News Kadaba

ಬಂಟ್ವಾಳ: ನೀರು ಪಾಲಾದ ಐವರು ವಿದ್ಯಾರ್ಥಿಗಳು ► ನಾಲ್ವರ ಮೃತದೇಹ ಪತ್ತೆ

(ನ್ಯೂಸ್ ಕಡಬ) newskadaba.com ಬಂಟ್ವಾಳ, ನ.7. ಫಲ್ಗುಣಿ ನದಿಯಲ್ಲಿ ಆಟವಾಡಲು ತೆರಳಿ ನೀರುಪಾಲಾಗಿದ್ದ ಐವರು ಬಾಲಕರ ಪೈಕಿ, ನಾಲ್ವರ ಮೃತದೇಹ ಮಂಗಳವಾರ ಪತ್ತೆಯಾಗಿದೆ.  ಸೋಮವಾರ ಕನಕ ಜಯಂತಿ ಪ್ರಯುಕ್ತ ಶಾಲೆಗೆ ರಜೆ ಇದ್ದ ಕಾರಣ ಐವರು ಒಟ್ಟು ಸೇರಿ ಸಮೀಪದ ಫಲ್ಗುಣಿ ನದಿಗೆ ಆಟಕ್ಕೆಂದು ತೆರಳಿದ್ದ ಅಸ್ಲಾಮ್, ರಮೀಜ್, ಅಜ್ಮಲ್, ಮುಭಾಶಿರ್, ಸಮಾದ್ ಎಂಬವರು ನೀರು ಪಾಲಾದ ಬಾಲಕರು. ಇವರ ಪೈಕಿ ಅಸ್ಲಾಮ್, ರಮೀಜ್, ಅಜ್ಮಲ್, ಸಮಾದ್ ಮೃತದೇಹ ಪತ್ತೆಯಾಗಿದ್ದು, ಮುಭಾಶಿರ್ ನ ಶವದ ಶೋಧ ಮುಂದುವರೆದಿದೆ. ಘಟನಾ ಸ್ಥಳಕ್ಕೆ ಅಗ್ನಿಶಾಮಕ […]

ಬಂಟ್ವಾಳ: ನೀರು ಪಾಲಾದ ಐವರು ವಿದ್ಯಾರ್ಥಿಗಳು ► ನಾಲ್ವರ ಮೃತದೇಹ ಪತ್ತೆ Read More »

ಕರಾವಳಿ

ತಲಪಾಡಿ: ಸೊಸೈಟಿಯೊಳಗಡೆ ಅನುಮಾನಾಸ್ಪದವಾಗಿ ಮೂವರು ಮೃತ್ಯು ► ಸಿಡಿಲು ಬಡಿದಿರಬಹುದೆಂಬ ಶಂಕೆ

(ನ್ಯೂಸ್ ಕಡಬ) newskadaba.com ತಲಪಾಡಿ, ನ.07. ಇಲ್ಲಿನ ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಸಂಘದ ಶಾಖೆಯಲ್ಲಿ ಮೂವರು ಅನುಮಾನಾಸ್ಪದವಾಗಿ ಮೃತಪಟ್ಟ ಘಟನೆ ಮಂಗಳವಾರದಂದು ಬೆಳಕಿಗೆ ಬಂದಿದೆ. ಮೃತರನ್ನು ಉಮೇಶ್, ಸಂತೋಷ್ ಮತ್ತು ಸೋಮನಾಥ್ ಎಂದು ಗುರುತಿಸಲಾಗಿದೆ. ಮೃತರಲ್ಲಿ ಇಬ್ಬರು ಕೋಟೆಕಾರು ಶಾಖೆಯ ಕಾವಲು ಸಿಬ್ಬಂದಿಗಳೆನ್ನಲಾಗಿದೆ. ಇವರು ಹೇಗೆ ಶಾಖೆಯ ಒಳಭಾಗದಲ್ಲಿ ಮೃತಪಟ್ಟಿದ್ದಾರೆ ಎನ್ನುವ ಬಗ್ಗೆ ಸಂಶಯ ಮೂಡಿದೆ. ಜೂನ್‌ 23 ರಂದು ಈ‌ ಶಾಖೆಯಲ್ಲಿ ಚಿನ್ನಾಭರಣ ದರೋಡೆಗೆ ವಿಫಲ ಯತ್ನ ನಡೆದಿತ್ತು. ಆ ನಿಟ್ಟಿನಲ್ಲಿ ಯಾರಾದರೂ ಕೊಲೆ‌ ಮಾಡಿರಬಹುದಾ

