News Kadaba

‘ಒಮ್ಮೆ ಬಳಸಿದ ಅಡುಗೆ ಎಣ್ಣೆಯನ್ನ ಮರುಬಳಸಬಾರದು’- ಆರೋಗ್ಯ ಇಲಾಖೆ ಸೂಚನೆ

(ನ್ಯೂಸ್ ಕಡಬ) newskadaba.com, ಜು. 31: ಅಡುಗೆ ಎಣ್ಣೆ ಮರುಬಳಕೆ ಮಾಡುತ್ತಿರುವ ಮಾಹಿತಿ ಬೆನ್ನಲ್ಲೇ ಒಮ್ಮೆ ಬಳಸಿದ ಅಡುಗೆ ಎಣ್ಣೆಯನ್ನು ಮರುಬಳಸದಂತೆ ಆರೋಗ್ಯ ಇಲಾಖೆ ಹೊಸ ಮಾರ್ಗಸೂಚಿ ಹೊರಡಿಸಿದೆ. ಎಣ್ಣೆ ಉದ್ದಿಮೆದಾರರು ಹಾಗೂ ಬೇಕರಿ, ಹೋಟೆಲ್‌ನವರಿಗೆ ಖಡಕ್ ನಿರ್ದೇಶನ ಹೊರಡಿಸಿದ್ದಾರೆ. ಈ ಮೂಲಕ ಅಡುಗೆ ಎಣ್ಣೆ ತಯಾರಿಕಾ ಘಟಕದವರು ಕಡ್ಡಾಯವಾಗಿ ಆರು ತಿಂಗಳಿಗೊಮ್ಮೆ ಗುಣಮಟ್ಟ ವಿಶ್ಲೇಷಣೆ ತಪಾಸಣೆ ಮಾಡಿಸಬೇಕು ಎಂದು ಇಲಾಖೆ ಸೂಚನೆ ನೀಡಿದೆ. ರಾಜ್ಯದಲ್ಲಿ ಹೆಚ್ಚಾದ ಹೃದಯಘಾತ ಪ್ರಕರಣದ ಬಳಿಕ ಆರೋಗ್ಯ ಇಲಾಖೆ ಎಚ್ಚೆತ್ತಿದೆ. ಕೆಲ […]

‘ಒಮ್ಮೆ ಬಳಸಿದ ಅಡುಗೆ ಎಣ್ಣೆಯನ್ನ ಮರುಬಳಸಬಾರದು’- ಆರೋಗ್ಯ ಇಲಾಖೆ ಸೂಚನೆ Read More »

ಆರೋಗ್ಯ ಮಾಹಿತಿ, ಬ್ರೇಕಿಂಗ್ ನ್ಯೂಸ್

ಧರ್ಮಸ್ಥಳ ಶವ ಹೂತಿಟ್ಟ ಪ್ರಕರಣ: ಆರನೇ ಗುರುತಿನಲ್ಲಿ ಪತ್ತೆಯಾದ ಶವದ ಅವಶೇಷ..!!!

(ನ್ಯೂಸ್ ಕಡಬ) newskadaba.com, ಜು. 31: ಧರ್ಮಸ್ಥಳ: ಶವಗಳನ್ನು ಹೂತಿಟ್ಟ ಪ್ರಕರಣಕ್ಕೆ ಸಂಬ೦ಧಿಸಿದ೦ತೆ ಜು.31ರಂದು 6ನೇ ಗುರುತಿನ ಉತ್ಪನನದಲ್ಲಿ ಶವದ ಅವಶೇಷ ಪತ್ತೆಯಾಗಿರುವ ಮಾಹಿತಿ ಲಭ್ಯವಾಗಿದೆ. ಧರ್ಮಸ್ಥಳ ಗ್ರಾಮ ಮತ್ತು ಆಸುಪಾಸಿನ ಪ್ರದೇಶದಲ್ಲಿ ಕೊಲೆಯಾದ ಮತ್ತು ಅತ್ಯಾಚಾರಕ್ಕೀಡಾಗಿ ಕೊಲೆಯಾದ ಮೃತದೇಹಗಳನ್ನು ಬೆದರಿಸಿ ಹೂತು ಹಾಕಿಸಲಾಗಿದೆ ಎಂದು ದೂರು ದಾಖಲಿಸಿರುವ ಅನಾಮಧೇಯ ವ್ಯಕ್ತಿಯೊಂದಿಗೆ ಎಸ್.ಐ.ಟಿ. ಅಧಿಕಾರಿಗಳು ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ. ನಿರಂತರವಾಗಿ ಶೋಧ ಕಾರ್ಯ ನಡೆಸಲಾಗುತ್ತಿದ್ದು ಇದೀಗ ಬುರುಡೆ ಪತ್ತೆಯಾಗಿದೆ. ಕೆಲ ಮೂಳೆಗಳು ಪತ್ತೆಯಾಗಿದ್ದು, ವಿಧಿವಿಜ್ಞಾನ ಇಲಾಖಾ ಅಧಿಕಾರಿಗಳು

