News Kadaba

ಮಚ್ಚಿನಿಂದ ಕೈಬೆರಳು ಕತ್ತರಿಸಿ ಮಹಿಳೆಯ ದರೋಡೆ ಮಾಡಿದ ಇಬ್ಬರ ಸೆರೆ

(ನ್ಯೂಸ್‌ ಕಡಬ) newskadaba.com,  ಅ.18 ಬೆಂಗಳೂರು: ಬೆಂಗಳೂರಿನ ಹೊಸಕೆರೆಹಳ್ಳಿಯಲ್ಲಿ ಮಹಿಳೆಯೊಬ್ಬರ ಮೇಲೆ ಮಚ್ಚಿನಿಂದ ಹಲ್ಲೆ  ನಡೆಸಿ ಆಕೆಯ ಎರಡು ಬೆರಳುಗಳನ್ನು ಕತ್ತರಿಸಿ, ಅವರ ಚಿನ್ನದ ಸರಗಳನ್ನು ದರೋಡೆ  ಮಾಡಿದ ಇಬ್ಬರು ಪಾತಕಿಗಳನ್ನು ಬಂಧಿಸಲಾಗಿದೆ. ಸೆಪ್ಟೆಂಬರ್‌ನಲ್ಲಿ ಗಣೇಶ ಹಬ್ಬದ ಸಂದರ್ಭದಲ್ಲಿ ಈ ಘಟನೆ ನಡೆದಿತ್ತು. ಸಿಸಿಟಿವಿ ದೃಶ್ಯಾವಳಿಗಳು ಈ ಘಟನೆಯ ಭಯಾನಕತೆಯನ್ನು ತೋರಿಸಿದ್ದವು. ಆರೋಪಿಗಳನ್ನು ಪ್ರವೀಣ್ ಮತ್ತು ಯೋಗಾನಂದ ಎಂದು ಗುರುತಿಸಲಾಗಿದೆ. ಪೊಲೀಸರ ಪ್ರಕಾರ, ಉಷಾ ಮತ್ತು ವರಲಕ್ಷ್ಮಿ ಎಂಬ ಇಬ್ಬರು ಮಹಿಳೆಯರು ಸೆಪ್ಟೆಂಬರ್ 13ರಂದು ರಾತ್ರಿ ಗಣೇಶ […]

ಮಚ್ಚಿನಿಂದ ಕೈಬೆರಳು ಕತ್ತರಿಸಿ ಮಹಿಳೆಯ ದರೋಡೆ ಮಾಡಿದ ಇಬ್ಬರ ಸೆರೆ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

9 ಲಕ್ಷ ಕೋಟಿ ದಾಟಿದ ಆರ್ಬಿಐ ಚಿನ್ನದ ಮೀಸಲು ಸಂಗ್ರಹ

(ನ್ಯೂಸ್‌ ಕಡಬ) newskadaba.com,  ಅ.18: ಅಕ್ಟೋಬರ್ ತಿಂಗಳ 10ರ ವೇಳೆಗೆ ದೇಶದ ವಿದೇಶಿ ವಿನಿಮಯ ಮೀಸಲು ಸಂಗ್ರಹದ ಪ್ರಮಾಣವು 19,153 ಕೋಟಿ ರೂ. ಕಡಿಮೆ ಆಗಿದೆ. ಇದೇ ಅವಧಿಯಲ್ಲಿ ಆರ್‌ಬಿಐ ಚಿನ್ನದ ಮೀಸಲು ಸಂಗ್ರಹದ ಪ್ರಮಾಣ 9 ಲಕ್ಷ ಕೋಟಿ ರೂ. ದಾಟಿದೆ ಎಂದು ಆರ್‌ಬಿಐ ತಿಳಿಸಿದೆ. ಈ ಮೂಲಕ ಒಟ್ಟು ಚಿನ್ನದ ಮೀಸಲು ಸಂಗ್ರಹ 61.41 ಲಕ್ಷ ಕೋಟಿ ರೂ. ಅಷ್ಟಾಗಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್‌ ತಿಳಿಸಿದೆ. ಆರ್‌ಬಿಐ ಬಳಿ ಇರುವ ವಿದೇಶಿ ಕರೆನ್ಸಿಗಳ

9 ಲಕ್ಷ ಕೋಟಿ ದಾಟಿದ ಆರ್ಬಿಐ ಚಿನ್ನದ ಮೀಸಲು ಸಂಗ್ರಹ Read More »

