News Kadaba

ಕೊರುಂದೂರು ಅಂಗನವಾಡಿ ಕೇಂದ್ರದಲ್ಲಿ ಮಾತೃಪೂರ್ಣ ಯೋಜನೆ

(ನ್ಯೂಸ್ ಕಡಬ) newskadaba.com ಕಡಬ,ಅ.7. ಕೊರುಂದೂರು ಅಂಗನವಾಡಿ ಕೇಂದ್ರದಲ್ಲಿ ಮಾತೃಪೂರ್ಣ ಯೋಜನೆಗೆ ಚಾಲನೆ ನೀಡಲಾಯಿತು. ಬಾಲವಿಕಾಸ ಅಧ್ಯಕ್ಷೆ ನೀಲಾವತಿ ಶಿವರಾಮ್ ಗರ್ಭಿಣಿಯರಿಗೆ ಹಾಗೂ ಬಾಣಂತಿಯರಿಗೆ ಮಾತೃಪೂರ್ಣ ಯೋಜನೆ ಬಿಸಿಯೂಟ ಬಡಿಸುವ ಮೂಲಕ ಚಾಲನೆ ನೀಡಿದರು. ಅಂಗನವಾಡಿ ಕಾರ್ಯಕರ್ತೆ ಜಯಶ್ರೀ ಸಹಾಯಕಿ ಗೀತಾ ಸೇರಿದಂತೆ ಫಲಾನುಭವಿಗಳು ಉಪಸ್ಥಿತರಿದ್ದರು.

ಕೊರುಂದೂರು ಅಂಗನವಾಡಿ ಕೇಂದ್ರದಲ್ಲಿ ಮಾತೃಪೂರ್ಣ ಯೋಜನೆ Read More »

ಕರಾವಳಿ

ಕಡಬ: ಶ್ರೀಲಂಕಾ ಹಾಗೂ ತಮಿಳು ನಿರಾಶ್ರಿತರಿಗೆ ನಿವೇಶನ ಕಾದಿರಿಸಲು ಮನವಿ ► ಸೂಕ್ತ ಕ್ರಮದ ಭರವಸೆ ನೀಡಿದ ಶಾಸಕ ಎಸ್. ಅಂಗಾರ

(ನ್ಯೂಸ್ ಕಡಬ) newskadaba.com ಕಡಬ,ಅ.7. ಐತ್ತೂರು ಗ್ರಾ.ಪಂ. ವ್ಯಾಪ್ತಿಯ ತಮಿಳು ನಿರಾಶ್ರಿತರಿಗೆ ಕಾದಿರಿಸದ ಜಾಗವನ್ನು ಫಲಾನುಭವಿಗಳಿಗೆ ನೀಡುವಂತೆ ಹಾಗೂ ಉಳಿದ ನಿರಾಶ್ರಿತರಿಗೆ ನಿವೇಶನ ಕಾದಿರಿಸುವಂತೆ ಮತ್ತು ಬಿಪಿಎಲ್ ಪಡಿತರ ಚೀಟಿ ಹಾಗೂ ಜಾತಿ ಪ್ರಮಾಣ ಪತ್ರ ನೀಡಲು ಸೂಕ್ತ ಕ್ರಮ ಕೈಗೊಳ್ಳುವಂತೆ ಕಡಬ ತಮಿಳು ಹೋರಾಟ ಸಮಿತಿ ವತಿಯಿಂದ ಶುಕ್ರವಾರ ಸುಳ್ಯ ಶಾಸಕರಿಗೆ ಹಾಗೂ ತಹಶೀಲ್ದಾರಿಗೆ ಮನವಿ ಸಲ್ಲಿಸಲಾಯಿತು. ಮನವಿ ಸಲ್ಲಿಸಿ ಮಾತನಾಡಿದ ಐತ್ತೂರು ಗ್ರಾ.ಪಂ. ಅಧ್ಯಕ್ಷ ಸತೀಶ್.ಕೆ., ಐತ್ತೂರು ಗ್ರಾಮದ ಕೋಕಳ ಎಂಬಲ್ಲಿ ಶ್ರೀಲಂಕಾ ನಿರಾಶ್ರೀತರಿಗೆ 3.69ಎಕ್ರೆ ಜಾಗವನ್ನು ಎಲ್ಎನ್ಡಿ/ಸಿಆರ್/130/1998-99ರಲ್ಲಿ ಕಾದಿರಿಸಲಾಗಿದೆ.