ಧರ್ಮಸ್ಥಳ ಶವ ಹೂತಿಟ್ಟ ಪ್ರಕರಣ: ಆರನೇ ಗುರುತಿನಲ್ಲಿ ಪತ್ತೆಯಾದ ಶವದ ಅವಶೇಷ..!!! Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಇಂದಿನ ಚಿನ್ನದ ದರ

(ನ್ಯೂಸ್ ಕಡಬ) newskadaba.com, ಜು. 30. ಬೆಂಗಳೂರು: ಚಿನ್ನದ ದರದಲ್ಲಿ ಇಂದು ಮತ್ತೆ ಇಳಿಕೆ ಕಂಡು ಬಂದಿದೆ. ಬೆಂಗಳೂರಿನಲ್ಲಿ ಇಂದು 22 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆಯಲ್ಲಿ 40 ರೂ. ಇಳಿಕೆ ಕಂಡು ಬಂದಿದೆ. ಆ ಮೂಲಕ ಆ ಮೂಲಕ 22 ಕ್ಯಾರಟ್‌ 1 ಗ್ರಾಂ ಚಿನ್ನದ ದರ 9,170 ರೂ ಗೆ ಬಂದು ನಿಂತಿದೆ. 24 ಕ್ಯಾರಟ್‌ 1 ಗ್ರಾಂ ಚಿನ್ನ 44 ರೂ ಇಳಿಕೆ ಕಂಡಿದ್ದು, 10,003 ರೂ. ಆಗಿದೆ. 22 ಕ್ಯಾರಟ್‌ನ 8

ಇಂದಿನ ಚಿನ್ನದ ದರ Read More »

ಕರ್ನಾಟಕ

‘ಪಾಕ್ ಭಯೋತ್ಪಾದನೆಗೆ ಶಾಶ್ವತ ಬೆಂಬಲ ತ್ಯಜಿಸುವವರೆಗೆ ಸಿಂಧೂ ಜಲ ಒಪ್ಪಂದ ಸ್ಥಗಿತ’- ಜೈಶಂಕರ್

(ನ್ಯೂಸ್ ಕಡಬ) newskadaba.com, ಜು. 30. ರಕ್ತ ಮತ್ತು ನೀರು ಒಟ್ಟಿಗೆ ಹರಿಯುವುದಿಲ್ಲ, ಪಾಕಿಸ್ತಾನ ಭಯೋತ್ಪಾದನೆಗೆ ತನ್ನ ಬೆಂಬಲವನ್ನು ಶಾಶ್ವತವಾಗಿ ತ್ಯಜಿಸುವವರೆಗೆ ಸಿಂಧೂ ನದಿ ಜಲ ಒಪ್ಪಂದವನ್ನು ಸ್ಥಗಿತಗೊಳಿಸಲಾಗುವುದು ಎಂದು ವಿದೇಶಾಂಗ ಸಚಿವ ಜೈಶಂಕರ್ ಹೇಳಿದ್ದಾರೆ. ಆಪರೇಷನ್ ಸಿಂಧೂರದ ಚರ್ಚೆಯ ಭಾಗವಾಗಿ ರಾಜ್ಯಸಭೆಯಲ್ಲಿ ಮಾತನಾಡಿದ ಅವರು, ‘ಸಿಂಧೂ ಜಲ ಒಪ್ಪಂದವು ಬಹಳ ವಿಶಿಷ್ಟವಾದ ಒಪ್ಪಂದವಾಗಿದೆ. ನಾನು ಈವರೆಗೂ ಯಾವುದೇ ಒಂದು ದೇಶವು ತನ್ನ ಪ್ರಮುಖ ನದಿಗಳನ್ನು ಯಾವುದೇ ಹಕ್ಕುಗಳಿಲ್ಲದೆ ಬೇರೊಂದು ದೇಶಕ್ಕೆ ಅನುಮತಿಸಿದ್ದನ್ನು ನಾನು ನೋಡಿಲ್ಲ. ಆದ್ದರಿಂದ