ಬ್ರೇಕಿಂಗ್ ನ್ಯೂಸ್

75 ಗಂಟೆಗಳಲ್ಲಿ 303 ಮಾವೋವಾದಿಗಳು ಶರಣು; ನಕ್ಸಲ್ ಮುಕ್ತ ಭಾರತದ ಭರವಸೆ ನೀಡಿದ ಮೋದಿ

(ನ್ಯೂಸ್‌ ಕಡಬ) newskadaba.com,  ಅ.18: ಕಳೆದ 24 ಗಂಟೆಗಳಲ್ಲಿ 300 ಕ್ಕೂ ಹೆಚ್ಚು ಮಾವೋವಾದಿಗಳು ಶರಣಾಗಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ರಾತ್ರಿ ನಡೆದ ಖಾಸಗಿ ಕಾರ್ಯಕ್ರಮವೊಂದರಲ್ಲಿ ತಿಳಿಸಿದ್ದಾರೆ. ನಕ್ಸಲರು ಶಾಲೆಗಳು ಅಥವಾ ಆಸ್ಪತ್ರೆಗಳನ್ನು ನಿರ್ಮಿಸಲು ಬಿಡುತ್ತಿರಲಿಲ್ಲ. ವೈದ್ಯರನ್ನು ಚಿಕಿತ್ಸಾಲಯಗಳಿಗೆ ಪ್ರವೇಶಿಸಲು ಬಿಡುತ್ತಿರಲಿಲ್ಲ ಸಂಸ್ಥೆಗಳಿಗೆ ಬಾಂಬ್ ಹಾಕುತ್ತಿದ್ದರು. ಮಾವೋವಾದಿ ಭಯೋತ್ಪಾದನೆಯಿಂದ ಯುವಜನರಿಗೆ ಮಾಡಿದ ಅನ್ಯಾಯವಾಗುತ್ತಿತ್ತು. ನಾನು ಉದ್ರೇಕಗೊಳ್ಳುತ್ತಿದ್ದೆ, ಇದೇ ಮೊದಲ ಬಾರಿಗೆ ನನ್ನ ನೋವನ್ನು ಜಗತ್ತಿಗೆ ವ್ಯಕ್ತಪಡಿಸುತ್ತಿದ್ದೇನೆ ಎಂದು ಅವರು ಹೇಳಿದರು. ಈಗ, 303 ನಕ್ಸಲರು ಶರಣಾಗಿದ್ದಾರೆ

75 ಗಂಟೆಗಳಲ್ಲಿ 303 ಮಾವೋವಾದಿಗಳು ಶರಣು; ನಕ್ಸಲ್ ಮುಕ್ತ ಭಾರತದ ಭರವಸೆ ನೀಡಿದ ಮೋದಿ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಪಿಲಿಕುಳ: ಅಕ್ಟೋಬರ್ 20 ರಂದು ಪ್ರವಾಸಿಗರ ವೀಕ್ಷಣೆಗೆ ಅವಕಾಶ

(ನ್ಯೂಸ್‌ ಕಡಬ) newskadaba.com,  ಅ.18 ಮಂಗಳೂರು:  ಶಾಲಾ ಮಕ್ಕಳ ದಸರಾ ರಜೆಯ ಪ್ರಯುಕ್ತ ಅಕ್ಟೋಬರ್ 20 ರಂದು (ಸೋಮವಾರ) ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ಎಲ್ಲಾ ವಿಭಾಗಗಳಾದ ಮೃಗಾಲಯ, ಪ್ರಾದೇಶಿಕ ವಿಜ್ಞಾನ ಕೇಂದ್ರ, ತಾರಾಲಯ, ಲೇಕ್ ಗಾರ್ಡನ್, ಬೊಟಾನಿಕಲ್ ಮ್ಯೂಸಿಯಂ ಮತ್ತು ಸಂಸ್ಕøತಿ ಗ್ರಾಮವು ಸಾರ್ವಜನಿಕರ ವೀಕ್ಷಣೆಗೆ ಇತರೆ ಎಲ್ಲಾ ದಿನಗಳಂತೆ ತೆರೆದಿರುತ್ತದೆ ಎಂದು ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.    

