News Kadaba

ಅಡಿಕೆ ತೋಟದಲ್ಲಿ ಬೃಹತ್‌ ಗಾತ್ರದ ಹೆಬ್ಬಾವು ಪ್ರತ್ಯಕ್ಷ

(ನ್ಯೂಸ್‌ ಕಡಬ) newskadaba.com,  ಅ.01 ದೊಡ್ಡಬಳ್ಳಾಪುರ, – ತಾಲೂಕಿನಲ್ಲಿ ವನ್ಯಜೀವಿಗಳ ಉಪಟಳ ದಿನೇ ದಿನೇ ಹೆಚ್ಚುತ್ತಿದ್ದು, ಅಡಿಕೆ ತೋಟದಲ್ಲಿ ಬೃಹತ್‌ ಗಾತ್ರದ ಹೆಬ್ಬಾವು ಪ್ರತ್ಯಕ್ಷವಾಗಿದ್ದು, ಕೂಲಿ ಕಾರ್ಮಿಕರು ಭಯಭೀತರಾಗಿದ್ದಾರೆ.ತಿಪ್ಪೂರು ಗ್ರಾಮದ ಅಡಿಕೆ ತೋಟದಲ್ಲಿ ಸುಮಾರು 9 ಅಡಿ ಉದ್ದ, 20 ಕೆಜಿ ತೂಕದ ಬೃಹತ್‌ ಹೆಬ್ಬಾವು ಪತ್ತೆಯಾಗಿದ್ದು, ರೈತರಲ್ಲಿ ಆತಂಕ ಉಂಟಾಗಿದೆ. ಹೆಜ್ಜಾಜಿ ಗ್ರಾಮದ ಯೋಗಿ ಎಂಬುವವರು ಕಾರ್ಮಿಕರೊಂದಿಗೆ ಅಡಿಕೆ ಕೀಳಲು ತೆರಳಿದ ವೇಳೆಯಲ್ಲಿ ಭಾರೀ ಗಾತ್ರದ ಹೆಬ್ಬಾವು ಕಂಡುಬಂದಿದೆ. ತಕ್ಷಣ ಉರಗ ರಕ್ಷಕ ನಾಗರಾಜ್‌ ಅವರಿಗೆ ಕರೆ […]

ಅಡಿಕೆ ತೋಟದಲ್ಲಿ ಬೃಹತ್‌ ಗಾತ್ರದ ಹೆಬ್ಬಾವು ಪ್ರತ್ಯಕ್ಷ Read More »

ಕರಾವಳಿ

ಖ್ಯಾತ ಹಿರಿಯ ಕಲಾವಿದೆ ಕಮಲಶ್ರೀ ಇನ್ನಿಲ್ಲ

(ನ್ಯೂಸ್‌ ಕಡಬ) newskadaba.com,  ಅ.01 : ಕನ್ನಡ ಕಿರುತೆರೆ ಮತ್ತು ಹಿರಿತೆರೆಯಲ್ಲಿ ಹಲವಾರು ವರ್ಷಗಳಿಂದ ಸಕ್ರಿಯವಾಗಿದ್ದ ನಟಿ ಕಮಲಶ್ರೀ ಅವರು ಸೆ.30 ರಾತ್ರಿ ಸಾವನ್ನಪ್ಪಿದ್ದಾರೆ. ಅವರಿಗೆ 70 ವರ್ಷ ವಯಸ್ಸಾಗಿತ್ತು. ಈಚೆಗೆ ಅವರು ಸ್ತನ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ಸಾವನ್ನಪ್ಪಿದ್ದಾರೆ. ಅವರ ನಿಧನಕ್ಕೆ ಕನ್ನಡ ಕಿರುತೆರೆ ಲೋಕ ಸಂತಾಪ ಸೂಚಿಸಿದೆ. ಕಮಲಶ್ರೀ ಅವರ ಅಂತ್ಯಕ್ರಿಯೆ ಇಂದು (ಅ.1) ಬೆಂಗಳೂರಿನ ಚಾಮರಾಜಪೇಟೆಯಲ್ಲಿ ನಡೆಯಲಿದೆ. ಕಿರುತೆರೆಯಲ್ಲಿ ಅಜ್ಜಿ ಪಾತ್ರಗಳಿಂದ ಫೇಮಸ್ ಆಗಿದ್ದ ನಟಿ ಕಮಲಶ್ರೀ ಕಮಲಶ್ರೀ ಅವರು

