News Kadaba

ಬಸ್ – ಲಾರಿ ಡಿಕ್ಕಿ: 7 ಜನ ಗಂಭೀರ

(ನ್ಯೂಸ್ ಕಡಬ) newskadaba.com ಭಟ್ಕಳ, ಜೂ.07. ಖಾಸಗಿ ಬಸ್ ಹಾಗೂ ಲಾರಿ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ 7 ಜನರು ಗಂಭೀರವಾಗಿ ಗಾಯಗೊಂಡ ಘಟನೆ ಭಟ್ಕಳ ತಾಲೂಕಿನ ಬೆಳಕೆ ಬಳಿ ನಡೆದಿದೆ. ವಿ.ಆರ್.ಎಲ್. ಬಸ್ ಸಂಸ್ಥೆಗೆ ಸೇರಿದ ವೋಲ್ವೊ ಬಸ್ ಇದಾಗಿದ್ದು, ಬೆಳಗಾವಿಯಿಂದ ಮಂಗಳೂರಿನತ್ತ ತೆರಳುತ್ತಿತ್ತು ಎನ್ನಲಾಗಿದೆ. ಅಪಘಾತದಲ್ಲಿ ಹಲವರಿಗೆ ಗಾಯಗಳಾಗಿದ್ದು, ಬಸ್ ಚಾಲಕ ಸೇರಿದಂತೆ 7 ಜನರ ಸ್ಥಿತಿ ಗಂಭೀರವಾಗಿದ್ದು, ಗಾಯಾಳುಗಳನ್ನು ಭಟ್ಕಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಭಟ್ಕಳ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಸ್ – ಲಾರಿ ಡಿಕ್ಕಿ: 7 ಜನ ಗಂಭೀರ Read More »

ಕರ್ನಾಟಕ

ಕುಂತೂರು ರಕ್ಷಿತಾರಣ್ಯದಲ್ಲಿ ಬೀಜದ ಹುಂಡೆಗಳ ಬಿತ್ತೋತ್ಸವ

(ನ್ಯೂಸ್ ಕಡಬ) newskadaba.com ಕಡಬ, ಜೂ.07. ಕುಂತೂರು ವಲಯರಕ್ಷಿತಾರಣ್ಯದಲ್ಲಿ ಬೀಜದ ಹುಂಡೆಗಳ ಬಿತ್ತೋತ್ಸವವು ಕುಂತೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಬಲ್ಯ-ಪಟ್ಟೆ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳ ಸಹಕಾರದೊಂದಿಗೆ ನಡೆಯಿತು. ಈ ಸಂದರ್ಭ ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷ ಶಿವಪ್ರಸಾದ್ ಪುತ್ತಿಲ, ಕುಂತೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮುಖ್ಯಗುರು ಸುಮಿತ್ರಾ, ಶಾಲಾಭಿವೃದ್ದಿ ಸಮಿತಿಯ ಅಧ್ಯಕ್ಷ ನೇಮಿರಾಜ, ಬಲ್ಯ-ಪಟ್ಟೆ ಶಾಲಾ ಮುಖ್ಯಗುರು ಪುಷ್ಪಾ, ಕುಂತೂರು ಶಾಖೆಯ ಉಪ ಅರಣ್ಯಾಧಿಕಾರಿಅಶೋಕ್, ಅರಣ್ಯರಕ್ಷಕ ಭರತೇಶ್ ಮೊದಲಾದವರು ಉಪಸ್ಥಿತರಿದ್ದರು.

ಕುಂತೂರು ರಕ್ಷಿತಾರಣ್ಯದಲ್ಲಿ ಬೀಜದ ಹುಂಡೆಗಳ ಬಿತ್ತೋತ್ಸವ Read More »