ತಲಪಾಡಿ: ಸೊಸೈಟಿಯೊಳಗಡೆ ಅನುಮಾನಾಸ್ಪದವಾಗಿ ಮೂವರು ಮೃತ್ಯು ► ಸಿಡಿಲು ಬಡಿದಿರಬಹುದೆಂಬ ಶಂಕೆ Read More »

ಕರಾವಳಿ

ಹುಟ್ಟೂರಿಗೆ ಆಗಮಿಸಿದ ಹಿರಿಯ ಸಾಹಿತಿ ಕೆ.ಗೋಪಾಲ ರಾವ್ ರ ಪಾರ್ಥಿವ ಶರೀರ ► ಅನೇಕ ಗಣ್ಯರಿಂದ ಅಂತಿಮ ದರ್ಶನ

(ನ್ಯೂಸ್ ಕಡಬ) newskadaba.com ಕಡಬ, ನ.07. ಹೃದಯ ಸಂಬಂಧಿ ಖಾಯಿಲೆಯಿಂದಾಗಿ ಸೋಮವಾರದಂದು ಮೃತಪಟ್ಟ ನಿವೃತ್ತ ಮುಖ್ಯ ಶಿಕ್ಷಕ, ಕಡಬದ ಹಿರಿಯ ಸಾಹಿತಿ ಕೆ.ಗೋಪಾಲ್ ರಾವ್(78)ರವರ ಪಾರ್ಥಿವ ಶರೀರವನ್ನು ಇಂದು ಮುಂಜಾನೆ ಹುಟ್ಟೂರು ಕಡಬ ಶ್ರೀಕಂಠಸ್ವಾಮಿ, ಮಹಾಗಣಪತಿ ದೇವಸ್ಥಾನದ ಬಳಿ ವಾಸವಾಗಿದ್ದ ಅವರ ಮನೆಗೆ ಇಂದು ಬೆಳಿಗ್ಗೆ 8.30ರ ಸುಮಾರಿಗೆ ತರಲಾಯಿತು. ಕಳೆದ ಕೆಲವು ಸಮಯಗಳಿಂದ ಹೃದಯ ಸಂಬಂಧಿ ಖಾಯಿಲೆಯಿಂದ ಬಳಲುತ್ತಿದ್ದ ಇವರನ್ನು ಇತ್ತೀಚೆಗೆ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇವರು ಮಕ್ಕಳ ಸಾಹಿತಿಯಾಗಿ, ನಾಟಕಕಾರರಾಗಿ, ಧಾರ್ಮಿಕ ಕ್ಷೇತ್ರದಲ್ಲಿ ಗಣನೀಯ

ಹುಟ್ಟೂರಿಗೆ ಆಗಮಿಸಿದ ಹಿರಿಯ ಸಾಹಿತಿ ಕೆ.ಗೋಪಾಲ ರಾವ್ ರ ಪಾರ್ಥಿವ ಶರೀರ ► ಅನೇಕ ಗಣ್ಯರಿಂದ ಅಂತಿಮ ದರ್ಶನ Read More »

