News Kadaba

ಟ್ರಾಫಿಕ್ ಪೊಲೀಸರಿಗೆ ಹೆದರಿ ಬೈಕ್ ತಿರುಗಿಸಿದಾಗ ಅಪಘಾತ ► ಬೈಕಿನಿಂದ ರಸ್ತೆಗುರುಳಿದ ಬಾಲಕ ಸ್ಥಳದಲ್ಲೇ ಮೃತ್ಯು

(ನ್ಯೂಸ್ ಕಡಬ) newskadaba.com ಬೆಂಗಳೂರು, ನ.26. ಹೆಲ್ಮೆಟ್ ಧರಿಸಿಲ್ಲವೆಂಬ ಕಾರಣಕ್ಕೆ ಟ್ರಾಫಿಕ್ ಪೊಲೀಸರಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಬೈಕೊಂದು ಸ್ಕಿಡ್ ಆದ ಪರಿಣಾಮ 9 ವರ್ಷದ ಬಾಲಕ ರಸ್ತೆಗೆ ಬಿದ್ದಿದ್ದು, ಬಾಲಕನ ಮೇಲೆ‌ ಬಸ್ ಹರಿದು ಬಾಲಕ ಮೃತಪಟ್ಟ ಹೃದಯವಿದ್ರಾವಕ ಘಟನೆ ಬೆಂಗಳೂರಿನಲ್ಲಿ ಶನಿವಾರದಂದು ನಡೆದಿದೆ. ಸ್ಥಳೀಯ ನಿವಾಸಿ ರಾಜಣ್ಣ ಎಂಬವರು ತನ್ನ ಮೊಮ್ಮಕ್ಕಳೊಂದಿಗೆ ತೆರಳುತ್ತಿದ್ದಾಗ ನಗರದ ಸಂಗೊಳ್ಳಿ ರಾಯಣ್ಣ ವೃತ್ತದ ಬಳಿ ಟ್ರಾಫಿಕ್ ಪೊಲೀಸರನ್ನು ಕಂಡು ಹೆಲ್ಮೆಟ್ ಧರಿಸದ ಕಾರಣ ಪೊಲೀಸರು ಹಿಡಿಯುತ್ತಾರೆ ಎಂದು ಹೆದರಿ ಬದಲಿ […]

ಟ್ರಾಫಿಕ್ ಪೊಲೀಸರಿಗೆ ಹೆದರಿ ಬೈಕ್ ತಿರುಗಿಸಿದಾಗ ಅಪಘಾತ ► ಬೈಕಿನಿಂದ ರಸ್ತೆಗುರುಳಿದ ಬಾಲಕ ಸ್ಥಳದಲ್ಲೇ ಮೃತ್ಯು Read More »

ಕರ್ನಾಟಕ

ಅಬಕಾರಿ ಇಲಾಖೆಯ ಪುತ್ತೂರು ಹಾಗೂ ಬಂಟ್ವಾಳ ಉಪ ವಿಭಾಗ ► ನ.27 ಮತ್ತು 28 ರಂದು ಮುಟ್ಟುಗೋಲು ವಾಹನಗಳ ಹರಾಜು

(ನ್ಯೂಸ್ ಕಡಬ) newskadaba.com ಮಂಗಳೂರು, ನ.25. ಕರ್ನಾಟಕ ಅಬಕಾರಿ ಕಾಯ್ದೆಯಡಿಯಲ್ಲಿ ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಂಡ ಬಂಟ್ವಾಳ ತಾಲೂಕಿಗೆ ಸಂಬಂಧಿಸಿದಂತೆ 4 ತ್ರಿಚಕ್ರ ವಾಹನ, 3 ಚತುರ್‍ಚಕ್ರ ವಾಹನ ಮತ್ತು 1 ದ್ವಿಚಕ್ರ ವಾಹನಗಳನ್ನು ನವೆಂಬರ್ 27 ರಂದು ಹಾಗೂ ಪುತ್ತೂರು ತಾಲೂಕಿಗೆ ಸಂಬಂಧಿಸಿದಂತೆ 3 ತ್ರಿಚಕ್ರ ವಾಹನಗಳು, 6 ದ್ವಿಚಕ್ರ ವಾಹನಗಳು ಹಾಗೂ ಚತುರ್‍ಚಕ್ರ 1 ನವೆಂಬರ್ 28 ರಂದು ಬಹಿರಂಗ ಹರಾಜಿಗೆ ಒಳಪಡಿಸಲಾಗುವುದು. ಹರಾಜಿನಲ್ಲಿ ಭಾಗವಹಿಸಲು ಇಚ್ಚಿಸುವ ಸಾರ್ವಜನಿಕರು ಹೆಚ್ಚಿನ ಮಾಹಿತಿಗಾಗಿ ಹರಾಜು ನಿರ್ವಾಹಣಾ ಅಧಿಕಾರಿಗಳಾದ