ಕರಾವಳಿ

ಸವಣೂರು: ಶ್ರೀ ಕ್ಷೇ.ಧ.ಗ್ರಾ.ಯೋ.ಯ ಮೇಲ್ವಿಚಾರಕಿಗೆ ಬೀಳ್ಕೊಡುಗೆ

(ನ್ಯೂಸ್ ಕಡಬ) newskadaba.com ಸವಣೂರು, ಜೂ.06. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಸವಣೂರು ವಲಯ ಮೇಲ್ವಿಚಾರಕಿ ಕಿಶೋರಿ ಎಸ್ ರೈಯವರಿಗೆ ಮೈಸೂರು ಕೆ.ಆರ್.ನಗರಕ್ಕೆ ವರ್ಗಾವಣೆಗೊಂಡಿದ್ದು ಅವರನ್ನು ಸವಣೂರು ಹಿ.ಪ್ರಾ.ಶಾಲೆಯಲ್ಲಿ ನಡೆದ ಬೀಳ್ಕೊಡುಗೆ ಸಮಾರಂಭದಲ್ಲಿ ಗೌರವಿಸಲಾಯಿತು. ಗೌರವ ಸ್ವೀಕರಿಸಿದ ಕಿಶೋರಿ ಎಸ್ ರೈ ಮಾತನಾಡಿ,ಕಳೆದ ಒಂದೂವರೆ ವರ್ಷದಿಂದ ಸವಣೂರು ವಲಯದಲ್ಲಿ ಕರ್ತವ್ಯ ನಿರ್ವಹಿಸಲು ಸಹಕರಿಸಿದ ಎಲ್ಲರಿಗೂ ಕೃತಜ್ಞತಳಾಗಿದ್ದೇನೆ,ಸವಣೂರು ವಲಯವು ಅತ್ಯುತ್ತಮ ವಲಯವಾಗಿದ್ದು ಗ್ರಾಮಾಭಿವೃದ್ದಿ ಯೋಜನೆಗೆ ಉತ್ತಮ ಪ್ರೋತ್ಸಾಹ ಮತ್ತು ನಿರಂತರ ಸಹಕಾರ ನೀಡಿದ್ದಾರೆ ಎಂದರು. ಸವಣೂರು ವಲಯ

ಸವಣೂರು: ಶ್ರೀ ಕ್ಷೇ.ಧ.ಗ್ರಾ.ಯೋ.ಯ ಮೇಲ್ವಿಚಾರಕಿಗೆ ಬೀಳ್ಕೊಡುಗೆ Read More »

ಕರಾವಳಿ

ಜೂ.9: ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ಪ್ರಾರಂಭೋತ್ಸವ

  (ನ್ಯೂಸ್ ಕಡಬ) newskadaba.com ಸವಣೂರು, ಜೂ.06. ಎಸ್.ಎನ್.ಆರ್.ರೂರಲ್ ಎಜುಕೇಶನ್ ಟ್ರಸ್ಟ್‌ ಪ್ರವರ್ತಿತ ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ಪ್ರಾರಂಭೋತ್ಸವ ಜೂ.9ರಂದು ಸಂಸ್ಥೆಯ ವಿದ್ಯಾ ಚೇತನ ಸಭಾಂಗಣದಲ್ಲಿ ನಡೆಯಲಿದೆ. ಕಾರ್ಯಕ್ರಮವನ್ನು ಬೆಟ್ಟಂಪಾಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ವರದರಾಜ ಚಂದ್ರಗಿರಿ ಉದ್ಘಾಟಿಸುವರು.ಅಧ್ಯಕ್ಷತೆಯನ್ನು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಸವಣುರು ಕೆ.ಸೀತಾರಾಮ ರೈ ವಹಿಸುವರು.ಅತಿಥಿಗಳಾಗಿ ಎಸ್.ಎನ್.ಆರ್.ರೂರಲ್ ಎಜುಕೇಶನ್ ಟ್ರಸ್ಟ್‌ನ ಟ್ರಸ್ಟಿ ಎನ್.ಸುಂದರ ರೈ ,ಸಂಸ್ಥೆಯ ಆಡಳಿತಾಧಿಕಾರಿ ಅಶ್ವಿನ್ ಎಲ್.ಶೆಟ್ಟಿ ಪಾಲ್ಗೊಳ್ಳುವರು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

ಜೂ.9: ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ಪ್ರಾರಂಭೋತ್ಸವ Read More »