ಕಡಬ: ಶ್ರೀಲಂಕಾ ಹಾಗೂ ತಮಿಳು ನಿರಾಶ್ರಿತರಿಗೆ ನಿವೇಶನ ಕಾದಿರಿಸಲು ಮನವಿ ► ಸೂಕ್ತ ಕ್ರಮದ ಭರವಸೆ ನೀಡಿದ ಶಾಸಕ ಎಸ್. ಅಂಗಾರ Read More »

ಕರಾವಳಿ

ಗೆಲುವು ಅಭಿವೃದ್ದಿ ಯೇ ಪಕ್ಷದ ಗುರಿ ► ಡಿ.ಎಸ್.ವೀರಯ್ಯ

(ನ್ಯೂಸ್ ಕಡಬ) newskadaba.com ಕಡಬ,ಅ.6. ಮುಂಬರುವ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಅಧಿಕಾರವೇರಲಿದೆ. ಮುಂದಿನ ಆರು ತಿಂಗಳಲ್ಲಿ ಪಕ್ಷದ ಕಾರ್ಯಕರ್ತರು ನಿರಂತರವಾಗಿ ಮತದಾರರ ಮನೆ ಬಾಗಲಿಗೆ ಬರುತ್ತಾರೆ. ಗೆಲುವು ಅಭಿವೃದ್ದಿ ಯೇ ಪಕ್ಷದ ಗುರಿ ಎಂದು ರಾಜ್ಯ ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯಾಧ್ಯಕ್ಷ ಹಾಗೂ ವಿಧಾನಪರಿಷತ್ ಸದಸ್ಯ ಡಿ.ಎಸ್.ವೀರಯ್ಯ ಹೇಳಿದರು. ಆಲಂಕಾರು ಪ್ರಾಥಮಿಕ ಸಹಕಾರಿ ಸಂಘದ ಸಭಂಗಣದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ಸಿಗರ ಆಡಳಿತವನ್ನು ಜನ ತಿರಸ್ಕರಿಸುತ್ತಾರೆ ಎನ್ನುವ ಛಲ ನಂಬಿಕೆ ನಮಗಿದೆ. ರಾಜ್ಯ ಭ್ರಷ್ಟಚಾರ,

ಗೆಲುವು ಅಭಿವೃದ್ದಿ ಯೇ ಪಕ್ಷದ ಗುರಿ ► ಡಿ.ಎಸ್.ವೀರಯ್ಯ Read More »

