News Kadaba

‘ಓಖೀ’ ಚಂಡಮಾರುತಕ್ಕೆ ತುತ್ತಾದ ಹಲವರು ಸಂಕಷ್ಟದಲ್ಲಿ ► ಮಂಗಳೂರಿನಿಂದ ಹೊರಟಿದ್ದ ಎರಡು ಹಡಗುಗಳು ಮುಳುಗಡೆ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.01. ಮಂಗಳೂರಿನಿಂದ ಲಕ್ಷ ದ್ವೀಪಕ್ಕೆ ಹೊರಟಿದ್ದ ಸರಕು ಸಾಗಾಟದ ಎರಡು ಹಡಗುಗಳ ಪೈಕಿ ಒಂದು ಸಣ್ಣ ಹಡಗು ಅರಬ್ಬಿ ಸಮುದ್ರದಲ್ಲಿ ಸಂಪೂರ್ಣ ಮುಳುಗಡೆಯಾಗಿದ್ದು, ಇನ್ನೊಂದು ಭಾಗಶಃ ಮುಳುಗಡೆಯಾಗಿದ ಘಟನೆ ಶುಕ್ರವಾರದಂದು ನಡೆದಿದೆ. ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದ ಸೃಷ್ಟಿಯಾಗಿರುವ ಓಖೀ ಚಂಡಮಾರುತದಿಂದಾಗಿ ಇದೀಗ ಕರವತ್ತಿ ದ್ವೀಪದಲ್ಲಿ ಸಂಚರಿಸುತ್ತಿದ್ದ ಸರಕು ಸಾಗಾಟದ ಹಡಗುಗಳು ಮುಳುಗಡೆಯಾಗಿವೆ‌. ಘಟನೆಯಲ್ಲಿ ಎರಡೂ ಹಡಗುಗಳಲ್ಲಿರುವ ಸುಮಾರು 15 ಮಂದಿ ಅಪಾಯದಲ್ಲಿದ್ದು, ಐವರನ್ನು ರಕ್ಷಿಸಲಾಗಿದೆ. ಮುಳುಗಡೆಗೊಂಡಿರುವ ಹಡಗಿನಲ್ಲಿದ್ದ ಸಿಬ್ಬಂದಿಗಳ ಪೈಕಿ […]

‘ಓಖೀ’ ಚಂಡಮಾರುತಕ್ಕೆ ತುತ್ತಾದ ಹಲವರು ಸಂಕಷ್ಟದಲ್ಲಿ ► ಮಂಗಳೂರಿನಿಂದ ಹೊರಟಿದ್ದ ಎರಡು ಹಡಗುಗಳು ಮುಳುಗಡೆ Read More »

ರಾಷ್ಟ್ರೀಯ ನ್ಯೂಸ್

ಬುಡೋಳಿ: ಬೈಕ್-ಜುಪಿಟರ್ ಢಿಕ್ಕಿ ► ಸವಾರರಿಬ್ಬರು ಗಂಭೀರ

(ನ್ಯೂಸ್ ಕಡಬ) newskadaba.com ವಿಟ್ಲ, ಡಿ.01. ಬೈಕ್ ಮತ್ತು ಟಿವಿಎಸ್ ಜುಪಿಟರ್ ಮಧ್ಯೆ ಢಿಕ್ಕಿ ಸಂಭವಿಸಿ ಸವಾರರಿಬ್ಬರು ಗಂಭೀರ ಗಾಯಗೊಂಡ ಘಟನೆ ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಬುಡೋಳಿ ಸಮೀಪ ಶುಕ್ರವಾರ ರಾತ್ರಿ ನಡೆದಿದೆ. ಗಾಯಗೊಂಡ ಬೈಕ್ ಸವಾರನನ್ನು ಉಪ್ಪಿನಂಗಡಿ ನಿವಾಸಿ ಮುಸ್ತಫಾ ಮತ್ತು ಜುಪಿಟರ್ ಸವಾರ ಗಡಿಯಾರ ನಿವಾಸಿ ಝುಬೈರ್ ಎಂದು ಗುರುತಿಸಲಾಗಿದೆ. ಗಂಭೀರ ಗಾಯಗೊಂಡ ಗಾಯಾಳುಗಳನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ವಿಟ್ಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಬುಡೋಳಿ: ಬೈಕ್-ಜುಪಿಟರ್ ಢಿಕ್ಕಿ ► ಸವಾರರಿಬ್ಬರು ಗಂಭೀರ Read More »

