News Kadaba

ಐನೂರು ವರ್ಷಗಳು ಕಳೆದರೂ ಮಂಗಳೂರು ಮುಳುಗುವುದಿಲ್ಲ ► ಭಾರತದ ವಿಜ್ಞಾನಿಗಳಿಂದ ಸ್ಪಷ್ಟನೆ

(ನ್ಯೂಸ್ ಕಡಬ) newskadaba.com ಮಂಗಳೂರು, ‌ನ.20. ಐನೂರು ವರ್ಷಗಳು ಕಳೆದರೂ ಮಂಗಳೂರು ಮುಳುಗುವುದಿಲ್ಲ. ಮಂಗಳೂರು ಸುರಕ್ಷಿತವಾಗಿದ್ದು, ಮಂಗಳೂರಿಗೆ ನೈಸರ್ಗಿಕವಾಗಿ ಯಾವುದೇ ಅಪಾಯವಿರುವುದಿಲ್ಲ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ವಿಜ್ಞಾನಿ ಡಾ. ಸಿ.ಎನ್. ಪ್ರಭು ಹಾಗೂ ಭಾರತೀಯ ಹವಾಮಾನ ಇಲಾಖೆಯ ಮಾಜಿ ನಿರ್ದೇಶಕ, ವಿಜ್ಞಾನಿ ಬಿ.ಪುಟ್ಟಣ್ಣ ಸ್ಪಷ್ಟಪಡಿಸಿದ್ದಾರೆ. ಮಂಗಳೂರಿನಲ್ಲಿ ಕಳೆದೆರಡು ದಿನಗಳಿಂದ ಮೋಡ ಕವಿದ ವಾತಾವರಣದೊಂದಿಗೆ ಗುಡುಗು ಸಹಿತ ಮಳೆಯಾದುದರಿಂದ ಮಂಗಳೂರು ಮುಳುಗಡೆಯಾಗುತ್ತದೆ‌ ಎಂಬ ವದಂತಿ ಉಂಟಾದ ಹಿನ್ನೆಲೆಯಲ್ಲಿ ರಾಜ್ಯದ ಪ್ರಮುಖ ದಿನಪತ್ರಿಕೆ ವಿಜಯ ಕರ್ನಾಟಕ […]

ಐನೂರು ವರ್ಷಗಳು ಕಳೆದರೂ ಮಂಗಳೂರು ಮುಳುಗುವುದಿಲ್ಲ ► ಭಾರತದ ವಿಜ್ಞಾನಿಗಳಿಂದ ಸ್ಪಷ್ಟನೆ Read More »

ರಾಷ್ಟ್ರೀಯ ನ್ಯೂಸ್

ಹುಡುಗಿಯೊಂದಿಗೆ ಆಂಬ್ಯಲೆನ್ಸ್ ನಲ್ಲಿ ಸೈರನ್ ಹಾಕಿ ಹೋದವನಿಗೆ ಬಿತ್ತು ಗೂಸಾ

(ನ್ಯೂಸ್ ಕಡಬ) newskadaba.com ತುಮಕೂರು, ನ.20. ಆ್ಯಂಬುಲೆನ್ಸ್ ನಲ್ಲಿ ರೋಗಿಗಳಿಲ್ಲದಿದ್ದರೂ ಹುಡುಗಿಯೋರ್ವಳನ್ನು ಕರೆದುಕೊಂಡು ಚಾಲಕ ಸೈರನ್ ಹಾಕಿ ವೇಗವಾಗಿ ಚಲಾಯಿಸಿ ಕಾರಿಗೆ ಢಿಕ್ಕಿ ಹೊಡೆದು ಸಾರ್ವಜನಿಕರಿಂದ ಥಳಿಸಿಕೊಂಡ ಘಟನೆ ರವಿವಾರದಂದು ನಗರದ ಅಂತರಸನಹಳ್ಳಿ ಸೇತುವೆ ಬಳಿ ನಡೆದಿದೆ. ಬೆಳಧರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸೇರಿದ ಆ್ಯಂಬುಲೆನ್ಸ್ ನ ಚಾಲಕ ತನ್ನ ಪಕ್ಕದ ಸೀಟಿನಲ್ಲಿ ಯುವತಿಯೊಬ್ಬಳನ್ನು ಕುಳ್ಳಿರಿಸಿಕೊಂಡು ಸೈರನ್ ಹಾಕಿಕೊಂಡು ವೇಗವಾಗಿ ಬೆಳಧರ ಕಡೆಯಿಂದ ತುಮಕೂರಿಗೆ ತೆರಳುತ್ತಿರುವಾಗ ನಿಯಂತ್ರಣ ತಪ್ಪಿ ಕಾರಿಗೆ ಢಿಕ್ಕಿ ಹೊಡೆದಿದೆ. ಆ್ಯಂಬುಲೆನ್ಸ್‌ ಚಾಲಕನ ಬೇಜವಾಬ್ದಾರಿ

