News Kadaba

ಖಾಸಗಿ ಬಸ್ ಡಿಕ್ಕಿ ► ಪಾದಚಾರಿ ಸ್ಥಳದಲ್ಲೇ ಮೃತ್ಯು

(ನ್ಯೂಸ್ ಕಡಬ) newskadaba.com ಬೆಂಗಳೂರು, ನ.23. ಖಾಸಗಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಪಾದಚಾರಿಯೊಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಬೆಂಗಳೂರು ಹೊರವಲಯದ ನೆಲಮಂಗಲದ ಮಾದನಾಯಕನಹಳ್ಳಿಯಲ್ಲಿ ತಡರಾತ್ರಿ ನಡೆದಿದೆ. ಮೃತ ದುರ್ದೈವಿಯನ್ನು ಪಾಂಡವಪುರ ತಾಲೂಕಿನ ಕ್ಯಾತನಹಳ್ಳಿ ನಿವಾಸಿ ಸುನೀಲ್ ಕುಮಾರ್(40) ಎಂದು ಗುರುತಿಸಲಾಗಿದೆ. ಕೂಲಿ ಕೆಲಸ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದ ಸಂದರ್ಭದಲ್ಲಿ ಈ ಅಪಘಾತ ಸಂಭವಿಸಿದೆ. ಬೆಂಗಳೂರು-ತುಮಕೂರು ರಾಷ್ಟ್ರೀಯ ಹೆದ್ದಾರಿಯ ಸಮೀಪದಲ್ಲಿ ಸುಗಮ ಟ್ರಾವೆಲ್ಸ್ ಗೆ ಸೇರಿದ ಖಾಸಗಿ ಬಸ್‍ವೊಂದು ವೇಗವಾಗಿ ಬಂದಿದ್ದು, ಕತ್ತಲೆ ಇದ್ದ ಕಾರಣ ನಡೆದುಕೊಂಡು ಹೋಗುತ್ತಿದ್ದ […]

ಖಾಸಗಿ ಬಸ್ ಡಿಕ್ಕಿ ► ಪಾದಚಾರಿ ಸ್ಥಳದಲ್ಲೇ ಮೃತ್ಯು Read More »

ಕರ್ನಾಟಕ

ಹಿಂದೂ ಜಾಗರಣಾ ವೇದಿಕೆಯ ಕಡಬ ತಾಲೂಕು ಅಧ್ಯಕ್ಷರಾಗಿ ► ಉದ್ಯಮಿ ಹರೀಶ್ ಉಂಡಿಲ ಆಯ್ಕೆ

(ನ್ಯೂಸ್ ಕಡಬ) newskadaba.com ಕಡಬ, ನ.23. ಹಿಂದೂ ಜಾಗರಣ ವೇದಿಕೆಯ ಕಡಬ ತಾಲೂಕು ಅಧ್ಯಕ್ಷರಾಗಿ ಕಡಬದ ಉದ್ಯಮಿ ಹರೀಶ್ ಉಂಡಿಲ ಮತ್ತು ಕಾರ್ಯದರ್ಶಿಯಾಗಿ ಮಲ್ಲೇಶ್ ಆಲಂಕಾರು ಆಯ್ಕೆಯಾಗಿದ್ದಾರೆ. ಆಲಂಕಾರು ಶ್ರೀ ಭಾರತೀ ಹಿರಿಯ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ಈ ಆಯ್ಕೆ ನಡೆಯಿತು. ಸಂಚಾಲಕರಾಗಿ ವೆಂಕಟ್ರಮಣ ಕುತ್ಯಾಡಿ, ನಿಧಿ ಪ್ರಮುಖರಾಗಿ ಗೋವಿಂದ ರಾಜ್ ಭಟ್ ಮರ್ದಾಳ, ಸಹಸಂಚಾಲಕರಾಗಿ ಪ್ರಮೋದ್ ರೈ ಮರ್ದಾಳ, ಮೋಹನದಾಸ್ ಪುಂಜ ಕುಂತೂರು, ಕಾನೂನು ಸಲಹೆಗಾರರಾಗಿ ನ್ಯಾಯವಾದಿ ಪ್ರಶಾಂತ್ ಪಂಜೋಡಿ ಆಯ್ಕೆಯಾಗಿದ್ದಾರೆ. ಆಯ್ಕೆ ಸಂದರ್ಭದಲ್ಲಿ ಸಂಘಟನೆಯ