ಕರಾವಳಿ

ನಾಳೆ(ಡಿ.03.) ರಾಮಕುಂಜದಲ್ಲಿ ‘ಅಕ್ಷರ ಹಬ್ಬ – 2017’ ಕಾರ್ಯಕ್ರಮ ► 3ಡಿ ಶೋ, ವಿಜ್ಞಾನ ಮಾದರಿ ಪ್ರದರ್ಶನ, ಪುಸ್ತಕ ಪ್ರದರ್ಶನ, ಕ್ಯಾಂಪ್ಕೋ ಉತ್ತನ್ನಗಳ ಪ್ರದರ್ಶನ

(ನ್ಯೂಸ್ ಕಡಬ) newskadaba.com ಕಡಬ, ಡಿ.01. ವಿದ್ಯಾರ್ಥಿಗಳಲ್ಲಿ ಸೃಜನ ಶೀಲತೆ ಹಾಗೂ ಕ್ರಿಯಾತ್ಮಕ ಕಲಿಕೆಯ ಅಭಿರುಚಿ ಬೆಳೆಸುವ ಹಾಗೂ ಪರಿಸರದ ವಿದ್ಯಾಸಂಸ್ಥೆಗಳೊಂದಿಗೆ ಉತ್ತಮ ಬಾಂಧವ್ಯವನ್ನು ವೃದ್ಧಿಸುವ ಉದ್ದೇಶದೊಂದಿಗೆ ಬೆಂಗಳೂರಿನ ‘ವೈಎಫ್‌ಎಸ್’ ಸಿಸ್ಕೋ ಸಂಭ್ರಮ ತಂಡದ ಸಹಯೋಗದಲ್ಲಿ ರಾಮಕುಂಜ ಶ್ರೀ ರಾಮಕುಂಜೇಶ್ವರ ಪದವಿ ಪೂರ್ವ ಕಾಲೇಜು ಹಾಗೂ ಪ್ರೌಢ ಶಾಲೆಯ ಆಶ್ರಯದಲ್ಲಿ ಆಹ್ವಾನಿತ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ ವೈವಿಧ್ಯಮ ಸ್ಪರ್ಧೆಗಳ ‘ಅಕ್ಷರ ಹಬ್ಬ – 2017’ ಡಿಸೆಂಬರ್ 03 ಭಾನುವಾರದಂದು ಶ್ರೀ ರಾಮಕುಂಜೇಶ್ವರ ಪ.ಪೂ

ನಾಳೆ(ಡಿ.03.) ರಾಮಕುಂಜದಲ್ಲಿ ‘ಅಕ್ಷರ ಹಬ್ಬ – 2017’ ಕಾರ್ಯಕ್ರಮ ► 3ಡಿ ಶೋ, ವಿಜ್ಞಾನ ಮಾದರಿ ಪ್ರದರ್ಶನ, ಪುಸ್ತಕ ಪ್ರದರ್ಶನ, ಕ್ಯಾಂಪ್ಕೋ ಉತ್ತನ್ನಗಳ ಪ್ರದರ್ಶನ Read More »

