News Kadaba

ನವೆಂಬರ್ 20ರಂದು ಬಿಹಾರದಲ್ಲಿ ಎನ್ ಡಿಎ ಪ್ರಮಾಣ ವಚನ

(ನ್ಯೂಸ್‌ ಕಡಬ) newskadaba.com,  ನ.17: ವಿಧಾನ ಸಭಾ ಚುನಾವಣೆಯಲ್ಲಿ ಜಯಭೇರಿ ಬಾರಿಸಿರುವ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (NDA) ನಾಯಕರು ನವೆಂಬರ್ 20ರಂದು ಗಾಂಧಿ ಮೈದಾನದಲ್ಲಿ ಪ್ರಮಾಣ ವಚನ ಸ್ವೀಕಾರ  ಮಾಡಲಿದ್ದಾರೆ. ಈ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸುವ ನಿರೀಕ್ಷೆ ಇದೆ. ಬಿಹಾರ ರಾಜ್ಯದ 243 ಸ್ಥಾನಗಳಲ್ಲಿ 202 ಸ್ಥಾನಗಳನ್ನು ಗೆದ್ದಿರುವ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್ ಡಿಎ)ವು ಮಹಾಘಟಬಂಧನ್ ಅನ್ನು ಹೀನಾಯವಾಗಿ ಸೋಲುವಂತೆ ಮಾಡಿತು. ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟವು ನವೆಂಬರ್ 20 ರಂದು ಬಿಹಾರದ ಗಾಂಧಿ […]

ನವೆಂಬರ್ 20ರಂದು ಬಿಹಾರದಲ್ಲಿ ಎನ್ ಡಿಎ ಪ್ರಮಾಣ ವಚನ Read More »

ಬ್ರೇಕಿಂಗ್ ನ್ಯೂಸ್

ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ರಾಜೀನಾಮೆ

(ನ್ಯೂಸ್‌ ಕಡಬ) newskadaba.com,  ನ.17: ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ರಾಜ್ಯಪಾಲರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. ಇತ್ತೀಚೆಗೆ ಬಿಹಾರದ 243 ವಿಧಾನಸಭಾ ಸ್ಥಾನಗಳಿಗೆ ಎರಡು ಹಂತಗಳಲ್ಲಿ ಚುನಾವಣೆ ನಡೆದು, ನ. 14 ರಂದು ಫಲಿತಾಂಶ ಪ್ರಕಟವಾಗಿತ್ತು. ಚುನಾವಣೆಯಲ್ಲಿ ಎನ್‌ಡಿಎ ಬಹುಮತ ಗಳಿಸಿತ್ತು. ಇದೇ ನವೆಂಬರ್ 20ರಂದು ನೂತನ ಸಿಎಂ ಪ್ರಮಾಣವಚನ ಕಾರ್ಯಕ್ರಮ ನೆರವೇರಲಿದೆ. ಇದೀಗ ತಮ್ಮ ಸರ್ಕಾರದ ಅಂತಿಮ ಸಚಿವ ಸಂಪುಟ ಸಭೆಯ ನಂತರ ರಾಜಭವನದಲ್ಲಿ ನಿತೀಶ್ ಕುಮಾರ್ ರಾಜ್ಯಪಾಲರಿಗೆ ರಾಜೀನಾಮೆ ಸಲ್ಲಿಸಿದ್ದಾರೆ. ಬಿಹಾರದಲ್ಲಿ ಹೊಸ

ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ರಾಜೀನಾಮೆ Read More »