ಹಿಂದೂ ಜಾಗರಣಾ ವೇದಿಕೆಯ ಕಡಬ ತಾಲೂಕು ಅಧ್ಯಕ್ಷರಾಗಿ ► ಉದ್ಯಮಿ ಹರೀಶ್ ಉಂಡಿಲ ಆಯ್ಕೆ Read More »

ಕರಾವಳಿ

ಕೇಂದ್ರ ಸಚಿವರಿಗಾಗಿ ಕಾದು ತಡವಾಗಿ ಹೊರಟ ವಿಮಾನ ► ಸಚಿವರನ್ನು ತರಾಟೆಗೆ ತೆಗೆದುಕೊಂಡ ವೈದ್ಯೆ

(ನ್ಯೂಸ್ ಕಡಬ) newskadaba.com ನವದೆಹಲಿ, ನ.22. ಕೇಂದ್ರ ಸಚಿವ ಸಂಪುಟದಲ್ಲಿ ಪ್ರವಾಸೋದ್ಯಮ ಖಾತೆ ಸಚಿವ ಮತ್ತು ಇಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ರಾಜ್ಯ ಖಾತೆ ಸಚಿವರಾಗಿರುವ ಅಲ್ಫೋನ್ಸ್ ಕಣ್ಣಂತಾನಂ ಅವರನ್ನು ವಿಮಾನ ನಿಲ್ದಾಣದಲ್ಲಿ ವೈದ್ಯೆಯೊಬ್ಬರು ತರಾಟೆಗೆ ತೆಗೆದುಕೊಂಡ ಘಟನೆಯ ವೀಡಿಯೋ ಇದೀಗ ವೈರಲ್ ಆಗಿದೆ. ಸಚಿವರು ಬರುತ್ತಾರೆಂಬ ಕಾರಣಕ್ಕಾಗಿ ಇಂಪಾಲ್ ವಿಮಾನ ನಿಲ್ದಾಣದಿಂದ ಹೊರಡಬೇಕಿದ್ದ ವಿಮಾನದ ಹಾರಾಟವನ್ನು ಕೆಲ ಕ್ಷಣಗಳ ಕಾಲ ವಿಳಂಬ ಮಾಡಲಾಗಿತ್ತು. ಸಚಿವರಿಗಾಗಿ ವಿಮಾನ ವಿಳಂಬ ಮಾಡಿದ್ದಕ್ಕಾಗಿ ಸಿಡಿಮಿಡಿಗೊಂಡ ವೈದ್ಯೆಯೋರ್ವರು ವಿಮಾನ ನಿಲ್ದಾಣದಲ್ಲೇ ಕಣ್ಣಂತಾನಂ

ಕೇಂದ್ರ ಸಚಿವರಿಗಾಗಿ ಕಾದು ತಡವಾಗಿ ಹೊರಟ ವಿಮಾನ ► ಸಚಿವರನ್ನು ತರಾಟೆಗೆ ತೆಗೆದುಕೊಂಡ ವೈದ್ಯೆ Read More »