ಖ್ಯಾತ ಹಿರಿಯ ಕಲಾವಿದೆ ಕಮಲಶ್ರೀ ಇನ್ನಿಲ್ಲ Read More »

ಕರಾವಳಿ

ಅ. 2ರಂದು ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ “ಮಂಗಳೂರು ದಸರಾ’ ಶೋಭಾಯಾತ್ರೆ

(ನ್ಯೂಸ್‌ ಕಡಬ) newskadaba.com,  ಅ.01 ಮಂಗಳೂರು : “ಮಂಗಳೂರು ದಸರಾ’ ಶೋಭಾಯಾತ್ರೆ ಅ. 2ರಂದು ನಡೆಯಲಿದೆ. ಕ್ಷೇತ್ರದ ನವೀಕರಣದ ರೂವಾರಿ, ಕೇಂದ್ರದ ಮಾಜಿ ಸಚಿವ ಬಿ. ಜನಾರ್ದನ ಪೂಜಾರಿ ಅವರ ಮಾರ್ಗದರ್ಶನದಲ್ಲಿ ಸಹಸ್ರ ಸಂಖ್ಯೆಯ ಭಕ್ತರ ಸಮ್ಮುಖದಲ್ಲಿ ಶೋಭಾಯಾತ್ರೆ ಆಯೋಜನೆಗೆ ಸಕಲ ಸಿದ್ಧತೆ ನಡೆಸಲಾಗಿದೆ.. ಸಂಜೆ 4ರಿಂದ ಶ್ರೀ ಶಾರದಾ ಮಾತೆಯ ಶೋಭಾಯಾತ್ರೆಯು ಶ್ರೀ ಕ್ಷೇತ್ರದಿಂದ ಹೊರಡಲಿದೆ. ಶ್ರೀ ಕ್ಷೇತ್ರದಲ್ಲಿ ನವರಾತ್ರಿ ಅಂಗವಾಗಿ ಪೂಜಿಸಲ್ಪಟ್ಟ ಶ್ರೀ ಮಹಾಗಣಪತಿ, ಆದಿಶಕ್ತಿ, ನವದುರ್ಗೆಯರು, ಶ್ರೀ ಶಾರದಾ ಮಾತೆ, ಬ್ರಹ್ಮಶ್ರೀ ನಾರಾಯಣ

ಅ. 2ರಂದು ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ “ಮಂಗಳೂರು ದಸರಾ’ ಶೋಭಾಯಾತ್ರೆ Read More »

