News Kadaba

ದಕ್ಷಿಣ ಕನ್ನಡ/ ಉಡುಪಿ : ಜು.10 ರಿಂದ 15 ರವರೆಗೆ ಕರಾವಳಿ ಕರ್ನಾಟಕದಲ್ಲಿ ಆರೆಂಜ್‌ ಅಲರ್ಟ್

(ನ್ಯೂಸ್ ಕಡಬ) newskadaba.com, ಜು. 10. ಭಾರತ ಹವಾಮಾನ ಇಲಾಖೆ (ಐಎಂಡಿ) ಮುನ್ಸೂಚನೆಯ ಪ್ರಕಾರ, ಜುಲೈ 10 ರಿಂದ 15 ರವರೆಗೆ ಕರಾವಳಿ ಪ್ರದೇಶಕ್ಕೆ ಆರೆಂಜ್‌ ಅಲರ್ಟ್‌ ನೀಡಲಾಗಿದ್ದು, ಈ ಅವಧಿಯಲ್ಲಿ ಮಧ್ಯಮದಿಂದ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಕರಾವಳಿ ಪ್ರದೇಶದಾದ್ಯಂತ ಬುಧವಾರ ಸಾಧಾರಣ ಮಳೆ ಸುರಿದಿದೆ, ಜಿಲ್ಲೆಯ ಹಲವು ಭಾಗಗಳಲ್ಲಿ ತುಂತುರು ಮಳೆಯಾಗಿದೆ ಎನ್ನಲಾಗಿದೆ. ಮಂಗಳೂರಿನಲ್ಲಿ ಬಿಸಿಲು ಮತ್ತು ಮೋಡ ಕವಿದ ವಾತಾವರಣವಿದೆ. ಉಡುಪಿ ಜಿಲ್ಲೆಯಲ್ಲಿ ಬುಧವಾರ ಸಾಧಾರಣ ಮಳೆಯಾಗಿದೆ. ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ […]

ದಕ್ಷಿಣ ಕನ್ನಡ/ ಉಡುಪಿ : ಜು.10 ರಿಂದ 15 ರವರೆಗೆ ಕರಾವಳಿ ಕರ್ನಾಟಕದಲ್ಲಿ ಆರೆಂಜ್‌ ಅಲರ್ಟ್ Read More »

ಕರಾವಳಿ, ಕರ್ನಾಟಕ

ಬೆಂಗಳೂರು: ಕೊಲೆಯಾದ ಸ್ಥಿತಿಯಲ್ಲಿ 14 ವರ್ಷದ ಬಾಲಕಿ ಶವ ಪತ್ತೆ, ಅತ್ಯಾಚಾರ ಶಂಕೆ

(ನ್ಯೂಸ್ ಕಡಬ) newskadaba.com, ಜು. 10. ಬೆಂಗಳೂರು: ರಾಮನಗರ ಜಿಲ್ಲೆಯ ತಾವರೆಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 14 ವರ್ಷದ ಬಾಲಕಿಯ ಶವ ಬುಧವಾಹ ಪತ್ತೆಯಾಗಿದ್ದು, ಅತ್ಯಾಚಾರ ನಡೆಸಿ, ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಬಾಲಕಿ ಪೋಷಕರು ಕೊಪ್ಪಳ ಮೂಲದವರಾಗಿದ್ದು, ದಿನಗೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆಂದು ತಿಳಿದುಬಂದಿದೆ. ರಾಮನಗರ ಎಸ್‌ಪಿ ಆರ್ ಶ್ರೀನಿವಾಸ್ ಗೌಡ ಅವರು ಮಾತನಾಡಿ, ಬಾಲಕಿಯ ಪೋಷಕರು ತಾವರೆಕೆರೆ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ಮತ್ತು ಕೊಲೆ ಆರೋಪದ ಮೇಲೆ ದೂರು ದಾಖಲಿಸಿದ್ದಾರೆ. ಪ್ರಸ್ತುತ ಈ ಅಪರಾಧವನ್ನು

ಬೆಂಗಳೂರು: ಕೊಲೆಯಾದ ಸ್ಥಿತಿಯಲ್ಲಿ 14 ವರ್ಷದ ಬಾಲಕಿ ಶವ ಪತ್ತೆ, ಅತ್ಯಾಚಾರ ಶಂಕೆ Read More »