ರಾಷ್ಟ್ರೀಯ ನ್ಯೂಸ್

ಉಡುಪಿ: ಬೈಕಿನಲ್ಲಿ ಸಾಗಿಸುತ್ತಿದ್ದ ನಾಡ ಬಾಂಬ್ ಪತ್ತೆ ► ಮೂವರು ಆರೋಪಿಗಳ ಸೆರೆ

(ನ್ಯೂಸ್ ಕಡಬ) newskadaba.com ಉಡುಪಿ, ನ.22. ನಾಡ ಬಾಂಬ್ ತಯಾರಿಸಿ ಮಾರಾಟ ಮಾಡುವುದಲ್ಲದೆ ಕಾಡುಪ್ರಾಣಿಗಳನ್ನು ಕೊಲ್ಲುತ್ತಿದ್ದ ಪ್ರಕರಣವನ್ನು ಪತ್ತೆ ಹಚ್ಚಿರುವ ಕಾರ್ಕಳ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿ ಮೂವರನ್ನು ಬಂಧಿಸಿ, 33 ನಾಡಾ ಬಾಂಬ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಬಂಧಿತ ಆರೋಪಿಗಳನ್ನು ಶಂಕರನಾರಾಯಣ ಆಲ್ಬಾಡಿ ಗ್ರಾಮದ ಆರ್ಡಿ ಕೊಳಲಾಡಿಯ ಗುಣಕರ ಶೆಟ್ಟಿ (56), ಲಕ್ಷ್ಮಣ ಶೆಟ್ಟಿ ಯಾನೆ ಲಚ್ಚು ಶೆಟ್ಟಿ (67), ಹೆಬ್ರಿ ಕನ್ಯಾನ ಅರ್ಕುಂಜೆಯ ನಾಗೇಶ್ ನಾಯಕ್ (35) ಎಂದು ಗುರುತಿಸಲಾಗಿದೆ. ಈ ಸಂಬಂಧ ಉಡುಪಿ ಎಸ್ಪಿ ಕಚೇರಿಯಲ್ಲಿ ಬುಧವಾರ

ಉಡುಪಿ: ಬೈಕಿನಲ್ಲಿ ಸಾಗಿಸುತ್ತಿದ್ದ ನಾಡ ಬಾಂಬ್ ಪತ್ತೆ ► ಮೂವರು ಆರೋಪಿಗಳ ಸೆರೆ Read More »

ಕರಾವಳಿ

ಕುಮಾರಧಾರ ನದಿಗೆ ಸ್ನಾನಕ್ಕಿಳಿದ ವಿದ್ಯಾರ್ಥಿ ನೀರುಪಾಲು

(ನ್ಯೂಸ್ ಕಡಬ) newskadaba.com ಪುತ್ತೂರು, ನ.22. ಕುಮಾರಧಾರ ನದಿಯಲ್ಲಿ ಸ್ನಾನಕ್ಕೆಂದು ಇಳಿದ ವಿದ್ಯಾರ್ಥಿಯೋರ್ವ ನೀರುಪಾಲಾದ ಘಟನೆ ಬುಧವಾರ ಸಂಜೆ ಪುತ್ತೂರಿನ ಅಂಬ್ರಿಗೇರಿ ಎಂಬಲ್ಲಿ ನಡೆದಿದೆ. ನೀರುಪಾಲಾದ ವಿದ್ಯಾರ್ಥಿಯನ್ನು ನಗರದ ವಿವೇಕಾನಂದ ಕಾಲೇಜಿನ ಇಂಜಿನಿಯರಿಂಗ್ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿ ಹೇಮಂತ್ ಎಂದು ಗುರುತಿಸಲಾಗಿದೆ. ಹೇಮಂತ್ ತನ್ನ ಐವರು ಸಹಪಾಠಿಗಳೊಂದಿಗೆ ಪುತ್ತೂರಿನ ಬೆಳ್ಳಿಪ್ಪಾಡಿ ಗ್ರಾಮದ ಕಟಾರ ಎಂಬಲ್ಲಿನ ಅಂಬ್ರಿಗೇರಿಯಲ್ಲಿ ಹರಿಯುತ್ತಿರುವ ಕುಮಾರಧಾರ ನದಿಗೆ ಸ್ನಾನಕ್ಕೆಂದು ತೆರಳಿದ್ದು, ನೀರಿನಲ್ಲಿ ಕಣ್ಮರೆಯಾಗಿದ್ದಾನೆ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಪುತ್ತೂರು ಪೊಲೀಸರು ಮತ್ತು ಅಗ್ನಿಶಾಮಕ

ಕುಮಾರಧಾರ ನದಿಗೆ ಸ್ನಾನಕ್ಕಿಳಿದ ವಿದ್ಯಾರ್ಥಿ ನೀರುಪಾಲು Read More »