ಪಿಲಿಕುಳ: ಅಕ್ಟೋಬರ್ 20 ರಂದು ಪ್ರವಾಸಿಗರ ವೀಕ್ಷಣೆಗೆ ಅವಕಾಶ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ತಲಕಾವೇರಿಯಲ್ಲಿ ಕಾವೇರಿ ತೀರ್ಥೋದ್ಭವ: ಕಣ್ತುಂಬಿಕೊಂಡ ಭಕ್ತಾದಿಗಳು

(ನ್ಯೂಸ್‌ ಕಡಬ) newskadaba.com,  ಅ.18: ತುಲಾ ಸಂಕ್ರಮಣದ ದಿನ (ಅ.17 ರಂದು) ತಲಕಾವೇರಿಯಲ್ಲಿ ಕಾವೇರಿ ತೀರ್ಥೋದ್ಭವವಾಗಿದ್ದು, ಸಾವಿರಾರು ಭಕ್ತಾದಿಗಳು ಅಪರೂಪದ ಕ್ಷಣವನ್ನು ಕಣ್ತುಂಬಿಕೊಂಡರು. ಶುಕ್ರವಾರ ಮಧ್ಯಾಹ್ನ 1.44ಕ್ಕೆ ತೀರ್ಥರೂಪಿಣಿಯಾಗಿ ತಾಯಿ ಕಾವೇರಿ ಪವಿತ್ರ ಬ್ರಹ್ಮಕುಂಡಿಕೆಯಲ್ಲಿ ದರ್ಶನ ನೀಡಿದಳು. ಇದಕ್ಕೂ ಮುನ್ನ ಅರ್ಚಕ ಗುರುರಾಜಾಚಾರ್ ನೇತೃತ್ವದಲ್ಲಿ 11ಕ್ಕೂ ಅಧಿಕ ಅರ್ಚಕರು ಕುಂಕುಮಾರ್ಚನೆ, ಪುಷ್ಪಾರ್ಚನೆ ಮೂಲಕ ಕಾವೇರಿಗೆ ಪೂಜೆ ಸಲ್ಲಿಕೆ ಮಾಡಿದರು. ತೀರ್ಥೋದ್ಭವ ಆಗುತ್ತಿದ್ದಂತೆ ಅರ್ಚಕ ವೃಂದದವರಿಂದ ಭಕ್ತರ ಮೇಲೆ ಕಾವೇರಿ ತೀರ್ಥ ಪ್ರೋಕ್ಷಣೆ ಮಾಡಲಾಯಿತು. ಭಾಗಮಂಡಲದ ಶ್ರೀ ಭಂಗಡೇಶ್ವರ

ತಲಕಾವೇರಿಯಲ್ಲಿ ಕಾವೇರಿ ತೀರ್ಥೋದ್ಭವ: ಕಣ್ತುಂಬಿಕೊಂಡ ಭಕ್ತಾದಿಗಳು Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಪುತ್ತೂರು: ಆಟೋ ಚಾಲಕನ ಮೇಲೆ ಟ್ರಾಫಿಕ್ ಪೊಲೀಸರಿಂದ ಹಲ್ಲೆ

(ನ್ಯೂಸ್‌ ಕಡಬ) newskadaba.com,  ಅ.18 ಪುತ್ತೂರು: ದರ್ಬೆ ಸಮೀಪ ಆಟೋ ರಿಕ್ಷಾ ಚಾಲಕರೊಬ್ಬರ ಮೇಲೆ ಸಂಚಾರಿ ಪೊಲೀಸರು ಹಲ್ಲೆ ನಡೆಸುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಘಟನೆ ಇಂದು ಸಂಜೆ ದರ್ಬೆಯಿಂದ ಮಾಣಿ ಮೈಸೂರು ಹೆದ್ದಾರಿಗೆ ಸಂಪರ್ಕಿಸುವ ಮುಖ್ಯ ರಸ್ತೆಯಲ್ಲಿ ನಡೆದಿದೆ. ಸಂಚಾರಿ ಪೊಲೀಸರ ವರ್ತನೆಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದ್ದಾರೆ. ವೈರಲ್ ಆಗಿರುವ ವಿಡಿಯೋದಲ್ಲಿ, ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ಸಂಚಾರಿ ಠಾಣೆಯ ಪೊಲೀಸರು ಆಟೋ ರಿಕ್ಷಾಕ್ಕೆ ಅಡ್ಡಲಾಗಿ ಬಂದು ಚಾಲಕನ ಮೇಲೆ