ಕರಾವಳಿ

ಆರೆಸ್ಸೆಸ್ ರಾಮಕುಂಜ ಮಂಡಲ ವತಿಯಿಂದ ಪಥ ಸಂಚಲನ

(ನ್ಯೂಸ್ ಕಡಬ) newskadaba.com ಕಡಬ, ನ.7. ರಾಷ್ಟ್ರೀಯ ಸ್ವಯಂ ಸೇವಕ ಸಂಘ ರಾಮಕುಂಜ ಮಂಡಲ ವತಿಯಿಂದ ಪಥ ಸಂಚಲನ ಕಾರ್ಯಕ್ರಮ ಭಾನುವಾರ ಸಾಯಂಕಾಲ ನಡೆಯಿತು. ಉಪ್ಪಿನಂಗಡಿ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಗೋಕುಲನಗರದಿಂದ ಆರಂಭಗೊಂಡ ಪಥಸಂಚಲನ ಗೋಳಿತ್ತಡಿ ಮೂಲಕ ಸಾಗಿ ಶಾರದನಗರದಲ್ಲಿ ಸಮಾಪನಗೊಂಡಿತ್ತು. ಬಳಿಕ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ಕಾರ್ಯವಾಹ ಶ್ರೀನಿವಾಸ್ ಉಬರಡ್ಕ ಬೌದ್ದಿಕ್ ನೀಡಿದರು. ಪುಷ್ಪರಾಜ್ ಹಳೆನೇರಿಂಕಿ ಸಂಘದ ಪ್ರಾಥನೆ ಹಾಡಿದರು. ಮುಖ್ಯಶಿಕ್ಷಕ ಚರಣ್ ಉಪಸ್ಥಿತರಿದ್ದರು.

ಆರೆಸ್ಸೆಸ್ ರಾಮಕುಂಜ ಮಂಡಲ ವತಿಯಿಂದ ಪಥ ಸಂಚಲನ Read More »

ಕರಾವಳಿ

ಕಡಬ ಜನಸಂಪರ್ಕ ಸಭೆ ► 94ಸಿ ಜಾಗದ ಹಕ್ಕುಪತ್ರದಲ್ಲಿ ತಾರತಮ್ಯ ಆರೋಪ

(ನ್ಯೂಸ್ ಕಡಬ) newskadaba.com ಕಡಬ, ನ.7. ಇಲ್ಲಿನ ತಾಲೂಕು ಮಟ್ಟದ ಮಾಸಿಕ ಜನಸಂಪರ್ಕ ಸಭೆಯು ಜಿ.ಪಂ.ಸದಸ್ಯರಾದ ಪಿ.ಪಿ ವರ್ಗೀಸ್ ರವರ ಅಧ್ಯಕ್ಷತೆಯಲ್ಲಿ ಕಡಬ ಅಂಬೇಡ್ಕರ್ ಭವನದಲ್ಲಿ ನಡೆಯಿತು. ಕುಟ್ರುಪ್ಪಾಡಿ ಮತ್ತು ನೂಜಿಬಾಳ್ತಿಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಪೇರಡ್ಕ- ಕಡಬ ಜಿಲ್ಲಾ ಪಂಚಾಯಿತಿ ರಸ್ತೆಯ ಪೇರಡ್ಕದಿಂದ ಕಾರ್ಕಳ ವರೆಗಿನ ಸುಮಾರು  2 ಕಿ.ಮೀ ರಸ್ತೆಯು ಸಂಚಾರಕ್ಕೆ ಯೋಗ್ಯವಾಗಿಲ್ಲ. ಸುಮಾರು  25 ವರ್ಷಗಳಿಂದ ಡಾಮರೀಕರಣ ಆಗದೆ ಸಾರ್ವಜನಿಕರು ನರಕಯಾತನೆ ಅನುಭವಿಸುತ್ತಿದ್ದಾರೆ. ಈ ಬಗ್ಗೆ ಹಲವಾರು ವರ್ಷಗಳಿಂದ ರಸ್ತೆಗೆ ಹೊಸತಾಗಿ ಡಾಮರೀಕರಣಗೊಳಿಸುವಂತೆ ಬೇಡಿಕೆ ಇಟ್ಟಿದ್ದರೂ