ಬ್ರೇಕಿಂಗ್ ನ್ಯೂಸ್

ಕೃಷಿ ಮೇಳಕ್ಕೆ ತೆರೆ: 54.15 ಲಕ್ಷ ಜನ ಭೇಟಿ, 4.77 ಕೋಟಿ ರೂ. ವಹಿವಾಟು

(ನ್ಯೂಸ್‌ ಕಡಬ) newskadaba.com,  ನ. 17 ಬೆಂಗಳೂರು: ಜಿಕೆವಿಕೆ ಆವರಣದಲ್ಲಿ ನಡೆದ ನಾಲ್ಕು ದಿನಗಳ ಕೃಷಿ ಮೇಳಕ್ಕೆ ಭಾನುವಾರ ತೆರೆ ಬಿದ್ದಿದೆ. ಪ್ರಸಕ್ತ ಸಾಲಿನ ಮೇಳದಲ್ಲಿ ಒಟ್ಟು 54.15 ಲಕ್ಷ ರೈತರು ಮತ್ತು ಸಾರ್ವಜನಿಕರು ಭೇಟಿ ನೀಡಿದ್ದು, ಮೇಳದಲ್ಲಿ ಹಾಕಲಾಗಿದ್ದ ಮಳಿಗೆಗಳಲ್ಲಿ 4.77 ಕೋಟಿ ರೂ. ವಹಿವಾಟು ನಡೆದಿದೆ ಎಂದು ತಿಳಿದುಬಂದಿದೆ, ಕೃಷಿ ವಿಜ್ಞಾನ ವಿಶ್ವವಿದ್ಯಾಲಯವು ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿನ ಮಳಿಗೆಗಳು, ಪ್ರದರ್ಶನಗಳು ಮತ್ತು ಪ್ರಾತ್ಯಕ್ಷಿಕೆಗಳು ರೈತರು, ಕೃಷಿ ಉತ್ಸಾಹಿಗಳು, ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರನ್ನು ಆಕರ್ಷಿಸಿದವು. ಕೊನೆಯ

ಕೃಷಿ ಮೇಳಕ್ಕೆ ತೆರೆ: 54.15 ಲಕ್ಷ ಜನ ಭೇಟಿ, 4.77 ಕೋಟಿ ರೂ. ವಹಿವಾಟು Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಕಾರ್ಕಳ: ರಾಜ್ಯ ಮಟ್ಟದ ಅಥ್ಲೆಟಿಕ್ಸ್ಗೆ ಅರ್ಹತೆ ಪಡೆದ ಕ್ರೈಸ್ಟ್ ಕಿಂಗ್ ಶಾಲೆಯ ವಿದ್ಯಾರ್ಥಿ ಅಭಿಷ್

(ನ್ಯೂಸ್‌ ಕಡಬ) newskadaba.com,  ನ.17: ಕಾರ್ಕಳದ ಕ್ರೈಸ್ಟ್ ಕಿಂಗ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ೮ನೇ ತರಗತಿಯ ವಿದ್ಯಾರ್ಥಿ ಅಭಿಷ್ ಅವರು ರಾಜ್ಯ ಮಟ್ಟದ ಅಥ್ಲೆಟಿಕ್ಸ್‌ಗೆ ಪ್ರಥಮ ಸ್ಥಾನ ಗಳಿಸಿ ಅರ್ಹತೆ ಪಡೆಯುವ ಮೂಲಕ ತಮ್ಮ ಸಂಸ್ಥೆಗೆ ಹೆಮ್ಮೆ ತಂದಿದ್ದಾರೆ. ಉಡುಪಿ ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ ಮತ್ತು ಬೈಂದೂರಿನ ಕಿರಿಮಂಜೇಶ್ವರದ ಜನತಾ ನ್ಯೂ ಆಂಗ್ಲ ಮಾಧ್ಯಮ ಶಾಲೆಯ ಆಶ್ರಯದಲ್ಲಿ ಈ ಕ್ರೀಡಾಕೂಟವನ್ನು ಆಯೋಜಿಸಲಾಗಿತ್ತು. ಅಭಿಷ್ ಅವರು 14 ವರ್ಷದೊಳಗಿನವರ ವಿಭಾಗದಲ್ಲಿ 400 ಮೀಟರ್ ಓಟದ ಸ್ಪರ್ಧೆಯಲ್ಲಿ ಚಿನ್ನದ

ಕಾರ್ಕಳ: ರಾಜ್ಯ ಮಟ್ಟದ ಅಥ್ಲೆಟಿಕ್ಸ್ಗೆ ಅರ್ಹತೆ ಪಡೆದ ಕ್ರೈಸ್ಟ್ ಕಿಂಗ್ ಶಾಲೆಯ ವಿದ್ಯಾರ್ಥಿ ಅಭಿಷ್ Read More »

