News Kadaba

ಅಪಘಾತ ತಡೆಯಲು ರಾಜ್ಯ ಸರ್ಕಾರದ ಚಿಂತನೆ ► 100 ಸಿಸಿ ವಾಹನಗಳಲ್ಲಿ ಹಿಂಬದಿಯಲ್ಲಿ ಸವಾರಿ ಮಾಡುವಂತಿಲ್ಲ..!!!

(ನ್ಯೂಸ್ ಕಡಬ) newskadaba.com ಬೆಂಗಳೂರು, ಅ.21. 100 ಸಿಸಿ ವಾಹನಗಳಿಗೆ ಅನ್ವಯವಾಗುವಂತೆ ಹಿಂಬದಿ ಸವಾರರನ್ನು ನಿರ್ಬಂಧಿಸಲು ಸರ್ಕಾರ ಚಿಂತನೆ ನಡೆಸಿದೆ. ಬೆಂಗಳೂರಿನಲ್ಲಿ ಗುಂಡಿಗಳಿಗೆ ಬಿದ್ದು ಬಲಿಯಾಗುತ್ತಿರುವವರ ಸಂಖ್ಯೆ ಏರುತ್ತಲೇ ಇದೆ. ಅದರಲ್ಲೂ ದ್ವಿಚಕ್ರ ವಾಹನದಲ್ಲಿ ಸಂಚರಿಸುವಾಗ ಹಿಂಬದಿ ಕುಳಿತಿದ್ದ ಮಕ್ಕಳು ಸಾವನ್ನಪ್ಪಿರೋ ಪ್ರಕರಣಗಳು ಹೆಚ್ಚಾಗಿ ದಾಖಲಾಗಿರುವ ಹಿನ್ನಲೆಯಲ್ಲಿ ಸಾವು ನೋವು ತಪ್ಪಿಸಲು ರಾಜ್ಯ ಸರ್ಕಾರ  ಹೊಸ ಆದೇಶ ತರಲು ನಿರ್ಧರಿಸಿದೆ.  ಈ ಕುರಿತು ಹೈಕೋರ್ಟ್ ಗೆ ಸರ್ಕಾರ ಈಗಾಗಲೇ ಅಫಿಡವಿಟ್ ಸಲ್ಲಿಸಿದ್ದು ಒಂದು ವಾರದೊಳಗೆ ಅಧಿಕೃತ ಆದೇಶ ಹೊರ […]

ಅಪಘಾತ ತಡೆಯಲು ರಾಜ್ಯ ಸರ್ಕಾರದ ಚಿಂತನೆ ► 100 ಸಿಸಿ ವಾಹನಗಳಲ್ಲಿ ಹಿಂಬದಿಯಲ್ಲಿ ಸವಾರಿ ಮಾಡುವಂತಿಲ್ಲ..!!! Read More »

ಕರಾವಳಿ

ಕಾರು – ಲಾರಿ ಮುಖಾಮುಖಿ ಢಿಕ್ಕಿ ► ನಾಲ್ವರು ಮೃತ್ಯು, 8 ಮಂದಿಗೆ ಗಾಯ

(ನ್ಯೂಸ್ ಕಡಬ) newskadaba.com ಬಳ್ಳಾರಿ, ಅ.21. ಕಾರು ಮತ್ತು ಲಾರಿ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಸ್ಥಳದಲ್ಲಿಯೇ ನಾಲ್ವರು ಮೃತಪಟ್ಟ ಘಟನೆ ಜಿಲ್ಲೆಯ ಹೊಸಪೇಟೆ ತಾಲೂಕಿನ ಪಿಕೆ ಹಳ್ಳಿ ಬಳಿ ನಡೆದಿದೆ. ಚಿತ್ರದುರ್ಗದ ಹಿರಿಯೂರಿನವರಾದ ಚಾಲಕ ಶ್ರೀನಿವಾಸ (46), ವೆಂಕಟಮ್ಮ (46), ನಳಿನಿ (30) ಹಾಗೂ ಮತ್ತೊಬ್ಬ ಮಹಿಳೆ ಮೃತ ದುರ್ದೈವಿಗಳು. ಘಟನೆಯಲ್ಲಿ 8 ಜನ ಗಾಯಗೊಂಡಿದ್ದು, ಅವರನ್ನ ಹೊಸಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಿರಿಯೂರು ತಾಲೂಕಿನಿಂದ ಹೊಸಪೇಟೆಯ ಸಂಬಂಧಿಕರೊಬ್ಬರ ಅಂತಿಮ ದರ್ಶನಕ್ಕಾಗಿ ಕಾರಿನಲ್ಲಿ ಒಟ್ಟು 12