ಅಬಕಾರಿ ಇಲಾಖೆಯ ಪುತ್ತೂರು ಹಾಗೂ ಬಂಟ್ವಾಳ ಉಪ ವಿಭಾಗ ► ನ.27 ಮತ್ತು 28 ರಂದು ಮುಟ್ಟುಗೋಲು ವಾಹನಗಳ ಹರಾಜು Read More »

ಕರಾವಳಿ

ಅಕ್ರಮವಾಗಿ ಕೇರಳಕ್ಕೆ ಸಾಗಿಸುತ್ತಿದ್ದ ಅನ್ನಭಾಗ್ಯ ಅಕ್ಕಿ ► 200 ಗೋಣಿ ಅಕ್ಕಿ, ಲಾರಿ ಮತ್ತು ಟೆಂಪೋ ವಶಕ್ಕೆ

(ನ್ಯೂಸ್ ಕಡಬ) newskadaba.com ಬಂಟ್ವಾಳ, ನ.25. ಬಿ.ಸಿ.ರೋಡಿನಿಂದ ಕೇರಳಕ್ಕೆ ಅಕ್ರಮವಾಗಿ ಸಾಗಿಸುತ್ತಿದ್ದ ಲಕ್ಷಾಂತರ ರೂ. ಮೌಲ್ಯದ ಪಡಿತರ ಅಕ್ಕಿಯನ್ನು ಬಂಟ್ವಾಳ ಡಿವೈಎಸ್ಪಿ ನೇತೃತ್ವದಲ್ಲಿ ದಾಳಿ ನಡೆಸಿ ವಶಪಡಿಸಿಕೊಳ್ಳಲಾಗಿದೆ. ಬಂಟ್ವಾಳ ಬಿ.ಮೂಡ ಗ್ರಾಮದ ಶಾಂತಿಯಂಗಡಿ ಎಲ್‌ಐಸಿ ಕಚೇರಿಯ ಮುಂಭಾಗದಲ್ಲಿ ಪಡಿತರ ಅಕ್ಕಿಯನ್ನು ಒಂದು ಲಾರಿಯಿಂದ ಟೆಂಪೋವೊದಕ್ಕೆ ಲೋಡ್ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿಯ ಮೇರೆಗೆ ಡಿವೈಎಸ್ಪಿ ಅರುಣ್ ಕುಮಾರ್ ನೇತೃತ್ವದ ತಂಡವು ದಾಳಿ ನಡೆಸಿ 50 ಕೆ.ಜಿ.ಯ 200 ಗೋಣಿ ಚೀಲ ಅಕ್ಕಿಯನ್ನು ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡ ಅಕ್ಕಿಯ ಮೌಲ್ಯ

ಅಕ್ರಮವಾಗಿ ಕೇರಳಕ್ಕೆ ಸಾಗಿಸುತ್ತಿದ್ದ ಅನ್ನಭಾಗ್ಯ ಅಕ್ಕಿ ► 200 ಗೋಣಿ ಅಕ್ಕಿ, ಲಾರಿ ಮತ್ತು ಟೆಂಪೋ ವಶಕ್ಕೆ Read More »

ಕರಾವಳಿ

2019 ರ ಒಳಗೆ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ► ಪೇಜಾವರ ಶ್ರೀ ಘೋಷಣೆ

(ನ್ಯೂಸ್ ಕಡಬ) newskadaba.com ಉಡುಪಿ, ನ.24. ದೇಶದಲ್ಲೀಗ ರಾಮಮಂದಿರ ನಿರ್ಮಾಣಕ್ಕೆ ಅನುಕೂಲಕರ ವಾತಾವರಣವಿದ್ದು, 2019 ರ ಒಳಗೆ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಗೊಳ್ಳುವ ವಿಶ್ವಾಸವಿದೆ ಎಂದು ಪರ್ಯಾಯ ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ ಹೇಳಿದ್ದಾರೆ. ವಿಶ್ವ ಹಿಂದೂ ಪರಿಷತ್‌ನ ಆಶ್ರಯದಲ್ಲಿ ನಗರದ ರೋಯಲ್ ಗಾರ್ಡನ್‌ನಲ್ಲಿ ಇಂದು ಪ್ರಾರಂಭಗೊಂಡ 12ನೆ ಧರ್ಮ ಸಂಸದ್‌ನ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮುಂದಿನ ವರ್ಷದ ಕೊನೆಯೊಳಗೆ ರಾಮ ಮಂದಿರ ನಿರ್ಮಾಣ ಕಾರ್ಯ ಪ್ರಾರಂಭಗೊಳ್ಳಬೇಕಿದ್ದು, ಒಂದು ವರ್ಷದೊಳಗೆ

