್ದ ರಾಯಲ್ ಚಾಂಪಿಯನ್ಸ್‌ಗೆ ತಂಡಕ್ಕೆ ಬೆಂಗಳೂರಲ್ಲಿ ಅದ್ದೂರಿ ಸ್ವಾಗತ Read More »

ಕ್ರೀಡಾ ನ್ಯೂಸ್

ಆರ್‌ಸಿಬಿ ವಿಜಯೋತ್ಸವದ ವೇಳೆ ಹೃದಯಾಘಾತ – ಅಭಿಮಾನಿ ಸಾವು

(ನ್ಯೂಸ್ ಕಡಬ) newskadaba.com ಜೂ:04, ಬೆಳಗಾವಿ: ಆರ್‌ಸಿಬಿ ಫೈನಲ್ ಪಂದ್ಯದಲ್ಲಿ ಭರ್ಜರಿ ಗೆಲುವು ಹಿನ್ನೆಲೆ ವಿಜಯೋತ್ಸವ ವೇಳೆ ಕುಣಿದು ಕುಪ್ಪಳಿಸುತ್ತಿದ್ದ ಅಭಿಮಾನಿಯೊಬ್ಬ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಅವರಾದಿ ಗ್ರಾಮದಲ್ಲಿ ನಡೆದಿದೆ. ಮಂಜುನಾಥ್ ಕುಂಬಾರ್ (25) ಹೃದಯಾಘಾತದಿಂದ ಸಾವನ್ನಪ್ಪಿದ ಯುವಕ. ಮಂಗಳವಾರ ಅಹಮದಾಬಾದ್‌ನಲ್ಲಿ ಐಪಿಎಲ್ ಫೈನಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಗೆಲುವು ಸಾಧಿಸಿದ ಹಿನ್ನೆಲೆ ಅಭಿಮಾನಿಗಳು ವಿಜಯೋತ್ಸವ ಮಾಡಿದ್ದರು. ಈ ವೇಳೆ ಮಂಜುನಾಥ್ ಟ್ರ‍್ಯಾಕ್ಟರ್‌ನಲ್ಲಿ ಹಾಡು ಹಾಕಿ ಕುಣಿಯುತ್ತಿದ್ದಾಗ ಕುಸಿದು ಬಿದ್ದಿದ್ದಾರೆ. ತಕ್ಷಣವೇ ಅವರನ್ನು ಆಸ್ಪತ್ರೆಗೆ

ಆರ್‌ಸಿಬಿ ವಿಜಯೋತ್ಸವದ ವೇಳೆ ಹೃದಯಾಘಾತ – ಅಭಿಮಾನಿ ಸಾವು Read More »

ಕ್ರೀಡಾ ನ್ಯೂಸ್, ಬ್ರೇಕಿಂಗ್ ನ್ಯೂಸ್

ಒಂದೇ ದಿನ 1.06 ಕೋಟಿ ಲೀಟರ್ ಹಾಲು ಸಂಗ್ರಹಿಸಿ ದಾಖಲೆ ಸೃಷ್ಟಿಸಿದ ಕೆಎಂಎಫ್

(ನ್ಯೂಸ್ ಕಡಬ) newskadaba.com ಜೂ:04, ಮಂಗಳೂರು: ಕರ್ನಾಟಕ ಹಾಲು ಒಕ್ಕೂಟ ಒಂದೇ ದಿನ ಸಾರ್ವಕಾಲಿಕ ಗರಿಷ್ಠ 1.06 ಕೋಟಿ ಲೀಟರ್ ಹಾಲು ಸಂಗ್ರಹಿಸುವ ಮೂಲಕ ರಾಜ್ಯದ ಡೈರಿ ವಲಯದಲ್ಲಿ ಹೊಸ ದಾಖಲೆ ಸೃಷ್ಟಿಸಿದೆ. ಮೇ 22 ರ ನಂತರ ಈ ದಾಖಲೆ ಸಾಧ್ಯವಾಗಿದೆ. ಅನುಕೂಲಕರವಾದ ಮುಂಗಾರು ಮಳೆ ಮತ್ತು ಹಸಿರು ಮೇವಿನ ಲಭ್ಯತೆಯ ಕಾರಣ ಈ ದಾಖಲೆ ಮಾಡುವುದು ಕೆಎಂಎಫ್‌ಗೆ ಸಾಧ್ಯವಾಗಿದೆ ಎಂದು ಹೇಳಲಾಗಿದೆ. ಇದು ಕಳೆದ ವರ್ಷ ದಿನವೊಂದರಲ್ಲಿ ಸಂಗ್ರಹಿಸಿದ ಗರಿಷ್ಠ ಹಾಲಿಗಿಂತಲೂ ಹೆಚ್ಚು. ಕಳೆದ