‘ಪಾಕ್ ಭಯೋತ್ಪಾದನೆಗೆ ಶಾಶ್ವತ ಬೆಂಬಲ ತ್ಯಜಿಸುವವರೆಗೆ ಸಿಂಧೂ ಜಲ ಒಪ್ಪಂದ ಸ್ಥಗಿತ’- ಜೈಶಂಕರ್ Read More »

ಕರಾವಳಿ, ಕರ್ನಾಟಕ

ಆ. 1ರಿಂದ ಭಾರತದ ಮೇಲೆ ಶೇ. 25 ಟ್ಯಾರಿಫ್; ಅಮೆರಿಕ ಅಧ್ಯಕ್ಷ ಟ್ರಂಪ್ ಘೋಷಣೆ

(ನ್ಯೂಸ್ ಕಡಬ) newskadaba.com, ಜು. 30. ಭಾರತದಿಂದ ಆಮದಾಗುವ ವಸ್ತುಗಳ ಮೇಲೆ ಶೇ. 25ರಷ್ಟು ಟ್ಯಾರಿಫ್ ವಿಧಿಸಲಾಗುವುದು ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ. ಈ ಸಂಬಂಧ ಟ್ರೂತ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅವರು, ‘ಆಗಸ್ಟ್ 1ರಿಂದ ಭಾರತದ ಮೇಲೆ ಶೇ 25 ಟ್ಯಾರಿಫ್ ಹಾಗೂ ಹೆಚ್ಚುವರಿ ದಂಡವನ್ನು ಹಾಕಲಾಗುವುದು. ಭಾರತ ಅಧಿಕ ಟ್ಯಾರಿಫ್ ವಿಧಿಸುತ್ತಿರುವುದು, ಹಣಕಾಸೇತರ ವ್ಯಾಪಾರ ನಿರ್ಬಂಧ ಹೊಂದಿರುವುದು, ರಷ್ಯಾ ಇಂಧನ ಖರೀದಿಸುತ್ತಿರುವುದು, ಈ ಮೂರು ಅಂಶಗಳನ್ನು ಆಧಾರವಾಗಿಟ್ಟುಕೊಂಡು ಭಾರತದ ಮೇಲೆ

ಆ. 1ರಿಂದ ಭಾರತದ ಮೇಲೆ ಶೇ. 25 ಟ್ಯಾರಿಫ್; ಅಮೆರಿಕ ಅಧ್ಯಕ್ಷ ಟ್ರಂಪ್ ಘೋಷಣೆ Read More »