2019 ರ ಒಳಗೆ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ► ಪೇಜಾವರ ಶ್ರೀ ಘೋಷಣೆ Read More »

ಕರ್ನಾಟಕ

ಕಲ್ಲಡ್ಕ: ಕೆರೆಗೆ ಬಿದ್ದು ಬಾಲಕ ಮೃತ್ಯು

(ನ್ಯೂಸ್ ಕಡಬ) newskadaba.com ಬಂಟ್ವಾಳ, ನ.24. ಏಳು ವರ್ಷದ ಬಾಲಕನೋರ್ವ ಕೆರೆಗೆ ಬಿದ್ದು ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ಕಲ್ಲಡ್ಕ ಸಮೀಪದ ಉಮಾಶಿವಕ್ಷೇತ್ರ ದೇವಳದ ಸಮೀಪ ಶುಕ್ರವಾರದಂದು ನಡೆದಿದೆ. ನೇರಳಕಟ್ಟೆ ಭಗವತಿಕೋಡಿ ನಿವಾಸಿ ಸತ್ಯನಾರಾಯಣ ಎಂಬವರ ಪುತ್ರ ಶ್ರೀರಾಮ್(7) ಮೃತ ದುರ್ದೈವಿ ಬಾಲಕ. ಉಮಾಶಿವ ಕ್ಷೇತ್ರದ ಸಭಾಂಗಣದಲ್ಲಿ ತನ್ನ ಅಜ್ಜನ ಶ್ರಾದ್ದಕ್ಕೆಂದು ಶ್ರೀರಾಮ್ ತನ್ನ ಮನೆಯವರ ಜೊತೆ ಬಂದಿದ್ದ ವೇಳೆ ಈ ದುರಂತ ಸಂಭವಿಸಿದೆ. ಆಟವಾಡಲು ಇತರರ ಜೊತೆ ಕ್ಷೇತ್ರದ ಕೆರೆಯ ಬಳಿಗೆ ತೆರಳಿದ್ದ ಈತ ಹಠಾತ್ತನೆ ಆಯತಪ್ಪಿ

ಕಲ್ಲಡ್ಕ: ಕೆರೆಗೆ ಬಿದ್ದು ಬಾಲಕ ಮೃತ್ಯು Read More »

ಕರಾವಳಿ

ಗುರುವಾಯನ ಕೆರೆ: ಯುವಕನ ಬರ್ಬರ ಕೊಲೆ

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ನ.24. ರಾಡ್ ನಿಂದ ಹೊಡೆದು ಯುವಕನೊಬ್ಬನನ್ನು ಬರ್ಬರವಾಗಿ ಕೊಲೆಗೈದ ಘಟನೆ ಬೆಳ್ತಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಗುರುವಾಯನಕೆರೆಯಲ್ಲಿ ಶುಕ್ರವಾರದಂದು ನಡೆದಿದೆ. ಮೃತರನ್ನು ಗುರುವಾಯನಕೆರೆ ಹವ್ಯಕ ಭವನ ನಿವಾಸಿ ಪ್ರದೀಪ್(35) ಎಂದು ಗುರುತಿಸಲಾಗಿದೆ. ಎರಡು ತಂಡಗಳ ಮಧ್ಯೆ ಹೊಡೆದಾಟ ಸಂಭವಿಸಿದ್ದು, ಈ ವೇಳೆ ತಂಡವೊಂದು ಪ್ರದೀಪ್ ಅವರನ್ನು ರಾಡ್ ನಿಂದ ಹೊಡೆದು ಕೊಲೆಗೈದಿದೆ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಬೆಳ್ತಂಗಡಿ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಗುರುವಾಯನ ಕೆರೆ: ಯುವಕನ ಬರ್ಬರ ಕೊಲೆ Read More »