ಕರಾವಳಿ

ಸಚಿವ ಯು.ಟಿ ಖಾದರ್ ಕಾರಿಗೆ ಕಲ್ಲು ಎಸೆದು ಮುತ್ತಿಗೆ ಹಾಕಿದ ಬಿಜೆಪಿ ಕಾರ್ಯಕರ್ತರು

(ನ್ಯೂಸ್ ಕಡಬ) newskadaba.com ಮಂಗಳೂರು, ಅ.7. ಉಳ್ಳಾಲ ಮುಕ್ಕಚ್ಚೇರಿ ಸಮೀಪ ದುಷ್ಕರ್ಮಿಗಳಿಂದ ಹತ್ಯೆಯಾದ ಬಿಜೆಪಿ ಕಾರ್ಯಕರ್ತ ಝುಬೈರ್ ಅವರ ಮನೆಗೆ ಭೇಟಿ ನೀಡಲು ಬಂದ ಆಹಾರ ಸಚಿವ ಯು.ಟಿ ಖಾದರ್ ಅವರನ್ನು ಬಿಜೆಪಿ ಕಾರ್ಯಕರ್ತರು ಮುತ್ತಿಗೆ ಹಾಕಿರುವ ಘಟನೆ ನಡೆದಿದೆ. ಖಾದರ್ ರವರ ಸ್ವಕ್ಷೇತ್ರ ಉಳ್ಳಾಲದ ಮುಕ್ಕಚ್ಚೇರಿಯಲ್ಲಿರುವ ಝುಬೈರ್ ಮನೆಗೆ ಬೇಟಿ ನೀಡಲು ಹೋಗುತ್ತಿದ್ದ ವೇಳೆಯಲ್ಲಿ, ಖಾದರ್ ಕಾರ್‍ಗೆ ಬಿಜೆಪಿ ಕಾರ್ಯಕರ್ತರು ಕಲ್ಲು ಎಸೆದು ಮುತ್ತಿಗೆ ಹಾಕಿದ್ದಾರೆ. ನಂತರ ಖಾದರ್ ಬೇರೆ ಕಾರಿನಲ್ಲಿ ಹೋಗಿದ್ದಾರೆ. ಖಾದರ್ ಮಾತನಾಡಿ, ಎಸಿಪಿ

ಸಚಿವ ಯು.ಟಿ ಖಾದರ್ ಕಾರಿಗೆ ಕಲ್ಲು ಎಸೆದು ಮುತ್ತಿಗೆ ಹಾಕಿದ ಬಿಜೆಪಿ ಕಾರ್ಯಕರ್ತರು Read More »

ಕರಾವಳಿ

ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣ ► ಕಡಬದ ಓರ್ವನ ಸಹಿತ ಐವರು ಶಂಕಿತರು

(ನ್ಯೂಸ್ ಕಡಬ) newskadaba.com ಬೆಂಗಳೂರು, ಅ.07. ವಿಚಾರವಾದಿ ಹಾಗೂ ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯಲ್ಲಿ ಬಲಪಂಥೀಯ ಸಂಘಟನೆ ಸನಾತನ ಸಂಸ್ಥೆಯ ಜೊತೆ ನಂಟು ಹೊಂದಿರುವ ಹಾಗೂ ಈಗ ತಲೆಮರೆಸಿಕೊಂಡಿರುವ ಐದು ಮಂದಿ ಪ್ರಮುಖ ಶಂಕಿತರಾಗಿ ಮೂಡಿಬಂದಿದ್ದಾರೆ ಎಂದು ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ. ಶಂಕಿತರನ್ನು ಮಂಗಳೂರು ಮೂಲದ ಕಡಬದ ಜಯಪ್ರಕಾಶ್, ಕೊಲ್ಹಾಪುರದ ಪ್ರವೀಣ್ ಲಿಮ್ಕರ್, ಪುಣೆಯ ಸಾರಂಗ್ ಅಕೋಲ್ಕರ್, ಸಾಂಗ್ಲಿಯ ರುದ್ರ ಪಾಟೀಲ್ ಹಾಗು ಸತಾರದ ವಿನಯ್ ಪವಾರ್ ಎಂದು ಹೇಳಲಾಗಿದೆ. ಈ ಪೈಕಿ

ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣ ► ಕಡಬದ ಓರ್ವನ ಸಹಿತ ಐವರು ಶಂಕಿತರು Read More »

ಕರ್ನಾಟಕ

ಪುತ್ತೂರು: ಮಾಹಿತಿ ಹಕ್ಕಿನಲ್ಲಿ ಮಾಹಿತಿ ನೀಡಲು ನಿರಾಕರಣೆ ► ಕಾರ್ಮಿಕ ಇಲಾಖಾ ಅಧಿಕಾರಿ ವಿರುದ್ಧ ದೂರು