ಹುಡುಗಿಯೊಂದಿಗೆ ಆಂಬ್ಯಲೆನ್ಸ್ ನಲ್ಲಿ ಸೈರನ್ ಹಾಕಿ ಹೋದವನಿಗೆ ಬಿತ್ತು ಗೂಸಾ Read More »

ಕರ್ನಾಟಕ

ಕಾಣಿಯೂರು: ಬೋರ್ ಪೈಪ್ ಮೈಮೇಲೆ ಬಿದ್ದು ಕಾರ್ಮಿಕ ಮೃತ್ಯು

(ನ್ಯೂಸ್ ಕಡಬ) newskadaba.com ಬೆಳ್ಳಾರೆ, ನ.19. ಬೋರ್‍ವೆಲ್ ಲಾರಿಯಿಂದ ಕಬ್ಬಿಣದ ಪೈಪೊಂದು ಮೈಮೇಲೆ ಬಿದ್ದ ಪರಿಣಾಮ ಕಾರ್ಮಿಕ ಮೃತಪಟ್ಟ ಘಟನೆ ಭಾನುವಾರ ಸಂಜೆ ಕಾಣಿಯೂರು ಗ್ರಾಮದ ನಾವೂರು ಎಂಬಲ್ಲಿ ನಡೆದಿದೆ. ಮೃತನನ್ನು ಬೋರ್‍ವೆಲ್ ಯಂತ್ರದ ಕಾರ್ಮಿಕ ಛತ್ತಿಸ್‍ಗಡ ನಿವಾಸಿ ಸತೀಶ್(19) ಎಂದು ಗುರುತಿಸಲಾಗಿದೆ. ಭಾನುವಾರದಂದು ಸಂಜೆ ನಾವೂರು ಬಳಿ ಬೋರ್‍ವೆಲ್ ಕೊರೆಸುತ್ತಿದ್ದ ವೇಳೆ ಲಾರಿಯಿಂದ ಡ್ರಿಲ್ಲಿಂಗ್ ಪೈಪ್ ಮೈಮೇಲೆ ಬಿದ್ದ ಪರಿಣಾ‌ಮ ಸತೀಶ್ ಗಂಭೀರ ಗಾಯಗೊಂಡಿದ್ದು, ಆಂಬ್ಯುಲೆನ್ಸ್ ಮೂಲಕ‌ ಪುತ್ತೂರು ಆಸ್ಪತ್ರೆಗೆ ದಾಖಲಿಸುವ ಹಾದಿ ಮಧ್ಯೆ ಮೃತಪಟ್ಟನೆನ್ನಲಾಗಿದೆ.

ಕಾಣಿಯೂರು: ಬೋರ್ ಪೈಪ್ ಮೈಮೇಲೆ ಬಿದ್ದು ಕಾರ್ಮಿಕ ಮೃತ್ಯು Read More »

ಕರಾವಳಿ

ಇಚಿಲಂಪಾಡಿ: ಅಪಘಾತಕ್ಕೆ ಕಾರಣವಾಗುತ್ತಿದ್ದ ವಿದ್ಯುತ್ ಕಂಬ, ಮರ ತೆರವು ► ಇಚಿಲಂಪಾಡಿಯ ‘ನೀತಿ’ ತಂಡದಿಂದ ಸಮಾಜಮುಖಿ ಸೇವೆ

