News Kadaba

ಹಿಂದೂಗಳ ಮೇಲೆ ದಬ್ಬಾಳಿಕೆ ನಿಲ್ಲಿಸದಿದ್ರೆ ಪ್ರತಿಭಟನೆಗೆ ಸಿದ್ಧ ► ಸರಕಾರಕ್ಕೆ ಎಚ್ಚರಿಕೆ ನೀಡಿದ ಶೋಭಾ ಕರಂದ್ಲಾಜೆ..!!!

(ನ್ಯೂಸ್ ಕಡಬ) newskadaba.com ಬೆಂಗಳೂರು, ಸೆ.20, ಇತ್ತೀಚೆಗೆ ಭಟ್ಕಳ ಪುರಸಭೆಯ ಅಂಗಡಿ ಹರಾಜು ವೇಳೆ ನಡೆದ ಗಲಾಟೆಯಲ್ಲಿ ಮನನೊಂದು ಸೀಮೆಎಣ್ಣೆ ಸುರಿದುಕೊಂಡ ವ್ಯಾಪಾರಿ ರಾಮಚಂದ್ರ ಮನೆಗೆ ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ  ಮಂಗಳವಾರ ಭೇಟಿ ಕೊಟ್ಟು ಕುಟುಂಬಕ್ಕೆ ಸಾಂತ್ವನ ಹೇಳಿದರು. ಬಳಿಕ ಉತ್ತರಕನ್ನಡ ಡಿಸಿ ಎಸ್ ಎಸ್ ನಕುಲ್ ಅವರಿಗೆ ಫೋನ್ ಮಾಡಿ ಪುರಸಭೆಯಲ್ಲಿ ಅಂಗಡಿ ಹರಾಜು ಸಂಬಂಧಿಸಿದಂತೆ ನಡೆದ ಗಲಭೆಯನ್ನು ಕಲ್ಲಡ್ಕ ಆಗಲು ಬಿಡಬೇಡಿ. ನಮ್ಮವರನ್ನು ಅನಾವಶ್ಯಕವಾಗಿ ಬಂಧಿಸಿದ್ರೆ ಸುಮ್ಮನಿರಲ್ಲ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ. ಭಟ್ಕಳ ಪುರಸಭೆಯು […]

ಹಿಂದೂಗಳ ಮೇಲೆ ದಬ್ಬಾಳಿಕೆ ನಿಲ್ಲಿಸದಿದ್ರೆ ಪ್ರತಿಭಟನೆಗೆ ಸಿದ್ಧ ► ಸರಕಾರಕ್ಕೆ ಎಚ್ಚರಿಕೆ ನೀಡಿದ ಶೋಭಾ ಕರಂದ್ಲಾಜೆ..!!! Read More »