ಕರ್ನಾಟಕ

ಐದು ರಾಷ್ಟ್ರಗಳ ಪ್ರವಾಸದ ನಂತರ ಭಾರತಕ್ಕೆ ಮರಳಿದ ಪ್ರಧಾನಿ ಮೋದಿ

(ನ್ಯೂಸ್ ಕಡಬ)com, ಜು. 10. ಪ್ರಧಾನಿ ನರೇಂದ್ರ ಮೋದಿ ಜುಲೈ 2 ರಿಂದ 9 ರವರೆಗೆ ನಡೆದ ಐದು ರಾಷ್ಟ್ರಗಳ ಪ್ರವಾಸವನ್ನು ಮುಕ್ತಾಯಗೊಳಿಸಿ ಗುರುವಾರ ಬೆಳಿಗ್ಗೆ ನವದೆಹಲಿಗೆ ಮರಳಿದರು. ಈ ರಾಜತಾಂತ್ರಿಕ ಪ್ರಯಾಣವು ಘಾನಾ, ಟ್ರಿನಿಡಾಡ್ ಮತ್ತು ಟೊಬಾಗೊ, ಅರ್ಜೆಂಟೀನಾ, ಬ್ರೆಜಿಲ್ ಮತ್ತು ನಮೀಬಿಯಾಗಳನ್ನು ಒಳಗೊಂಡಿತ್ತು ಮತ್ತು ಬ್ರೆಜಿಲ್ ಅಧ್ಯಕ್ಷತೆಯಲ್ಲಿ ರಿಯೊ ಡಿ ಜನೈರೊದಲ್ಲಿ ನಡೆದ 17 ನೇ ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಗವಹಿಸುವುದನ್ನು ಒಳಗೊಂಡಿತ್ತು. ತಮ್ಮ ಭೇಟಿಯ ಮೊದಲ ಹಂತದಲ್ಲಿ, ಪ್ರಧಾನಿ ಮೋದಿ ಜುಲೈ 2 ರಂದು

ಐದು ರಾಷ್ಟ್ರಗಳ ಪ್ರವಾಸದ ನಂತರ ಭಾರತಕ್ಕೆ ಮರಳಿದ ಪ್ರಧಾನಿ ಮೋದಿ Read More »

ಬ್ರೇಕಿಂಗ್ ನ್ಯೂಸ್

ಆಸ್ತಿ ವಿಚಾರಕ್ಕೆ ಕಲಹ – ಮಗನಿಂದಲೇ ತಂದೆ, ಸಹೋದರನ ಬರ್ಬರ ಹತ್ಯೆ

(ನ್ಯೂಸ್ ಕಡಬ) newskadaba.com, ಜು. 10. ಹಾಸನ: ಆಸ್ತಿ ವಿಚಾರಕ್ಕೆ ಮಗನೇ ತಂದೆ ಹಾಗೂ ಸಹೋದರನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಗಂಗೂರು ಗ್ರಾಮದಲ್ಲಿ ನಡೆದಿದೆ. ತಂದೆ ದೇವೇಗೌಡ (70) ಹಾಗೂ ಸಹೋದರ ಮಂಜುನಾಥ್ (50) ಕೊಲೆಯಾದವರು. ಮೋಹನ್ (47) ಕೊಲೆಗೈದ ಆರೋಪಿ. ಮಂಜುನಾಥ್ ಹಾಗೂ ಮೋಹನ್ ಇಬ್ಬರು ಅವಿವಾಹಿತರಾಗಿದ್ದರು. ಮಂಜುನಾಥ್, ತಂದೆ-ತಾಯಿಯೊಂದಿಗೆ ವಾಸವಿದ್ದರು. ಆದರೆ ಮೋಹನ್ ಒಂದೇ ಮನೆಯಲ್ಲಿದ್ದರೂ ಪ್ರತ್ಯೇಕವಾಗಿ ವಾಸವಿದ್ದ. ತಂದೆ ದೇವೇಗೌಡ, ಕೆಲ ದಿನಗಳ ಹಿಂದೆ ಆಸ್ತಿ ಮಾರಾಟ

ಆಸ್ತಿ ವಿಚಾರಕ್ಕೆ ಕಲಹ – ಮಗನಿಂದಲೇ ತಂದೆ, ಸಹೋದರನ ಬರ್ಬರ ಹತ್ಯೆ Read More »