ಕಾರು – ಲಾರಿ ಮುಖಾಮುಖಿ ಢಿಕ್ಕಿ ► ನಾಲ್ವರು ಮೃತ್ಯು, 8 ಮಂದಿಗೆ ಗಾಯ Read More »

ಕರ್ನಾಟಕ

► ಅ.29: ಪ್ರಧಾನಿ ನರೇಂದ್ರ ಮೋದಿ ಧರ್ಮಸ್ಥಳಕ್ಕೆ

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಅ.20. ಇದೇ ತಿಂಗಳ 29 ರಂದು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಲಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಬೆಳ‌್ತಂಗಡಿ ತಾಲೂಕಿನ ಉಜಿರೆಯಲ್ಲಿ ಅಕ್ಟೋಬರ್ 29 ರಂದು ನಡೆಯಲಿರುವ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಅವರು ಭಾಗವಹಿಸಲಿದ್ದಾರೆ. ಬೆಂಗಳೂರಿನಿಂದ ಹೆಲಿಕಾಪ್ಟರ್ ಮೂಲಕ ಧರ್ಮಸ್ಥಳಕ್ಕೆ ಬರಲಿರುವ ಪ್ರಧಾನಿ ನರೇಂದ್ರ ಮೋದಿ ಧರ್ಮಸ್ಥಳ ಮಂಜುನಾಥೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಿಸಲಿರುವರು. ಬಳಿಕ ಅವರು ಉಜಿರೆಯಲ್ಲಿ ನಡೆಯಲಿರುವ ಧರ್ಮಸ್ಥಳ

► ಅ.29: ಪ್ರಧಾನಿ ನರೇಂದ್ರ ಮೋದಿ ಧರ್ಮಸ್ಥಳಕ್ಕೆ Read More »

ರಾಷ್ಟ್ರೀಯ ನ್ಯೂಸ್

► ಅಡುಗೆ ಮಾಹಿತಿ ► ರುಚಿಯಾದ ಅಕ್ಕಿ ಪಾಯಸ ಮಾಡುವ ವಿಧಾನ

(ನ್ಯೂಸ್ ಕಡಬ) newskadaba.com ಅಡುಗೆ ಮಾಹಿತಿ, ಅ.20. ದಕ್ಷಿಣ ಭಾರತದಲ್ಲಿ ಅಕ್ಕಿ ಪಾಯಸ ತುಂಬಾ ಫೇಮಸ್. ಹಬ್ಬ ಹಾಗೂ ವಿಶೇಷ ದಿನಗಳಲ್ಲಿ ಅಕ್ಕಿ ಪಾಯಸವನ್ನು ಮಾಡ್ತಾರೆ. ಆದರೆ ಕೆಲವರಿಗೆ ಪಾಯಸ ಮಾಡುವ ವಿಧಾನ ತಿಳಿದಿರುವುದಿಲ್ಲ. ಅಕ್ಕಿ ಪಾಯಸ ಮಾಡುವ ಸುಲಭ ವಿಧಾನ ಇಲ್ಲಿದೆ. ಬೇಕಾಗುವ ಸಾಮಾಗ್ರಿಗಳು: ► ಕೆನೆಭರಿತ ಹಾಲು- 1 ಲೀಟರ್ ► ನೆನೆಸಿದ ಬಾಸುಮತಿ ಅಕ್ಕಿ- 1/4 ಬೌಲ್ ► ಸಕ್ಕರೆ- 7 ಚಮಚ ► ಸಣ್ಣಗೆ ಕಟ್ ಮಾಡಿದ ಬಾದಾಮಿ- 2 ಚಮಚ

► ಅಡುಗೆ ಮಾಹಿತಿ ► ರುಚಿಯಾದ ಅಕ್ಕಿ ಪಾಯಸ ಮಾಡುವ ವಿಧಾನ Read More »

ಅಡುಗೆ, ಲೈಫ್‍ಸ್ಟೈಲ್

ಅ.22: ಮುಖ್ಯಮಂತ್ರಿ ಸಿದ್ದರಾಮಯ್ಯ ಬಂಟ್ವಾಳಕ್ಕೆ ► ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ

(ನ್ಯೂಸ್ ಕಡಬ) newskadaba.com ಮಂಗಳೂರು, ಅ.20. ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ಹಾಗೂ ಶಿಲಾನ್ಯಾಸ ಕಾರ್ಯಕ್ರಮಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅ. 22ರಂದು ಕ್ಷೇತ್ರಕ್ಕೆ ಭೇಟಿ ನೀಡಲಿದ್ದಾರೆ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಮುಖ್ಯಮಂತ್ರಿ 148.29 ಕೋಟಿ ರೂ.ಗಳ ವಿವಿಧ ಯೋಜನೆಗಳ ಲೋಕಾರ್ಪಣೆ ಹಾಗೂ 104.21 ಕೋಟಿ ರೂ.ಗಳ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಎಂದು ಹೇಳಿದರು. ಉದ್ಘಾಟನೆಗೊಳ್ಳಲಿರುವ ಯೋಜನೆಗಳು: ಬಿಸಿರೋಡ್‌ನಲ್ಲಿ

ಅ.22: ಮುಖ್ಯಮಂತ್ರಿ ಸಿದ್ದರಾಮಯ್ಯ ಬಂಟ್ವಾಳಕ್ಕೆ ► ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ Read More »

ಕರಾವಳಿ

ಬೈಕಿಗೆ ಢಿಕ್ಕಿ ಹೊಡೆದು ಬಸ್ ನಿಲ್ದಾಣಕ್ಕೆ ಅಪ್ಪಳಿಸಿದ ಸ್ಕಾರ್ಪಿಯೋ ► ಐವರು ಸ್ಥಳದಲ್ಲೇ ಮೃತ್ಯು

(ನ್ಯೂಸ್ ಕಡಬ) newskadaba.com ಬೆಂಗಳೂರು, ಅ.20. ಬೈಕಿಗೆ ಢಿಕ್ಕಿ ಹೊಡೆದ ಕಾರೊಂದು ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿನ ಬಸ್ ತಂಗುದಾಣಕ್ಕೆ ಅಪ್ಪಳಿಸಿದ ಪರಿಣಾಮ ಐವರು ಸ್ಥಳದಲ್ಲೇ ಮೃತಪಟ್ಟ ಘಟನೆ ಗುರುವಾರ ರಾತ್ರಿ ನಗರದ ಹೊರವಲಯದ ನೆಲಮಂಗಲ ಸಮೀಪದ ಬೈಚಾಪುರ ಗ್ರಾಮದ ಬಳಿ ನಡೆದಿದೆ. ನೆಲಮಂಗಲ – ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುತ್ತಿದ್ದ ಬೈಕಿಗೆ ಅತೀ ವೇಗವಾಗಿ ಹೋಗುತ್ತಿದ್ದ ಸ್ಕಾರ್ಪಿಯೋ ಕಾರು ಢಿಕ್ಕಿ ಹೊಡೆದಿದ್ದು, ಬೈಕ್ ಸವಾರ ದೀಪಾವಳಿ ಹಬ್ಬಕ್ಕೆಂದು ಊರಿಗೆ ಹೊರಟಿದ್ದ ತುಮಕೂರು ಜಿಲ್ಲೆಯ ತುರುವೇಕರೆ ತಾಲೂಕಿನ ಮುತ್ತುಗದಹಳ್ಳಿ

ಬೈಕಿಗೆ ಢಿಕ್ಕಿ ಹೊಡೆದು ಬಸ್ ನಿಲ್ದಾಣಕ್ಕೆ ಅಪ್ಪಳಿಸಿದ ಸ್ಕಾರ್ಪಿಯೋ ► ಐವರು ಸ್ಥಳದಲ್ಲೇ ಮೃತ್ಯು Read More »