ಕರಾವಳಿ

ಲೂಟಿಕೋರ ಖಾಸಗಿ ಆಸ್ಪತ್ರೆಗಳಿಗೆ ಕಡಿವಾಣ: ರಮೇಶ್‌ಕುಮಾರ್

(ನ್ಯೂಸ್ ಕಡಬ) newskadaba.com ಬೆಂಗಳೂರು, ಜೂ.6. ಬಡ ಜನರನ್ನು ಲೂಟಿ ಮಾಡುತ್ತಿರುವ ಖಾಸಗಿ ಆಸ್ಪತ್ರೆಗಳಿಗೆ ಎರಡು ವಾರಗಳಲ್ಲಿ ಕಡಿವಾಣ ಹಾಕಲಾಗುವುದು ಎಂದು ಆರೋಗ್ಯ ಸಚಿವ ಕೆ.ಆರ್.ರಮೇಶ್ ಕುಮಾರ್‌ ಎಚ್ಚರಿಕೆ ನೀಡಿದ್ದಾರೆ. ಅವರು ಮಂಗಳವಾರ ನಗರದ ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ಕಾಕ್ಲಿಯಾರ್ ಇಂಪ್ಲಾಂಟ್ ಯೋಜನೆಗೆ ಚಾಲನೆ ಹಾಗೂ 25 ಹಾಸಿಗೆಗಳ ಡಯಾಲಿಸಿಸ್ ಘಟಕಕ್ಕೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು. ಖಾಸಗಿ ಆಸ್ಪತ್ರೆಗಳು ಜನರಿಂದ ಚಿಕಿತ್ಸೆಗಾಗಿ ದುಪ್ಪಟ್ಟು ಹಣವನ್ನು ಲೂಟಿಮಾಡುತ್ತಿದ್ದು, ಇದು ನಮ್ಮ ಗಮನಕ್ಕೂ ಬಂದಿದೆ. ಈ ಸಂಬಂಧ ಸದ್ಯದಲ್ಲೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ

ಲೂಟಿಕೋರ ಖಾಸಗಿ ಆಸ್ಪತ್ರೆಗಳಿಗೆ ಕಡಿವಾಣ: ರಮೇಶ್‌ಕುಮಾರ್ Read More »

ಕರ್ನಾಟಕ

ಸವಣೂರು: ಗ್ರಾ.ಪಂ.ನಿಂದ ಪರಿಸರದ ಶಾಲೆಗಳಿಗೆ ಕಸದ ತೊಟ್ಟಿ ವಿತರಣೆ

(ನ್ಯೂಸ್ ಕಡಬ) newskadaba.com ಸವಣೂರು, ಜೂ.06. ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಸ್ವಚ್ಚ ಪರಿಸರ ಯೋಜನೆ ಸಲುವಾಗಿ ಸವಣೂರು ಗ್ರಾ.ಪಂ ವತಿಯಿಂದ ಗ್ರಾ.ಪಂ ವ್ಯಾಪ್ತಿಯ ಎಲ್ಲಾ ಶಾಲೆಗಳಿಗೆ ಕಸದ ತೊಟ್ಟಿ ವಿತರಿಸಲಾಯಿತು. ಗ್ರಾ.ಪಂ.ವ್ಯಾಪ್ತಿಯ ಶಾಲೆಗಳಾದ ಸವಣೂರು ಹಿ.ಪ್ರಾ.ಶಾಲೆ ,ಪ್ರೌಢಶಾಲೆ,ಪ.ಪೂ.ಕಾಲೇಜು, ಮೊಗರು ಹಿ.ಪ್ರಾ.ಶಾಲೆ, ಆರೆಲ್ತಡಿ ಕಿ.ಪ್ರಾ.ಶಾಲೆ, ಪುಣ್ಚಪ್ಪಾಡಿ ಹಿ.ಪ್ರಾ.ಶಾಲೆ, ಕುಮಾರಮಂಗಲ ಹಿ.ಪ್ರಾ.ಶಾಲೆ, ಮಂಜುನಾಥನಗರ ಹಿ.ಪ್ರಾ.ಶಾಲೆ, ಮಂಜುನಾಥನಗರ ಪ್ರೌಢಶಾಲೆ, ಅಂಕತ್ತಡ್ಕ ಹಿ.ಪ್ರಾ.ಶಾಲೆ, ಚೆನ್ನಾವರ ಕಿ.ಪ್ರಾ.ಶಾಲೆ, ಪಾಲ್ತಾಡಿ ಹಿ.ಪ್ರಾ.ಶಾಲೆಗಳಿಗೆ ಕಸದ ತೊಟ್ಟಿಯನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಗ್ರಾ.ಪಂ.ಅಧ್ಯಕ್ಷೆ ಇಂದಿರಾ ಬಿ.ಕೆ, ಸದಸ್ಯರಾದ ಗಿರಿಶಂಕರ್ ಸುಲಾಯ, ಸತೀಶ್

ಸವಣೂರು: ಗ್ರಾ.ಪಂ.ನಿಂದ ಪರಿಸರದ ಶಾಲೆಗಳಿಗೆ ಕಸದ ತೊಟ್ಟಿ ವಿತರಣೆ Read More »