ಕರಾವಳಿ

ಇಂಡೋನೇಷ್ಯಾ: ಶಾಲಾ ಕಟ್ಟಡ ಕುಸಿದು ಮೂವರು ವಿದ್ಯಾರ್ಥಿಗಳು ಜೀವಂತ ಸಮಾಧಿ ; 38 ಮಂದಿ ಕಣ್ಮರೆ

(ನ್ಯೂಸ್‌ ಕಡಬ) newskadaba.com,  ಅ.01 ಸಿಡೋರ್ಜೊ : ಇಂಡೋನೇಷ್ಯಾದಲ್ಲಿ ಶಾಲಾ ಕಟ್ಟಡ ಕುಸಿದು ಮೂವರು ವಿದ್ಯಾರ್ಥಿಗಳು ಬಲಿ, 38ಕ್ಕೂ ಹೆಚ್ಚು ಮಂದಿ ಕಣರೆಯಾಗಿದ್ದಾರೆ ಎಂದು ತಿಳಿದುಬಂದಿದೆ.ಇಂದು ಬೆಳಿಗ್ಗೆ ಏಕಾಏಕಿ ಕಟ್ಟಡ ಕುಸಿದು ಈ ಘಟನೆಯಲ್ಲಿ ನೂರಕ್ಕೂ ಹೆಚ್ಚು ಜನರು ಅವಶೇಷಗಳಲ್ಲಿ ಹೂತುಹೋಗಿದ್ದರು. ಪೂರ್ವ ಜಾವಾ ಪಟ್ಟಣದ ಸಿಡೋರ್ಜೊದಲ್ಲಿರುವ ಅಲ್‌ ಖೋಜಿನಿ ಇಸ್ಲಾಮಿಕ್‌ ಬೋರ್ಡಿಂಗ್‌ ಶಾಲೆಯಲ್ಲಿ ಕುಸಿದು 8ಗಂಟೆಗಳಿಗಿಂತ ಹೆಚ್ಚು ಕಾಲ ರಕ್ಷಣಾ ಕಾರ್ಯಕರ್ತರು, ಪೊಲೀಸರು ಮತ್ತು ಸೈನಿಕರು ರಾತ್ರಿಯಿಡೀ ಅಗೆದ್ತು ಗಾಯಗೊಂಡ ಬದುಕುಳಿದವರನ್ನು ಹೊರತೆಗೆದರು.. ವಿದ್ಯಾರ್ಥಿಗಳ ಕುಟುಂಬಗಳು

ಇಂಡೋನೇಷ್ಯಾ: ಶಾಲಾ ಕಟ್ಟಡ ಕುಸಿದು ಮೂವರು ವಿದ್ಯಾರ್ಥಿಗಳು ಜೀವಂತ ಸಮಾಧಿ ; 38 ಮಂದಿ ಕಣ್ಮರೆ Read More »

ಕರಾವಳಿ

ಫಿಲಿಪೈನ್ಸ್‌ನಲ್ಲಿ ಭಾರೀ ಭೂಕಂಪ; 31 ಮಂದಿ ಸಾವು

(ನ್ಯೂಸ್‌ ಕಡಬ) newskadaba.com,  ಅ.01 ಫಿಲಿಪೈನ್ಸ್‌: ಮಂಗಳವಾರ ತಡರಾತ್ರಿ ಮಧ್ಯ ಫಿಲಿಪೈನ್ಸ್‌ನಲ್ಲಿ ಸಂಭವಿಸಿದ 6.9 ತೀವ್ರತೆಯ ಭೂಕಂಪದಲ್ಲಿ ಕನಿಷ್ಠ 31 ಜನರು ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ. ಅಮೆರಿಕದ ಭೂವೈಜ್ಞಾನಿಕ ಸಮೀಕ್ಷೆ (ಯುಎಸ್‌ಜಿಎಸ್) ವರದಿಯ ಪ್ರಕಾರ, ಫಿಲಿಪೈನ್ಸ್‌ನ ಪಲೊಂಪನ್‌ನ ಪಶ್ಚಿಮಕ್ಕೆ ಮತ್ತು ಸೆಬು ಪ್ರಾಂತ್ಯದ ಬೊಗೊ ನಗರದ ಹತ್ತಿರ ರಾತ್ರಿ 10 ಗಂಟೆ ಸುಮಾರಿಗೆ ಭೂಕಂಪ ಸಂಭವಿಸಿದೆ. ಫಿಲಿಪೈನ್ಸ್ ರೆಡ್‌ಕ್ರಾಸ್‌ನ ಅಧ್ಯಕ್ಷ ರಿಚರ್ಡ್ ಗಾರ್ಡನ್ ಮಾಹಿತಿ ನೀಡಿದ್ದು, ಭಾರೀ ಭೂಕಂಪಕ್ಕೆ ಸ್ಯಾನ್ ರೆಮಿಜಿಯೊ ಪಟ್ಟಣದಲ್ಲಿ ಬ್ಯಾಸ್ಕೆಟ್‌ಬಾಲ್ ಆಟದ ವೇಳೆಯಲ್ಲಿ ಕ್ರೀಡಾ