ಅಂತರ್ರಾಷ್ಟ್ರೀಯ ನ್ಯೂಸ್, ಬ್ರೇಕಿಂಗ್ ನ್ಯೂಸ್

ದಕ್ಷಿಣ ಕನ್ನಡ ಜಿಲ್ಲೆಯ ಹೆಚ್ಚುವರಿ ಜಿಲ್ಲಾಧಿಕಾರಿಯಾಗಿ ರಾಜು ಕೆ ನೇಮಕ

(ನ್ಯೂಸ್ ಕಡಬ) newskadaba.com, ಜು. 30. ದಕ್ಷಿಣ ಕನ್ನಡ ಜಿಲ್ಲೆಯ ನೂತನ ಹೆಚ್ಚುವರಿ ಜಿಲ್ಲಾಧಿಕಾರಿ (ಎಡಿಸಿ) ಆಗಿ ರಾಜು ಕೆ ಅವರನ್ನು ರಾಜ್ಯ ಸರ್ಕಾರ ನೇಮಿಸಿದೆ. ರಾಜು ಕೆ ಈ ಹಿಂದೆ ಮಂಗಳೂರಿನ ಕೆಐಎಡಿಬಿಯಲ್ಲಿ ವಿಶೇಷ ಭೂಸ್ವಾಧೀನ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಅವರು ಡಾ. ಜಿ. ಸಂತೋಷ್ ಕುಮಾರ್ ಅವರ ಬದಲಿಗೆ ಹೆಚ್ಚುವರಿ ಜಿಲ್ಲಾಧಿಕಾರಿಯಾಗಿ ನೇಮಕಗೊಂಡಿದ್ದಾರೆ. ರಾಜು ಕೆ ಅವರು ಈ ಹಿಂದೆ ಸ್ಮಾರ್ಟ್ ಸಿಟಿಯ ವ್ಯವಸ್ಥಾಪಕ ನಿರ್ದೇಶಕರಾಗಿ ಮತ್ತು ಉಡುಪಿ, ಕಾಪು ಮತ್ತು ಬ್ರಹ್ಮಾವರದ ಸಹಾಯಕ

ದಕ್ಷಿಣ ಕನ್ನಡ ಜಿಲ್ಲೆಯ ಹೆಚ್ಚುವರಿ ಜಿಲ್ಲಾಧಿಕಾರಿಯಾಗಿ ರಾಜು ಕೆ ನೇಮಕ Read More »

ಕರಾವಳಿ, ಕರ್ನಾಟಕ

ಆ. 5 ರಿಂದ ಕೆಎಸ್ಆರ್ಟಿಸಿ, ಬಿಎಂಟಿಸಿ ನೌಕರರಿಂದ ಅನಿರ್ದಿಷ್ಟಾವಧಿ ಮುಷ್ಕರ

(ನ್ಯೂಸ್ ಕಡಬ) newskadaba.com, ಜು. 30. ಬೆಂಗಳೂರು:  38 ತಿಂಗಳ ಹಿಂಬಾಕಿ, ಹೊಸ ವೇತನ ಪರಿಷ್ಕರಣೆ, 2021 ರ ಮುಷ್ಕರದ ವೇಳೆ ವಜಾ ಮಾಡಲಾದ ನೌಕರರ ಮರು ನೇಮಕಾತಿಗೆ ಆಗ್ರಹಿಸಿ ಸಾರಿಗೆ ನೌಕರರ ಜಂಟಿ ಕ್ರಿಯಾ ಸಮಿತಿ ಮುಷ್ಕರಕ್ಕೆ ಕರೆ ನೀಡಿದೆ. ಆಗಸ್ಟ್ 5 ರಿಂದ ನಾಲ್ಕು ಸಾರಿಗೆ ನಿಗಮಗಳ ನೌಕರರು ಅನಿರ್ದಿಷ್ಟಾವಧಿ ಮುಷ್ಕರ ಮಾಡಲು ನಿರ್ಧಾರ ಮಾಡಿದ್ದು, ಈಗಾಗಲೇ ಸಿಎಂ ಹಾಗೂ ನಾಲ್ಕು ನಿಗಮದ ಎಂಡಿಗಳಿಗೆ ನೊಟೀಸ್ ನೀಡಿದ್ದಾರೆ. ಸಾರಿಗೆ ನೌಕರರ ಪ್ರಮುಖ ಎರಡು ಬೇಡಿಕೆಗಳೆಂದರೆ, ಬಾಕಿ

ಆ. 5 ರಿಂದ ಕೆಎಸ್ಆರ್ಟಿಸಿ, ಬಿಎಂಟಿಸಿ ನೌಕರರಿಂದ ಅನಿರ್ದಿಷ್ಟಾವಧಿ ಮುಷ್ಕರ Read More »