ಕಡಬ ಜನಸಂಪರ್ಕ ಸಭೆ ► 94ಸಿ ಜಾಗದ ಹಕ್ಕುಪತ್ರದಲ್ಲಿ ತಾರತಮ್ಯ ಆರೋಪ Read More »

ಕರಾವಳಿ

ಫಲ್ಗುಣಿ ನದಿಗಿಳಿದ ಐವರು ವಿದ್ಯಾರ್ಥಿಗಳು ನೀರುಪಾಲು ಶಂಕೆ ► ಓರ್ವನ ಮೃತದೇಹ ಪತ್ತೆ

(ನ್ಯೂಸ್ ಕಡಬ) newskadaba.com ಬಂಟ್ವಾಳ, ನ.07. ಸೋಮವಾರ ಶಾಲೆಗೆ ರಜೆ ಇದ್ದ ಕಾರಣ ಆಟ ಆಡಲೆಂದು ನದಿಗಿಳಿದಿದ್ದ ಐವರು ಮಕ್ಕಳು ನಾಪತ್ತೆಯಾಗಿದ್ದು ಓರ್ವ ಬಾಲಕನ ಮೃತದೇಹ ಪತ್ತೆಯಾದ ಘಟನೆ ಬಂಟ್ವಾಳ ತಾಲೂಕಿನ ಅರಳ ಗ್ರಾಮದ ಮುಲಾರಪಟ್ನದಲ್ಲಿ ಎಂಬಲ್ಲಿ ಸೋಮವಾರದಂದು ನಡೆದಿದೆ. ನಾಪತ್ತೆಯಾದವರನ್ನು ಮುಲಾರಪಟ್ನ ಶುಂಟಿಹಿತ್ಲು ನಿವಾಸಿಗಳಾದ ಆಶ್ರಪ್ ಎಂಬವರ ಪುತ್ರ ಪಿಯುಸಿ ವಿದ್ಯಾರ್ಥಿ ಅಸ್ಲಮ್ (೧೭), ಶರೀಫ್ ಎಂಬವರ ಪುತ್ರ ರಮೀಝ್(೧೭), ಹಂಝ ಎಂಬವರ ಪುತ್ರ ಅಜಮಾತ್(೧೮), ಶರೀಫ್ ಎಂಬವರ ಪುತ್ರ ಮುಬಶ್ಶಿರ್ (೧೭), ಮಹಮ್ಮದ್ ಎಂಬವರ

ಫಲ್ಗುಣಿ ನದಿಗಿಳಿದ ಐವರು ವಿದ್ಯಾರ್ಥಿಗಳು ನೀರುಪಾಲು ಶಂಕೆ ► ಓರ್ವನ ಮೃತದೇಹ ಪತ್ತೆ Read More »