(ನ್ಯೂಸ್ ಕಡಬ) newskadaba.com ಪುತ್ತೂರು, ಅ.07. ಪುತ್ತೂರು ತಾಲೂಕಿನ ಕಾರ್ಮಿಕ ಇಲಾಖಾ ಹಿರಿಯ ಅಧಿಕಾರಿಯಲ್ಲಿ ಇಲಾಖಾ ಮಾಹಿತಿ ಕೋರಿ ಮಾಹಿತಿ ಹಕ್ಕಿನಡಿ ಅರ್ಜಿ ಹಾಕಿದ್ದ ಮಾಹಿತಿ ಹಕ್ಕು ಕಾರ್ಯಕರ್ತರೋರ್ವರಿಗೆ ಅಧಿಕಾರಿಯು ಮಾಹಿತಿ ನಿರಾಕರಿಸಿದ್ದಾರೆ. ಈ ಬಗ್ಗೆ ಕಾರ್ಯಕರ್ತ ಮೇಲಾಧಿಕಾರಿಗೆ ಅಫೀಲು ಮಾಡಿದ ಹಿನ್ನೆಲೆಯಲ್ಲಿ ಅದೇ ಅಧಿಕಾರಿ ಮತ್ತೆ ಮಾಹಿತಿ ನೀಡಿದ ಘಟನೆ ನಡೆದಿದೆ. ಪುತ್ತೂರು ತಾಲೂಕಿನ ಕಬಕ ಸಂಜೀವ ಎಂಬುವವರು ಕಾರ್ಮಿಕ ಇಲಾಖೆಯಲ್ಲಿನ ಕೆಲವು ಮಾಹಿತಿಯನ್ನು ಕೋರಿ ಅಗೋಸ್ತು.26 ರಂದು ಮಾಹಿತಿ ಅರ್ಜಿ ಹಾಕಿದ್ದರು. ಆದರೆ ಅವರಿಗೆ ಕೋರಿದ

ಪುತ್ತೂರು: ಮಾಹಿತಿ ಹಕ್ಕಿನಲ್ಲಿ ಮಾಹಿತಿ ನೀಡಲು ನಿರಾಕರಣೆ ► ಕಾರ್ಮಿಕ ಇಲಾಖಾ ಅಧಿಕಾರಿ ವಿರುದ್ಧ ದೂರು Read More »

ಕರಾವಳಿ

ನೂಜಿಬಾಳ್ತಿಲ: ಎನ್ಎಸ್ಎಸ್ ಶಿಬಿರದ ಸಮಾರೋಪ ಸಮಾರಂಭ

(ನ್ಯೂಸ್ ಕಡಬ) newskadaba.com ಕಡಬ,ಅ.6. ನೂಜಿಬಾಳ್ತಿಲ ಬೆಥನಿ ಸಂ.ಪ.ಪೂ.ಕಾಲೇಜಿನಲ್ಲಿ ಸೆ.25ರಿಂದ ಅ.5ರ ತನಕ ನಡೆದ ಕಡಬ ಸ.ಪ.ಪೂ.ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭವು ಗುರುವಾರ ನಡೆಯಿತು. ಸಮಾರೋಪ ಸಮಾರಂಭವನ್ನು ಬೆಥನಿ ಸಂ.ಪ.ಪೂ.ಕಾಲೇಜಿನ ನಿರ್ದೇಶಕ ರೆ|ಫಾ|ಫರ್ಡಿನಾಂಡ್ರವರು ಉದ್ಘಾಟಿಸಿ, ವಿದ್ಯಾರ್ಥಿ ಜೀವನದಲ್ಲಿ ಗುರುಹಿರಿಯರಿಗೆ ಗೌರವ, ಸೇವಾ ಮನೋಭಾವದಿಂದ ಸಮಾಜಮುಖಿಯಾಗಿ ಕೆಲಸ ಮಾಡಿದಲ್ಲಿ ಮುಂದಿನ ಜೀವನ ಯಶಸ್ಸು ಲಭಿಸಲಿದೆ. ಇಂತಹ ಸೇವಾ ಶಿಬಿರಗಳ ಮೂಲಕ ಹತ್ತಾರು ಮನೆಗಳ ವಿದ್ಯಾರ್ಥಿಗಳು ಒಂದಾಗಿ, ಒಗ್ಗಟ್ಟಿನಿಂದ ಕೆಲಸ ನಿರ್ವಹಿಸಿ, ಸಹನೆ, ಶಾಂತಿ,