(ನ್ಯೂಸ್ ಕಡಬ) newskadaba.com ನೆಲ್ಯಾಡಿ, ನ.19. ಪದೇ ಪದೇ ಅಪಘಾತ ಸಂಭವಿಸಿ ಪ್ರಾಣ ಹಾನಿಗೆ ಕಾರಣವಾಗಿದ್ದ ಸುಬ್ರಹ್ಮಣ್ಯ – ಧರ್ಮಸ್ಥಳ ರಾಜ್ಯ ಹೆದ್ದಾರಿಯ ಇಚಿಲಂಪಾಡಿಯ ಅಲಂಗ ಎಂಬಲ್ಲಿನ ಅಪಾಯಕಾರಿ ಮರ ಮತ್ತು ವಿದ್ಯುತ್ ಕಂಬವನ್ನು ನೀತಿ ತಂಡದ ವತಿಯಿಂದ ಅರಣ್ಯ ಇಲಾಖೆ ಮತ್ತು ಮೆಸ್ಕಾಂ ಇಲಾಖೆಯ ಸಹಕಾರದೊಂದಿಗೆ ಭಾನುವಾರದಂದು ತೆರವುಗೊಳಿಸಲಾಯಿತು. ಈ ಸಂದರ್ಭದಲ್ಲಿ ಸುಳ್ಯ ಅರಣ್ಯ ಸಂರಕ್ಷಣಾಧಿಕಾರಿ ಜಗನ್ನಾಥ್, ಪಂಜ ವಲಯ ಅರಣ್ಯಾಧಿಕಾರಿ ಪ್ರವೀಣ್ ಶೆಟ್ಟಿ, ಸಂತೋಷ್, ನೆಲ್ಯಾಡಿ ಮೆಸ್ಕಾಂ ಜೆ.ಇ.ಇ ರಮೇಶ್‌, ಇಚ್ಲಂಪ್ಪಾಡಿ ಲ್ಯೆನ್ ಮ್ಯಾನ್

ಇಚಿಲಂಪಾಡಿ: ಅಪಘಾತಕ್ಕೆ ಕಾರಣವಾಗುತ್ತಿದ್ದ ವಿದ್ಯುತ್ ಕಂಬ, ಮರ ತೆರವು ► ಇಚಿಲಂಪಾಡಿಯ ‘ನೀತಿ’ ತಂಡದಿಂದ ಸಮಾಜಮುಖಿ ಸೇವೆ Read More »

ಕರಾವಳಿ

ಕಡಬ: ಟಾಟಾ ನ್ಯಾನೋ – ಬೈಕ್ ಢಿಕ್ಕಿ

(ನ್ಯೂಸ್ ಕಡಬ) newskadaba.com ಕಡಬ, ನ.19. ಟಾಟಾ ನ್ಯಾನೋ ಕಾರು ಹಾಗೂ ಬೈಕ್ ಮಧ್ಯೆ ಢಿಕ್ಕಿ ಸಂಭವಿಸಿ ಸವಾರ ಗಾಯಗೊಂಡ ಘಟನೆ ಕಡಬ ಸಮೀಪದಲ್ಲಿ ನಡೆದಿದೆ. ಕುಟ್ರುಪ್ಪಾಡಿ ಗ್ರಾಮದ ವಿಮಲಗಿರಿ ಎಂಬಲ್ಲಿ ಕಾರು ಹಾಗೂ ಬೈಕ್‌ ಮಧ್ಯೆ ಢಿಕ್ಕಿ ಸಂಭವಿಸಿ ಬೈಕ್ ಸವಾರ ಗಾಯಗೊಂಡಿದ್ದಾರೆ‌. ಢಿಕ್ಕಿಯ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ‌. ಸ್ಥಳಕ್ಕೆ ಕಡಬ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕಡಬ: ಟಾಟಾ ನ್ಯಾನೋ – ಬೈಕ್ ಢಿಕ್ಕಿ Read More »