ಕರಾವಳಿ

ಡಿ.03: ಎಸ್ಸೆಸ್ಸೆಫ್ ಮಾಣಿ ಸೆಕ್ಟರ್ ಪ್ರತಿಭೋತ್ಸವ ► ಮರ್ಕಝ್ ರೂಬಿ ಜುಬಿಲಿ ಪ್ರಚಾರ ಸಮ್ಮೇಳನ

(ನ್ಯೂಸ್ ಕಡಬ) newskadaba.com ಮಾಣಿ, ನ.22. ಸುನ್ನೀ ಸ್ಟೂಡೆಂಟ್ ಫೆಡರೇಶನ್ ಎಸ್ಸೆಸ್ಸೆಫ್ ಮಾಣಿ ಸೆಕ್ಟರ್ ಇದರ ವತಿಯಿಂದ ಪ್ರತಿಭೋತ್ಸವ ಹಾಗೂ ಮರ್ಕಝ್ ರೂಬಿ ಜುಬಿಲಿ ಪ್ರಚಾರ ಸಮ್ಮೇಳನವು ಡಿಸೆಂಬರ್ 3 ಆದಿತ್ಯವಾರ ಮಿತ್ತೂರು ಸಮೀಪದ ಪಾಟ್ರಕೋಡಿ ಎಂಬಲ್ಲಿ ನಡೆಯಲಿದೆ. ಅಂದು ಬೆಳಿಗ್ಗೆ 8 ಗಂಟೆಯಿಂದ ಆರಂಭಗೊಳ್ಳಲಿರುವ ಕಾರ್ಯಕ್ರಮ ಸಂಜೆ 6 ಗಂಟೆಗೆ ಸಮಾರೋಪಗೊಳ್ಳಲಿದ್ದು, ಆಕರ್ಷಕ ರ್ಯಾಲಿಯೊಂದಿಗೆ ಆರಂಭಗೊಳ್ಳಲಿರುವ ಕಾರ್ಯಕ್ರಮದಲ್ಲಿ ಅಸ್ಸಯ್ಯಿದ್ ಹಂಝ ಹಾದಿ ತಂಙಳ್ ಪಾಟ್ರಕೋಡಿ ಧ್ವಜಾರೋಹಣಗೈಯ್ಯಲಿದ್ದಾರೆ. ಉದ್ಘಾಟನೆಯನ್ನು ಸುನ್ನೀ ಜಂಇಯ್ಯತುಲ್ ಉಲಮಾ ಕರ್ನಾಟಕ ಇದರ ಪ್ರಧಾನ

ಡಿ.03: ಎಸ್ಸೆಸ್ಸೆಫ್ ಮಾಣಿ ಸೆಕ್ಟರ್ ಪ್ರತಿಭೋತ್ಸವ ► ಮರ್ಕಝ್ ರೂಬಿ ಜುಬಿಲಿ ಪ್ರಚಾರ ಸಮ್ಮೇಳನ Read More »

ಕರಾವಳಿ

ಬೆಳ್ತಂಗಡಿ: ರಿಕ್ಷಾ – ಪಿಕಪ್ ಢಿಕ್ಕಿ ► ಎಲ್.ಕೆ.ಜಿ ವಿದ್ಯಾರ್ಥಿ ಸ್ಥಳದಲ್ಲೇ ಮೃತ್ಯು

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ನ.22. ಶಾಲಾ ಮಕ್ಕಳನ್ನು ಕರೆದುಕೊಂಡು ಹೋಗುತ್ತಿದ್ದ ರಿಕ್ಷಾ ಮತ್ತು ಪಿಕಪ್ ನಡುವೆ ಢಿಕ್ಕಿ ಸಂಭವಿಸಿದ ಪರಿಣಾಮ LKG ವಿದ್ಯಾರ್ಥಿ ಮೃತಪಟ್ಟ ಘಟನೆ ಬೆಳ್ತಂಗಡಿ ತಾಲೂಕಿನ ಬಾರ್ಯ ಎಂಬಲ್ಲಿ ಬುಧವಾರದಂದು ನಡೆದಿದೆ. ಮೃತ ವಿದ್ಯಾರ್ಥಿಯನ್ನು ಬಾರ್ಯ ಗ್ರಾಮದ ಮುದ್ದಡ್ಕ ಮದೀನತ್ತುಲ್ ಮುನವ್ವರ ಆಂಗ್ಲ ಮಾಧ್ಯಮ ಶಾಲೆಯ ಎಲ್.ಕೆ.ಜಿ. ವಿದ್ಯಾರ್ಥಿ ಮಹಮ್ಮದ್ ಸನದ್ ಎಂದು ಗುರುತಿಸಲಾಗಿದೆ. ವಾಹನದಲ್ಲಿದ್ದ ಉಳಿದ ವಿದ್ಯಾರ್ಥಿಗಳು ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ಬೆಳ್ತಂಗಡಿ