ಕರಾವಳಿ

ತಮಿಳುನಾಡು, ಕೇರಳದಲ್ಲಿ ಚಂಡಮಾರುತದ ಆರ್ಭಟಕ್ಕೆ 8 ಬಲಿ ► ‘ಓಖೀ’ ಚಂಡಮಾರುತ ಕರಾವಳಿಗೂ ಅಪ್ಪಳಿಸುವ ಭೀತಿ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.01. ಕೇರಳ ಹಾಗೂ ತಮಿಳುನಾಡಿನಲ್ಲಿ ರುದ್ರ ನರ್ತನ ತೋರಿದ ‘ಓಖೀ’ ಚಂಡಮಾರುತವು ಇದೀಗ ಕರ್ನಾಟಕದ ಕರಾವಳಿಗೆ‌ ಅಪ್ಪಳಿಸುವ ಸಾಧ್ಯತೆ ಹೆಚ್ಚಾಗಿದೆ. ಚಂಡಮಾರುತದ ಪ್ರಭಾವದಿಂದಾಗಿ ಕೇರಳದಲ್ಲಿ ಸುರಿದ ಭಾರೀ ಮಳೆಯು 8 ಮಂದಿಯನ್ನು ಈಗಾಗಲೇ ಬಲಿ ತೆಗೆದುಕೊಂಡಿದ್ದು, ಹಲವರು ಗಾಯಗೊಂಡಿದ್ದಾರೆ‌. ಕೇರಳದ ಬಹು ಭಾಗದಲ್ಲಿ ತನ್ನ ರುದ್ರ ನರ್ತನವನ್ನು ತೋರಿದ ‘ಓಖೀ’ ಚಂಡಮಾರುತವು ಕರ್ನಾಟಕದ ಕರಾವಳಿಯನ್ನೂ ಅಪ್ಪಳಿಸುವ ಸಾಧ್ಯತೆ ಹೆಚ್ಚಾಗಿದೆ. ಅರಬ್ಬೀ ಸಮುದ್ರ ಮೂಲಕ ಹಾದು ಹೋಗಲಿರುವ ಓಖೀ ಚಂಡಮಾರುತದ ಪ್ರಭಾವವು ಇಡೀ

ತಮಿಳುನಾಡು, ಕೇರಳದಲ್ಲಿ ಚಂಡಮಾರುತದ ಆರ್ಭಟಕ್ಕೆ 8 ಬಲಿ ► ‘ಓಖೀ’ ಚಂಡಮಾರುತ ಕರಾವಳಿಗೂ ಅಪ್ಪಳಿಸುವ ಭೀತಿ Read More »

ರಾಷ್ಟ್ರೀಯ ನ್ಯೂಸ್

ಮನುಕುಲವನ್ನು ಬೆಚ್ಚಿ ಬೀಳಿಸಿದ ಮಹಾಮಾರಿ ಏಡ್ಸ್  ► ಇಂದು (ಡಿ.01.) ವಿಶ್ವ ಏಡ್ಸ್ ದಿನಾಚರಣೆ

(ನ್ಯೂಸ್ ಕಡಬ) newskadaba.com ಆರೋಗ್ಯ ಮಾಹಿತಿ, ಡಿ.01. ಪ್ರತಿ ವರ್ಷ ಡಿಸೆಂಬರ್ 1 ರಂದು ವಿಶ್ವ ಏಡ್ಸ್ ದಿನ  ಆಚರಿಸಲಾಗುತ್ತದೆ. ಎಚ್.ಐ.ವಿ ಎಂಬ ವೈರಸ್‌ನಿಂದ ಉಂಟಾಗುವ ಈ ರೋಗದ ಬಗ್ಗೆ ಹೆಚ್ಚಿನ ಅರಿವು ಮತ್ತು ಜಾಗೃತಿ ಮೂಡಿಸುವ ಉದ್ದೇಶದಿಂದ 1988ರಿಂದ ಈ ಆಚರಣೆಯನ್ನು ಜಾರಿಗೆ ತರಲಾಯಿತು. ಮಾರಣಾಂತಿಕ ಖಾಯಿಲೆಗಳ ಪಟ್ಟಿಯಲ್ಲಿ ಮೊದಲ ಹತ್ತು ಸ್ಥಾನದ ಒಳಗೆ ಬರುವ ಏಡ್ಸ್ ರೋಗ ಮನುಕುಲದ ಬಹುದೊಡ್ಡ ಶತ್ರು. 2013ರ ಅಂಕಿ ಅಂಶಗಳ ಪ್ರಕಾರ ಸುಮಾರು 36 ಮಿಲಿಯನ್ ಮಂದಿ (1981-2012ರ ವರೆಗೆ)