ಕರ್ನಾಟಕ

ಮೆಕ್ಸಿಕೋ ಭಾರೀ ಭೂಕಂಪ ► ಮೃತಪಟ್ಟವವರ ಸಂಖ್ಯೆ 149ಕ್ಕೆ ಏರಿಕೆ

 (ನ್ಯೂಸ್ ಕಡಬ) newskadaba.com ಮೆಕ್ಸಿಕೋ, ಸೆ.20, ಮಂಗಳವಾರದಂದು ಸತತ ಎರಡನೇ ಬಾರಿಗೆ ಸಂಭವಿಸಿದ ಭಾರೀ ಭೂಕಂಪದಲ್ಲಿ ಮೃತಪಟ್ಟವವರ ಸಂಖ್ಯೆ 149ಕ್ಕೆ ಏರಿಕೆಯಾಗಿದೆ. ರಿಕ್ಟರ್ ಮಾಪಕದಲ್ಲಿ 7.1ರಷ್ಟು ತೀವ್ರತೆಯ ಕಂಪನ ದಾಖಲಾಗಿದೆ. 51 ಕಿಲೋ ಮೀಟರ್ ಆಳದ ಭೂಗರ್ಭದಲ್ಲಿ ಘಟಿಸಿರುವ ಕಂಪನಕ್ಕೆ ಸುಮಾರು 49 ಗಗನಚುಂಬಿ ಕಟ್ಟಡಗಳು ಧರೆಗೆ ಉರುಳಿವೆ ಎಂದು ವರದಿಯಾಗಿದೆ. ಕಂಪನ ಆಗ್ತಿದಂತೆ ಜನರು ಕಟ್ಟಡಗಳಿಂದ ಹೊರಗೆ ಓಡಿಹೋಗಿದ್ದಾರೆ. ಆದರೆ ಅವರ ಮೇಲೂ ಕಟ್ಟಡಗಳು ಉರುಳಿಬಿದ್ದಿವೆ. ರಸ್ತೆಗಳಲ್ಲಿ ನಿಲ್ಲಿಸಿದ್ದ ಕಾರುಗಳು ಜಖಂ ಆಗಿವೆ. ವಿಚಿತ್ರ ಅಂದ್ರೆ ಇದೇ

ಮೆಕ್ಸಿಕೋ ಭಾರೀ ಭೂಕಂಪ ► ಮೃತಪಟ್ಟವವರ ಸಂಖ್ಯೆ 149ಕ್ಕೆ ಏರಿಕೆ Read More »

ಅಂತರ್ರಾಷ್ಟ್ರೀಯ ನ್ಯೂಸ್

ನಾಲ್ಕನೇ ದಿನಕ್ಕೆ ಮುಂದುವರಿದ ಮದ್ಯದಂಗಡಿ ವಿರೋಧಿ ಹೋರಾಟ

(ನ್ಯೂಸ್ ಕಡಬ) newskadaba.com ಕಡಬ, ಸೆ.20. ನೂಜಿಬಾಳ್ತಿಲ ಗ್ರಾಮದ ಕಲ್ಲುಗುಡ್ಡೆ ಪೇಟೆಯಲ್ಲಿ ಸರಕಾರಿ ಜಮೀನಿನಲ್ಲಿರುವ ಕಟ್ಟಡದಲ್ಲಿ ಗ್ರಾಮಸ್ಥರ ಪ್ರಬಲ ವಿರೋಧದ ನಡುವೆಯೂ ಸೆಪ್ಟೆಂಬರ್ 11 ರಂದು ಪ್ರಾರಂಭಗೊಂಡ ಮದ್ಯದಂಗಡಿಯನ್ನು ತೆರವುಗೊಳಿಸಬೇಕೆಂದು ಆಗ್ರಹಿಸಿ ಭಾನುವಾರದಿಂದ ಅನಿರ್ದಿಷ್ಟಾವಧಿ ಮುಷ್ಕರ ಆರಂಭಗೊಂಡಿದ್ದು, ಬುಧವಾರದಂದು ತೀವ್ರ ರೂಪದಲ್ಲಿ ಮುಂದುವರಿದಿದೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ದಲಿತ ಸಂಘಟನೆ, ನೂಜಿಬಾಳ್ತಿಲ ಗ್ರಾಮ ಪಂಚಾಯತ್ ಹಾಗೂ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಊರವರು ಜಮಾಯಿಸಿ ಮದ್ಯದಂಗಡಿಯ ಮುಂದೆ ಪ್ರತಿಭಟನೆ ಆರಂಭಿಸಿದ್ದಾರೆ. ಶಾಲಾ ವಿದ್ಯಾರ್ಥಿಗಳು ಶಾಲೆಗೆ ಹೋಗದೆ ಇಂದು

ನಾಲ್ಕನೇ ದಿನಕ್ಕೆ ಮುಂದುವರಿದ ಮದ್ಯದಂಗಡಿ ವಿರೋಧಿ ಹೋರಾಟ Read More »

ಕರಾವಳಿ

ಆಧಾರ್ ಜೋಡಣೆ ► ಡೆಡ್ ಲೈನ್ ಯಾವಾಗ ಗೊತ್ತೆ…???