ಫಿಲಿಪೈನ್ಸ್‌ನಲ್ಲಿ ಭಾರೀ ಭೂಕಂಪ; 31 ಮಂದಿ ಸಾವು Read More »

ಕರಾವಳಿ

ಮಹಿಳೆಯೋರ್ವರು ಮನೆಯ ಬಾವಿಗೆ ಹಾರಿ ಆತ್ಮಹತ್ಯೆ

(ನ್ಯೂಸ್‌ ಕಡಬ) newskadaba.com,  ಅ.01 ಬಂಟ್ವಾಳ :ಅನಾರೋಗ್ಯದ ಸಮಸ್ಯೆ ಹಾಗೂ ಮಗನ ಚಿಂತೆಯಿದ್ದ ಬಳಲುತ್ತಿದ್ದ ಮಹಿಳೆ ಒಬ್ಬಳು ಮನೆಯ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಪುಂಜಾಲಕಟ್ಟೆ ಪೋಲಿಸ್ ಠಾಣಾ ವ್ಯಾಪ್ತಿಯ ನೆಲ್ಲಿಗುಡ್ಡೆ ಎಂಬಲ್ಲಿ ನಡೆದಿದೆ. ಕಾವಳಮೂಡೂರು ಗ್ರಾಮದ ನೆಲ್ಲಿಗುಡ್ಡೆ ನಿವಾಸಿ ಉಮಾವತಿ ( 68) ಆತ್ಮಹತ್ಯೆ ಮಾಡಿಕೊಂಡ ಮಹಿಳೆ.15 ವರ್ಷಗಳ ಹಿಂದೆ ಉಮಾವತಿಯವರ ಮಗ ಮನೆ ಬಿಟ್ಟು ಹೋಗಿ ಕಣ್ಮರೆಯಾಗಿದ್ದಾರೆ. ಅದೇ ಚಿಂತೆಯಲ್ಲಿದ್ದವರಿಗೆ ಮಗನ ಚಿಂತೆಯಿಂದ ರಕ್ತದ ಒತ್ತಡ ಕಾಯಿಲೆಯಿಂದ ಬಳಲುತ್ತಿದ್ದರು. ಹಾಗಾಗಿ ಮಾನಸಿಕವಾಗಿ ನೊಂದುಕೊಂಡು

ಮಹಿಳೆಯೋರ್ವರು ಮನೆಯ ಬಾವಿಗೆ ಹಾರಿ ಆತ್ಮಹತ್ಯೆ Read More »

ಕರಾವಳಿ

ಕೆ ಎಸ್ ಆರ್ ಟಿ ಸಿ ದಸರಾ ದರ್ಶಿನಿಗೆ ಈ ಭಾರಿ ಭರ್ಜರಿ ಡಿಮ್ಯಾಂಡ್

(ನ್ಯೂಸ್‌ ಕಡಬ) newskadaba.com,  ಅ.01 ಮಂಗಳೂರು : ಕೆ ಎಸ್ ಆರ್ ಟಿ ಸಿಯ ಮಂಗಳೂರು ವಿಭಾಗದ ವತಿಯಿಂದ ಸೆ. 22ರಂದು ಆರಂಭವಾಗಿರುವ ದಸರಾ ವಿಶೇಷ ಪ್ಯಾಕೇಜ್ ಪ್ರವಾಸಕ್ಕೆ ಪ್ರಯಾಣಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಅ.2ರ ವರೆಗೆ ಕಾರ್ಯಾಚರಿಸಲು ಉದ್ದೇಶಿಸಿದ್ದ ಮಂಗಳೂರು – ಮಡಿಕೇರಿ, ಮಂಗಳೂರು – ಸಿಗಂದೂರು ಹಾಗೂ ಮಂಗಳೂರು -ಕೊಲ್ಲೂರು ಪ್ಯಾಕೇಜ್ ಪ್ರವಾಸವನ್ನು ಅ. 7ರ ವರೆಗೆ ವಿಸ್ತರಿಸಲಾಗಿದೆ. ಕೇವಲ 7 ದಿನದಲ್ಲಿ 2,928 ಮಂದಿ ಪ್ರವಾಸ ಮಾಡಿದ್ದು, ರಸ್ತೆ ಸಾರಿಗೆ ನಿಗಮಕ್ಕೆ 17