ಕರಾವಳಿ

ರೈತರಿಗೆ ಶುಭಸುದ್ದಿ, ಇನ್ನೆರಡು ದಿನದಲ್ಲಿ ಪಿಎಂ ಕಿಸಾನ್‌ ಯೋಜನೆ ಹಣ ಬಿಡುಗಡೆ

(ನ್ಯೂಸ್‌ ಕಡಬ) newskadaba.com,  ನ. 17 ನವದೆಹಲಿ : ರೈತರಿಗೆ ಕೇಂದ್ರ ಸರ್ಕಾರ ಸಿಹಿಸುದ್ದಿ ನೀಡಿದ್ದು, ಪಿಎಂ ಕಿಸಾನ್ ಸಮ್ಮಾನ್ (PM Kisan yojana) ಯೋಜನೆಯ 21ನೇ ಕಂತಿನ ಭಾಗವಾಗಿ ಅರ್ಹ ರೈತರ ಖಾತೆಗೆ ತಲಾ 2,000 ರೂ. ಗಳನ್ನು ಪ್ರಧಾನಿ ನರೇಂದ್ರ ಮೋದಿ ನ.19ರಂದು ಬಿಡುಗಡೆ ಮಾಡಲಿದ್ದಾರೆ. 2019ರಲ್ಲಿ ಜಾರಿಗೆ ಬಂದ ಈ ಯೋಜನೆಯಡಿ ಅರ್ಹ ರೈತರಿಗೆ ವಾರ್ಷಿಕ 6 ಸಾವಿರ ರೂ. ಮೊತ್ತವನ್ನು ಪ್ರತಿ ನಾಲ್ಕು ತಿಂಗಳಿಗೊಮ್ಮೆ ಒಟ್ಟು ಮೂರು ಬಾರಿ ಖಾತೆಗಳಿಗೆ ಜಮಾ ಮಾಡಲಾಗುತ್ತದೆ.

ರೈತರಿಗೆ ಶುಭಸುದ್ದಿ, ಇನ್ನೆರಡು ದಿನದಲ್ಲಿ ಪಿಎಂ ಕಿಸಾನ್‌ ಯೋಜನೆ ಹಣ ಬಿಡುಗಡೆ Read More »

ರಾಷ್ಟ್ರೀಯ ನ್ಯೂಸ್

ಮೈಸೂರು: ಉಪನ್ಯಾಸಕನಿಂದ ಎಂಜಿನಿಯರಿಂಗ್ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ

(ನ್ಯೂಸ್‌ ಕಡಬ) newskadaba.com,  ನ. 17 ಮೈಸೂರು: ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ನಗರದ ಪ್ರತಿಷ್ಠಿತ ಕಾಲೇಜು ಉಪನ್ಯಾಸಕನ ವಿರುದ್ಧ ಮೈಸೂರಿನ ಜಯಲಕ್ಷ್ಮಿಪುರಂ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾಮುಕ ಉಪನ್ಯಾಸಕ ಭರತ್ ಭಾರ್ಗವ ವಿರುದ್ಧ ಸೆಕ್ಷನ್ 126 (2) 75 (2) 351 (2) ಅಡಿಯಲ್ಲಿ ಎಫ್‍ಐಆರ್ ದಾಖಲಾಗಿದೆ. ಪ್ರತಿಷ್ಠಿತ ಇಂಜಿನಿಯರಿಂಗ್ ಕಾಲೇಜಿನಲ್ಲಿ ಉಪನ್ಯಾಸಕನಾಗಿದ್ದ ಭರತ್ ಭಾರ್ಗವ ಅದೇ ಕಾಲೇಜಿನಲ್ಲಿ ಓದುತ್ತಿದ್ದ ವಿದ್ಯಾರ್ಥಿನಿಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ. ಹೆಚ್ಚು ಮಾಕ್ರ್ಸ್ ಕೊಡುತ್ತೇನೆ, ಒಳ್ಳೆಯ ಕೆಲಸ ಕೊಡಿಸ್ತೇನೆ.

ಮೈಸೂರು: ಉಪನ್ಯಾಸಕನಿಂದ ಎಂಜಿನಿಯರಿಂಗ್ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಸೀರೆ ವಿಚಾರಕ್ಕೆ ಮದುವೆಗೆ 1 ಗಂಟೆ ಮುಂಚೆ ವಧುವನ್ನು ಕೊಂದ ವರ !