ನೂಜಿಬಾಳ್ತಿಲ: ಎನ್ಎಸ್ಎಸ್ ಶಿಬಿರದ ಸಮಾರೋಪ ಸಮಾರಂಭ Read More »

ಕರಾವಳಿ

ಪಡಿತರ ವಿತರಣಾ ಕೇಂದ್ರ ಬದಲಾವಣೆಗೆ ಕುರಿತು ► ಆಹಾರ ಇಲಾಖೆ ಉಪನಿರ್ದೇಶಕರಿಗೆ ಮನವಿ

(ನ್ಯೂಸ್ ಕಡಬ) newskadaba.com ಕಡಬ,ಅ.6, ಇಲ್ಲಿನ ಜಿ.ಪಂ.ಕ್ಷೇತ್ರಕ್ಕೆ ಬರುವ ಶಿರಾಡಿ, ಕೊಣಾಜೆ ಹಾಗೂ ಸಿರಿಬಾಗಿಲು ಗ್ರಾಮದ ಪಡಿತರ ಚೀಟಿದಾರರು ಪಡಿತರ ಸಾಮಾಗ್ರಿ ಪಡೆದುಕೊಳ್ಳಲು ತೊಂದರೆ ಅನುಭವಿಸುತ್ತಿದ್ದು ಇವರಿಗೆ ಅನುಕೂಲವಾಗುವಂತೆ ಪಡಿತರ ವಿತರಣಾ ಕೇಂದ್ರವನ್ನು ಬದಲಾವಣೆ ಮಾಡುವಂತೆ ಕಡಬ ಕ್ಷೇತ್ರದ ಜಿ.ಪಂ.ಸದಸ್ಯ ಪಿ.ಪಿ.ವರ್ಗೀಸ್ರವರು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಉಪನಿರ್ದೇಶಕರಿಗೆ ಮನವಿ ಮಾಡಿದ್ದಾರೆ. ಶಿರಾಡಿ ಗ್ರಾಮದ ಕಳಪ್ಪಾರು ವಾರ್ಡ್ನ ಸುಮಾರು 350 ಪಡಿತರ ಚೀಟಿದಾರರು ಪಡಿತರ ಸಾಮಾಗ್ರಿ ಪಡೆದುಕೊಳ್ಳಲು 6ರಿಂದ 8 ಕಿ.ಮೀ.ದೂರದ ಶಿರಾಡಿ ಕೇಂದ್ರಕ್ಕೆ ಬರಬೇಕಾಗಿದ್ದು ಇವರಿಗೆ

ಪಡಿತರ ವಿತರಣಾ ಕೇಂದ್ರ ಬದಲಾವಣೆಗೆ ಕುರಿತು ► ಆಹಾರ ಇಲಾಖೆ ಉಪನಿರ್ದೇಶಕರಿಗೆ ಮನವಿ Read More »