ಒಂದೇ ದಿನ 1.06 ಕೋಟಿ ಲೀಟರ್ ಹಾಲು ಸಂಗ್ರಹಿಸಿ ದಾಖಲೆ ಸೃಷ್ಟಿಸಿದ ಕೆಎಂಎಫ್ Read More »

ಕರ್ನಾಟಕ

ಚಿನ್ನದ ದರದಲ್ಲಿ ಮತ್ತೆ ಏರಿಕೆ

(ನ್ಯೂಸ್ ಕಡಬ) newskadaba.com ಜೂ:04, ಮಂಗಳೂರು: ಚಿನ್ನದ ದರದಲ್ಲಿ ಇಂದು ಮತ್ತೆ ಏರಿಕೆ ಕಂಡು ಬಂದಿದೆ. ಬೆಂಗಳೂರಿನಲ್ಲಿ ಇಂದು 22 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆಯಲ್ಲಿ 10 ರೂ ಏರಿಕೆ ಕಂಡು ಬಂದಿದ್ದು, 9,090 ರೂ.ಗೆ ತಲುಪಿದೆ. ಇನ್ನು 24 ಕ್ಯಾರಟ್‌ 1 ಗ್ರಾಂ ಚಿನ್ನದ ದರದಲ್ಲಿ 11 ರೂ. ಏರಿಕೆಯಾಗಿ 9,917 ರೂ ಇದೆ. 22 ಕ್ಯಾರಟ್‌ನ 8 ಗ್ರಾಂ ಚಿನ್ನ 72,720 ರೂ. ಬೆಲೆ ಬಾಳಿದರೆ, 10 ಗ್ರಾಂಗೆ ನೀವು 99,170 ರೂ.

ಚಿನ್ನದ ದರದಲ್ಲಿ ಮತ್ತೆ ಏರಿಕೆ Read More »

ಕರ್ನಾಟಕ

ದ.ಕ.ಜಿಲ್ಲೆಯಲ್ಲಿ ಡೆಂಗ್ಯೂ ಪ್ರಕರಣ ಹೆಚ್ಚಳ

(ನ್ಯೂಸ್ ಕಡಬ) newskadaba.com ಜೂ:04, ಮಂಗಳೂರು: ಮಂಗಳೂರು: ಮಳೆಗಾಲದ ನಡುವೆ ಕಳೆದ ಕೆಲವು ದಿನಗಳಿಂದ ಮಳೆಯ ಜತೆಗೆ ಬಿಸಿಲಿನ ವಾತಾವರಣವೂ ಕಂಡು ಬರುತ್ತಿರುವುದರಿಂದ ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿ ಶಂಕಿತ ಡೆಂಗ್ಯೂ ಪ್ರಕರಣಗಳಲ್ಲಿ ಏರಿಕೆ ಕಂಡು ಬರುತ್ತಿದೆ. ಡೆಂಗ್ಯೂ ಬಗ್ಗೆ ನಿರ್ಲಕ್ಷ್ಯ ವಹಿಸಿದರೆ ಪ್ರಾಣಾಪಾಯಕ್ಕೂ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ತಮ್ಮ ಮನೆಯ ಸುತ್ತಮುತ್ತ ನೀರು ನಿಲ್ಲದಂತೆ ಮುಂಜಾಗೃತಾ ಕ್ರಮ ಗಳನ್ನು ವಹಿಸಬೇಕು ಎಂದು ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಎಚ್.ಆರ್.ತಿಮ್ಮಯ್ಯ ಹೇಳಿದ್ದಾರೆ. ಜಿಲ್ಲಾ ಆರೋಗ್ಯ ಇಲಾಖೆಯ ಕಚೇರಿಯಲ್ಲಿ