ಕರ್ನಾಟಕ

ಮೈಸೂರು, ಕೊಡಗಿನಲ್ಲಿ ಹೃದಯಾಘಾತಕ್ಕೆ ಮತ್ತೆರಡು ಬಲಿ

(ನ್ಯೂಸ್ ಕಡಬ) newskadaba.com, ಜು. 10. ರಾಜ್ಯದಲ್ಲಿ ಹೃದಯಾಘಾತದಿಂದ ಸರಣಿ ಸಾವು ಮುಂದುವರಿದಿದೆ. ಹಿರಿಯ ಜೀವಗಳು, ಎಳೇ ಹೃದಯಗಳು, ಬಾಳಿ ಬದುಕಬೇಕಾದವ್ರು ಕುಂತಲ್ಲಿ, ನಿಂತಲ್ಲಿ ಪ್ರಾಣ ಕಳೆದುಕೊಳ್ತಿದ್ದಾರೆ. ಮೈಸೂರಿನಲ್ಲಿ 28 ವರ್ಷದ ಯುವಕ ಹೃದಯಾಘಾತಕ್ಕೆ ಬಲಿಯಾಗಿದ್ರೆ, ಕೊಡಗಿನಲ್ಲಿ 58 ವರ್ಷದ ಮಹಿಳೆ ಜೀವ ತೆತ್ತಿದ್ದಾರೆ. ಇಲ್ಲಿನ ಚಾಮರಾಜ ಮೊಹಲ್ಲಾದ ನಿವಾಸಿ ದರ್ಶನ್‌ ಚೌದ್ರಿ (28) ಮೃತ ದುರ್ದೈವಿ. ದೇವರಾಜ ಮೊಹಲ್ಲಾದಲ್ಲಿ ಬಣ್ಣದ ಅಂಗಡಿ ಮಾಲೀಕನಾಗಿದ್ದ ದರ್ಶನ್‌ಗೆ ನಿನ್ನೆ ರಾತ್ರಿ ದಿಢೀರ್ ಎದೆನೋವು ಕಾಣಿಸಿಕೊಂಡಿದೆ. ಪೋಷಕರು ತಕ್ಷಣ ಆಸ್ಪತ್ರೆಗೆ

ಮೈಸೂರು, ಕೊಡಗಿನಲ್ಲಿ ಹೃದಯಾಘಾತಕ್ಕೆ ಮತ್ತೆರಡು ಬಲಿ Read More »

ಆರೋಗ್ಯ ಮಾಹಿತಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ದೆಹಲಿ-ಎನ್‌ಸಿರ್‌ನಲ್ಲಿ 4.4 ತೀವ್ರತೆ ಪ್ರಬಲ ಭೂಕಂಪ

(ನ್ಯೂಸ್ ಕಡಬ) newskadaba.com, ಜು. 10. ದೆಹಲಿ ಮತ್ತು ಎನ್‌ಸಿಆರ್ ಪ್ರದೇಶದಲ್ಲಿ ಇಂದು ಬೆಳಗ್ಗೆ 4.4 ತೀವ್ರತೆ ಪ್ರಬಲ ಭೂಕಂಪನ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ಮಾಹಿತಿ ನೀಡಿದೆ. ಬೆಳಗ್ಗೆ 9:04ರ ಸುಮಾರಿಗೆ ಭೂಮಿ ಕಂಪಿಸಿದ್ದು, ಒಂದು ನಿಮಿಷ ಕಾಲ ಭೂಕಂಪನದ ಅನುಭವವಾಗಿದೆ. ಹರಿಯಾಣದ ಜಜ್ಜರ್‌ನಲ್ಲಿ 4.4 ತೀವ್ರತೆಯ ಭೂಕಂಪ ಸಂಭವಿಸಿದೆ. ಇದು ದೆಹಲಿಯಿಂದ ಸುಮಾರು 60 ಕಿಲೋಮೀಟರ್ ದೂರದಲ್ಲಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ತಿಳಿಸಿದೆ. ದೆಹಲಿಯಲ್ಲಿ ಮಾತ್ರವಲ್ಲದೇ ಉತ್ತರ ಭಾರತದ ಹಲವಾರು ಭಾಗಗಳಲ್ಲಿ

ದೆಹಲಿ-ಎನ್‌ಸಿರ್‌ನಲ್ಲಿ 4.4 ತೀವ್ರತೆ ಪ್ರಬಲ ಭೂಕಂಪ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಸುಳ್ಯ: ಅರಂತೋಡು ಗ್ರಾ.ಪಂ. ಘನತ್ಯಾಜ್ಯ ಘಟಕಕ್ಕೆ ಬೆಂಕಿ