ಕರಾವಳಿ

ಐಡಿಯಲ್ ಐಸ್‍ಕ್ರೀಂಗೆ ‘ಗ್ರೇಟ್ ಇಂಡಿಯನ್ ಐಸ್‍ಕ್ರೀಂ’ ಪ್ರಶಸ್ತಿ ► ದೇಶದಲ್ಲೇ ಹೆಸರನ್ನು ಪಡೆದ ಮಂಗಳೂರಿನ ಐಡಿಯಲ್ ಐಸ್‍ಕ್ರೀಂ

(ನ್ಯೂಸ್ ಕಡಬ) newskadaba.com ಮಂಗಳೂರು, ನ.19. ನಗರ ಐಡಿಯಲ್ ಐಸ್ ಕ್ರೀಂ ತನ್ನ ವಿಶಿಷ್ಟವಾದ ರುಚಿಯಿಂದಲೇ ದೇಶದಾದ್ಯಂತ ಹೆಸರುವಾಸಿಯಾಗಿದ್ದು, ಇದೀಗ `ಗ್ರೇಟ್ ಇಂಡಿಯನ್ ಐಸ್ ಕ್ರೀಂ’ ಎಂಬ ಹೆಗ್ಗಳಿಕೆಯೊಂದಿಗೆ 8 ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ‌. ಕಳೆದ ಗುರುವಾರದಂದು ಹರಿಯಾಣದ ಗುರುಗ್ರಾಮದಲ್ಲಿ ನಡೆದ ಗ್ರೇಟ್ ಇಂಡಿಯನ್ ಐಸ್‍ಕ್ರೀಂ ಹಾಗೂ ಫ್ರೋಜನ್ ಡೆಸಾರ್ಟ್ ಸೀಸನ್ 6ರ ಸ್ಪರ್ಧೆಯಲ್ಲಿ ಮಂಗಳೂರು ಐಡಿಯಲ್ ಐಸ್ ಕ್ರೀಂ 8 ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ಸುಮಾರು 103 ಐಸ್ ಕ್ರೀಂ ತಯಾರಿಕಾ ಸಂಸ್ಥೆಗಳು ಭಾಗವಹಿಸಿದ್ದ ಈ ಸ್ಪರ್ಧೆಯಲ್ಲಿ ಐಡಿಯಲ್ ಐಸ್

ಐಡಿಯಲ್ ಐಸ್‍ಕ್ರೀಂಗೆ ‘ಗ್ರೇಟ್ ಇಂಡಿಯನ್ ಐಸ್‍ಕ್ರೀಂ’ ಪ್ರಶಸ್ತಿ ► ದೇಶದಲ್ಲೇ ಹೆಸರನ್ನು ಪಡೆದ ಮಂಗಳೂರಿನ ಐಡಿಯಲ್ ಐಸ್‍ಕ್ರೀಂ Read More »

ಕರಾವಳಿ

ಡಿಸೆಂಬರ್‌ನಲ್ಲಿ ಕಡಬದಲ್ಲಿ ನಡೆಯಲಿದೆ ಪುತ್ತೂರು ತಾಲೂಕು ಸಾಹಿತ್ಯ ಸಮ್ಮೇಳನ ► ಸಮ್ಮೇಳದ ಆಮಂತ್ರಣ ಪತ್ರಿಕೆ ಬಿಡುಗಡೆ

(ನ್ಯೂಸ್ ಕಡಬ) newskadaba.com ಮಂಗಳೂರು, ನ.19. ದ.ಕ. ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಪುತ್ತೂರು ತಾಲೂಕು ಘಟಕದ ಆಶ್ರಯದಲ್ಲಿ ಡಿಸೆಂಬರ್ 16 ರಂದು ಕಡಬ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ನಡೆಯಲಿರುವ ಪುತ್ತೂರು ತಾಲೂಕು 17 ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭವು ಕಡಬ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನದ ವಠಾರದಲ್ಲಿ ಶನಿವಾರ ನಡೆಯಿತು. ಶ್ರೀ ದುರ್ಗಾಂಬಿಕಾ ಅಮ್ಮನವರಿಗೆ ಪೂಜೆ ಸಲ್ಲಿಸಿದ ಬಳಿಕ ಹಿರಿಯ ಸಾಹಿತಿ ಬಿ.ವಿ.ಅರ್ತಿಕಜೆ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಮಾತಮಾಡಿ, ಹಿಂದೊಮ್ಮೆ ಕಡಬದಲ್ಲಿ