(ನ್ಯೂಸ್ ಕಡಬ) newskadaba.com ಕಡಬ, ಸೆ.20, ಕೇಂದ್ರ ಸರ್ಕಾರ ಈಗಾಗಲೆ ಬ್ಯಾಂಕ್, ಪಾನ್ ಕಾರ್ಡ್, ಮೊಬೈಲ್ ಸಂಖ್ಯೆ, ಸಾಮಾಜಿಕ ಭದ್ರತಾ ಸೇವೆಗಳಿಗೆ ಆಧಾರ್ ಕಾರ್ಡ್ ಕಡ್ಡಾಯಗೊಳಿಸಿದೆ. ಹೀಗಾಗಿ ಇಲ್ಲಿ ಯಾವೆಲ್ಲ ಯೋಜನೆಗಳಿಗೆ ಕಡ್ಡಾಯ ಮಾಡಿದೆ ಮತ್ತು ಆಧಾರ್ ನಂಬರ್ ಜೋಡಿಸಲು ನೀಡಿರುವ ಕೊನೆಯ ದಿನಾಂಕ ಯಾವುದು ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ. ಪಾನ್ ಲಿಂಕ್: ಕೇಂದ್ರಿಯ ನೇರ ತೆರಿಗೆ ಮಂಡಳಿ(ಸಿಬಿಡಿಟಿ) ಈ ಹಿಂದೆ ಪಾನ್ ಗೆ ಆಧಾರ್ ಲಿಂಕ್ ಮಾಡಲು ಆಗಸ್ಟ್ 31 ರಂದು ಕೊನೆಯ ದಿನಾಂಕವನ್ನು ನೀಡಿತ್ತು.

ಆಧಾರ್ ಜೋಡಣೆ ► ಡೆಡ್ ಲೈನ್ ಯಾವಾಗ ಗೊತ್ತೆ…??? Read More »

ಕರ್ನಾಟಕ

3 ಕೆಜಿ ಬೆಳ್ಳಿ ಕದ್ದ ನೇಪಾಳಿಗರು ► ಉಡುಪಿ ಪೊಲೀಸರ ಬಲೆಗೆ..!!!

(ನ್ಯೂಸ್ ಕಡಬ) newskadaba.com ಉಡುಪಿ, ಸೆ.20, ಚಿನ್ನದಂಗಡಿಯಿಂದ ಆಭರಣಗಳನ್ನು ಕಳವು ಮಾಡಿದ್ದ ನೇಪಾಳಿಗರನ್ನು ಉಡುಪಿ ಡಿಸಿಐಬಿ ಪೊಲೀಸರು ಬಂಧಿಸಿದ್ದಾರೆ. ಐದು ಜನ ಕಳ್ಳರನ್ನು ನೇಪಾಲ ಮೂಲದವರು ಎಂದು ಗುರುತಿಸಲಾಗಿದೆ. ಶಿವಾಸಿಂಗ್ ಬಹುದ್ದೂರ್, ಕಮರ್ ಸಿಂಗ್, ರಮೇಶ್ ಸಿಂಗ್ ಪಾರ್ಕಿ, ಹರ್ಕ್ ಬಹುದ್ದೂರ್ ಸೌದ್, ಮತ್ತು ಪ್ರೇಮ್ ಬಹುದ್ದೂರ್ ಸೌದ್ ಬಂಧಿತ ಆರೋಪಿಗಳು. ಬಂಧಿತರಿಂದ 1 ಲಕ್ಷದ 80 ಸಾವಿರ ಮೌಲ್ಯದ 3 ಕೆಜಿ ಬೆಳ್ಳಿಯ ಕಾಲು ಚೈನ್‍ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬೈಂದೂರಿನ ಶೀರೂರು ಗೋಲ್ಡ್ ಪ್ಯಾಲೇಸ್ ಜ್ಯುವೆಲ್ಲರಿಯಲ್ಲಿ