(ನ್ಯೂಸ್‌ ಕಡಬ) newskadaba.com,  ನ.17: ಸೀರೆ ವಿಚಾರಕ್ಕೆ ಜಗಳವಾಗಿ ವಧುವನ್ನು ವರ ಹತ್ಯೆ ಮಾಡಿರುವ ಘಟನೆ ಗುಜರಾತ್‌ನ ಭಾವನಗರದಲ್ಲಿ ನಡೆದಿದೆ. ಜೋಡಿಯ ಮದುವೆಗೆ ಕೇವಲ ಒಂದು ಗಂಟೆ ಇದ್ದಾಗಲೇ ಕೊಲೆಯಾಗಿದೆ. ಪ್ರಭುದಾಸ್ ಸರೋವರದ ಟೆಕ್ರಿ ಚೌಕ್ ಬಳಿ ವಧು-ವರರ ನಡುವೆ ಸೀರೆ ಮತ್ತು ಹಣದ ವಿಚಾರಕ್ಕೆ ಜಗಳವಾಗಿತ್ತು. ಸೋನಿ ಹಿಮ್ಮತ್‌ ರಾಥೋಡ್‌ ಹತ್ಯೆಯಾದ ಮಹಿಳೆ. ಸಜನ್ ಬರಯ್ಯ ಹತ್ಯೆ ಮಾಡಿದ ವರ.‌ ಇವರಿಬ್ಬರೂ ಕಳೆದ ಒಂದೂವರೆ ವರ್ಷದಿಂದ ಲಿವಿಂಗ್‌ ರಿಲೇಷನ್‌ಶಿಪ್‌ನಲ್ಲಿದ್ದರು. ನಂತರ ಇಬ್ಬರು ಮದುವೆಯಾಗಲು ನಿರ್ಧರಿಸಿದರು. ಅದರಂತೆ

ಸೀರೆ ವಿಚಾರಕ್ಕೆ ಮದುವೆಗೆ 1 ಗಂಟೆ ಮುಂಚೆ ವಧುವನ್ನು ಕೊಂದ ವರ ! Read More »

ಬ್ರೇಕಿಂಗ್ ನ್ಯೂಸ್

ಚಿನ್ನದ ದರದಲ್ಲಿ ಇಂದು ಮತ್ತೆ ಏರಿಕೆ

(ನ್ಯೂಸ್‌ ಕಡಬ) newskadaba.com,  ನ. 17 ಬೆಂಗಳೂರು: ಚಿನ್ನದ ದರದಲ್ಲಿ ಇಂದು ಮತ್ತೆ ಭಾರೀ ಏರಿಕೆ(Gold price today on 17th November 2025) ಕಂಡು ಬಂದಿದೆ. ಇಂದು 22ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆಯಲ್ಲಿ 10ರೂ. ಏರಿಕೆ ಕಂಡು ಬಂದಿದ್ದು, 11,455 ರೂ. ಗೆ ತಲುಪಿದೆ. 24 ಕ್ಯಾರಟ್‌ 1 ಗ್ರಾಂ ಚಿನ್ನದ ದರದಲ್ಲಿ 11 ರೂ. ಏರಿಕೆಯಾಗಿ, 12,497 ರೂ ಆಗಿದೆ. 22 ಕ್ಯಾರಟ್‌ನ 8 ಗ್ರಾಂ ಚಿನ್ನ 91,640 ರೂ. ಬಾಳಿದರೆ, 10 ಗ್ರಾಂಗೆ ನೀವು

ಚಿನ್ನದ ದರದಲ್ಲಿ ಇಂದು ಮತ್ತೆ ಏರಿಕೆ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಮೂಡಬಿದ್ರೆ: ಟಾಟಾ ಕಂಟೈನರ್ನಲ್ಲಿ ಅಕ್ರಮ ಜಾನುವಾರು ಸಾಗಾಟ – ಮೂವರು ಆರೋಪಿಗಳ ಬಂಧನ