ದ.ಕ.ಜಿಲ್ಲೆಯಲ್ಲಿ ಡೆಂಗ್ಯೂ ಪ್ರಕರಣ ಹೆಚ್ಚಳ Read More »

ಕರಾವಳಿ

ಬೆಂಗಳೂರಿನಲ್ಲಿ ಗೆಲುವಿನ ಸಂಭ್ರಮಾಚರಣೆಯಲ್ಲಿದ್ದ ಆರ್‌ಸಿಬಿ ಅಭಿಮಾನಿಗೆ ಚಾಕು ಇರಿತ

(ನ್ಯೂಸ್ ಕಡಬ) newskadaba.com ಜೂ:04, ಮಂಗಳೂರು: ಐಪಿಎಲ್ ಫೈನಲ್‌ನಲ್ಲಿ ಆರ್‌ಸಿಬಿ ಕಪ್ ತನ್ನದಾಗಿಸಿಕೊಂಡ ಹಿನ್ನೆಲೆ ಗೆಲುವಿನ ಸಂಭ್ರಮಾಚರಣೆಯಲ್ಲಿದ್ದ ಆರ್‌ಸಿಬಿ ಅಭಿಮಾನಿಗೆ ದುಷ್ಕರ್ಮಿಗಳು ಚಾಕು ಇರಿದ ಘಟನೆ ಬೆಂಗಳೂರಿನ ಪೀಣ್ಯದ ಜಾಲಹಳ್ಳಿ ಕ್ರಾಸ್ ಬಳಿ ತಡರಾತ್ರಿ 12 ಗಂಟೆ ವೇಳೆಗೆ ನಡೆದಿದೆ. ಫೈನಲ್ ಪಂದ್ಯಾವಳಿಯಲ್ಲಿ ಆರ್‌ಸಿಬಿ ತಂಡ ಚೊಚ್ಚಲ ಐಪಿಎಲ್ ಟ್ರೋಫಿ ಎತ್ತಿಹಿಡಿದ ಹಿನ್ನೆಲೆ ಸಂಭ್ರಮಾಚರಣೆ ಮಾಡುತ್ತಾ ದುಷ್ಕರ್ಮಿಗಳು ಬಾರ್‌ಗೆ ತೆರಳುತ್ತಿದ್ದರು. ಈ ವೇಳೆ ದುಷ್ಕರ್ಮಿಗಳು ಚಾಕುವಿನಿಂದ ಯುವಕನ ಕುತ್ತಿಗೆಯ ಭಾಗಕ್ಕೆ ಇರಿದಿದ್ದಾರೆ. ಸ್ಥಳದಲ್ಲಿದ್ದವರ ಪ್ರತಿರೋಧದ ಬಳಿಕ ದುಷ್ಕರ್ಮಿಗಳು

ಬೆಂಗಳೂರಿನಲ್ಲಿ ಗೆಲುವಿನ ಸಂಭ್ರಮಾಚರಣೆಯಲ್ಲಿದ್ದ ಆರ್‌ಸಿಬಿ ಅಭಿಮಾನಿಗೆ ಚಾಕು ಇರಿತ Read More »

ಕರ್ನಾಟಕ

ಅಬ್ದುಲ್ ರಹ್ಮಾನ್ ಕೊಲೆ ಪ್ರಕರಣ: ಮತ್ತೆ ಇಬ್ಬರು ಪೊಲೀಸ್ ವಶಕ್ಕೆ

(ನ್ಯೂಸ್ ಕಡಬ) newskadaba.com ಜೂ:04, ಮಂಗಳೂರು: ಬಂಟ್ವಾಳ ತಾಲೂಕಿನ ಕಲ್ಪನೆಯ ಕಾಗುಡ್ಡೆ ಎಂಬಲ್ಲಿ ಅಬ್ದುಲ್ ರಹ್ಮಾನ್ ಅವರನ್ನು ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಟ್ವಾಳ ಗ್ರಾಮಾಂತರ ಠಾಣೆಯ ಪೊಲೀಸರು ಮತ್ತೆ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ತೆಂಕಬೆಳ್ಳೂರು ಗ್ರಾಮದ ಅಭಿನ್ ರೈ (32) ಮತ್ತು ಬಡಗಬೆಳ್ಳುರು ಗ್ರಾಮದ ತೇಜಾಕ್ಷ (24) ಎಂಬವರನ್ನು ವಶಕ್ಕೆ ಪಡೆದಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಅಬ್ದುಲ್ ರಹ್ಮಾನ್ ಕೊಲೆ ಪ್ರಕರಣ: ಮತ್ತೆ ಇಬ್ಬರು ಪೊಲೀಸ್ ವಶಕ್ಕೆ Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