ಕರ್ನಾಟಕ

ಮಂಗಳೂರು: ದರೋಡೆಗೆ ಯತ್ನಿಸಿದ 7 ಮಂದಿಯ ಬಂಧನ ► ಆಕಾಶಭವನ ಶರಣ್ ಸಹಚರರು ಸಿಸಿಬಿ ಬಲೆಗೆ

(ನ್ಯೂಸ್ ಕಡಬ) newskadaba.com ಮಂಗಳೂರು, ಅ.20. ನಗರದ ಬಿಜೈಯಲ್ಲಿರುವ ಬಿಗ್‌ಬಝಾರ್ ಶಾಪಿಂಗ್ ಕಾಂಪ್ಲೆಕ್ಸ್ ಎದುರು ದರೋಡೆಗೆ ಯತ್ನಿಸಿದ ಆರೋಪದಲ್ಲಿ ಆಕಾಶಭವನ ಶರಣ್ ಸಹಚರರೆನ್ನಲಾದ 7 ಮಂದಿ ಆರೋಪಿಗಳನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಕಾಪಿಗುಡ್ಡೆ ಆಕಾಶಭವನದ ಪ್ರೀತಂ ಪೂಜಾರಿ(23), ದೇವಿನಗರ ಕುಂಜತ್‌ಬೈಲ್‌ನ ಶಾಲ್ ಕುಮಾರ್ (23), ದೇರೇಬೈಲ್ ಕೊಂಚಾಡಿಯ ಗೌತಮ್ ದೇವಾಡಿಗ (23), ಮೂಡುಶೆಡ್ಡೆಯ ವಿನೋದ್ ರಾಜ್ (21), ಮೂಡುಶೆಡ್ಡೆ ಎದುರು ಪದವಿನ ದಿವಾಕರ (29), ತೊಕ್ಕೊಟ್ಟು ಕೃಷ್ಣನಗರದ ಪ್ರವೀಣ್ (25), ಯೆಯ್ಯೊಡಿ ಗುಂಡಳಿಕೆ

ಮಂಗಳೂರು: ದರೋಡೆಗೆ ಯತ್ನಿಸಿದ 7 ಮಂದಿಯ ಬಂಧನ ► ಆಕಾಶಭವನ ಶರಣ್ ಸಹಚರರು ಸಿಸಿಬಿ ಬಲೆಗೆ Read More »

ಕರಾವಳಿ

ಹಗಲು ಐಎಎಸ್ ಅಧಿಕಾರಿಯ ಕಾರು ಚಾಲಕ, ರಾತ್ರಿ ಸ್ನೇಹಿತರೊಡನೆ ಸರ ಕಳ್ಳತನ ► ಖತರ್ನಾಕ್ ಕಳ್ಳ ಇದೀಗ ಪೊಲೀಸರ ಅತಿಥಿ

(ನ್ಯೂಸ್ ಕಡಬ) newskadaba.com ಬೆಂಗಳೂರು, ಅ.19. ಹಗಲಿನಲ್ಲಿ ನಿವೃತ್ತ ಐಎಎಸ್ ಅಧಿಕಾರಿಯೊಬ್ಬರ ಕಾರು ಚಾಲಕನಾಗಿ ಕೆಲಸ ಮಾಡುತ್ತಾ ರಾತ್ರಿ ಹೊತ್ತು ಚಿನ್ನದ ಸರ ಎಗರಿಸುವ ಖತರ್ನಾಕ್ ಕಳ್ಳನನ್ನು ಮಹಾಲಕ್ಷ್ಮೀ ಲೇಔಟ್ ಪೊಲೀಸರು ಬಂಧಿಸಿದ ಘಟನೆ ಗುರುವಾರದಂದು ನಡೆದಿದೆ. ಖತರ್ನಾಕ್ ಕಳ್ಳನನ್ನು ಬೆಂಗಳೂರಿನ ಕೆಂಗೇರಿ ನಿವಾಸಿ ಪೊರೋಷತ್ತಮ್ ಎಂದು ಗುರುತಿಸಲಾಗಿದೆ. ಬೆಳಗ್ಗೆ ಎದ್ದು ಸೀರಿಯಸ್ ಆಗಿ ಆ ಅಧಿಕಾರಿಯ ಕಾರು ಚಾಲಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಪುರುಷೋತ್ತಮ್ ಡ್ಯೂಟಿ ಮುಗಿಯುತ್ತಿದ್ದಂತೆ ಸ್ನೇಹಿತರಾದ ಪ್ರದೀಪ್, ಪ್ರಜ್ವಲ್ ಜೊತೆ ಸೇರಿ ಕಳ್ಳತನಕ್ಕೆ ಇಳಿಯುತ್ತಿದ್ದ.

ಹಗಲು ಐಎಎಸ್ ಅಧಿಕಾರಿಯ ಕಾರು ಚಾಲಕ, ರಾತ್ರಿ ಸ್ನೇಹಿತರೊಡನೆ ಸರ ಕಳ್ಳತನ ► ಖತರ್ನಾಕ್ ಕಳ್ಳ ಇದೀಗ ಪೊಲೀಸರ ಅತಿಥಿ Read More »