ಬೆಳ್ತಂಗಡಿ: ರಿಕ್ಷಾ – ಪಿಕಪ್ ಢಿಕ್ಕಿ ► ಎಲ್.ಕೆ.ಜಿ ವಿದ್ಯಾರ್ಥಿ ಸ್ಥಳದಲ್ಲೇ ಮೃತ್ಯು Read More »

ಕರಾವಳಿ

‘ಅಮ್ಮ ಉತ್ತಮ, ಇಂದಿರಾ ಅತ್ಯುತ್ತಮ’ ► ಇಂದಿರಾ ಕ್ಯಾಂಟೀನ್ ಗೆ ಬ್ರಿಟಿಷ್ ಸುದ್ದಿವಾಹಿನಿ BBC ಯಿಂದ ಶಹಬ್ಬಾಸ್ ಗಿರಿ

(ನ್ಯೂಸ್ ಕಡಬ) newskadaba.com ಬೆಂಗಳೂರು, ನ.22. ರಾಜ್ಯದಲ್ಲಿ ಇಂದಿರಾ ಕ್ಯಾಂಟೀನ್ ಜನಪ್ರಿಯವಾಗುತ್ತಾ ಇರುವಾಗಲೇ ಇಂದಿರಾ ಕ್ಯಾಂಟೀನ್ ಬಗ್ಗೆ ಇನ್ನೊಂದು ಸಂತಸದ ಸುದ್ದಿ ಹೊರಬಿದ್ದಿದೆ. ಬಡವರ ಹಸಿವು ನೀಗಿಸುವ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆ ‘ಇಂದಿರಾ ಕ್ಯಾಂಟೀನ್​​’ ಕಾರ್ಯಕ್ಕೆ ಬ್ರಿಟಿಷ್ ಸುದ್ದಿವಾಹಿನಿ ಬಿಬಿಸಿ ಶಹಭಾಷ್ ಅಂದಿದೆ. ಬಿಬಿಸಿ ವರದಿಗಾರ್ತಿಯಾಗಿರುವ ಗೀತಾ ಪಾಂಡೆ ಅವರು ಬೆಂಗಳೂರಿಗೆ ಆಗಮಿಸಿ ಈ ಹಿಂದೆ ತಮಿಳುನಾಡಿನ ಅಮ್ಮ ಕ್ಯಾಂಟೀನ್ ನಲ್ಲೂ ಊಟ ಮಾಡಿದ ಅನುಭವ ಉಲ್ಲೇಖಿಸಿ ಅಮ್ಮ ಕ್ಯಾಂಟೀನ್ ಉತ್ತಮ, ಇಂದಿರಾ ಕ್ಯಾಂಟೀನ್ ಅತ್ಯುತ್ತಮ ಎಂದು

‘ಅಮ್ಮ ಉತ್ತಮ, ಇಂದಿರಾ ಅತ್ಯುತ್ತಮ’ ► ಇಂದಿರಾ ಕ್ಯಾಂಟೀನ್ ಗೆ ಬ್ರಿಟಿಷ್ ಸುದ್ದಿವಾಹಿನಿ BBC ಯಿಂದ ಶಹಬ್ಬಾಸ್ ಗಿರಿ Read More »

ಕರ್ನಾಟಕ

ನವಂಬರ್ 24 ಉಡುಪಿಯಲ್ಲಿ ಹಿಂದೂ ಧರ್ಮ ಸಂಸತ್ ಅಧಿವೇಶನ ► ಕಡಬದಲ್ಲಿ ಸಮಾಲೋಚನಾ ಸಭೆ ಹಾಗೂ ಸ್ಟಿಕ್ಕರ್ ಅಂಟಿಸುವ ಕಾರ್ಯಕ್ರಮ