ಕರ್ನಾಟಕ

“ಯಶಸ್ಸು ನಾವು ಅಲಂಕರಿಸುವ ಹುದ್ದೆಯಿಂದಲ್ಲ, ಅದನ್ನು ಹೇಗೆ ನಿಭಾಯಿಸುತ್ತೇವೆ ಎಂಬುದರ ಮೇಲೆ ಅವಲಂಬಿತ” – ರೆ ಫಾ ಜಾರ್ಜ್ ಸ್ಯಾಮುವೆಲ್ ಓ ಐ ಸಿ

(ನ್ಯೂಸ್ ಕಡಬ) newskadaba.com, ಜು. 30. ನೆಲ್ಯಾಡಿ : “ಬೆಥನಿ ಸಂಸ್ಥೆಯು ಶಿಸ್ತು ಸಮರ್ಪಣೆ ಹಾಗೂ ನಿಸ್ವಾರ್ಥ ಸೇವೆಗೆ ಹೆಸರುವಾಸಿಯಾಗಿದೆ. ಯಶಸ್ಸು ನಾವು ಅಲಂಕರಿಸುವ ಹುದ್ದೆಯಿಂದಲ್ಲ, ಅದನ್ನು ಹೇಗೆ ನಿಭಾಯಿಸುತ್ತೇವೆ ಎಂಬುದರ ಮೇಲೆ ಅವಲಂಬಿತ. ವಿದ್ಯಾರ್ಥಿಗಳು ನಾಳೆ ಎಲ್ಲಿ ಹೋದರೂ, ಎಲ್ಲಿ ಕೆಲಸ ಮಾಡಿದರೂ ಅದನ್ನು ನಿಷ್ಠೆಯಿಂದಲೂ, ಶ್ರದ್ಧೆಯಿಂದಲೂ ಪ್ರಾಮಾಣಿಕತೆಯಿಂದಲೂ ಮಾಡಿ ಎಂದು ರೆ ಫಾ ಜಾರ್ಜ್ ಸ್ಯಾಮುವೆಲ್ ಓ ಐ ಸಿ ಯಶಸ್ಸಿನ ಪಥಕ್ಕೆ ಹೆಜ್ಜೆ ಇಟ್ಟ ಬೆಥನಿ ಐಟಿಐ ವಿದ್ಯಾರ್ಥಿಗಳಿಗೆ ಆಶೀರ್ವಾದದ ಮಾತುಗಳಾಡಿದರು. ಅವರು

“ಯಶಸ್ಸು ನಾವು ಅಲಂಕರಿಸುವ ಹುದ್ದೆಯಿಂದಲ್ಲ, ಅದನ್ನು ಹೇಗೆ ನಿಭಾಯಿಸುತ್ತೇವೆ ಎಂಬುದರ ಮೇಲೆ ಅವಲಂಬಿತ” – ರೆ ಫಾ ಜಾರ್ಜ್ ಸ್ಯಾಮುವೆಲ್ ಓ ಐ ಸಿ Read More »