ಸುಹಾಸ್ ಶೆಟ್ಟಿ ಕೊಲೆ ಪ್ರಕರಣ: ಇನ್ನೋರ್ವ ಆರೋಪಿಯ ಬಂಧನ

(ನ್ಯೂಸ್ ಕಡಬ) newskadaba.com ಜೂ:04, ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಸುಹಾಸ್ ಶೆಟ್ಟಿ ಕೊಲೆ ಪ್ರಕರಣದಲ್ಲಿ ಇನ್ನೋರ್ವ ಆರೋಪಿಯನ್ನು ಮಂಗಳೂರು ನಗರ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ದಿನಾಂಕ: 01-05-2025 ರಂದು ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಸುಹಾಸ್ ಶೆಟ್ಟಿ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿಗಳ ಜೊತೆ ಸೇರಿಕೊಂಡು ಕೊಲೆಗೆ ಸಂಚು ರೂಪಿಸಲು ಮತ್ತು ಆರೋಪಿಗಳು ತಲೆ ಮರೆಸಿಕೊಳ್ಳಲು ಸಹಾಯ ಮಾಡಿದ ಆರೋಪಿ  ಮಂಗಳೂರಿನ ಶಾಂತಿಗುಡ್ಡೆಯ ಬಜಪೆಯ ಅಬ್ದುಲ್ ರಜಾಕ್ (59) ಎಂಬಾತನನ್ನು ಬಂದಿಸಲಾಗಿದೆ. ಈತನು

ಸುಹಾಸ್ ಶೆಟ್ಟಿ ಕೊಲೆ ಪ್ರಕರಣ: ಇನ್ನೋರ್ವ ಆರೋಪಿಯ ಬಂಧನ Read More »

ಕರಾವಳಿ

ಉಡುಪಿ: ಕಾಪುವಿನಲ್ಲಿ ಕೋವಿಡ್ ಪಾಸಿಟಿವ್ ಇದ್ದ ವ್ಯಕ್ತಿ ಮೃತ್ಯು

(ನ್ಯೂಸ್ ಕಡಬ) newskadaba.com, ಜೂ.03. ಬೆಂಗಳೂರು: ಕಾಪು : ಬೆಳ್ಳೆ ಗ್ರಾಮದ ಪೀಟರ್ ಮಥಾಯಸ್(65) ಎಂಬವರು ಮಣಿಪಾಲ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು ಇವರಿಗೆ ಕೋವಿಡ್ ಪಾಸಿಟಿವ್ ಇರುವುದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಕಾಪು ತಹಶೀಲ್ದಾರ್ ಮೃತರ ಮನೆಗೆ ಭೇಟಿ ನೀಡಿ ಮನೆಯವರ ರೋಗ್ಯವನ್ನು ವಿಚಾರಿಸಿ ಸಾಂತ್ವನ ಹೇಳಿದರು. ಮನೆಯ ತರರಿಗೆ ಕೋವಿಡ್ ಲಕ್ಷಣಗಳಿಲ್ಲ ದು ದೃಢವಾಗಿದೆ.ಮೃತದೇಹವನ್ನು ಆಸ್ಪತ್ರೆಯಲ್ಲೇ ಇರಿಸಲಾಗಿದ್ದು, ಬುಧವಾರ ಕೋವೀಡ್ ಮಾರ್ಗಸೂಚಿಯನ್ನು ಅನುಸರಿಸಿ ಅಂತ್ಯಸಂಸ್ಕಾರ ನಡೆಸಲಾಗುವುದು ಎಂದು ತಿಳಿಸಿದ್ದಾರೆ  

ಉಡುಪಿ: ಕಾಪುವಿನಲ್ಲಿ ಕೋವಿಡ್ ಪಾಸಿಟಿವ್ ಇದ್ದ ವ್ಯಕ್ತಿ ಮೃತ್ಯು Read More »

ಕರಾವಳಿ
Scroll to Top