ಕರಾವಳಿ

ವಿಜೃಂಭಣೆಯಿಂದ ನಡೆದ ಸುಬ್ರಹ್ಮಣ್ಯ ಚಂಪಾ ಷಷ್ಠಿ ಮಹೋತ್ಸವ

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ನ.24. ದಕ್ಷಿಣ ಭಾರತದ ಪ್ರಸಿದ್ಧ ಯಾತ್ರಾ ಸ್ಥಳವಾಗಿರುವ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಚಂಪಾ ಷಷ್ಠಿ ಮಹೋತ್ಸವದ ಅಂಗವಾಗಿ ಬ್ರಹ್ಮ ರಥೋತ್ಸವ ನಡೆಯಿತು. ದೇಶದ ವಿವಿಧ ರಾಜ್ಯಗಳಿಂದ ಸಹಸ್ರಾರು ಭಕ್ತರು ಚಂಪಾ ಷಷ್ಠಿ ಮಹೋತ್ಸವದಲ್ಲಿ ಪಾಲ್ಗೊಂಡಿದ್ದರು. ಚಂಪಾ ಷಷ್ಠಿ ಮಹೋತ್ಸವದ ಅಂಗವಾಗಿ ಕಳೆದ ಮೂರು ದಿನಗಳಿಂದ ಮಡೆಸ್ನಾನದ ಬದಲಿಯಾಗಿ ಎಡೆ ಸ್ನಾನ ನಡೆಯುತ್ತಿದ್ದು ಇಂದು ಕೊನೆಯ ದಿನವಾಗಿದೆ. ಚಂಪಾಷಷ್ಟಿಯ ಮೂರು ದಿನಗಳಲ್ಲೂ ಈ ಸೇವೆಯನ್ನು ನಡೆಸಲಾಗುತ್ತಿದೆ. ಧಾರ್ಮಿಕಧತ್ತಿ ಇಲಾಖೆಯ ನೇತೃತ್ವದಲ್ಲಿ ಈ ಸೇವೆಯನ್ನು

ವಿಜೃಂಭಣೆಯಿಂದ ನಡೆದ ಸುಬ್ರಹ್ಮಣ್ಯ ಚಂಪಾ ಷಷ್ಠಿ ಮಹೋತ್ಸವ Read More »

ಕರಾವಳಿ

ಧರ್ಮಸ್ಥಳ: ಕೃಷಿಗಾಗಿ ಡ್ರೋನ್ ಯಂತ್ರದ ಬಿಡುಗಡೆ

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ನ.24. Aerial Vehicle for Agriculture (ಕೃಷಿಗಾಗಿ ಬಾನ ವಾಹನಗಳು) ಎಂಬ ಸಂಶೋಧನೆಯ ಒಂದು ಮಾಡೆಲ್ ಡ್ರೋನ್ ಅನ್ನು ಇಂದು ಧರ್ಮಸ್ಥಳದ ವಸಂತ ಮಹಲ್ ನಲ್ಲಿ ಗುರುವಾರದಂದು ನಡೆದ ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಪೂಜ್ಯ ಡಾ.ವೀರೇಂದ್ರ ಹೆಗ್ಗಡೆಯವರು ಬಿಡುಗಡೆಗೊಳಿಸಿದರು. ಪ್ರಧಾನಿ ಮೋದಿಯವರ ಕನಸಿನ ಸ್ಟಾರ್ಟ್ ಅಪ್ ಇಂಡಿಯಾ ಹಾಗೂ ಸ್ಟಾರ್ಟ್ ಅಪ್ ಕರ್ನಾಟಕ ಇವುಗಳ ಅನುದಾನದಿಂದ ಆರಂಭವಾದ ದಕ್ಷಿಣ ಕನ್ನಡ ಜಿಲ್ಲೆಯ ಮೊದಲ ಸ್ಟಾರ್ಟ್ ಅಪ್ ಸಂಸ್ಥೆ “ISPAGRO”.

ಧರ್ಮಸ್ಥಳ: ಕೃಷಿಗಾಗಿ ಡ್ರೋನ್ ಯಂತ್ರದ ಬಿಡುಗಡೆ Read More »