3 ಕೆಜಿ ಬೆಳ್ಳಿ ಕದ್ದ ನೇಪಾಳಿಗರು ► ಉಡುಪಿ ಪೊಲೀಸರ ಬಲೆಗೆ..!!! Read More »

ಕರಾವಳಿ

ಮಂಗಳೂರು ವಿಮಾನ ನಿಲ್ದಾಣದಲ್ಲಿ ಮೊಬೈಲ್ ಬಾಂಬ್…! ► ಟಿವಿ ಚಾನೆಲ್‌ಗಳಲ್ಲಿ ಸಿಡಿದ ಸುಳ್ಳು ಸುದ್ದಿಯ ಬಾಂಬ್

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ.19. ಮಂಗಳೂರು ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಂಗಳವಾರ ರಾತ್ರಿ ‘ಮೊಬೈಲ್ ಬಾಂಬ್’ ಹೊಂದಿದ್ದ ಪ್ರಯಾಣಿಕನೊಬ್ಬನನ್ನು ಬಂಧಿಸಲಾಗಿದೆ ಎಂಬ ಸುಳ್ಳು ವದಂತಿ ವಾಟ್ಸ್ಆ್ಯಪ್ ಹಾಗು ಕೆಲವು ಸುದ್ದಿ ವಾಹಿನಿಗಳಲ್ಲಿ ಹರಡಿದ್ದು, ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಮಂಗಳೂರಿನಿಂದ ಬೆಂಗಳೂರಿಗೆ ಪ್ರಯಾಣಿಸಲು ಬಂದಿದ್ದ ವ್ಯಕ್ತಿಯ ಬಳಿ ಇದ್ದ ಪವರ್ ಬ್ಯಾಂಕ್ ಬಗ್ಗೆ ಗೊಂದಲ ಮೂಡಿತ್ತು. ಆದರೆ ವಿಷಯ ಏನೆಂದು ಸ್ಪಷ್ಟವಾಗುವ ಮೊದಲೇ ತೀರ್ಮಾನಕ್ಕೆ ಬಂದಿದ್ದ ಕೆಲವು ದೃಶ್ಯ ಮಾಧ್ಯಮಗಳು “ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಪತ್ತೆ”

ಮಂಗಳೂರು ವಿಮಾನ ನಿಲ್ದಾಣದಲ್ಲಿ ಮೊಬೈಲ್ ಬಾಂಬ್…! ► ಟಿವಿ ಚಾನೆಲ್‌ಗಳಲ್ಲಿ ಸಿಡಿದ ಸುಳ್ಳು ಸುದ್ದಿಯ ಬಾಂಬ್ Read More »

ಕರಾವಳಿ

ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆ ► ನಾಳೆಯಿಂದ (ಸೆ.21) ದಸರಾ ರಜೆ ಪ್ರಾರಂಭ

(ನ್ಯೂಸ್ ಕಡಬ) newskadaba.com ಬೆಂಗಳೂರು, ಸೆ.20. ದಕ್ಷಿಣ ಕನ್ನಡ ಹಾಗೂ ಕೊಡಗು ಜಿಲ್ಲೆಗಳ ಶಾಲಾ ಕಾಲೇಜುಗಳಿಗೆ ದಸರಾ ರಜೆಯನ್ನು ಸೆಪ್ಟೆಂಬರ್ 21 ರಿಂದ ಅಕ್ಟೋಬರ್ 5 ರವರೆಗೆ ನಿಗದಿಪಡಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ. ಅ.6 ರಂದು ಶಾಲಾ ಕಾಲೇಜುಗಳು ಪುನರಾರಂಭಗೊಳ್ಳಲಿದ್ದು, ಪ್ರಾಥಮಿಕ, ಪ್ರೌಢಶಾಲೆ ಮತ್ತು ಪಿಯುಸಿ ವಿದ್ಯಾಸಂಸ್ಥೆಗಳಿಗೆ ಈ ರಜೆ ಅನ್ವಯಿಸುತ್ತದೆ. ದಸರಾ ರಜೆಯನ್ನು ನವರಾತ್ರಿ ಸಂದರ್ಭದಲ್ಲಿಯೇ ನೀಡುವಂತೆ ಸಾವ೯ಜನಿಕರ, ಶಿಕ್ಷಣ ಸಂಸ್ಥೆಗಳ ಮನವಿಗೆ ಸ್ಪಂದಿಸಿ ರಾಜ್ಯ ಸರಕಾರ ದಸರಾ ರಜೆ ಬದಲಾಯಿಸಿದೆ ಎಂದು ಅರಣ್ಯ

ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆ ► ನಾಳೆಯಿಂದ (ಸೆ.21) ದಸರಾ ರಜೆ ಪ್ರಾರಂಭ Read More »

ಕರ್ನಾಟಕ

ಈ ವರ್ಷ ನನ್ನ ಕೊನೆಯ ದಸರಾ ಆಚರಣೆ ► ಜನಾರ್ಧನ ಪೂಜಾರಿ

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ.19, ‘ಮುಂದಿನ ನವರಾತ್ರಿ, ಉತ್ಸವವನ್ನು ನಾನು ನೋಡುತ್ತೇನೋ ಇಲ್ಲವೊ ಗೊತ್ತಿಲ್ಲ. ಬಹುಶಃ ಈ ಬಾರಿಯ ದಸರಾ ನನ್ನ ಕೊನೆಯ ಆಚರಣೆ ಆದರೂ ಅಚ್ಚರಿ ಇಲ್ಲ. ಇದು ನನ್ನ ಕೊನೇ ಸುದ್ದಿಗೋಷ್ಠಿ ಇದ್ದರೂ ಇರಬಹುದು’ ಎಂದು ವಿಷಾದಭರಿತ ಮಾತುಗಳನ್ನಾಡಿದವರು ಕೇಂದ್ರದ ಮಾಜಿ ಸಚಿವ ಜನಾರ್ದನ ಪೂಜಾರಿ. ಮಂಗಳೂರಿನ ಕುದ್ರೋಳಿ ಕ್ಷೇತ್ರದಲ್ಲಿ ದಸರಾ ಆಚರಣೆ ಕುರಿತು ಸೋಮವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ರೀತಿ ವಿಷಾದದ ಮಾತನ್ನು ನುಡಿದು ಕೊನೆಗೆ ಮೌನಕ್ಕೆ ಜಾರಿದರು.

ಈ ವರ್ಷ ನನ್ನ ಕೊನೆಯ ದಸರಾ ಆಚರಣೆ ► ಜನಾರ್ಧನ ಪೂಜಾರಿ Read More »