(ನ್ಯೂಸ್ ಕಡಬ) newskadaba.com, ಜು. 10. ಸುಳ್ಯ: ಅರಂತೋಡು ಗ್ರಾಮ ಪಂಚಾಯಿತಿಯ ಘನತ್ಯಾಜ್ಯ ಘಟಕಕ್ಕೆ ಆಕಸ್ಮಿಕವಾಗಿ ಬೆಂಕಿ ತಗುಲಿದ್ದು ಘಟಕ ಹೊತ್ತಿ ಉರಿದಿದೆ.   ಬುಧವಾರ ಸಂಜೆ ಘಟನೆ ನಡೆದಿದ್ದು ಘಟಕದಲ್ಲಿ ಪೂರ್ತಿಯಾಗಿ ತ್ಯಾಜ್ಯ ಬೇರ್ಪಡಿಸಿ ತುಂಬಿಡಲಾಗಿದ್ದು ಬೆಂಕಿ ತಗುಲಿ ಹೊತ್ತಿ ಉರಿದಿದೆ. ಕಟ್ಟಡ ಮತ್ತಿತರ ಸೇರಿ ಅಪಾರ ಹಾನಿ ಸಂಭವಿಸಿದೆ. ವಿದ್ಯುತ್ ಶಾರ್ಟ್ ಸಕ್ಯೂಟ್ ನಿಂದ ಬೆಂಕಿ ತಗುಲಿರಬಹುದು ಎಂದು ಶಂಕಿಸಲಾಗಿದೆ. ಅಗ್ನಿ ಶಾಮಕ ದಳದವರು ಬಂದು ಬೆಂಕಿ ನಂದಿಸಿದರು. ಘಟನೆಯಲ್ಲಿ ಘನತ್ಯಾಜ್ಯ ಸಂಪೂರ್ಣ ಹೊತ್ತಿ

ಸುಳ್ಯ: ಅರಂತೋಡು ಗ್ರಾ.ಪಂ. ಘನತ್ಯಾಜ್ಯ ಘಟಕಕ್ಕೆ ಬೆಂಕಿ Read More »

ಕರಾವಳಿ

ಸರಣಿ ಹೃದಯಾಘಾತ: ಧಾರವಾಡದ ಕೆಎಎಸ್‌ ವಿದ್ಯಾರ್ಥಿನಿ ಹಾಗೂ ದಾವಣಗೆರೆಯ ಯುವಕ ಮೃತ್ಯು

(ನ್ಯೂಸ್ ಕಡಬ) newskadaba.com, ಜು. 09. ದಾವಣಗೆರೆ: ರಾಜ್ಯದಲ್ಲಿ ಯುವಜನತೆಯ ಹೃದಯಾಘಾತದ ಪ್ರಕರಣಗಳು ಹೆಚ್ಚಳವಾಗುತ್ತಿವೆ. ಧಾರವಾಡಜಿಲ್ಲೆಯಲ್ಲಿ ಪದವಿ ವಿಭಾಗದಲ್ಲಿ ವಿದ್ಯಾಭ್ಯಾಸ ಮುಗಿಸಿ, ಯುಪಿಎಸ್ಸಿ ಹಾಗೂ ಕೆಎಎಸ್ ಪರೀಕ್ಷೆಗೆ ತಯಾರಿ ನಡೆಸಿದ್ದ ವಿದ್ಯಾರ್ಥಿನಿ ಸಾವನ್ನಪ್ಪಿದ್ದಾಳೆ. ದಾವಣಗೆರೆಯಲ್ಲಿ ಹೃದಯಸ್ತಂಭನದಿಂದ 22 ವರ್ಷದ ಯುವಕ ಮೃತಪಟ್ಟಿದ್ದಾನೆ. ಇನ್ನೊಂದೆಡೆಯಲ್ಲಿ, ಸರಣಿ ಹೃದಯಾಘಾತ ಸುದ್ದಿಗಳಿಂದ ಆತಂಕಗೊಂಡಿರುವ ಜನತೆ ಜಯದೇವ ಸೇರಿದಂತೆ ಹೃದಯ ಆಸ್ಪತ್ರೆಗಳಿಗೆ ಆರೋಗ್ಯ ಪರಿಶೀಲನೆಗಾಗಿ ದೌಡಾಯಿಸುತ್ತಿದ್ದಾರೆ. ಕೆಎಎಸ್‌ ವಿದ್ಯಾರ್ಥಿನಿ ಸಾವು ಧಾರವಾಡ ಪುರೋಹಿತನಗರದಲ್ಲಿರುವ ಪ್ರಭಾಕರ ಕುಸುಗೂರ ಅವರ ಮಗಳು ಜೀವಿತಾ ಕುಸುಗೂರ (26)

ಸರಣಿ ಹೃದಯಾಘಾತ: ಧಾರವಾಡದ ಕೆಎಎಸ್‌ ವಿದ್ಯಾರ್ಥಿನಿ ಹಾಗೂ ದಾವಣಗೆರೆಯ ಯುವಕ ಮೃತ್ಯು Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಬೆಂಗಳೂರು, ಕೋಲಾರಗಳಲ್ಲಿ NIA ದಾಳಿ: ಉಗ್ರರಿಗೆ ನೆರವು ನೀಡುತ್ತಿದ್ದ ಆರೋಪದ ಮೇಲೆ ಮೂವರ ಬಂಧನ