ಪುತ್ತೂರು: ಆಟೋ ಚಾಲಕನ ಮೇಲೆ ಟ್ರಾಫಿಕ್ ಪೊಲೀಸರಿಂದ ಹಲ್ಲೆ Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

12 ವರ್ಷದ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿದ ಟ್ಯೂಷನ್ ಶಿಕ್ಷಕ; 10 ವರ್ಷ ಜೈಲು ಶಿಕ್ಷೆ ಘೋಷಣೆ

(ನ್ಯೂಸ್‌ ಕಡಬ) newskadaba.com,  ಅ.18: ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ವಿಶೇಷ ನ್ಯಾಯಾಲಯವು ತನ್ನ ತರಗತಿಗಳಿಗೆ ಹಾಜರಾಗುತ್ತಿದ್ದ 12 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ 60 (Physical Assault) ವರ್ಷದ ಟ್ಯೂಷನ್ ಶಿಕ್ಷಕನಿಗೆ 10 ವರ್ಷ ಕಠಿಣ ಜೈಲು ಶಿಕ್ಷೆ ಮತ್ತು 5,000 ರೂ. ದಂಡ ವಿಧಿಸಿದೆ. ರಾಜೇಂದ್ರನಗರ ಮಂಡಲದ ಹೈದರ್ಗುಡ ನಿವಾಸಿಯಾಗಿರುವ ಸಂತ್ರಸ್ತೆಯ ಮೇಲೆ 2017 ರ ಡಿಸೆಂಬರ್‌ನಲ್ಲಿ ಶಿಕ್ಷಕ ಅತ್ಯಾಚಾರ ಎಸಗಿದ್ದ. ಸಂತ್ರಸ್ತೆಯ ತಾಯಿಯ ಹೇಳಿಕೆ ಪ್ರಕಾರ, 7 ನೇ

12 ವರ್ಷದ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿದ ಟ್ಯೂಷನ್ ಶಿಕ್ಷಕ; 10 ವರ್ಷ ಜೈಲು ಶಿಕ್ಷೆ ಘೋಷಣೆ Read More »

ಕರ್ನಾಟಕ

ಕಾಂತಾರ ಚಾಪ್ಟರ್‌ 1;ದಾಖಲೆ ಸೃಷ್ಟಿಸಿದ ರಿಷಬ್ ಶೆಟ್ಟಿ ಸಿನಿಮಾ: 717.50 ಕೋಟಿ ಗಳಿಕೆ

(ನ್ಯೂಸ್‌ ಕಡಬ) newskadaba.com,  ಅ.18 ರಿಷಬ್ ಶೆಟ್ಟಿಯವರ ‘ಕಾಂತಾರ ಚಾಪ್ಟರ್‌ 1’ ವಿಜಯ ಯಾತ್ರೆ ಮುಂದುವರಿದಿದ್ದು, ವಿಶ್ವಾದ್ಯಂತ 717.50 ಕೋಟಿ ರು.ಗೂ ಗಳಿಕೆ ಮಾಡಿದೆ. ಭಾರತದಲ್ಲಿ 500 ಕೋಟಿ ರು.ಗೂ ಅಧಿಕ ಕಲೆಕ್ಷನ್‌ ಮಾಡಿದೆ. ಸಿನಿಮಾ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲಂಸ್‌ ಈ ಗಳಿಕೆಯನ್ನು ಅಧಿಕೃತವಾಗಿ ಘೋಷಣೆ ಮಾಡಿದೆ ಈ ಬಾರಿ ವೀಕೆಂಡ್‌ ಹಾಗೂ ದೀಪಾವಳಿ ಹಬ್ಬ ಜೊತೆಯಾಗಿ ಬಂದಿದ್ದು ಸಿನಿಮಾ ಗಳಿಕೆಯನ್ನು ಶೀಘ್ರ 1000 ಕೋಟಿ ಹೊಸ್ತಿಲು ದಾಟಿಸುವ ನಿರೀಕ್ಷೆ ಇದೆ. ಸಿನಿಮಾ ಸಕ್ಸಸ್‌ ಓಟ

ಕಾಂತಾರ ಚಾಪ್ಟರ್‌ 1;ದಾಖಲೆ ಸೃಷ್ಟಿಸಿದ ರಿಷಬ್ ಶೆಟ್ಟಿ ಸಿನಿಮಾ: 717.50 ಕೋಟಿ ಗಳಿಕೆ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್, ಸಿನಿಮಾ