ಕರಾವಳಿ, ಕರ್ನಾಟಕ

ಜಮ್ಮು ಮತ್ತು ಕಾಶ್ಮೀರದ ಪೂಂಚ್‌ನಲ್ಲಿ ಮತ್ತಿಬ್ಬರು ಉಗ್ರರ ಹತ್ಯೆ

(ನ್ಯೂಸ್ ಕಡಬ) newskadaba.com, ಜು. 30.  ಏಪ್ರಿಲ್‌ 22 ರ ಪಹಲ್ಗಾಮ್‌ ಭಯೋತ್ಪಾದಕ ದಾಳಿಯಲ್ಲಿ ಭಾಗಿಯಾಗಿದ್ದ ಭಯೋತ್ಪಾದಕರನ್ನು ಭದ್ರತಾ ಪಡೆಗಳು ಗುಂಡಿಕ್ಕಿ ಕೊಂದ ಕೆಲವು ದಿನಗಳ ನಂತರ, ಇಂದು ಬೆಳಿಗ್ಗೆ ಜಮ್ಮು ಮತ್ತು ಕಾಶ್ಮೀರದ ಪೂಂಚ್‌ನಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಇಬ್ಬರು ಭಯೋತ್ಪಾದಕರು ಹತರಾಗಿದ್ದಾರೆ. ಭಯೋತ್ಪಾದಕರು ಲಷ್ಕರ್‌-ಎ-ತೈಬಾ ಭಯೋತ್ಪಾದಕ ಸಂಘಟನೆಗೆ ಸೇರಿದವರು ಎಂದು ತಿಳಿದುಬಂದಿದೆ.ಇಂದು ಬೆಳಿಗ್ಗೆ, ಸೇನೆಯ ವೈಟ್‌ ನೈಟ್‌ ಕಾರ್ಪ್ಸ್ ನಲ್ಲಿ ಪೋಸ್ಟ್‌ನಲ್ಲಿ ಪೂಂಚ್‌ ಸೆಕ್ಟರ್‌ನಲ್ಲಿ ಇಬ್ಬರು ವ್ಯಕ್ತಿಗಳ ಅನುಮಾನಾಸ್ಪದ ಚಲನವಲನವನ್ನು ಗಮನಿಸಿರುವುದಾಗಿ ತಿಳಿಸಿದೆ.

ಜಮ್ಮು ಮತ್ತು ಕಾಶ್ಮೀರದ ಪೂಂಚ್‌ನಲ್ಲಿ ಮತ್ತಿಬ್ಬರು ಉಗ್ರರ ಹತ್ಯೆ Read More »

ಅಂತರ್ರಾಷ್ಟ್ರೀಯ ನ್ಯೂಸ್, ಬ್ರೇಕಿಂಗ್ ನ್ಯೂಸ್

ಅಶ್ಲೀಲ ಸಂದೇಶ ಕಳುಹಿಸಿದ ದರ್ಶನ್ ಫ್ಯಾನ್ಸ್ ವಿರುದ್ಧ ದೂರು ನೀಡಿದ ರಮ್ಯಾ: ಎಫ್‌ಐಆರ್ ದಾಖಲು

(ನ್ಯೂಸ್ ಕಡಬ) newskadaba.com, ಜು. 30.  ಬರೋಬ್ಬರಿ 48 ಸೋಷಿಯಲ್ ಮೀಡಿಯಾ ಅಕೌಂಟ್‌ನಿಂದ ತಮಗೆ ಅಶ್ಲೀಲ ಮೆಸೇಜ್ ಬಂದಿರುವುದಾಗಿ ನಟಿ ರಮ್ಯಾ ದೂರು ನೀಡಿದ್ದು, ಅಶ್ಲೀಲ ಮೆಸೇಜ್ ಕಳುಹಿಸಿದವರಿಗೆ ಶಿಕ್ಷೆಯಾಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ನಟ ದರ್ಶನ್‌ಗೆ ಸಿಕ್ಕಿರೋ ಜಾಮೀನು ಕುರಿತಂತೆ ಸುಪ್ರೀಂ ಕೋರ್ಟ್ ನೀಡಿದ್ದ ಅಭಿಪ್ರಾಯವನ್ನು ನಟಿ ರಮ್ಯಾ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಸುಪ್ರೀಂ ಕೋರ್ಟ್‌ನಿಂದ ಸಾಮಾನ್ಯರಿಗೆ ನ್ಯಾಯ ಸಿಗುತ್ತೆ ಅಂತ ನಂಬಿದ್ದು ನಿಜವಾಗಿದೆ. ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗಲಿದೆ ಎಂದು ಪೋಸ್ಟ್ ಮಾಡಿದ್ದರು.

ಅಶ್ಲೀಲ ಸಂದೇಶ ಕಳುಹಿಸಿದ ದರ್ಶನ್ ಫ್ಯಾನ್ಸ್ ವಿರುದ್ಧ ದೂರು ನೀಡಿದ ರಮ್ಯಾ: ಎಫ್‌ಐಆರ್ ದಾಖಲು Read More »

ಕರ್ನಾಟಕ, ಸಿನಿಮಾ
Scroll to Top