ಕೆ ಎಸ್ ಆರ್ ಟಿ ಸಿ ದಸರಾ ದರ್ಶಿನಿಗೆ ಈ ಭಾರಿ ಭರ್ಜರಿ ಡಿಮ್ಯಾಂಡ್ Read More »

ಕರಾವಳಿ

ಕೋಮಲ್ ಫ್ಯಾನ್ಸ್ ಗೆ ಗುಡ್ ನ್ಯೂಸ್- ಕೋಣ ಚಿತ್ರದ ಟ್ರೇಲರ್ ರಿಲೀಸ್!

(ನ್ಯೂಸ್‌ ಕಡಬ) newskadaba.com,  ಸೆ. 30 ಬೆಂಗಳೂರು : ಕಾಂತಾರ ಚಾಪ್ಟರ್ 1 ಸಿನಿಮಾ ತೆರೆಗೆ ಬರೋದಿಕ್ಕೆ ಮೂರೇ ದಿನ ಬಾಕಿ. ಈ ನಡುವೆ ಕೋಮಲ್ ಫ್ಯಾನ್ಸ್ ಗೆ ಗುಡ್ ನ್ಯೂಸ್ .ಕಾಂತಾರ 1 ಸಿನಿಮಾ ಬಿಡುಗಡೆ ಯಾಗುವ ಥಿಯೇಟರ್ ನಲ್ಲಿ ಕೋಣ ಚಿತ್ರದ ಟ್ರೇಲರ್ ಬಿಡುಗಡೆ ಆಗಲಿದೆ. ಸಹಜ ಅಭಿನಯದ ಮೂಲಕ ಮನೆ ಮಾತಾಗಿರುವ ಕೋಮಲ್ ಕುಮಾರ್ ಇದೀಗ ಕೋಣ ಸಿನಿಮಾ ಮೂಲಕ ಪ್ರೇಕ್ಷಕರ ಎದುರು ಬರಲು ರೆಡಿಯಾಗುತ್ತಿದ್ದಾರೆ. ಟೀಸರ್ ಮೂಲಕ ಕುತೂಹಲ ಹೆಚ್ಚಿಸಿದ್ದ ಕೋಣ ಚಿತ್ರದ ಟ್ರೇಲರ್

ಕೋಮಲ್ ಫ್ಯಾನ್ಸ್ ಗೆ ಗುಡ್ ನ್ಯೂಸ್- ಕೋಣ ಚಿತ್ರದ ಟ್ರೇಲರ್ ರಿಲೀಸ್! Read More »