ಕರಾವಳಿ

ನೆಲ್ಯಾಡಿ: ಶೈನ್ ವಾಯುಮಾಲಿನ್ಯ ತಪಾಸಣಾ ಕೇಂದ್ರ ಶುಭಾರಂಭ

(ನ್ಯೂಸ್ ಕಡಬ) newskadaba.com ನೆಲ್ಯಾಡಿ,ಅ.6. ರಾಷ್ಟ್ರೀಯ ಹೆದ್ದಾರಿ 75ರ ನೆಲ್ಯಾಡಿಯ ಫೆಡರಲ್ ಬ್ಯಾಂಕ್ ಬಳಿಯಿರುವ ಭಾರತ್ ಪೆಟ್ರೋಲ್ ಪಂಪ್ನ ಬಳಿ ಶೈನ್ ವಾಯುಮಾಲಿನ್ಯ ತಪಾಸಣಾ ಕೇಂದ್ರ ಇತ್ತೀಚೆಗೆ ಶುಭಾರಂಭಗೊಂಡಿತು. ಕೊಕ್ಕಡ ಸಂತಜಾನ್ ಬ್ಯಾಪ್ಟಿಸ್ಟ್‌ ಚರ್ಚ್ನ ಧರ್ಮಗುರು ರೆ.ಫಾ.ಪೆಡ್ರಿಕ್ ಮೊಂತೆರೋರವರು ದೀಪ ಬೆಳಗಿಸಿ ಉದ್ಘಾಟಿಸಿದರು. ಭಾರತ್ ಪೆಟ್ರೋಲ್ ಬಂಕ್ ಮಾಲಕ ಕುಶಾಲಪ್ಪ ಗೌಡ ಪೂವಾಜೆ ರಿಬ್ಬನ್ ಕಟ್ ಮಾಡಿದರು. ನೆಲ್ಯಾಡಿ ಗ್ರಾ.ಪಂ.ಅಧ್ಯಕ್ಷ ಜಯಾನಂದ ಬಂಟ್ರಿಯಾಲ್, ಸದಸ್ಯೆ ಪ್ಲೋರಿನಾ ಡಿ.ಸೋಜ, ವಾಳ್ಯದ ಗುರಿಕಾರ ಚಾಲ್ರ್ಸ್‌ ಡಿ.ಸೋಜ, ಸಿಸ್ಟರ್ ಎಲಿಜಬೆತ್ ಮತ್ತಿತರರು ಭೇಟಿ

ನೆಲ್ಯಾಡಿ: ಶೈನ್ ವಾಯುಮಾಲಿನ್ಯ ತಪಾಸಣಾ ಕೇಂದ್ರ ಶುಭಾರಂಭ Read More »

ಕರಾವಳಿ

ಮರ್ದಾಳ ಮೀನು ಮಾರುಕಟ್ಟೆಯಲ್ಲಿ ಮಾತಿನ ಚಕಮಕಿ ► ಮೀನು ರಸ್ತೆಗೆ ಎಸೆದು ಆಕ್ರೋಶ

(ನ್ಯೂಸ್ ಕಡಬ) newskadaba.com ಕಡಬ,ಅ.6. ಹಣಕಾಸಿನ ವಿಚಾರಕ್ಕೆ ಸಂಬಂಧಿಸಿ ಮೀನು ಮಾರಾಟಗಾರರ ನಡುವೆ ಮಾತಿನ ಚಕಮಕಿ ನಡೆದು, ಮೀನನ್ನು ರಸ್ತೆಗೆ ಎಸೆದು ಆಕ್ರೋಶ ವ್ಯಕ್ತಪಡಿಸಿದ ಘಟನೆ ಮರ್ದಾಳ ಮೀನುಮಾರುಕಟ್ಟೆಯಲ್ಲಿ ಗುರುವಾರ ಮಧ್ಯಾಹ್ನ ನಡೆದಿದೆ. ಮರ್ದಾಳ ಗ್ರಾ.ಪಂ.ಗೆ ಒಳಪಟ್ಟ ಮರ್ದಾಳ ಪೇಟೆಯಲ್ಲಿರುವ ಮೀನು ಮಾರುಕಟ್ಟೆಯ ಎರಡು ಸ್ಟಾಲ್ ಗಳ ಪೈಕಿ ಒಂದನ್ನು 1ವರ್ಷದ ಅವಧಿಗೆ ಕರ್ಮಾಯಿ ತುಂಬ್ಯ ನಿವಾಸಿ ಅಬ್ದುಲ್ ಖಾದರ್ರವರು ರೂ.30,500ಕ್ಕೆ ಹಾಗೂ ಇನ್ನೊಂದು ಸ್ಟಾಲ್ ನ್ನು ಕಡಬ ಹಳೆಸ್ಟೇಷನ್ ನಿವಾಸಿ ರಮ್ಲಾರವರು 31,500ಕ್ಕೆ ಏಲಂನಲ್ಲಿ ಪಡೆದುಕೊಂಡಿದ್ದರು. ಬಳಿಕ

ಮರ್ದಾಳ ಮೀನು ಮಾರುಕಟ್ಟೆಯಲ್ಲಿ ಮಾತಿನ ಚಕಮಕಿ ► ಮೀನು ರಸ್ತೆಗೆ ಎಸೆದು ಆಕ್ರೋಶ Read More »

ಕರಾವಳಿ
Scroll to Top