ಮನುಕುಲವನ್ನು ಬೆಚ್ಚಿ ಬೀಳಿಸಿದ ಮಹಾಮಾರಿ ಏಡ್ಸ್  ► ಇಂದು (ಡಿ.01.) ವಿಶ್ವ ಏಡ್ಸ್ ದಿನಾಚರಣೆ Read More »

ಆರೋಗ್ಯ ಮಾಹಿತಿ

ಜಿಲ್ಲಾಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ಚಿತ್ರಕಲಾ ಸ್ಪರ್ಧೆ ► ನೆಲ್ಯಾಡಿ ಜ್ಞಾನೋದಯ ಬೆಥನಿ ವಿದ್ಯಾಸಂಸ್ಥೆಯ ಅನಿಲ್ ಬಲ್ಯ ರಾಜ್ಯಮಟ್ಟಕ್ಕೆ

(ನ್ಯೂಸ್ ಕಡಬ) newskadaba.com ಕಡಬ, ನ.30.‌ ಜಿಲ್ಲಾ ಮಟ್ಟದ ಪ್ರೌಢ ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕರ ಚಿತ್ರಕಲಾ ಸ್ಪರ್ಧೆಯಲ್ಲಿ ನೆಲ್ಯಾಡಿಯ ಜ್ಞಾನೋದಯ ಬೆಥನಿ ವಿದ್ಯಾಸಂಸ್ಥೆಯ ಚಿತ್ರಕಲಾ ಶಿಕ್ಷಕ ಕಡಬದ ಬಲ್ಯ ನಿವಾಸಿ ಅನಿಲ್ ಬಲ್ಯ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಇತ್ತೀಚೆಗೆ ಮಂಗಳೂರಿನ ಕಪಿತಾನಿಯೋ ವಿದ್ಯಾಲಯದಲ್ಲಿ ನಡೆದ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸಿದ ಇವರು ಸತತವಾಗಿ ನಾಲ್ಕನೇ ಬಾರಿಯೂ ರಾಜ್ಯಮಟ್ಟಕ್ಕೆ ಆಯ್ಕೆಯಾದರು.

ಜಿಲ್ಲಾಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ಚಿತ್ರಕಲಾ ಸ್ಪರ್ಧೆ ► ನೆಲ್ಯಾಡಿ ಜ್ಞಾನೋದಯ ಬೆಥನಿ ವಿದ್ಯಾಸಂಸ್ಥೆಯ ಅನಿಲ್ ಬಲ್ಯ ರಾಜ್ಯಮಟ್ಟಕ್ಕೆ Read More »

ಕರಾವಳಿ

ಪುಷ್ಪಗಿರಿ ವನ್ಯಧಾಮ ಮತ್ತು ಆನೆ ಕಾರಿಡಾರ್ ಯೋಜನೆಗೆ ತೀವ್ರ ವಿರೋಧ ► ಡಿ.04 ರಂದು ಕಡಬ ತಾಲೂಕು ಕಛೇರಿಯ ಮುಂಭಾಗ ಬೃಹತ್ ಪ್ರತಿಭಟನೆ