ಕರಾವಳಿ

ಚಿಕ್ಕಮಗಳೂರು: ಮೂವರು ಶಂಕಿತ ನಕ್ಸಲರು ಮುಖ್ಯವಾಹಿನಿಗೆ

(ನ್ಯೂಸ್ ಕಡಬ) newskadaba.com ಚಿಕ್ಕಮಗಳೂರು, ಜೂ.5. ಜಿಲ್ಲೆಯ ಕಾಡಿನಲ್ಲಿ ನಕ್ಸಲ್ ಚಟುವಟಿಕೆಯಲ್ಲಿ ಸಕ್ರೀಯರಾಗಿದ್ದರು ಎನ್ನಲಾದ ಮೂವರು ಶಂಕಿತ ನಕ್ಸಲರು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಚಿಕ್ಕಮಗಳೂರು ಜಿಲ್ಲಾಡಳಿತ ಹಾಗೂ ಎಡಪಂಥೀಯ ಶರಣಾಗತ ಸಮಿತಿಯ ಎದುರು ಸಮಾಜದ ಮುಖ್ಯವಾಹಿನಿ ಪ್ರವೇಶಿಸಿದ್ದಾರೆ. ಮೂಡಿಗೆರೆ ತಾಲೂಕಿನ ಕಳಸ ಬಳಿಯ ಹಳುವಳ್ಳಿ ಗ್ರಾಮದ ಜರಿಮನೆ ಎಂಬಲ್ಲಿನ ಕನ್ಯಾಕುಮಾರಿ ಅಲಿಯಾಸ್ ಸುವರ್ಣ (30), ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಹಮ್ಮಿಗಿ ಗ್ರಾಮದ ಚೆನ್ನಮ್ಮ ಅಲಿಯಾಸ್ ಸುಮಾ(32) ಮತ್ತು ಬೆಂಗಳೂರು ಬನ್ನೇರುಘಟ್ಟ ರಸ್ತೆಯ ಕಂಟ್ರಕ್ಲಬ್ ರಸ್ತೆಯ ಶಿವು ಅಲಿಯಸ್ ಜ್ಞಾನದೇವು(31)

ಚಿಕ್ಕಮಗಳೂರು: ಮೂವರು ಶಂಕಿತ ನಕ್ಸಲರು ಮುಖ್ಯವಾಹಿನಿಗೆ Read More »

ಕರ್ನಾಟಕ

ಮೂಢನಂಬಿಕೆ ಪ್ರತಿಬಂಧಕ ಕಾಯ್ದೆ ಮಂಡನೆ: ಮುಖ್ಯಮಂತ್ರಿ ಸಿದ್ಧರಾಮಯ್ಯ

  (ನ್ಯೂಸ್ ಕಡಬ) newskadaba.com ಬೆಂಗಳೂರು, ಜೂ.5.  ಮೂಢ ನಂಬಿಕೆ ಪ್ರತಿಬಂಧಕ ಕಾಯ್ದೆಯನ್ನು ವಿಧಾನಸಭೆಯಲ್ಲಿ ಮಂಡಿಸಲು ರಾಜ್ಯ ಸರಕಾರವು ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪುನರುಚ್ಚರಿಸಿದ್ದಾರೆ. ಅವರು ಸೋಮವಾರ ವಿಧಾನಸಭೆಯಲ್ಲಿ ಭೋಜನ ವಿರಾಮದ ಬಳಿಕ ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್ ನಿಯಮ 69ರಡಿಯಲ್ಲಿ ಬರಗಾಲದ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡುವ ವೇಳೆ ಮಧ್ಯಪ್ರವೇಶಿಸಿ ಈ ಹೇಳಿಕೆ ನೀಡಿದರು. ಮೂಢನಂಬಿಕೆ ಪ್ರತಿಬಂಧಕ ಕಾಯ್ದೆಯನ್ನು ವಿಧಾನಸಭೆಯಲ್ಲಿ ಮಂಡನೆ ಮಾಡಿದ ಬಳಿಕ ನಂಬಿಕೆ ಹಾಗೂ ಮೂಢ ನಂಬಿಕೆಗಳ ಕುರಿತು ಚರ್ಚೆ ಮಾಡೋಣ.