ಕರಾವಳಿ

ಪುತ್ತೂರು: ಸಿಡಿಲಿನ ಆರ್ಭಟಕ್ಕೆ ಓರ್ವ ಮೃತ್ಯು

(ನ್ಯೂಸ್ ಕಡಬ) newskadaba.com ಪುತ್ತೂರು, ನ.07. ಸಿಡಿಲು ಬಡಿದು ಕೂಲಿ ಕಾರ್ಮಿಕರೋರ್ವರು ಮೃತಪಟ್ಟ ಘಟನೆ ತಾಲೂಕಿನ ಆರ್ಯಾಪು ಎಂಬಲ್ಲಿ ಸೋಮವಾರ ರಾತ್ರಿ ನಡೆದಿದೆ. ಮೃತ ಕೂಲಿ ಕಾರ್ಮಿಕನನ್ನು ಆರ್ಯಾಪು ನಿವಾಸಿ ಸುಂದರ (54) ಎಂದು ಗುರುತಿಸಲಾಗಿದೆ. ಸುಂದರ ಅವರು ಸಿಡಿಲು ಬರುತ್ತಿದ್ದ ವೇಳೆ ತನ್ನ ಮನೆಯಲ್ಲಿದ್ದರು ಎನ್ನಲಾಗಿದ್ದು, ಈ ವೇಳೆ ಸಿಡಿಲಿನ ಆಘಾತಕ್ಕೆ ಒಳಗಾಗಿ ಮೃತಪಟ್ಟರು ಎಂದು ತಿಳಿದುಬಂದಿದೆ. ಇವರು ವೃತ್ತಿಯಲ್ಲಿ ಮೇಸ್ತ್ರಿಯಾಗಿದ್ದು, ಹವ್ಯಾಸಿ ನಾಟಕಗಾರನಾಗಿ ಹಲವು ತುಳು ನಾಟಕಗಳಲ್ಲಿ ಪಾತ್ರ ನಿರ್ವಹಿಸಿದ್ದರು. ಮೃತರು ಪತ್ನಿ, ಓರ್ವ

ಪುತ್ತೂರು: ಸಿಡಿಲಿನ ಆರ್ಭಟಕ್ಕೆ ಓರ್ವ ಮೃತ್ಯು Read More »

ಕರಾವಳಿ

ಕಂಬಳ ತಡೆಯಾಜ್ಞೆ ಅರ್ಜಿಯನ್ನು ತಿರಸ್ಕರಿಸಿದ ಸುಪ್ರೀಂ ಕೋರ್ಟ್

(ನ್ಯೂಸ್ ಕಡಬ) newskadaba.com ಹೊಸದಿಲ್ಲಿ, ನ.06. ಕರಾವಳಿಯ ಜನಪದ ಕ್ರೀಡೆ ಕಂಬಳಕ್ಕೆ ತಡೆಯಾಜ್ಞೆ ಕೋರಿ ಸಲ್ಲಿಸಲಾದ ಅರ್ಜಿಯನ್ನು ಇಂದು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ. ಕಂಬಳ ಕ್ರೀಡೆಗೆ ತಡೆಯಾಜ್ಞೆ ನೀಡುವಂತೆ ಪೆಟಾ(ಪಿಇಟಿಎ) ಸಂಘಟನೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ತ್ರಿಸದಸ್ಯ ಪೀಠ ಕಂಬಳಕ್ಕೆ ತಡೆಯಾಜ್ಞೆ ನೀಡುವ ಮನವಿಯನ್ನು ತಿರಸ್ಕರಿಸಿದೆ. ಮುಂದಿನ ವಿಚಾರಣೆಯನ್ನು ನ.13ಕ್ಕೆ ನಿಗದಿಪಡಿಸಿದೆ. ಈ ಸಂಬಂಧ ಕೇಂದ್ರ ಸರಕಾರ, ಕರ್ನಾಟಕ ಸರಕಾರಕ್ಕೆ ನೋಟಿಸು ನೀಡಿದ್ದು, ಮುಂದಿನ

ಕಂಬಳ ತಡೆಯಾಜ್ಞೆ ಅರ್ಜಿಯನ್ನು ತಿರಸ್ಕರಿಸಿದ ಸುಪ್ರೀಂ ಕೋರ್ಟ್ Read More »