(ನ್ಯೂಸ್‌ ಕಡಬ) newskadaba.com,  ನ.17: ಅಕ್ರಮ ಜಾನುವಾರು ಸಾಗಾಟ ನಡೆಸುತ್ತಿದ್ದ ಮೂವರು ಆರೋಪಿಗಳನ್ನು ಮೂಡಬಿದ್ರೆ ಪೊಲೀಸರು ದಸ್ತಗಿರಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಕರಣದಲ್ಲಿ ಪ್ರಮುಖ ಆರೋಪಿ ಮನ್ಸೂರ್ ಅದ್ಯಪಾಡಿ @ ಮೊಹಮ್ಮದ್ ಮನ್ಸೂರ್ ವಿರುದ್ಧ ಮಾತ್ರ ಈಗಾಗಲೇ 29ಕ್ಕೂ ಹೆಚ್ಚು ಪ್ರಕರಣಗಳು ವಿವಿಧ ಠಾಣೆಗಳಲ್ಲಿ ದಾಖಲಾಗಿದ್ದು, ಇದು 30ನೇ ಪ್ರಕರಣವಾಗಿದೆ. ಅಕ್ಟೋಬರ್ 15, 2025ರಂದು ಸಂಜೆ 5 ಗಂಟೆಗೆ ಬಂದ ಖಚಿತ ಮಾಹಿತಿಯ ಆಧಾರದ ಮೇಲೆ, ಮೂಡಬಿದ್ರೆ ತಾಲೂಕು ಹೊಸ್ಮಾರು – ನೆಲ್ಲಿಕಾರು ರಸ್ತೆಯಲ್ಲಿ ಟಾಟಾ ಎಸಿ ಕಂಟೈನರ್

ಮೂಡಬಿದ್ರೆ: ಟಾಟಾ ಕಂಟೈನರ್ನಲ್ಲಿ ಅಕ್ರಮ ಜಾನುವಾರು ಸಾಗಾಟ – ಮೂವರು ಆರೋಪಿಗಳ ಬಂಧನ Read More »

ಕರಾವಳಿ

ರಾಜ್ಯದಂತೆ ತರಕಾರಿ, ಸೊಪ್ಪುಗಳ ದರ ಏರಿಕೆ ಕಂಡಿದ್ದು, ಖರೀದಿಗೆ ಗ್ರಾಹಕರಿಂದ ಹಿಂದೇಟು

(ನ್ಯೂಸ್‌ ಕಡಬ) newskadaba.com,  ನ.17 ಬೆಂಗಳೂರು ಗ್ರಾಮಾಂತರ: ಜಿಲ್ಲೆಯೂ ಸೇರಿದಂತೆ ರಾಜ್ಯದಲ್ಲಿ ತರಕಾರಿ, ಸೊಪ್ಪುಗಳ ದರ ಗಗನಕ್ಕೇರಿದ್ದು, ಗ್ರಾಹಕರು ಖರೀದಿಗೆ ಹಿಂದೇಟು ಹಾಕುವ ಪರಿಸ್ಥಿತಿ ಎದುರಾಗಿದೆ. ರಾಜ್ಯದಲ್ಲಿ ಸುಮಾರು 27 ಲಕ್ಷ ಹೆಕ್ಟೇರ್‌ಗೂ ಹೆಚ್ಚು ಪ್ರದೇಶದಲ್ಲಿ ತೋಟಗಾರಿಕೆ ಬೆಳೆ ಬೆಳೆಯಲಾಗುತ್ತದೆ. ಇದರಲ್ಲಿ ತರಕಾರಿ ಬೆಳೆಯೇ ಹೆಚ್ಚು. ರಾಜ್ಯದಲ್ಲಿ ಕಳೆದ 15 ದಿನಗಳಿಂದ ಮೊಂಥಾ ಚಂಡಮಾರುತ, ವಾತಾವರಣ ವೈಪರೀತ್ಯದಿಂದ ಮಳೆಯಾಗುತ್ತಿದೆ. ಇದರಿಂದ ಸಾಕಷ್ಟು ರೀತಿಯ ರೋಗಭಾದೆ ಬೆಳೆಯಲ್ಲಿ ಕಾಣಿಸಿಕೊಂಡಿದೆ. ಜತೆಗೆ ತರಕಾರಿ ಬೆಳೆ ಬೆಳೆಯುವ ಸಮಯದಲ್ಲಿ ಮಳೆ ಬಂದದ್ದು ಸಹ ಕಾರಣವಾಗಿದೆ.

ರಾಜ್ಯದಂತೆ ತರಕಾರಿ, ಸೊಪ್ಪುಗಳ ದರ ಏರಿಕೆ ಕಂಡಿದ್ದು, ಖರೀದಿಗೆ ಗ್ರಾಹಕರಿಂದ ಹಿಂದೇಟು Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್
Scroll to Top