ಮೂಢನಂಬಿಕೆ ಪ್ರತಿಬಂಧಕ ಕಾಯ್ದೆ ಮಂಡನೆ: ಮುಖ್ಯಮಂತ್ರಿ ಸಿದ್ಧರಾಮಯ್ಯ Read More »

ಕರ್ನಾಟಕ

ಆರ್ಥಿಕ ತಜ್ಞ ರಾಜಕುಮಾರ್ ರೇ ಅಪಘಾತಕ್ಕೆ ಬಲಿ

(ನ್ಯೂಸ್ ಕಡಬ) newskadaba.com ಹೊಸದಿಲ್ಲಿ,ಜೂ.5. ಆರ್ಥಿಕ ಮತ್ತು ಉದ್ಯಮ ವಿಷಯಗಳಲ್ಲಿ ತಜ್ಞರೆಂಬ ಗೌರವಕ್ಕೆ ಪಾತ್ರರಾಗಿದ್ದ ಆಂಗ್ಲ ದೈನಿಕ ಹಿಂದುಸ್ಥಾನ ಟೈಮ್ಸ್‌ನ ಸಹ ಸಂಪಾದಕ ರಾಜಕುಮಾರ್ ರೇ(45) ಅವರು ರವಿವಾರ ದಿಲ್ಲಿಯಲ್ಲಿ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಗೋವಿಂದಪುರಿ ಪ್ರದೇಶದಲ್ಲಿ ರಸ್ತೆ ದಾಟುತ್ತಿದ್ದಾಗ ಬೈಕ್ ಢಿಕ್ಕಿ ಹೊಡೆದು ತಲೆಗೆ ಗಂಭೀರವಾಗಿ ಗಾಯಗೊಂಡಿದ್ದ ಅವರು ಆಸ್ಪತ್ರೆಗೆ ಸಾಗಿಸುವ ಮುನ್ನವೇ ಕೊನೆಯುಸಿ ರೆಳೆದರು. ಆರೋಪಿ ಬೈಕ್ ಸವಾರ, ತುಘ್ಲಕಾಬಾದ್‌ನ ನಿವಾಸಿಯಾಗಿರುವ 18ರ ಹರೆಯದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಕಲ್ಕತ್ತಾ ವಿವಿಯಿಂದ ಅರ್ಥಶಾಸ್ತ್ರದಲ್ಲಿ ಪದವಿ

ಆರ್ಥಿಕ ತಜ್ಞ ರಾಜಕುಮಾರ್ ರೇ ಅಪಘಾತಕ್ಕೆ ಬಲಿ Read More »

ರಾಷ್ಟ್ರೀಯ ನ್ಯೂಸ್

ಐವರಿ ಕೋಸ್ಟ್‌ನ ಮಾಜಿ ಫುಟ್ಬಾಲ್ ಆಟಗಾರ ಕುಸಿದು ಬಿದ್ದು ಮೃತ್ಯು

  (ನ್ಯೂಸ್ ಕಡಬ) newskadaba.com ಲಂಡನ್,ಜೂ. 5. ಐವರಿ ಕೋಸ್ಟ್ ಫುಟ್ಬಾಲ್ ತಂಡದ ಮಾಜಿ ಮಿಡ್‌ಫೀಲ್ಡರ್ ಚೆಕ್ ಇಸ್ಮಾಯೀಲ್ ಟಿಯೊಟೆ ಚೀನ ತಂಡದ ಪರ ಆಡಲು ಅಭ್ಯಾಸ ನಡೆಸುತ್ತಿದ್ದಾಗ ಕುಸಿದು ಬಿದ್ದು ಮೃತಪಟ್ಟ ಘಟನೆ ಸೋಮವಾರ ಸಂಭವಿಸಿದೆ. ನಾಲ್ಕು ತಿಂಗಳ ಹಿಂದೆ ಬೀಜಿಂಗ್ ಎಂಟರ್‌ಪ್ರೈಸಸ್ ತಂಡ ಸೇರಿದ್ದ ಚೆಕ್ ಟಿಯೊಟೆ ಅವರು ಅಭ್ಯಾಸ ನಡೆಸುತ್ತಿದ್ದ ವೇಳೆ ಮೈದಾನದಲ್ಲಿ ಕುಸಿದು ಬಿದ್ದಿದ್ದರು. ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗಲಿಲ್ಲ. 30ರ ಹರೆಯದ ಟಿಯೊಟೆ ಬೀಜಿಂಗ್ ತಂಡದ ಪರ 11 ಪಂದ್ಯಗಳಲ್ಲಿ

ಐವರಿ ಕೋಸ್ಟ್‌ನ ಮಾಜಿ ಫುಟ್ಬಾಲ್ ಆಟಗಾರ ಕುಸಿದು ಬಿದ್ದು ಮೃತ್ಯು Read More »

ಕ್ರೀಡಾ ನ್ಯೂಸ್
Scroll to Top