ಕರಾವಳಿ

ಬೆಂಗಳೂರು :LPG ; ಅಡುಗೆ ಅನಿಲ ಸಿಲಿಂಡರ್ ಡೆಲಿವರಿಗೆ ಹೆಚ್ಚುವರಿ ಶುಲ್ಕ ನೀಡುವಂತಿಲ್ಲ

(ನ್ಯೂಸ್‌ ಕಡಬ) newskadaba.com,  ಸೆ. 30 ಬೆಂಗಳೂರು: ಎಲ್ಲ ಮನೆಯಲ್ಲೂ ಈಗ ಅಡುಗೆ ಅನಿಲ ಬಳಕೆಯಾಗುತ್ತಿದೆ. ಇದನ್ನೇ ಲಾಭ ಮಾಡಿಕೊಳ್ಳುವ ಗ್ಯಾಸ್ ಏಜೆನ್ಸಿಗಳು ಗ್ರಾಹಕರಿಂದ ಸಿಲಿಂಡರ್ ಮನೆ ಮನೆ ಪೂರೈಕೆ ನೆಪದಲ್ಲಿ ಹೆಚ್ಚುವರಿ ಹಣ ಸಂಗ್ರಹ ಮಾಡುತ್ತಿದೆ. ಮನೆ ಮನೆಗೆ ಅಡುಗೆ ಅನಿಲ ಪೂರೈಕೆ ಮಾಡಲು ಯಾವುದೇ ರೀತಿಯ ಶುಲ್ಕ ಇರುವುದಿಲ್ಲ. ಅನಿಲ ಪೂರೈಕೆದಾರರು ಇದನ್ನು ಕೇಳಿದರೆ ದೂರು ನೀಡಬಹುದು.. ಬಿಲ್‌ನಲ್ಲಿ ನಮೂದಿಸಿರುವ ಮೊತ್ತವನ್ನುನೀಡಿದರೆ ಮಾತ್ರ ಸಾಕು ಎಂದು ಗೃಹೋಪಯೋಗಿ ಗ್ಯಾಸ್ ಸಿಲಿಂಡರ್ ನಾಗರಿಕ ತಿದ್ದುಪಡಿಯಲ್ಲಿ ಹೇಳಲಾಗಿದೆ. ಗೃಹ

ಬೆಂಗಳೂರು :LPG ; ಅಡುಗೆ ಅನಿಲ ಸಿಲಿಂಡರ್ ಡೆಲಿವರಿಗೆ ಹೆಚ್ಚುವರಿ ಶುಲ್ಕ ನೀಡುವಂತಿಲ್ಲ Read More »

ಕರಾವಳಿ

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ; ಅ.5 ರವರೆಗೂ ರಾಜ್ಯದಲ್ಲಿ ಮಳೆ ಪ್ರಮಾಣ ಹೆಚ್ಚಳ

(ನ್ಯೂಸ್‌ ಕಡಬ) newskadaba.com,  ಸೆ. 30 ಬೆಂಗಳೂರು ; ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗುತ್ತಿರುವ ಹಿನ್ನೆಲೆಯಲ್ಲಿ ಅ.5 ರವರೆಗೂ ರಾಜ್ಯದಲ್ಲಿ ಮಳೆ ಪ್ರಮಾಣ ಹೆಚ್ಚಾಗಲಿದೆ.ಬಂಗಾಳಕೊಲ್ಲಿಯಲ್ಲಿ ಮೇಲೈ ಸುಳಿಗಾಳಿ ಉಂಟಾಗಿರುವುದರ ಪರಿಣಾಮ ರಾಜ್ಯದ ಹಲವೆಡೆ ಮಳೆಯಾಗುತ್ತಿದೆ. ಅಲ್ಲದೆ ಬಂಗಾಳಕೊಲ್ಲಿಯಲ್ಲಿ ನಾಳೆ ವೇಳೆಗೆ ವಾಯುಭಾರ ಕುಸಿತವೂ ಆಗಿರುವುದರಿಂದ ಮಳೆಯ ಪ್ರಮಾಣ ಹೆಚ್ಚುವ ಸಾಧ್ಯತೆಗಳಿವೆ. ನಿನ್ನೆ ಕರಾವಳಿ, ಮಲೆನಾಡು, ಉತ್ತರ ಕರ್ನಾಟಕ ಭಾಗದಲ್ಲಿ ಹಗುರದಿಂದ ಸಾಧಾರಣ ಪ್ರಮಾಣದ ವ್ಯಾಪಕ ಮಳೆಯಾಗಿದೆ. ಪ್ರವಾಹ ಹಾಗೂ ಅತಿವೃಷ್ಟಿಗೆ ಒಳಗಾಗಿದ್ದ ಕಲ್ಯಾಣ ಕರ್ನಾಟಕ ಭಾಗದಲ್ಲಿ ಮಳೆ ಪ್ರಮಾಣ

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ; ಅ.5 ರವರೆಗೂ ರಾಜ್ಯದಲ್ಲಿ ಮಳೆ ಪ್ರಮಾಣ ಹೆಚ್ಚಳ Read More »

ಕರಾವಳಿ
Scroll to Top