ದೀಪಾವಳಿ ಹಬ್ಬ: ನೈರುತ್ಯ ರೈಲ್ವೆಯಿಂದ ವಿಶೇಷ ರೈಲು ಸೇವೆ

(ನ್ಯೂಸ್‌ ಕಡಬ) newskadaba.com,  ಅ.18: ಬೆಂಗಳೂರು: ನೈಋತ್ಯ ರೈಲ್ವೆಯ (SWR) ಬೆಂಗಳೂರು ವಿಭಾಗವು ದೀಪಾವಳಿ ಮತ್ತು ಛತ್ ಪೂಜಾ ಸಮಯದಲ್ಲಿ ಜನರ ಸಂಚಾರ ದಟ್ಟಣೆಯನ್ನು ಹಾಗೂ ದೀರ್ಘ ವಾರಾಂತ್ಯದ ಜನಸಂದಣಿಯನ್ನು ನಿಭಾಯಿಸಲು ಬೃಹತ್ ಯೋಜನೆಯನ್ನು ರೂಪಿಸಿದೆ. SWR ಬೆಂಗಳೂರು, ಮೈಸೂರು ಮತ್ತು ಹುಬ್ಬಳ್ಳಿ ವಿಭಾಗಗಳ ಪ್ರಮುಖ ನಿಲ್ದಾಣಗಳಲ್ಲಿ 136 ವಿಶೇಷ ರೈಲುಗಳು (338 ಟ್ರಿಪ್‌ಗಳು), 540 ಹೆಚ್ಚುವರಿ ಬೋಗಿಗಳು, ವರ್ಧಿತ ಭದ್ರತೆ, ಸಹಾಯ ಕೇಂದ್ರಗಳು, ವೈದ್ಯಕೀಯ ತಂಡಗಳು ಮತ್ತು ಸುಧಾರಿತ ಪ್ರಯಾಣಿಕರ ಮಾರ್ಗದರ್ಶನ ಸೌಲಭ್ಯ ನೀಡುತ್ತಿದೆ. ರೈಲು

ದೀಪಾವಳಿ ಹಬ್ಬ: ನೈರುತ್ಯ ರೈಲ್ವೆಯಿಂದ ವಿಶೇಷ ರೈಲು ಸೇವೆ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಮಂಗಳೂರು: ವ್ಯಕ್ತಿಯೊಬ್ಬರ ಮೊಬೈಲ್ ಫೋನ್ ಹ್ಯಾಕ್; 64,000 ರೂ. ವಂಚನೆ

(ನ್ಯೂಸ್‌ ಕಡಬ) newskadaba.com,  ಅ.18 ಮಂಗಳೂರು: ಇ ಪರಿವಾಹನ್ ಚಲನ್ ಆಧಾರಿತ ಲಿಂಕ್ ಕ್ಲಿಕ್ ಮಾಡಿದ ವ್ಯಕ್ತಿಯೊಬ್ಬರ ಮೊಬೈಲ್ ಫೋನ್ ಹ್ಯಾಕ್ ಆಗಿ 64,000 ರೂ. ಕಳೆದುಕೊಂಡ ಘಟನೆಗೆ ಸಂಬಂಧಿಸಿದಂತೆ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದೂರುದಾರರು ಅಕ್ಟೋಬರ್ 5 ರಂದು ಸ್ನೇಹಿತರನ್ನು ಭೇಟಿ ಮಾಡಲು ನಗರಕ್ಕೆ ಬಂದಿದ್ದರು. ಅಂದು ಸಂಜೆ, ಅವರಿಗೆ ಅಪರಿಚಿತ ಸಂಖ್ಯೆಯಿಂದ ಇ ಪರಿವಾಹನ್ ಚಲನ್ ಆಧಾರಿತ ಲಿಂಕ್ ಇರುವ ವಾಟ್ಸಾಪ್ ಸಂದೇಶ ಬಂದಿತ್ತು. ಆ ರಾತ್ರಿ, ಅವರು ಅದನ್ನು ಪರಿಶೀಲಿಸಲು ಆ

ಮಂಗಳೂರು: ವ್ಯಕ್ತಿಯೊಬ್ಬರ ಮೊಬೈಲ್ ಫೋನ್ ಹ್ಯಾಕ್; 64,000 ರೂ. ವಂಚನೆ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್
Scroll to Top