(ನ್ಯೂಸ್ ಕಡಬ) newskadaba.com, ಜು. 09. ಬೆಂಗಳೂರು: ಲಷ್ಕರೆ ತಯ್ಬಾ (LeT) ಉಗ್ರ ಚಟುವಟಿಕೆಗಳಿಗೆ ನೆರವು ನೀಡುತ್ತಿದ್ದ ಆರೋಪ ಸಂಬಂಧ ಪರಪ್ಪನ ಅಗ್ರಹಾರ ಜೈಲಿನ ಮನೋವೈದ್ಯ, ಸಹಾಯಕ ಸಬ್‌ ಇನ್ಸ್‌ಪೆಕ್ಟರ್‌ ಸೇರಿದಂತೆ ಮೂವರು ಶಂಕಿತ ಉಗ್ರರನ್ನು ರಾಷ್ಟ್ರೀಯ ತನಿಖಾ ದಳ (NIA) ನಿನ್ನೆ ಮಂಗಳವಾರ ಬಂಧಿಸಿದೆ. ಪರಪ್ಪನ ಅಗ್ರಹಾರ ಜೈಲಿನ ಮನೋವೈದ್ಯ ಡಾ. ನಾಗರಾಜ್‌, ಎಎಸ್‌ಐ ಚಾನ್‌ಪಾಷಾ, ಕೋಲಾರದ ಅನೀಸಾ ಫಾತೀಮಾ ಬಂಧಿತರು. ಆರೋಪಿ ಅನಿಸಾ, ತಲೆಮರೆಸಿಕೊಂಡಿರುವ ಉಗ್ರ ಜುನೈದ್‌ ಅಹಮ್ಮದ್‌ನ ತಾಯಿ. ಈ ಮೂವರು ಶಂಕಿತರು ಜೈಲಿನಲ್ಲಿರುವ

ಬೆಂಗಳೂರು, ಕೋಲಾರಗಳಲ್ಲಿ NIA ದಾಳಿ: ಉಗ್ರರಿಗೆ ನೆರವು ನೀಡುತ್ತಿದ್ದ ಆರೋಪದ ಮೇಲೆ ಮೂವರ ಬಂಧನ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್
crime, arrest, suspected

ಉಳ್ಳಾಲ: ಬಾಲಕಿಯ ಅಪಹರಣ-ದಂಪತಿ ಸೇರಿದಂತೆ ಮೂವರ ವಿರುದ್ಧ ಫೋಕ್ಸೋ ಪ್ರಕರಣ ದಾಖಲು

(ನ್ಯೂಸ್ ಕಡಬ) newskadaba.com, ಜು. 08. ಅಪ್ರಾಪ್ತ ವಯಸ್ಸಿನ ಬಾಲಕಿಯ ಅಪಹರಣ ಪ್ರಕರಣಕ್ಕೆ ಸಂಬಂಧಿಸಿ ದೇರಳಕಟ್ಟೆ ಸಮೀಪದ ರೆಂಜಾಡಿ ನಿವಾಸಿ ಮಹಮ್ಮದ್ ಶಹಬಾಝ್ (27) ಮತ್ತು ಆಕೆಯನ್ನು ಅಪಹರಿಸಲು ಸಹಕರಿಸಿದ ಕೊಣಾಜೆ ನಿವಾಸಿಗಳಾದ ಅಮೀರ್ ಸೊಹೈಲ್, ನಿಶಾ ದಂಪತಿಯನ್ನು ಪೊಲೀಸರು ಬಂಧಿಸಿ ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಪತ್ತೆ ಹಚ್ಚಿ ಪೋಷಕರಿಗೆ ನೀಡಿದ್ದು ಆರೋಪಿಗಳ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಅಪಹರಿತ ಬಾಲಕಿಯ ತಂದೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ತನ್ನ ಮಗಳನ್ನು ಅಮಿಷ ತೋರಿಸಿ ಅಪಹರಿಸಿದ್ದಾರೆ ಎಂದು

ಉಳ್ಳಾಲ: ಬಾಲಕಿಯ ಅಪಹರಣ-ದಂಪತಿ ಸೇರಿದಂತೆ ಮೂವರ ವಿರುದ್ಧ ಫೋಕ್ಸೋ ಪ್ರಕರಣ ದಾಖಲು Read More »

ಕರಾವಳಿ, ಬ್ರೇಕಿಂಗ್ ನ್ಯೂಸ್
Scroll to Top