(ನ್ಯೂಸ್ ಕಡಬ) newskadaba.com ಕಡಬ, ನ.30. ಸರಕಾರವು ಜಾರಿಗೆ ತರಲು ಉದ್ದೇಶಿಸಿರುವ ಕಸ್ತೂರಿ ರಂಗನ್, ಗಾಡ್ಗಿಲ್ ವರದಿ, ವೈಲ್ಡ್ ಲೈಫ್, ಪುಷ್ಪಗಿರಿ ವನ್ಯಧಾಮ ಮತ್ತು ಆನೆ ಕಾರಿಡಾರ್ ಯೋಜನೆಗಳ ವಿರುದ್ಧ ಡಿಸೆಂಬರ್ 04 ರಂದು ಬೆಳಿಗ್ಗೆ 11.00 ಗಂಟೆಗೆ ಕಡಬ ತಾಲೂಕು ಕಛೇರಿಯ ಮುಂಭಾಗದಲ್ಲಿ ಬೃಹತ್ ಪ್ರತಿಭಟನೆ ಹಾಗೂ ರಾಷ್ಟ್ರಪತಿಗಳಿಗೆ ಮನವಿ ಸಮರ್ಪಣೆ ನಡೆಯಲಿದೆ ಎಂದು ಕಡಬ ತಾಲೂಕು ಜಾತ್ಯಾತೀತ ಜನತಾದಳ ಅಧ್ಯಕ್ಷ ಸೈಯದ್ ಮೀರಾ ಸಾಹೇಬ್ ಹೇಳಿದ್ದಾರೆ. ಕಡಬ ತಾಲೂಕು ವ್ಯಾಪ್ತಿಯ ಬಲ್ಯ, ಕೌಕ್ರಾಡಿ, ಶಿರಾಡಿ,

ಪುಷ್ಪಗಿರಿ ವನ್ಯಧಾಮ ಮತ್ತು ಆನೆ ಕಾರಿಡಾರ್ ಯೋಜನೆಗೆ ತೀವ್ರ ವಿರೋಧ ► ಡಿ.04 ರಂದು ಕಡಬ ತಾಲೂಕು ಕಛೇರಿಯ ಮುಂಭಾಗ ಬೃಹತ್ ಪ್ರತಿಭಟನೆ Read More »

ಕರಾವಳಿ

ಕೊಡಾಜೆ: ಖಾಸಗಿ ಬಸ್ ಪಲ್ಟಿ ► ಹಲವರಿಗೆ ಗಾಯ

(ನ್ಯೂಸ್ ಕಡಬ) newskadaba.com ವಿಟ್ಲ, ನ. 30. ಚಾಲಕನ ನಿಯಂತ್ರಣ ಕಳೆದುಕೊಂಡ ಖಾಸಗಿ ಬಸ್ಸೊಂದು ಪಲ್ಟಿಯಾದ ಘಟನೆ ಮಾಣಿ- ಮೈಸೂರು ರಾಜ್ಯ ಹೆದ್ದಾರಿಯ ಕೊಡಾಜೆಯಲ್ಲಿ ಗುರುವಾರದಂದು ನಡೆದಿದೆ. ಮಡಿಕೇರಿಯಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ಬಸ್ಸಿನಲ್ಲಿದ್ದ ಸುಮಾರು 20ಕ್ಕಿಂತಲೂ ಅಧಿಕ ಪ್ರಯಾಣಿಕರು ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ. ಘಟನೆ ತೀವ್ರತೆಗೆ ಬಸ್ ರಸ್ತೆಯಿಂದ ಪೊದೆಯೊಂದಕ್ಕೆ ನುಗ್ಗಿ ಪಲ್ಟಿಯಾಗಿದೆ. ಸ್ಥಳಕ್ಕೆ ವಿಟ್ಲ ಪೊಲೀಸರು ಭೇಟಿ ನೀಡಿದ್ದಾರೆ.

ಕೊಡಾಜೆ: ಖಾಸಗಿ ಬಸ್ ಪಲ್ಟಿ ► ಹಲವರಿಗೆ ಗಾಯ Read More »