ಡಿಸೆಂಬರ್‌ನಲ್ಲಿ ಕಡಬದಲ್ಲಿ ನಡೆಯಲಿದೆ ಪುತ್ತೂರು ತಾಲೂಕು ಸಾಹಿತ್ಯ ಸಮ್ಮೇಳನ ► ಸಮ್ಮೇಳದ ಆಮಂತ್ರಣ ಪತ್ರಿಕೆ ಬಿಡುಗಡೆ Read More »

ಕರಾವಳಿ

ಕಲ್ಲುಗುಡ್ಡೆ: ಬಿರುವೆರ್ ಕುಡ್ಲ ಪುತ್ತೂರು ಘಟಕದ ಸದಸ್ಯತ್ವ ಅಭಿಯಾನ

(ನ್ಯೂಸ್ ಕಡಬ) newskadaba.com ಕಡಬ, ನ.17. ಬಿರುವೆರ್ ಕುಡ್ಲ ಪುತ್ತೂರು ಘಟಕದ ಸದಸ್ಯತ್ವ ಅಭಿಯಾನವು ಇತ್ತೀಚಿಗೆ ಕಡಬ ಕಲ್ಲುಗುಡ್ಡೆಯಲ್ಲಿ ನಡೆಯಿತು. ಪುತ್ತೂರು ಘಟಕದ ಪ್ರಧಾನ ಕಾರ್ಯದರ್ಶಿ ತೇಜಸ್ ಬಿರ್ವ ಕೇಪುಳು ಮಾತನಾಡಿ ಬಿರುವೆರ್ ಕುಡ್ಲದ ವತಿಯಿಂದ ಸಮಾಜದ ಎಲ್ಲಾ ವರ್ಗದ ಬಡಮಕ್ಕಳಿಗೆ ಉನ್ನತ ಶಿಕ್ಷಣ ನೀಡುವಲ್ಲಿ ನೆರವಾಗುವುದು ಸೇರಿದಂತೆ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವುದರೊಂದಿಗೆ ತುಳುನಾಡಿನ ಸಂಸ್ಕೃತಿ ಆಚಾರ-ವಿಚಾರಗಳನ್ನು ಉಳಿಸಿ ಬೆಳೆಸಬೇಕೆಂದರು. ಕಡಬ ಪರಿಸರದಲ್ಲಿ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಚೇತನ್

ಕಲ್ಲುಗುಡ್ಡೆ: ಬಿರುವೆರ್ ಕುಡ್ಲ ಪುತ್ತೂರು ಘಟಕದ ಸದಸ್ಯತ್ವ ಅಭಿಯಾನ Read More »

ಕರಾವಳಿ

ಮಂಗಳೂರು: ಎಂಬಿಎ ವಿದ್ಯಾರ್ಥಿಯ ಮೇಲೆ ದಾಳಿ ನಡೆಸಿದ ರಾಟ್ ವೀಲರ್ ನಾಯಿ ► ನಾಯಿಯ ಮಾಲಕರ ವಿರುದ್ಧ ಪೊಲೀಸ್ ದೂರು