ರಾಷ್ಟ್ರೀಯ ನ್ಯೂಸ್

ನವೆಂಬರ್ 13 ರಿಂದ ಆನೆಕಾಲು ರೋಗ ನಿಯಂತ್ರಣ ಕಾರ್ಯಕ್ರಮ

(ನ್ಯೂಸ್ ಕಡಬ) newskadaba.com ಮ0ಗಳೂರು, ನ.6. (ಕರ್ನಾಟಕ ವಾರ್ತೆ) ರಾಷ್ಟ್ರೀಯ ಆನೆಕಾಲು ರೋಗ ನಿಯಂತ್ರಣ ಕಾರ್ಯಕ್ರಮದಡಿಯಲ್ಲಿ ಆಯ್ದ ಪ್ರಾಥಮಿಕ ಶಾಲೆಯ ಒಂದು ಮತ್ತು ಎರಡನೇ ತರಗತಿಯ ಮಕ್ಕಳ ರಕ್ತ ಪರೀಕ್ಷೆ ನಡೆಸುವ ಕಾರ್ಯಕ್ರಮವು ನವೆಂಬರ್ 13 ರಿಂದ 17 ರವರೆಗೆ ಜಿಲ್ಲೆಯಲ್ಲಿ ನಡೆಯಲಿದೆ.  ಈ ಬಗ್ಗೆ ಪೂರ್ವಸಿದ್ಧತಾ ಸಭೆಯು ಶನಿವಾರ  ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಅವರ ಆಧ್ಯಕ್ಷತೆಯಲ್ಲಿ ನಡೆಯಿತು. ಈ ಸಂದರ್ಭದಲ್ಲಿ  ಮಾತಾನಾಡಿದ ಅವರು ಎಲ್ಲಾ ವಿವರಗಳನ್ನು ಪರಿಶಿಲಿಸಿ ನಿಗದಿ ಪಡಿಸಿದ ದಿನಾಂಕಗಳಂದು ವಿದ್ಯಾರ್ಥಿಗಳು ಹಾಜರಿರುವಂತೆ ಕ್ರಮಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು.

ನವೆಂಬರ್ 13 ರಿಂದ ಆನೆಕಾಲು ರೋಗ ನಿಯಂತ್ರಣ ಕಾರ್ಯಕ್ರಮ Read More »

ಕರಾವಳಿ

ಯೋಧನ ನೆರವಿಗೆ ಮಧ್ಯರಾತ್ರಿ ಧಾವಿಸಿದ ಸಚಿವ ಯು.ಟಿ. ಖಾದರ್…!!!

(ನ್ಯೂಸ್ ಕಡಬ) newskadaba.com ಮ0ಗಳೂರು, ನ.6. (ಕರ್ನಾಟಕ ವಾರ್ತೆ) ಹಾವು ಕಡಿತಕ್ಕೊಳಗಾಗಿ ಚಿಂತಾಜನಕ ಸ್ಥಿತಿಯಲ್ಲಿದ್ದ ಭಾರತೀಯ ಸೇನಾ ಯೋಧನ ನೆರವಿಗೆ ಮಧ್ಯರಾತ್ರಿ ಧಾವಿಸಿ, ತುರ್ತು ಚಿಕಿತ್ಸೆ ಒದಗಿಸುವಲ್ಲಿ ಆಹಾರ ಮತ್ತು ನಾಗರೀಕ ಸರಬರಾಜು ಸಚಿವ ಯು.ಟಿ. ಖಾದರ್ ಯಶಸ್ವಿಯಾಗಿದ್ದಾರೆ. ಭಾನುವಾರ ಮಧ್ಯರಾತ್ರಿ 1.15 ಗಂಟೆಗೆ ಮುಡಿಪು ಕೋಡಕಲ್ಲು ಎಂಬಲ್ಲಿನ ನಿವಾಸಿ ಸಂತೋಷ್ ಕುಮಾರ್ ಎಂಬವರಿಗೆ ಹಾವು ಕಡಿದಿದ್ದು, ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಿಸಿದ್ದು, ಆತನಿಗೆ 10 ಇಂಜಕ್ಷನ್‍ಗಳ ಅಗತ್ಯವಿದೆ ಎಂದು ವೈಧ್ಯರು ತಿಳಿಸಿದ್ದರು. ಈ ಸಂದರ್ಭದಲ್ಲಿ ಸಂತೋಷ್

ಯೋಧನ ನೆರವಿಗೆ ಮಧ್ಯರಾತ್ರಿ ಧಾವಿಸಿದ ಸಚಿವ ಯು.ಟಿ. ಖಾದರ್…!!! Read More »

ಕರಾವಳಿ
Scroll to Top