(ನ್ಯೂಸ್ ಕಡಬ) newskadaba.com ಕಡಬ, ನ.22. ಉಡುಪಿಯಲ್ಲಿ ನವಂಬರ್ 24 ರಿಂದ 26 ರವರೆಗೆ ನಡೆಯಲಿರುವ ಹಿಂದೂ ಧರ್ಮ ಸಂಸತ್ ಅಧಿವೇಶನ ಮತ್ತು ಹಿಂದೂ ಸಮಜೋತ್ಸವದ ಆಮಂತ್ರಣ ಪತ್ರಿಕೆ ಹಾಗೂ ವಾಹನ,  ಅಂಗಡಿಗಳಿಗೆ ಸ್ಟಿಕ್ಕರ್ ಅಂಟಿಸುವ ಕಾರ್ಯಕ್ರಮ ಕಡಬ ಪೇಟೆಯಲ್ಲಿ ನಡೆಯಿತು. ಹಿಂಜಾವೇ  ಮಂಗಳೂರು ವಿಭಾಗ ಸಹ ಸಂಚಾಲಕ ರವಿರಾಜ್ ಶೆಟ್ಟಿ,  ಕಡಬ ಸರಸ್ವತಿ ವಿದ್ಯಾಲಯ ಸಂಚಾಲಕ  ವೆಂಕಟ್ರಮಣ ರಾವ್ ಮಂಕುಡೆ, ಕಡಬ ಸಿ ಎ ಬ್ಯಾಂಕ್ ಅಧ್ಯಕ್ಷ ಸುಂದರ ಗೌಡ ಮಂಡೆಕರ, ಎಪಿಎಂಸಿ ನಿರ್ದೇಶಕಿ ಪುಲಸ್ತ್ಯಾ

ನವಂಬರ್ 24 ಉಡುಪಿಯಲ್ಲಿ ಹಿಂದೂ ಧರ್ಮ ಸಂಸತ್ ಅಧಿವೇಶನ ► ಕಡಬದಲ್ಲಿ ಸಮಾಲೋಚನಾ ಸಭೆ ಹಾಗೂ ಸ್ಟಿಕ್ಕರ್ ಅಂಟಿಸುವ ಕಾರ್ಯಕ್ರಮ Read More »

ಕರಾವಳಿ

ಕೊಯಿಲ: ಮಕ್ಕಳ ಗ್ರಾಮಸಭೆ ► ವಿದ್ಯಾರ್ಥಿಗಳಿಂದ ವಿವಿಧ ಬೇಡಿಕೆಗಳ ಮಂಡನೆ

(ನ್ಯೂಸ್ ಕಡಬ) newskadaba.com ಕಡಬ, ನ.22.   ಕೊಯಿಲ ಗ್ರಾ.ಪಂ. ಮಕ್ಕಳ ಗ್ರಾಮಸಭೆಯು ಗ್ರಾ.ಪಂ. ಸಭಾಭವನದಲ್ಲಿ ಇತ್ತೀಚೆಗೆ ನಡೆಯಿತು. ಆತೂರು ಬದ್ರಿಯಾ ಶಾಲಾ ನಾಯಕ ಮೊಹಮ್ಮದ್ ಮುಹಸೀನ್ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ಕೊಯಿಲ ಗ್ರಾ.ಪಂ.ವ್ಯಾಪ್ತಿಯ ವಳಕಡಮ ಕಿ.ಪ್ರಾ.ಶಾಲೆ, ಗಂಡಿಬಾಗಿಲು ಹಿ.ಪ್ರಾ.ಶಾಲೆ, ಕೊಯಿಲ ಹಿ.ಪ್ರಾ.ಶಾಲೆ ಹಾಗೂ ಸಬಳೂರು ಹಿ.ಪ್ರಾ.ಶಾಲೆಯ ವಿದ್ಯಾರ್ಥಿಗಳು ಭಾಗವಿಸಿದ್ದು ವಿವಿಧ ಬೇಡಿಕೆಗಳನ್ನು ಮಂಡಿಸಿದ್ದಾರೆ. ಆತೂರು ಬದ್ರಿಯಾ ಶಾಲೆಯ ವಿದ್ಯಾರ್ಥಿ ಮಾತನಾಡಿ, ಶಾಲೆಗೆ ಕಸದಬುಟ್ಟಿ ಕೊಟ್ಟಿದ್ದು ಇದರಲ್ಲಿ ಕಸ ತುಂಬಿದೆ. 1 ವರ್ಷವಾದರೂ ವಿಲೇವಾರಿ ಆಗಿಲ್ಲ ಎಂದರು.

ಕೊಯಿಲ: ಮಕ್ಕಳ ಗ್ರಾಮಸಭೆ ► ವಿದ್ಯಾರ್ಥಿಗಳಿಂದ ವಿವಿಧ ಬೇಡಿಕೆಗಳ ಮಂಡನೆ Read More »

ಕರಾವಳಿ
Scroll to Top