ಕರಾವಳಿ

ಬ್ಲೂವೇಲ್ ನಂತರ ಇದೀಗ ಧಾರವಾಹಿ ಸರದಿ ► ಧಾರವಾಹಿ ನೋಡಿ ಮೈಗೆ ಬೆಂಕಿ ಹಚ್ಚಿಕೊಂಡ ಮಗು ಮೃತ್ಯು

(ನ್ಯೂಸ್ ಕಡಬ) newskadaba.com ದಾವಣಗೆರೆ, ನ.30. ಧಾರಾವಾಹಿಯೊಂದರಲ್ಲಿ ಬೆಂಕಿ ಹಚ್ಚಿಕೊಳ್ಳುವ ದೃಶ್ಯ ನೋಡಿ 07 ವರ್ಷದ ಬಾಲಕಿಯೊಬ್ಬಳು ಬಟ್ಟೆಗೆ ಬೆಂಕಿ ಹಚ್ಚಿಕೊಂಡು ಸಂಪೂರ್ಣ ಬೆಂದು ನರಳಿ ನರಳಿ ದಾರುಣ ಅಂತ್ಯಕಂಡ ಘಟನೆ ಇಲ್ಲಿನ ಹರಿಹರದಲ್ಲಿ ನಡೆದಿದ್ದು, ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಸಣ್ಣ ವಯಸ್ಸಿನ ಮಕ್ಕಳಿಗೆ ಟಿವಿ, ಮಾಧ್ಯಮಗಳಲ್ಲಿ ಬರುವ ಕೆಲ ದೃಶ್ಯಗಳು ಎಷ್ಟರ ಮಟ್ಟಿಗೆ ಪರಿಣಾಮ ಬೀರುತ್ತದೆ ಎನ್ನುವುದಕ್ಕೆ ಈ ದುರಂತ ಸಾಕ್ಷಿ. ಧಾರಾವಾಹಿಯೊಂದರಲ್ಲಿ ಬೆಂಕಿ ಹಚ್ಚಿಕೊಳ್ಳುವ ದೃಶ್ಯ ನೋಡಿ  7 ವರ್ಷ ದ ಬಾಲಕಿಯೊಬ್ಬಳು ಬಟ್ಟೆಗೆ

ಬ್ಲೂವೇಲ್ ನಂತರ ಇದೀಗ ಧಾರವಾಹಿ ಸರದಿ ► ಧಾರವಾಹಿ ನೋಡಿ ಮೈಗೆ ಬೆಂಕಿ ಹಚ್ಚಿಕೊಂಡ ಮಗು ಮೃತ್ಯು Read More »

ಕರ್ನಾಟಕ

ಈದ್ ಮೀಲಾದ್ ಪ್ರಯುಕ್ತ ದ.ಕ., ಉಡುಪಿ ಜಿಲ್ಲೆಗಳಲ್ಲಿ ಡಿ.01. ರಂದು ರಜೆ

(ನ್ಯೂಸ್ ಕಡಬ) newskadaba.com ಮಂಗಳೂರು, ನ.29. ಈದ್ ಮಿಲಾದ್ ಪ್ರಯುಕ್ತ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಡಿ.1ರಂದು ರಜೆ ಘೋಷಿಸಿ ಸರಕಾರ ಅಧಿಸೂಚನೆ ಹೊರಡಿಸಿದೆ. ಮೀಲಾದುನ್ನಬಿ ಆಚರಣೆಗೆ ಡಿ.02 ರಂದು ಸರಕಾರಿ ರಜೆ ಘೋಷಿಸಿ ರಾಜ್ಯ ಸರಕಾರ ಇತ್ತೀಚೆಗೆ ಅಧಿಸೂಚನೆ ಹೊರಡಿಸಿತ್ತು. ಆದರೆ ದ.ಕ. ಮತ್ತು ಉಡುಪಿ ಜಿಲ್ಲೆಗಳಲ್ಲಿ ಮೀಲಾದುನ್ನಬಿಯನ್ನು ಮುಸ್ಲಿಮರು ಡಿ.01 ರಂದು ಆಚರಿಸುತ್ತಿರುವುದರಿಂದ ಅಂದೇ ಸರಕಾರಿ ರಜೆ ಘೋಷಿಸುವಂತೆ ಆಹಾರ ಸಚಿವ ಯು.ಟಿ.ಖಾದರ್ ಅವರು ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಿದ ಪರಿಣಾಮ ದಕ್ಷಿಣ

ಈದ್ ಮೀಲಾದ್ ಪ್ರಯುಕ್ತ ದ.ಕ., ಉಡುಪಿ ಜಿಲ್ಲೆಗಳಲ್ಲಿ ಡಿ.01. ರಂದು ರಜೆ Read More »

ಕರ್ನಾಟಕ
Scroll to Top