ಕರಾವಳಿ

ರಿಯಲ್ ಸ್ಟಾರ್ ಉಪ್ಪಿ ಜೊತೆ ಅಭಿನಯಿಸಲಿರುವ ಬೇಬಿ ಡಾಲ್ ಆದ್ಯಾ

(ನ್ಯೂಸ್ ಕಡಬ) newskadaba.com ಬೆಂಗಳೂರು, ಸೆ.19, ಉಡುಪಿಯ ಬೇಬಿ ಡಾಲ್ ಆದ್ಯಾ ಗೆ ರಿಯಲ್ ಸ್ಟಾರ್ ಉಪೇಂದ್ರ ಜೊತೆ ಅಭಿನಯ ಮಾಡುವ ಅವಕಾಶ ಒದಗಿಬಂದಿದೆ. ಬೇಬಿ ಡಾಲ್ ಆದ್ಯಾ ಅವರು ಉಪೇಂದ್ರ ಅವರ`ಹೋಮ್ ಮಿನಿಸ್ಟರ್’ ಸಿನಿಮಾದಲ್ಲಿ  ನಟಿಸಲಿದ್ದಾಳೆ ಎಂಬ ಮಾಹಿತಿ ಲಭ್ಯವಾಗಿದೆ. ಝೀ ಕನ್ನಡ ಚಾನೆಲ್ ನಲ್ಲಿ ಸಿಂಗಿಂಗ್ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಂಡಿದ್ದ ಆದ್ಯಾಳಿಗೆ ಒಂದರ ಮೇಲೊಂದರಂತೆ ಒಳ್ಳೆಯ ಆಫರ್ ಗಳು ಬರುತ್ತಿವೆ. ಈಗಾಗಲೇ ರಕ್ಷಿತ್ ಶೆಟ್ಟಿ ನಿರ್ಮಾಣದ `ಭೀಮಸೇನಾ ನಳಮಹರಾಜ’ ಚಿತ್ರದಲ್ಲಿ ನಟಿಸುತ್ತಿದ್ದು, ಈಗ ಉಪೇಂದ್ರರೊಂದಿಗೆ ನಟಿಸುವ ಅವಕಾಶ

ರಿಯಲ್ ಸ್ಟಾರ್ ಉಪ್ಪಿ ಜೊತೆ ಅಭಿನಯಿಸಲಿರುವ ಬೇಬಿ ಡಾಲ್ ಆದ್ಯಾ Read More »

ಲೈಫ್‍ಸ್ಟೈಲ್

ಜಾಗಕ್ಕೆ ಸಂಬಂಧಿಸಿ ಗಲಾಟೆ ►ಓರ್ವ ಮೃತ್ಯು, ಇಬ್ಬರಿಗೆ ಗಾಯ

(ನ್ಯೂಸ್ ಕಡಬ) newskadaba.com ಮಂಡ್ಯ, ಸೆ.19, ಓಡಾಡುವ ಜಾಗಕ್ಕೆ ಸಂಬಂಧಿಸಿದಂತೆ ನಡೆದ ಗಲಾಟೆಯಲ್ಲಿ ಓರ್ವ ಸಾವನ್ನಪ್ಪಿದ್ದು, ಇಬ್ಬರಿಗೆ ಗಂಭೀರ ಗಾಯವಾಗಿರುವ  ಘಟನೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ನಿಟ್ಟೂರು ಹೊಸದೊಡ್ಡಿ ಗ್ರಾಮದಲ್ಲಿ ನಡೆದಿದೆ. ನಾಗರಾಜು(55) ಮೃತ ದುರ್ದೈವಿ. ನಾಗರಾಜು ಪತ್ನಿ ಗೌರಮ್ಮ(44), ಮಗ ನಾರಾಯಣಸ್ವಾಮಿ(27) ಗಂಭೀರವಾಗಿ ಗಾಯಗೊಂಡವರು. ಚಲುವರಾಜು ಮತ್ತು ನಾಗರಾಜು ಮನೆ ಅಕ್ಕಪಕ್ಕದಲ್ಲಿದ್ದು, ಮನೆಯ ಸಮೀಪ ಓಡಾಡುವ ಜಾಗದ ವಿಚಾರವಾಗಿ ಇಬ್ಬರ ನಡುವೆ ಆಗಾಗ ಗಲಾಟೆಯಾಗುತ್ತಿತ್ತು. ಆದರೆ ಕಳೆದ ರಾತ್ರಿ ನಡೆದ ಗಲಾಟೆ ವಿಕೋಪಕ್ಕೆ ತಿರುಗಿತ್ತು. ಚಲುವರಾಜು ಪಕ್ಕದ ಮನೆಯ

ಜಾಗಕ್ಕೆ ಸಂಬಂಧಿಸಿ ಗಲಾಟೆ ►ಓರ್ವ ಮೃತ್ಯು, ಇಬ್ಬರಿಗೆ ಗಾಯ Read More »

ಕರ್ನಾಟಕ
Scroll to Top