(ನ್ಯೂಸ್ ಕಡಬ) newskadaba.com ಮಂಗಳೂರು, ನ.18. ಕಾಲೇಜು ವಿದ್ಯಾರ್ಥಿಯೋರ್ವ ನಡೆದುಕೊಂಡು ಹೋಗುತ್ತಿದ್ದಾಗ ಸಾಕು ನಾಯಿಯೊಂದು ದಾಳಿ ನಡೆಸಿ ಹಲ್ಲೆ ನಡೆಸಿದ ಘಟನೆ ಮಂಗಳೂರಿನಲ್ಲಿ ನಡೆದಿದೆ. ನಗರದ ಪತ್ರಾವೋ ಲೇನ್ ನ ಮಹೇಂದ್ರ ಮ್ಯಾನರ್ ಅಪಾರ್ಟ್‌ಮೆಂಟ್ ನಲ್ಲಿ ವಾಸವಾಗಿದ್ದ ಕುಟುಂಬವೊಂದು ಸಾಕುತ್ತಿದ್ದ ರಾಟ್ ವೀಲರ್ ಜಾತಿಗೆ ಸೇರಿದ ನಾಯಿಯು ನಗರದ ಕಾಲೇಜೊಂದರ ಎಂಬಿಎ ವಿದ್ಯಾರ್ಥಿಯ ಮೇಲೆ ದಾಳಿ ನಡೆಸಿ ಹಲ್ಲೆ ನಡೆಸಿತ್ತೆನ್ನಲಾಗಿದೆ. ಈ ವೇಳೆ ವಿದ್ಯಾರ್ಥಿ ಬೊಬ್ಬೆ ಹಾಕಿದ್ದನ್ನು ಕೇಳಿ ನಾಯಿಯ ಮಾಲಕರು‌ ಹಾಗೂ ಸಾರ್ವಜನಿಕರು ಬಂದು ವಿದ್ಯಾರ್ಥಿಯನ್ನು

ಮಂಗಳೂರು: ಎಂಬಿಎ ವಿದ್ಯಾರ್ಥಿಯ ಮೇಲೆ ದಾಳಿ ನಡೆಸಿದ ರಾಟ್ ವೀಲರ್ ನಾಯಿ ► ನಾಯಿಯ ಮಾಲಕರ ವಿರುದ್ಧ ಪೊಲೀಸ್ ದೂರು Read More »

ಕರಾವಳಿ

ಇಚಿಲಂಪಾಡಿ: ಖಾಸಗಿ ಬಸ್ – ಓಮ್ನಿ ಢಿಕ್ಕಿ ► ಓರ್ವ ಮೃತ್ಯು, ನಾಲ್ವರು ಗಂಭೀರ

(ನ್ಯೂಸ್ ಕಡಬ) newskadaba.com ಕಡಬ, ನ.18. ಖಾಸಗಿ ಬಸ್ ಹಾಗೂ ಓಮ್ನಿ ಕಾರು ನಡುವೆ ಢಿಕ್ಕಿ ಸಂಭವಿಸಿ ಓರ್ವ ಮೃತಪಟ್ಟು ನಾಲ್ವರು ಗಂಭೀರ ಗಾಯಗೊಂಡ ಘಟನೆ ಸುಬ್ರಹ್ಮಣ್ಯ – ಧರ್ಮಸ್ಥಳ ರಾಜ್ಯ ಹೆದ್ದಾರಿಯ ಇಚಿಲಂಪಾಡಿ ಎಂಬಲ್ಲಿ ಶನಿವಾರ ಬೆಳಿಗ್ಗೆ ನಡೆದಿದೆ. ಬೆಂಗಳೂರಿನಿಂದ ಧರ್ಮಸ್ಥಳ ಮೂಲಕ ಸುಬ್ರಹ್ಮಣ್ಯ ಕ್ಕೆ ತೆರಳುತ್ತಿದ್ದ ಕುಕ್ಕೇಶ್ರೀ ಹೆಸರಿನ ಖಾಸಗಿ ಬಸ್ ಹಾಗೂ ಧರ್ಮಸ್ಥಳ ಕ್ಕೆ ತೆರಳುತ್ತಿದ್ದ ಉಡುಪಿ ಮೂಲದ ಓಮ್ನಿ ಕಾರು ಢಿಕ್ಕಿಯಾಗಿದ್ದು, ಘಟನೆಯಲ್ಲಿ ಕಾರಿನಲ್ಲಿದ್ದ ಓರ್ವ ಮೃತಪಟ್ಟಿದ್ದು, ನಾಲ್ವರು ಗಂಭೀರ ಗಾಯಗೊಂಡಿದ್ದಾರೆ.

ಇಚಿಲಂಪಾಡಿ: ಖಾಸಗಿ ಬಸ್ – ಓಮ್ನಿ ಢಿಕ್ಕಿ ► ಓರ್ವ ಮೃತ್ಯು, ನಾಲ್ವರು ಗಂಭೀರ Read More »

ಕರಾವಳಿ
Scroll to Top