ಕರಾವಳಿ

ಕೈಕಂಬ ಸರಕಾರಿ ಶಾಲೆಯ ರಸ್ತೆ ಕಾಂಕ್ರೀಟೀಕರಣಕ್ಕೆ ಚಾಲನೆ

(ನ್ಯೂಸ್ ಕಡಬ) newskadaba.com ಕಡಬ, ನ.24. ತಾ.ಪಂ. ಅನುದಾನದಲ್ಲಿ ಬಿಳಿನೆಲೆ ಗ್ರಾಮದ ಕೈಕಂಬ ಹಿ.ಪ್ರಾ. ಶಾಲಾ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಲಾಯಿತು. ತಾ.ಪಂ.ಅನುದಾನದಲ್ಲಿ ಮಂಜೂರಾದ ರೂ.70 ಸಾವಿರದಲ್ಲಿ ತಾ.ಪಂ.ಸದಸ್ಯೆ ಆಶಾಲಕ್ಷ್ಮಣ್ ಗುಂಡ್ಯ ಗುದ್ದಲಿ ಪೂಜೆ ನೆರವೇರಿಸಿ ಕಾಮಗಾರಿ ಅತೀ ಶೀಘ್ರದಲ್ಲಿ ನಡೆದು ಶಾಲೆಗೆ ಸಂಪರ್ಕ ರಸ್ತೆ ಅಭಿವೃದ್ದಿಯಾಗಲಿ ಎಂದು ಆಶಿಸಿದರು. ಜಿ.ಪಂ.ಸದಸ್ಯ ಪಿ.ಪಿ ವರ್ಗೀಸ್ ತೆಂಗಿನಕಾಯಿ ಒಡೆಯುವ ಮೂಲಕ ಕಾಮಗಾರಿಗೆ ಚಾಲನೆ ನೀಡಿದರು. ಬಿಳಿನೆಲೆ ಗ್ರಾ.ಪಂ.ಸದಸ್ಯ ಶಿವಪ್ರಸಾದ್ ನಡುತೋಟ, ಶಾಲಾ ಎಸ್ಡಿಎಂಸಿ ಅಧ್ಯಕ್ಷ ನೀಲಪ್ಪ ಗೌಡ

ಕೈಕಂಬ ಸರಕಾರಿ ಶಾಲೆಯ ರಸ್ತೆ ಕಾಂಕ್ರೀಟೀಕರಣಕ್ಕೆ ಚಾಲನೆ Read More »

ಕರಾವಳಿ

ಸುಳ್ಯ: ಮನೆಯ ಮೇಲೆ ಉರುಳಿ ಬಿದ್ದ ಬೋರ್‍ವೆಲ್ ಲಾರಿ ► ನೂತನವಾಗಿ ನಿರ್ಮಾಣಗೊಳ್ಳುತ್ತಿದ್ದ ಮನೆಗೆ ಹಾನಿ

(ನ್ಯೂಸ್ ಕಡಬ) newskadaba.com ಸುಳ್ಯ, ನ.24. ಬೋರ್‍ವೆಲ್ ಲಾರಿಯೊಂದು ಆಯತಪ್ಪಿ ನೂತನವಾಗಿ ನಿರ್ಮಾಣಗೊಳ್ಳುತ್ತಿದ್ದ ಮನೆಯೊಂದರ ಮೇಲೆ ಬಿದ್ದ ಘಟನೆ ಸುಳ್ಯದ ಜಾಲ್ಸೂರಿನಲ್ಲಿ ಗುರುವಾರದಂದು ನಡೆದಿದೆ. ಶಾಫಿ ಎಂಬವರ ಮನೆಯಲ್ಲಿ ಬೋರ್‍ವೆಲ್ ತೆಗೆಯಲೆಂದು ತೆರಳುತ್ತಿದ್ದ ಲಾರಿಯು ಜಾಲ್ಸೂರು ಗ್ರಾಮದ ಬೊಳುಬೈಲು ಎಂಬಲ್ಲಿಗೆ ತಲುಪಿದಾಗ ಇಕ್ಕಟ್ಟಾದ ರಸ್ತೆಯಲ್ಲಿ ಸಾಗುತ್ತಿದ್ದಾಗ ರವಿ ಎಂಬವರ ಕಾಂಪೌಂಡ್ ಕುಸಿದು ಬಿದ್ದು ನೂತನವಾಗಿ ನಿರ್ಮಿಸುತ್ತಿದ್ದ ಮನೆಯ ಮೇಲೆ ಬಿದ್ದಿದೆ. ಘಟನೆಯಲ್ಲಿ ಮನೆಗೆ ಹಾನಿಯಾಗಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಸುಳ್ಯ: ಮನೆಯ ಮೇಲೆ ಉರುಳಿ ಬಿದ್ದ ಬೋರ್‍ವೆಲ್ ಲಾರಿ ► ನೂತನವಾಗಿ ನಿರ್ಮಾಣಗೊಳ್ಳುತ್ತಿದ್ದ ಮನೆಗೆ ಹಾನಿ Read More »

ಕರಾವಳಿ
Scroll to Top