ಕರ್ನಾಟಕ

► ದಕ್ಷಿಣ ಕನ್ನಡದ ನೂತನ ಜಿಲ್ಲಾಧಿಕಾರಿಯಾಗಿ ಶಶಿಕಾಂತ್ ಸೆಂಥಿಲ್ ಅಧಿಕಾರ ಸ್ವೀಕಾರ

(ನ್ಯೂಸ್ ಕಡಬ) newskadaba.com ಮಂಗಳೂರು, ಅ.19. ದಕ್ಷಿಣ ಕನ್ನಡ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ನಿರ್ದೇಶಕರಾಗಿದ್ದ ಶಶಿಕಾಂತ್ ಸೆಂಥಿಲ್ ಗುರುವಾರ ಅಧಿಕಾರ ಸ್ವೀಕರಿಸಿದರು. ಪ್ರಭಾರ ಜಿಲ್ಲಾಧಿಕಾರಿ ಕುಮಾರ್ ಅವರು ನೂತನ ಜಿಲ್ಲಾಧಿಕಾರಿಗಳಿಗೆ ಅಧಿಕಾರ ಹಸ್ತಾಂತರಿಸಿ, ಸ್ವಾಗತಿಸಿದರು. ಈ ಸಂದರ್ಭ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಎಂ.ಆರ್. ರವಿ, ಮಂಗಳೂರು ಸಹಾಯಕ ಆಯುಕ್ತ ರೇಣುಕಾ ಪ್ರಸಾದ್, ಜಿ.ಪಂ. ಉಪ ಕಾರ್ಯದರ್ಶಿ ಎನ್.ಆರ್. ಉಮೇಶ್ ಹಾಗೂ ಜಿಲ್ಲಾ ಮಟ್ಟದ ವಿವಿಧ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.

► ದಕ್ಷಿಣ ಕನ್ನಡದ ನೂತನ ಜಿಲ್ಲಾಧಿಕಾರಿಯಾಗಿ ಶಶಿಕಾಂತ್ ಸೆಂಥಿಲ್ ಅಧಿಕಾರ ಸ್ವೀಕಾರ Read More »

ಕರಾವಳಿ

ಅ.22: ತೆಗೆರ್ ತುಳುಕೂಟದಿಂದ ದೀಪಾವಳಿ ಪ್ರಯುಕ್ತ ► ರೆಂಜಿಲಾಡಿಯಲ್ಲಿ ‘ಬೆನ್ನಿದ ಕಂಡೊಡ್ ನಮ್ಮ ಜವನೆರ್’ ಕಾರ್ಯಕ್ರಮ

(ನ್ಯೂಸ್ ಕಡಬ) newskadaba.com ಕಡಬ, ಅ.19. ನೂಜಿಬಾಳ್ತಿಲ ಗ್ರಾಮದ ನೂಜಿಬೈಲ್ ತೆಗೆರ್ ತುಳುಕೂಟೊ ವತಿಯಿಂದ ದೀಪಾವಳಿ ಪ್ರಯುಕ್ತ ಮಾರಪ್ಪೆ ದಿ| ಜಿನ್ನಪ್ಪ ಗೌಡರ ಸ್ಮರಣಾರ್ಥ ಅ.22 ರಂದು ಶ್ರೀ ನೂಜಿ ಉಳ್ಳಾಲ್ತಿ ಅಮ್ಮನವರ ಕ್ಷೇತ್ರದಲ್ಲಿನ ಕೇಪುಂಜ ಗದ್ದೆಯಲ್ಲಿ ಬೆನ್ನಿದ ಕಂಡೊಡ್ ನಮ್ಮ ಜವನೆರ್ ಕ್ರೀಡಾಕೂಟ ನಡೆಯಲಿದೆ. ಕ್ರೀಡಾಕೂಟವನ್ನು ಪ್ರಗತಿಪರ ಕೃಷಿಕರಾದ ಮೃತ್ಯುಂಜಯ ಭಿಡೆ ಕೆರೆತೋಟ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ನೂಜಿಶ್ರೀ ಉಳ್ಳಾಲ್ತಿ ಕ್ಷೇತ್ರದ ಆಡಳಿತ ಮಂಡಳಿ ಅಧ್ಯಕ್ಷ ರಾಮಚಂದ್ರ ಗೌಡ ಎಲುವಾಳೆ ವಹಿಸಲಿದ್ದು . ಪುತ್ತೂರು ಕೋಟಿಚೆನ್ನಯ ಕಂಬಳ ಸಮಿತಿ

ಅ.22: ತೆಗೆರ್ ತುಳುಕೂಟದಿಂದ ದೀಪಾವಳಿ ಪ್ರಯುಕ್ತ ► ರೆಂಜಿಲಾಡಿಯಲ್ಲಿ ‘ಬೆನ್ನಿದ ಕಂಡೊಡ್ ನಮ್ಮ ಜವನೆರ್’ ಕಾರ್ಯಕ್ರಮ Read More »

ಕರಾವಳಿ
Scroll to Top